ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಕಂಪ್ಯೂಟರ್‌ನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಅವರು ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿಯವರಿಗೆ ಕಂಪ್ಯೂಟರನ್ನು ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಪೂರ್ವಾಧ್ಯಕ್ಷರಾದ ಅಜೇಯ ಹವಲ್ದಾರ್, ಶ್ರೀನಿವಾಸ್, ಕಾರ್ಯದರ್ಶಿ ಸಿ.ಹೆಚ್. ಗಣೇಶ್ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಬೈಂದೂರು: ವಿಶ್ವದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ನಮ್ಮ ದೇಶದಲ್ಲಿ ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾದರೆ ಧರ್ಮ, ಜಾತಿ, ಭಾಷೆಗಳೆಂಬ ಭೇಧಭಾವ ತೊರೆದು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭಿತಿಯಿಂದ ಪ್ರತಿಯೊಬ್ಬರೂ ಮತಚಲಾಯಿಸಬೇಕು ಎಂದು ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು. ಉಪ್ಪುಂದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಜೇಸಿಐ ಘಟಕದ ಸಹಯೋಗದಲ್ಲಿ ನಡೆದ ಮತದಾರರ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಜೇಸಿಐ ಅಧ್ಯಕ್ಷ ನರಸಿಂಹ ಹಳಗೇರಿ ಮಾತನಾಡಿ, ಹಣದ ಪ್ರಭಾವದಿಂದ ಈಗಿನ ಚುನಾವಣೆಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ನೆಲೆಯಲ್ಲಿ ಹಣದ ಆಮಿಷಗಳಿಗೆ ಒಳಗಾಗದೇ ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜತೆಗೆ ಆತ್ಮಸಾಕ್ಷಿಯಾಗಿ ಮತಚಲಾಯಿಸಿ ಸಧೃಡ ದೇಶ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಯು. ರಾಜಾರಾಮ ಪಡಿಯಾರ್ ಮತ್ತು ಮುಖ್ಯಶಿಕ್ಷಕ ಮಹಾಬಲ ಗೌಡ ನೂತನ ಮತದಾರರಿಗೆ ಶುಭಹಾರೈಸಿದರು. ಗ್ರಾಮ ಲೆಕ್ಕಿಗ ಮಂಜು ಬಿಲ್ಲವ, ರೂಪೇಶ್ ಮತಗಟ್ಟೆ ಅಧಿಕಾರಿ ನರಸಿಂಹ…
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ಕೆಥೋಲಿಕ್ ಸಭಾ ಘಟಕದ ಬೆಳ್ಳಿ ಹಬ್ಬದ ಸಂಭ್ರಮ ವಿಜ್ರಂಭಣೆಯಿಂದ ನಡೆಯಿತು. ಉಡುಪಿ ಬಿಷಫ್ ಜೆರಾಲ್ಡ್ ಐಸಾಕ್ ಉತ್ಸವದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯ 25 ವರ್ಷಗಳ ಸುದೀರ್ಘ ಪಯಣ ಹಾಗೂ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಬೆಳ್ಳಿಹಬ್ಬದ ಸವಿನೆನಪಿನ ಪುಸ್ತಕ ಅನಾವರಣಗೊಳಿಸಲಾಯಿತು. ವಿವಿಧ ಚರ್ಚಿನ ಧರ್ಮಗುರುಗಳು ಹಾಗೂ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸ್ಥೆಯ ಸದಸ್ಯರಿಂದ ನಾಟಕ ಪ್ರದರ್ಶನಗೊಂಡಿತು.
ಬೈಂದೂರು: ಬೈಂದೂರು ಬಂಟರಯಾನೆ ನಾಡವರ ಸಂಘ ಹಾಗೂ ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಸಮಾರಂಭ ಹಾಗೂ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಬೈಂದೂರು ಬಂಟರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಐಎಫ್‌ಎಸ್ ಬಿ. ಜಗನ್ನಾಥ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಪಾಲಕರ ಹಾಗೂ ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದ ನಿವೃತ್ತ ಮುಖ್ಯಶಿಕ್ಷಕ ವಿ. ಭಾಸ್ಕರ್ ಶೆಟ್ಟಿ ನಾವುಂದ ಇವರಿಗೆ ಬೆಲ್ತೂರು ನಾಗಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ಪ್ರೌಢಶಾಲಾ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕಿಶೋರ್ ಕುಮಾರ್ ಶೆಟ್ಟಿ, ಯುವ ಉದ್ಯಮಿ ಬಿ.ಎಸ್.ಸುರೇಶ ಶೆಟ್ಟಿ, ಉತ್ತಮ ಕೃಷಿಕ ಕೆರಾಡಿ ಮೂಡಗಲ್ಲಿನ ಸೂಲಿಯಣ್ಣ ಶೆಟ್ಟಿ ಇವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಇದೇ ವೇಳೆ ಬೈಂದೂರು ವಲಯದ ಎಲ್ಲಾ ಪ್ರೌಢಶಾಲೆಗಳ 8, 9, 10ನೇ ತರಗತಿಯ ಆರ್ಥಿಕವಾಗಿ…
ಕುಂದಾಪುರ: ಚಿತ್ರ ಕಲಾವಿದರ ಕೃತಿಗಳ ಕಲಾ ಪ್ರೋತ್ಸಾಹಕರು ವಿಕ್ರಿಯಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಿದರೆ, ಮತ್ತಷ್ಟು ಉತ್ಕೃಷ್ಠ ಕೃತಿಗಳ ರಚನೆ ಕಲಾವಿದರಿಂದ ಸಾಧ್ಯ ಎಂದು ಮಂಗಳೂರು ಚಿತ್ರ ಕಲಾವಿದ ಗಣೇಶ್ ಸೋಮಯಾಜಿ ಹೇಳಿದರು. ಕುಂದಾಪುರ ಸಾಧನಾ ಸಂಗಮ ಟ್ರಸ್ಟ್ ಆಶ್ರಯಲ್ಲಿ ಮೋಹನ ಮುರಳಿ ಆರ್ಟ್ ಗ್ಯಾಲರಿಯಲ್ಲಿ ನಡೆದ ಕಲಾ ಸಂಕಲನ-2016 ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರದರ್ಶನ ಕಾಣುತ್ತಿರುವ ಎಲ್ಲಾ ಚಿತ್ರಗಳು ರಾಷ್ಟ್ರಮಟ್ಟದ ಶ್ರೇಷ್ಠ ಕಲಾಕೃತಿಗೆ ಸಮನಾಗಿವೆ ಎಂದು ಬಣ್ಣಿಸಿದ ಅವರು, ಹಿತ್ತಲುಗಿಡ ಮದ್ದಲ್ಲ ಎಂದು ತತ್ಸಾರ ಮಾಡದೆ ಕಲಾವಿರ ಪ್ರೋತ್ಸಾಹಿಸಿದರೆ ಇನ್ನಷ್ಟು ಉತ್ಕೃಷ್ಠ ಚಿತ್ರಗಳು ಮೂಡಿಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಲಾವಿದರಿಗೆ ಸದಾ ಹೊಸತನದ, ಹೋಸಾ ವಿಷಯಗಳ, ವಿನೂತನ ಯೋಚನೆಯ ತುಡಿತವಿರಬೇಕು. ಕಲಾವಿದರು ಉತ್ಕೃಷ್ಟ ಸಾಂಸ್ಕೃತಿಕವಾಗಿ ಬೆಳೆಯಬೇಕು. ಬಣ್ಣದ ಸಂಯೋಜನೆ, ಚಿತ್ರಕ್ಕೆ ಬಣ್ಣದ ಬ್ಯಾಲೆನ್ಸ್ ಕಲಾವಿದರಲ್ಲಿ ವಿಶೇಷವಾಗಿ ಇರಬೇಕಿದ್ದು, ಹೊಸ ಯೋಚನೆ, ಚಿಂತನೆಗಳು ಹೊಸತೊಂದು ಚಿತ್ರಕ್ಕೆ ಕಾರಣವಾಗುತ್ತದೆ ಎಂದು ಬಣ್ಣಿಸಿದರು.ಕುಂದಾಪುರ ಹಿರಿಯ ಕಲಾವಿದೆ ಅಂಬುಜಾ ಶೆಟ್ಟಿ, ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ…
ಶಂಕರನಾರಾಯಣ: ಇಲ್ಲಿನ ಮರಳು ಚಿಕ್ಕು ದೈವಸ್ಥಾನದಲ್ಲಿ ನಡೆದ ವಾರ್ಷಿಕ ಉತ್ಸವ ಮತ್ತು ಗೆಂಡಸೇವೆ ಸಂದರ್ಭ ಕಾರ್ಮಿಕ ವೇದಿಕೆ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರನ್ನು ಹುಟ್ಟೂರಲ್ಲಿ ಸನ್ಮಾನಿಸಲಾಯಿತು. ದೈವಸ್ಥಾನ ಮೊಕ್ತೇಸರ ಹಾಲಾಡಿ ತಾರಾನಾಥ ಶೆಟ್ಟಿ ಸನ್ಮಾನಿಸಿದರು. ಶಂಕರನಾರಾಯಣ ಕಲ್ಲುಕುಟಿಕ ದೈವಸ್ಥಾನ ಮೊಕ್ತೇಸರ ಮಂಜುನಾಥ ಶೆಟ್ಟಿ, ಡಾ.ಜಿ.ಎಚ್.ಪ್ರಭಾಕರ ಶೆಟ್ಟಿ, ಎಚ್.ರಾಮಚಂದ್ರ, ಕೆ.ಜಯರಾಮ ಶೆಟ್ಟಿ, ಪ್ರಕಾಶ್ ಶೆಟ್ಟಿ ಇದ್ದರು.
ಗಂಗೊಳ್ಳಿ: ಬಾಲ್ಯದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ನಾವು ಮಾಡುವ ಕಾರ್ಯದಲ್ಲಿ ನಿಸ್ವಾರ್ಥ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸನ್ಮಾನಕ್ಕಾಗಿ ನಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಸಮಾಜಕ್ಕಾಗಿ ಕೆಲಸ ಮಾಡಬೇಕು. ಶಾಲೆಗಳಲ್ಲಿ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ತಾಲೂಕು ಮಟ್ಟದಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ವಿದ್ಯಾರ್ಥಿ ವೈಭವ ಕಾರ್ಯಕ್ರಮ ಸ್ತುತ್ಯಾರ್ಹವಾದುದು ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆನಂದ ಸಿ.ಕುಂದರ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಶ್ರೀ ಸಿಗಂಧೂರೇಶ್ವರಿ ಡಾನ್ಸ್ ಅಕಾಡೆಮಿ ಗಂಗೊಳ್ಳಿ ಹಾಗೂ ರೋಟರಿ ಕ್ಲಬ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ’ವಿದ್ಯಾರ್ಥಿ ವೈಭವ-2016’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯಾರ್ಥಿ ಶ್ರಾವಣ ಜಿ.ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಉದ್ಯಮಿ ಡಾ.ವಿಜಯಕೃಷ್ಣ ಪಡುಕೋಣೆ ಶುಭ ಹಾರೈಸಿದರು. ಸಿಡಬ್ಲ್ಯುಸಿ ನಮ್ಮ ಭೂಮಿಯ ಕಾರ್ಯಕಾರಿ ನಿರ್ದೇಶಕ ಬಿ.ದಾಮೋದ ಆಚಾರ್ಯ, ಉದ್ಯಮಿಗಳಾದ ನಳಿನ ಕುಮಾರ್…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಇವರ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಎಲ್.ಜೆ.ಫೆರ್ನಾಂಡಿಸ್‌ರವರ ನಿವಾಸದಲ್ಲಿ ನಡೆಯಿತು. ಉದ್ಯಮಿ ಪ್ರಶಾಂತ್ ತೋಳಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೊಸ ವರ್ಷ ಆಚರಣೆಯ ಮಹತ್ವದ ಕುರಿತು ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಎಲ್.ಜೆ. ಫೆರ್ನಾಂಡಿಸ್, ಜೊತೆ ಕಾರ್ಯದರ್ಶಿ ಸಿ.ಹೆಚ್.ಗಣೇಶ್ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪುರ: ಗಳಿಸಿದಷ್ಟು ಬೇಕು ಎಂಬ ದುರಾಸೆಯಿಂದ ಸಮಾಜದಲ್ಲಿ ಮಾನವೀಯತೆ ಮರೆತ ಭ್ರಷ್ಟರು ಹುಟ್ಟಿಕೊಳ್ಳುತ್ತಿದ್ದಾರೆ. ಭ್ರಷ್ಟರನ್ನು ಜನರು ಪೋಷಿಸುತ್ತಿದ್ದರೇ ಕಾರ್ಯಾಂಗ ಮತ್ತು ಶಾಸಕಾಂಗದ ಅದರ ಲಾಭ ಪಡೆಯುತ್ತಿದೆ. ಬದುಕಿನಲ್ಲಿ ತೃಪ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರದಂತಹ ಪಿಡುಗನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಜಸ್ಟಿಸ್ ಸಂತೋಷ್ ಹೆಗ್ಡೆ ಹೇಳಿದರು. ಅವರು ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು. ನಮ್ಮಿಂದ ಚುನಾಯಿಸಲ್ಪಟ್ಟ ವ್ಯಕ್ತಿಗಳು ತಾವು ಜನಸೇವಕರು ಎಂಬುದನ್ನೇ ಮರೆತು ನಮ್ಮನ್ನು ಕೇಳಲು ನಿವ್ಯಾರ್ರಿ ಎಂದು ಪ್ರಶ್ನಿಸುತ್ತಾರೆ. ಓಟು ಕೇಳಲು ಮನೆ ಬಾಗಿಲಿಗೆ ಬರುವ ಮಂದಿ ಗೆದ್ದ ಬಳಿಕ ಜನರನ್ನೇ ಮರೆತು ಆರಾಮಾಗಿ ಬದುಕುತ್ತಿದ್ದಾರೆ. ತಿನ್ನಲು ಅನ್ನ ನೀಡುವ ರೈತ ಆತ್ಮಹತ್ಯೆ ಮಾಡಿಕೊಂಡಾಗ ಅವನ ಕುಟುಂಬವನ್ನು ಸಮಾಧಾನಪಡಿಸಲಿಲ್ಲ. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಜನನಾಯಕರಿಗೆ ಅನ್ನಿಸಲೇ ಇಲ್ಲ. ಆದರೆ ಅದೇ ಸರಕಾರದ ದುಡ್ಡಿನಲ್ಲಿ ಕೋಟಿ ಕೋಟಿ ಖರ್ಚುಮಾಡಿ ಮನೆ ಕಟ್ಟಿಕೊಳ್ಳಲು, ವಿಧಾನಸೌಧದ ಕಟ್ಟಡದ…
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಮ್ಮ ಕಛೇರಿಯಲ್ಲಿ 62ನೇ ಗಣರಾಜ್ಯೋತ್ಸವ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯರಾಧ ಕೆ. ರಮೇಶ ಗಾಣಿಗ ಎಸ್. ರಾಜು ಪೂಜಾರಿ, ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ ಗಾಣಿಗಸ್ಜಿಪಂ ಮಾಜಿ ಸದಸ್ಯ ಮದನ್ ಕುಮಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ, ಹಿರಿಯ ಮುಖಂಡ ವಾಸುದೇವ ಯಡಿಯಾಳ್, ಬ್ಲಾಕ್ ಕಾರ್ಯದರ್ಶಿ ನಾಗರಾಜ ಗಾಣಿಗ, ಯುಥ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಬೈಂದೂರು ಪಂಚಾಯತ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕೆ. ವಿ. ಸತೀಶ್, ಯಡ್ತರೆ, ಪಡುವರಿ, ಬೈಂದೂರು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು,
