Author: ನ್ಯೂಸ್ ಬ್ಯೂರೋ

ಶ್ರೀ ರಾಮ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ರಾಮಕ್ಷತ್ರಿಯ ಸಮಾಜದ ಕಡು ಬಡವರಿಗೆ ಮನೆ ನಿರ್ಮಾಣ ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಒಂದು ಸಮಾಜ ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಆ ಸಮಾಜದ ಧಾರ್ಮಿಕ ಬೇರುಗಳು ಗಟ್ಟಿಯಾಗಿರಬೇಕು. ಧಾರ್ಮಿಕ, ಸೇವಾರಂಗದಲ್ಲಿ ಮುಂಚೂಣಿಯಲ್ಲಿರುವವರು ಸಾಮಾಜಿಕವಾಗಿಯೂ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡು ಬದುಕಿನಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಹೇಳಿದರು. ಅವರು ಬೈಂದೂರು ಗ್ರಾಮದ ಬಾಡಾದಲ್ಲಿ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಇದರ ಶ್ರೀ ರಾಮ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ನಿರ್ಮಿಸಲಾದ ಗೃಹವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಳದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಮೂಲಕ ನಿರಂತರವಾಗಿ ರಾಮಕ್ಷತ್ರಿಯ ಸಮಾಜದ ಕಡು ಬಡವರಿಗೆ ನೆರವಾಗುತ್ತಿರುವ ಸಾರ್ಥಕತೆ ಇದೆ. ಈವರೆಗೆ ಟ್ರಸ್ಟ್‌ನಿಂದ 4 ಮನೆಗಳು ನಿರ್ಮಿಸಲಾಗಿದ್ದು, ಮಾಸಿಕ ವಿಧವಾ ವೇತನ, ಬಡ ವೈದ್ಯಕೀಯ ಇಂಜಿನಿಯರಿಂಗ್ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿಧ್ಯಾರ್ಥಿ ವೇತನಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೆಮ್ಮಾಡಿಯ ಪುರಾಣೇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನಾರಾಯಣ ದೇವಳದ ವಾರ್ಷಿಕ ಬ್ರಹ್ಮರಥೋತ್ಸವದ ಅಂಗವಾಗಿ ಸ್ಥಳೀಯ ಎಸ್. ಆರ್. ಡೆಕೋರೇಟರ‍್ಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ಶಾಲಾ ಮೈದಾನದಲ್ಲಿ ಜರಗಿದ ಸಂಗೀತ ರಸಸಂಜೆ ಮತ್ತು ನೃತ್ಯ ಕಾರ್ಯಕ್ರಮ ಜನಮನ ರಂಜಿಸಿತು. ನವೀನ್‌ಚಂದ್ರ ಕೊಪ್ಪ ನೇತೃತ್ವದ ಮಂಗಳೂರಿನ ಶಿವಾನಿ ಮ್ಯೂಸಿಕಲ್‌ನ ಕಲಾವಿದರು ನಡೆಸಿಕೊಟ್ಟ ಕಾರ್ಯಕ್ರಮವು ನೆರೆದ ಸಾವಿರಾರು ಜನರಿಗೆ ಸಾಂಸ್ಕೃತಿಕ ರಸದೌತಣ ನೀಡಿತು. ಉದ್ಯಮ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಪ್ರಸಿದ್ಧವಾದ ಎಸ್. ಆರ್. ಡೆಕೋರೇಟರ‍್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ೩ನೇ ವರ್ಷದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮದ ಅಂಗವಾಗಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ಅವರು ಮಾತನಾಡಿ, ಶ್ರೀ ಲಕ್ಷ್ಮೀನಾರಾಯಣ ದೇವರ ಬ್ರಹ್ಮರಥೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಸಾಂಸ್ಕೃತಿಕ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇದು ಕೇವಲ ಮನರಂಜನೆ ನೀಡುವ ಕಾರ್ಯಕ್ರಮವಷ್ಟೇ ಅಲ್ಲದೇ ಊರ ಹಬ್ಬದ ನೆನಪಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಾರ್ಯತತ್ಪರತೆ, ಕರ್ಮನಿಷ್ಠೆಯು ಭಗವಂತನಿಗೆ ಪ್ರಿಯವಾಗುತ್ತದೆ. ಕೇವಲ ಜೀವಿಸಿದ ಮಾತ್ರಕ್ಕೆ ಶ್ರೇಷ್ಠತ್ವ ಪ್ರಾಪ್ತಿಯಾಗುವುದಿಲ್ಲ. ಸಾಧನೆಯಿಂದ ಮಾತ್ರ ಬ್ರಹ್ಮತ್ವ ಸಿದ್ಧಿ ಸಾಧ್ಯ ಎಂದು ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತಿ ಶ್ರೀಪಾದರು ನುಡಿದರು. ಹರ್ಕೂರು ಗ್ರಾಮದ ನಾರ್ಕಳಿ ಬ್ರಾಹ್ಮಣರಬೆಟ್ಟುವಿನ ನವನಿರ್ಮಿತ ಕಾರಣಿಕ ಕ್ಷೇತ್ರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಷಮರ್ದಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವ ಬ್ರಹ್ಮಕುಂಭಾಭಿಷೇಕ ಅಂಗವಾಗಿ ಶನಿವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಕುಂಕುಮ ಧಾರಣೆಯು ದೇವಿ ಸಾನ್ನಿಧ್ಯದ ಪ್ರತೀಕವಾಗಿದೆ. ಸ್ತ್ರೀ ಜಾಗೃತಿಯಿಂದ ಭಾರತೀಯ ಸಂಸ್ಕೃತಿ ಉಳಿದಿದೆ. ದೇವರ ಹೆಸರಿನಲ್ಲಿ ಕಟ್ಟಿದ ಸಂಘಟನೆ ಬಲಿಷ್ಠವಾಗಿ ಉಳಿಯುತ್ತದೆ. ದೇಶ, ಧರ್ಮಕ್ಕಾಗಿ ಯುವಕರು ಒಂದಾಗಿ ಕೆಲಸ ಮಾಡಿದಾಗ ದೇಶ ಸುಭದ್ರವಾಗಬಲ್ಲುದು ಎಂದರು. ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಜಾಗೃತಿಯಿಂದ ಹಿಂದುತ್ವದ ರಕ್ಷಣೆ ಸಾಧ್ಯ ಎಂದರು. ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮಲಯಾಳಂ ಮನೋರಮ ಸಂಸ್ಥೆಯ ಪತ್ರಿಕಾ ವಿತರಕರ ಸಮಾವೇಶವನ್ನು ಕುಂದಾಪುರದ ಎಜೆಂಟರಾದ ಶಂಕರ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಮಯದಲ್ಲಿ ಮಲಯಾಳಂ ಮನೋರಮ ಪತ್ರಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More

* ಅಶ್ವಥ್ ಆಚಾರ್ಯ ಯಡಬೆಟ್ಟು | ಕುಂದಾಪ್ರ ಡಾಟ್ ಕಾಂ. ಕುಂದಾಪ್ರ ಕನ್ನಡು ಅಂದೇಳ್ರೆ ಕೆಲವ್ರಿಗ್ ಬಾರಿ ಸಸಾರು. ಓದುಕ್ ಬರುಕೆ ಬರದೆ ಇಪ್ಪವ್ ಮಾತ್ರ ಈ ಭಾಷಿ ಮಾತಾಡುದ್ ಅಂದೇಳಿ ಎಣ್ಸಕಂಡ್, ನಮ್ಮ ಭಾಷಿನ ಬಾರಿ ತಾತ್ಸಾರ ಮಾಡಿ ಕಾಂಬುಕೆ ಶುರು ಮಾಡಿರ್. ಅದ್ರಲ್ಲೂ ಕನ್ನಡ ಚಿತ್ರರಂಗದಾಗೆ ಕುಂದಾಪ್ರ ಕನ್ನಡ ಬರೀ ತಮಾಷಿ ಮಾಡುಕೆ ಮಾತ್ರ. ಕುಂದಾಪ್ರ ಕನ್ನಡದಗೆ ಮಾತಾಡ್ರೆ ಜನ ನಗಾರ್ಡ್ತ್ ಅಂದೇಳಿ ಅದ್ಕೆ ಬಳ್ಸಕಂಬುಕೆ ಶುರು ಮಾಡಿರ್. ಇದನ್ನೆಲ್ಲಾ ಕಾಂಬತಿಕೆ ನಂಗೆ ಎಣ್ಸುದ್, ನಮ್ಮ ಭಾಷ್ಯಂಗೆ ಎಂತಾರೂ ಸಾಧ್ಯುಕ್ ಆತೀಲ್ಯಾ ಅಂದೇಳಿ. ಹೀಂಗೆ ನಮ್ ಭಾಷಿ ನಮ್ಮ ಜನ ನಮ್ಮ ನಾಟ್ಕ ಕಂಡ್ಕಂಡ್ ಖಷಿ ಪಡುವತಿಗೆ ಎಂಟ್ರಿ ಕೊಟ್ರ್ ಕಾಣಿ ರವಿ ಬಸ್ರೂರ್ ಅಂದೇಳಿ. ಕುಂದಾಪ್ರ ಕನ್ನಡದಾಗೆ ಫಸ್ಟ್ ಬಂತ್ ಕಾಣಿ ಒಂದ್ ಹಾಡ್ ” ಅಪ್ಪಯ್ಯ ಕಾಣಿ ಅಬ್ಬಿ ಮಾಡತ್ ಕಾಣಿ”. ಯಾರ್ ಬಾಯಗೇ ಕೇಂಡ್ರು ಅದೇ ಹಾಡ್, ಮಕ್ಕಳ್ ಮರಿ, ಹಳಿಯರ್, ಎಳಿಯರ್ ಎಲ್ಲರೂ ಪದ್ಯ ಕೇಂಡ್ ತಲೆ…

Read More

ಕುಂದಾಪ್ರ ಡಾಟ್ ಕಾಂ ವರದಿ ಶಂಕರನಾರಾಯಣ: ಮೆಸ್ಕಾಂ ಕಛೇರಿ ಆರಂಭಿಸಿ ನಾಲ್ಕು ತಿಂಗಳುಗಳೇ ಕಳೆದಿವೆ. ತಿಂಗಳಿಗೆ ಬರೊಬ್ಬರಿ ಇಪ್ಪತ್ತು ಸಾವಿರ ರೂ. ಬಾಡಿಗೆಯನ್ನು ನೀಡಲಾಗುತ್ತಿದೆ. ಆದರೆ ಅಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂಧಿಗಳೇ ನೇಮಕಗೊಳ್ಳದೇ ದಿನವಿಡಿ ಮುಚ್ಚಿಯೇ ಇರುವ ಪರಿಸ್ಥಿತಿ. ಇದು ಶಂಕರನಾರಾಯಣದ ಬಾಡಿಗೆ ಕಟ್ಟಡವೊಂದರಲ್ಲಿ ಆರಂಭಗೊಂಡ ಮೆಸ್ಕಾಂ ಇಲಾಖೆಯ ವಿದ್ಯುತ್ ಉಪವಿಭಾಗದ ಕೇಂದ್ರದ ದುಸ್ಥಿತಿ. ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸತತ ಹೋರಾಟದ ಫಲವಾಗಿ ಶಂಕರನಾರಾಯಣಕ್ಕೆ ವಿದ್ಯುತ್ ಉಪವಿಭಾಗ ಕೇಂದ್ರ ಬಂದಿತ್ತು. ಸುಮಾರು 27 ಗ್ರಾಮಗಳ ವ್ಯಾಪ್ತಿ ಹೊಂದಿರುವ ಮೆಸ್ಕಾಂ ಇಲಾಖೆ ವಿದ್ಯುತ್ ಉಪವಿಭಾಗ ನಾಲ್ಕು ತಿಂಗಳ ಹಿಂದೆ ಶಂಕರನಾರಾಯಣದಲ್ಲಿ ಲೋಕಾರ್ಪಣೆಗೊಂಡಿತ್ತು. ಆದರೆ ಈವರೆಗೂ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜನೆಯಾಗದೇ ಶಂಕರನಾರಾಯಣ ಪರಿಸರದ ಜನರಿಗೆ ಕಚೇರಿ ನೆರವಿಗೆ ಬಂದಿಲ್ಲ ಎನ್ನೋದು ದುರಂತ. ಶಂಕರನಾರಾಯಹಣ ಹೆ.ಬಿ.ಆರ್. ಕಾಂಪ್ಲೆಕ್ಸ್‌ನ ಬಾಡಿಗೆ ಕಟ್ಟಡದಲ್ಲಿ ಕಛೇರಿಯಿದ್ದು, ಕೇವಲ ವಿದ್ಯುತ್ ಬಿಲ್ಲು ತೆಗೆದುಕೊಳ್ಳಲು ಮಾತ್ರ ಒಬ್ಬ ಸಿಬ್ಬಂದಿ ಬೆಳಿಗ್ಗೆ ಹೊತ್ತು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಸಮಯದಲ್ಲಿ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ಸಂಘ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ, ಚಾರ್ಮಕ್ಕಿ ನಾರಾಯಣ ಶೆಟ್ಟಿ ಲಯನ್ಸ್ ಕಣ್ಣಿನ ಆಸ್ಪತ್ರೆ ಕೋಟ ಹಾಗೂ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರ ಶನಿವಾರ ನಾಗೂರಿನ ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಣ್ಣಿನ ಬಗ್ಗೆ ಜನರಲ್ಲಿ ಮಾಹಿತಿ ಕೊರತೆ ಇದೆ. ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಕೊಳ್ಳುವುದರ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಟದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಲಯನ್ಸ್ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿವಮೊಗ್ಗ ಜವಹರಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗದ ಸಹಾಯಕ ಪ್ರಾಧ್ಯಾಪಕ, ಬೈಂದೂರಿನ ಸಂತೋಷ್ ಶ್ಯಾನುಭಾಗ್ ಮಂಡಿಸಿದ ‘ಮಾರ್ಕೇಟಿಂಗ್ ಆಫ್ ಹೆಲ್ತ್ ಇನ್ಸೂರೆನ್ಸ್ ಇನ್ ರೂರಲ್ ಎರಿಯಾಸ್, ಎ ಸ್ಟಡಿ ವಿತ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಎಂಡ್ ಉಡುಪಿ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ’ ಎಂಬ ಪ್ರೌಢ ಪ್ರಬಂಧಕ್ಕೆ ಬೆಳಗಾವಿಯ ಸರ್. ಎಂ. ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿ ಪ್ರದಾನಿಸಿದೆ. ಈ ಸಂಶೋಧನೆಗೆ ಎಂ.ಬಿ.ಎ. ವಿಭಾಗದ ನಿರ್ದೇಶಕ ಡಾ. ಎಂ. ಜಿ. ಕೃಷ್ಣಮೂರ್ತಿ ಮಾರ್ಗದರ್ಶನ ನೀಡಿದ್ದರು. ಶಿರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಪದವಿಪೂರ್ವ ಕಾಲೇಜು, ಭಟ್ಕಳ ಅಂಜುಮಾನ್ ಕಾಲೇಜು ಹಾಗೂ ನಿಟ್ಟೆಯ ಎನ್‌ಎಂಎಐಟಿಯ ಹಳೆವಿದ್ಯಾರ್ಥಿಯಾಗಿರುವ ಇವರು ಬೈಂದೂರು ಶ್ಯಾನುಭಾಗ್ ಹೋಟೆಲ್‌ನ ದಿ. ಶ್ರೀನಿವಾಸ್ ಶ್ಯಾನುಭಾಗ್ ಹಾಗೂ ರತ್ನಾವತಿ ಎಸ್. ಶ್ಯಾನುಭಾಗ್ ಇವರ ಪುತ್ರರಾಗಿರುತ್ತಾರೆ. ಮೇ.5ರಂದು ನಡೆಯಲಿರುವ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವದಲ್ಲಿ ಸಂತೋಷ್ ಶ್ಯಾನುಭಾಗ್ ಪದವಿ ಸ್ವೀಕರಿಸಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಾಲ್ಕನ್ ಕ್ಲಬ್ ಕಣ್ಣುಕೆರೆ ಹಾಗೂ ಮುಸ್ಲಿಂ ಭಾಂದವರು ಬೇಳೂರಿನ ಸ್ಪೂರ್ತಿ ಧಾಮಕ್ಕೆ ಕೊಡಮಾಡಿದ ಆಂಬ್ಯುಲೆಸ್‌ನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಮಾರುತಿ ಒಮ್ನಿಯ ಕೀಲಿ ಕೈಯನ್ನು ಸ್ಪೂರ್ತಿಧಾಮದ ಸಂಚಾಲಕರಾದ ಡಾ.ಕೇಶವ ಕೋಟೇಶ್ವರ ಅವರಿಗೆ ಹಸ್ತಾಂತರಿಸಿದರು. ಬಿಜೆಪಿ ಕುಂದಾಪುರ ಕ್ಷೇತ್ರಾಕ್ಷಧ್ಯ ರಾಜೇಶ ಕಾವೇರಿ, ಉದ್ಯಮಿ ವಿ.ಕೆ.ಮೋಹನ್, ಬಿ.ಎಮ್.ಹಂಜಾ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಧಾರ್ಮಿಕತೆಯ ಭಾವನೆಗಳು ಹೆಚ್ಚುತ್ತಿರುವುದರಿಂದ ಧಾರ್ಮಿಕ ಕೇಂದ್ರಗಳು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ನಮ್ಮಲ್ಲಿರುವ ದೈವೀಕ ಭಾವನೆಗಳನ್ನು ಉದ್ದೀಪನೆಗೊಳಿಸುವ ಮೂಲಕ ಶ್ರದ್ದಾ, ಭಕ್ತಿಯಿಂದ ಆರಾಧಿಸಿದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂದು ವಿಹಿಂಪ ದಕ್ಷಿಣ ಕನ್ನಡ ಪ್ರಾಂತ ಮಠಮಂದಿರಗಳ ಸಂಪರ್ಕ ಪ್ರಮುಖ್ ಹೆಚ್. ಪ್ರೇಮಾನಂದ ಶೆಟ್ಟಿ ಹೇಳಿದರು. ಹೇರೂರು ಗ್ರಾಮದ ಪಡುಬೆಟ್ಟು ಯರುಕೋಣೆ ಶ್ರೀ ಮರ್ಲುಚಿಕ್ಕು ಮತ್ತು ಸಪರಿವಾರ ದೈವಸ್ಥಾನದ ನೂತನ ಗುಡಿಸಮರ್ಪಣೆ ಮತ್ತು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಭಕ್ತಿಯಿಂದ ದೇವರ ಪ್ರೀತಿಗಳಿಸಲು ಸಾಧ್ಯವಿದೆ. ಭಕ್ತಿ, ಶ್ರದ್ಧೆ ಹಾಗೂ ಪ್ರಾಮಾಣಿಕತೆಗೆ ದೇವರು ಒಲಿಯುತ್ತಾನೆ. ನಮ್ಮಲ್ಲಿ ಕರುಣೆ, ಮಿತೃತ್ವ ಭಾವನೆ ಇರಬೇಕು. ಯಾರೊಬ್ಬರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಯಿಂದ ನಾವೆಲ್ಲರೂ ಒಂದೇ ಎಂಬ ಭಾವದಿಂದ ನೋಡಬೇಕು. ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಸಮಾಜದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದ ಅವರು ಜಾತಿ, ಧರ್ಮದ ವಿಷಬೀಜ ಬಿತ್ತಿ…

Read More