ಕುಂದಾಪುರ: ತಾಲೂಕು ಯುವ ಬಂಟರ ಸಂಘದ ಕ್ರೀಡಾ ಸಂಚಾಲಕರಾಗಿ ರಾಜಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರ ತಾಲೂಕಿನ ಹೈಕಾಡಿಯ ನಿವಾಸಿಯಾಗಿದ್ದು, ಪ್ರಸ್ತುತ ಎಣ್ಣೆಹೊಳೆ ರಾಧಾ ನಾಯಕ್ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ಬಂಟರ ಕ್ರೀಡೋತ್ಸವ-2016 ಎಪ್ರಿಲ್ 16 ಮತ್ತು 17ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹೊಸಮಠ ಸುಕೇಶ್ ಶೆಟ್ಟಿ ತಿಳಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಬೈಂದೂರು: ಹಳಗೇರಿಯಲ್ಲಿ ಅಲ್-ವಫಾ ವೆಲ್‌ಫೇರ್ ಸೋಸೈಟಿ ವತಿಯಿಂದ ಜಾಮೀಯಾ ಮಸೀದಿ ವಠಾರದಲ್ಲಿ ಅಂತರ್ ಜಿಲ್ಲಾಮಟ್ಟದ ನಅತ್ ಸ್ಪರ್ಧೆ ನಡೆಯಿತು. ನಅತ್ ಸ್ಪರ್ಧಾ ವಿಜೇತರು: ಹಿರಿಯರ ವಿಭಾಗದಲ್ಲಿ ಮರುಡೇಶ್ವರದ ಅಬ್ದುಲ್ ರೆಹೆಮಾನ್(ಪ್ರಥಮ), ವಲ್ಕಿ ಗ್ರಾಮದ ಶಬ್ಬೀರ್ ವಲ್ಕಿ(ದ್ವಿತೀಯ), ಫಿರ್‌ದವಾಸ್ ನಗರದ ಸಜ್ಜಾ(ತೃತೀಯ) ಮತ್ತು ಕಿರಿಯರ ವಿಭಾಗದಲ್ಲಿ ಹಳಗೇರಿ ಸಾಯಿಮ್(ಪ್ರಥಮ), ಶಿರೂರಿನ ಮೊಹಮ್ಮದ್ ಸಮ್ಮಾನ್(ದ್ವಿತೀಯ), ಗಂಗೊಳ್ಳಿಯ ಮೊಹಮ್ಮದ್ ಆಸಿಮ್(ತೃತೀಯ) ಬಹುಮಾನ ಪಡೆದರು. ಈ ಸಂದರ್ಭ ಭಟ್ಕಳದ ಖ್ಯಾತಕವಿ ಸಮಿವುಲ್ಲ ಬರ್ಮಾವರ್ ಇವರಿಂದ ನವಾಯಿತಿ ಶಾಯಿರಿ ಮತ್ತು ಕಂಡ್ಲೂರಿನ ಜಾಮೀಯಾ ಝಿಯಾವುಲ್ ಉಲೂಮ್ ವಿದ್ಯಾರ್ಥಿಗಳಿಂದ ನಡೆದ ಬೈತ್‌ಬಾಝಿ ಎಲ್ಲರನ್ನು ಆಕರ್ಷಿಸಿತು. ಕಂಡ್ಲೂರು ಝಿಯಾ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಾಕಾಧ್ಯಕ್ಷ ಮೌಲಾನಾ ಉಬೇದುಲ್ಲ ನದ್ವಿ ಅಧ್ಯಕ್ಷತೆವಹಿಸಿದ್ದರು. ಮೌಲಾನಾ ಶಕೀಲ್ ಅಹ್ಮದ್ ನದ್ವಿ, ಉಡುಪಿ ಜಿಲ್ಲಾ ವಕ್ಷ್‌ಬೋರ್ಡಿನ ಚೇರ್‌ಮನ್ ನಾಕ್ವಾ ಯಾಹ್ಯಾ, ಹಳಗೇರಿ ಶಬ್ಬೀರ್ ಖಾಝಿ, ಕಿರಿಮಂಜೇಶ್ವರ ಮಿಲ್ಲತ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಜಮೀರ್ ಅಹ್ಮದ್ ರಶ್ದಿ, ಹಿರಿಯರಾದ ಜನಾಬ್ ಬುಡಾನ್ ಸಾಹೇಬ್ ಇವರುಗಳನ್ನು ಸನ್ಮಾನಿಸಲಾಯಿತು. ಮೌಲಾನಾ ಅಬ್ದುಲ್ ಕರೀಮ್…
ಕುಂದಾಪುರ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು, ಪ್ರಸಾದ್ ನೇತ್ರಾಲಯ ಉಡುಪಿ, ಗ್ರಾಮ ಪಂಚಾಯತ್ ಕಾವ್ರಾಡಿ, ರೋಟರಿ ಕ್ಲಬ್ ಅಂಪಾರು ಇವರ ಜಂಟಿ ಆಶ್ರಯದಲ್ಲಿ ಚರ್ಮರೋಗ ಮತ್ತು ಕಣ್ಣಿನ ಪೊರೆ ಹಾಗೂ ಕಣ್ಣಿನ ತಪಾಸಣೆ ಶಿಬಿರ ಕಂಡ್ಲೂರು ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಇತ್ತೀಚಿಗೆ ನಡೆಯಿತು. ಅಂಪಾರು ರೋಟರಿ ಅಧ್ಯಕ್ಷ ಸಂತೋಷ್‌ಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ರೋಟರಿ ವಲಯ ಸೇನಾನಿ ಶ್ಯಾಮರಾಜ್ ಭಟ್ ಶಿಬಿರ ಉದ್ಘಾಟಿಸಿದರು. ಚರ್ಮರೋಗ ತಜ್ಞ ಡಾ. ಉಮೇಶ್ ನಾಯಕ್, ರೋಟರಿ ಕಾರ್ಯದರ್ಶಿ ಕಾಳಿಂಗ ಶೆಟ್ಟಿ ಉಪಸ್ಥಿತರಿದ್ದರು. ಕಂಡ್ಲೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಲತಾ ನಾಯಕ್ ಸ್ವಾಗತಿಸಿ, ವಂದಿಸಿದರು. ಪರಿಸರದ ಸುಮಾರು ೩೫೦ಕ್ಕೂ ಹೆಚ್ಚು ಫಲಾನುಭವಿಗಳು ಸಿಬಿರದ ಸದುಪಯೋಗ ಪಡೆದರು.
ಗಂಗೊಳ್ಳಿ: ಹಿಂದು ಜಾಗರಣೆ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ೫೦೫ ಲಕಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಯೋಧ್ಯೆಯಲ್ಲಿ ಅತೀ ಶೀಘ್ರದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ, ಕರಾವಳಿ ಜಿಲ್ಲೆಯನ್ನು ಕಾಡುತ್ತಿರುವ ಮತ್ಸ್ಯಕ್ಷಾಮದ ನಿವಾರಣೆಗಾಗಿ, ಗ್ರಾಮದ ಸುಭಿಕ್ಷೆಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ೧೩ ಲಕ್ಷ ಲಿಖಿತ ಶ್ರೀ ರಾಮನಾಮ ತಾರಕ ಜಪಯಜ್ಞ ಕಾರ್ಯಕ್ರಮದ ಪ್ರಯುಕ್ತ “ಯಜ್ಞ ಸಂಕಲ್ಪ” ಧಾರ್ಮಿಕ ಕಾರ್ಯಕ್ರಮ ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ್ವರ-ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು. ಪುರೋಹಿತರಾದ ವೇದಮೂರ್ತಿ ರವೀಶ ಭಟ್ ಮಾರ್ಗದರ್ಶನದಲ್ಲಿ ಯಜ್ಞ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಆರ್ಕಾಟಿಯವರ ಉಪಸ್ಥಿತಿಯಲ್ಲಿ ಶ್ರೀ ರಾಮ ನಾಮತಾರಕದ ಲಿಖಿತ ಜಪ ಯಜ್ಞದ ಯಜ್ಞ ಸಂಕಲ್ಪವನ್ನು ಮಾಡಿ ಶ್ರೀದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಗಂಗೊಳ್ಳಿ ಹಿಂದು ಜಾಗರಣೆ ವೇದಿಕೆಯ ಸಂಚಾಲಕ ರತ್ನಾಕರ ಗಾಣಿಗ, ಸಂಘಟನೆ ಪ್ರಮುಖರಾದ ನವೀನ ಬಂದರ್, ಯಶವಂತ ಖಾರ್ವಿ ಬೇಲಿಕೇರಿ, ನಿತ್ಯಾನಂದ ಮ್ಯಾಂಗನೀಸ್ ರೋಡ್, ಉದಯ ಪೂಜಾರಿ…
ಕುಂದಾಪ್ರ ಡಾಟ್ ಕಾಂ. ಕನ್ನಡದ ಪ್ರಸಿದ್ಧ ಶೋ ’ಮಜಾ ಟಾಕೀಸ್’ನಲ್ಲಿ ಕುಂದಾಪುರದ ಮೂರು ಮುತ್ತುಗಳು ಖ್ಯಾತಿಯ ರೂಪಕಲಾ ತಂಡ ಭಾಗವಹಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಶೋನಲ್ಲಿ ಅವರ ನಾಟಕದ ಆಯ್ದ ಎರಡು ದೃಷ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರಲ್ಲದೇ, ಸ್ವತಃ ಸೃಜನ್ ಲೋಕೇಶ್ ಮನತುಂಬಿ ಹೊಗಳಿದ್ದಾರೆ. ನೋಡಿ ಎಂಜಾಯ್ ಮಾಡಿ. ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕುಂದಾಪ್ರ ಡಾಟ್ ಕಾಂ ವರದಿ ಕೊಲ್ಲೂರು: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಮೂಕಾಂಬಿಕಾ ದೇವಸ್ಥಾನದ ಗುಮಾಸ್ತನೊಬ್ಬ ಖಜಾನೆಯ ಬೀಗದ ಕೈಯೊಂದಿಗೆ ನಾಪತ್ತೆಯಾಗಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿರುವ ಬೆನ್ನಲ್ಲೇ, ಸಾರ್ವಜನಿಕರು ದೇವರಿಗೆ ಸಲ್ಲಿರುವ ಹರಕೆಯ ವಸ್ತುಗಳ ಭದ್ರತೆಯ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. ಇದರೊಂದಿಗೆ ಕಾರ್ಯನಿವಹಣಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ದೇವಳದ ವಿಚಾರ ಅನಗತ್ಯವಾಗಿ ಚರ್ಚಾಸ್ಪದವಾಗುತ್ತಿರುವ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೊಲ್ಲೂರು ದೇವಳದ ಒಳಗೆ ಒಂದನೇ ನಂಬರಿನ ಸೇವಾ ಕೌಂಟರ್‌ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಶಿವರಾಮ ಮಡಿವಾಳ ಎಂಬುವವರು ಕಳೆದ ಆರು ದಿನಗಳಿಂದ ಸೇವೆಗೆ ನಾಪತ್ತೆಯಾಗಿರುವುದು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಯಾರ ಅನುಮತಿಯೂ ಪಡೆಯದೇ ಏಕಾಏಕಿ ಕರ್ತವ್ಯಕ್ಕೆ ಗೈರು ಹಾಜರಾಗಿ ತಲೆಮರೆಸಿಕೊಂಡಿರುವ ಸೇವಾ ಕೌಂಟರ್ ಖಜಾನೆಯ ಕೀಲಿಕೈಯನ್ನು ಕೊಂಡೊಯ್ದಿರುವುದು ಅನುಮಾನಗಳಿಗೆ ಆಸ್ಪದ ನೀಡಿದೆ. ಕುಂದಾಪ್ರ ಡಾಟ್ ಕಾಂ ವರದಿ ಆದದ್ದೇನು? ಏಕಾಏಕಿ ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿರುವ ಶಿವರಾಮ, ತನಗೆ ಮಧುಮೇಹ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ನಾಡಿನ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ದೇವರಿಗೆ ಕಾಣಿಕೆ ರೂಪದಲ್ಲಿ ಬಂದಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ದೇವಳದ ಸಿಬ್ಬಂಧಿಯೇ ಕಳವುಗೈದಿರು ಬಗ್ಗೆ ಶಂಕಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು ದೇವಳದ ಸೇವಾ ಕೌಂಟರಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂಧಿಯೋರ್ವರು ಕೌಟರಿನಲ್ಲಿ ಚಿನ್ನಾಭರಣಗಳನ್ನಿಟ್ಟ ಬೀರುವಿನ ಕಿಲಿಕೈಯನ್ನು ತನ್ನ ಬಳಿ ಇರಿಸಿಕೊಂಡು ತಲೆಮರೆಸಿಕೊಂಡಿದ್ದು, ಚಿನ್ನಾಭರಣಗಳನ್ನು ಕೊಂಡೊಯ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕೊಲ್ಲೂರು ದೇವಳದಿಂದ ಕೊಲ್ಲೂರು ಠಾಣೆಗೆ ಪಿಟಿಷನ್ ಸಲ್ಲಿಸಲಾಗಿದ್ದು, ದೇವಳದ ಕರ್ತವ್ಯಕ್ಕೆ ಹಾಜರಾಗದೇ ತಲೆಮರೆಸಿಕೊಂಡವನನ್ನು ಹುಡುಕಿಕೊಡುವಂತೆ ಕೇಳಿಕೊಳ್ಳಲಾಗಿದೆ. ಈ ವಿಚಾರವಾಗಿ ತನಿಕೆ ಪ್ರಗತಿಯಲ್ಲಿದ್ದು, ಇನ್ನಷ್ಟೇ ವಾಸ್ತವ ಸಂಗತಿ ಬೆಳಕಿಗೆ ಬರಬೇಕಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ►ಕೊಲ್ಲೂರು ದೇಗುಲದಲ್ಲಿ ಚಿನ್ನಾಭರಣ ಕಳವು? – http://kundapraa.com/?p=11395 .
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಕುಂದಾಪುರ: ಇಂದು ರೇಡಿಯೋದಲ್ಲಿ ಮಾತ್ರ ಹಾಡುವುದನ್ನು ಕೇಳುವ ದಿನಗಳು ಬದಲಾಗಿ, ಹಾಡನ್ನು ನೋಡುವ ದಿನಗಳು ಬಂದಿವೆ. ರೀಯಾಲಿಟಿ ಶೋಗಳ ಮೂಲಕ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ. ಸಂಗೀತದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದಿಲ್ಲ. ಎಲ್ಲಾ ಪ್ರಕಾರದ ಸಂಗೀತಕ್ಕೂ ಅದರದ್ದೇ ಆದ ಘನತೆ ಇದೆ. ಎಲ್ಲಾ ಕ್ಷೇತ್ರದಲ್ಲಿ ಕಷ್ಟಪಡುವುದು ಇದ್ದೇ ಇರುತ್ತೆ. ಕಷ್ಟ ಪಡದೇ ಇಷ್ಟಾರ್ಥ ಸಿದ್ದಿಸೋದಿಲ್ಲ. ಕಷ್ಟಪಟ್ಟು ಇಷ್ಟ ಸಿದ್ದಿಸಿಕೊಂಡಿದ್ದೇನೆ. ಹಿನ್ನೆಲೆ ಗಾಯಕಿಯಾಗಿ ಸಂಗೀತ ಕ್ಷೇತ್ರದ ಪಣಯ ಖುಷಿ ನೀಡಿದೆ. ಹೀಗೆಂದವರು ಸಂಗೀತ ಗಾಯನ ಲೋಕದಲ್ಲಿ ಅಗ್ರಮಾನ್ಯ ಸ್ಥಾನವನ್ನು ಅಲಂಕರಿಸಿರುವ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿ ಜಯರಾಂ ಕೋಟೇಶ್ವರ ಸಹನಾ ಕನ್‌ವೆಷನ್ ಸೆಂಟರ್‌ಸಲ್ಲಿ ಭಾನುವಾರ ನಡೆಯಲಿರುವ ವಾಣಿ ಜಯರಾಂ ರಸ ಸಂಜೆ ಕಾರ್ಯಕ್ರಮಕ್ಕೆ ಕುಂದಾಪುರಕ್ಕೆ ಆಗಮಿಸಿರುವ ಅವರು ತಮ್ಮ ಹಿನ್ನಲೆ ಗಾಯನ ಮೂಲಕ ಸಾಗಿ ಬಂದ ದಾರಿಯನ್ನು ಕುಂದಾಪ್ರ ಡಾಟ್ ಕಾಂ ನೊಂದಿಗೆ ತೆರೆದಿಷ್ಟ ಪರಿ ಇದು.…
ಕುಂದಾಪುರ: ಚಿಕ್ಕನ್‌ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳ ಅನುಗ್ರಹದೊಂದಿಗೆ ವೇ. ಮೂ. ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿದಾನದೊಂದಿಗೆ ಸಾಂಗವಾಗಿ ನೆರವೇರಿತು. ವೈಭವದ ಮೆರವಣಿಗೆ : ಶ್ರೀ ಬಗಳಾಂಬ ತಾಯಿಗೆ ಸಮರ್ಪಿಸಲಾದ ರಜತ ಪ್ರಭಾವಳಿಯನ್ನು ವಿದ್ಯುಕ್ತವಾಗಿ ಸಕಲ ಮಂಗಳವಾದ್ಯ ಘೋಷಗಳೊಂದಿಗೆ ಸಂಭ್ರಮ ಸಡಗರದಿಂದ ಬರಮಾಡಿಕೊಳ್ಳಲಾಯಿತು. ಪೂರ್ಣಕುಂಭ ಹಿಡಿದು ಸಾಗುವ ಮಹಿಳೆಯರ ದಂಡು, ಚಂಡೆವಾದನ ಮೆರವಣಿಗೆಗೆ ಮೆರಗು ನೀಡಿದವು. ಕುಂದಾಪುರದ ಮಾಸ್ತಿಕಟ್ಟೆಯಿಂದ ಆರಂಭಗೊಂಡ ಮೆರವಣಿಗೆಯು ಸುಂದರವಾಗಿ ಅಲಂಕರಿಸಿದ ತೆರೆದ ವಾಹನದಲ್ಲಿ ರಜತ ಪ್ರಭಾವಳಿಯನ್ನು ಇರಿಸಿ ದೇವಳಕ್ಕೆ ತರಲಾಯಿತು. ದೇವಳವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ಎಲ್ಲಡೆಯೂ ಸಂಭ್ರಮದ ವಾತಾವರಣ ಮೂಡಿದ್ದು, ಭಕ್ತಿ ಭಾವದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡರು. ರಜತ ಪ್ರಭಾವಳಿ ಸಮರ್ಪಣೆ: ಈ ಶುಭ ಸಂದರ್ಭದಲ್ಲಿ ಶ್ರೀ ಬಗಳಾಂಬ ತಾಯಿಗೆ ರಜತ ಪ್ರಭಾವಳಿಯನ್ನು ಸಮರ್ಪಿಸಲಾಯಿತು. ಪ್ರಭಾವಳಿಯಲ್ಲಿ ಎರಡು…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮೀಪದ ಕೊಡೇರಿ ಎಡಮಾವಿನ ಹೊಳೆಯಲ್ಲಿ ಮಹಿಳೆಯೋರ್ವಳ ಶವ ಪತ್ತೆಯಾಗಿದ್ದು ಮೃತರನ್ನು ಮುತ್ತು ದೇವಾಡಿಗ (50) ಎಂದು ಗುರುತಿಸಿಲಾಗಿದೆ. ಶುಕ್ರವಾರ ಸಂಜೆ ಕೊಡೇರಿಯಿಂದ ಮರವಂತೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಲು ನಡೆದುಕೊಂಡು ಬರುತ್ತಿದ್ದ ವೇಳೆ ಕಾಲು ಜಾರಿ ಎಡಮಾವಿನ ಹೊಳೆಗೆ ಬಿದ್ದು ಸ್ಥಳದಲ್ಲಿಯೇ ಮೃತಟ್ಟಿರಬಹುದೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳದಲ್ಲಿ ದೊರೆತ ಘಟನಾ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಬಾಟೆಲ್ ಹಾಗೂ ಮೊಬೈಲ್ ದೊರೆದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
