ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಟವಾಡಲೆಂದು ಕೆರೆಯ ಸಮೀಪ ತೆರಳಿದ್ದ ಇಬ್ಬರು ಮಕ್ಕಳು ಹಾಗೂ ಅವರನ್ನು ರಕ್ಷಿಸಲೆಂದು ತೆರಳಿದ ತಂದೆಯೂ ಸೇರಿದಂತೆ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಸಿದ್ಧಾಪುರ ಸಮೀಪದ ಉಳ್ಳೂರು-74ರಲ್ಲಿ ವರದಿಯಾಗಿದೆ. ಐರ್ಬೈಲು ನಿವಾಸಿ ರಾಘವೇಂದ್ರ ಕಿಣಿ (38) ಹಾಗೂ ಅವರ ಮಕ್ಕಳಾದ ಪ್ರಕಾಶ್ (13), ಯೋಗೀಶ್ (12) ಮೃತ ದುರ್ದೈವಿಗಳು. ಕುಂದಾಪ್ರ ಡಾಟ್ ಕಾಂ. ಘಟನೆಯ ವಿವರ ರಾಘವೇಂದ್ರ ಕಿಣಿ ಅವರ ಇಬ್ಬರು ಮಕ್ಕಳು ತಮ್ಮ ಮನೆಯ ಸಮೀಪದಲ್ಲಿರುವ ತೋಟಕ್ಕೆ ಸ್ನೇಹಿತರೊಂದಿಗೆ ಆಟವಾಡಲೆಂದು ತೆರಳಿದ್ದರು. ಆಟವಾಡುತ್ತಾ ಕೆರೆ ಸಮೀಪ ಬಂದಾಗ ಪ್ರಕಾಶನ ಕಾಲು ಜಾರಿ ಕೆರೆಗೆ ಬಿದ್ದಿದ್ದ. ಆತನ್ನು ರಕ್ಷಿಸಲು ಯೋಗೀಶ್ ಕೂಡ ಕೆರೆಗೆ ಇಳಿದನಾದರೂ ಇಬ್ಬರೂ ಕೆರೆಯಲ್ಲಿ ಮುಳುಗುತ್ತಿದ್ದರು. ಇದನ್ನು ಕಂಡ ಆತನ ಸ್ನೇಹಿತರು ಕೂಗಿಕೊಳ್ಳಲಾರಂಭಿದ್ದ. ಕೂಗಾಟ ಕೇಳಿದ ರಾಘವೇಂದ್ರ ಕಿಣಿ ಮನೆಯಿಂದ ಓಡಿಬಂದು ನೋಡಿದ್ದಾರೆ. ಆಳವಿದ್ದ ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಅವರೂ ಕೆರೆಗೆ ಇಳಿದಿದ್ದಾರೆ. ಆದರೆ ಆಳವಿದ್ದ ಕೆರೆಯಲ್ಲಿ ಅವರೂ ಸ್ಥಿಮಿತ ಕಳೆದುಕೊಂಡು ಮೂವರೂ ನೀರಿನಲ್ಲಿ ಮುಳುಗಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ | ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬದುಕು ರೂಪಿಸುವ ಮಹತ್ತರ ಘಟ್ಟ. ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ಶಿಕ್ಷಣ ದೊರೆತರೆ ಪ್ರತಿಯೊಬ್ಬರ ಜೀವನವೂ ಉಜ್ವಲವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕ ವಾತಾವರಣ ನಿರ್ಮಿಸಬೇಕೆಂಬ ಉದ್ದೇಶದೊಂದಿಗೆ 2003ರಲ್ಲಿ ಸ್ಥಾಪನೆಗೊಂಡ ಕುಂದಾಪುರ ಆರ್.ಎನ್. ಶೆಟ್ಟಿ. ಪಿಯು ಕಾಲೇಜು ಇಂದು ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಉಡುಪಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಿಯು ಶಿಕ್ಷಣವನ್ನು ಕಾಲೇಜಿನಲ್ಲಿ ನೀಡುತ್ತಾ ಬರಲಾಗಿದೆ. ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದು ತೆರಳಿರುವ ಅದೆಷ್ಟೊ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಹುದ್ದೆಗಳನ್ನಲಂಕರಿಸಿ, ಉದ್ಯಮವನ್ನು ನಡೆಸುತ್ತಾ ಮಾದರಿಯಾಗಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ಸಂಸ್ಥೆಯ ನುರಿತ ಹಾಗೂ ಅನುಭವಿ ಉಪನ್ಯಾಸಕ ವೃಂದವು ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಾಲೇಜಿನಲ್ಲಿ ದಾಖಲೆಯ ಫಲಿತಾಂಶ ಆರ್ಎನ್ಎಸ್ ಪಿಯು ಕಾಲೇಜು ಆರಂಭದಿಂದ ಇಂದಿನವರೆಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಸಮೀಪದ ಕಮಲಶಿಲೆ ಗ್ರಾಮದ ಭಟ್ಕಳಮಕ್ಕಿಯಲ್ಲಿ ರಸ್ತೆಯ ವಿಚಾರವಾಗಿ ಕುಟುಂಬಿಕರ ನಡುವೆ ನಡೆದ ತಕರಾರಿಗೆ ಸ್ವಂತ ತಮ್ಮನೇ ತನ್ನ ಮಕ್ಕಳೊಂದಿಗೆ ಅಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆಣ್ಣನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ. ನಾರಾಯಣ ನಾಯ್ಕ (೬೦) ತಮ್ಮ ಹಾಗೂ ತಮ್ಮನ ಮಕ್ಕಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದವರು. ನಾರಾಯಣ ನಾಯ್ಕ ಅವರ ಕೊಲೆಗೆ ಕಾರಣರು ಎನ್ನಲಾದ ಆರೋಪಿಗಳಾದ ನಾಗರಾಜ ನಾಯ್ಕ ಮತ್ತು ಅವರ ಮಕ್ಕಳಾದ ಲಕ್ಷಿ$ಱ್ಪಕಾಂತ ಹಾಗೂ ಚಂದ್ರಕಾಂತ ರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ನೆರೆಕೆರೆಯಲ್ಲಿ ವಾಸವಿದ್ದ ಸಹೋದರರಾದ ನಾರಾಯಣ ನಾಯ್ಕ ಹಾಗೂ ನಾಗರಾಜ್ ನಾಯ್ಕ ನಡುವೆ ದಾರಿ ವಿಚಾರದಲ್ಲಿ ಮನಸ್ತಾಪವಿತ್ತು. ಮೇ.೫ರಂದು ನಾರಾಯಣ ಅವರು ತೋಟಕ್ಕೆ ನೀರು ಹಾಯಿ ಸುವಾಗ ಕ್ಷುಲ್ಲಕ ಕಾರಣಕ್ಕೆ ಅವರ ಸೋದರ ನಾಗರಾಜ ನಾಯ್ಕ ಹಾಗೂ ಅವರ ಮಕ್ಕಳು ಜಗಳಕ್ಕಿಳಿದರು. ಈ ಹಿಂದಿನ ಸಿಟ್ಟನ್ನು ಆ ವೇಳೆ ನಾಗರಾಜ ನಾಯ್ಕ ಪ್ರದರ್ಶಿಸಿದಾಗ ಜಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಶಿರೂರಿನಲ್ಲಿರುವ ಪೋಲಿಸ್ ಚೆಕ್ಪೋಷ್ಟ್ ಪಕ್ಕದ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಸುಮಾರು ೬೦ ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದ್ದು, ಕಂದು ಬಣ್ಣದ ಶರ್ಟ್ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕುತ್ತಿಗೆಯಲ್ಲಿ ತಾಯತ ಕಟ್ಟಿದ ಕಪ್ಪು ಬಣ್ಣದ ನೂಲು ಇದೆ. ಬಿಸಿಲಿನ ತಾಪಕ್ಕೆ, ಯಾವುದಾದರು ಕಾಯಿಲೆಯಿಂದ ಅಥವಾ ಹೃದಯಾಘಾತದಿಂದ ದಾರಿ ಮಧ್ಯದಲ್ಲಿ ಬಿದ್ದು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಶಿರೂರು ಗ್ರಾಪಂ ಸದಸ್ಯ ರಘುರಾಮ ಪೂಜಾರಿ ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಮೃತವ್ಯಕ್ತಿಯ ಗುರುತು ಇದ್ದವರು ಬೈಂದೂರು ಠಾಣೆಗೆ(೦೮೨೫೪-೨೫೧೦೩೩) ತಿಳಿಸುವಂತೆ ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ತಿಳಿಸಿದ್ದಾರೆ,
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಸಮೀಪದ ಕಮಲಶಿಲೆ ಗ್ರಾಮದ ಭಟ್ಕಳಮಕ್ಕಿಯಲ್ಲಿ ರಸ್ತೆಯ ವಿಚಾರವಾಗಿ ಕುಟುಂಬಿಕರ ನಡುವೆ ನಡೆದ ತಕರಾರಿಗೆ ಸ್ವಂತ ತಮ್ಮನೇ ತನ್ನ ಮಕ್ಕಳೊಂದಿಗೆ ಅಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆಣ್ಣನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ. ನಾರಾಯಣ ನಾಯ್ಕ (೬೦) ತಮ್ಮ ಹಾಗೂ ತಮ್ಮನ ಮಕ್ಕಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದವರು. ನಾರಾಯಣ ನಾಯ್ಕ ಅವರ ಕೊಲೆಗೆ ಕಾರಣರು ಎನ್ನಲಾದ ಆರೋಪಿಗಳಾದ ನಾಗರಾಜ ನಾಯ್ಕ ಮತ್ತು ಅವರ ಮಕ್ಕಳಾದ ಲಕ್ಷಿ$ಱ್ಪಕಾಂತ ಹಾಗೂ ಚಂದ್ರಕಾಂತ ರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ನೆರೆಕೆರೆಯಲ್ಲಿ ವಾಸವಿದ್ದ ಸಹೋದರರಾದ ನಾರಾಯಣ ನಾಯ್ಕ ಹಾಗೂ ನಾಗರಾಜ್ ನಾಯ್ಕ ನಡುವೆ ದಾರಿ ವಿಚಾರದಲ್ಲಿ ಮನಸ್ತಾಪವಿತ್ತು. ಮೇ.೫ರಂದು ನಾರಾಯಣ ಅವರು ತೋಟಕ್ಕೆ ನೀರು ಹಾಯಿ ಸುವಾಗ ಕ್ಷುಲ್ಲಕ ಕಾರಣಕ್ಕೆ ಅವರ ಸೋದರ ನಾಗರಾಜ ನಾಯ್ಕ ಹಾಗೂ ಅವರ ಮಕ್ಕಳು ಜಗಳಕ್ಕಿಳಿದರು. ಈ ಹಿಂದಿನ ಸಿಟ್ಟನ್ನು ಆ ವೇಳೆ ನಾಗರಾಜ ನಾಯ್ಕ ಪ್ರದರ್ಶಿಸಿದಾಗ ಜಗಳ…
ಕುಂದಾಪ್ರ ಡಾಟ್ ಕಾಂ | ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮಹಾ ರಥೋತ್ಸವದ ವಿಶೇಷ ಚಿತ್ರಗಳು. | ಸುನಿಲ್ ಹೆಚ್. ಜಿ. ಬೈಂದೂರು. ► ಬೈಂದೂರು ಹಬ್ಬ – ಶ್ರೀ ಸೇನೇಶ್ವರ ಮನ್ಮಹಾ ರಥೋತ್ಸವದ ಸಂಭ್ರಮ – http://kundapraa.com/?p=13955 .
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಕುಂದಾಪುರ: ತಾಲೂಕಿನ ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಿದ ಕರ್ನಾಟಕದ ಮೊದಲ ನಕ್ಷತ್ರಾಕಾರದ ಚರ್ಚ್ ಎಂಬ ಖ್ಯಾತಿಗೆ ಪಾತ್ರವಾಗಿರುವ ‘ಸಂತ ಫ್ರಾನ್ಸಿಸ್ ಆಸಿಸಿ ಚರ್ಚ್’ ಮೇ 12ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಅತಿ ವಂದನೀಯ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಲೋಕಾರ್ಪಣೆಗೊಳಿಸಿ ಕೃತಜ್ಞಾತ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಕರ್ನಾಟಕದ ಮೊದಲ ನಕ್ಷತ್ರಾಕಾರದ ಚರ್ಚ್: ಕ್ರೈಸ್ತ ಧರ್ಮಿಯರಲ್ಲಿ ನಕ್ಷತ್ರ ಆರಾಧನೆಗೆ ವಿಶೇಷ ಸ್ಥಾನವಿದೆ. ಯೇಸುವಿನ ಜನನದ ವಾರ್ತೆಯನ್ನು ನಕ್ಷತ್ರದ ಮೂಲಕವೇ ಪಂಡಿತರಿಗೆ ತಲುಪಿಸಲಾಗಿತ್ತು ಎಂಬ ಐತಿಹ್ಯ ನಕ್ಷತ್ರಕ್ಕೆ ಪವಿತ್ರ ಸ್ಥಾನವನ್ನೊದಗಿಸಿದೆ. ಇದೇ ಕಾರಣದಿಂದ ತಲ್ಲೂರಿನಲ್ಲಿ ಸಂತ ಫ್ರಾನ್ಸಿಸ್ ಅಸಿಸಿ ಚರ್ಚ್ ಮರುನಿರ್ಮಾಣ ಮಾಡುವಾಗ ನಕ್ಷಾತ್ರಕಾರದ ವಿನ್ಯಾಸವನ್ನು ಅಳವಡಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವಿನ್ಯಾಸವನ್ನು ಹೊಂದಿದ ಪ್ರಥಮ ಚರ್ಚ್ ಎಂಬ ಹೆಗ್ಗಳಿಕೆಗೆಗೂ ಪಾತ್ರವಾದಂತಾಗಿದೆ. ಚರ್ಚಿನ ಒಳಭಾಗದಲ್ಲಿಯೂ ಸುತ್ತಲೂ ನಕ್ಷತ್ರದ ಆಕಾರಗಳು ಕಂಗೊಳಿಸುತ್ತಿದ್ದು, ಸಂಪೂರ್ಣ ಚರ್ಚಿನ ವಿನ್ಯಾಸ ಮನಸೂರೆಗೊಳಿಸುವಂತಿದೆ. ಚರ್ಚಿನ ಒಳಗೆ ವಿಸ್ತಾರವಾದ ಬಲಿಪೀಠವನ್ನು ನಿರ್ಮಿಸಲಾಗಿದ್ದು, ಬಲಿಪೀಠದ ಎರಡು…
ಕುಂದಾಪ್ರ ಡಾಟ್ ಕಾಂ ಮುಂಬೈ ವರದಿ: ಶ್ರೀ ಮಹಾವಿಷ್ಣು ಬಂಟ ಯಕ್ಷ ಕಲಾವೇದಿಕೆಯ ವಾರ್ಷಿಕೋತ್ಸವ ಮತ್ತು ಸ್ನೇಹಕೂಟದ ಸಮಾರಂಭ ಇತ್ತಿಚೆಗೆ ಮುಂಬೈ ಬಂಟರ ಸಂಘದಲ್ಲಿ ಜರುಗಿತು. ಸಮಾರಂಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ, ತೆಂಕು ಮತ್ತು ಬಡಗು ತಿಟ್ಟುಗಳ ಭಾಗವತ, ಉದ್ಯಮಿ ಕುಂದಾಪುರದ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರಿಗೆ ದಿವಂಗತ ಕಣಂಜಾರು ಆನಂದ ಶೆಟ್ಟಿ ಸ್ಮರಣಾರ್ಥ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಂಟರವಾಣಿ ಸಂಪಾದಕರಾದ ಅಶೋಕ ಪಕ್ಕಳರವರು ನಿರೂಪಿಸಿದರು. ಬಂಟರ ಸಂಘದ ಅದ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿರವರು ಸ್ವಾಗತಿಸಿದರು. ಸಮಿತಿ ಕಾರ್ಯಧ್ಯಕ್ಷರಾದ ರವೀಂದ್ರನಾಥ ಭಂಡಾರಿಯವರು ಧನ್ಯವಾದ ಸಮರ್ಪಿಸಿದರು..
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜ್ಞಾನಕ್ಕೆ ಸರಿಸಾಟಿಯಾದ ಸಂಪತ್ತು ವಿಶ್ವದಲ್ಲಿ ಯಾವುದೂ ಇಲ್ಲ. ಜ್ಞಾನ ಪವಿತ್ರವಾದುದು. ಶ್ರೇಷ್ಠವಾದ ಜ್ಞಾನಕ್ಕೆ ಎಂದೂ ತುಕ್ಕು ಹಿಡಿಯದು. ಜ್ಞಾನವನ್ನು ನೀಡುವ ಶಾಲೆ ಹಾಗೂ ಶಿಕ್ಷಕರ ಪಾತ್ರ ಕೂಡಾ ಅತ್ಯಂತ ಶ್ರೇಷ್ಠವಾದುದು ಎಂದು ಪುರೋಹಿತರಾದ ವೇ|ಮೂ|ರಾಮಕೃಷ್ಣ ಭಟ್ ಶಾರ್ಕೆ ಹೇಳಿದರು. ಕುಂದಾಪುರ ತಾಲೂಕು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಅದ್ಯಕ್ಷತೆ ವಹಿಸಿದ್ದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನರಸಿಂಹ ಭಟ್ ನೆಂಪು ದಾನಿಗಳಿಗೆ ಗೌರವಾರ್ಪಣೆ ಮಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಕಲ್ಮಾಡಿ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಹರ್ಜಿ ಕರುಣಾಕರ ಶೆಟ್ಟಿ, ಗ್ರಾಮ ಪಂಚಾಯತ್ ಉಪಾದ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು, ಗ್ರಾಮ ಪಂಚಾಯತ್ ಸದಸ್ಯರಾದ ಉದಯ್ ಕೆ.ನಾಯ್ಕ್, ಸಿಂಗಾರಿ, ಲಕ್ಷ್ಮೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಶಿರೂರು ರಾಹೆ-66ರ ಸೇತುವೆಯಲ್ಲಿ ಮಾರುತಿ ಸ್ವಿಫ್ಟ್ ಡಿಸೈರ್ ಹಾಗೂ ಮಹಿಂದ್ರಾ ಬೊಲೆರೊ ನಡೆದ ಸಂಭವಿಸಿದ ಅಪಘಾತದಲ್ಲಿ ವಾಹಗಳು ನುಜ್ಜುಗುಜ್ಜಾಗಿ, ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ವರದಿಯಾಗಿದೆ. ಧರ್ಮಸ್ಥಳದಿಂದ ಹುಬ್ಬಳ್ಳಿಯ ಕಡೆಗೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದ ಬೊಲೆರೊ ವಾಹನ ಡಿಕ್ಕಿಯಾಗಿ ವಾಹನಗಳು ಜಖಂಗೊಂಡಿದ್ದವು. ಕಾರಿನಲ್ಲಿದ್ದ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಡಿಕ್ಕಿಯ ರಭಸಲ್ಲಿ ಕೂದಲೆಳೆ ಅಂತರದಲ್ಲಿ ಸೇತುವೆ ಕೆಳಗೆ ಬೀಳದೇ ಬಚಾವಾಗಿದೆ. ಈ ಅಪಘಾತಕ್ಕೆ ಬೊಲಿರೊ ವಾಹನದ ಚಾಲಕನ ನಿರ್ಲಕ್ಷವೇ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಾಹನದ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು, ಭಟ್ಕಳದಲ್ಲಿಯೂ ಕೂಡಾ ಕೆಲವು ವಾಹನಗಳಿಗೆ ಜಖಂ ಮಾಡಿ ಅಲ್ಲಿಂದ ಪಾರಾಗಿ ಬಂದಿದ್ದ ಎನ್ನಲಾಗಿದೆ. ಈ ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸಗೊಂಡಿತ್ತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
