Author: ನ್ಯೂಸ್ ಬ್ಯೂರೋ

ಬೈಂದೂರು: ಉಪ್ಪುಂದದಲ್ಲಿ ನಲವತ್ತು ಲಕ್ಷ ರೂಪಾಯಿ ಅನುದಾನದ ಅಂಬಾಗಿಲು ಹಳೇ ಎಂಬೆಸ್ಸಿ ರಸ್ತೆ ಹಾಗೂ ಮೀನುಗಾರಿಕಾ ನಬಾರ್ಡನ ಹದಿನೈದು ಲಕ್ಷ ಅನುದಾನದ ಮಡಿಕಲ್ ಉಪ್ಪುಂದ ಕಿರುಸೇತುವೆ ಸಹಿತ ರಸ್ತೆ ಕಾಮಗಾರಿಗೆ ಶಾಸಕ ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ಜಿಲ್ಲಾ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ, ಮಾಜಿ ಸದಸ್ಯ ಮದನ್‌ಕುಮಾರ್, ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಗ್ರಾಪಂ ಸದಸ್ಯರಾದ ಐ.ನಾರಾಯಣ, ಸತೀಶ ಶೆಟ್ಟಿ, ಸುಮಿತ್ರಾ, ರಾಮಚಂದ್ರ ಖಾರ್ವಿ, ನಾರಾಯಣ ಖಾರ್ವಿ, ವೆಂಕಟರಮಣ ಖಾರ್ವಿ, ವಸುದೇವ ಪೂಜಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗೋಕುಲ ಶೆಟ್ಟಿ, ಮುಂತಾದವರು ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಮಾಸೆಬೈಲು ಚಟ್ಟರಿಕಲ್ ನಿಂದ ಕಲ್ಲು ಸಾಗಿಸುತ್ತಿದ್ದ ಲಾರಿ ಚರಂಡಿಗೆ ಇಳಿದ ಪರಿಣಾಮ ಅದನ್ನು ಮೇಲೆತ್ತಲು ಬಂದಿದ್ದ ಕ್ರೇನಿನ ಬದಿಯಲ್ಲಿ ನಿಂತಿದ್ದ ಇನ್ನೊಂದು ಲಾರಿ ಚಾಲಕನ ಮೇಲೆ ಕ್ರೇನ್ ಮಗುಚಿ ಬಿದ್ದದ್ದರಿಂದ ಚಾಲಕ ಕೃಷ್ಣ (33) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಚರಂಡಿಗೆ ಲಾರಿ ಇಳಿದ್ದರಿಂದ ಲಾರಿಯನ್ನು ಕ್ರೇನ್ನಿಂದ ಮೇಲೆತ್ತಿರುವುದನ್ನು ನೋಡಲು ತನ್ನ ಲಾರಿಯನ್ನು ನಿಲ್ಲಿಸಿ ಬಂದಿದ್ದ  ಕೃಷ್ಣ ದೂರದಲ್ಲಿಯೇ ನಿಂತು ನೋಡುತ್ತಿದ್ದಾಗ ಏಕಾಏಕಿ ಕ್ರೇನ್ ಈತನ ತಲೆಯ ಮೇಲೆಯೇ ಮಗುಚಿ ಬಿದ್ದದ್ದರಿಂದ ತಲೆಗೆ ಗಂಭೀರ ಗಾಯಗಳಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಅಮಾಸೆಬೈಲು ಠಾಣಾಧಿಕಾರಿ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಾಗಿದೆ.

Read More

ಕುಂದಾಪುರ: ಇಲ್ಲಿನ ಕುಂದಪ್ರಭ ಪತ್ರಿಕೆ,  ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ) ಮಂಗಳೂರು, ಆಕಾಶವಾಣಿ ಮಂಗಳೂರು, ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ಸಹಯೋಗದೊಂದಿಗೆ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಉಡುಪಿ ಜಿಲ್ಲಾ ಯುವ ಕವಿ ಸಮ್ಮೆಳನ ಹಾಗೂ ಪುಟ್ಟಣ್ಣ ಕುಲಾಲ್ ಯುವ ಕವಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಮಾತನಾಡಿ, ಸತತ ಅಧ್ಯಯನಶೀಲತೆಯಿಂದ ಉತ್ತಮ ಕವಿತೆ ಮೂಡಿ ಬರಲು ಸಾಧ್ಯ. ಒಳ್ಳೆಯ ಭಾಷೆಯನ್ನು ಬಳಸುವ ಮೂಲಕ ಉತ್ತಮ ಕೃತಿಗಳನ್ನು ಮೂಡಿಸಲು ಸಾಧ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ರಿ. ಇದರ ಅಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ ಮಾತನಾಡಿ, ಮಾನಸಿಕ ಸ್ಥಿಮಿತವನ್ನು ಕಾಯ್ದುಕೊಳ್ಳಲು ಸಾಹಿತ್ಯ ಮಹತ್ತರ ಪಾತ್ರ ವಹಿಸುತ್ತದೆ. ಬೇರೆ ಭಾಷೆಯ ತಿರುಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಬೇಕು ಒಟ್ಟಾರೆ ಕನ್ನಡವನ್ನು ಕಟ್ಟುವ ಕಾರ್ಯ ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ…

Read More

ಬೈಂದೂರು: ಈ ಸಾಲಿನ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯು ಮಂಗಳವಾರ ತಾರಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇಲಾಖೆ ಪ್ರತಿಭಾ ಕಾರಂಜಿಯಂತಹ ವಿನೂತನ ಕಾರ್ಯಕ್ರಮವನ್ನು ಸಂಘಟಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಹಿಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಸಿಗದೇ ಅವರ ಪ್ರತಿಭೆ ಕಮರಿ ಹೋಗುತ್ತಿತ್ತು, ಆದರೆ ಈಗ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರಕುತ್ತಿದೆ ಎಂದರು. ಪಡುವರಿ ಗ್ರಾ.ಪಂ. ಅಧ್ಯಕ್ಷೆ ದೀಪಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಮಾಜಿ ಜಿ.ಪಂ. ಸದಸ್ಯ ಮದನ ಕುಮಾರ, ತಾ.ಪಂ. ಸದಸ್ಯರಾದ ಪ್ರಸನ್ನ ಕುಮಾರ, ಗೌರಿ ದೇವಾಡಿಗ ಬಿಜೂರು, ಗ್ರಾ.ಪಂ. ಸದಸ್ಯರಾದ ಸುರೇಶ ಬಟ್ವಾಡಿ,…

Read More

ಕುಂದಾಪುರ: ತಲ್ಲೂರಿನ ಪಾರ್ತಿಕಟ್ಟೆಯಲ್ಲಿ ಕೋಮುಸೌಹಾರ್ದತೆಗೆ ಧಕ್ಕೆ ತರುವಂತಿದ್ದ ಹಾಗೂ ಕಾನೂನು ಬಾಹಿರವಾಗಿ ಅಳವಡಿಲಾಗಿದ್ದ ಭಗವಧ್ವಜವನ್ನು ತೆಗೆದು ಹಾಕಲು ತಲ್ಲೂರು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಓ ಅವರ ಬಳಿ ಮನವಿ ಮಾಡಿಕೊಂಡ ಬಳಿಕ ಅವರು ಕಾನೂನುಕ್ರಮ ಕೈಗೊಂಡಿದ್ದಾರೆ. ಇಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ನಡೆಸಿಲ್ಲ. ಆದರೆ ರಾಜಕೀಯ ಪ್ರೇರಿತವಾಗಿ ಸಾಮಾಜಿಕ ತಾಣಗಳಲ್ಲಿ ತನ್ನ ತೇಜೋವಧೆ ಮಾಡಲಾಗುತ್ತಿದೆ ಎಂದಿರುವ ತಲ್ಲೂರು ಗ್ರಾ.ಪಂ. ಸದಸ್ಯ ಉದಯಕುಮಾರ ತಲ್ಲೂರು ಘಟನೆ ಕುರಿತು ‘ಕುಂದಾಪ್ರ ಡಾಟ್ ಕಾಂ’ಗೆ ಸ್ಪಷ್ಟನೆ ನೀಡಿದ್ದಾರೆ. ತಲ್ಲೂರು ವಾರ್ಡ್-1ರ ಗಡಿಯಲ್ಲಿ ಹಟ್ಟಿಯಂಗಡಿ ಗ್ರಾಮ ಪಂಚಾಯತಿಗೆ ಸೇರಿದ 9 ಮನೆಗಳಿದ್ದು ಈ ಭಾಗದ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ತಲ್ಲೂರು ಗ್ರಾಮ ಪಂಚಾಯತ್ ವತಿಯಿಂದಲೇ ಅಭಿವೃದ್ಧಿಪಡಿಸಿತ್ತು. ಹಾಗಾಗಿ ಈ ಭಾಗದಲ್ಲಿ ಧ್ವಜವನ್ನು ಹಾಕುವ ಬಗ್ಗೆ ಪರವಾನಿಗೆ ನೀಡಲು ತಲ್ಲೂರು ಹಾಗೂ ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಜಂಟಿ ಸದನ ಸಮಿತಿಯಲ್ಲಿ ತೀರ್ಮಾನ ಅವಶ್ಯ. ಕೇವಲ ಒಂದು ಗ್ರಾಮ ಪಂಚಾಯತಿಯಿಂದ ತಾತ್ಕಾಲಿಕ ಪರವಾನಿಗೆ ಪಡೆದರೇ…

Read More

ಬೈಂದೂರು: ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಖಾಸಗೀ ಬಸ್ಸು ಮಾಲಕರ ಅಪವಿತ್ರ ಮೈತ್ರಿಯಿಂದಾಗಿ ಜನರು ರೈಲುಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜನರಿಗೆ ರೈಲು ಸೌಲಭ್ಯ ಸಿಗದಿರಲು ಜನಪ್ರತಿನಿಧಿಗಳ ವೈಪಲ್ಯವಾಗಿದೆ. ಜಿಲ್ಲೆಯಲ್ಲಿ 35 ಸಾವಿರ ಸಹಿ ಸಂಗ್ರಹ ಮಾಡಿ ರೈಲು ಬೇಡಿಕೆ ಈಡೇರಿಸಲು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಮುಂದೆ ಹಂತಹಂತವಾಗಿ ತೀವ್ರ ತೆರನಾದ ಹೋರಾಟಗಳನ್ನು ಸಿಪಿಐ(ಎಂ) ಪಕ್ಷ ನಡೆಸಲಿದೆ ಎಂದು ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ಕಲ್ಲಾಗರ ಹೇಳಿದರು. ಅವರು ಬೈಂದೂರಿನಲ್ಲಿ ನಡೆದ ಕಾರವಾರ-ಬೆಂಗಳೂರು ರೈಲು ವೇಗ ಹೆಚ್ಚಳಕ್ಕಾಗಿ ಹಾಗೂ ಬೆಂಗಳೂರಿಗೆ ಮತ್ತೊಂದು ರೈಲು ಆರಂಭಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ಸಿಪಿಐ(ಎಂ) ಬೈಂದೂರು ವಲಯ ಮುಖಂಡರಾದ ವೆಂಕಟೇಶಕೋಣಿ ಮಾತನಾಡಿ ಖಾಸಗಿ ಮತ್ತು ಸರಕಾರಿ ಬಸ್ಸುಗಳ ಮಾಲಕರು ಹಬ್ಬ ಹರಿದಿನಗಳಲ್ಲಿ ಮನಸ್ಸೊ-ಇಚ್ಚೆ ಜನರಿಂದ ಸಾವಿರಾರು ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಬಸ್ಸು ಮಾಲಕರಿಗೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಕ್ರಮ ಜರುಗಿಸಬೇಕಾದ ಜಿಲ್ಲಾಡಳಿತ ತಪ್ಪಗೆ ಮಲಗಿದೆ ಎಂದು ಆರೋಪಿಸಿದರು. ಸಿಪಿಐ(ಎಂ) ಮುಖಂಡರಾದ ಹೆಚ್. ನರಸಿಂಹ, ರಾಜೀವ…

Read More

ಕುಂದಾಪುರ: ಪ್ರತಿಯೊಬ್ಬರಿಗೂ ಮಾತೃಭಾಷೆ ಮುಖ್ಯವಾಗಿರುತ್ತದೆ. ನಮ್ಮ ಭಾಷೆಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಬೆಳೆಸುವುದರೊಂದಿಗೆ ಬೇರೆ ಭಾಷೆಗೂ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಹೇಳಿದರು. ಅವರು ಕನ್ನಡ ವೇದಿಕೆ ಕುಂದಾಪುರ, ಕುಂದಾಪುರ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ಬಕುಳ ಸಾಹಿತ್ಯ ವೇದಿಕೆ, ಸರಕಾರಿ ಪ.ಪೂ.ಕಾಲೇಜು ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜೊತೆ ಕನ್ನಡ ಮಾಸಾಚರಣೆಯ ಪ್ರಯುಕ್ತ ನಿತ್ಯ ಸತ್ಯ ಕನ್ನಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿಜ್ಞಾನಿ ಡಾ|ದಿನೇಶ್ ಆಶಯ ಭಾಷಣ ಮಾಡಿ ಭಾಷೆ ಎನ್ನುವುದು ಅನುಭವಿಸುವಂತಾಗಬೇಕು. ಪ್ರತಿಯೊಬ್ಬನು ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಅದು ಬದುಕಿನ ಒಂದು ಭಾಗವಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಪ್ರೌಢಶಾಲಾ ಮುಖ್ಯೋಪಾಯರ ಸಂಘದ ಅಧ್ಯಕ್ಷ ದಿನಕರ ಆರ್.ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕುಂದಾಪುರ…

Read More

ಗಂಗೊಳ್ಳಿ: ಇತ್ತೀಚೆಗೆ ಕರ್ನಾಟಕ ಸರಕಾರದ ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇವರ ವತಿಯಿಂದ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರು ದ್ವಿತೀಯ ಸ್ಥಾನ ಪಡೆದರು.. ಟ್ರೋಫಿಯೊಂದಿಗೆ ವಿಜೇತ ಕ್ರೀಡಾಳುಗಳಾದ ನಾಗೇಂದ್ರ ಮೊಗವೀರ,ನಾಗರಾಜ ನಾಯಕ್ ಮತ್ತು ಪ್ರಜ್ವಲ್ ಖಾರ್ವಿ. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್,ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದಾರೆ. ವರದಿ: ನರೇಂದ್ರ ಎಸ್ ಗಂಗೊಳ್ಳಿ.

Read More

ಗಂಗೊಳ್ಳಿ: ವ್ಯಕ್ತಿ ಎಷ್ಟೇ ದೊಡ್ಡವನಾದರೂ ತಾಯ್ನೆಲ ಮತ್ತು ತಾಯಿ ಬಾಷೆಯನ್ನು ಮರೆಯಬಾರದು. ಕನ್ನಡ ಎನ್ನುವುದು ನಮ್ಮ ದಿನನಿತ್ಯದ ಬಳಕೆಯಲ್ಲಿ ಸರಾಗವಾಗಿ ಹರಿಯಬೇಕು. ಬಾಷೆಯ ಬಗೆಗೆ ಹೆಮ್ಮೆ ಇರಬೇಕೆ ಹೊರತು ಕೀಳರಿಮೆ ಸಲ್ಲದು. ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಶ್ವನಾಥ ಭಟ್ ಅವರು ಅಭಿಪ್ರಾಯ ಪಟ್ಟರು. ಬೆಂಗಳೂರು ಹೋಟೆಲ್ ನ್ಯೂಸ್ ಮಾಸಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಗಂಗೊಳ್ಳಿ ಘಟಕವು ಇಲ್ಲಿ ಹಮ್ಮಿಕೊಂಡಿದ್ದ 60ನೇ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಕೆ. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಕಾರ‍್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ. ರವೀಂದ್ರ ಪಟೇಲ್,ನಾಗರಾಜ ಶೇರುಗಾರ್, ರಾಘವೇಂದ್ರ ಪೂಜಾರಿ, ಆನಂದ ಗಾಣಿಗ ,ಆಕಾಶ್ ಗಾಣಿಗ , ಭಾಸ್ಕರ, ಲಕ್ಷ್ಮಣ, ಗುರು, ನಾರಾಯಣ, ಮುಕುಂದ, ನಾಗರಾಜ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.ಸ.ವಿ.ಮಾದರಿ ಹಿರಿಯ…

Read More

ಕುಂದಾಪುರ: ತಾಲೂಕಿನ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದೆನ್ನಲಾದ ಸ್ಥಳದಲ್ಲಿ ಹಾಕಲಾಗಿದ್ದ ಭಗವದ್ವಜವನ್ನು ವಿನಾಕಾರಣ ಕಿತ್ತೆಸೆದ ತಲ್ಲೂರು ಗ್ರಾಮಾಡಳಿತದ ಕ್ರಮವನ್ನು ಖಂಡಿಸಿ ಇಂದು ತಲ್ಲೂರು ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕೋಟೆಬಾಗಿಲಿನ ಯುವಕರು ಇತ್ತೀಚೆಗೆ ಪಾರ್ತಿಕಟ್ಟೆ ಎಂಬಲ್ಲಿ ರಕ್ತೇಶ್ವರಿ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿದ್ದ ಭಗವದ್ವಜ ನೆಟ್ಟಿದ್ದರು. ಸೋಮವಾರ ಮಧ್ಯಾಹ್ನ ತಲ್ಲೂರು ಪಂಚಾಯಿತಿ ಗುಮಾಸ್ತರೊಬ್ಬರು ಈ ಬಾವುಟವನ್ನು ಕಿತ್ತಿದ್ದರೆನ್ನಲಾಗಿದೆ. ಪುನಃ ದ್ವಜ ನೆಟ್ಟಿದ್ದರೂ ತಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರೋರ್ವರ ಅಣತಿಯಂತೆ ಮತ್ತೆ ರಾತ್ರಿ ಕೀಳಲಾಗಿದೆ ಎಂದು ಕೆಲ ಯುವಕರು ಆರೋಪಿಸಿದ್ದಾರೆ. ಈ ಬಗ್ಗೆ ಮಂಗಳವಾರ ನಡೆದ ತಲ್ಲೂರು ಗ್ರಾಮಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೋ ಪೂರ್ವಾಪರ ಇಟ್ಟುಕೊಂಡು ಧ್ವಜವನ್ನು ಕಿತ್ತು ತಪ್ಪೆಸಗಿದವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹಿಂದೂ ಸಂಘಟನೆಯ ಯುವಕರು ಎಚ್ಚರಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಈ ನಡುವೆ ಸಾಮಾಜಿಕ ತಾಣಗಳಲ್ಲಿ ಭಗವಧ್ವಜ ಕಿತ್ತೆಸೆದಿರುವ ಬಗ್ಗೆ ಹಿಂದೂ ಪರ…

Read More