Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಏ.6ರಂದು ಕುಂದಾಪುರ ಹಾಗೂ ಗಂಗೊಳ್ಳಿಗೆ ಆಗಮಿಸಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ. ಕುಂದಾಪುರದಲ್ಲಿ ಬೆಳಿಗ್ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮಾವೇಶವನ್ನು ಉದ್ಘಾಟಿಸಿದ ಬಳಿಕ, ಮರವಂತೆಯ ಎರಡನೇ ಹಂತದ ಬಂದರು ಕಾಮಗಾರಿ ವೀಕ್ಷಣೆ ನಡೆಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಂಗೊಳ್ಳಿಯ 102ಕೋಟಿ ಹಾಗೂ ಕೊಡೇರಿಯ 33ಕೋಟಿ ಅನುದಾನದ ಬಂದರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಉಡುಪಿ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

Read More

ಪ್ರಕರಣದ ಸಮಗ್ರ ತನಿಕೆಗೆ ಆದೇಶ, ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೊಲ್ಲೂರು ಚಿನ್ನಾಭರಣ ಕಳವು ಪ್ರರಣ ಬೆಳಕಿಗೆ ಬಂದ ಬೆನ್ನಲ್ಲೇ ಕಳೆದ ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಲೆಕ್ಕಪತ್ರಗಳ ಪರಿಶೋಧನೆ ನಡೆಯದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದ್ದು, ಜನರ ಅಪೇಕ್ಷೆಯಂತೆ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಕೆಗೆ ಆದೇಶಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬುಧವಾರ ಇಲ್ಲಿನ ಶಾಸಕರ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕರಣದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿದ್ದೇನೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕೊಟ್ಯಂತರ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ದೇವಳದ ಡಿ ದರ್ಜೆ ನೌಕರನೋರ್ವನ ಕೈಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಿಜೋರಿಯ ಬೀಗದ ಕೈ ನೀಡಿರುವುದೇ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದರು. ದೇವಳದಿಂದ ಕಳವಾದ ಹಣ ಮತ್ತು ಚಿನ್ನಾಭರಣಗಳ ಸಮಗ್ರ ತನಿಕೆಯಾಗಬೇಕು. ಈ ಬಗ್ಗೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರೊಂದಿಗೂ ಚರ್ಚಿಸಿದ್ದೇನೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿರಿ ಅವರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾ.3ರಂದು ಹೃದಯಾಘಾತದಿಂದ ನಿಧನ ಹೊಂದಿದ ಸಾಮಾಜಿಕ ಕಾರ್ಯಕರ್ತ, ವಿಜಯಾ ಬ್ಯಾಂಕ್‌ನ ನಿವೃತ್ತ ಚೀಫ್ ಮ್ಯಾನೇಜರ್ ದಿ. ಸಚ್ಚಿದಾನಂದ ಶೆಟ್ಟಿ ಅವರಿಗೆ  ಸಂತಾಪ ಸೂಚಕ ಸಭೆ ಜರುಗಿತು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಸದಸ್ಯರು, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಸದಸ್ಯರು, ಕುಂದಾಪುರ ಬಂಟರ ಸಂಘದ ಪದಾಧಿಕಾರಿಗಳು, ರೋಟರಿ ಕ್ಲಬ್ ಸದಸ್ಯರು ಸಂತಾಪಸೂಚಕ ಸಭೆಯಲ್ಲಿ ಮೃತರ ಕುಟುಂಬದ ಸದಸ್ಯರು ಬಂಧು ಮಿತ್ರರು ಭಾಗವಹಿಸಿದ್ದರು. ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿಯಾಗಿ, ಕುಂದಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷರಾಗಿ, ಹುಬ್ಬಳ್ಳಿ ಝೋನ್ ರೈಲ್ವೆ ಬೋರ್ಡ್ ಸದಸ್ಯರಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಚ್ಚಿದಾನಂದ ಶೆಟ್ಟಿ ಅವರು ಅಗಲುವಿಕೆ ತುಂಬಲಾರದ ನಷ್ಟವೆಂದು ಗಣ್ಯರು ಅಭಿಪ್ರಾಯ ಪಟ್ಟರು. Read this: ಸಾಮಾಜಿಕ ಕಾರ್ಯಕರ್ತ ಸಚ್ಚಿದಾನಂದ ಶೆಟ್ಟಿ ನಿಧನ – http://kundapraa.com/?p=11939

Read More

ಕುಂದಾಪುರ: ಸಂಘಟನೆಗಳು ಸಮಾಜಮುಖಿಯಾಗಿ ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಸಮಾಜ ಅಂಥಹ ಸಂಘಟನೆಗಳನ್ನು ಗುರುತಿಸುತ್ತದೆ. ಧಾರ್ಮಿಕ ಸ್ಥಳಗಳು ಸೌಹಾರ್ದತೆಯನ್ನು ಉಂಟು ಮಾಡುವ ಕೆಲಸ ಮಾಡಬೇಕು. ದೈವಸ್ಥಾನಗಳ ಬೆಳವಣಿಗೆಯ ಜೊತೆಯ ಸ್ಥಳೀಯವಾಗಿ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯೂ ಆಗಬೇಕು ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ವಂಡ್ಸೆಯ ಶ್ರೀ ಯಕ್ಷೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಮತ್ತು ಶ್ರೀ ಯಕ್ಷೀ ಯುವ ಸಂಘಟನೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ-ಆತ್ರಾಡಿ-ಬಗ್ವಾಡಿ ಭಾಗದ ಬಹುದಿನ ಸಂಪರ್ಕ ರಸ್ತೆಯ ಕನಸು ಈಡೇರಿದೆ. ಶೀಘ್ರವಾಗಿ ಈ ರಸ್ತೆಯಲ್ಲಿ ಬಸ್ ಸಂಪರ್ಕ ಕಲ್ಪಿಸಲಾಗುವುದು. ವಂಡ್ಸೆ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ಶ್ರೀ ಯಕ್ಷೀಅನ್ನಪೂರ್ಣೇಶ್ವರಿ ಯುವ ಸಂಘಟನೆಯ ಅಧ್ಯಕ್ಷ ನಾಗರಾಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವೇ.ಮೂ.ಶಿವಾನಂದ ಆಚಾರ್ಯ ಬಸ್ರೂರು ಆಶೀರ್ವಚನ ನೀಡಿದರು. ತಾ.ಪಂ.ಸದಸ್ಯ ಉದಯ ಪೂಜಾರಿ ಚಿತ್ತೂರು, ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ವ್ಯವಸ್ಥಾಪನಾ…

Read More

ಗಂಗೊಳ್ಳಿ : ಕರಾವಳಿ ವಾರಿಯರ್ಸ್ಬೇಲಿಕೇರಿ ಗಂಗೊಳ್ಳಿ ಇವರ ಆಶ್ರಯದಲ್ಲಿ ಇತ್ತೀಚಿಗೆ ಗಂಗೊಳ್ಳಿಯ ಕೆಎಫ್‌ಡಿಸಿ ವಠಾರದಲ್ಲಿ ನಡೆದ ೩೦ ಗಜಗಳ ತಾಲೂಕು ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ನ್ಯೂ ವೀರಕೇಸರಿ ತಂಡ ಪ್ರಥಮ ಸ್ಥಾನಿಯಾಗಿ ಕರಾವಳಿ ವಾರಿಯರ್ಸ್ ಟ್ರೋಫಿ ಹಾಗೂ ನಗದ ಬಹುಮಾನವನ್ನು ತನ್ನದಾಗಿಸಿಕೊಂಡಿತು. ಗುರುಜ್ಯೋತಿ ಗಂಗೊಳ್ಳಿ ತಂಡ ದ್ವಿತೀಯ ಸ್ಥಾನಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಪಂ ಮಾಜಿ ಸದಸ್ಯ ದುರ್ಗರಾಜ್ ಪೂಜಾರಿ ವಹಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ತ್ರಾಸಿ ಜಿಪಂ ಸದಸ್ಯೆ ಶೋಭಾ ಪುತ್ರನ್, ಗಂಗೊಳ್ಳಿ ಗ್ರಾಪಂ ಸದಸ್ಯ ಮುಜಾಹಿದ್ ಅಲಿ ನಾಕುದಾ, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ನಾಗರಾಜ ಖಾರ್ವಿ, ಸಂಘದ ಅಧ್ಯಕ್ಷ ರಾಘವೇಂದ್ರ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಸುಮಂತ್ ಖಾರ್ವಿ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಣೇಶ ಖಾರ್ವಿ ವಂದಿಸಿದರು. ತಾಲೂಕಿನ…

Read More

ಕುಂದಾಪುರ: ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಆಶ್ರಯದಲ್ಲಿ ಕಾರವಾರದ ಕೋಡಿಭಾಗನ ಸಾಗರ ದರ್ಶನ ಸಭಾಭವನದಲ್ಲಿ ಇತ್ತೀಚಿಗೆ ಜರಗಿದ 56ನೇ ಮಹಾಸಭೆಯಲ್ಲಿ ಅಪೂರ್ವ ಪ್ರಾಚ್ಯ ವಸ್ತು ಸಂಗ್ರಾಹಕ, ವ್ಯಂಗ್ಯಚಿತ್ರಗಾರ, ಚುಟುಕು ಕವಿ ಹಾಗೂ ಜಿ.ಬಿ.ಕಲೈಕಾರ್ ಗಂಗೊಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಕೆ.ಬಿ.ಖಾರ್ವಿ ಅವರು ಜಿ.ಬಿ.ಕಲೈಕಾರ್ ಅವರನ್ನು ಸನ್ಮಾನಿಸಿ ಮಾತನಾಡಿ ಬಹುಮುಖ ಪ್ರತಿಭೆಯಾಗಿರುವ ಕಲೈಕಾರ್ ಅವರು ವಿಶಿಷ್ಟ ಸಾಧನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಇವರ ಸಾಧನೆಗೆ ಕರ್ನಾಟಕ ಸರಕಾರದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ, ಎಸ್.ಎಮ್.ಎಸ್. ಕಲಾ ವೈಭವ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ನಕ್ಷತ್ರ ಬಿರುದು ಪುರಸ್ಕೃತರಾಗಿದ್ದಾರೆ ಎಂದರು. ಮಹಾಜನ ಸಭಾದ ಹಿರಿಯ ಉಪಾಧ್ಯಕ್ಷ ಮೋಹನ ಬಾನವಾಳಿಕರ್, ಉಪಾಧ್ಯಕ್ಷರುಗಳಾದ ರವಿ ಟಿ.ನಾಯ್ಕ್ ಮುಂಬೈ, ದೇವಪ್ಪ ತಾಂಡೇಲ ಗೋವಾ, ತಿಮ್ಮಪ್ಪ ಎಂ.ಖಾರ್ವಿ ಭಟ್ಕಳ, ಸೂರ್ಯಕಾಂತ ಖಾರ್ವಿ ಹೊನ್ನಾವರ, ಗಣಪತಿ ಎಂ.ಬಾನವಾಳಿಕರ್ ಬೇಲಿಕೇರಿ, ಬಿ.ಎ.ಖಾರ್ವಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ, ಕೋಶಾಧಿಕಾರಿ…

Read More

ಬೈಂದೂರು: ರಾಷ್ಟ್ರೀಯ ಆವಿಷ್ಕಾರ ಅಭಿಯಾನವು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾದ ಒಂದು ಭಾಗವಾಗಿದ್ದು, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳ ಕಲಿಕಾ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಮಾಡಿದೆ ಎಂದು ಜಿಪಂ ಸದಸ್ಯ ಸುರೇಶ ಬಟವಾಡಿ ಹೇಳಿದರು. ಇಲ್ಲಿನ ಮೇಲ್ಪಂಗ್ತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಹಾಗೂ ಸರ್ವ ಶಿಕ್ಷಣ ಅಭಿಯಾನದ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಅಭಿಯಾನ-2016 ಯೋಜನೆಯ ಶಿರೂರು ಕ್ಲಸ್ಟರ್ ವಿಭಾಗದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಹೊಸ ಆವಿಷ್ಕಾರ ಮತ್ತು ಪ್ರಯೋಗಗಳ ಮೂಲಕ ಪ್ರಾಥಮಿಕ ಹಂತದಿಂದಲೇ ಉತ್ಕೃತ ಮಟ್ಟದ ಶಿಕ್ಷಣ ಎಲ್ಲಾ ಮಕ್ಕಳಿಗೂ ನೀಡಬೇಕೆನ್ನುವ ಹಾಗೂ ವೈಜ್ಞಾನಿಕವಾಗಿ ಮಕ್ಕಳು ಬೆಳೆಯಬೇಕೆಂಬ ಪ್ರಧಾನಿ ಮೋದಿಯವರ ಕನಸು ಈ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿದೆ ಎಂದರು. ವೈಜ್ಞಾನಿಕ ಮನೋಭಾವನೆ, ಹೊಸ ಚಿಂತನೆಗಳನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ಶಿಕ್ಷಕರು ಪ್ರೇರಣೆ ನೀಡಬೇಕು. ಒಂದು ಶಾಲೆ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸಬೇಕಾದರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದಾರೆಂಬ ಶಂಕೆಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಾದ ಯುವಕರು ಲಾರಿಯನ್ನು ಅಡ್ಡಗಟ್ಟಿದ ಘಟನೆ ತಲ್ಲೂರಿನ ಸಮೀಪದ ರಾಜಾಡಿ ಸೇತುವೆಯ ಬಳಿ ನಡೆದಿದೆ. ಪುಣೆಯಿಂದ ಮಂಗಳೂರು ಸಮೀಪದ ನೇರಳಕಟ್ಟೆಯ ಗೋಶಾಲೆ ಸಾಗಿಸುತ್ತಿದ್ದ ಲಾರಿಯನ್ನು ತಡೆದು ಚಾಲಕ ಹಾಗೂ ಗೋಶಾಲೆಯ ಮ್ಯಾನೆಜರ್ ಮೇಲೆ ಹಲ್ಲೆಗೆ ಮುಂದಾದ ಘಟನೆ ನಡೆದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಪುಣೆಯಿಂದ ಮಂಗಳೂರು ಕಡೆಗೆ ಹೊರಟ್ಟಿದ್ದ 13 ಗೀರ್ ತಳಿಯ ದನಗಳನ್ನು ಲಾರಿಯು ತಲ್ಲೂರು ರಾಜಾಡಿ ಸೇತುವೆ ಬಳಿ ಬರುತ್ತಿದ್ದಂತೆಯೇ ಸುಮಾರು ನೂರು ಜನರ ಗುಂಪೊಂದು ಲಾರಿಯನ್ನು ಅಡ್ಡಗಟ್ಟಿ ಲಾರಿ ಚಾಲಕ ರಾಘು ಹಾಗೂ ಮ್ಯಾನೆಜರ್ ಅನಂತ ಕಾಮತ್ ಅವರೊಂದಿಗೆ ವಾದಕ್ಕಿಳಿದಿತ್ತು. ದನಗಳನ್ನು ಗೋಶಾಲೆಗೆ ಸಾಗಿಸಲಾಗುತ್ತಿದೆ ಎಂದು ದಾಖಲೆಗಳನ್ನು ತೋರಿಸಿದರೂ ನಂಬದ ಗುಂಪು, ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಲಘು ಲಾಠಿ ಪ್ರಹಾರ ಮಾಡಿದರು. ಘಟನೆಯ ವೇಳೆ ಏಳು ಮಂದಿಯನ್ನು…

Read More

ಗಂಗೊಳ್ಳಿ : ಗಂಗೊಳ್ಳಿ ಮೇಲ್‌ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದ ಪ್ರಾಯೋಜಿತ ಓಂ ಶ್ರೀ ಮಾತೃ ಮಂಡಳಿ ನೇತೃತ್ವದಲ್ಲಿ ಶಿವ ಪಾರ್ವತಿ ಕಲ್ಯಾಣೋತ್ಸವ ಕಾರ್ಯಕ್ರಮ ಭಾನುವಾರ ಸಂಜೆ ಗೋಧೂಳಿ ಲಗ್ನ ಸುಮೂರ್ಹತದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರಗಿತು. ಶಿವ ಪಾರ್ವತಿಯ ವಿಗ್ರಹವನ್ನು ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಬಳಿಯಿಂದ ವೈಭವೋಪಿತ ಪುರಮೆರವಣಿಗೆಯಲ್ಲಿ ತರಲಾಯಿತು. ವೇದಮೂರ್ತಿ ಶ್ರೀಪತಿ ಭಟ್ ಮಂಕಿ ನೇತೃತ್ವದಲ್ಲಿ ಪುರೋಹಿತರು ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ವಧು ನಿರೀಕ್ಷಣೆ, ಅರಶಿನ ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಶಿವನಿಗೆ ಮಧುಪರ್ಕ ಸಮರ್ಪಣೆ, ಮಾಲಾಧಾರಣೆ, ಕನ್ಯಾದಾನ, ಕಂಕಣ ಮಾಂಗಲ್ಯ ಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ ಕಾಣಿಕೆಗಳ ಸಮರ್ಪಣೆ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಮೂಲಕ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಭಕ್ತಿ ಶ್ರದ್ಧಾಪೂರ್ವಕ ನೆರವೇರಿಸಲಾಯಿತು. ಓಂ ಶ್ರೀ ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ಪ್ರಧಾನ ಕಾರ್ಯದರ್ಶಿ ಜ್ಯೋತಿ, ಕಾರ್ಯದರ್ಶಿ ಶಾಂತಿ, ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಜಿ., ಜಿಪಂ ಸದಸ್ಯೆ ಶೋಭಾ ಪುತ್ರನ್,…

Read More

ಬೈಂದೂರು: ಸೃಷ್ಠಿಯ ದೃಷ್ಠಿಯಲ್ಲಿ ನಾವೆಲ್ಲರೂ ಪ್ರಕೃತಿಯ ಮಕ್ಕಳು. ಹಾಗೆಯೇ ಸಸ್ಯ ಸಂಕುಲಗಳು ಆಯಾಯ ಪ್ರಾಂತ್ಯ, ಪ್ರದೇಶಗಳಲ್ಲಿ ಬೆಳೆಯುತ್ತಿದ್ದರೂ ಅವುಗಳು ಸಿಹಿಯನ್ನು ನೀಡುತ್ತವೆ. ಆದರೆ ಇಂದು ಸಮಾಜದಲ್ಲಿ ಹಿರಿಯರು ವಿಕೃತ ವಿಚಾರಗಳು ಹೆಚ್ಚು ಪ್ರಕಟಮಾಡುತ್ತಿರುವ ಹಿನ್ನೆಲೆಯಲ್ಲಿ ಬಾಲ್ಯದಲ್ಲಿಯೇ ಮಗುವಿನ ಮಗ್ಧ ಮನಸುಗಳು ಇಂತಹ ಕೃತ್ಯಗಳಿಂದ ಆಕರ್ಷಿತರಾಗಿ ಮುಂದೆ ತಪ್ಪುದಾರಿಯಲ್ಲಿ ಸಾಗುವುದರ ಮೂಲಕ ರಾಷ್ಟ್ರವಿರೋಧಿಯಾಗಿ ಬಿಂಬಿಸಲ್ಪಡುತ್ತಾನೆ ಎಂದು ನಂದಗೋಕುಲ ಶಿಶುಮಂದಿರದ ವ್ಯವಸ್ಥಾಪಕ ಪ್ರೇಮಾನಂದ ಶೆಟ್ಟಿ ಕಟ್ಗೇರಿ ಹೇಳಿದರು. ಅರಮಕೋಡಿ ಶ್ರೀ ಈಶ್ವರ ಸೇವಾ ಸಮಿತಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ ಉಪ್ಪುಂದೋತ್ಸವದಲ್ಲಿ ಮಗು ಮತ್ತು ಸಂಸ್ಕಾರಯುಕ್ತ ಶಿಕ್ಷಣ ಹಾಗೂ ರಾಷ್ಟ್ರ ದೇವೋಭವದ ಕುರಿತು ಉಪನ್ಯಾಸ ನೀಡಿದರು. ಸಂಸ್ಕಾರದ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗುವುದರಿಂದ ಮೊದಲು ತಾಯಂದಿರಿಗೆ ತಯಾರು ಮಾಡಬೇಕು. ಬಾಲ್ಯದಲ್ಲಿ ಮಕ್ಕಳ ಮನಸ್ಸಿನೊಳಗೆ ಪ್ರಜ್ಞೆ ಮೂಡಿಸುವ ವಿವೇಕವನ್ನು ತುಂಬುವುದನ್ನು ಬಿಟ್ಟು, ಸ್ವಾಭಾವಿಕ ಕಲಿಕೆಯ ಅವಕಾಶ ಕೊಡದೇ ಅವರ ಭಾವನೆಗಳಗೆ ವಿರೋಧವಾಗಿ ಬೆಳೆಸುವುದರಿಂದ ರಾಷ್ಟ್ರದ್ರೋಹಿಯಾಗಲು ಪರೋಕ್ಷವಾಗಿ ಆಸ್ಪದ ನೀಡಿದಂತಾಗುತ್ತದೆ. ಜಾತಿ, ಧರ್ಮದ ವಿಷಬೀಜ ಬಿತ್ತಿ ಮುಗ್ಧ…

Read More