ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಯಕರಿಗೆಲ್ಲಾ ನಾಯಕತ್ವದ ಗುಣ ಇರಬೇಕೆಂದಿಲ್ಲ. ಆದರೆ ನಾಯಕತ್ವದ ಗುಣ ಹೊಂದಿದವರು ಖಂಡಿತ ನಾಯಕರಾಗುತ್ತಾರೆ. ಸಮಯ ಪ್ರಜ್ಞೆ ಹಾಗೂ ತಾಳ್ಮೆ ನಾಯಕತ್ವದ ಪ್ರಮುಖ ಅಂಶಗಳು. ಯಾವುದೇ ಜಾತಿ ಧರ್ಮವನ್ನಾಧರಿಸಿ ನಾಯಕತ್ವ ಗುಣ ಬೆಳೆಯುವುದಿಲ್ಲ. ಬದಲಾಗಿ ಅದು ನಮ್ಮ ಮನಸ್ಸಿನ ಮೂಲಕ ಬೆಳೆಯುತ್ತದೆ ಎಂದು ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ, ಕುಂದಾಪುರ ಪೊಲೀಸ್ ಉಪ ವಿಭಾಗದ ಉಪ ಅಧೀಕ್ಷಕ ಎಂ. ಮಂಜುನಾಥ ಶೆಟ್ಟಿ ಹೇಳಿದರು. ಅವರು ಕಾಳಾವರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಕಾಳಾವರ ಇದರ ವತಿಯಿಂದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯುವ ಮುಂದಾಳುಗಳಿಗಾಗಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಮೋಹನಚಂದ್ರ ಕಾಳಾವರ್ಕರ್ ಸಂಸ್ಥೆಯ ಧ್ಯೇಯೋದ್ಧೇಶ ಮತ್ತು ನಡೆದು ಬಂದ ದಾರಿಯನ್ನು ಸವಿಸ್ತಾರವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಕಾಳಾವರ ಗ್ರಾಮ…
Author: ನ್ಯೂಸ್ ಬ್ಯೂರೋ
ಕುಂದಾಪುರ : ಸರಕಾರಗಳು ಜನರ ಪ್ರಗತಿಯನ್ನು ಗುರಿಯಾಗಿರಿಸಿಕೊಂಡು ಯೋಜನೆಗಳನ್ನು ರೂಪಿಸುತ್ತವೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಅವುಗಳ ಅನುಷ್ಠಾನ ಹಂತದಲ್ಲಿ ಜನರು ಕೈಜೋಡಿಸಿದರೆ ಈ ಯೋಜನೆಗಳಿಗೆ ಬಲ ಬರುತ್ತದೆ. ಈ ಮಾತಿಗೆ ಮರವಂತೆಯ ಜನರ ಉಪಕ್ರಮ ಒಂದು ಅತ್ಯುತ್ತಮ ನಿದರ್ಶನ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ನಡೆದ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಧ್ಯಕ್ಷತೆ ವಹಿಸಿ, ನೂತನ ಅಮೃತ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಮರವಂತೆ ಗ್ರಾಮ ಪಂಚಾಯತ್ ತನ್ನ ವಿಶಿಷ್ಟ ಸಾಧನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇದೀಗ ಇಲ್ಲಿನ ಜನರು ಸರಕಾರಿ ಶಾಲೆಗೆ ಶಾಶ್ವತ ಕೊಡುಗೆಗಳನ್ನು ನೀಡುವ ಮೂಲಕ ಶಾಲೆಯ ಅಮೃತ ಮಹೋತ್ಸವವನ್ನು ಅನ್ವರ್ಥಗೊಳಿಸಿದ್ದಾರೆ. ಜನರ ಕೊಡುಗೆಗೆ ಪ್ರತಿಯಾಗಿ ಸರಕಾರವೂ ಸ್ಪಂದಿಸಲಿದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿ, ಕೆನಡಾದಲ್ಲಿ ಜೈವಿಕ ತಂತ್ರಜ್ಞಾನ ವಿಜ್ಞಾನಿಯಾಗಿರುವ ಶಾಲೆಯ ಹಿಂದಿನ ವಿದ್ಯಾರ್ಥಿ ಡಾ. ಎಂ. ಶ್ರೀನಿವಾಸ ಮಧ್ಯಸ್ಥ ಅಮೃತ ಮಹೋತ್ಸವವನ್ನು ಉದ್ಘಾಟಿಸಿದರು. ತಮ್ಮ ಬಾಲ್ಯದ ಬದುಕು, ಶಾಲೆಯಲ್ಲಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ರಾಮ ನವಮಿಯ ಪ್ರಯುಕ್ತ ನಡೆದ ಹಗಲೋತ್ಸ, ಬೆಳ್ಳಿ ಪಲ್ಲಕ್ಕಿ ಉತ್ಸವ, ರಾತ್ರಿ ಬೆಳ್ಳಿಯ ಪುಷ್ಪ ರಥ ಉತ್ಸವ ಜರಗಿತು. ನಂತರ ದೇವಳದಲ್ಲಿ ಅಷ್ಟಾವಧಾನ, ವಿಶೇಷ ವಸಂತ ಪೂಜೆ ನಡೆಯಿತು ಹಾಗೂ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರು, ಸಮಾಜ ಭಾಂದವರು ಉಪಸ್ಥಿತರಿದ್ದರು. ವರದಿ: ರಮೇಶ್ ಭಟ್
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಸುರೇಶ್ ಗೋಪಿ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 25ವರ್ಷಗಳಿಂದ ಮಳಯಾಳಂ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ಸುರೇಶ್ ಗೋಪಿ, ಪೊಲೀಸ್ ಪಾತ್ರಗಳಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ಮಿಂಚುತ್ತಾ ಬಂದವರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸುತ್ತಾ ಬಂದಿದ್ದ ಅವರು ಇತ್ತಿಚಿಗಷ್ಟೇ ಕೇರಳದಲ್ಲಿ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಸುರೇಶ್ ಗೋಪಿ ಕೊಲ್ಲೂರಿಗೆ ಭೇಟಿ ನೀಡಿದ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ ಬರಮಾಡಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳ ಮದುವೆಗೆ ಲವಲವಿಕೆಯಿಂದ ತಿರುಗಾಡುತ್ತಿದ್ದ ತಂದೆಯ ಜೀವ ಸಂಜೆಯ ವೇಳೆಗೆ ದುರಂತ ಅಂತ್ಯ ಕಂಡಿದೆ. ಕೊಲ್ಲೂರಿಗೆ ಸಮೀಪದ ಮಹಾಸತಿ ಕಟ್ಟೆಗೆ ದೀಪ ಹಚ್ಚಿ ಹಿಂತಿರುತ್ತಿದ್ದ ಕೆ. ಭಾಸ್ಕರ ಗಾಣಿಗ (54) ಅವರ ಬೈಕಿಗೆ ಕಾಡುಕೋಣ ಢಿಕ್ಕಿ ಹೊಡೆದು ತೀವ್ರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೊಲ್ಲೂರು ಹೊರವಲಯದಲ್ಲಿರುವ ಶ್ರೀ ಮಹಾಸತಿ ಕಟ್ಟೆಗೆ ಸಾಯಂಕಾಲ ಎಂದಿನಂತೆ ದೀಪಹಚ್ಚಿ ತಮ್ಮ ಬೈಕಿನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿ ಎದುರಾದ ಕಾಡುಕೋಣ ಇವರ ಬೈಕಿಗೆ ಢಿಕ್ಕಿಹೊಡೆದು ಕಾಡಿನಲ್ಲಿ ಮರೆಯಾಗಿತ್ತು. ಬೈಕಿನೊಂದಿಗೆ ನೆಲಕ್ಕುರುಳಿ ತೀವ್ರ ಗಾಯಗೊಂಡ ಇವರನ್ನು ರಾತ್ರಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಎ.27ರ ಮಗಳ ಮದುವೆಗೆ ತಯಾರಿಯಲ್ಲಿದ್ದ ಕುಟುಂಬವನ್ನು ಇವರ ಅನಿರೀಕ್ಷಿತ ಸಾವು ಕಂಗೆಡಿಸಿದೆ. ಮೃತರು ಸಹೋದರ, ತಾಪಂ ಮಾಜಿ ಸದಸ್ಯ ಕೆ. ರಮೇಶ್ ಗಾಣಿಗ ಸೇರಿದಂತೆ ಪತ್ನಿ, ಪುತ್ರ, ಹಾಗೂ…
ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಗರ ಪ್ರದೇಶಗಳಲ್ಲಿ ಭಾಷೆ, ಸಂಸ್ಕೃತಿಯ ಉಳಿವು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಇದನ್ನು ನಿರೀಕ್ಷಿಸಬಹುದು. ಯುವಕರ ಸಂಘಟನೆಗಳು ವಾರ್ಷಿಕೋತ್ಸವಕ್ಕಷ್ಟೇ ಸೀಮಿತವಾಗಿರದೇ ತಮ್ಮೂರಿನ ಅಭಿವೃದ್ಧಿಯ ಜತೆಗೆ ಸಂಸ್ಕೃತಿ-ಸಂಪ್ರದಾಯಗಳ ಉಳಿವಿಗೂ ಪಣತೊಡಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಿದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಇಪ್ಪತ್ತು ಸಾವಿರಕ್ಕೂ ಅಧಿಕ ಇತಿಹಾಸವಿರುವ ಸುಂದರ ದೇಶ ನಮ್ಮದು. ಎಲ್ಲಾ ವೈರುಧ್ಯಗಳ ನಡುವೆ ನಮ್ಮ ಹಿರಿಕರು ದೇಶವನ್ನು ಸದೃಡವಾಗಿ ಕಟ್ಟಿ ಹೋಗಿದ್ದಾರೆ. ಆದರೆ ನಾವು ಸ್ವಾತಂತ್ರ್ಯವನ್ನು ಕಂಡು ಇಷ್ಟು ವರ್ಷಗಳಾದರೂ ಜನಾಂಗ, ವಿದ್ಯೆ, ಐಶ್ವರ್ಯ ಮುಂತಾದವುಗಳಲ್ಲಿ ಅಂತರವನ್ನು ಕಾಣುತ್ತಿದ್ದೇವೆ. ನಮ್ಮನ್ನಾಳುವವರಿಂದಲೂ ಈ ಅಂತರವನ್ನು ದೂರಮಾಡಲು ಸಾಧ್ಯವಾಗಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಕೊಡೇರಿ ಕಡಲತೀರದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ದೇಹದ ಭಾಗವೊಂದು ಪತ್ತೆಯಾಗಿದ್ದು ಗುರುತು ಪತ್ತೆಗಾಗಿ ಬೈಂದೂರು ಶವಾಗಾರದಲ್ಲಿರಿಸಲಾಗಿದೆ. ಕೊಡೇರಿಯ ಸಮುದ್ರ ತೀರದಲ್ಲಿ ವ್ಯಕ್ತಿಯ ದೇಹದ ಸೊಂಟದ ಕೆಳಗಿನ ೨ ಫೀಟ್ ಉದ್ದದ ಭಾಗವೊಂದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸರು ಪರಿಶೀಲನೆ ನಡೆಸಿ ಗಂಗೊಳ್ಳಿ ಎಂಎಚ್‌ಐ ಹೆಲ್ಪ್ ಲೈನ್ ಸ್ವಯಂಸೇವಕರಾದ ಇಬ್ರಾಹಿಂ ಹಾಗೂ ಆದಿಲ್ ಅವರ ನೆರವಿನಿಂದ ದೇಹದ ಭಾಗವನ್ನು ಬೈಂದೂರು ಶವಾಗಾರಕ್ಕೆ ರವಾನಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ ಕ್ರೀಡೋತ್ಸವ-2016 ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಡಾ ಮನೋಭಾವ ಹೊಂದಿರುವ ವ್ಯಕ್ತಿ ಬದುಕಿನಲ್ಲಿ ಸುಲಭವಾಗಿ ಸೋಲದೇ ಗೆಲುವಿವನ್ನೇ ಅಪೇಕ್ಷಿಸುವರು. ಸೋತಾಗ ಧೃತಿಗೆಡದೇ, ಗೆದ್ದಾಗ ಹಿಗ್ಗದೇ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯುವ ಜಾಗೃತಾ ಸ್ಥಿತಿ ಕ್ರೀಡಾಪಟುವಿನಲ್ಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜರುಗಿದ ಬಂಟರ ಕ್ರೀಡೋತ್ಸವ-2016 ಚಾಲನೆ ನೀಡಿ ಮಾತನಾಡಿದರು. ಬಂಟ ಸಮುದಾಯ ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಬಾಳಿಬದುಕಿದ್ದರೂ ಕಾಲಾಂತರದಲ್ಲಿ ವಿವಿಧ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದೆ. ಆದಾಗ್ಯೂ ಕೃಷಿ ಸಂಸ್ಕೃತಿ ಹಾಗೂ ಹೋರಾಟ ಮನೋಭಾವವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ವಿಶಾಲವಾದ ಕ್ರೀಡಾ ಮನೋಭಾವ, ಮನೋಧರ್ಮ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು, ನಮ್ಮ ಪೂರ್ವಜರು ಹಾಕಿಕೊಟ್ಟ ಮಾರ್ಗದಲ್ಲಿ ಯುವ ಸಮುದಾಯ ಜಾಗೃತಿಯಿಂದ ಹೆಜ್ಜೆಯಿಡಬೇಕಿದೆ ಎಂದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೃತ ಮಹೋತ್ಸವ ಆಚರಿಸುತ್ತಿರುವ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ತಮ್ಮ ತಂದೆ ಎಸ್. ರಾಮ ಪೂಜಾರಿ ನೆನಪಿಗೆ ನಿರ್ಮಿಸಿಕೊಟ್ಟ ಧ್ವಜಸ್ತಂಭವನ್ನು ಉದ್ಘಾಟಿಸಿದರು. ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ, ಕಾರ್ಯದರ್ಶಿ ಎಂ. ಅಣ್ಣಪ್ಪ ಬಿಲ್ಲವ, ಕೋಶಾಧಿಕಾರಿ ಅಣ್ಣಪ್ಪ ಖಾರ್ವಿ, ಆರ್ಥಿಕ ಸಮಿತಿ ಅಧ್ಯಕ್ಷ ಎಂ. ನರಸಿಂಹ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ, ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ, ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಇತರರು ಇದ್ದರು.
ಯಕ್ಷಗಾನದ ಮೂಲಕ ಆಶಕ್ತರ ವೈದ್ಯಕೀಯ ಚಿಕಿತ್ಸೆಗೆ 2.20ಲಕ್ಷ ಸಹಾಯಧನ ವಿತರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಆಶಕ್ತರು ಹಾಗೂ ಆಸಹಾಯಕರ ವೈದ್ಯಕೀಯ ಚಿಕಿತ್ಸೆಗೆ ಯಕ್ಷಗಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಹಾಯಧನವನ್ನು ಹಸ್ತಾಂತರಿಸುವ ಮಾನವೀಯ ಕಾರ್ಯವನ್ನು ತ್ರಾಸಿ-ಹೊಸಪೇಟೆಯ ಮಹಿಷಮರ್ಧಿನಿ ಫ್ರೆಂಡ್ಸ್ ಮಾಡಿದೆ. ಆರ್ಥಿಕ ಅಸಹಾಯಕತೆಯಿಂದ ಬಳಲುತ್ತಿರುವ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವ ನಿರ್ಧಾರ ಮಾಡಿದ ಮಹಿಷಮರ್ದಿನಿ ಫ್ರೆಂಡ್ಸ್ ಜಾತಿ,ಮತ ಧರ್ಮ ಹೊರತು ಪಡಿಸಿ ಆಯ್ದ ೮ ಮಂದಿಗೆ ವೈದ್ಯಕೀಯ ಸಹಾಯಧನ ನೀಡಿತು. ಏ.13ರಂದು ತ್ರಾಸಿಯಲ್ಲಿ ನಡೆದ ಸಾಲಿಗ್ರಾಮ ಮೇಳದ ರಂಗವೇದಿಕೆಯಲ್ಲಿ ಸಹಾಯಧನವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದ ತಾ.ಪಂ.ಸದಸ್ಯ ರಾಜು ದೇವಾಡಿಗ ಅವರು, ಮೊಗವೀರ ಯುವ ಸಂಘಟನೆ ಇಂದು ಡಾ.ಜಿ.ಶಂಕರ್ ನೇತೃತ್ವದಲ್ಲಿ ರಕ್ತದಾನದ ಮೂಲಕ ಜಿಲ್ಲೆಯಲ್ಲಿ ರಕ್ತದಾನದ ಮಹತ್ವದ ಅರಿವು ಮೂಡಿಸುವ ಕೆಲಸವಾಗಿದೆ. ಮಹಿಷಮರ್ದಿನಿ ಫ್ರೆಂಡ್ಸ್ ಇವತ್ತು ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಧರ್ಮದ ಬಾಂಧವರಿಗೂ ಸಹಾಯಧನ ನೀಡುವ ಮೂಲಕ ಮಾನವೀಯ ಕಾರ್ಯ…
