Author: ನ್ಯೂಸ್ ಬ್ಯೂರೋ

ಗಂಗೊಳ್ಳಿ: ಕುಂದಾಪುರ ತಾಲೂಕಿನ ಗಂಗೊಳ್ಳಿಯ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪ್ರಸಿದ್ದ ಉದ್ಯಮಿ ಎಚ್. ಗಣೇಶ್ ಕಾಮತ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಹಕಾರಿಯ ಎಚ್.ಎಲ್.ಕಾಮತ್ ಸಭಾಂಗಣದಲ್ಲಿ ಚುನಾವಣಾಧಿಕಾರಿ ಸುನೀಲ್ ಕುಮಾರ್ ಸಿ. ಎಂ. ಉಪಸ್ಥಿತಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಇವರನ್ನು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಔಷಧೋದ್ಯಮಿ ಹಾಗೂ ಸಹಕಾರಿಯ ಹಿರಿಯ ನಿರ್ದೇಶಕರಾದ ಜಿ. ವಿಶ್ವನಾಥ ಆಚಾರ್ಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಹಕಾರಿಯ ಆಡಳಿತ ಮಂಡಳಿಯ ಚುನಾಯಿತ ನೂತನ ಸದಸ್ಯರಾದ ಜಿ. ವೆಂಕಟೇಶ್ ನಾಯಕ್, ಜಿ. ವೆಂಕಟೇಶ ಶೆಣೈ, ಬಿ. ರಾಘವೇಂದ್ರ ಪೈ, ಜಿ. ಉದಯಶಂಕರ್ ರಾವ್, ವತ್ಸಲಾ ಎಸ್. ಕಾಮತ್, ಮಾಲಾ ಕೆ. ನಾಯಕ್, ನಾರಾಯಣ ಪೂಜಾರಿ, ಮಹಾಬಲ ಪೂಜಾರಿ, ಆನಂದ ಜಿ. ಹಾಗೂ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕ ಗಣೇಶ್ ನಾಯಕ್ ಉಪಸ್ಥಿತರಿದ್ದರು. ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ, ಗಂಗೊಳ್ಳಿ…

Read More

ಕುಂದಾಪುರ: ನೂತನವಾಗಿ ಆರಂಭಗೊಂಡಿರುವ ಬಸ್ರೂರಿನ ಸಂತ ಫಿಲಿಪ್ ನೇರೀ ಸೆಂಟ್ರಲ್ ಸ್ಕೂಲಿನ ಕಟ್ಟಡದ ನಿರ್ಮಾಣಕ್ಕಾಗಿ ರೋಜರಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ವತಿಯಿಂದ ಐವತ್ತು ಸಾವಿರ ರೂಪಾಯಿಗಳ ದೇಣಿಗೆ ನೀಡಲಾಯಿತು. ಬಸ್ರೂರಿನ ಸಂತ ಫಿಲಿಪ್ ನೇರೀ ಚರ್ಚಿನ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫಾಸ್ಕಲ್ ಡಿಸೋಜಾ ಅವರು ಚರ್ಚಿನ ಧರ್ಮಗುರುಗಳಾದ ವಂದನೀಯ ವಿಶಾಲ್ ಲೋಬೋ ಅವರಿಗೆ ದೇಣಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಧರ್ಮಗುರು ವಿಶಾಲ್ ಲೋಬೋ ಅವರು, ಸೊಸೈಟಿ ನೀಡಿದ ಹಣವನ್ನು ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ವಿನಿಯೋಗಿಸಲಾಗುವುದು. ನಮ್ಮ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಸೆಂಟ್ರಲ್ ಸ್ಕೂಲ್ ನಿರ್ಮಾಣವಾಗುತ್ತಿದ್ದು, ಇದರಿಂದ ಶೈಕ್ಷಣಿಕ ಉನ್ನತಿಗೆ ಪ್ರಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂದರು. ಈ ಸಂದರ್ಭ ಉದ್ಯಮಿ, ಬಸ್ರೂರು ಶಾಖಾ ಸಭಾಪತಿ ಫಿಲಿಪ್ ಡಿಕೋಸ್ತಾ, ಬಸ್ರೂರಿನ ಶಾಖಾಧಿಕಾರಿ ಪ್ರದೀಪ್ ಡಿಕೋಸ್ತಾ ಉಪಸ್ಥಿತರಿದ್ದರು.

Read More

ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲಿ ಕಂಪ್ಯೂಟರ್ ವಿಭಾಗವು ಐಐಟಿ ಮದ್ರಾಸ್ ಇದರೊಂದಿಗೆ ಆಂಡ್ರೋಯ್ಡ್ ಅಪ್ಲಿಕೇಶನ್ ಆಪ್ ಡೆವಲೊಪ್‌ಮೆಂಟ್ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ್ ಶೆಟ್ಟಿ ಮಾತನಾಡಿ ಹೊಸ ತಂತ್ರಜ್ನಾನವನ್ನು ಹೆಚ್ಚೆಚ್ಚು ಉಪಯೋಗಿಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಕಾಲೇಜು ಸಹ ಅವಕಾಶವನ್ನು ಒದಗಿಸಿಕೊಡುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಹೊಸ ತಂತ್ರಜ್ನಾನವನ್ನು ಕಲಿತು ಆಧುನೀಕೃತ ತಾಂತ್ರಿಕ ಜಗತ್ತಿಗೆ ತಮ್ಮನ್ನು ತೆರೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ತಂತ್ರಿ, ಕಾರ್ಯಕ್ರಮ ಸಂಚಾಲಕರಾದ ಕೆ. ಗಣೇಶ್, ಸಂಪನ್ಮೂಲ ವ್ಯಕ್ತಿಗಳಾದ ಶಿವ ಶ್ರೀವಾಸ್ತವ ಮತ್ತು ಬಂಡನವಾಲ್ ಭಗವಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಪ್ ಜನರಲ್ ಎಜುಕೇಶನ್ ಇಅದರ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಮಾತನಾಡಿ ಪಠ್ಯಕ್ರಮದಲ್ಲಿರುವ ವಿಷಯವನ್ನು ಹೊರತುಪಡಿಸಿ ಆಧುನಿಕ ತಾಂತ್ರಿಕ ಜ್ನಾನವನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ್ ಶೆಟ್ಟಿ ಮಾತನಾಡಿ…

Read More

ಕುಂದಾಪುರ: ವಾದ್ಯ ಸಂಗೀತ ಕಲಾವಿದರಾಗಿ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾದ್ಯ ಸಂಗೀತ ಕಲಾವಿದ ಎಸ್.ಎಂ. ಗೋಪಾಲ ದೇವಾಡಿಗ ಅವರ ಸೇವೆ ಸ್ಮರಣೀಯವಾದುದು ಎಂದು ಭಾಂಡ್ಯದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ ಆಡಳಿತ ಮೊಕ್ತೇಸರ ಭಾಂಡ್ಯ ಸುಬ್ಬಣ್ಣ ಶೆಟ್ಟಿ ಹೇಳಿದರು. ಅವರು ಭಾಂಡ್ಯದ ಕೆಂಜಿಮನೆ ಶ್ರೀ ಹಾಗುಳಿ ದೈವಸ್ಥಾನದ ೧೮ನೇ ವರ್ಧಂತ್ಯುತ್ಸವದ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾದ್ಯ ಸಂಗೀತ ಕಲಾವಿದ ಎಸ್.ಎಂ. ಗೋಪಾಲ ದೇವಾಡಿಗ ಅವರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡಿದರು. ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಭಾಂಡ್ಯ ಸುಧಾಕರ ಶೆಟ್ಟಿ ಶುಭಾಶಂಸನೆಗೈದರು. ಪ್ರಥಮ ದರ್ಜೆ ಗುತ್ತಿಗೆದಾರ ಭಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಭಾಂಡ್ಯ ಗೋವಿಂದ್ರಾಯ ಪೈ ಉಡುಪಿ, ಭಾಂಡ್ಯ ಸಂಜೀವ ಪೈ ಮಣಿಪಾಲ, ಭಾಂಡ್ಯ ವೆಂಕಟೇಶ ಪೈ ಮಂಗಳೂರು, ಭಾಂಡ್ಯ ನರಸಿಂಹ ಪೈ ಕುಂದಾಪುರ, ಕರಿಯಣ್ಣ ಶೆಟ್ಟಿ ಕ್ಯಾಕೋಡು ಆಜ್ರಿ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಹೊಳ್ಮಗೆ ರಘುನಾಥ ಶೆಟ್ಟಿ…

Read More

ಕುಂದಾಪುರ: ಕೋಟೇಶ್ವರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಜಿಎಸ್‌ಬಿ ಸಮಾಜ ಭಾಂದವರಿಗೆ ನಡೆದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಕೋಟಾ ಜಿಎಸ್‌ಬಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.ದ್ವಿತೀಯ ಸ್ಥಾನವನ್ನು ಕೊಪ್ಪದ ನಾಯಕ್ ಬ್ರದರ್ಸ್ ತಂಡ ತಮ್ಮದಾಗಿಸಿಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಸುರೇಂದ್ರ ಪೈ, ಉತ್ತಮ ದಾಂಡಿಗನಾಗಿ ರವೀಂದ್ರ,ಉತ್ತಮ ಎಸೆತಗಾನಾಗಿ ಗಿರೀಶ ಕೋಟಾ ಅವರು ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಶ್ರೀಧರ ಕಾಮತ್, ಆಡಳಿತ ಮೊಕ್ತೇಸರರು, ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ, ಮಾತನಾಡುತ್ತಾ ಈ ತರಹದ ಪಂದ್ಯಾಟಗಳಿಂದ ಸಮಾಜ ಭಾಂದವರು ಒಟ್ಟಾಗಲು ಸಾಧ್ಯ. ಇದರಿಂದ ಪರಸ್ಪರ ಭಾಂದವ್ಯ ಹೆಚ್ಚುತ್ತದೆ.ಯುವಕರು ಸೇರಿ ನಡೆಸುವ ಈ ಪಂದ್ಯಾಟ ಮುಂದೆಯು ಕ್ರಿಕೆಟ್ ಅಲ್ಲದೇ ಬೇರೆ ರೀತಿಯ ಕ್ರೀಡೆಗಳು ಜರಗಲಿ ಎಂದು ಶುಭ ಹಾರೈಸಿದರು. ಹಿರಿಯ ಉದ್ಯಮಿಗಳಾದ ದಿನೇಶ ಕಾಮತ್, ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ ಮೊಕ್ತೇಸರರಾದ ವಿಠ್ಠಲದಾಸ ಭಟ್, ಗಣೇಶ ಕಿಣಿ, ಉದ್ಯಮಿಗಳು ಬೆಳ್ವೆ, ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಶಂಕರ ಕಾಮತ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾಮಾಜಿಕ ಕಾರ್ಯಕರ್ತ, ವಿಜಯಾ ಬ್ಯಾಂಕ್‌ನ ನಿವೃತ್ತ ಚೀಫ್ ಮ್ಯಾನೇಜರ್ ಸಚ್ಚಿದಾನಂದ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಳ ದಿನಗಳ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳುತ್ತಿದ್ದ ಅವರಿಗೆ ಅನಾರೋಗ್ಯ ಕಾಣಿಸಿಕೊಂಡು ಮುಂಬೈಯ ಮಗಳ ನಿವಾಸಕ್ಕೆ ಹಿಂದಿರುಗಿ ವಿಶ್ರಾಂತಿಯಲ್ಲಿದ್ದರು. ಮಾ.3ರಂದು ಹೃದಯಾಘಾತಕ್ಕೊಳ್ಳಗಾಗಿ ನಿಧನಹೊಂದಿದ್ದಾರೆ. ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿಯಾಗಿ, ಕುಂದಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷರಾಗಿ, ಹುಬ್ಬಳ್ಳಿ ಝೋನ್ ರೈಲ್ವೆ ಬೋರ್ಡ್ ಸದಸ್ಯರಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಶೀಲಾ ಶೆಟ್ಟಿ, ಮಕ್ಕಳಾದ ದೀಪಕ್ ಶೆಟ್ಟಿ, ರೂಪಾ ಶೆಟ್ಟಿ, ಡಾ. ಸುದೀಪ್ ಶೆಟ್ಟಿ, ಶೀತಲ್ ಶೆಟ್ಟಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Read More

ಬೈಂದೂರು: ಇಲಾಖೆಯಿಂದ ನೀಡುವ ಮಾಹಿತಿ, ತರಬೇತಿ ಪಡೆಯಲು ರೈತರು ತಯಾರಿಲ್ಲ. ಹಾಗಾಗಿ ಇಲ್ಲಿ ವ್ಯವಸ್ಥೆಗಳ ವೈಪಲ್ಯಕ್ಕಿಂತ ರೈತರ ಹಿಂಜರಿಕೆ ಎದ್ದು ಕಾಣುತ್ತಿದೆ. ಇಲಾಖೆಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೂ ಒಂದುಕಡೆ ಮಾಹಿತಿ ಕೊರತೆ ಹಾಗೂ ಇನ್ನೊಂದೆಡೆ ಮಾರುಕಟ್ಟೆಯ ಸಮಸ್ಯೆಗಳಿಂದ ಇಂದಿನ ದಿನಗಳಲ್ಲಿ ರೈತ ಸೋಲುತ್ತಿದ್ದಾನೆ ಎಂದು ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು. ನಾಗೂರು ಒಡೆಯರ ಮಠ ಲಲಿತಕೃಷ್ಣ ಸಭಾಗೃಹದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ರೈತ ಮಹಿಳೆಯರಿಗಾಗಿ ಆಯೋಜಿಸಿದ ಹಣ್ಣು-ತರಕಾರಿ ಬೆಳೆಯುವ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆಯಾಗುವ ಇಳುವರಿಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ರೈತರಿಗೆ ಸೂಕ್ತ ಮಾಹಿತಿ ನೀಡಬೇಕಾದ ಅಗತ್ಯವಿದೆ. ರೈತರು ಬೆಳೆದ ಹಣ್ಣು ತರಕಾರಿಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ವ್ಯವಸ್ಥೆಯಿಂದ ಹೆಚ್ಚಿನ ಲಾಭಗಳಿಸಹುದು. ಕೃಷಿಗೆ ಕಾರ್ಮಿಕರ ಕೊರತೆ ಇದ್ದು ಕಾಲಕ್ಕೆ ತಕ್ಕಂತೆ ವ್ಯವಸಾಯ ಬೇಕಾದರೆ…

Read More

ಕುಂದಾಪುರ: ಬುಧವಾರ ರಾತ್ರಿ ಕೋಟೇಶ್ವರದ ಸನ್ನಿಧಿ ಮೊಬೈಲ್ ಅಂಗಡಿ ಎರಡನೆ ಬಾರಿಗೆ ಕಳವು ಪ್ರಕರಣ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೆಳವು ತಿಂಗಳ ಹಿಂದೆ ಕೋಟೇಶ್ವರ ಬೈಪಾಸ್ ಸಮೀಪದ ಸುರರ್ಶ ಎಂಬುವರ ಮಾಲಕತ್ವದ ಸನ್ನಿಧಿ ಅಂಗಡಿಯಲ್ಲಿ ಕಳವು ನಡೆದಿತ್ತು. ಬುಧವಾರ ತಡರಾತ್ರಿ ಮತ್ತೆ ಕಳವು ನಡೆದಿದ್ದು, ಅಂಗಡಿಯ ಸೆಟ್ಟರ್ ಬೀಗ ಮುರಿದು ಹೊರಗಡೆಯ ಗಾಜನ್ನು ಒಡೆದು ಒಳನುಗ್ಗಿದ ಕಳ್ಳರು ಅಂಗಡಿಯೊಳಗಿಡಲಾಗಿದ್ದ ಕಾಣಿಕೆ ಡಬ್ಬಿಯನ್ನು ದೋಚಿದ್ದಾರೆ. ಅಂಗಡಿಯಲ್ಲಿದ್ದ ದುರಸ್ತಿಗಾಗಿ ಬಂದಿದ್ದ ಹಳೆ ಏಳೆಂಟು ಮೊಬೈಲ್‌ಗಳನ್ನು ಹಾಗೂ ಮೂರ‍್ನಾಲ್ಕು ಹೊಸ ಮೊಬೈಲ್ ಫೋನ್‌ಗಳನ್ನು ಮತ್ತು ಸುಮಾರು ಮುರು ಸಾವಿರ ನಗದು ಹಣವನ್ನು ದೋಚಿದ್ದಾರೆ. ಪಕ್ಕದಲ್ಲಿಯೇ ಇದ್ದ ದಿನೇಶ್ ಎಂಬುವರ ಮಾಲಕತ್ವದ ಯೂ ಲೈಕ್ ಫ್ಯಾಷನ್ ಎನ್ನುವ ಹೆಸರಿನ ಬಟ್ಟೆ ಮತ್ತು ಟೈಲರ್ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಐದು ಸಾವಿರ ನಗದು ಮತ್ತು ಟಿವಿಯನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಕಳವಾದ ಸೊತ್ತುಗಳ ನಿಖರ ವಿವರಗಳು ಇನ್ನಷ್ಟೇ ತಿಳಿಯಬೇಕಿದ್ದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದೇವಳದಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣದ ಬಗ್ಗೆ ಸಮಗ್ರ ತನಿಕೆ ನಡೆಸುತ್ತಿದ್ದು, ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ದೇವಳದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಭದ್ರತೆಯ ಬಗ್ಗೆ ಸಂಪೂರ್ಣ ಗಮನ ಹರಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಆಡಳಿತ ಕಛೇರಿ ಜಗದಾಂಭಿಕಾದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಪ್ರಕರಣದ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯವರು ನೇತೃತ್ವದಲ್ಲಿ ತನಿಕೆ ಪ್ರಗತಿಯಲ್ಲಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸ್ ಇಲಾಖೆಗೂ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳ ಲೋಪ ಕಂಡಬಂದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲು ಸಿದ್ಧರಿದ್ದು ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೇವೆ. ಆಡಳಿತಾತ್ಮಕ ದೃಷ್ಠಿಯಿಂದ ದೇವಳದ ಭದ್ರತೆಯನ್ನು ಬಲಪಡಿಸುವ ಬಗ್ಗೆ ಈಗಾಗಲೇ ಕಾರ್ಯೋನ್ಮಕರಾಗಿದ್ದೇವೆ. ಕುಂದಾಪ್ರ ಡಾಟ್ ಕಾಂ ಸುದ್ದಿ ದೇವಳದ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವುದು ಕಾರ್ಯ ದೊಡ್ಡ ಮಟ್ಟದಲ್ಲಿ ನಡೆಯಬೇಕಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೆಂಗಳೂರು: ಕುಂದಾಪುರ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘಟನಾ ಸಭೆಯು ಬೆಂಗಳೂರಿನ ಲಾಲ್‌ಬಾಲ್ ಉದ್ಯಾನವನದಲ್ಲಿ ಜರುಗಿತು. ಕಾಲೇಜಿನ ವಿವಿಧ ಚಟುವಟಿಕೆಗಳು ಹಾಗೂ ಇನ್ನಿತರೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟುವ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಯಿತು. ಕುಂದಾಪುರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸುತ್ತಿರುವ ಬಿ.ಎಂ. ಸುಕುಮಾರ ಶೆಟ್ಟಿ ಅವರು, ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೋರಿರುವ ಒಲವು ವಿದ್ಯಾರ್ಥಿ ಸಂಘಟನೆಯೊಂದನ್ನು ಕಟ್ಟಲು ಪ್ರೇರೆಪಿಸಿದೆ ಎನ್ನುವ ಹಳೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಿ ಕಾಲೇಜಿನ ಚಟುವಟಿಕೆಗಳಿಗೆ ಸಹಕಾರಿಯಾಗುವ ಮತ್ತು ವಿದ್ಯಾರ್ಥಿಗಳಿಗೊಂದು ಮಾದರಿಯಾಗುವ ನಿಟ್ಟಿನಲ್ಲಿ ಮುನ್ನಡೆಯುವ ನಿರ್ಣಯ ಕೈಗೊಂಡರು. ಕುಂದಾಪ್ರ ಡಾಟ್ ಕಾಂ ಸುದ್ದಿ ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ರಚನೆ, ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿ ನೊಂದಣಿಯನ್ನು ಆರಂಭಿಸಲಾಯಿತು. ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಶೀಘ್ರವೇ ಸಂಘವನ್ನು ಅಸ್ತಿತ್ವಕ್ಕೆ ತರುವ ನಿರ್ಣಯ ಕೈಗೊಳ್ಳಲಾಯಿತು.…

Read More