ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಳೆದ ಫೆ.20 ರಂದು ನಡೆದ ಕುಂದಾಪುರ ತಾಪಂ, ಜಿಪಂ ಚುನವಾವಣೆ ಮತ ಎಣಿಕೆ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜ್‌ನಲ್ಲಿ ಬೆಳಗ್ಗೆ 8 ರಿಂದ ಆರಂಭವಾಗಲಿದೆ. ಕುಂದಾಪುರ ಕ್ಷೇತ್ರದ ಹತ್ತು ಜಿಲ್ಲಾ ಪಂಚಾಯತ್ ಮತ್ತು ಮುವತ್ತೇಳು ತಾಲೂಕ್ ಪಂಚಾಯತಿಗೆ ಚುನಾವಣೆ ನಡೆದಿದ್ದು ತಾಪಂ ಒಟ್ಟು 37 ಸ್ಥಾನಕ್ಕ ಒಟ್ಟು 99 ಅಭ್ಯರ್ಥಿಗಳು ಮತ್ತು ಹತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಟ್ಟು 29 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ವಿರೋಧ ಪಕ್ಷದ ನಾಯಕ ಅನಂತ ಮೋವಾಡಿ, ಮಾಜಿ ಜಿಪಂ ಸದಸ್ಯರಾದ ಹರ್ಕೂರು ಮಂಜಯ್ಯ ಶೆಟ್ಟಿ, ಮದನ್ ಕುಮಾರ್, ತಾರಾನಾಥ ಶೆಟ್ಟಿ, ಬಾಳೆಮನೆ ಸಂತೋಷ್ ಕುಮಾರ್ ಶೆಟ್ಟಿ, ಸಾಧು ಎಸ್.ಬಿಲ್ಲವ, ರಾಜು ದೇವಾಡಿಗ ಅವರ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಎರಡು ಕೊಠಡಿಗಳಿದ್ದು, ೧೫ ಟೇಬಲ್‌ಗಳಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ತಿಜೋರಿಯ ಕೀಲಿಕೈಯೊಂದಿಗೆ ನಾಪತ್ತೆಯಾಗಿದ್ದ ದೇವಳದ ಡಿ ದರ್ಜೆಯ ನೌಕರ ಶಿವರಾಮ್ ಅವರನ್ನು ಕೊಲ್ಲೂರು ಪೊಲೀಸರು ಸೋಮವಾರ ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದು ಪ್ರಕರಣದ ಸತ್ಯಾಸತ್ಯಗಳ ಬಗ್ಗೆ ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ಫೆ.15ರಂದು ದೇವಳದ ತಿಜೋರಿಯ ಕೀಲಿಕೈಯೊಂದಿಗೆ ಹಾಗೂ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣದೊಂದಿಗೆ ನಾಪತ್ತೆಯಾಗಿದ್ದ ಶಿವರಾಮ್, ತಲೆಮರೆಸಿಕೊಂಡಿರುವ ಬಗ್ಗೆ ಅನುಮಾನಗೊಂಡ ದೇವಳದ ಕಾರ್ಯನಿರ್ವಹಣಾಧೀಕಾರಿ ಭಾನುವಾರ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಕೊಲ್ಲೂರು ಪೋಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಆತನ ವಿಚಾರಣೆ ನಡೆಸಿದ್ದು ಆ ಬಗ್ಗೆ ಪೊಲೀಸರು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 2012ರಿಂದಲೂ ಆರೋಪಿ ಶಿವರಾಮ ದೇವಳದ ತಿಜೋರಿ ಕೀಲಿಕೈ ತನ್ನ ಬಳಿ ಇಟ್ಟುಕೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ದೇವಳಕ್ಕೆ 47 ನಾನಾ ನಮೂನೆಯ ಚಿನ್ನಾಭರಣದ ಸೊತ್ತುಗಳು ಹರಕೆಯ ರೂಪದಲ್ಲಿ ಸಂದಾಯವಾಗಿದೆ ಆ ಎಲ್ಲಾ ಸ್ವತ್ತುಗಳನ್ನು ತಿಜೋರಿಯಲ್ಲಿ ಇಡಲಾಗಿದೆ ಎನ್ನಲಾಗಿದೆ. ಆದರೆ ಈಗ ಆ ತಿಜೋರಿಯಲ್ಲಿ…
ಕುಂದಾಪುರ: ಬಾರ್ ಅಸೋಸಿಯೇಶನ್ ಪುತ್ತೂರಿನ ಆಶ್ರಯದಲ್ಲಿ ಉಡುಪಿ, ದಕ್ಷಿಣಕನ್ನಡ, ಕೊಡಗು ಜಿಲ್ಲೆಯನ್ನೊಳಗೊಂಡ ವಕೀಲರಿಗಾಗಿ ಏರ್ಪಡಿಸಿದ ಜಿಲ್ಲಾ ಇಂಟರ್ ಬಾರ್ ಕ್ರಿಕೆಟ್ ಪಂದ್ಯಾ ಕೂಟದಲ್ಲಿ ಭಾಗವಹಿಸಿದ ನ್ಯಾಯವಾದಿ ರಾಘವೇಂದ್ರಚರಣ ನಾವಡ ನಾಯಕತ್ವದ ಕುಂದಾಪುರ ಬಾರ್ ಅಸೋಸಿಯೇಶನ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ತಂಡದ ನಾಯಕ ರಾಘವೇಂದ್ರಚರಣ ನಾವಡ ಅವರಿಗೆ ಸೆಮಿ ಫೈನಲ್‌ವರೆಗೆ ಉತ್ತಮ ನಿರ್ವಹಣೆಗಾಗಿ ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ನೀಡಲಾಯಿತು.
ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಫೆ. 24ರಿಂದ 26ರವರೆಗೆ 1008 ತೆಂಗಿನಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಫೆ. 24ರಂದು ಬೆಳಿಗ್ಗೆ ೮ರಿಂದ ಶ್ರೀಗುರು ಗಣೇಶ ಪ್ರಾರ್ಥನೆ, ಪುಣ್ಯಾಹ, ನಾಂದೀ, ವಿವಿಧ ಮಂತ್ರ ಜಪಾನುಷ್ಠಾನ, ನವಗ್ರಹ ಹವನ, ಬ್ರಹ್ಮಣಸ್ಪತಿ ಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹಾಗೂ ಹವನ, ಧನ್ವಂತರಿ ಹವನ ನಡೆಯಲಿದೆ. ಫೆ. 25ರಂದು ಬೆಳಿಗ್ಗೆ ೮ರಿಂದ ನವಾಕ್ಷರೀ ಮಂತ್ರಜಪ ಹಾಗೂ ಹವನ, ಗಣಸೂಕ್ತ ಹವನ, ರುದ್ರಪಾರಾಯಣ ಹಾಗೂ ರುದ್ರಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತಾ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ ಜರುಗಲಿದೆ. ಫೆ. 26ರಂದು ಬೆಳಿಗ್ಗೆ 8ರಿಂದ 1008 ತೆಂಗಿನ ಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ, ಅಧಿವಾಸ ಹವನ, ಕಲಾ ತತ್ವ ಹವನ, ಶ್ರೀ…
ಕುಂದಾಪುರ: ತಾಲೂಕು ಯುವ ಬಂಟರ ಸಂಘದ ಕ್ರೀಡಾ ಸಂಚಾಲಕರಾಗಿ ರಾಜಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರ ತಾಲೂಕಿನ ಹೈಕಾಡಿಯ ನಿವಾಸಿಯಾಗಿದ್ದು, ಪ್ರಸ್ತುತ ಎಣ್ಣೆಹೊಳೆ ರಾಧಾ ನಾಯಕ್ ಸರಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನೇತೃತ್ವದಲ್ಲಿ ಬಂಟರ ಕ್ರೀಡೋತ್ಸವ-2016 ಎಪ್ರಿಲ್ 16 ಮತ್ತು 17ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹೊಸಮಠ ಸುಕೇಶ್ ಶೆಟ್ಟಿ ತಿಳಿಸಿದ್ದಾರೆ.
ಬೈಂದೂರು: ಹಳಗೇರಿಯಲ್ಲಿ ಅಲ್-ವಫಾ ವೆಲ್‌ಫೇರ್ ಸೋಸೈಟಿ ವತಿಯಿಂದ ಜಾಮೀಯಾ ಮಸೀದಿ ವಠಾರದಲ್ಲಿ ಅಂತರ್ ಜಿಲ್ಲಾಮಟ್ಟದ ನಅತ್ ಸ್ಪರ್ಧೆ ನಡೆಯಿತು. ನಅತ್ ಸ್ಪರ್ಧಾ ವಿಜೇತರು: ಹಿರಿಯರ ವಿಭಾಗದಲ್ಲಿ ಮರುಡೇಶ್ವರದ ಅಬ್ದುಲ್ ರೆಹೆಮಾನ್(ಪ್ರಥಮ), ವಲ್ಕಿ ಗ್ರಾಮದ ಶಬ್ಬೀರ್ ವಲ್ಕಿ(ದ್ವಿತೀಯ), ಫಿರ್‌ದವಾಸ್ ನಗರದ ಸಜ್ಜಾ(ತೃತೀಯ) ಮತ್ತು ಕಿರಿಯರ ವಿಭಾಗದಲ್ಲಿ ಹಳಗೇರಿ ಸಾಯಿಮ್(ಪ್ರಥಮ), ಶಿರೂರಿನ ಮೊಹಮ್ಮದ್ ಸಮ್ಮಾನ್(ದ್ವಿತೀಯ), ಗಂಗೊಳ್ಳಿಯ ಮೊಹಮ್ಮದ್ ಆಸಿಮ್(ತೃತೀಯ) ಬಹುಮಾನ ಪಡೆದರು. ಈ ಸಂದರ್ಭ ಭಟ್ಕಳದ ಖ್ಯಾತಕವಿ ಸಮಿವುಲ್ಲ ಬರ್ಮಾವರ್ ಇವರಿಂದ ನವಾಯಿತಿ ಶಾಯಿರಿ ಮತ್ತು ಕಂಡ್ಲೂರಿನ ಜಾಮೀಯಾ ಝಿಯಾವುಲ್ ಉಲೂಮ್ ವಿದ್ಯಾರ್ಥಿಗಳಿಂದ ನಡೆದ ಬೈತ್‌ಬಾಝಿ ಎಲ್ಲರನ್ನು ಆಕರ್ಷಿಸಿತು. ಕಂಡ್ಲೂರು ಝಿಯಾ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಾಕಾಧ್ಯಕ್ಷ ಮೌಲಾನಾ ಉಬೇದುಲ್ಲ ನದ್ವಿ ಅಧ್ಯಕ್ಷತೆವಹಿಸಿದ್ದರು. ಮೌಲಾನಾ ಶಕೀಲ್ ಅಹ್ಮದ್ ನದ್ವಿ, ಉಡುಪಿ ಜಿಲ್ಲಾ ವಕ್ಷ್‌ಬೋರ್ಡಿನ ಚೇರ್‌ಮನ್ ನಾಕ್ವಾ ಯಾಹ್ಯಾ, ಹಳಗೇರಿ ಶಬ್ಬೀರ್ ಖಾಝಿ, ಕಿರಿಮಂಜೇಶ್ವರ ಮಿಲ್ಲತ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಜಮೀರ್ ಅಹ್ಮದ್ ರಶ್ದಿ, ಹಿರಿಯರಾದ ಜನಾಬ್ ಬುಡಾನ್ ಸಾಹೇಬ್ ಇವರುಗಳನ್ನು ಸನ್ಮಾನಿಸಲಾಯಿತು. ಮೌಲಾನಾ ಅಬ್ದುಲ್ ಕರೀಮ್…
ಕುಂದಾಪುರ: ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು, ಪ್ರಸಾದ್ ನೇತ್ರಾಲಯ ಉಡುಪಿ, ಗ್ರಾಮ ಪಂಚಾಯತ್ ಕಾವ್ರಾಡಿ, ರೋಟರಿ ಕ್ಲಬ್ ಅಂಪಾರು ಇವರ ಜಂಟಿ ಆಶ್ರಯದಲ್ಲಿ ಚರ್ಮರೋಗ ಮತ್ತು ಕಣ್ಣಿನ ಪೊರೆ ಹಾಗೂ ಕಣ್ಣಿನ ತಪಾಸಣೆ ಶಿಬಿರ ಕಂಡ್ಲೂರು ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಇತ್ತೀಚಿಗೆ ನಡೆಯಿತು. ಅಂಪಾರು ರೋಟರಿ ಅಧ್ಯಕ್ಷ ಸಂತೋಷ್‌ಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ರೋಟರಿ ವಲಯ ಸೇನಾನಿ ಶ್ಯಾಮರಾಜ್ ಭಟ್ ಶಿಬಿರ ಉದ್ಘಾಟಿಸಿದರು. ಚರ್ಮರೋಗ ತಜ್ಞ ಡಾ. ಉಮೇಶ್ ನಾಯಕ್, ರೋಟರಿ ಕಾರ್ಯದರ್ಶಿ ಕಾಳಿಂಗ ಶೆಟ್ಟಿ ಉಪಸ್ಥಿತರಿದ್ದರು. ಕಂಡ್ಲೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಲತಾ ನಾಯಕ್ ಸ್ವಾಗತಿಸಿ, ವಂದಿಸಿದರು. ಪರಿಸರದ ಸುಮಾರು ೩೫೦ಕ್ಕೂ ಹೆಚ್ಚು ಫಲಾನುಭವಿಗಳು ಸಿಬಿರದ ಸದುಪಯೋಗ ಪಡೆದರು.
ಗಂಗೊಳ್ಳಿ: ಹಿಂದು ಜಾಗರಣೆ ವೇದಿಕೆ ಗಂಗೊಳ್ಳಿ ಇವರ ಆಶ್ರಯದಲ್ಲಿ ೫೦೫ ಲಕಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಯೋಧ್ಯೆಯಲ್ಲಿ ಅತೀ ಶೀಘ್ರದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ, ಕರಾವಳಿ ಜಿಲ್ಲೆಯನ್ನು ಕಾಡುತ್ತಿರುವ ಮತ್ಸ್ಯಕ್ಷಾಮದ ನಿವಾರಣೆಗಾಗಿ, ಗ್ರಾಮದ ಸುಭಿಕ್ಷೆಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ೧೩ ಲಕ್ಷ ಲಿಖಿತ ಶ್ರೀ ರಾಮನಾಮ ತಾರಕ ಜಪಯಜ್ಞ ಕಾರ್ಯಕ್ರಮದ ಪ್ರಯುಕ್ತ “ಯಜ್ಞ ಸಂಕಲ್ಪ” ಧಾರ್ಮಿಕ ಕಾರ್ಯಕ್ರಮ ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ್ವರ-ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು. ಪುರೋಹಿತರಾದ ವೇದಮೂರ್ತಿ ರವೀಶ ಭಟ್ ಮಾರ್ಗದರ್ಶನದಲ್ಲಿ ಯಜ್ಞ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಆರ್ಕಾಟಿಯವರ ಉಪಸ್ಥಿತಿಯಲ್ಲಿ ಶ್ರೀ ರಾಮ ನಾಮತಾರಕದ ಲಿಖಿತ ಜಪ ಯಜ್ಞದ ಯಜ್ಞ ಸಂಕಲ್ಪವನ್ನು ಮಾಡಿ ಶ್ರೀದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಗಂಗೊಳ್ಳಿ ಹಿಂದು ಜಾಗರಣೆ ವೇದಿಕೆಯ ಸಂಚಾಲಕ ರತ್ನಾಕರ ಗಾಣಿಗ, ಸಂಘಟನೆ ಪ್ರಮುಖರಾದ ನವೀನ ಬಂದರ್, ಯಶವಂತ ಖಾರ್ವಿ ಬೇಲಿಕೇರಿ, ನಿತ್ಯಾನಂದ ಮ್ಯಾಂಗನೀಸ್ ರೋಡ್, ಉದಯ ಪೂಜಾರಿ…
ಕುಂದಾಪ್ರ ಡಾಟ್ ಕಾಂ. ಕನ್ನಡದ ಪ್ರಸಿದ್ಧ ಶೋ ’ಮಜಾ ಟಾಕೀಸ್’ನಲ್ಲಿ ಕುಂದಾಪುರದ ಮೂರು ಮುತ್ತುಗಳು ಖ್ಯಾತಿಯ ರೂಪಕಲಾ ತಂಡ ಭಾಗವಹಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಶೋನಲ್ಲಿ ಅವರ ನಾಟಕದ ಆಯ್ದ ಎರಡು ದೃಷ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದ್ದಾರಲ್ಲದೇ, ಸ್ವತಃ ಸೃಜನ್ ಲೋಕೇಶ್ ಮನತುಂಬಿ ಹೊಗಳಿದ್ದಾರೆ. ನೋಡಿ ಎಂಜಾಯ್ ಮಾಡಿ. ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಕುಂದಾಪ್ರ ಡಾಟ್ ಕಾಂ ವರದಿ ಕೊಲ್ಲೂರು: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಶ್ರೀ ಮೂಕಾಂಬಿಕಾ ದೇವಸ್ಥಾನದ ಗುಮಾಸ್ತನೊಬ್ಬ ಖಜಾನೆಯ ಬೀಗದ ಕೈಯೊಂದಿಗೆ ನಾಪತ್ತೆಯಾಗಿರುವ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿರುವ ಬೆನ್ನಲ್ಲೇ, ಸಾರ್ವಜನಿಕರು ದೇವರಿಗೆ ಸಲ್ಲಿರುವ ಹರಕೆಯ ವಸ್ತುಗಳ ಭದ್ರತೆಯ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದೆ. ಇದರೊಂದಿಗೆ ಕಾರ್ಯನಿವಹಣಾಧಿಕಾರಿಗಳು ಮತ್ತು ಇತರೇ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ದೇವಳದ ವಿಚಾರ ಅನಗತ್ಯವಾಗಿ ಚರ್ಚಾಸ್ಪದವಾಗುತ್ತಿರುವ ಬಗ್ಗೆ ಭಕ್ತರು ಹಾಗೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೊಲ್ಲೂರು ದೇವಳದ ಒಳಗೆ ಒಂದನೇ ನಂಬರಿನ ಸೇವಾ ಕೌಂಟರ್‌ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಶಿವರಾಮ ಮಡಿವಾಳ ಎಂಬುವವರು ಕಳೆದ ಆರು ದಿನಗಳಿಂದ ಸೇವೆಗೆ ನಾಪತ್ತೆಯಾಗಿರುವುದು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಯಾರ ಅನುಮತಿಯೂ ಪಡೆಯದೇ ಏಕಾಏಕಿ ಕರ್ತವ್ಯಕ್ಕೆ ಗೈರು ಹಾಜರಾಗಿ ತಲೆಮರೆಸಿಕೊಂಡಿರುವ ಸೇವಾ ಕೌಂಟರ್ ಖಜಾನೆಯ ಕೀಲಿಕೈಯನ್ನು ಕೊಂಡೊಯ್ದಿರುವುದು ಅನುಮಾನಗಳಿಗೆ ಆಸ್ಪದ ನೀಡಿದೆ. ಕುಂದಾಪ್ರ ಡಾಟ್ ಕಾಂ ವರದಿ ಆದದ್ದೇನು? ಏಕಾಏಕಿ ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿರುವ ಶಿವರಾಮ, ತನಗೆ ಮಧುಮೇಹ…
