ಕುಂದಾಪುರ: ಕೋಟೇಶ್ವರದ ಏ ಒನ್ಸ್ ಸ್ಪೋಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ಜರುಗಿದ ಅಂತರ್ ಜಿಲ್ಲಾ ಚೆಸ್ ಪಂದ್ಯಾಟದಲ್ಲಿ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಶ್ ಶೇರೆಗಾರ್ ಅಗ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. 8 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಶಮಂತ್ ಜಿ.ಭಟ್ ಮಂಗಳೂರು, ದ್ವಿತೀಯ-ಮಿಲಿಂಡ್ ಶೆಟ್ಟಿ ಲಿಟ್ಲ್ರಾಕ್ ಬ್ರಹ್ಮಾವರ, ತೃತೀಯ-ಸಾರ್ಥಕ್ ಎ.ದೇವಾಡಿಗ ಉಡುಪಿ. ಬಾಲಕಿಯರ ವಿಭಾಗ: ಪ್ರಥಮ-ಜೆತ್ರಾಮಯ್ಯ ಬ್ರಹ್ಮಾವರ, ದ್ವಿತೀಯ-ಮಿಥಾಲಿ ಶೆಟ್ಟಿ ಬ್ರಹ್ಮಾವರ, ತೃತೀಯ-ಗೌತಮ್ ಕಾಮತ್ ಬ್ರಹ್ಮಾವರ. 12 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಅಶುತೋಷ್ ಎಸ್.ಶರ್ಮ ಮಂಗಳೂರು, ದ್ವಿತೀಯ-ಜಾಗೃತ್ ಎ.ದೇವಾಡಿಗ ಉಡುಪಿ, ತೃತೀಯ-ಚಿನ್ಮಯ್ ಮಣಿಪಾಲ. ಬಾಲಕಿಯರ ವಿಭಾಗ: ಪ್ರಥಮ-ಸ್ವಸ್ತಿ ಭಟ್ ಮಂಗಳೂರು, ದ್ವಿತೀಯ-ಸಿರಿ ಎಂ ಭಟ್ ಮಂಗಳೂರು, ತೃತೀಯ-ಅಪರ್ಣಾ ಪ್ರಭು ಮಂಗಳೂರು. 15 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಮನೀಶ್ ಜಿ.ಶಿರಿಯಾನ್ ಕುಂದಾಪುರ, ದ್ವಿತೀಯ-ಪೂರ್ಣೇಶ್ ಸಿ.ಮೊಗವೀರ ಕುಂದಾಪುರ, ತೃತೀಯ-ಶತ್ರುಘ್ನ ಧೀರು ಮಂಗಳೂರು. ಬಾಲಕಿಯರ ವಿಭಾಗ: ಪ್ರಥಮ-ಆಶ್ವಿಜಾ ಭರಣ್ಯ ಮಂಗಳೂರು, ದ್ವಿತೀಯ-ಹನೀಹ ಜೈನಾಬ್ ಮಂಗಳೂರು, ತೃತೀಯ- ಅಶ್ವಿನಿ ಕೆ.ಕುಂದಾಪುರ. ಮುಕ್ತ ವಿಭಾಗ: ಪ್ರಥಮ-ಮನೀಶ್ ಶೇರೆಗಾರ್ ಸಂತೆಕಟ್ಟೆ, ದ್ವಿತೀಯ-ಎಸ್.ಚಂದನ್ ಶರ್ಮ…
Author: ನ್ಯೂಸ್ ಬ್ಯೂರೋ
ಕುಂದಾಪುರ: ವಂಡ್ಸೆ ಗ್ರಾಮದ ಆತ್ರಾಡಿಯಲ್ಲಿ ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಡಿ.25ರಂದು ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ರಾಜೀವ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ವಿಜಯ ಬ್ಯಾಂಕ್ನ ನಿವೃತ್ತ ಡಿಜಿಎಂ ನಾರಾಯಣ ಶೆಟ್ಟಿ, ಭಾರತ ಸರ್ಕಾರದ ಅಂಕೆಸಂಖ್ಯೆ ವಿಭಾಗದ ನಿವೃತ್ತ ನಿರ್ದೇಶಕ ಬಿ.ಎನ್.ಶೆಟ್ಟಿ, ಅಂಕೆಸಂಖ್ಯೆ ವಿಭಾಗದ ನಿವೃತ್ತ ಜಂಡಿ ನಿರ್ದೇಶಕ ಬಿ.ಸುಭಾಶ್ಚಂದ್ರ ಶೆಟ್ಟಿ, ಇಂಜಿನಿಯರ್ ಬಾಲಕೃಷ್ಣ ಶೆಟ್ಟಿ ಆತ್ರಾಡಿ, ಎನ್.ಸೀತಾರಾಮ ಶೆಟ್ಟಿ ನೆಂಪು, ಹುಬ್ಬಳ್ಳಿಯ ಇಂಜಿನಿಯರ್ ಬಿ.ಪ್ರೇಮಾನಂದ ಶೆಟ್ಟಿ ಬಗ್ವಾಡಿ, ಹಕ್ಲಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಾ.ಕಿಶೋರ್ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಹೆಗ್ಗುಂಜೆ, ಸತೀಶಚಂದ್ರ ಪ್ರಕಾಶ್ ಶೆಟ್ಟಿ ಆತ್ರಾಡಿ, ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ, ಸಿವಿಎಲ್ ಗುತ್ತಿಗೆದಾರ ರುದ್ರಯ್ಯ ಆಚಾರ್ಯ, ವಸಂತಿ ರಾಜ್ಗೋಪಾಲ ಶೆಟ್ಟಿ, ಶಾಲೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್, ಪೋಷಕ ಸಂಘದ ಅಧ್ಯಕ್ಷೆ ಅನಿತಾ ಆರ್.ಹೆಬ್ಬಾರ್, ಉಪಾಧ್ಯಕ್ಷೆ ದೀಪಾ, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿ,…
ಕುಂದಾಪುರ: ಜ್ಞಾನ ವಿಕಾಸ ಯೋಗ ಕೇಂದ್ರ ಬ್ರಹ್ಮಾವರ ಮತ್ತು ವಿದ್ಯಾರಂಗ ಮಿತ್ರ ಮಂಡಳಿ ಖಾರ್ವಿಕೇರಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ತರಬೇತಿ ಕಾರ್ಯಕ್ರಮದ ಕುಟುಂಬೋತ್ಸವ ಕಾರ್ಯಕ್ರಮ ಡಿ.೨೦ರಂದು ಕುಂದಾಪುರದ ವಡೇರಹೋಬಳಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಂಡಾರ್ಕಾಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಜಿ.ಎಸ್. ಹೆಗಡೆ ಅವರು, ಇಂದಿನ ದಿನಗಳಲ್ಲಿ ಜನರ ಮನಸ್ಸನ್ನು ಹಾಳು ಮಾಡುವ ಆಧುನಿಕ ಮಾಧ್ಯಮಗಳಿಂದ ರಕ್ಷಿಸಿಕೊಳ್ಳಲು ಎಲ್ಲರೂ ಯೋಗ ವಿದ್ಯೆಯನ್ನು ಪಡೆಯಬೇಕು ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಆದ ಮೋಹನದಾಸ ಶೆಣೈ ನೆರವೇರಿಸಿದರು. ಶಾಸಕರ ಮಾದರಿ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ ಶೆಟ್ಟಿ, ಮಹೇಶ ಪಟೇಲ್ ಉಪಸ್ಥಿತರಿದ್ದರು. ಮುಖ್ಯ ಯೋಗ ತರಬೇತುದಾರಾದ ಮುಕ್ತಾ ಮಾತಾಜೀ ಆಶೀರ್ವಚನ ನೀಡಿದರು. ಹಿರಿಯ ಯೋಗ ತರಬೇತುದಾರರಾದ ನಿರುಪಮಾ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ ಶೆಟ್ಟಿ ಸ್ವಾಗತಿಸಿದರು. ನಿಶಾ ವಂದಿಸಿದರು. ಮುಲ್ಕಿ ವಿಜಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ…
ಗಂಗೊಳ್ಳಿ: ಇತ್ತೀಚಿಗೆ ಹಾಂಗ್ಕಾಂಗ್ನಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಸಹಿತ ಅನೇಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ವಿಜೇತ ಪವರ್ ಲಿಫ್ಟರ್, ಗಂಗೊಳ್ಳಿ ಕೆನರಾ ಬ್ಯಾಂಕಿನ ಉದ್ಯೋಗಿ ಜಿ.ವಿ. ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಬೈಲೂರು ರಾಮರಾವ್ ಶ್ಯಾನುಭಾಗ್ ರಂಗಮಂಟಪದಲ್ಲಿ ಇತ್ತೀಚಿಗೆ ಜರಗಿದ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ನ ೪೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕುಂದಾಪುರದ ಪ್ರಸಿದ್ಧ ವಕೀಲ ರವಿಕಿರಣ್ ಮುರ್ಡೇಶ್ವರ ಅವರು ಸನ್ಮಾನಿಸಿ ಗೌರವಿಸಿದರು. ಕಲರ್ಸ್ ಕನ್ನಡವಾಹಿನಿಯ ಕಿರುತೆರೆ ನಟಿ ನೀತಾ ಅಶೋಕ್, ಸಂಘದ ಹಿರಿಯ ಸದಸ್ಯ ಎಚ್.ಗಣೇಶ ಕಾಮತ್, ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಎಂ.ಪಡಿಯಾರ್, ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಕಾರ್ಯದರ್ಶಿ ನಾಗರಾಜ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ದೂರದೃಷ್ಟಿಯಿಂದ ಹುಟ್ಟಿಕೊಂಡ ಈ ವಿದ್ಯಾ ಸಂಸ್ಥೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ: ಸಚಿವ ವಿನಯ ಕುಮಾರ್ ಸೊರಕೆ ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ 110 ನೇ ವಾರ್ಷಿಕಾಚರಣೆಯ ಪೂರ್ವಭಾವಿಯಾಗಿ ‘ಲಾಂಛನ’ ಅನಾವರಣ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ಜರುಗಿತು. ಲಾಂಛನ ಅನಾವರಣಗೊಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ ದೂರದೃಷ್ಟಿತ್ವದಿಂದ ಹುಟ್ಟಿಕೊಂಡ ಈ ವಿದ್ಯಾಸಂಸ್ಥೆಯು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಲಿ. ಇಡೀ ಸಮುದಾಯದ ಕಾರ್ಯತತ್ಪರತೆಯನ್ನು ಗುರುತಿಸುವ ಕಾರ್ಯಕ್ರಮವಾಗಿದೆ ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಸೈಯದ್ ಬ್ಯಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 1906 ರಿಂದ ಆರಂಭಗೊಂಡು 2016 ನೇ ವರ್ಷದಲ್ಲಿ 110 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸಮುದಾಯದ, ಸಮಾಜದ, ವಿವಿಧ ಕಾಳಜಿಗಳನ್ನು ಅಭಿವ್ಯಕ್ತಗೊಳಿಸುವ ಕಾರ್ಯಕ್ರಮಗಳನ್ನು ವರ್ಷವಿಡೀ ತಿಂಗಳಿಗೊಂದರಂತೆ ಹಮ್ಮಿಕೊಳ್ಳಲಾಗಿದೆ ಎಂದರು ಮಾಜಿ ಶಾಸಕರಾದ ಯು. ಆರ್. ಸಭಾಪತಿ, ಟ್ರಸ್ಟನ ಸದಸ್ಯ ಅಬ್ದುಲ್ ರೆಹಮಾನ್ ಬ್ಯಾರಿ, ಅಶ್ರಫ್ ಬ್ಯಾರಿ, ಮಝರ್ ಬ್ಯಾರಿ, ಹಿರಿಯರಾದ ಶೇಖ್…
ಬೈಂದೂರು: ಧರ್ಮವನ್ನು ತಿಳಿಯುತ್ತಲೇ ಆಚರಣೆಯಲ್ಲಿಯೂ ತರಬೇಕು. ಸಮರ್ಪಣಾ ಮನೋಭಾವದಿಂದ ಕಾರ್ಯತತ್ವರಾಗುವುದು ಧಾರ್ಮಿಕ ಮನೋಭಾವದ ಮೊದಲ ಹೆಜ್ಜೆಯಾಗಿದೆ. ಭಗವದ್ಗೀತೆ ವೇದಗಳ ಸಾರವಾಗಿದ್ದು ದಿನನಿತ್ಯದ ಸಮಸ್ಯೆಗಳಿಗೂ ಸಮಾಧಾನ ಸ್ಫುರಿಸುತ್ತದೆ. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯಲ್ಲಿ ದಾರಿ ದೀಪವಾಗಬಲ್ಲುದು ಎಂದು ಸ್ವರ್ಣವಲ್ಲಿ ಮಠಾದೀಶ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಹೇಳಿದರು. ಬೈಂದೂರಿನ ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯವರು ಐದನೇಯ ವರ್ಷದ ಅಭಿಯಾನ ಕಾರ್ಯಕ್ರಮವನ್ನು ಅಭಿಯಾನದ ಪ್ರೇರಕ ಶ್ರೀಗಳಿಗೆ ಸಮರ್ಪಿಸಲು ಏರ್ಪಡಿಸಲಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆರ್ಶಿವಚನ ನೀಡಿದರು. ಸಮಿತಿಯ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಮಾತನಾಡಿ, ಒಂದು ನೂರಕ್ಕೂ ಮಿಕ್ಕಿ ಪಠಣಕಾರರು ಪ್ರವಚನಕಾರರಿಗೆ ವಿಶೇಷ ಶಿಬಿರ ಏರ್ಪಡಿಸಿ ತಾಲೂಕಿನ ಭಜನಾ ಕೇಂದ್ರಗಳು, ಶೃದ್ಧಾ ಕೇಂದ್ರಗಳು, ಸ್ತ್ರೀಶಕ್ತಿ ಗುಂಪುಗಳಲ್ಲಿಯೂ ಗೀತೆಯ ಸಂದೇಶವನ್ನು ಪಸರಿಸುತ್ತಿದ್ದು ಜನ ಸಾಮಾನ್ಯರ ಪ್ರತಿಕ್ರಿಯೆ ಉತ್ತೇಜನಕಾರಿಯಾಗಿದೆ ಎಂದರು. ನಾಗೂರು ಯಕ್ಷ ಬಳಗ ತಂಡದ ಬಾಲ ಕಲಾವಿದರು ಹೊಸ್ತೋಟ ಭಾಗವತರು ಬರೆದ ’ಗೀತಾನುಸಂಧಾನ’ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪೂಜ್ಯ…
ಬೈಂದೂರು: ದೇಶದ ಶಕ್ತಿಯಾಗಿರುವ ಯುವಕರು ತಮ್ಮ ಭವಿಷ್ಯದಲ್ಲಿ ಉತ್ತಮ ಧ್ಯೇಯೋದ್ಧೇಶ ಹಾಗೂ ಚಿಂತನೆಯನ್ನು ಹೊಂದಿ ಸಧೃಡ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಬೇಕಿದೆ ಎಂದು ತಾ.ಪಂ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು. ಪಡುವರಿ ಚಿತ್ತಾರಿ ಕ್ರೀಡಾಂಗಣದಲ್ಲಿ ನಡೆದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ನ 12ನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ, 30 ಗಜಗಳ ಕ್ರಿಕೆಟ್ ಪಂದ್ಯಾಟದ ವಿಜೇತ ಕೆ.ಸಿ.ಸಿ ದೊಂಬೆ ತಂಡಕ್ಕೆ ಚಿತ್ತಾರಿ ಮಹಾಗಣಪತಿ ಟ್ರೋಫಿ-2015 ಹಸ್ತಾಂತರಿಸಿ ಮಾತನಾಡಿದರು. ಸಂಘ ಸಂಸ್ಥೆಗಳಲ್ಲಿ ಯುವಜನರ ಪಾತ್ರ ಅತ್ಯಂತ ಹಿರಿದಾಗಿದ್ದು, ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಲಕಾಲಕ್ಕೆ ಸಂಘಟಿಸುವ ಮೂಲಕ ಸಮಾಜದ ಪ್ರತಿಭಾವಂತರು ಮತ್ತು ಸಾಧಕರನ್ನು ಗುರುತಿಸಿ ಗೌರವಿಸುವ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಇಂತಹ ಸಮಾಜಮುಖಿ ಚಟುವಟಿಕೆಯಿಂದ ಊರಿನ ಹೆಸರು ಮತ್ತು ಕೀರ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು. (ಕುಂದಾಪ್ರ ಡಾಟ್ ಕಾಂ) ಪಡುವರಿ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಬಟವಾಡಿ ಅಧ್ಯಕ್ಷತೆವಹಿಸಿ ಸಮಾರಂಭವನ್ನು ಉದ್ಘಾಟಿಸಿದರು. ಸುರಭಿ ಬೈಂದೂರು ಸ್ಥಾಪಕಾಧ್ಯಕ್ಷ ಸುಧಾಕರ್ ಪಿ ಇವರನ್ನು ಸನ್ಮಾನಿಸಲಾಯಿತು. ಪಡುವರಿ ಗ್ರಾಪಂ…
ಕುಂದಾಪುರ: ಇಂದು ಹಣವಂತರು ಮಾತ್ರ ಸೌಂದರ್ಯವರ್ದಕ ಚಿಕಿತ್ಸೆಗೆ ಒಳಪಟ್ಟು ಸೌಂದರ್ಯವಂತಾಗಬಹುದು ಎಂಬ ಕಾಲ ಬದಲಾಗಿ ಎಲ್ಲರ ಕೈಗೆಟಕುವಂತೆ ಚಿಕಿತ್ಸೆ ಪಡೆಯುವ ಮಟ್ಟಿಗೆ ವೈದ್ಯ ವಿಜ್ಞಾನದಲ್ಲಿ ಆವಿಷ್ಕಾರಗಳಾಗಿವೆ. ನಗರ ಪ್ರದೇಶಗಳಿಗಷ್ಟೇ ಸೀಮಿತವಾದ ಚಿಕಿತ್ಸೆಗಳು ಇಂದು ಗ್ರಾಮೀಣ ಭಾಗಕ್ಕೂ ವ್ಯಾಪಿಸಿ ಜನರಿಗೆ ನೆರವಾಗುತ್ತಿದೆ ಎಂದು ಬೆಂಗಳೂರು ಕ್ಯೂಟಿಸ್ ಅಕಾಡೆಮಿ ಆಫ್ ಕ್ಯೂಟಿಸೀಯಸ್ ಸೈನ್ಸ್ನ ಎಂ.ಡಿ ಡಾ. ಚಂದ್ರಶೇಖರ ಬಿ.ಎಸ್ ಹೇಳಿದರು. ಅವರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಕುಂದಾಪುರ ಪರಿಸರದಲ್ಲೇ ಪ್ರಥಮ ಭಾರಿಗೆ ಆರಂಭಗೊಂಡ ಲೇಸರ್, ಡೆರ್ಮಾಟೋಸರ್ಜರಿ ಹಾಗೂ ಕಾಸ್ಮೆಟಾಲಜಿ ವಿಭಾಗಗಳನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಉತ್ತಮ ವೈದ್ಯ ತನ್ನ ಕಾರ್ಯಕ್ಷಮತೆಯ ಬಗ್ಗೆ ಪ್ರಚಾರ ಮಾಡಬೇಕೆಂದಿಲ್ಲ. ವೈದ್ಯನಲ್ಲಿನ ವಿಶೇಷತೆಯನ್ನು ಆತನಲ್ಲಿಗೆ ಬರುವ ರೋಗಿಗಳೇ ಗುರುತಿಸಿ ಆತನ ಏಳಿಗೆಗೂ ಸಹಕಾರಿಯಾಗುತ್ತಾರೆ. ಒಂದು ಕಾಲದಲ್ಲಿ ಕೇಳುವವರೇ ಇಲ್ಲವಾಗಿದ್ದ ಡೆರ್ಮಾಟೋಸರ್ಜರಿ ವಿಭಾಗಕ್ಕೆ ಇಂದು ಎಲ್ಲಿಲ್ಲದ ಬೇಡಿಕೆ ಇದೆ. ಅವಕಾಶಗಳು ಬಂದಾಗ ಅದಕ್ಕೆ ತೆರೆದುಕೊಳ್ಳುವುದು ಮತ್ತು ಅದು ಸಾಮಾಜಿಕ ಕಳಕಳಿಯನ್ನೂ ಒಳಗೊಳ್ಳುವಂತೆ ನೋಡಿಕೊಳ್ಳುವುದು ಬಹುಮುಖ್ಯ ಎಂದರು. ಕೋಟ ಗೀತಾಂಜಲಿ ಟ್ರಸ್ಟ್ ನ ಪ್ರವರ್ತಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಡಿ.24ರಿಂದ ನಾಲ್ಕು ದಿನಗಳ ಕಾಲ ಜರುಗಿದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯಾಶ್ ಬೆಂಗಳೂರು ತಂಡ ಚಕ್ರವರ್ತಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರೇ. ಬಿಬಿಸಿ ಅಗ್ರಾಹರ ರನ್ನರ್ ಆಗಿ ಮೂಡಿಬಂದಿತು. ದೇಶದ ಮೂಲೆ ಮೂಲೆಯಿಂದ ಆಗಮಿಸಿದ್ದ 43 ತಂಡಗಳು ಚಕ್ರವರ್ತಿ ಟ್ರೋಫಿಗಾಗಿ ವೀರಾವೇಶದ ಸೆಣಸಾಟವನ್ನು ತೋರಿದ್ದು 4 ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೆ ರಸದೌತಣ ಸಿಕ್ಕಿತ್ತು. ಪಂದ್ಯಕೂಟದ ಆರಂಭಿಕ ಹಂತದಿಂದಲೂ ಉತ್ತಮ ಪ್ರದರ್ಶನ ನೀಡಿದ ನ್ಯಾಶ್ ಬೆಂಗಳೂರು ತಂಡ ವಿಜಯ ದಾಖಲಿಸುವಲ್ಲಿ ಯಶಸ್ಸನ್ನು ಕಂಡಿತು. ಸೆಮಿ ಫೈನಲ್ನ್ನು ಪ್ರವೇಶಿಸಿದ ನ್ಯಾಶ್ ಬೆಂಗಳೂರು ತಂಡ ಎ. ಕೆ. ಸ್ಪೋರ್ಟ್ಸ್ ಉಡುಪಿ ತಂಡವನ್ನು 27 ರನ್ನಗಳ ಅಂತರದಲ್ಲಿ ಮತ್ತು ಬಿಬಿಸಿ ಅಗ್ರಹಾರ ತಂಡ ಗ್ರೀನ್ ಕ್ರಿಕೆಟರ್ಸ್ ಸಾಗರ ತಂಡವನ್ನು 23ರನ್ಗಳ ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದವು. ನ್ಯಾಶ್ ಬೆಂಗಳೂರು ಮತ್ತು ಬಿಬಿಸಿ ಅಗ್ರಹಾರ ತಂಡಗಳು ಬಲಿಷ್ಠ ತಂಡಗಳಾಗಿ ಹೊರ ಹೊಮ್ಮಿ…
ಮಕ್ಕಳ ಮೇಲೆ ಹೇರಿಕೆ ಬೇಡ. ಕಲೆಯ ಆಸ್ವಾದನೆಯ ಮೂಲಕ ಮಾನವರಾಗೋಣ: ಜಯಂತ ಕಾಯ್ಕಿಣಿ ಮರಗಳು ನನ್ನ ಮಕ್ಕಳು, ದೇಶದ ಜನರೇ ನನ್ನ ಬಂಧುಗಳು: ಸಾಲು ಮರದ ತಿಮ್ಮಕ್ಕ ಕುಂದಾಪ್ರ ಡಾಟ್ ಕಾಂ ವರದಿ. ಸುಂದರ ಸಂಜೆಯನ್ನು ಮತ್ತಷ್ಟು ರಂಗಾಗಿಸುವ ಸಮಾರಂಭ ನಾಗೂರಿನ ಕುಸುಮಾ ಗ್ರೂಪ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಲೆ, ಸಾಹಿತ್ಯ, ಸಂಗೀತ ಪ್ರೀಯರಿಗಾಗಿ ಒಂದಿಷ್ಟು ಹೊತ್ತು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ, ಸಂಗೀತ್ಯಾಸಕ್ತ ಮಕ್ಕಳಿಗೊಂದು ವೇದಿಕೆ ಒದಗಿಸುವ, ಸಮಾಜಕ್ಕಾಗಿ ಬದುಕಿದ ಹಿರಿಯ ಜೀವವನ್ನು ಗುರುತಿಸಿ ಗೌರವಿಸುವ ಒಂದು ವಿನೂತನ ಪ್ರಯತ್ನಕ್ಕೆ ’ಕುಸುಮಾಂಜಲಿ 2015’ ಸಾಕ್ಷಿಯಾಯಿತು. ನಾಗೂರಿನ ಕುಸುಮ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ’ಕುಸುಮಾಂಜಲಿ 2015’ರಲ್ಲಿ ಸಾವಿರ ಸಂಖೆಯಲ್ಲಿ ನೆರೆದಿದ್ದ ಜನಸಮೂಹ ಕಾರ್ಯಕ್ರಮದೊಂದಿಗೆ ಇಲಿನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮನತುಂಬಿ ಶ್ಲಾಘಿಸಿದರು. ಹೋಮ್ ಎಕ್ಸ್ಪೋದಲ್ಲಿ ಮೂರು ಕಂಪೆನಿಗಳ ಉತ್ಪನ್ನಗಳ ಪ್ರದರ್ಶನ, ಪುಡ್ಕೋಟ್ ನಲ್ಲಿನ ವಿವಿಧ ಬಗೆಯ ಖಾದ್ಯಗಳು, ಲಕ್ಕಿ ಕೂಪನ್ ವ್ಯವಸ್ಥೆ, ಸ್ವಚ್ಚತೆ ಸುರಕ್ಷತೆಗೆಗಾಗಿ ಕೈಗೊಂಡ ಕ್ರಮಗಳು ಎಲ್ಲವೂ ಇಲ್ಲಿ ಅಚ್ಚುಕಟ್ಟು. ಕಾರ್ಯಕ್ರಮದಲ್ಲಿ ಕುಸುಮಾಶ್ರೀ ಹಾಗೂ…
