ಕುಂದಾಪುರ ಸರಕಾರಿ ಕಾಲೇಜಿನ ವಿದ್ಯಾರ್ಥಿ ಪೂರ್ಣಚಂದ್ರನಿಗೆ 580 ಅಂಕ. ನಾಲ್ಕರಲ್ಲಿ 100ಕ್ಕೆ 100!

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಪ್ರಾಥಮಿಕ-ಪ್ರೌಢ ಶಿಕ್ಷಣವೆಲ್ಲ ನಡೆದದ್ದು ಕನ್ನಡ ಮಾಧ್ಯಮದಲ್ಲಿ. ಪಿಯುಸಿ ತನಕವೂ ಓದಿದ್ದು ಸರಕಾರಿ ಶಾಲೆಯಲ್ಲಿ. ಆದರೇನಂತೆ ಸಾಧಿಸುವವರಿಗೆ ಶಾಲೆ, ಮಾಧ್ಯಮ ಯಾವುದು ಮುಖ್ಯವಾಗುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ವಿ. ಪೂರ್ಣಚಂದ್ರ. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 580 ಅಂಕಗಳಿಸಿರುವುದಲ್ಲದೇ ನಾಲ್ಕು ವಿಷಯಗಳಲ್ಲಿ 100ಕ್ಕೆ 100 ಅಂಕಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

Call us

Click Here

ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸೊಸೈಟಿಯ ನೌಕರಾಗಿರುವ ಕೋಣಿಯ ಜಿ.ವಿ. ಕಾರಂತ್ ಹಾಗೂ ಕಂಬದಕೋಣೆ ಸ.ಪ.ಪೂ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಜಯಲಕ್ಷ್ಮೀ ಕಾರಂತ್ ಅವರ ದ್ವಿತೀಯ ಪುತ್ರ ಪೂರ್ಣಚಂದ್ರ. ಪ್ರಥಮ ಪುತ್ರ ಮೇಘ ಸಮೀರ ಮೈಸೂರು ನಟನಾದಲ್ಲಿ ರಂಗಕರ್ಮಿಯಾಗಿ ದುಡಿಯುತ್ತಿದ್ದಾರೆ. ಪೂರ್ಣಚಂದ್ರ ಈ ಭಾರಿ ಪಿಯುಸಿಯಲ್ಲಿ 600ರಲ್ಲಿ 580 ಅಂಕ ಪಡಿದ್ದಿದ್ದರೇ; ರಸಾಯನಶಾಸ್ತ್ರ, ಗಣಿತ, ಕಂಪ್ಯೂಟರ್ ಸೈನ್ಸ್ ಹಾಗೂ ಸಂಸ್ಕೃತದಲ್ಲಿ ಪೂರ್ಣ ಅಂಕ ಪಡೆದಿದ್ದಾರೆ. ಸರಕಾರಿ ಶಾಲೆಯಲ್ಲಿ ಕಲಿತು, ಯಾವುದೇ ಟ್ಯೂಷನ್ ಪಡೆಯದೇ, ತರಗತಿಯಲ್ಲಿ ಕಲಿತದ್ದು, ಸ್ವಂತ ಪರಿಶ್ರಮದಿಂದಲೇ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಪ್ರತಿನಿತ್ಯವೂ 4-5ಗಂಟೆ ಅಭ್ಯಾಸದಲ್ಲಿ ತೊಡಗುತ್ತಿದ್ದ ಪೂರ್ಣಚಂದ್ರ, ನಿರೀಕ್ಷೆಯಂತೆ ಅಂಕಗಳನ್ನು ಪಡೆದಿದ್ದು ಮುಂದೆ ಇಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿಯೂ 602 ಅಂಕ ಪಡೆದು ಜಿಲ್ಲೆಗೆ ಮೊದಲ ಮೂರು ಸ್ಥಾನ ಪಡೆದವರಿಗೆ ಕೊಡಮಾಡುವ ಕಂಪ್ಯೂಟರ್ ಬಹುಮಾನವನ್ನೂ ಪಡೆದುಕೊಂಡಿದ್ದರು. ಮುಂದೆ ಐಎಎಸ್ ಅಧಿಕಾರಿ ಆಗುವ ಗುರಿ ಪೂರ್ಣಚಂದ್ರ ಅವರದ್ದು. ಕುಂದಾಪ್ರ ಡಾಟ್ ಕಾಂ ವರದಿ.

ಓದಿನಷ್ಟೇ ಪಠ್ಯೇತರ ಚಟುವಟಿಕೆಯಲ್ಲೂ ಚುರುಕು:
ಸರಳ, ಸೌಮ್ಯ ಸ್ವಭಾದ ಹುಡುಗ ಪೂರ್ಣಚಂದ್ರ ಓದಿನೊಂದಿಗೆ ತಂದೆಯಂತೆ ಸದಭಿರುಚಿಯ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಸಂಗೀತ, ಯಕ್ಷಗಾನ, ನಾಟಕಗಳಲ್ಲಿ ಅಭಿನಯಿಸಿಯೂ ಸೈ ಎನಿಸಿಕೊಂಡವರು. ಎಸ್.ಎಸ್.ಎಲ್‌ಸಿಯಲ್ಲಿ ಉತ್ತಮ ಸ್ಥಾಧನೆ ತೋರಿ ಕಂಪ್ಯೂಟರ್ ಕೊಡುಗೆ, ಎನ್‌ಟಿಎಸ್‌ಇ ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡು ವಿದ್ಯಾರ್ಥಿ ವೇತನ ಪಡೆದಿರುವುದು, ಇನ್ಸ್‌ಪಾಯರ್ಡ್ ಅವಾರ್ಡ್ ಸ್ವರ್ಧೆಯಲ್ಲಿ ರಾಜ್ಯಮಟ್ಟದ ವರೆಗೆ ಭಾಗವಹಿಸಿದ್ದು ಮುಂತಾದವುಗಳು ಇವರ ಪ್ರತಿಭೆಗೆ ಹಿಡಿದ ಕನ್ನಡಿ.

ಮಗನ ಸಾಧನೆಯ ಬಗ್ಗೆ ತಂದೆ ಜಿ.ವಿ. ಕಾರಂತ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ, ಟ್ಯೂಷನ್ ಪಡೆಯದೇ ಸ್ವ ಪ್ರಯತ್ನದಿಂದ ಪಿಯುಸಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಅಂಕ ಪಡೆದಿರುವುದು ಖುಷಿ ತಂದಿದೆ ಎಂದಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/

Leave a Reply