Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾಮಾಜಿಕ ಜಾಲತಾಣದಲ್ಲಿ ಪಾರ್ಟ್‌ ಟೈಮ್ ಉದ್ಯೋಗದ ಜಾಹೀರಾತು ನೋಡಿ ಕ್ಲಿಕ್ ಮಾಡಿದ ಮಹಿಳೆಯೊಬ್ಬರು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 1,86,570 ರೂ. ಕಳೆದುಕೊಂಡ ಘಟನೆ ಸೌಕೂರು ಗುಲ್ವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸೌಕೂರಿನ ರೇಣುಕಾ ಗಣೇಶ ದೇವಾಡಿಗ ಹಣ ಕಳೆದುಕೊಂಡವರು. ಅವರು ಕಳೆದ ಅ.16ರಂದು ಮೊಬೈಲ್‌ ಪೋನ್‌ನಲ್ಲಿ ಮೀಶೋ ನೀಡ್‌ ಸ್ಟಾಫ್‌ (‘MEESHO NEED STAFF’) ಎಂಬ ಹೆಸರಿನಲ್ಲಿ ಪಾರ್ಟ್‌ಟೈಮ್‌ ಉದ್ಯೋಗವಿರುವ ಜಾಹೀರಾತನ್ನು ನೋಡಿ ಅದರ ಮೇಲೆ ಕ್ಷಿಕ್‌ ಮಾಡಿದಾಗ ಅವರಿಗೆ ಕೆಲವು ಟಾಸ್ಕ್‌ಗಳನ್ನು ನೀಡಲಾಗಿತ್ತು. ಮೊದಲ ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಹಣ ನೀಡುವ ಆಮಿಷ ತೋರಿಸಿದ ವಂಚಕರು, ಹಂತ ಹಂತವಾಗಿ ಹೆಚ್ಚಿನ ಹಣ ಗಳಿಸುವ ಅವಕಾಶದ ಹೆಸರಿನಲ್ಲಿ ಮತ್ತಷ್ಟು ಟಾಸ್ಕ್‌ಗಳನ್ನು ನೀಡಿದ್ದಾರೆ. ಆರಂಭದಲ್ಲಿ ರೇಣುಕಾ ಅವರಿಗೆ 120 ರೂ., ನಂತರ 10,130 ರೂ. ಪಾವತಿಸಿ ವಿಶ್ವಾಸ ಮೂಡಿಸಿದ ವಂಚಕರು. ಬಳಿಕ ಹೆಚ್ಚಿನ ಹಣ ಪಡೆಯುವ ಆಮಿಷವೊಡ್ಡಿ ವಿವಿಧ ಹಂತಗಳಲ್ಲಿ ಹಣ ಹೂಡಿಕೆ ಮಾಡುವಂತೆ ಮಾಡಿದ್ದಾರೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ಒಟ್ಟು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಷ್ಟ್ರೀಯ ಸರಾಸರಿ ಶೇಕಡಾ 18.93ರಷ್ಟಿದ್ದ ಈ ಪರೀಕ್ಷೆಯಲ್ಲಿ, ಆಳ್ವಾಸ್ ಸಂಸ್ಥೆ ಶೇಕಡಾ 31.75 ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಧಿತು ಪಡಿಸಿದೆ.   ಸೆಪ್ಟೆಂಬರ್ 2026ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಯಾದ ಸುವಿತ್ ಭಂಡಾರಿ, ವಿಕಾಸ್ ಶೆಟ್ಟಿ, ಸೂರಜ್ ಮಾಹಂತೇಶ್, ಸುಪ್ರೀತಾ, ಸುದೀಕ್ಷಾ , ತನುಷ್ ಜಿ ಶೆಟ್ಟಿ, ನಂದನ್ ಪಿ. ನಾಯಕ್, ವೆಂಕಟೇಶ್ ಪ್ರಭು, ತನ್ವಿ ವಿಜಯ್ ಕೋಟ್ಯಾನ್, ವೆನಿಸ್ಸಾ,  ಶ್ರೇಯಾ ಎಸ್. ಶೆಟ್ಟಿ, ವೈಷ್ಣವಿ, ಪ್ರಥಮ್ ನಾಯಕ್, ಶ್ರಾವ್ಯ,  ಶಾಶ್ವತ್, ಪ್ರಗತಿ, ಪ್ರೀತಮ್, ಆಯೇಷಾ ಆನಮ್, ಸಾಹಿತ್ಯಾ ಕುಶಲ್ ಹಾಗೂ ವರುಣ್ ಕುಮಾರ್ ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಮೇ 2026ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ವಾಣಿಜ್ಯ ವಿಭಾಗದ 41 ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡಬಿದ್ರಿ: ಕೃಷಿ ವಲಯದ ಶ್ರಮಜೀವಿ ರೈತರನ್ನು ಗುರುತಿಸಿ ಸಮಾಜದಲ್ಲಿ ಅವರಿಗೆ ಸೂಕ್ತ ಗೌರವ ಹಾಗೂ ಮನ್ನಣೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಎಸ್‌ಕೆಎಫ್ ಎಲಿಕ್ಸಿರ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಖ್ಯಾತ ಕೃಷಿ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಸ್ಥಾಪಿಸಿರುವ ರೈತಪೀಠ ಪ್ರಶಸ್ತಿ 2027ರ ಅಧಿಕೃತ ಲೋಗೋ ಅನಾವರಣಗೊಂಡಿದೆ. ಇದೇ ಸಂದರ್ಭದಲ್ಲಿ ಪ್ರಶಸ್ತಿಗೆ ಅರ್ಹ ಹಾಗೂ ಸಾಧಕ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಯ ಆಶಯದ ಕುರಿತು ಮಾತನಾಡಿದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, “ಆಸ್ಟ್ರೇಲಿಯಾದ ಸಿಡ್ನಿ ಸೇರಿದಂತೆ ವಿಶ್ವದ ಮುಂದುವರಿದ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ಅಲ್ಲಿ ಕೃಷಿಕರಿಗೆ ಇರುವ ರಾಯಲ್ ಗೌರವವನ್ನು ಕಂಡು ಬೆರಗಾಗಿದ್ದೇನೆ. ಆದರೆ ನಮ್ಮ ದೇಶದಲ್ಲಿ ವಿಜ್ಞಾನಿ, ವೈದ್ಯರು, ಸೈನಿಕರು ಅಥವಾ ಐಟಿ ಉದ್ಯೋಗಿಗಳಿಗೆ ಸಿಗುವ ಗೌರವ ರೈತನಿಗೆ ಸಿಗುತ್ತಿಲ್ಲ. ಆತನನ್ನು ಕಡೆಗಣಿಸುವ ಮನಸ್ಥಿತಿ ಬೆಳೆದುಬಂದಿದೆ. ವಾಸ್ತವವಾಗಿ ಹೇಳಬೇಕೆಂದರೆ ‘ರೈತನೇ ಸುಪ್ರೀಂ, ಅವನೇ ರಾಜ’. ಕೃಷಿ ಕ್ಷೇತ್ರದಲ್ಲೂ ಕಾರ್ಪೊರೇಟ್ ಮಟ್ಟದ ಸಾಧನೆ ಸಾಧ್ಯವಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತವಾಗಿಸಲು ಪ್ರತಿಯೊಬ್ಬ್ಲರೂ ಕೈಜೋಡಿಸಬೇಕು. ಮಾದಕ ವಸ್ತುಗಳ ಮಾರಾಟ, ಬಳಕೆ ಮತ್ತಿತರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ಸಂಗ್ರಹಕ್ಕೆ ಅಭಿವೃದ್ಧಿಪಡಿಸಿರುವ ಕ್ಯೂಆರ್ ಕೋಡ್‌ನ ಮೂಲಕ ಮಾಹಿತಿ ಹಂಚಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್.ಸಿ.ಓ.ಆರ್.ಡಿ (Narco Co-ordination Center)ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳ ಬಳಕೆಯಿಂದ ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಿ ಆರ್ಥಿಕ ನಷ್ಟದ ಜೊತೆಗೆ ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸಲು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಪ್ರತಿಯೊಬ್ಬರೂ ಇವುಗಳಿಂದ ದೂರವಿರಬೇಕು. ಯುವಜನರು ಇಂತಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ಇಂತಹವುಗಳಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. ಮಾದಕ ದ್ರವ್ಯ ಸೇವನೆಗೆ ಬಲಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಅನಾಮಧೇಯ ಮಾಹಿತಿ ನೀಡಲು ಆರಕ್ಷಕರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯಕ್ಷಗಾನ ಸಂಘಟಕ ಗಜೇಂದ್ರ ಆಚಾರ್ ಕೋಣಿ ಸಂಯೋಜನೆಯ ಯಕ್ಷರಾತ್ರಿ ಈ ಬಾರಿ 12 ನೇ ವರ್ಷದ ಅದ್ಧೂರಿ ಕಾರ್ಯಕ್ರಮ ಕೋಣಿ ಮೂರೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಿಸೆಂಬರ್ 12 ಶನಿವಾರ ರಂದು ಶ್ರೀ ಪೆರ್ಡೂರು ಮೇಳದ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಕ್ಷರಾತ್ರಿ ಸಾಧಕ ಪುರಸ್ಕಾರವನ್ನು ಹಿರಿಯ ಪತ್ರಕರ್ತ, ಶಿವರಾಮ ಕಾರಂತ್ ವಿಶೇಷ ಪುರಸ್ಕಾರ ಪುರಸ್ಕೃತ ಜಾನ್ ಡಿ ಸೋಜ ಕೋಣಿ ಹಾಗೂ ಹಿರಿಯ ಕೃಷಿಕ, ನಾಟಿ ವೈದ್ಯ ಸಿದ್ದಯ್ಯ ಶೆಟ್ಟಿ ಕಟ್ಕೇರಿ ಅವರಿಗೆ ನೀಡಲಾಗುತ್ತಿದೆ. ಪ್ರತಿಭಾ ಪುರಸ್ಕಾರವಾಗಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2025ನೇ ಸಾಲಿನ ಅಂತಿಮ ಪದವಿ ಪರಿಕ್ಷೆಯಲ್ಲಿ ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳಾದ 3ನೇ ರ್ಯಾಂಕ್ ಪಡೆದ ಸುಹಾನಿ (ಶಂಕರ ಮೊಗವೀರ ಹಾಗೂ ಶಾಂತ ದಂಪತಿಗಳ ಪುತ್ರಿ), ಹಾಗೂ 8ನೇ ರ್ಯಾಂಕ್ ಪಡೆದ ಶ್ರದ್ದಾ ( ರಮೇಶ ಮೊಗವೀರ ಹಾಗೂ ವನಜ ದಂಪತಿಗಳ ಪುತ್ರಿ), 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಗಡಿನಾಡು ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ವತಿಯಿಂದ ನೀಡಲಾಗುವ 2026ನೇ ಸಾಲಿನ ಅಂತಾರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಶಿಹಾನ್ ಸುಬ್ರಮಣ್ಯ ಪಿ. ಆಯ್ಕೆಯಾಗಿದ್ದು, ನ.1ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಸರಗೋಡು ಕನ್ನಡ ಭವನದ ಕನ್ನಡ ಭುವನೇಶ್ವರಿ ವೇದಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಡಾ. ಶಿಹಾನ್ ಸುಬ್ರಮಣ್ಯ ಪಿ. ಅವರು ಈಗಾಗಲೇ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ, ಕರುನಾಡ ನಿಧಿ ರಾಜ್ಯ ಪ್ರಶಸ್ತಿ, ಹಿಂದೂ ರತ್ನ ರಾಷ್ಟ್ರೀಯ ಪ್ರಶಸ್ತಿ, ಬುಡೋ ಖಾನ್ ಅಂತಾರಾಷ್ಟ್ರೀಯ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿ, ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಭಾರತ್ ಬುಕ್ ಆಫ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಹೆಸರಾಂತ ಮೊಬೈಲ್ ಮಾರಾಟ ಮಳಿಗೆ ‘ಪ್ರೀತಿ ಮೊಬೈಲ್ಸ್’ನಲ್ಲಿ ‘ದೀಪಾವಳಿ’ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲಾಗುತ್ತಿದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆಯೂ ಖಚಿತ ಕೊಡುಗೆಗಳು, ಈಸಿ ಇಎಂಐ ಸೌಲಭ್ಯ, ಲಕ್ಕಿ ಕೂಪನ್, ಎಕ್ಸ್’ಚೆಂಚ್ ಆಫರ್,  ಸೇರಿದಂತೆ ಹಲವು ಕೊಡುಗೆಗಳನ್ನು ಒಳಗೊಂಡಿದೆ. ಲಕ್ಕಿ ಕೂಪನ್‌ನಲ್ಲಿ ಕಾರು, ಬೈಕ್, ಇವಿ ಸ್ಕೂಟರ್, ವಾಷಿಂಗ್ ಮಿಷಿನ್,  10 ಲಕ್ಷ ಕ್ಯಾಶ್ ಸಹಿತ ಹಲವು ಕೊಡುಗೆಗಳನ್ನು ಗೆಲ್ಲುವ ಅವಕಾಶವಿದೆ. ಪ್ರೀತಿ ಮೊಬೈಲ್ಸ್ನಲ್ಲಿ ಯಾವುದೇ ಸ್ಮಾರ್ಟ್ ಫೋನ್ ಖರೀದಿಸಿ ಉಚಿತವಾಗಿ ಪಡೆಯಿರಿ. ಟ್ರಾಲ್ ಬ್ಯಾಗ್, ಲ್ಯಾಪ್ಟಾಪ್ ಬ್ಯಾಗ್, ಸ್ಪೀಕರ್, ಸ್ಮಾರ್ಟ್ ವಾಚ್ ಸೇರಿದಂತ ವಿವಿಧ ಉಚಿತ ಉಡುಗೊರೆಗಳನ್ನು ನೀಡಲಾಗುತ್ತಿದೆ. ವಿವೋ, ಒಪ್ಪೋ, ಐಫೋನ್, ಮೋಟೋರೊಲ, ರೆಡ್ಮಿ, ರೀಯಲ ಮೀ, ಸಾಮಸಾಂಗ್, ಐಟೇಲ್, ಲಾವಾ, ಗೂಗಲ್ ಪಿಕ್ಸೆಲ್, ನಥಿಂಗ್ ನೋಕಿಯಾ, ಸೇರಿದಂತೆ ಎಲ್ಲಾ ಸ್ಮಾರ್ಟ್ ಮತ್ತು ನಾರ್ಮಲ್‌ ಮೊಬೈಲ್‌ ಸಹಿತ ಎಸ್ಸರೀಸ್ ಐಟಂಗಳಿಗೆ ಇಎಂಐ ಸೌಲಭ್ಯ 0 ಡೌನ್ ಪೇಮೆಂಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಟ್ಕಳದಿಂದ ಕುಂದಾಪುರ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ನಿಗದಿತ ಸ್ಥಳಕ್ಕೆ ಟಿಕೇಟ್ ಪಡೆದು ಮಧ್ಯದಲ್ಲೇ ಇಳಿಯುವ ವಿಚಾರಕ್ಕೆ ಪ್ರಯಾಣಿಕರು ಹಾಗೂ ಬಸ್ ನಿರ್ವಾಹಕನ ನಡುವೆ ವಾದ ವಿವಾದ ನಡೆದು, ಬಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ. ಭಟ್ಕಳದಿಂದ ಕುಂದಾಪುರಕ್ಕೆ ತೆರಳುತ್ತಿದ್ದ  ಬಸ್ಸಿಗೆ ಶಿರೂರು ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಹತ್ತಿ ಶಕ್ತಿ ಯೋಜನೆಯಲ್ಲಿ ಟಿಕೇಟನ್ನು ಕುಂದಾಪುರಕ್ಕೆ ಪಡೆದಿರುತ್ತಾರೆ. ನಂತರ ಅದೇ ಮಹಿಳೆಯರು ಉಪ್ಪುಂದದ ನಿಲ್ದಾಣದಲ್ಲಿ ಇಳಿಯುವ ಸಲುವಾಗಿ ಬಸ್ ನಿಲ್ಲಿಸಲು ಹೇಳಿದ್ದಾರೆ. ಆಗ ನಿರ್ವಾಹಕ ಮಂಜುನಾಥ ಅವರು ಬಸ್ ನಿಲ್ಲಿಸಿ ಇಳಿಯವ ಅವಕಾಶ ನೀಡಿರಲಿಲ್ಲ. ಬಳಿಕ ಮಹಿಳೆಯರು ಕುಂದಾಪುರದಲ್ಲಿ ಬಸ್ನಿಂದ ಇಳಿದಿದ್ದರು. ಸಂಸ್ಥೆಯ ನಿಯಮದಂತೆ ಶಕ್ತಿ ಯೋಜನೆಯಲ್ಲಿ ಟಿಕೇಟನ್ನು ಪಡೆದಿದ್ದರೇ, ಎಲ್ಲಿಗೆ ಟಿಕೇಟ್‌ ಮಾಡಿದ್ದಾರೋ ಅಲ್ಲೇ ಇಳಿಯಬೇಕು. ಮದ್ಯದಲ್ಲಿ ಇಳಿಯಬಾರದು ಹಾಗಾಗಿ ನಿರ್ವಾಹಕ ಮಹಿಳೆಯರಿಗೆ ಇಳಿಯಲು ಅವಕಾಶ ನೀಡಿರಲಿಲ್ಲ. ನಂತರ ಹೊಸ ಬಸ್‌ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದಾಗ ಅದೇ ಮಹಿಳೆಯರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕೆಟ್ಟೆಯ ವಿಶ್ವವಿನಾಯಕ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವವನ್ನು ಶುಕ್ರವಾರದಂದು ಅತ್ಯಂತ ಸಂಭ್ರಮ ಹಾಗೂ ಉತ್ಸಾಹದಿಂದ  ಉದ್ಘಾಟಿಸಲಾಯಿತು.  ಕಾರ್ಯಕ್ರಮವು ಗಣ್ಯ ಅತಿಥಿಗಳಾದ ರಂಜಿತ್ ಪೂಜಾರಿ ಅವರ ಉಪಸ್ಥಿತಿಯಲ್ಲಿ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಆರಂಭಗೊಂಡಿತು. ಕ್ರೀಡಾಜ್ಯೋತಿಯು ಕ್ರೀಡಾಸ್ಪೂರ್ತಿ, ಏಕತೆ, ಶಿಸ್ತು ಮತ್ತು ಗೆಲುವಿನ ಸಂಕೇತವಾಗಿ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ವಿವಿಧ ತಂಡಗಳ ವಿದ್ಯಾರ್ಥಿಗಳು ತಮ್ಮ ತಂಡದ ಬಣ್ಣದ ಸಮವಸ್ತ್ರದಲ್ಲಿ ಶಿಸ್ತಿನಿಂದ ಹೆಜ್ಜೆ ಹಾಕಿ ಕ್ರೀಡಾಗೌರವವನ್ನು ಹೆಚ್ಚಿಸಿದರು. ವಿದ್ಯಾರ್ಥಿಗಳು ಕ್ರೀಡಾ ಪ್ರತಿಜ್ಞೆಯನ್ನು ಸ್ವೀಕರಿಸುವ ಮೂಲಕ ಕ್ರೀಡಾ ನಿಯಮಗಳನ್ನು ಪಾಲಿಸುವ ಹಾಗೂ ಪ್ರಾಮಾಣಿಕವಾಗಿ ಸ್ಪರ್ಧಿಸುವ ಸಂಕಲ್ಪ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯ ಅತಿಥಿಗಳು ಕ್ರೀಡೆಯು ಕೇವಲ ಗೆಲುವು ಮತ್ತು ಸೋಲಿನ ಆಟವಲ್ಲ, ಅದು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ, ಸಮಯಪ್ರಜ್ಞೆ, ನಾಯಕತ್ವ, ಆತ್ಮಸ್ಥೈರ್ಯ ಬೆಳೆಸುವ ವೇದಿಕೆಯಾಗಿದೆ. ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮತ್ತು ಪ್ರಯತ್ನ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ  ಸಂಸ್ಥೆಯ ಸಿ.ಇ.ಒ ವಿವಿರಾಜ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳ ಜೀವನದಲ್ಲಿ ತಂದೆ, ತಾಯಿ, ಗುರು ಎನ್ನುವ ಮೂರು ಮೌಲ್ಯಗಳನ್ನು ಅರ್ಥೈಸಿಕೊಂಡರೆ ಎಲ್ಲವನ್ನು ಪಡೆಯಲು ಸಾಧ್ಯ. ನಮ್ಮ ನಡುವಿನ ವ್ಯಕ್ತಿಗಳ ವ್ಯಕ್ತಿತ್ವದಿಂದ ಕಲಿಯುವಂತದ್ದು ತುಂಬಾ ಇದೆ. ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಂವೇದನಾಶೀಲತೆಯನ್ನು ಬೆಳೆಸಿಕೊಂಡರೆ ಸತ್ಪ್ರಜೆಗಳಾಗಲು ಸಾಧ್ಯ ಎಂದು ಕುಂದಾಪುರದ ನ್ಯಾಯವಾದಿಗಳಾದ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ್ದ ʼಜೀವನ ಮೌಲ್ಯ’ಸರಣಿ ಉಪನ್ಯಾಸ ಮಾಲಿಕೆ-4ರ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್‌ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಮತ್ತು ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಜನ್‌ ಪ್ರಾರ್ಥಿಸಿ, ರಜತ್‌ ಸ್ವಾಗತಿಸಿ, ಕೃತಿ ಕೆ. ದೇವಾಡಿಗ ಅತಿಥಿಗಳನ್ನು ಪರಿಚಯಿಸಿ, ಧನ್ಯಶ್ರೀ ವಂದಿಸಿ, ಪ್ರಥ್ವಿನಿ ಕಾರ್ಯಕ್ರಮ ನಿರೂಪಿಸಿದರು.

Read More