ಮೂಡುಬಿದಿರೆ: ಮಾಧ್ಯಮ ಕ್ಷೇತ್ರಕ್ಷೆ ಪ್ರವೇಶಿಸುವ ಸಾಧನಗಳಿಂದಾಗಿ ಹೊಸತನವನ್ನು ನಿರೀಕ್ಷಿಸಲಾಗದು. ಹೊಸತನದ ಹೊಳಪು ಮೊದಲು ಮನಸ್ಸುಗಳಲ್ಲಿ ಮೂಡಬೇಕಿದೆಯೇ ಹೊರತು ಹೊಸ ಸಾಧನಗಳಿಂದಲ್ಲ ಎಂದು ಎನ್.ಎ.ಎಂ. ಇಸ್ಮಾಯಿಲ್ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಹೊಸತನದ ಹುಡುಕಾಟ ಎಂಬ ವಿಷಯದಲ್ಲಿ ಮಾತನಾಡಿದರು. ದೃಶ್ಯ ಮಾಧ್ಯಮಗಳು ಟ್ಯಾಬ್ಲಾಯ್ಡ್ ಪರಂಪರೆಯನ್ನೇ ಪ್ಯಾಕ್ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆಯ್ದ ವಿಚಾರವನ್ನು ಮಾತ್ರವೇ ಮತ್ತೆ ಮತ್ತೆ ಭಿತ್ತರಿಸುವ ಸಾಧನಗಳಾಗಿ ರೂಪುಗೊಂಡಿವೆ. ಜನರಿಗೆ ಬಯಸುವುದನ್ನೇ ನೀಡುತ್ತಿದ್ದೇವೆ ಮಾಧ್ಯಮಗಳು ಜನರಿಗೆ ಅಗತ್ಯವಾದುದನ್ನು ನೀಡುವ ಬದ್ಧತೆಗೆ ಒಳಗಾಗಬೇಕಿದೆ ಎಂದ ಅವರು ಏಕಮುಖ ಸಂವಹನವನ್ನು ಬಹುಮುಖಿಯಾಗಿಸಿರುವ ಅಂತರ್ಜಾಲ ಮಾಧ್ಯಮಗಳು ಪ್ರಜಾಪ್ರಭುತ್ವದಲ್ಲಿ ಮಾಧ್ಯಮದ ಸ್ವರೂಪ ಪಡೆಯದೇ ಉಳಿದಿದೆ ಎಂದರು.
Author: ನ್ಯೂಸ್ ಬ್ಯೂರೋ
ಮೂಡುಬಿದಿರೆ: ನಮ್ಮ ನಡುವಿನ ಅವಕಾಶವಾದಿ ಪ್ರೌವೃತ್ತಿಯಿಂದ ಜಾತೀಯತೆ ಮತ್ತು ಜಾತ್ಯಾತೀತತೆಗಳ ನಡುವಿನ ಗೊಂದಲ ಹೆಚ್ಚಿತ್ತಿದೆ. ಒಂದು ಧರ್ಮ ಸಂಘಟನೆಯನ್ನು ಮಾತ್ರ ದೂಷಿಸುವುದು ಜಾತ್ಯಾತೀತತೆ ಎಂದೆನಿಸಿಕೊಳ್ಳುವುದಿಲ್ಲ. ಎಲ್ಲಾ ಬಗೆಯ ಸೃಜನ ಪಕ್ಷಪಾತದಿಂದ ಮಾತ್ರ ಜಾತ್ಯಾತೀತರಾಗಲು ಸಾಧ್ಯ ಎಂದು ಪ್ರೊ. ರವೀಂದ್ರ ರೇಷ್ಮೆ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಪತ್ರಿಕಾ ಮಾಧ್ಯಮದಲ್ಲಿ ಹೊಸತನದ ಹುಡುಕಾಟ ಎಂಬ ವಿಷಯದಲ್ಲಿ ಮಾತನಾಡಿದರು. ಹೊಸತನವನ್ನು ಆವಹಿಸಿಕೊಳ್ಳುತ್ತಿರುವ ಮಾಧ್ಯಮದಲ್ಲಿ ಮುಖಪುಟಕ್ಕೂ ಜಾಹೀರಾತಿಗೂ ವ್ಯತ್ಯಾಸ ತಿಳಿಯದಷ್ಟು ಬದಲಾವಣೆಗಳಾಗಿದೆ. ಸಂಪಾದಕರ ಹೆಸರನ್ನು ಹುಡುಕುವ ಮಟ್ಟಿಗೆ ಪತ್ರಿಕೆಗಳು ಬದಲಾಗುತ್ತಿವೆ. ಇದಕ್ಕೆ ಖಾಸಗಿ ಕಂಪೆನಿಗಳ ಬಂಡವಾಳಶಾಹಿ ನೀತಿ ಮಾತ್ರವೇ ಕಾರಣವಾಗಿರದೇ ಪತ್ರಕರ್ತನಲ್ಲಿ ಕ್ಷೀಣಿಸುತ್ತಿರುವ ನಾಯಕತ್ವ ಗುಣವೂ ಕಾರಣವಾಗಿದೆ. ಇಂತಹ ನಾಯಕತ್ವವನ್ನು ಧಮನಿಸುವ ಪ್ರವೃತ್ತಿಯ ವಿರುದ್ದ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಇದೆ ಎಂದವರು ಹೇಳಿದರು.
ಮೂಡುಬಿದಿರೆ: ಆಂತರಿಕ ಪ್ರಜಾಪ್ರಭುತ್ವವಿಲ್ಲದಿರುವಾಗ ರಾಕ್ಷಸ ಪ್ರವೃತ್ತಿಗಳು ಜಾಗೃತಗೊಳ್ಳುತ್ತದೆ. ಭಾರತದಲ್ಲಿ ಕಳೆದ ಎಂಟು ತಿಂಗಳಿನಲ್ಲಿ 600ಕ್ಕೂ ಹೆಚ್ಚು ಕೋಮುಗಲಭೆಗಳು ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಸನಾತನ ಮೌಲಗಳನ್ನು ಸಮಾಜದಲ್ಲಿ ಬಲವಂತವಾಗಿ ತುಂಬುವ ಕೆಲಸವಾಗುತ್ತಿದೆ. ಸಾಮರಸ್ಯಕ್ಕೆ ಧಕ್ಕೆ ಬಂದಾಗ ಪ್ರತಿಭಟಿಸುವುದು. ಸಮಾಜ ರೋಗಕ್ಕೆ ತುತ್ತಾದಾಗ ಚಿಕಿತ್ಸೆ ನೀಡುವ ಜವಾಬ್ದಾರಿ ನಮ್ಮದೂ ಆಗಿದೆ. ನಮಗೆ ಸಂವಿಧಾನಕ್ಕಿಂತ ಮಿಗಿಲಾದ ಗ್ರಂಥವಿಲ್ಲ. ಇದಕ್ಕೆ ಧಕ್ಕೆ ಬರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಸಾಮರಸ್ಯ ಹೊಸತನದ ಹುಡುಕಾಟ ಎಂಬ ವಿಚಾರವಾಗಿ ವಿಶೇಷೋಪನ್ಯಾಸ ನೀಡಿದರು. ಸಾಮರಸ್ಯಕ್ಕೆ ದೊಡ್ಡ ಪೆಟ್ಟು ಜಾತಿ ವ್ಯವಸ್ಥೆ. ಜಾತಿಯಿಂದಾಗಿ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾನೆ. ದೇಶ ಅಸಹಿಷ್ಣುತೆಯಿಂದ ಮುಕ್ತವಾಗಬೇಕೆಂದಿದ್ದರೇ ಮೊದಲು ಜಾತಿವ್ಯವಸ್ಥೆ ಕೊನೆಗೊಳ್ಳಬೇಕು. ವಾಸ್ತು ಹಾಗೂ ಜೋತಿಷಿಗಳ ರೂಪದಲ್ಲಿ ಮತ್ತೆ ಸಮಾಜದಲ್ಲಿ ತಲೆಯೆತ್ತುತ್ತಿರುವ ವೈದಿಕ ಧರ್ಮ ಸಮಾಜವನ್ನು ನಿಯಂತ್ರಿಸಿ, ದಿನಚರಿಯಲ್ಲಿ ಏರುಪೇರು ಮಾಡುವ ಕೆಲಸ ಮಾಡುತ್ತಿದೆ. ಇಂತಹ ಶಕ್ತಿಗಳು ಭಯೋತ್ಪಾದನೆಗಿಂತ…
ಮೂಡುಬಿದಿರೆ: ಅಸಹಿಷ್ಣುತೆಯೇ ತುಂಬಿರುವ ಸಮಾಜದಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲ ನಮ್ಮನ್ನು ಕಾಡುತ್ತಿದೆ. ದಲಿತ ಮಕ್ಕಳನ್ನು ಸುಡುವ, ದಲಿತ ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡುವ, ಅಲ್ಪಸಂಖ್ಯಾತ ಸಮುದಾಯದವರನ್ನು ಹುಡುಕಿಒ ಕೊಲ್ಲುವ ಈ ಸಮಾಜದ ಕುಕೃತ್ಯಗಳನ್ನು ತನ್ನ ಕವಿತೆ ಮೂಲಕವಾದರೂ ಇವೆಲ್ಲವನ್ನೂ ಖಂಡಿಸುತ್ತೇನೆ ಎಂದು ಟಿ. ಯಲ್ಲಪ್ಪ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಕವಿಸಮಯ ಕವಿನಮನದಲ್ಲಿ’ ತಮ್ಮ ಕವಿತೆ ವಾಚನಕ್ಕೂ ಮೊದಲು ಮಾತನಾಡಿದರು. ಅನುಭವ ಸವಿಯಲ್ಲ. ಅದರ ನೆನಪೇ ಸವಿ. ಆದರೆ ನನ್ನ ವಿಚಾರದಲ್ಲಿ ನೆನಪುಗಳು ನೋವಿನಿಂದ ಕೂಡಿದೆ. ಈ ನೋವನ್ನು ಕವಿತೆಗಳ ಮೂಲಕ ವ್ಯಕ್ತಪಡಿಸುವ ಕೆಲಸ ಮಾಡಿದ್ದೇವೆ ಎಂದ ಅವರು ಕಲ್ಲು ಬೀಸಿದ ಜನರನ್ನು ಕರುಣೆಯ ಕಂಗಳಿಂದ ನೋಡುವ ಜನ ನಮ್ಮವರು ಕವಿತೆ ಮೂಖಾಂತರ ಮನುಷತ್ವನ್ನು ಹುಡುಕುವ ಕೆಲಸ ಮಾಡಿದ್ದೇವೆ ಎಂದರು.
ಕುಂದಾಪುರ: ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನಲ್ಲಿ ನ.೨೬ ರಂದು ಭಾರತೀಯ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಹಾಗೂ ರಾಜಕೀಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅವರು ಸಂವಿಧಾನದ ಪೂರ್ವ ಪೀಠಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಮಾಣ ವಿಧಿ ಬೋಧಿಸಿಸುತ್ತಾ ಸಂವಿಧಾನವು ರಾಷ್ಟ್ರಕ್ಕೆ ಸೂಚಿಸಿರುವ ಗುರಿ ಮತ್ತು ಉದ್ದೇಶಗಳನ್ನು ಪೀಠಿಕೆ ಸ್ಪಷ್ಟಪಡಿಸುತ್ತದೆ. ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಅಂಗವಾಗಿದ್ದು, ಸಂವಿಧಾನ ನಿರ್ಮಾಪಕರು ರಾಷ್ಟ್ರವು ಮುಂದೆ ಹೇಗೆ ಸಾಗಬೇಕೆಂದು ಸೂಚಿಸಿರುವ ಮಾರ್ಗ ಮತ್ತು ಅದರಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ಕುಂದಾಪುರ: ಘಟನೆಯೊಂದರ ವರದಿಗೆ ತೆರಳಿದ್ದ ಪತ್ರಕರ್ತನನ್ನು ಕುಂದಾಪುರದ ಉಪ ನಿರೀಕ್ಷಕ ನಾಸೀರ್ ಹುಸೇನ್ ವಿನಾಕಾರಣ ತಡೆದು, ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಇಂದು ವರದಿಯಾಗಿದೆ. ಘಟನೆಯ ವಿವರ: ಹಿರಿಯ ಪತ್ರಕರ್ತ ಜಾನ್ ಡಿಸೋಜ ಎಂದಿನಂತೆ ಕುಂದಾಪುರ ಸಂಗಮ್ ಸೇತುವೆಯ ಬಳಿ ನಡೆದ ವ್ಯಕ್ತಿಯೋರ್ವರ ಆತ್ಮಹತ್ಯೆ ಪ್ರಕರಣದ ವರದಿಗಾಗಿ ಘಟನಾ ಸ್ಥಳಕ್ಕೆ ತೆರಳಿದ್ದರು. ಅದಾಗಲೇ ಅಲ್ಲಿ ನೂರಾರು ಹಲವಾರು ಜಮಾಯಿಸಿದ್ದರು. ಜಾನ್ ಸೇತುವೆಯ ಪಕ್ಕ ನಿಂತ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾಗ ಹಿಂಬದಿಯಿಂದ ಬಂದ ಕುಂದಾಪುರದ ಪಿಎಸ್ಐ ನಾಸೀರ್ ಹುಸೆನ್ ಜಾನ್ ಅವರ ಬೆನ್ನಿಗೆ ಬಲವಾಗಿ ಗುದ್ದಿದ್ದಾರೆನ್ನಲಾಗಿದೆ. ಅಚಾನಕ್ ಘಟನೆಯಿಂದ ವಿಚಲಿತರಾದ ಪತ್ರಕರ್ತರು ಎಸ್ಐ ಅವರ ಕೃತ್ಯವನ್ನು ಪ್ರಶ್ನಿಸಿದಾಗ ನೀವು ಪತ್ರಕರ್ತರೆಂಬದು ತನಗೆ ತಿಳಿಯಲಿಲ್ಲ ಎಂಬ ಉಡಾಫೆಯ ಉತ್ತರವನ್ನು ನೀಡಿದ್ದಾರೆ. ಪತ್ರಕರ್ತರಿಗೆ ವಿಶೇಷ ಸ್ಥಾನಮಾನವಿರುವುದಿಲ್ಲ. ಆದರೆ ಜನಸಾಮಾನ್ಯರಿಗಾದರೂ ಒಂದೇ ಸಮನೆ ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಈರ್ವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ನಡುವೆ ಸ್ಥಳದಲ್ಲಿ ಪೋಟೋ ತೆಗೆಯುತ್ತಿದ್ದ ವರದಿಗಾರ ಶ್ರೀಕಾಂತ ಹೆಮ್ಮಾಡಿಯನ್ನು ಕೂಡ ಹಿಡಿದು ಎಳೆದಿದ್ದಾರೆ…
ಮೂಡುಬಿದಿರೆ: ‘ಸೃಜನಶೀಲತೆಯನ್ನು ಕಳೆದುಕೊಂಡಾಗ ಅಸಹಿಷ್ಣುತೆ ಹೆಚ್ಚಾಗುತ್ತದೆ. ಸೃಜನಶೀಲತೆ ಜೀವಂತವಾಗಿದ್ದರೆ ಅಸಹಿಷ್ಣುತೆಯ ಮಾತು ಹುಟ್ಟುವುದೇ ಇಲ್ಲ’ ಎಂದು ಸಾಹಿತಿ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ಕೆ.ಎಸ್. ನರಸಿಂಹ ಸ್ವಾಮಿ ನೆನಪು ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ‘ಒತ್ತಾಯವನ್ನು ಹೇರುವ ಕಾಲವಿದು. ಎಷ್ಟೇ ಒತ್ತಡ ಬಂದರೂ ಸೃಜನಶೀಲ ಲೇಖಕ ತನ್ನ ಅಂತರಂಗದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಲೇಖಕರು ತಮ್ಮ ಸೃಜನಶೀಲತೆಯನ್ನು ಒತ್ತೆ ಇಡುತ್ತಿದ್ದಾರೆ. ಸಮಾಜದಲ್ಲಿ ಕೇಳುವವರಿದ್ದಾರೆ ಆದರೆ, ಲೇಖಕರು ಹೇಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಸೃಜನಶೀಲ ಶಕ್ತಿಯನ್ನು ಉಳಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು. ಕೆಎಸ್ಎನ್ ಅವರು ಕೇವಲ ಪ್ರೇಮಕವಿಯಲ್ಲ. ಬದಲಿಗೆ ಅವರು ಎಲ್ಲ ವಿಚಾರಗಳನ್ನು ಸೂಚ್ಯವಾಗಿ ಹೇಳಿದ ಕವಿ. ಆದ್ದರಿಂದ ರೈತರ ಆತ್ಮಹತ್ಯೆ, ಭಯೋತ್ಪಾದನೆ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ ನಾವೆಲ್ಲ ಕೆಎಸ್ಎನ್ ಅವರತ್ತ ವಾಲಬೇಕಿದೆ’ ಎಂದು ಹೇಳಿದರು. ಅಧಿಕಾರ ಮತ್ತು ಭೋಗ ಜನರನ್ನು ಗಾಢವಾಗಿ ಪ್ರಭಾವ ಬೀರುವ ಅಂಶಗಳು. ಅಧಿಕಾರದ ಬಗ್ಗೆ ಬೇಕಾದಷ್ಟು ಕಾವ್ಯಗಳಿವೆ. ಆದರೆ, ಭೋಗದ ಬಗ್ಗೆ ಇರುವ ಕಾವ್ಯಗಳ ಸಂಖ್ಯೆ ತುಂಬಾ ಕಡಿವೆ. ಶೃಂಗಾರ ಕಾವ್ಯವನ್ನು ಎಚ್ಚರಿಕೆಯಿಂದ ಬರೆಯಬೇಕು.…
ಎನ್. ಪೂಜಾ ಪಕ್ಕಳ. ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗನನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಬೈಂದೂರಿನ ತಗ್ಗರ್ಸೆ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಪೂರ್ತಿ. 25ರ ಹರೆಯದ ಈತನಿಗೆ ಆರಂಭದಲ್ಲಿ ಗೆರೆಗಳ ಆಟವಾಗಿ ತೋರಿದ ಈ ಕಲೆ ಮುಂದೆ ಬದುಕಿನ ದಾರಿಯಾಯಿತು. ಗಿರೀಶ್ ಎಂಬ ಚಿತ್ರಕಾರನ ಕಲಾಕುಂಚ ಆರಂಭಗೊಂಡಿದ್ದು ಬಾಲ್ಯದಲ್ಲಿ. ಮಣ್ಣಿನ ಕಲಾಕೃತಿಗಳನ್ನು ರಚಿಸುವುದರಲ್ಲಿ ಪ್ರಾವಿಣ್ಯತೆ ಹೊಂದಿದ್ದ ಗಿರೀಶ್ ತನ್ನ ಶಾಲಾ ದಿನಗಳಲ್ಲಿಯೇ ಹಲವು ಸ್ವರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದವರು. ಯಾರೋ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸಿಡಿಮದ್ದು ಈತನ ಕೈಬೆರಳುಗಳನ್ನು ಕಿತ್ತುಕೊಂಡಿತ್ತು. ಆ ಘಟನೆಯ ನಂತರ ಬಾಲ್ಯದ ಆಸಕ್ತಿಯ ಕಲೆಯನ್ನು ಮುಂದುವರಿಸಲು ಇವರ ಕೈಗಳು ಅಂದುಕೊಂಡ ಹಾಗೆ ಸಹಕರಿಸಲಿಲ್ಲ. ಹಾಗೆಂದು ಗಿರೀಶ್ ಛಲ ಬಿಡಲಿಲ್ಲ. ಫಲವಾಗಿ ತಾವು ಬಯಸಿದ ಕಲಾಕುಂಚ ಲೋಕಕ್ಕೆ ತನ್ನನ್ನು ಪರಿಚಯಿಸಿಕೊಂಡರು. ತಗ್ಗರ್ಸೆಯ ಗಣೇಶ್ ಗಾಣಿಗ ಮತ್ತು ತಾಯಿ ಸೀತಾ ದಂಪತಿಗಳ ಮಗನಾದ ಗಿರೀಶ್ ಬಿ.ವಿ.ಎ…
ಮೂಡುಬಿದಿರೆ: ಮಹಿಳಾ ಪರ ಆಲೋಚನೆಯುಳ್ಳ ಬಹುದೊಡ್ಡ ಪುರುಷ ಪಡೆಯು ನಮ್ಮಲ್ಲಿದ್ದು ಇವರೇ ಮೊಟ್ಟಮೊದಲಿಗೆ ಮಹಿಳಾ ಚಳುವಳಿಗೆ ರೂಪುರೇಷೆಯನ್ನು ಹಾಕಿಕೊಟ್ಟರು ಎಂದು ಚಿಂತಕಿ ಗಾಯತ್ರಿ ನಾವಡ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಮಹಿಳಾ ಚಳುವಳಿ: ಹೊಸತನದ ಹುಡುಕಾಟ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಚಳುವಳಿಯ ಸ್ವರೂಪ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದ್ದು ಎಲ್ಲಾ ಕಾಲಗಳ್ಲಲಿಯೂ ಸ್ತ್ರೀಯರು ಕೆಲವೆಡೆ ಪುರುಷರಿಗೆ ಬೆಂಗಾವಲಾಗಿ ನಿಂತರೆ ಇನ್ನೂ ಕೆಲವೆಡೆ ತಾವೇ ಸಕ್ರಿಯವಾಗಿ ಚಳುವಳಿಗಳಲ್ಲಿ ಭಾಗವಹಿಸಿರುವುದನ್ನು ಗಮನಿಸಬಹುದು ಎಂದರು. ದಕ್ಷಿಣ ಕರ್ನಾಟಕದ ಮಹಿಳೆಚಿiರು ಉಪ್ಪಿನ ಸತ್ಯಾಗ್ರಹದಲ್ಲಿ ಮತ್ತು ಉತ್ತರ ಕರ್ನಾಟಕದ ಮಹಿಳೆಯರು ಕರನಿರಾಕರಣೆ ಮೊದಲಾದವುಗಳ್ಲಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಎಂದರು.
ಮೂಡುಬಿದಿರೆ: ಹೊಸತನವೆನ್ನುವುದು ಸಮಾಜದ ಜೀವಂತಿಕೆಯ ಸಾಕ್ಷಿ. ಇದು ಹಿಂದಿನ ಬೇರುಗಳ ಗಟ್ಟಿಯಾಗಿಸುತ್ತಾ ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳಾಗುತ್ತಾ ಸಾಗುತ್ತದೆ. ಅನುಕರಣೆ ಹೊಸತನ್ನು ಸೃಷ್ಟಿಸೋಲ್ಲ. ಸೃಜಶೀಲತೆಯ ಹಿಂದೆ ಸಾಗುವವರಿಗೆ ಕಂಟಕ ಸಾಮಾನ್ಯ ಎಂದು ಸಾಹಿತಿ ವಸುಧೇಂದ್ರ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರ ವರ್ಣ ವೇದಿಯಕೆ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಿದ ವಿಚಾರಗೋಷ್ಠಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ: ಹೊಸತನದ ಹುಡುಕಾಟ’ ಏಕೀಕರಣೋತ್ತರ ಸಾಹಿತ್ಯ ಎಂಬ ವಿಷಯದಲ್ಲಿ ಮಾತನಾಡಿದರು. ನಮ್ಮ ನಿಲುವನ್ನು ವ್ಯಕ್ತಪಡಿಸುವ ಸಾಮಾಜಿಕ ತಾಣಗಳು ಇಂದು ಪ್ರಬಲವಾದ ಅಸ್ತ್ರವಾಗಿ ಬೆಳೆದಿದೆ. ಹೊಸ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಾ ಜಗತ್ತಿಗೆ ತೆರೆದುಕೊಂಡಂತೆಲ್ಲ ಮತ್ತಷ್ಟು ಹೊಸತನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
