Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಮಹಿಳೆಯರೂ ಪುರುಷರಿಗೆ ಸರಿಸಾಟಿಯಾಗಿ ನಿಂತಿದ್ದಾರೆ. ಸಮಾಜದ ಯಶಸ್ವೀ ಪುರುಷರ ಹಿಂದೆ ಮಹಿಳಾ ಶ್ರಮವಿರುತ್ತದೆ. ಮಹಿಳೆಯರಿಗೆ ಪೂಜ್ಯ ಸ್ಥಾನವಿದ್ದರೂ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ಕಡೆಗಣಿಸುವುದು ತರವಲ್ಲ ಎಂದು ಕುಂದಾಪುರ ಫ್ಯಾಶನ್ ಕೋರ್ಟ್ ನಿರ್ದೇಶಕಿ ಶಿಲ್ಪಾ ಕೆ. ಮಧ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕ್ ಒಕ್ಕೂಟ, ಕುಂದಾಪುರ ರೋಟರಿ ಮಿಡ್ ಟೌನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಂದಾಪುರ ಮೂಕಾಂಬಿಕಾ ಮಹಿಳಾ ಮಂಡಳಗಳ ಒಕ್ಕೂಟ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅವಕಾಶ ಸಿಗೋದಿಲ್ಲ. ಜೀವನದಲ್ಲಿ ಒಮ್ಮೊಮ್ಮೆ ಒಳ್ಳೆಯ ಅವಕಾಶ ಸಿಗುತ್ತಿದ್ದು, ಅದನ್ನು ಬಳಸಿಕೊಂಡು ಎತ್ತರಕ್ಕೆ ಏರಬೇಕು. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರದೆ ಸಮಾಜದ ಎಲ್ಲಾ ಸ್ಥರದ ಮಹಿಳೆಯರು ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅನುದಿನವೂ ಮಹಿಳೆಯರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರದ್ಧಾಭಕ್ತಿಯ ಕ್ಷೇತ್ರ ಕೊಲ್ಲೂರು ದೇವಳದಲ್ಲಿ ನಡೆದಿರುವ ಕಳ್ಳತನದಿಂದಾಗಿ ಇತರೇ ರಾಜ್ಯದವರು ಕರ್ನಾಟಕವನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದು, ರಾಜ್ಯದ ಘನತೆ ಕುಗ್ಗವಂತಾಗಿದೆ. ಇಡಿ ಪ್ರಕರಣದ ಹಿಂದೆ ಕಾಣದ ಕೈ ಕೆಲಸಮಾಡಿದ್ದು, ಇದೂವರೆಗೆ ರಾಜ್ಯ ಸರಕಾರ ಘಟನೆ ಬಗ್ಗೆ ತುಟಿ ಬಿಚ್ಚದಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣ ನ್ಯಾಯಸಮ್ಮತ ತನಿಖೆ ಮತ್ತು ಸತ್ಯ ಹೊರತರುವ ನಿಟ್ಟಿನಲ್ಲಿ ಸಿಬಿಐಗೆ ವಹಿಸಬೇಕು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಆಗ್ರಹಿದ್ದಾರೆ. ಕುಂದಾಪುರ ತಾಪಂ. ಮಾಜಿ ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ ಮನೆಯಲ್ಲಿ ನಾಡಾ ಗ್ರಾಮ ಸಾರ್ವಜನಿಕ ಸನ್ಮಾನ ಕಾರ‍್ಯಕ್ರಮದಲ್ಲಿ ಜಿಪಂ.ತಾಪಂ ವಿಜೇತ ಅಭ್ಯರ್ಥಿಗಳ ಸನ್ಮಾನಿಸಿ ಅವರು ಮಾತನಾಡಿದರು. ಕೊಲ್ಲೂರು ಮೂಕಾಂಬಿಕೆ ಭಕ್ತರು ಭಯ, ಭಕ್ತಿಯಿಂದ ಅಭರಣ ಅರ್ಪಿಸುತ್ತಾರೆ. ಆದರೆ ದೇವಳದ ಸಿಬ್ಬಂದಿ ಭಯವಿಲ್ಲದೆ ಹಣ ಚಿನ್ನ ದೇವಸ್ಥಾನದಿಂದ ಸಲೀಸಾಗಿ ಹೊರಗೊಯ್ಯುತ್ತಾರೆ. ಇಲ್ಲಿ ಎಲ್ಲರ ಬೇಜವಾಬ್ದಾರಿ ಇರುವುದು ಸ್ಪಷ್ಟ. ಸರಕಾರ ನ್ಯಾಯಸಮ್ಮತ ತನಿಖೆ ಮಾಡದಿದ್ದರೆ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದವರು…

Read More

ಕುಂದಾಪುರ: ಗಂಗೊಳ್ಳಿ ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಹಕ್ಲಾಡಿ ಬಟ್ಟೆಕುದ್ರುವಿನ ಶ್ರೀ ರಾಮ ಯುವಕ ಭಜನಾ ಮಂದಿರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಗುಲ್ವಾಡಿಯ ಶ್ರೀ ಶಿವಶಂಕರ ಭಜನಾ ಮಂಡಳಿಯು ದ್ವಿತೀಯ ಸ್ಥಾನವನ್ನು ಹಾಗೂ ಗುಲ್ವಾಡಿಯ ವೀರಾಂಜನೇಯ ಭಜನಾ ಮಂಡಳಿ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸಂಜೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿಯ ಉದ್ಯಮಿ ವಿಜಯ ಭಾಸ್ಕರ ಶೆಣೈ ವಹಿಸಿದ್ದರು. ಶ್ರೀ ಶಾರದೋತ್ಸವ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ಅನಿತಾ ಶೇಟ್, ರವಿಚಂದ್ರ ಬಟ್ಟೆಕುದ್ರು ಹಕ್ಲಾಡಿ ಹಾಗೂ ಜಯಕರ ಗುಲ್ವಾಡಿ, ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಜಿ. ಮೊದಲಾದವರು ಉಪಸ್ಥಿತರಿದ್ದರು. ಶಂಕರ ಜಿ. ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ ಮೇಲ್‌ಗಂಗೊಳ್ಳಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಪ್ಪುಂದ ಮಡಿಕಲ್ ಅರಮಕೋಡಿ ಶ್ರೀ ಈಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ಉಪ್ಪೊಂದೋತ್ಸವದ ಅಂಗವಾಗಿ ಮಡಿಕಲ್ ಕಡಲ ತೀರದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ಋತ್ವಿಜರಿಂದ ವೇದಘೋಷ ಸಹಿತಾ 108 ಆರತಿಯ ಗಂಗಾಪೂಜೆ ನೇರವೇರಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅರಮಕೋಡಿ ಈಶ್ವರ ಸೇವಾ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಐ. ನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕುಮಾರ ಬಿ.ಎಚ್.ಕೆ, ಉಪ್ಪುಂದ ಮಡಿಕಲ್ ರಾಣಿಬಲೆ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉದ್ಯಮಿ ರಾಮ ಕೆ., ಈಶ್ವರ ಸೇವಾ ಸಮಿತಿಯ ಅಧ್ಯಕ್ಷ ಮುರುಳೀಧರ್ ಉಪಸ್ಥಿತರಿದ್ದರು. ಗೋಪಾಲ ಸ್ವಾಗತಿಸಿ, ಪ್ರಸನ್ನ ಕುಮಾರ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಬಾಗಲಕೋಟೆ ತುಳಸಿಗೇರಿ ಕುವೆಂಪು ಶತಮಾನೋತ್ಸವ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಲ್ಲಕಂಬ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿ ಶಶಿಧರ ಪಡುಕೋಣೆ ಇಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕೆಲ ದಿನಗಳ ಹಿಂದ ಅಸೌಖ್ಯರಾಗಿದ್ದ ಶಶಿಧರ್ ಅವರು ಧಾರಾವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುಣಮುಖರಾಗಿದ್ದ ಅವರು ಮತ್ತೆ ಇಂದು ಅಸೌಖ್ಯರಾಗಿದ್ದರಿಂದ ಉಡುಪಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಕುಂದಾಪ್ರ ಡಾಟ್ ಕಾಂ ಸುದ್ದಿ. ಧರ್ಮಸ್ಥಳ ಮೇಳದ ಎರಡನೇ ಸ್ತ್ರೀ ವೇಷಧಾರಿಯಾಗಿದ್ದ ಶಶಿಧರ್ ಲಾಲಿತ್ಯಪೂರ್ಣ ಹೆಜ್ಜೆಗಾರಿಕೆ ಸ್ವರಬಾರ ಅಭಿನಯ ಛಾತುರ್ಯದಿಂದ ಬ್ರಮರಕುಂತಳೆ ತಾರಾವಳಿ ಪದ್ಮಗಂದಿ ಮುಂತಾದ ಪಾತ್ರಗಳಿಗೆ ಅದ್ಭುತ ನ್ಯಾಯ ಒದಗಿಸಿದ ಕಲಾವಿದ. ಈ ಹಿಂದೆ ಪೇರ್ಡೂರು ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಶಶಿಧರ್ ಅವರ ಅಗಲುವಿಕೆ ಯಕ್ಷಾಭಿಮಾನಿಗಳನ್ನು ದಿಗ್ಬ್ರಾಂತರನ್ನಾಗಿಸಿದೆ. ಕೆಲವು ದಿನಗಳ ಹಿಂದಷ್ಟೆ ಕಣ್ಣಿಮನೆ ಅವರನ್ನು ಕಳೆದುಕೊಂಡಿದ್ದ ಯಕ್ಷಪ್ರಿಯರು ಈಗ ಮತ್ತೊಬ್ಬ ಉದಯೋನ್ಮಖ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯ ರಿ. ಬೈಂದೂರು ಇದರ ವಾರ್ಷಿಕ ರಂಗ ಸಂಭ್ರಮ ಹಾಗೂ 39ನೇ ವಾರ್ಷಿಕೋತ್ಸವ ಮಾರ್ಚ್11ರಿಂದ 13ರ ವರೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಮಾರ್ಚ್11ರ ಶುಕ್ರವಾರ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಮೂರು ದಿನಗಳ ಕಾಲ ನಾಟಕ ಪ್ರದರ್ಶನ ರಂಗ ಕಲಾವಿದರಿಗೆ ಸನ್ಮಾನ ನಡೆಯಲಿದೆ. ಮಾ.11ರ ಸಭಾಕಾರ್ಯಕ್ರಮದಲ್ಲಿ ಹಿರಿಯ ರಂಗಕಲಾವಿದ ಭವಾನಿಶಂಕರ್ ನಾಯಕ್ ಅವರಿಗೆ ಸನ್ಮಾನ ಹಾಗೂ ಲಾವಣ್ಯ ಪ್ರಸ್ತುತಿಯ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ನಾಟಕ ಮುದ್ದಣ್ಣನ ಪ್ರಮೋಶನ್ ಪ್ರಸಂಗದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಭಿನಂದನಲಾಗುವುದು. ಬಳಿಕ ರಂಗಸಂಗಾತಿ ಮಂಗಳೂರು ಪ್ರಸ್ತುತಿಯ ಮೋಹನಚಂದ್ರ ನಿರ್ದೇನದ ನೆಮ್ಮದಿ ಅಪಾರ್ಟ್‌ಮೆಂಟ್ ನಾಟಕ ಪ್ರದರ್ಶನಗೊಳ್ಳಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಮಾಚ್12ರಂದು ಹಿರಿಯ ರಂಗ ಕಲಾವಿದ ವಿ.ಹೆಚ್. ನಾಯಕ್ ಸನ್ಮಾನಗೊಳ್ಳಲಿದ್ದು ಬಳಿಕ ಲಾವಣ್ಯ ಬೈಂದೂರು ಪ್ರಸ್ತುತಿಯ ಗಿರೀಶ್ ಬೈಂದೂರು ನಿರ್ದೇಶನದ ಗಾಂಧಿಗೆ ಸಾವಿಲ್ಲ ನಾಟಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಏ.6ರಂದು ಕುಂದಾಪುರ ಹಾಗೂ ಗಂಗೊಳ್ಳಿಗೆ ಆಗಮಿಸಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ. ಕುಂದಾಪುರದಲ್ಲಿ ಬೆಳಿಗ್ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮಾವೇಶವನ್ನು ಉದ್ಘಾಟಿಸಿದ ಬಳಿಕ, ಮರವಂತೆಯ ಎರಡನೇ ಹಂತದ ಬಂದರು ಕಾಮಗಾರಿ ವೀಕ್ಷಣೆ ನಡೆಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಂಗೊಳ್ಳಿಯ 102ಕೋಟಿ ಹಾಗೂ ಕೊಡೇರಿಯ 33ಕೋಟಿ ಅನುದಾನದ ಬಂದರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಉಡುಪಿ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

Read More

ಪ್ರಕರಣದ ಸಮಗ್ರ ತನಿಕೆಗೆ ಆದೇಶ, ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೊಲ್ಲೂರು ಚಿನ್ನಾಭರಣ ಕಳವು ಪ್ರರಣ ಬೆಳಕಿಗೆ ಬಂದ ಬೆನ್ನಲ್ಲೇ ಕಳೆದ ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಲೆಕ್ಕಪತ್ರಗಳ ಪರಿಶೋಧನೆ ನಡೆಯದಿರುವುದು ಸಂಶಯಕ್ಕೆ ಎಡೆಮಾಡಿಕೊಡುತ್ತಿದ್ದು, ಜನರ ಅಪೇಕ್ಷೆಯಂತೆ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐ ತನಿಕೆಗೆ ಆದೇಶಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದಾಗಿ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬುಧವಾರ ಇಲ್ಲಿನ ಶಾಸಕರ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕರಣದ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿದ್ದೇನೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕೊಟ್ಯಂತರ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ದೇವಳದ ಡಿ ದರ್ಜೆ ನೌಕರನೋರ್ವನ ಕೈಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ತಿಜೋರಿಯ ಬೀಗದ ಕೈ ನೀಡಿರುವುದೇ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದರು. ದೇವಳದಿಂದ ಕಳವಾದ ಹಣ ಮತ್ತು ಚಿನ್ನಾಭರಣಗಳ ಸಮಗ್ರ ತನಿಕೆಯಾಗಬೇಕು. ಈ ಬಗ್ಗೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಅವರೊಂದಿಗೂ ಚರ್ಚಿಸಿದ್ದೇನೆ. ಪ್ರಕರಣದಲ್ಲಿ ಯಾರೇ ಭಾಗಿಯಾಗಿರಿ ಅವರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾ.3ರಂದು ಹೃದಯಾಘಾತದಿಂದ ನಿಧನ ಹೊಂದಿದ ಸಾಮಾಜಿಕ ಕಾರ್ಯಕರ್ತ, ವಿಜಯಾ ಬ್ಯಾಂಕ್‌ನ ನಿವೃತ್ತ ಚೀಫ್ ಮ್ಯಾನೇಜರ್ ದಿ. ಸಚ್ಚಿದಾನಂದ ಶೆಟ್ಟಿ ಅವರಿಗೆ  ಸಂತಾಪ ಸೂಚಕ ಸಭೆ ಜರುಗಿತು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಸದಸ್ಯರು, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಸದಸ್ಯರು, ಕುಂದಾಪುರ ಬಂಟರ ಸಂಘದ ಪದಾಧಿಕಾರಿಗಳು, ರೋಟರಿ ಕ್ಲಬ್ ಸದಸ್ಯರು ಸಂತಾಪಸೂಚಕ ಸಭೆಯಲ್ಲಿ ಮೃತರ ಕುಟುಂಬದ ಸದಸ್ಯರು ಬಂಧು ಮಿತ್ರರು ಭಾಗವಹಿಸಿದ್ದರು. ಕುಂದಾಪುರ ರೈಲ್ವೆ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿಯಾಗಿ, ಕುಂದಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಕುಂದಾಪುರ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷರಾಗಿ, ಹುಬ್ಬಳ್ಳಿ ಝೋನ್ ರೈಲ್ವೆ ಬೋರ್ಡ್ ಸದಸ್ಯರಾಗಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಚ್ಚಿದಾನಂದ ಶೆಟ್ಟಿ ಅವರು ಅಗಲುವಿಕೆ ತುಂಬಲಾರದ ನಷ್ಟವೆಂದು ಗಣ್ಯರು ಅಭಿಪ್ರಾಯ ಪಟ್ಟರು. Read this: ಸಾಮಾಜಿಕ ಕಾರ್ಯಕರ್ತ ಸಚ್ಚಿದಾನಂದ ಶೆಟ್ಟಿ ನಿಧನ – http://kundapraa.com/?p=11939

Read More

ಕುಂದಾಪುರ: ಸಂಘಟನೆಗಳು ಸಮಾಜಮುಖಿಯಾಗಿ ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಸಮಾಜ ಅಂಥಹ ಸಂಘಟನೆಗಳನ್ನು ಗುರುತಿಸುತ್ತದೆ. ಧಾರ್ಮಿಕ ಸ್ಥಳಗಳು ಸೌಹಾರ್ದತೆಯನ್ನು ಉಂಟು ಮಾಡುವ ಕೆಲಸ ಮಾಡಬೇಕು. ದೈವಸ್ಥಾನಗಳ ಬೆಳವಣಿಗೆಯ ಜೊತೆಯ ಸ್ಥಳೀಯವಾಗಿ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯೂ ಆಗಬೇಕು ಎಂದು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ವಂಡ್ಸೆಯ ಶ್ರೀ ಯಕ್ಷೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಮತ್ತು ಶ್ರೀ ಯಕ್ಷೀ ಯುವ ಸಂಘಟನೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ-ಆತ್ರಾಡಿ-ಬಗ್ವಾಡಿ ಭಾಗದ ಬಹುದಿನ ಸಂಪರ್ಕ ರಸ್ತೆಯ ಕನಸು ಈಡೇರಿದೆ. ಶೀಘ್ರವಾಗಿ ಈ ರಸ್ತೆಯಲ್ಲಿ ಬಸ್ ಸಂಪರ್ಕ ಕಲ್ಪಿಸಲಾಗುವುದು. ವಂಡ್ಸೆ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ಶ್ರೀ ಯಕ್ಷೀಅನ್ನಪೂರ್ಣೇಶ್ವರಿ ಯುವ ಸಂಘಟನೆಯ ಅಧ್ಯಕ್ಷ ನಾಗರಾಜ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವೇ.ಮೂ.ಶಿವಾನಂದ ಆಚಾರ್ಯ ಬಸ್ರೂರು ಆಶೀರ್ವಚನ ನೀಡಿದರು. ತಾ.ಪಂ.ಸದಸ್ಯ ಉದಯ ಪೂಜಾರಿ ಚಿತ್ತೂರು, ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ವಂಡಬಳ್ಳಿ ಜಯರಾಮ ಶೆಟ್ಟಿ, ವ್ಯವಸ್ಥಾಪನಾ…

Read More