Author: ನ್ಯೂಸ್ ಬ್ಯೂರೋ

ಬೈಂದೂರು: ವಲಯದ ರಾಗಿಹಕ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2015-16 ನೇ ಸಾಲಿನ ವಾರ್ಷಿಕ ಸಂಚಿಕೆ ’ನಿರುಪಮ2’ ಇತ್ತೀಚೆಗೆ ಶಾಲೆಯ ಸಭಾಂಗಣದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಬಿಡುಗಡೆ ಮಾಡಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮಹಾದೇವ ಮಂಜ, ನಿಕಟಪೂರ್ವ ಮುಖ್ಯ ಶಿಕ್ಷಕ ಮಹಾಬಲ ಗೌಡ, ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Read More

ಕುಂದಾಪುರ: ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಎತ್ತರದ ಸ್ಥರದಲ್ಲಿ ಹೊಸ ಹೊಸಾ ಅವಿಷ್ಕಾರಗಳು ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ಮಾದರಿ ಸ್ಪರ್ಧೆ ಬೌದ್ಧಿಕ ಮಟ್ಟದ ವೃದ್ಧಿಗೆ ಪೂರಕಾವಾಗಿದೆ ಎಂದು ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ಸ್ ಮಾರ್ಗದರ್ಶಕ ಕೆ.ಆರ್.ನಾಯ್ಕ್ ಹೇಳಿದ್ದಾರೆ. ಹಂಗಳೂರು ಚಿಕ್ಕ ಮಹಾಲಿಂಗೇಶ್ವರ ಫ್ರೆಂಡ್ಸ್, ಅಂಕದಕಟ್ಟೆ ಹಳೆ ವಿದ್ಯಾರ್ಥಿಗಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಅಂಕದಕಟ್ಟೆ ಸರಕಾರಿ ಮಾದರಿ ಶಾಲಾ ವೇದಿಕೆಯಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಮಾದರಿ ಸ್ಪರ್ಧೆ ಮತ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ಬೇರೆ ಬೇರೆ ಕಡೆಯಿಂದ ಸ್ಪರ್ಧೆಗೆ ಬಂದ ವಿದ್ಯಾರ್ಥಿಗಳು ಒಂದೆಡೆ ಕಲೆತು ವಿಷಯ ವಿನಿಮಯದಿಂದ ಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ. ಹಿಂದೆ ವಿದ್ಯಾರ್ಥಿಗಳಿಗೆ ಕಲಿಕೆ ಅವಕಾಶ ಕಮ್ಮಿಯಿದ್ದು, ಪ್ರಸಕ್ತ ಕಲಿಕೆಗೆ ವಿಫುಲ ಅವಕಾಶ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಎಂದು ಹೇಳಿದರು. ಅಂಕದಕಟ್ಟೆ ಸರಕಾರಿ ಮಾದರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ…

Read More

ಕುಂದಾಪುರ: ದೇಶದ ಭವಿಷ್ಯ ಯುವಶಕ್ತಿಯನ್ನು ಅವಲಂಬಿಸಿದೆ. ಇಂದಿನ ಯುವಶಕ್ತಿ ಆ ನಿಟ್ಟಿನಲ್ಲಿ ಒಂದಾಗಬೇಕಿದೆ. ಇಂಥಹ ಅಗತ್ಯತೆಯಲ್ಲಿ ಯುವಕರೆಲ್ಲರನ್ನು ಒಂದುಗೂಡಿಸಿದ ಪ್ರೇರಣಾ ಯುವ ವೇದಿಕೆ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿದೆ ಎಂದು ಭಾರತ ಸರ್ಕಾರ ಅಂಕಿ ಅಂಶ ಇಲಾಖೆಯ ಸಾಂಖ್ಯಕ ಅಧಿಕಾರಿ ತಾರಾನಾಥ ಹೊಳ್ಳ ಹೇಳಿದರು. ಪ್ರೇರಣಾ ಯುವ ವೇದಿಕೆಯ ತೃತೀಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಲ್ಲೂರು ಮಾಜಿ ಧರ್ಮದರ್ಶಿ ಬಿ.ಎಮ್.ಸುಕುಮಾರ್ ಶೆಟ್ಟಿ ಮಾತನಾಡಿ ಆಡಂಬರರಹಿತ ,ದುಂದುವೆಚ್ಚಲ್ಲಿದೆ, ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಪ್ರೇರಣಾ ವೇದಿಕೆಯ ಶ್ಲಾಘನೀಯ ಎಂದರು. ತದನಂತರ ಗ್ರಾಮೀಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಲಾಯಿತು, ಹಿರಿಯ ಕೃಷಿಕರಾದ ರಾಮಯ್ಯ ಶೆಟ್ಟಿ ನೈಕಂಬ್ಳಿ, ಹಿರಿಯ ಯಕ್ಷಗಾನ ಕಲಾವಿದರಾದ ನಾರಾಯಣ ದೇವಾಡಿಗ ಮಾರಣಕಟ್ಟೆ, ರಾಜ್ಯಮಟ್ಟದ ಸ್ಥಳೀಯ ಕ್ರೀಡಾಪಟು ಚೇತನಾ ಎಂ ಇವರಿಗೆ ಪ್ರೇರಣಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರೇರಣಾ ಯುವ ವೇದಿಕೆಯ ಅಧ್ಯಕ್ಷ ಚಂದ್ರ ಶೆಟ್ಟಿ ನೈಕಂಬ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಡಿ.ವೈ.ಎಸ್.ಪಿ ಮಂಜುನಾಥ ಶೆಟ್ಟಿ, ಉಡುಪಿಯ ಯುವ ಚಿಂತಕ ಶ್ರೀಕಾಂತ…

Read More

ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಫೆ.09ರಿಂದ ಫೆ.13ರ ವರೆಗೆ ನಡೆಯುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಮತ್ತು ಚತುಃ ಪವಿತ್ರ ನಾಗಮಂಡಲೊತ್ಸವದ ಪೂರ್ವಭಾವಿಯಾಗಿ ಶುಕ್ರವಾರ ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡರ ನೆತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ಉಗ್ರಾಣ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಹಾಗೂ ಸದಸ್ಯರು, ಮಾಚ ಪೂಜಾರಿ ಬೆಳ್ಗಲ್‌ಕಟ್ಟೆ, ನಾಗೇಂದ್ರ ಪೂಜಾರಿ ಕರಾವಳಿ ಶಿರೂರು, ತಿಮ್ಮಪ್ಪ ಪೂಜಾರಿ ಕಾಡಿಗುಂಡಿ ಬೈಂದೂರು, ರಾಮ ಮಡಿವಾಳ, ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಫೆ.09ರಿಂದ ಈ ಕ್ಷೇತ್ರಕ್ಕೆ ಹೊರೆ ಕಾಣಿಕೆ ಕೊಡುವವರು ಕೊಡಬಹುದು ಎಂದು ದೇವಳದ ಸಮಿತಿ ತಿಳಿಸಿದೆ.

Read More

ಗಂಗೊಳ್ಳಿ: ಗಡಿಯ ತುದಿಯಲ್ಲಿ ನಿಂತು ದೇಶವನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವ ಸೈನಿಕರಂತೆಯೇ ದೇಶದ ಆಂತರಿಕ ಸಂಘರ್ಷಗಳಲ್ಲಿ ನಮ್ಮೊಂದಿಗೆ ನಿಲ್ಲುವ ಸೈನಿಕನೇ ’ಪೊಲೀಸ್;. ಅವರ ಕರ್ತವ್ಯಕ್ಕೆ ಸಮಯದ ಪರಿಧಿ ಇಲ್ಲ. ಅವರು ಹಕ್ಕೊತ್ತಾಯಕ್ಕೆ ಹೋರಾಟ ಮಾಡುವಂತಿಲ್ಲ. ಜಾತಿ ಮತಗಳ ಸಂಘರ್ಷವಾಗಲಿ, ರಾಜ್ಯಗಳ ನಡುವಿನ ಗಡಿ ಕದನವಾಗಲಿ ಅವರು ತಕ್ಷಣ ಹಾಜರು. ಉದ್ರಿಕ್ತರು ಬೀಸುವ ಕಲ್ಲುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜೊತೆಗೆ ತನ್ನನ್ನು ನಂಬಿದವರನ್ನು ಕಾಪಾಡುವುದು ಅವರ ಹೊಣೆ. ಇಂತಹ ಅನೇಕ ಕಠಿಣ ಸನ್ನಿವೇಶಗಳಲ್ಲಿ ಸದಾ ಜನರೊಂದಿಗೆ ಇದ್ದು ಜನರನ್ನು ರಕ್ಷಿಸುವ ಕಾನೂನನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ ಪೊಲೀಸರ ಮೇಲಿದೆ. ನಮ್ಮೂರಿನ ಪೊಲೀಸ್ ನಮ್ಮ ಸೈನಿಕರಿದ್ದಂತೆ. ಪೊಲೀಸರ ಮೇಲಿನ ಗೌರವಕ್ಕೆ ತಲೆಬಾಗಿ ನಮ್ಮೂರಿನ ಸೈನಿಕರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ ಗಂಗೊಳ್ಳಿಯ ಕ್ರಾಂತಿವೀರರ ಅಭಿಮಾನಿ ಬಳಗದ ಸದಸ್ಯರು ಇತ್ತೀಚಿಗೆ ನಮ್ಮೊಳಗಿನ ಸೈನಿಕರು ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಗಂಗೊಳ್ಳಿ, ಬೈಂದೂರು ಹಾಗೂ ಕೊಲ್ಲೂರು ಪೊಲೀಸ್ ಠಾಣೆಗಳಿಗೆ ತೆರಳಿ ಆಯಾ ಠಾಣೆಯ ಎಲ್ಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಓವರ್ಟೆಕ್ ಮಾಡುತ್ತಿದ್ದ ಬೈಕ್ ಸವಾರ ಆಯತಪ್ಪಿ ರಸ್ತೆಗೆ ಬಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಹರಿದು ಮೃತಪಟ್ಟ ಧಾರುಣ ಘಟನೆ ವರದಿಯಾಗಿದೆ. ಮೃತರನ್ನು ಕೋಡಿ ಸಮೀಪದ ಅರಳುಗುಡ್ಡೆ ನಿವಾಸಿ ಉತ್ಮೇಶ್ ಪೂಜಾರಿ (36) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಹಕ್ಲಾಡಿ ಸಮೀಪದ ಹೊಳ್ಮಗೆ ತೆರಳುತ್ತಿದ್ದ ಸಂದರ್ಭ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪ ಬೈಕೊಂದನ್ನು ಓವರ್ಟೆಕ್ ಮಾಡುತ್ತಿದ್ದ ಸಂದರ್ಭ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ಸಂದರ್ಭ ಹಿಂದಿನಿಂದ ಬಂದ ಮೀನು ಲಾರಿಯೊಂದು ಉತ್ಮೇಶ್ ಅವರ ತಲೆಯ ಮೇಲೆ ಹರಿದಿದೆ. ಹೆಲ್ಮೆಟ್ ಧರಿಸಿದ್ದರೂ ಲಾರಿ ಹರಿದ ರಭಸಕ್ಕೆ ಹೆಲ್ಮೆಟ್ ಛದ್ರಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾರೆ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಉತ್ಮೇಶ್ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಕುಂದಾಪುರ: ಅಸ್ಸಾಂನ ಗುವಾಹಟಿಯಲ್ಲಿ ಜರುಗುತ್ತಿರುವ 12ನೇ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕುಂದಾಪುರ ತಾಲೂಕಿನ ಚಿತ್ತೂರು/ವಂಡ್ಸೆಯ ಯುವಕ ಗುರುರಾಜ್, 56ಕೆ.ಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ನಾಡಿಗೆ ಕೀರ್ತಿ ತಂದಿದ್ದಾನೆ. ಬಡತನದ ನಡುವೆಯೂ ಶ್ರದ್ಧೆ ಹಾಗೂ ಸತತ ಪರಿಶ್ರಮದಿಂದ ಏನನ್ನೂ ಸಾಧಿಸಬಹುದು ಎಂಬುದನ್ನು  ಡ್ರೈವರ್ ಮಗ ತೋರಿಸಿಕೊಟ್ಟಿದ್ದಾನೆ!  ಬಾಲ್ಯದಿಂದಲೇ ಕ್ರೀಡೆಯಲ್ಲಿ ಅದಮ್ಯ ಆಸಕ್ತಿ. ಬಿಡದೇ ಸಾಧಿಸುವ ಛಲ. ಬಡತನದ ನಡುವೆಯೂ ಮಗನ ಆಸಕ್ತಿಗೆ ನೀರೆರೆದು ಪೋಷಿಸಿದ ಪೋಷಕರು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಗುರುಗಳು. ಇವೆಲ್ಲದರ ಸಮ್ಮೀಳಿತದ ಫಲವೇ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಗುರುರಾಜ್ ಎಂಬ ಕುಂದಾಪುರದ ಯುವಕನ ರಾಷ್ಟ್ರ ಮಟ್ಟದ ಸಾಧನೆ. (ಕುಂದಾಪ್ರ ಡಾಟ್ ಕಾಂ ವರದಿ) ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಆರು ಮಕ್ಕಳಲ್ಲಿ ಐದನೇಯವರಾದ ಗುರುರಾಜಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ತಂದೆ ತಾಯಿಯೂ ಅಷ್ಟೇ. ಮಗನ ಮನದ ಇಂಗಿತ ಅರಿತು ಅವರ ಸಾಧನೆಗೆ ಶಕ್ತಿ ಮೀರಿ ನೆರವಾಗುತ್ತಿದ್ದರು. ಕೊಲ್ಲೂರು…

Read More

ಬೈಂದೂರು: ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಬೈಂದೂರು ಹಾಗೂ ಜೆಸಿಐ ಶಿರೂರು ಸಹಯೋಗದೊಂದಿಗೆ ಶಿರೂರು ಕಾಲೇಜು ಮೈದಾನದಲ್ಲಿ  ಜರುಗಿದ ಆಳ್ವಾಸ್ ಸಾಂಸ್ಕೃತಿಕ ವೈಭವಕ್ಕೆ ಮೈದಾನದ ತುಂಬಾ ಕಿಕ್ಕಿರಿದು ತುಂಬಿದ್ದ ಜನ ಸಾಕ್ಷಿಯಾದರು. ಸಾಂಸ್ಕೃತಿಕ ವೈಭವದ ಫೋಟೋ ಆಲ್ಬಂ ಇಲ್ಲಿದೆ.

Read More

ಬೆಸುಗೆ.. ಬೆಸುಗೆ.. ಜೀವನವೆಲ್ಲ ಸುಂದರ.. ಬೆಸುಗೆ.., ನಾ ನಿನ್ನ ಮರೆಯಲಾರೆ, ಪ್ರಿಯತಮಾ ಕರುಣೆಯ ತೋರೆಯ.., ತೆರೆದಿದೆ ಮನೆ ಓ ಬಾ ಅತಿಥಿ.. ಎನೇನೋ ಆಸೆ ನೀ ತಂದ ಭಾಷೆ.. ಮೊದಲಾದ ಚಲನಚಿತ್ರ ಗೀತೆಗಳನ್ನು ಹಾಡಿ ಕನ್ನಡ ಪ್ರೇಕ್ಷಕರ ಮನದಲ್ಲಿ ಪಡಿಯಚ್ಚು ಮೂಡಿಸಿ ಸಂಗೀತ ಗಾಯನ ಲೋಕದಲ್ಲಿ ಅಗ್ರಮಾನ್ಯ ಸ್ಥಾನವನ್ನು ಅಲಂಕರಿಸಿರುವ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಫೆ. ೨೧ರಂದು ಕುಂದಾಪುರಕ್ಕೆ ಆಗಮಿಸಲಿದ್ದಾರೆ. ಕೋಟದ ಮನಸ್ಮಿತ ಫೌಂಡೇಶನ್‌ನ ಆಶ್ರಯದಲ್ಲಿ ಸಹನಾ ಗ್ರೂಫ್ ಕೋಟೇಶ್ವರ ಇವರ ಸಹಭಾಗಿತ್ವದಲ್ಲಿ ಕುಂದಾಪುರ ಸಮೀಪದ ಕೋಟೇಶ್ವರದ ಸಹನಾ ಎಸ್ಟೇಟ್‌ನಲ್ಲಿ ಗಾಯಕ ಡಾ. ಸತೀಶ ಪೂಜಾರಿಯವರ ಪರಿಕಲ್ಪನೆ ಹಾಗೂ ನೇತೃತ್ವದಲ್ಲಿ ಕರ್ನಾಟಕದ ಹೆಸರಾಂತ ಗಾಯಕರ ಸಮ್ಮಿಲನದಲ್ಲಿ ಸಂಗೀತ ರಸಸಂಜೆ ’ವಾಣಿಯ ಸ್ವರ ಝೇಂಕಾರ’ ಕಾರ್ಯಕ್ರಮವು ಮಾನಸಿಕ ಅಸ್ವಸ್ಥರ ಸಹಾಯಾರ್ಥವಾಗಿ ಫೆ. 21ರಂದು ಸಂಜೆ 6:30ರಿಂದ ಜರುಗಲಿದೆ. ಈ ರಸಸಂಜೆಯ ’ವಾಣಿಯ ಸ್ವರ ಝೇಂಕಾರ’ದಲ್ಲಿ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಅವರು ಭಾಗವಹಿಸಿ ತಮ್ಮ ಗಾನ…

Read More

ಕುಂದಾಪುರ: ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕಾಗಿ ನಿರ್ಮಿಸಿದ ನೂತನ ರಜತ ರಥವನ್ನು ಕೋಟೇಶ್ವರದಿಂದ ಭವ್ಯ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು. ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಪರವಾಗಿ ಆಡಳಿತ ಮೋಕ್ತೇಸರರಾದ ಶ್ರೀಧರ ಕಾಮತ್ ಮೂಲ್ಕಿಯ ಸಮಾಜ ಭಾಂಧವರನ್ನು ಸ್ವಾಗತಿಸಿಕೊಂಡರು. ದೇವಸ್ಥಾನದ ವತಿಯಿಂದ ದೇವರ ಪ್ರಾರ್ಥನೆ, ರಥಕ್ಕೆ ಆರತಿ ನಡೆಯಿತು. ಜೊತೆ ಮೋಕ್ತೇಸರರಾದ ಶಾಂತಾರಾಮ ಪೈ ಮತ್ತು ವಿಠ್ಠಲದಾಸ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಜತ ರಥವು ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ನಿರ್ಮಾಣಗೊಂಡಿದ್ದು, ಫೆ.10ರಂದು ಕಾಶೀ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರ ಸ್ವಾಮೀಜಿಯವರು ಶ್ರೀ ದೇವರಿಗೆ ಸಮರ್ಪಣೆಗೊಳಿಸಲಿದ್ದಾರೆ.

Read More