ಹಳ್ಳಿಹೊಳೆ: ತಮ್ಮನ ಮಕ್ಕಳಿಂದ ಹಲ್ಲೆಗೊಳಲಾಗಿದ್ದ ಅಣ್ಣ ಚಿಕಿತ್ಸೆಗೆ ಸ್ಪಂದಿಸದೇ ಸಾವು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಸಮೀಪದ ಕಮಲಶಿಲೆ ಗ್ರಾಮದ ಭಟ್ಕಳಮಕ್ಕಿಯಲ್ಲಿ ರಸ್ತೆಯ ವಿಚಾರವಾಗಿ ಕುಟುಂಬಿಕರ ನಡುವೆ ನಡೆದ ತಕರಾರಿಗೆ ಸ್ವಂತ ತಮ್ಮನೇ ತನ್ನ ಮಕ್ಕಳೊಂದಿಗೆ ಅಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆಣ್ಣನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ. ನಾರಾಯಣ ನಾಯ್ಕ (೬೦) ತಮ್ಮ ಹಾಗೂ ತಮ್ಮನ ಮಕ್ಕಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದವರು. ನಾರಾಯಣ ನಾಯ್ಕ ಅವರ ಕೊಲೆಗೆ ಕಾರಣರು ಎನ್ನಲಾದ ಆರೋಪಿಗಳಾದ ನಾಗರಾಜ ನಾಯ್ಕ ಮತ್ತು ಅವರ ಮಕ್ಕಳಾದ ಲಕ್ಷಿ$ಱ್ಪಕಾಂತ ಹಾಗೂ ಚಂದ್ರಕಾಂತ ರನ್ನು ಪೊಲೀಸರು ಬಂಧಿಸಿದ್ದಾರೆ.

Call us

Click Here

ಘಟನೆಯ ವಿವರ:
ನೆರೆಕೆರೆಯಲ್ಲಿ ವಾಸವಿದ್ದ ಸಹೋದರರಾದ ನಾರಾಯಣ ನಾಯ್ಕ ಹಾಗೂ ನಾಗರಾಜ್ ನಾಯ್ಕ ನಡುವೆ ದಾರಿ ವಿಚಾರದಲ್ಲಿ ಮನಸ್ತಾಪವಿತ್ತು. ಮೇ.೫ರಂದು ನಾರಾಯಣ ಅವರು ತೋಟಕ್ಕೆ ನೀರು ಹಾಯಿ ಸುವಾಗ ಕ್ಷುಲ್ಲಕ ಕಾರಣಕ್ಕೆ ಅವರ ಸೋದರ ನಾಗರಾಜ ನಾಯ್ಕ ಹಾಗೂ ಅವರ ಮಕ್ಕಳು ಜಗಳಕ್ಕಿಳಿದರು. ಈ ಹಿಂದಿನ ಸಿಟ್ಟನ್ನು ಆ ವೇಳೆ ನಾಗರಾಜ ನಾಯ್ಕ ಪ್ರದರ್ಶಿಸಿದಾಗ ಜಗಳ ತಾರಕಕ್ಕೇರಿತು.  ಅವರ ಮಕ್ಕಳಾದ ಲಕ್ಷ್ಮೀಕಾಂತ ಮತ್ತು ಚಂದ್ರಕಾಂತ್ ಜಗಳಕ್ಕೆ ಇನ್ನಷ್ಟು ಪ್ರೋತ್ಸಾಹಿಸಿ ದರು ಎನ್ನಲಾಗಿದೆ. ಗಲಾಟೆಯ ನಡುವೆಯೇ ತೆಂಗಿನಗರಿಯ ಬಲವಾದ ಭಾಗದಿಂದ ನಾರಾ ಯಣ ನಾಯ್ಕ ಅವರ ತೊಡೆಗೆ ಹೊಡೆದು ಗಾಯಗೊಳಿಸಿದರು. ಗಾಯದ ಪರಿಣಾಮ ನಾರಾ ಯಣ ನಾಯ್ಕ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಅಲ್ಲದೇ ಪೊಲೀಸರಿಗೂ ಹಲ್ಲೆ ಬಗ್ಗೆ ದೂರು ನೀಡಿದ್ದರೆನ್ನಲಾಗಿದೆ. ಈ ನಡುವೆಯೇ ನೋವು ಕಮ್ಮಿಯಾಗದ ಕಾರಣ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿಯೂ ಎರಡು ದಿನ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೇ ನಾರಾಯಣ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮಂಗಳೂರು ವೆನಾಕ್ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು. ಹಣವಿಲ್ಲದೆ ನಾರಾಯಣ ನಾಯ್ಕ ಅವರು ಹೆಚ್ಚಿನ ಚಿಕಿತ್ಸೆಗೆ ಹೋಗದೇ ಮೇ.೯ ರಂದು ಮನೆಗೆ ವಾಪಾಸ್ಸಾಗಿದ್ದರು. ಬಳಿಕ ಮನೆಗೆ ಬಂದ ಎರಡು ದಿನದಲ್ಲಿ ನಾರಾಯಣ ನಾಯ್ಕ ಅವರ ಕಾಲಿನ ನೋವು ವಿಪರೀತವಾಗಿದ್ದು ನೋವು ಸಹಿಸಲಾರದೇ ಬುಧವಾರ ಬೆಳಿಗ್ಗೆ ನಿವಾಸದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ನಾರಾಯಣ ನಾಯ್ಕ ಪತ್ನಿ, ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾರಾಯಣ ಅವರ ಸಾವಿಗೆ ನಾಗರಾಜ್ ಹಾಗೂ ಆತನ ಮಕ್ಕಳ ಹಲ್ಲೆಯೇ ಕಾರಣ ಎಂದು ಪೊಲೀಸರಿಗೂ ದೂರು ನೀಡಿದ ಹಿನ್ನೆಲೆ ಪೊಲೀಸರು ಮೂವರನ್ನು ಬಂಧಿಧಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಾಗಿದೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ದಿವಾಕರ ಪಿ.ಎಂ., ಶಂಕರನಾರಾಯಣ ಠಾಣೆ ಎಸ್‌ಐ ಸುನೀಲ್ ಕುಮಾರ್, ಜಿ.ಪಂ. ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಮೊದಲಾದವರು ಭೇಟಿ ನೀಡಿದ್ದಾರೆ.

Leave a Reply