Author: ನ್ಯೂಸ್ ಬ್ಯೂರೋ

ಕುಂದಾಪುರ: ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ರೋಹಿತ್ ಸಾವಿಗೆ ಕಾರಣರಾದ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಿಂತಕ ಜಯನ್ ಮಲ್ಪೆ ಮಾತನಾಡಿ, ಹೈದರಾಬಾದ್ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ಮೇಮುಲ ಆತ್ಮಹತ್ಯೆ ದೇಶದಲ್ಲಿ ದಲಿತರ ಸ್ಥಿತಿ ಯಾವಮಟ್ಟದಲ್ಲಿದೆ ಎನ್ನುವುದಕ್ಕೆ ಸಾಕ್ಷಿ. ಧಮನ ನೀತಿಯಿಂದ ದಲಿತರ ದ್ವನಿ ಅಡಗಿಸುವ ಕೆಲಸ ಆಗುತ್ತಿದೆ ಎಂದರು. ದೇಶದ ಎಲ್ಲಾ ವಿವಿಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವರ ವಿರುದ್ಧ ದೌರ್ಜನ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಬೇಕು. ಘಟನೆಗೆ ಕಾರಣರಾದ ವ್ಯಕ್ತಿಗಳ ಮೇಲೆ ಇದೂವರೆಗೆ ಕ್ರಮ ತೆಗೆದು ಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಪತ್ರಕರ್ತರಾದ ಶಶಿಧರ ಹೆಮ್ಮಾಡಿ, ಜಾನ್ ಡಿಸೋಜಾ ಘಟನೆ ಖಂಡಿಸಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ವಾಸುದೇವ ಮದೂರು, ರಾಜ…

Read More

ಕುಂದಾಪುರ: ಶಾಂತಿ, ಸಹಬಾಳ್ವೆ, ಸಮಾನತೆ, ಐಖ್ಯತೆ ಮೂಲಕ ದೇಶದ ಅಭಿವೃದ್ಧಿ ಆಗಬೇಕಿದೆ. ಭಾರತ ಸಾಂಸ್ಕೃತಿ, ಸಂಸ್ಕಾರಯುತವಾಗಿದ್ದು, ಸೌಹಾರ್ದತೆ ತಳಹದಿಯಲ್ಲಿ ದೇಶದ ಅಭಿವೃದ್ಧಿ ರಥದ ಚಕ್ರ ಹೊರಳಬೇಕು ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ಅಶ್ವಥಿ ಎಸ್. ಹೇಳಿದರು. ಕುಂದಾಪುರ ತಾಲೂಕ್ ಆಡಳಿತ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ದ್ವಜಾಹೋರಣ ನೆವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಭಾರತ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ದೇಶಕ್ಕೆ ಡಾ.ಅಂಬೇಡ್ಕರ್ ಕೊಟ್ಟ ಸಂವಿಧಾನ ವಿಶ್ವಮಾನ್ಯ. ಅಂಬೇಡ್ಕರ್ ಸಾರಿದ ಸಮಾನತೆ, ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ದೇಶ ಕಟ್ಟುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಭಾರತೀಯರ ಭಾವನಾತ್ಮಕವಾಗಿ ಒಂದಾಗಿರಲಿಲ್ಲ ಎಂದ ಅವರು, ಗಣರಾಜ್ಯೋತ್ಸವ ಭಾರತೀಯರನ್ನು ಭಾವನಾತ್ಮಕವಾಗಿ ಬೆಸೆದಿದೆ. ಸಮಾನತೆ, ಸೌಹಾರ್ದತೆ, ಸಹಬಾಳ್ವೆ ಮೂಲಕ ಐಖ್ಯತೆ ಸಾರಬೇಕು ಎಂದು ಹೇಳಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್., ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಾಕೋಬ್ ಡಿಸೋಜಾ, ಪುರಸಭೆ ಸದಸ್ಯರಾದ ಗುಣರತ್ನಾ, ದೇವಕಿ ಸಣ್ಣಯ್ಯ, ಪುಷ್ಪಾ…

Read More

ಕುಂದಾಪುರ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮುಳ್ಳಿಕಟ್ಟೆ ಜಂಕ್ಷನ್ ಬಳಿ ಖಾಸಗಿ ಬಸ್ ಹಾಗೂ ಓಮ್ನಿ ನಡುವೆ ನಡೆದ ಅಪಫಾತದಲ್ಲಿ ಓಮ್ನಿ ಪ್ರಯಾಣಿಕರೋರ್ವರು ಮೃತಪಟ್ಟು, ಉಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಇಂದು ಸಂಜೆ ವರದಿಯಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಘಟನೆ ವರದಿ: ತ್ರಾಸಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಕುಂದಾಪುರ ಕಡೆಯಿಂದ ಮರವಂತೆ ಕಡೆಗೆ ಸಾಗುತ್ತಿದ್ದ ಓಮ್ನಿ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಓಮ್ನಿಯಲ್ಲಿದ್ದ ಮರವಂತೆ ನಿವಾಸಿ ಮಮಿತ್ ಪೂಜಾರಿ (23) ಎಂಬುವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಓಮ್ನಿಯಲ್ಲಿದ್ದ ಮರವಂತೆ ನಿವಾಸಿಗಳಾದ ಗಣೇಶ ಮೊಗವೀರ, ಕೇಶವ ಮೊಗವೀರ, ದಿನೇಶ ಪೂಜಾರಿ ಹಾಗೂ ಮಹೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿಯ ರಭಸಕ್ಕೆ ಒಮ್ನಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಗಂಗೊಳ್ಳಿ ಪಿಎಸ್‌ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಗಾಯಾಳುಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೆಂಗಳೂರು: ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಕನ್ನಡಿಗರ ಫೇವರೀಟ್ ಕಾರ್ಯಕ್ರಮವೆಂದೆನಿಸಿಕೊಂಡಿರುವ ಮಜಾ ಟಾಕೀಸ್‌ನಲ್ಲಿ ಕುಂದಾಪುರದ ಮೂರು ಮುತ್ತು ಖ್ಯಾತಿಯ ರೂಪಕಲಾ ತಂಡ ಕಲಾವಿದರು ಭಾಗವಹಿಸಿದ್ದಾರೆ. ತಂಡದ ಸತೀಶ್ ಪೈ, ಸಂತೋಷ್ ಪೈ ಹಾಗೂ ಅಶೋಕ್ ಶಾನುಭೋಗ್ ಶೋನಲ್ಲಿ ಸೃಜನ್ ಜೊತೆ ತರಲೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿರುವ ಸೃಜನ್ ಲೋಕೇಶ್ ಸಾರಥ್ಯದ ‘ಮಜಾ ಟಾಕೀಸ್’ ಕಾರ್ಯಕ್ರಮವನ್ನು ಟಿವಿ ನೋಡುವ ಮಂದಿ ಮಿಸ್ ಮಾಡಿಕೊಳ್ಳುವುದಿಲ್ಲ. ಆರಂಭಗೊಂಡ ಮೊದಲ ಕಂತಿನಿಂದ ಇಲ್ಲಿಯ ತನಕ ಅತಿ ಹೆಚ್ಚು ಪ್ರೇಕ್ಷಕರನ್ನು ಹಿಡಿದಿಟ್ಟು ವಾಹಿನಿಯ ಟಿ.ಆರ್.ಪಿ ಹೆಚ್ಚಿಸಿದ್ದ ಹೆಗ್ಗಳಿಕೆ ಈ ಕಾರ್ಯಕ್ರಮಕ್ಕಿದೆ. ಅರಳು ಹುರಿದಂತೆ ಮಾತನಾಡುವ ಸೃಜನ್ ಲೋಕೇಶ್ ಹಾಗೂ ಅವರ ತಂಡದ ಕಾಮಿಡಿ ಪ್ರೇಕ್ಷಕನಿಗೆ ಇನ್ನಿಲ್ಲದ ಮನೋರಂಜನೆ ನೀಡುತ್ತಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಬಹಳಷ್ಟು ಸಿನೆಮಾ ನಟರು ಭಾಗವಹಿಸಿ ಇದು ತನಗೆ ಸಿಕ್ಕ ಸದಾವಕಾಶ ಎಂದು ಉದ್ಗರಿಸಿದನ್ನು ನೀವು ನೋಡಿರುತ್ತಿರಿ ಬಿಡಿ. ಈ ಪ್ರಸಿದ್ಧ ಶೋನಲ್ಲಿ…

Read More

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಜನವರಿ ತಿಂಗಳ ಕಾರ್ಯಕ್ರಮ ಜರುಗಿತು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಪತ್ರಕರ್ತ ಯು.ಎಸ್.ಶೆಣೈ ಭಾಗವಹಿಸಿದ್ದು, ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಕಾರ್ಯಕ್ರಮದ ಪ್ರಾಯೋಜಕ ಜನ್ನಿ ವಾಸುದೇವ ಮೇಲಾಡಿ ಪುತ್ರರಾದ ನಾರಾಯಣ ಮೇಲಾಡಿ ಅವರನ್ನು ಸನ್ಮಾಸಿದರು. ಯು. ವಾಮನ್ ಪೈ, ಅಶೋಕ್ ಮೇಲಾಡಿ ಹಾಗೂ ವಲ್ಲಭ ಸೂರಿ ಇದರು. ಕಾರ್ಯಕ್ರಮದ ಕೊನೆಯಲ್ಲಿ ಭವಾನಿ ವಲ್ಲಭ ಮತ್ತು ವಿದ್ಯಾ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟ ನರಕಾಸುರ ವಧೆ-ಗರುಡ ಗರ್ವಭಂಗ ಜರುಗಿತು.. ಉದಯ ಭಂಡಾರ್‌ಕಾರ್ ರು ಕಾರ್ಯಕ್ರಮ ನಿರೂಪಿಸಿದ್ದರು.

Read More

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ. ಸ್ನಾತಕೋತ್ತರ ಪದವಿ ವಿಭಾಗದ ನೇತೃತ್ವದಲ್ಲಿ ಮೂಡಲಕಟ್ಟೆ ತಾಂತ್ರಿಕ ಕಾಲೇಜ್ ಮೈದಾನದಲ್ಲಿ ನಡೆದ ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಪದವಿ ಕಾಲೇಜ್ ಮಟ್ಟದ ಪುರುಷ ಹಾಗೂ ಮಹಿಳಾ ವಿಭಾಗದ ವಾಲಿಬಾಲ್ ಪಂದ್ಯಾಟದ ನಡೆದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆಳ್ವಾಸ್ ಮೂಡುಬಿದ್ರಿ ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜ್ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನ ಬಸ್ರೂರು ಶ್ರೀ ಶಾರದಾ ಕಾಲೇಜ್ ಮತ್ತು ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಶಿರ್ವ ಎಂ.ಎಸ್.ಆರ್.ಎಸ್. ಶಿರ್ವ ಕಾಲೇಜ್ ತನ್ನದಾಗಿಸಿಕೊಂಡಿತು. ಸಮಾರೋಪದಲ್ಲಿ ಪ್ರೊ| ರಾಧಾಕೃಷ್ಣ ಶೆಟ್ಟಿ, ಕಾಲೇಜ್ ಅಧ್ಯಕ್ಷ ಸಿದ್ಧಾರ್ಥ ಶೆಟ್ಟಿ ಹಾಗೂ ಪ್ರಾಂಶುಪಾಲೆ ಡಾ|.ಶುಭಾ ಪಿ. ಭಟ್ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಶ್ರೀ ರಮೇಶ್ ಎಂ. ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ೨೬ ಪದವಿ ಕಾಲೇಜ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಎಂ.ಬಿ.ಎ. ಮುಖ್ಯಸ್ಥೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ ಘಟನೆ ರಾತ್ರಿ ವೇಳೆ ನಡೆದಿದೆ. ಗಂಗೊಳ್ಳಿಗೆ ಸಮೀಪದ ಕಂಚುಗೋಡು ನಿವಾಸಿ ರಿಕ್ಸನ್ ಡಯಾಸ್(17) ಮೃತ ಯುವಕ. ಘಟನೆಯ ವಿವರ: ಕಂಚಿಗೋಡು ನಿವಾಸಿ ವಾಲ್ಟರ್ ಡಯಾಸ್ ಹಾಗೂ ಜನಿಟಾ ಡಯಾಸ್ ದಂಪತಿಗಳ ಮಗನಾದ ರಿಕ್ಸನ್ ಡಯಾಸ್ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ದ್ವಿತೀಯ ಪಿಯುಸಿ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಯಾಗಿದ್ದ. ಪರೀಕ್ಷೆ ತಯಾರಿಗಾಗಿ ರಜೆಯಿದ್ದುದರಿಂದ ಮನೆಯಲ್ಲಿಯೇ ಅಭ್ಯಸಿಸುತ್ತಿದ್ದ. ಆರೋಗ್ಯವಂತನಾಗಿದ್ದ ಯುವಕ ರಾತ್ರಿ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನರಳಿ ಮೃತಪಡಲು ಕಾರಣ ಮಾತ್ರ ತಿಳಿದುಬಂದಿಲ್ಲ. ತಂದೆ ತಾಯಿ ಅಂಗಡಿಯ ಕೆಲಸಕ್ಕೆ ತೆರಳಿದ್ದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಅಣ್ಣ ಕೆಲಸ ಮುಗಿಸಿ ಮನೆಗೆ ಬಂದಾಗ ರಿಕ್ಸನ್ ಸೋಫಾದ ಮೇಲೆ ನರಳಾಡುತ್ತಿರುವುದನ್ನು ಗಮನಿಸಿ ಕೂಡಲೇ ಹೆಲ್ಪ್ ಲೈನ್ ಮೂಲಕ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗಮಧ್ಯದಲ್ಲೇ ರಿಕ್ಸನ್ ಪ್ರಾಣಕಳೆದುಕೊಂಡಿದ್ದಾರೆ. ಆತ ನರಳಾಡುತ್ತಿರುವಾಗ ಬಾಯಿಂದ ನೊರೆ ಬರುತ್ತಿತ್ತು ಎನ್ನಲಾಗಿದೆ. (ಕುಂದಾಪ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಜನರಿಗೆ ಹೇಳುವ ಮೊದಲು ನಾವು ಹೆಲ್ಮೆಟ್ ಧರಿಸಿ ತಿರುಗಾಡಬೇಕು ಎಂಬುದನ್ನು ಅರಿತ ಕುಂದಾಪುರ ಪೊಲೀಸರು ಇಂದು ನಗರದಲ್ಲಿ ಜನಜಾಗೃತಿ ಜಾಥಾ ಆಯೋಜಿಸಿದ್ದರು. ದ್ವಿಚಕ್ರ ವಾಹನ ಹೊಂದಿರುವ ಪೊಲೀಸ್ ಸಿಬ್ಬಂಧಿಗಳು ಹೆಲ್ಮೆಟ್ ಧರಿಸಿ ಅದರ ಅಗತ್ಯದ ಕುರಿತು ಅರಿವು ಮೂಡಿಸಿದರು. ಪೊಲೀಸ್ ಇಲಾಖೆಯಿಂದ ಕುಂದಾಪುರ ಶಾಸ್ತ್ರೀವೃತ್ತದ ಬಳಿ ಹೆಲ್ಮೆಟ್ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಬೈಕ್ ಜಾಥಾಕ್ಕೆ ಚಾಲನೆ ನೀಡಿದ ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಮಾತನಾಡಿ ರಾಜ್ಯ ಸರಕಾರ ಸುಪ್ರಿಂಕೋರ್ಟ್ ತೀರ್ಪಿನಂತೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಬೈಕ್ ಸವಾರ ಹಾಗೂ ಹಿಂಬದಿಯ ಸವಾರರು ಹೆಲ್ಮೆಟ್ ಇಲ್ಲದೇ ಸಂಚರಿಸುವಂತಿಲ್ಲ. ಕಡ್ಡಾಯವಿರುವ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮಟ್ ಧರಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ. ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿ ಜಾಗೃತರಾಗಿ ಸಂಚರಿಸಿ ಎಂದರು. ಕುಂದಾಪುರ ವೃತ್ತ ದಿವಾಕರ್, ಎಸೈ ನಾಸಿರ್…

Read More

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಕತ್ವದಲ್ಲಿ ಮಹಮ್ಮದ್ ಇಕ್ಬಾಲ್ ವಂಡ್ಸೆ ಇವರು ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಕೊಡುಗೆಯಾಗಿ ನೀಡಿದ ಇ-ಲರ್ನಿಂಗ್  ಕಿಟ್ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ರೋಟರಿ 3180 ಇದರ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಉದ್ಘಾಟಿಸಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ  ಸುಭಾಶ್ಚಂದ್ರ ಶೆಟ್ಟಿ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ಜಯಶ್ರೀ ಭರತೇಶ್ ಅಧಿರಾಜ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ, ಗ್ರಾಮ ಪಂಚಾಯತ್ ಅಧ್ಯಕ್ಷ  ಉದಯಕುಮಾರ್ ಶೆಟ್ಟಿ, ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಹರ್ಜಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ ರಾಯಪ್ಪನಡಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಸಿಕ  ಮೊಕ್ತೇಸರ ಸೀತಾರಾಮ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಉದಯ ಕೆ.ನಾಯ್ಕ, ಸಿಂಗಾರಿ ಪೂಜಾರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಮೋಹಿನಿ ಬಾ, ದಾನಿ ರಫೀಕ್ ಸಾಹೇಬ್ ವಂಡ್ಸೆ ಉಪಸ್ಥಿತರಿದ್ದರು. ಶಾಲೆಯ ದೈಹಿಕ…

Read More

ಕುಂದಾಪುರ: ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುವುದು, ಮಡದಿಗೆ ವಿಶೇಷವಾದ ಉಡುಗೊರೆ ನೀಡುವುದು ಇವೆಲ್ಲಾ ಸಾಮಾನ್ಯವಾಗಿ ನಡೆದೇ ನಡೆಯುತ್ತೆ. ಆದರೆ ಇಲ್ಲೊಬ್ಬ ಪತ್ರಿಕಾ ವಿತರಕರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ನೀಡಿ ಓದುವ ಹವ್ಯಾಸ ಬೆಳೆಸಲು ಮುಂದಾದದ್ದು ಮಾತ್ರ ವಿಶೇಷ ಸ್ಪಲ್ಪ ವಿಶೇಷ ಅಂದೆನಿಸುತ್ತೆ. [quote font_size=”16″ bgcolor=”#ffffff” bcolor=”#dd890b” arrow=”yes” align=”right”]* ಆಧುನಿಕ ಯುಗದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ಓದಲು ಅವಕಾಶ ಮಾಡಿಕೊಟ್ಟಿರುವುದು ಓದುವ ಹವ್ಯಾಸವನ್ನು ಉತ್ತೇಜಿಸಿದಂತಾಗುತ್ತದೆ. ಮಿನಿವಿಧಾನಸೌಧಕ್ಕೆ ಬೇರೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರು, ಕೆಲಸ ಆಗುವ ತನಕ ಸಮ್ಮನೆ ಸಮಯ ಹಾಳು ಮಾಡುವುದಕ್ಕಿಂತ ಪತ್ರಿಕೆಗಳನ್ನ ಓದುವ ಮೂಲಕ ಪ್ರಪಂಚದ ವಿದ್ಯಮಾನ ತಿಳಿಯಲು ಸಹಕಾರಿಗುತ್ತದೆ. ಗ್ರಾಹಕರಿಗೆ ಉಚಿತ ಪತ್ರಿಕೆ ಒದಗಿಸುತ್ತಿರುವ ಶಂಕರಾಚಾರ‍್ಯ ಪ್ರಯತ್ನ ಶ್ಲಾಘನೀಯ. ಅಶ್ವಥಿ ಎಸ್., ಎಸಿ ಕುಂದಾಪುರ.[/quote] ಹೌದು. ಕುಂದಾಪುರದ ಪತ್ರಿಕಾ ವಿತರಕ ಶಂಕರಾಚಾರ‍್ಯ ಅವರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ…

Read More