ಸಿಬಿಎಸ್‌ಇ ಪಠ್ಯಕ್ರಮದ ಗುರುಕುಲದಲ್ಲಿ ಸತತ 6ನೇ ಬಾರಿ ಶತಕ ಸಾಧನೆ ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪ್ರತಿಷ್ಠಿತ ಕೋಟೆಶ್ವರ ವಕ್ವಾಡಿಯಲ್ಲಿನ ಗುರುಕುಲ ಪಬ್ಲಿಕ್ ಶಾಲೆಯ 10ನೇ ತರಗತಿ ಸಿ.ಬಿ.ಎಸ್.ಇ ಪಠ್ಯಕ್ರಮದ ವಿದ್ಯಾರ್ಥಿಗಳು ಸತತ 6ನೇ ಬಾರಿಗೆ ಶೇ.100 ಫಲಿತಾಂಶವನ್ನು ದಾಖಲಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 64ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು 13 ವಿದ್ಯಾರ್ಥಿಗಳು 10 ಸಿ.ಜಿ.ಪಿ.ಎ (ಅತ್ಯುನ್ನತ ಶ್ರೇಣಿ), 17 ವಿದ್ಯಾರ್ಥಿಗಳು 9 ಸಿ.ಜಿ.ಪಿ.ಎ ಮೇಲ್ಪಟ್ಟು ವಿಶಿಷ್ಠ ಶ್ರೇಣಿಯಲ್ಲಿ, ಹಾಗೂ ಹಾಜರಾದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ದಶಮಾನೋತ್ಸವದ ಹೊಸ್ತಿಲಲ್ಲಿರುವ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಗುರುಕುಲ ಶಾಲೆಯಲ್ಲಿ ಈ ಭಾರಿ ದಾಖಲೆಯ ಫಲಿತಾಂಶವನ್ನು ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರಿಗೆ, ಸಂಸ್ಥೆಯ ಸಂಸ್ಥಾಪಕರಾದ ಬಿ. ಅಪ್ಪಣ್ಣ ಹೆಗ್ಡೆ, ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳಾದ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ ಎಸ್. ಶೆಟ್ಟಿಯವರು ಅಭಿನಂದಿಸಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಅವರು ನೋಡನೋಡುತ್ತಿದ್ದಂತೆ ಚಕಚಕನೆ ಕಟ್ಟಡವನ್ನೇರಿ ನೆರೆದಿದ್ದವರಲ್ಲಿ ಬೆರಗು ಮೂಡಿಸಿದರು. ಆರು ಮಹಡಿಯ ಕಟ್ಟಡವನ್ನು ಆರು ನಿಮಿಷಗಳಲ್ಲಿ ಸರಾಗವಾಗಿ ಏರಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಹೀಗೆ ಕುಂದಾಪುರದ ಶಾಸ್ತ್ರೀವೃತ್ತದ ಬಳಿ ಇರುವ ಜೆ.ಕೆ ಟವರ್ಸ್ ಏರಿ ತಮ್ಮ ಸಾಹಸ ಪ್ರದರ್ಶಿಸಿದವರು ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಮ ಮತ್ತವರ ಅಣ್ಣನ ಮಗ ಮಾಸ್ಟರ್ ಅಕ್ಷಯ್. ಕುಂದಾಪುರ ಟಿಟಿ ರಸ್ತೆಯ ಶ್ರೀ ವಿಘ್ನೇಶ್ವರ ಯುವಕ ಸಂಘ ರಜತ ಸಂಭ್ರಮಕ್ಕೆ ಆಗಮಿಸಿದ ಸಂದರ್ಭ ಸಾಹಸ ಕಾರ್ಯ ನಡೆಸಿದರು. ನೆಲ ಅಂತಸ್ತಿನಿಂದ ಏರಿದ ಜ್ಯೋತಿರಾಜ್ ಹಾಗೂ ಅವರ ಅಣ್ಣನ ಮಗ ನೋಡ ನೋಡುತ್ತಿದ್ದಂತೆ ಆರು ಮಹಡಿಗಳ ಜೆ.ಕೆ. ಟವರ್ಸ್ ಏರಿ, ಕೆಳಕ್ಕಿಳಿದರು. ಸಲೀಸಾಗಿ ಕಟ್ಟಡ ಏರಿದ ಕೋತಿರಾಮ ಅದೇ ವೇಗದಲ್ಲಿ ಕೆಳಗಿಳಿದು ಅಚ್ಚರಿ ಮೂಡಿಸಿದರು. ಸಾಹಸ ಕಾರ್ಯಕ್ಕೆ ಶಾಸ್ತ್ರೀ ವೃತ್ತದ ಸುತ್ತಮುತ್ತ ಅಪಾರ ಜನಸಂದಣಿ ನೆರೆದಿತ್ತು. ಕಟ್ಟಡದಿಂದ ಕೆಳಗಿಳಿಯುತ್ತಿದ್ದಂತೆ ಜನರು ಅಭಿನಂದನೆ ಮಹಾಪೂರ ಹರಿಸಿದರು. ಜ್ಯೋತಿರಾಜ್ ಅವರ ಸಾಹಸ ಕಾರ್ಯ ವೀಕ್ಷಿಸಲೆಂದು ಬಂದ…
ಕುಂದಾಪುರ: ಹೆಮ್ಮಾಡಿಯ ವಿವಿವಿ ಮಂಡಳಿಗೆ ಸೇರಿದ ಜಾಗವನ್ನು ಪರಭಾರೆ ಮಾಡಿ ಖಾಸಗಿವರಿಗೆ ಶಾಲೆ ನಡೆಸಲು ಅವಕಾಶ ಮಾಡಿಕೊಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಆರೋಪ ಮಾಡುವವರು ದಾಖಲೆ ಸಮೇತ ಸಾಬೀತು ಪಡಿಸಲಿ. ಅದನ್ನು ಬಿಟ್ಟು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ನನ್ನ ತೇಜೋವಧೆ ಮಾಡುತ್ತಿರುವುದಲ್ಲದೇ, ಹತ್ತಾರು ವರ್ಷಗಳ ಇತಿಹಾಸವಿರುವ ಶಾಲೆಯ ಹೆಸರು ಕೆಡಿಸಲು ಮುಂದಾಗಿರುವುದರಲ್ಲಿ ಅರ್ಥವಿಲ್ಲ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವಿವಿವಿ ಮಂಡಳಿಯ ಸೇರಿದ ಹೆಸ್ಕೂಲು, ಕಾಲೇಜು ಹಾಗೂ ಜಾಗ ಮಂಡಳಿಯ ಹೆಸರಿನಲ್ಲಿಯೇ ಇದ್ದು, ಇದರಲ್ಲಿ ಎಲ್ಲಿಯೂ ಅಕ್ರಮ ನಡೆದಿಲ್ಲ. ಹೈಸ್ಕೂಲು, ಕಾಲೇಜಿನ ಜೊತೆಗೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ವಿವಿವಿ ಮಂಡಳಿಯು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿರುವುದನ್ನು ಸಹಿಸದ ಮಂದಿ ತನ್ನ ತೇಜೋವಧೆ ಮಾಡಲು ನಿಂತಿರುವುದು ವಿಷಾದನೀಯ ಎಂದರು. ಹೆಮ್ಮಾಡಿಯ ಹೈಸ್ಕೂಲಿನಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನು ಸ್ವಂತ ಮಗನೇ ದಾರುಣವಾಗಿ ಕೊಂದು ಮಲಗಿಸಿದ ಘಟನೆ ತಾಲೂಕಿನ ಬಳ್ಕೂರಿನಲ್ಲಿ ನಡೆದಿದೆ. ಇಲ್ಲಿನ ಹಳೆಮನೆಹಿತ್ಲು ನಿವಾಸಿ ಸಾಧು ಪೂಜಾರ್ತಿ(68) ಕೊಲೆಯಾದ ವೃದ್ಧ ಮಹಿಳೆ. ಆಕೆಯ ಮಗ ರಾಮ ಪೂಜಾರಿ(41) ಕುಡಿದ ಅಮಲಿನಲ್ಲಿ ತಾಯಿಯನ್ನು ಕೊಲೆಗೈದ ಅಸಾಮಿ. ವಿಪರೀತ ಕುಡಿತದ ಚಟ ಹೊಂದಿದ್ದ ರಾಮ ಪೂಜಾರಿ ಪ್ರತಿನಿತ್ಯ ಕುಡಿದು ಬಂದು ಮನೆಯವರಲ್ಲಿ ಜಗಳ ತೆಗೆಯುತ್ತಿದ್ದ. ಸಾಧು ಪೂಜಾರ್ತಿ ಅವರ ಪತಿ ಅಣ್ಣಯ್ಯ ಪೂಜಾರಿ ಈ ಹಿಂದೆಯೇ ತೀರಿಕೊಂಡಿದ್ದರು. ಮಗ ರಾಮ ಪೂಜಾರಿಯ ತೊಂದರೆ ತಾಳಲಾದರೆ ಇನ್ನೊರ್ವ ಮಗ ಮದುವೆಯ ಬಳಿ ಬೇರೆಯೇ ವಾಸಿಸುತ್ತಿದ್ದರೇ, ಮಗಳು ಮದುವೆಯಾಗಿ ಬೇರೆಡೆ ಇದ್ದರು. ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ರಾಮ ಪೂಜಾರಿ ಪತ್ನಿ ಹಾಗೂ ಮಕ್ಕಳನ್ನು ತೊರೆದು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ. ಶುಕ್ರವಾರ ರಾತ್ರಿ ಮನೆಗೆ ಬಂದವನು ಎಂದಿನಂತೆ ತಾಯಿಯ ಬಳಿ ಜಗಳ ಶುರುವಿಟ್ಟುಕೊಂಡಿದ್ದು ಅದು ತಾರರಕ್ಕೇರಿ ಮನೆಯಲ್ಲಿದ್ದ ಕತ್ತಿಯಿಂದ ಆಕೆಯ ಕುತ್ತಿಗೆಯ ಭಾಗಕ್ಕ ಕಡೆದು…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಮೋದಿ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಸಂದರ್ಭದಲ್ಲಿ ಕೇಂದ್ರ ಸರಕಾರ ವಿವಿಧ ಹಂತದಲ್ಲಿ ಸಂಭ್ರಮವನ್ನು ಆಚರಿಸುತ್ತಿದ್ದರೇ, ಕುಂದಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಅಭಿಮಾನಿಯೊಬ್ಬರು ತನ್ನ ಆಟೋ ರಿಕ್ಷಾದಲ್ಲಿ ಮೂರು ದಿನಗಳ ಕಾಲ 5 ಕಿಲೋಮೀಟರ್ ವರೆಗೆ 1 ರೂಪಾಯಿ ಪ್ರಯಾಣ ದರ ನಿಗದಿ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾನೆ. ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ ವಿನಾಯಕ ಟಾಕೀಸ್ ಬಳಿಯ ಆಟೋ ನಿಲ್ದಾಣದಲ್ಲಿರುವ ರಿಕ್ಷಾ ಹಿಂಬದಿ ಬ್ಯಾನರ್ ಅಳವಡಿಸಿಕೊಂಡ ಅಂಕದಕಟ್ಟೆಯ ಸುರೇಶ್ ಪ್ರಭು, ಮೋದಿ ಸರಕಾರದ ಸಾಧನೆಯಿಂದ ಪ್ರೇರಿತಗೊಂಡು ಸರಕಾರಕ್ಕೆ ಎರಡು ವರ್ಷ ಪೂರೈಸಿದಾಗಲೂ ತಮ್ಮ ಆಟೋ ಹಿಂದೆ 1ರೂಪಾಯಿ ಪ್ರಯಾಣ ದರದ ಮಾಹಿತಿ ನೀಡಿ ಓಡುಸುತ್ತಿದ್ದರು. ಮೂರು ದಿನದ ಕೊನೆಯಲ್ಲಿ 150ಕ್ಕೂ ಹೆಚ್ಚು ಪ್ರಯಾಣಿಕರು 1 ರೂಪಾಯಿಯಲ್ಲಿ ಪ್ರಯಾಣಿಸಿ ಖುಷಿಪಟ್ಟರೇ, ಇಂತಹ ಅವಕಾಶ ಕಲ್ಪಿಸಿಕೊಟ್ಟ ಸುರೇಶ್ ಪ್ರಭು ತಮ್ಮ ಕೆಲಸದಿಂದ ತೃಪ್ತರಾಗಿದ್ದಾರೆ. /ಕುಂದಾಪ್ರ ಡಾಟ್ ಕಾಂ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಪ್ರಾಥಮಿಕ-ಪ್ರೌಢ ಶಿಕ್ಷಣವೆಲ್ಲ ನಡೆದದ್ದು ಕನ್ನಡ ಮಾಧ್ಯಮದಲ್ಲಿ. ಪಿಯುಸಿ ತನಕವೂ ಓದಿದ್ದು ಸರಕಾರಿ ಶಾಲೆಯಲ್ಲಿ. ಆದರೇನಂತೆ ಸಾಧಿಸುವವರಿಗೆ ಶಾಲೆ, ಮಾಧ್ಯಮ ಯಾವುದು ಮುಖ್ಯವಾಗುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ವಿ. ಪೂರ್ಣಚಂದ್ರ. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 580 ಅಂಕಗಳಿಸಿರುವುದಲ್ಲದೇ ನಾಲ್ಕು ವಿಷಯಗಳಲ್ಲಿ 100ಕ್ಕೆ 100 ಅಂಕಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸೊಸೈಟಿಯ ನೌಕರಾಗಿರುವ ಕೋಣಿಯ ಜಿ.ವಿ. ಕಾರಂತ್ ಹಾಗೂ ಕಂಬದಕೋಣೆ ಸ.ಪ.ಪೂ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಜಯಲಕ್ಷ್ಮೀ ಕಾರಂತ್ ಅವರ ದ್ವಿತೀಯ ಪುತ್ರ ಪೂರ್ಣಚಂದ್ರ. ಪ್ರಥಮ ಪುತ್ರ ಮೇಘ ಸಮೀರ ಮೈಸೂರು ನಟನಾದಲ್ಲಿ ರಂಗಕರ್ಮಿಯಾಗಿ ದುಡಿಯುತ್ತಿದ್ದಾರೆ. ಪೂರ್ಣಚಂದ್ರ ಈ ಭಾರಿ ಪಿಯುಸಿಯಲ್ಲಿ 600ರಲ್ಲಿ 580 ಅಂಕ ಪಡಿದ್ದಿದ್ದರೇ; ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್ ಹಾಗೂ ಸಂಸ್ಕೃತದಲ್ಲಿ ಪೂರ್ಣ ಅಂಕ ಪಡೆದಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿತು, ಯಾವುದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಕಲ್ಪನಾ ಭಾಸ್ಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಂದಾಪುರ ತಹಶೀಲ್ದಾರರಾದ ಗಾಯತ್ರಿ ನಾಯಕ್ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ವೈಲೆಟ್ ಬೆರೆಟ್ಟೋ ಅವರಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಸಾಗರ್ ಕ್ರೆಡಿಟ್ ಕೋ-ಅಪರೇಟೀವ್ ಸೊಸೈಟಿಯ ನಿರ್ದೇಶಕರಾಗಿ, ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯರಾಗಿ, ಕೋಟೇಶ್ವರ ಶಾಂತಿಧಾಮ ಪೂರ್ವ ಗುರುಕುಲ ಪ್ರಾಥಮಿಕ ಶಾಲೆ ಆಡಳಿತ ಮಂಡಳಿ ಸದಸ್ಯರಾಗಿ, ರಾಷ್ಟ್ರ ಸೇವಿಕಾ ಸಮಿತಿಯ ಕುಂದಾಪುರ ತಾಲೂಕು ಕಾರ್ಯ ವಾಹಿಕಾರಾಗಿ, ಬಸ್ರೂರು ನಿವೇದಿತ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿಯಾಗಿ, ಬಸ್ರೂರು ಶಾರದಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ, ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಕುಂದಾಪುರದ ಕಾರ್ಯದರ್ಶಿಯಾಗಿ, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಟ್ರಸ್ಟಿಯಾಗಿ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ನಿಯೋಜಿತ ಅಧ್ಯಕ್ಷರಾಗಿ, ರೋಟರಿ 3182 ಇದರ ವಲಯ ವುಮೇನ್ ಮೆಂಬರ್‌ಶಿಪ್…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ನರ್ಸರಿಯಿಂದ ಆರಂಭಗೊಂಡು ಪದವಿ ಶಿಕ್ಷಣದ ವರಗೆ ಶೈಕ್ಷಣಿಕ ಸಂಸ್ಥೆಯನ್ನು ಹುಟ್ಟುಹಾಕಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕುಂದಾಪುರ ಎಜುಕೇಶನ್ ಸೊಸೈಟಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅತ್ಯುನ್ನತ ಶಿಕ್ಷಣವನ್ನು ಪಡೆಯುವ ಕನಸನ್ನು ಯಶಸ್ವಿಯಾಗಿ ಸಾಕಾರಗೊಳಿಸಿದೆ. ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಪದವಿ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನೈಜ ಕಳಕಳಿಯೊಂದಿಗೆ ರೂಪ ತಳೆದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕಡಿಮೆ ಅವಧಿಯಲ್ಲಿಯೇ ಶಿಕ್ಷಣ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. 1,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜು ಆರಂಭದ ದಿನಗಳಲ್ಲಿ ಭೌತಿಕ ಕೊರತೆಯ ನಡುವೆಯೂ ಉತ್ಕೃಷ್ಟ ಸಾಧನೆ ಮಾಡುತ್ತಿದ್ದುದು ಸಂಸ್ಥೆಯ ಬೆಳವಣಿಗೆಯ ವೇಗವನ್ನು ಉಲ್ಲೇಕಿಸುವಂತಿದೆ. ಈ ವರ್ಷದಿಂದ ವಾರಾಹಿ ನದಿಯ ಮಗ್ಗಲಿನ ಪ್ರಾಕೃತಿಕ ಸೊಬಗಿನ ನಡುವೆ, ನಗರದ ಗದ್ದಲದಿಂದ ಸಾಕಷ್ಟು ಅಂತರವಿರುವಲ್ಲಿ ನೂತನ ಕಟ್ಟಡ ತಲೆಯೆತ್ತಿ ನಿಂತಿದೆ. ಶಿಕ್ಷಣಕ್ಕೆ ಪೂರಕವಾದ ಭೌತಿಕ ವಾತಾವರಣ ನಿರ್ಮಾಣಗೊಂಡಿದೆ. ಮಾಲ್ಯ ಶಿಕ್ಷಣದ ಸಾಕಾರ…
ಪಾದಾಚಾರಿ ಕೋಟ ಜೋಗಿ ಸಮಾಜದ ಅಧ್ಯಕ್ಷ ನಾರಾಯಣ ಬಳೆಗಾರ್ ಗಂಭೀರ ನ್ಯಾಯವಾದಿ ಬನ್ನಾಡಿ ಸೋಮಶೇಖರ ಹೆಗ್ಡೆ ಅವರ ಸಮಯಪ್ರಜ್ಞೆಯಿಂದ ಗಾಯಾಳುಗಳು ಶೀಘ್ರ ಆಸ್ಪತ್ರೆಗೆ ದಾಖಲು ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಮೂರುಕೈ ರಾಷ್ಟ್ರೀಯ ಹೆದ್ದಾರಿಯ ಬಳಿ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿದ ಪರಿಣಾಮ, ರಸ್ತೆಯ ಬದಿಯಲ್ಲಿ ಸಾಗುತ್ತಿದ್ದ ಪಾದಚಾರಿಗೆ ಢಿಕ್ಕಿ ಹೊಡೆದಿದ್ದು, ವಾಹನದಲ್ಲಿದ್ದ ಚಾಲಕ ಮತ್ತು ನಿರ್ವಾಹಕ ಸೇರಿ ಮೂವರೂ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆಯ ವೇಳೆಗೆ ವರದಿಯಾಗಿದೆ. ಕೋಟ ಮೂರುಕೈ ಯಿಂದ ಗೋಳಿಯಂಗಡಿ ತೆರಳಲು ಯುಟರ್ನ್ ಇರುವ ಮಾರ್ಗ ಹಾಗೂ ವಿವೇಕ ಪದವಿಪೂರ್ವ ಕಾಲೇಜು ಇರುವಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋಟ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಸಂಜೆ ವೇಳೆಗೆ ಉಡುಪಿ ಕಡೆಯಿಂದ ವೇಗವಾಗಿ ಬಂದ 407 ಗೂಡ್ಸ್ ವಾಹನವು ಕೋಟ ಮೂರು ಕೈ ಬಳಿಯ ಬ್ಯಾರಿಕೇಡ್ ಗಮನಿಸದೆ, ಹಠಾತ್ ಬ್ರೇಕ್ ಹಾಕುವ ಪ್ರಯತ್ನ ನಡೆಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ವಾಹನ ಪಲ್ಟಿಯಾಗಿತ್ತು. ಇದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ನಾಡ ಗ್ರಾಮದ ಚುಂಗಿಗುಡ್ಡೆ ಪ್ರಕಾಶ ಹೆಬ್ಬಾರ್ ಅವರನ್ನು ಮಂಡ್ಯದ ಡಾ. ಜೀ.ಶಂ.ಪ ಸಾಹಿತ್ಯ ವೇದಿಕೆಯು ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಂಬಾಡಿ ದಿನಪತ್ರಿಕೆಯ ಸಹಯೋಗದಲ್ಲಿ ಮೇ 26ರಂದು ಮಂಡ್ಯ ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿರುವ ಕವಿಕಾವ್ಯ ಮೇಳದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು. ಕವಿಗಳೂ, ಸಾಹಿತ್ಯ ಪರಿಚಾರಕರೂ ಆಗಿರುವ ಹೆಬ್ಬಾರ್ ಚುಂಗಿಗುಡ್ಡೆ ಪರಮೇಶ್ವರ ಹೆಬ್ಬಾರ್, ಅಕ್ಕಮ್ಮ ಹೆಬ್ಬಾರ್ ದಂಪತಿಯ ಪುತ್ರ.
