Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಚಿನ್ನಾಭರಣ ಕಳವು ಪ್ರಕರಣದ ತನಿಕೆ ಮುಂದುವರಿದ್ದು ಸುಮಾರು 60ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವುದು ಸಷ್ಟವಾಗಿದೆ. ಪ್ರಕರಣದ ಆರೋಪಿ ಶಿವರಾಮ ಮಡಿವಾಳನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಆರೋಪಿಯ ತನಿಕೆ ನಡೆಸುತ್ತಿದ್ದು ಪ್ರಕರಣದ ಒಂದೊಂದೇ ಮಾಹಿತಿಗಳು ಬೆಳಕಿಗೆ ಬರುತ್ತಿದೆ. [quote font_size=”16″ bgcolor=”#ffffff” bcolor=”#dd9933″ arrow=”yes” align=”right”]* ಕೊಲ್ಲೂರು ದೇವಳದ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿಚಾರಣೆ ಪ್ರಗತಿಯಲ್ಲಿದ್ದು, ಸ್ವಲ್ಪ ಪ್ರಮಾಣದ ಒಡವೆಗಳನ್ನು ಈಗಾಗಲೇ ವಶಪಡೆಡಿದ್ದು ಉಳಿದವುಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟಿರುವ ಬಗ್ಗೆ ಆಪಾದಿತನಿಂದ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲಿಯೇ ಅವುಗಳನ್ನು ಸ್ವಾದೀನಪಡಿಸಿಕೊಳ್ಳುವುದರೊಂದಿಗೆ ಈ ಕೃತ್ಯದಲ್ಲಿ ಆತನೊಂದಿಗೆ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಕೆ ನಡೆಸಲಾಗುತ್ತಿದೆ. – ಕೆ. ಅಣ್ಣಾಮಲೈ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.[/quote] ದೇವಳದ ತಿಜೋರಿಯಲ್ಲಿದ್ದ ಒಟ್ಟು 48 ಬಗೆಯ ಒಡವೆಗಳ ಪೈಕಿ ಒಟ್ಟು 9 ನಮೂನೆಯ…

Read More

ಕುಂದಾಪುರ: ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪಕ್ಷ ನಿರೀಕ್ಷಿತ ಗೆಲುವು ಸಾಧಿಸದೆ ತೀವ್ರ ಮುಖಭಂಗ ಅನುಭವಿಸಿರುವ ಹಿನ್ನೆಲೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ಪ್ರಸಿದ್ಧ ಶ್ರೀ ಮೂಕಾಂಬಿಕಾ ದೇವಳದ ಆಭರಣ ಕಳವು ಪ್ರಕರಣ ನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಚಿನ್ನಾಭರಣ ಕಳವುಗೈದ ಘಟನೆ ಬಯಲಿಗೆ ಬರುತ್ತಿದ್ದಂತೆ ತಿಜೋರಿಯ ಕೀಲಿಕೈಯೊಂದಿಗೆ ಕಾಣಿಯಾಗಿದ್ದ ಆಪಾದಿತ ದೇವಳದ ಸಿಬ್ಬಂಧಿ ಶಿವರಾಮ ಮಡಿವಾಳ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಸಾರ್ವಜನಿಕರ ಸಮ್ಮುಖದಲ್ಲಿಯೇ ದೇವಳದ ತಿಜೋರಿಯನ್ನು ತೆರೆದು ನೋಡಿದಾಗಿ ಕಳವಾಗಿರುವ ಚಿನ್ನಾಭರಣಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿದೆ. ಶಿವರಾಮ ಮಡಿವಾಳರ ಕೈಗೆ ತಿಜೋರಿ ಕೀಲಿಕೈ ದೊರೆತಾಗಿನಿಂದ ಇಲ್ಲಿಯವರೆಗೆ ದೇವಳಕ್ಕೆ ಹರಕೆಯ ರೂಪದಲ್ಲಿ ಸಂದಾಯವಾಗಿರುವ 47 ವಿವಿಧ ಬಗೆಯ ಚಿನ್ನಾಭರಣ ಬಗ್ಗೆ ರಶೀದಿಯಲ್ಲಿ ದಾಖಲಾಗಿದೆ. ಆದರೆ ತಿಜೋರಿ ತೆರೆದಾಗ 12 ಬಗೆಯ ಚಿನ್ನಾಭರಣದ ಹಾಗೂ ಇತರೆ ಬೆಳ್ಳಿಯ ಆಭರಣಗಳು ಮಾತ್ರ ದೊರೆತಿವೆ. ಉಳಿದ ಆಭರಣಗಳು ಖೋತಾ ಆಗಿರುವುದು ಸ್ಪಷ್ಟವಾಗಿದೆ. ಹಲವೆಡೆ ಸಾಲ ಮಾಡಿಕೊಂಡಿರುವ ಶಿವರಾಮ್, ಸಾಲ ತೀರಿಸಲು ದೇವಳದ ಚಿನ್ನಾಭರಣಗಳನ್ನೇ ಒಂದೊಂದಾಗಿ ಎಗರಿಸಿ ಬ್ಯಾಂಕಿನಲ್ಲಿ ಅಡವಿಟ್ಟಿರು ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಹಲವರು ಭಾಗಿಯಾಗಿರುವ…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ,ಫೆ.24: ಇಲ್ಲಿನ ಕೋಟೇಶ್ವರ ಕೈಗಾರಿಕಾ ವಲಯದಲ್ಲಿರುವ ದಾಮೋದರ ಕೆಮಿಕಲ್ ಇಂಡಸ್ಟ್ರಿಗೆ ಬೆಂಕಿ ತಗುಲಿ ಇಡಿ ಕಾರ್ಖಾನೆಯ ಭಸ್ಮಗೊಂಡ ಘಟನೆ ಇಂದು ಬೆಳಿಗ್ಗೆ 11:30ರ ಸುಮಾರಿಗೆ ನಡೆದಿದೆ.  ಕುಂದಾಪ್ರ ಡಾಟ್ ಕಾಂ ವರದಿ  ಘಟನೆಯ ವಿವರ: ವಾಹನದ ಬ್ರೇಕ್ ಲೈನರ್‌ಗೆ ಬಳಸುವ ಆಯಿಲ್ ತಯಾರಿಸುವ ಕಾರ್ಖಾನೆಯ ಗೋಡನ್‌ನಲ್ಲಿ ಸುಮಾರು ೪೦ ಟನ್ ಆಯಿಲ್ ಶೇಖರಿಸಿಡಲಾಗಿತ್ತು. ಒಂದೇ ಸಮನೆ ಏರಿದ ಉಷ್ಟಾಂಶದಿಂದಾಗಿ ಆಯಿಲ್ ಟ್ಯಾಂಕಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ. ಏಕಾಏಕಿ ಬೆಂಕಿಯ ಧಗೆಯನ್ನು ಗಮನಿಸಿ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂಧಿಗಳಿಗೆ ಸುದ್ದಿ ಮುಟ್ಟಿಸಲಾಯಿತು. ಘಟನೆಯಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು. ದಾಮೋದರ ಕೆಮಿಕಲ್ ಇಂಡಸ್ಟ್ರೀಸ್ ಯಘ್ನೇಶ್ ಭಟ್ ಅವರ ಒಡೆತನಕ್ಕೆ ಸೇರಿದ್ದಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.  ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಮಾಹಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪುರಸಭೆ ಅಭಿವೃದ್ಧಿಗೆ ದುಡ್ಡಿಲ್ಲ ಅಂತ್ರಲ್ಯಾ.. ಹಂಗಂದ್ರೆ ಹ್ಯಾಂಗೆ. ನಮ್ ಕಾಲದ್ಹಾಗೆ ಅಭಿವೃದ್ಧಿ ಮಾಡ್ಲಿಲ್ಯಾ? ನಮ್ ಕಿಸಿಗ್ ಹಾಯ್ಕಂಬುಕೆ ದುಡ್ಡ್ ಕೇಂತಿಲ್ಲ. ಪುರಸಭೆ ಅಭಿವೃದ್ಧಿಗೆ ಕೇಂತಿಪ್ಪುದ್. ನಿಮ್ದ್ ಸಚಿವರಿದ್ರ್, ಸರಕಾರ ಇತ್. ಹಾಂಗಿದ್ರೂ ಅನುದಾನ ಕೇಂಬುಕ್ ಹಿಂದಾಯ್ಕಂಬ್ದ್ ಯಾಕೆ? ನಮ್ ಅಧಿಕಾರ ಇಪ್ಪತಿಗೆ ಪುರಸಭೆಗೆ ಮಸ್ತ್ ಅನುದಾನ ತಂದಿತ್. ಅನುದಾನ್ ತಂದಿತ್ ಅಂದ್ಹೇಳಿ ಹೇಳ್ತ್ರಿ ಬಿಟ್ರೆ ಏಷ್ಟ್ ಅಂದೇಳಿ ಹೇಳಿ ಹೇಳುದಿಲ್ಲೆ. ೫ ವರ್ಷದಲ್ಲ್ ೫ ಕೋಟಿ ಹಣ ತಂದ್ಕಂಡ್ ಅನುದಾನ ತಂದಿತ್ ಅಂತ್ರಿ. ಆಗ ನಿಮ್ದೇ ಸರ್ಕಾರ ಇದ್ದಿತ್ ಆರೂ ಜಾಸ್ತಿ ಅನುದಾನ ತಪ್ಪುಕ್ ಆಯಿಲ್ಲೆ ನಿಮ್ಗೆ. ನಮ್ ಸರ್ಕಾರ ಬಂದ್ ಎರ್ಡೂವರೇ ವರ್ಷ ಆಯ್ತ್ ಅಷ್ಟೇ. ಇನ್ನು ಅನುದಾನ ಕೊಡ್ತೆ ಅಂದೇಳಿ ಉಸ್ತುವಾರಿ ಸಚಿವ್ರ್ ಹೇಳಿರ್. ಇನ್ನೂ ಎರ್ಡೂವರಿ ವರ್ಷ ಇತ್. ನಾವು ಅನುದಾನ್ ತಕಬತ್ತ್. ಅಭಿವೃದ್ಧಿ ಮಾಡಿ ತೋರ‍್ಸತ್ ಕಾಣಿ. ಕುಂದಾಪುರ ರಿಂಗ್ ರಸ್ತೆಯ ಅಭಿವೃದ್ಧಿಯಗಾಗಿ ಪುರಸಭೆ ಡಾ. ವಿ.ಎಸ್. ಆಚಾರ್ಯ…

Read More

ಕುಂದಾಪುರ: ಕಾಕತಾಳಿಯವೋ ಏನೋ. ಫೆ.23ರ ಬೆಳಿಗ್ಗೆ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ ಅವರ ಮನೆಯಲ್ಲಿ ಅರಳಿದ ಕಮಲ ಗೆಲುವಿನ ಮುನ್ಸೂಚನೆ ನೀಡಿತ್ತು. ನಾಲ್ಕು ಜಿಪಂ ಸೀಟುಗಳ ನಿರೀಕ್ಷೆಯಲ್ಲಿದ್ದ ಅಧ್ಯಕ್ಷರಿಗೆ  ಅಂದು ಒಂದು ಕ್ಷೇತ್ರ ಬೋನಸ್ ದೊರೆತಿತ್ತು. ಹದಿನೈದು ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿಯೂ ಕಮಲ ಅರಳಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಳೆದ ಫೆ.20 ರಂದು ನಡೆದ ಕುಂದಾಪುರ ತಾಪಂ, ಜಿಪಂ ಚುನವಾವಣೆ ಮತ ಎಣಿಕೆ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜ್‌ನಲ್ಲಿ ಬೆಳಗ್ಗೆ 8 ರಿಂದ ಆರಂಭವಾಗಲಿದೆ. ಕುಂದಾಪುರ ಕ್ಷೇತ್ರದ ಹತ್ತು ಜಿಲ್ಲಾ ಪಂಚಾಯತ್ ಮತ್ತು ಮುವತ್ತೇಳು ತಾಲೂಕ್ ಪಂಚಾಯತಿಗೆ ಚುನಾವಣೆ ನಡೆದಿದ್ದು ತಾಪಂ ಒಟ್ಟು 37 ಸ್ಥಾನಕ್ಕ ಒಟ್ಟು 99 ಅಭ್ಯರ್ಥಿಗಳು ಮತ್ತು ಹತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಟ್ಟು 29 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ವಿರೋಧ ಪಕ್ಷದ ನಾಯಕ ಅನಂತ ಮೋವಾಡಿ, ಮಾಜಿ ಜಿಪಂ ಸದಸ್ಯರಾದ ಹರ್ಕೂರು ಮಂಜಯ್ಯ ಶೆಟ್ಟಿ, ಮದನ್ ಕುಮಾರ್, ತಾರಾನಾಥ ಶೆಟ್ಟಿ, ಬಾಳೆಮನೆ ಸಂತೋಷ್ ಕುಮಾರ್ ಶೆಟ್ಟಿ, ಸಾಧು ಎಸ್.ಬಿಲ್ಲವ, ರಾಜು ದೇವಾಡಿಗ ಅವರ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಮತ ಏಣಿಕೆ ಕೇಂದ್ರದಲ್ಲಿ ಎರಡು ಕೊಠಡಿಗಳಿದ್ದು, ೧೫ ಟೇಬಲ್‌ಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ತಿಜೋರಿಯ ಕೀಲಿಕೈಯೊಂದಿಗೆ ನಾಪತ್ತೆಯಾಗಿದ್ದ ದೇವಳದ ಡಿ ದರ್ಜೆಯ ನೌಕರ ಶಿವರಾಮ್ ಅವರನ್ನು ಕೊಲ್ಲೂರು ಪೊಲೀಸರು ಸೋಮವಾರ ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದು ಪ್ರಕರಣದ ಸತ್ಯಾಸತ್ಯಗಳ ಬಗ್ಗೆ ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ. ಫೆ.15ರಂದು ದೇವಳದ ತಿಜೋರಿಯ ಕೀಲಿಕೈಯೊಂದಿಗೆ ಹಾಗೂ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣದೊಂದಿಗೆ ನಾಪತ್ತೆಯಾಗಿದ್ದ ಶಿವರಾಮ್, ತಲೆಮರೆಸಿಕೊಂಡಿರುವ ಬಗ್ಗೆ ಅನುಮಾನಗೊಂಡ ದೇವಳದ ಕಾರ್ಯನಿರ್ವಹಣಾಧೀಕಾರಿ ಭಾನುವಾರ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಕೊಲ್ಲೂರು ಪೋಲೀಸರು ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಆತನ ವಿಚಾರಣೆ ನಡೆಸಿದ್ದು ಆ ಬಗ್ಗೆ ಪೊಲೀಸರು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. 2012ರಿಂದಲೂ ಆರೋಪಿ ಶಿವರಾಮ ದೇವಳದ ತಿಜೋರಿ ಕೀಲಿಕೈ ತನ್ನ ಬಳಿ ಇಟ್ಟುಕೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ದೇವಳಕ್ಕೆ 47 ನಾನಾ ನಮೂನೆಯ ಚಿನ್ನಾಭರಣದ ಸೊತ್ತುಗಳು ಹರಕೆಯ ರೂಪದಲ್ಲಿ ಸಂದಾಯವಾಗಿದೆ ಆ ಎಲ್ಲಾ ಸ್ವತ್ತುಗಳನ್ನು ತಿಜೋರಿಯಲ್ಲಿ ಇಡಲಾಗಿದೆ ಎನ್ನಲಾಗಿದೆ. ಆದರೆ ಈಗ ಆ ತಿಜೋರಿಯಲ್ಲಿ…

Read More

ಕುಂದಾಪುರ: ಬಾರ್ ಅಸೋಸಿಯೇಶನ್ ಪುತ್ತೂರಿನ ಆಶ್ರಯದಲ್ಲಿ ಉಡುಪಿ, ದಕ್ಷಿಣಕನ್ನಡ, ಕೊಡಗು ಜಿಲ್ಲೆಯನ್ನೊಳಗೊಂಡ ವಕೀಲರಿಗಾಗಿ ಏರ್ಪಡಿಸಿದ ಜಿಲ್ಲಾ ಇಂಟರ್ ಬಾರ್ ಕ್ರಿಕೆಟ್ ಪಂದ್ಯಾ ಕೂಟದಲ್ಲಿ ಭಾಗವಹಿಸಿದ ನ್ಯಾಯವಾದಿ ರಾಘವೇಂದ್ರಚರಣ ನಾವಡ ನಾಯಕತ್ವದ ಕುಂದಾಪುರ ಬಾರ್ ಅಸೋಸಿಯೇಶನ್ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ತಂಡದ ನಾಯಕ ರಾಘವೇಂದ್ರಚರಣ ನಾವಡ ಅವರಿಗೆ ಸೆಮಿ ಫೈನಲ್‌ವರೆಗೆ ಉತ್ತಮ ನಿರ್ವಹಣೆಗಾಗಿ ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಯನ್ನು ನೀಡಲಾಯಿತು.

Read More