Author: ನ್ಯೂಸ್ ಬ್ಯೂರೋ

ಬೈಂದೂರು: ಇಲ್ಲಿಗೆ ಸಮೀಪದ ನಾಯ್ಕನಕಟ್ಟೆ ಬಳಿ ಲಾರಿಯೊಂದು ಮೊಪೆಡ್‌ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭಿರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಇಂದು ಸಂಜೆಯ ವೇಳೆಗೆ ನಡೆದಿದೆ.  ನಂದನವನ ನಿವಾಸಿ ಲಕ್ಷ್ಮಣ ಭಟ್ (66) ಮೃತ ದುರ್ದೈವಿ. ಬೈಂದೂರಿನಿಂದ ಕುಂದಾಪುರಕ್ಕೆ ಸಾಗುತ್ತಿದ್ದ ಲಾರಿ ಉಪ್ಪುಂದ ಕಡೆಯಿಂದ ನಂದನವನದತ್ತ ಸಾಗುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಾಗ ಬೈಕ್ ಸವಾರ ಪಕ್ಕಕ್ಕೆ ಬಿದ್ದು, ಬೈಕ್ ಮೇಲೆ ಲಾರಿ ಏರಿಹೋದ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿತ್ತು. ಗಂಭೀರವಾಗಿ ಗಾಯಗೊಂಡ ಲಕ್ಷ್ಮಣ ಭಟ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. (ಕುಂದಾಪ್ರ ಡಾಟ್ ಕಾಂ)  ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪುರ: ಕ್ರೀಡೆಗಳು ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುವ ಜೊತೆಗೆ ನಮ್ಮ ಕೌಶಲ್ಯವನ್ನು ವೃದ್ಧಿಸುತ್ತದೆ. ನಮ್ಮೊಳಗಿನ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕ್ರೀಡಾಕೂಟದಿಂದ ದೊರೆಯುವುದರಿಂದ ರೋಟರಿ ವಲಯದ ಸದಸ್ಯರ ನಡುವಿನ ಭಾಂದವ್ಯ ವೃದ್ಧಿಸುವ ಸಲುವಾಗಿ ವಲಯ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ. ಎಲ್ಲ ಸದಸ್ಯರ ಉತ್ಸಾಹದ ಭಾಗವಹಿಸುವಿಕೆಯಿಂದ ಕ್ರೀಡಾಕೂಟ ಯಶಸ್ವಿಯಾಗಲು ಸಾಧ್ಯವಾಗಿದೆ ಎಂದು ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ವಲಯ 1ರ ಸದಸ್ಯರಿಗೆ ಏರ್ಪಡಿಸಿದ ರೋಟರಿ ವಲಯ ಕ್ರೀಡಾಕೂಟದ ಅಂಗವಾಗಿ ಕುಂದಾಪುರದ ಆರ್ಶೀವಾದ ಹಾಲ್‌ನಲ್ಲಿ ಆಯೋಜಿಸಿದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ಸಹನಾ ಡೆವಲಪರ‍್ಸ್‌ನ ನಿರ್ದೇಶಕ ಸುರೇಂದ್ರ ಶೆಟ್ಟಿ ಬಹುಮಾನ ವಿತರಿಸಿದರು. ವಲಯದ ಕಾರ್ಯದರ್ಶಿ ಸುದರ್ಶನ್ ಕೆ. ಎಸ್., ಕ್ರೀಡಾಕೂಟ ಸಂಯೋಜಕ ರವಿರಾಜ್ ಶೆಟ್ಟಿ, ಕ್ರೀಡಾಕೂಟ ಸಂಚಾಲಕ ರಂಜಿತ್ ಶೆಟ್ಟಿ, ರೋಟರಿ ಕುಂದಾಪುರ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ರೋಟರಿ ಸದಸ್ಯರಾದ…

Read More

ಬೈಂದೂರು: ಸಿಬ್ಬಂದಿಯೊಬ್ಬ ತನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ತನ್ನ ಕರ್ತವ್ಯ ಅರಿತು ಕೆಲಸಮಾಡಿದಾಗ ಜನಮನ್ನಣೆಗಳಿಸಲು ಸಾಧ್ಯ ಎನ್ನುವುದಕ್ಕೆ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಂಕರ ಕೊಠಾರಿ ಉತ್ತಮ ನಿದರ್ಶನ ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು. ಯಡ್ತರೆಯ ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆದ ಇತ್ತೀಚೆಗೆ ನಿವೃತ್ತರಾದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂಕರ ಕೊಠಾರಿ ಹಾಗೂ ವ್ಯವಸ್ಥಾಪಕ ವೈ. ಸುರೇಶ್ ಶ್ಯಾನುಬಾಗ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸುಧೀರ್ಘ 19 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಕೊಠಾರಿ ಅವರು ಸಂಘದ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯ ನಡುವೆ ಸಂಪರ್ಕ ಕೊಂಡಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ತರವಾಗಿದೆ ಎಂದರು. ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜು ಪೂಜಾರಿ, ಸಂಘದ ನಿರ್ದೇಶಕರಾದ ವೆಂಕ್ಟ ಪೂಜಾರಿ, ಸದಾಶಿವ ಪಡುವರಿ, ಬಾಬು ಶೆಟ್ಟಿ, ಚಿಕ್ಕು ಪೂಜಾರಿ, ಎನ್. ನಾಗರಾಜ ಶೆಟ್ಟಿ,…

Read More

ಗಂಗೊಳ್ಳಿ : ನಿವೃತ್ತಿ ಎನ್ನುವುದು ಪ್ರತಿ ಉದ್ಯೋಗಸ್ಥರ ಜೀವನದ ಸಹಜ ತಿರುವು. ದುಖಃ ಸಂತೋಷಗಳೆರಡೂ ಸಹಜ. ಅವೆಲ್ಲಕ್ಕಿಂತ ಹೆಚ್ಚಾಗಿ ಒಬ್ಬರ ನಿವೃತ್ತಿ ಮೊದಲಿನ ಬದುಕು ಇಡೀ ಸಂಸ್ಥೆ ಮತ್ತು ಸಮಾಜ ಹಮ್ಮೆಪಡುವಂತಿದ್ದರೆ ಅದು ನಿಜವಾದ ಸಾಧನೆ ಎಂದು ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಅಧ್ಯಕ್ಷರಾದ ಡಾ.ಕಾಶೀನಾಥ ಪೈ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದಲ್ಲಿ ಸತತ ನಲವತ್ತೊಂದು ವರುಷಗಳ ಕಾಲ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಿ.ಸದಾಶಿವ ಗಾಣಿಗರನ್ನು ಬೀಳ್ಗೊಡುವ ಸಮಾರಂಭದಲಿ ಅದ್ಯಕ್ಷತೆ ವಹಿಸಿ ಅವರನ್ನು ಅಭಿನಂದಿಸಿ ಮಾತನಾಡಿದರು. ಜಿ.ಎಸ್ ವಿ.ಎಸ್ ಅಸೋಶಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್, ಸರಸ್ವತಿ ವಿದ್ಯಾಲಯದ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ,ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಮುಖ್ಯೋಪಧ್ಯಾಯ ರಾಘವೇಂದ್ರ ಶೇರುಗಾರ್, ಆಡಳಿತ ಮಂಡಳಿಯ ಸದಸ್ಯ ಅಶ್ವಿನ್ ನಾಯಕ್, ಕಛೇರಿ ಸಿಬ್ಬಂದಿ ವರ್ಗದವರು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಕಛೇರಿ ಯ ನಿಕಟವರ್ತಿ ಭಾಸ್ಕರ್…

Read More

ಕುಂದಾಪುರ: ಹೋಲಿ ರೋಜರಿ ಮಾತೆ ಇಗರ್ಜಿಯ ತೆರಾಲಿ ಹಬ್ಬದ ಪೂರ್ವಭಾವಿಯಾಗಿ ಭಾನುವಾರ ಸಂಜೆ ಇಗರ್ಜಿ ಭಕ್ತವಂದದವರ ಸಹಭಾಗಿತ್ವದಲ್ಲಿ ಬೃಹತ್ ಪುರಮೆರವಣಿಗೆ ಹಾಗೂ ಸಹೋದರ ಭಾಂದತ್ವದ ರವಿವಾರವನ್ನು ಆಚರಿಸಲಾಯಿತು. ಮಂಗಳೂರಿನ ಮಂಗಳ ಜ್ಯೋತಿಯ ನಿರ್ದೇಶಕರಾದ ವಂದನೀಯ ಧರ್ಮಗುರು ವಿಜಯ್ ಮಚಾದೊ ಅವರ ಮಾರ್ಗದರ್ಶನದಲ್ಲಿ ರೊಜಾರಿ ಚರ್ಚಿನಲ್ಲಿ ಪವಿತ್ರ ಬಲಿದಾನದ ಪೂಜೆ ನೆರವೇರಿಸಲಾಯಿತು. ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಧರ್ಮಗುರು ವ| ಅನೀಲ್ ಡಿ’ಸೋಜಾ ಹಾಜರಿರು. ಸಹಾಯಕ ಧರ್ಮ ಗುರುಳಾದ ವ|ಪಾವ್ಲ್ ಪ್ರಕಾಶ್ ಡಿಸೋಜಾ ಮತ್ತು ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಚರ್ಚ್ ಮಂಡಳಿಯ ಸದಸ್ಯರು, ಧರ್ಮ ಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ಪೂಜಾ ವಿಧಿಯಲ್ಲಿ ಭಾಗವಹಿಸಿದ್ದರು. ಬಳಿಕ ಸಂತ ಮೇರಿಸ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ಪರಮ ಪ್ರಸಾದದ ಆರಾಧನೆಯಲ್ಲಿ ಕುಂದಾಪುರದ ಕ್ರೈಸ್ತ ಸಮುದಾಯದ ಬಂಧುಗಳು ಭಾಗವಹಿಸಿದ್ದರು. ಸಭೆಗೂ ಮೊದಲು ಮೇಣದ ಬತ್ತಿಗಳನ್ನು ಹೊತ್ತಿಸಿ, ಭಕ್ತಿ ಗಾಯನದೊಂದಿಗೆ, ಅಲಂಕಾರಗಳೊಂದಿಗೆ ಪರಮ ಪ್ರಸಾದದ ಮೆರವಣಿಗೆಯನ್ನು ಕುಂದಾಪುರದ…

Read More

ಕುಂದಾಪುರ: ಎಲ್ಲಾ ಭಾರತೀಯ ಭಾಷೆಗಳನ್ನು ಕಂಪ್ರೂಟರ್‌ಗೆ ಅಳವಡಿಸುವುದು ನನ್ನ ಗುರುತರ ಜವಾಬ್ಧಾರಿಯಾಗಿತ್ತು, ಆದರೆ ನನ್ನ ಮೂಲ ಭಾಷೆ ಕನ್ನಡವಾಗಿದ್ದರಿಂದ ಮತ್ತು ಅತಿ ಸುಲಭವಾಗಿ ನನಗೆ ಕನ್ನಡ ಲಿಪಿ ಮತ್ತು ಭಾಷೆ ಗೊತ್ತಿರುವುದರಿಂದ ನನಗೆ ಕನ್ನಡದ ತಂತ್ರಾಂಶದ ಅಭಿವೃದ್ಧಿಯತ್ತ ಹೆಚ್ಚು ಆಸಕ್ತನಾಗಲು ಸಾಧ್ಯವಾಯಿತು ಎಂದು ಕನ್ನಡ ತಂತ್ರಾಂಶ ಸಂಶೋಧಕ ನಾಡೋಜ ಕೆ.ಪಿ.ರಾವ್ ಹೇಳಿದರು. ಕನ್ನಡ ವೇದಿಕೆ ಕುಂದಾಪುರ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವಂಬರ್ ತಿಂಗಳ ಎಲ್ಲಾ ಭಾನುವಾರಗಳು ನಡೆಯಲಿರುವ ಎರಡನೇ ವರ್ಷದ ಕನ್ನಡ ಮಾಸಾಚರಣೆ ’ಡಿಂಡಿಮ’ ಕಾರ್ಯಕ್ರಮವನ್ನು ಭಾನುವಾರ ಸಂಜೆ ಸ.ಪ.ಪೂ.ಕಾಲೇಜಿನ ಕಲಾಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು. ಒಂದು ಭಾರತೀಯ ಲಿಪಿಯಲ್ಲಿ ಮೊದಲ ಬಾರಿಗೆ ಕಂಪ್ಯೂಟರ್‌ಗೆ ಅಳವಡಿಸಿದ್ದು ಸಿಂಧೂ ಲಿಪಿಗೆ. ನಂತರದಲ್ಲಿ ಕನ್ನಡ ಸೇರಿದಂತೆ ಇತರ ಭಾಷಾ ಲಿಪಿಗಳ ಅಳವಡಿಕೆ ಸಾಧ್ಯವಾಯಿತು. ಕನ್ನಡೆ ಭಾಷೆಯನ್ನು ಕಂಪ್ಯೂಟರ್‌ನಲ್ಲಿ ಹೇಗೆ ಅಳವಡಿಸಿಕೊಳ್ಲಬೇಕು? ಮಾಹಿತಿ ತಂತ್ರಜ್ಞಾನಗಳಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವ ಮೂಲಕ ಕನ್ನಡದ ಅಭಿವೃದ್ಧಿಗೆ ಹಚ್ಚು ಪ್ರಯತ್ನಶೀಲನಾಗಬೇಕಾಗಿದೆ. ಐದು ಶತಮಾನಗಳ ಹಿಂದೆ ಪಾಣಿನಿಯ ಮಾಹೇಶ್ವರ ಸೂತ್ರಗಳನ್ನು ಮೂಲವಾಗಿಟ್ಟುಕೊಂಡು ಲಿಪಿಗಳನ್ನು…

Read More

ಕುಂದಾಪುರ: ಭಾರತೀಯ ಜನತಾ ಪಕ್ಷದ ಹಿರಿಯ ಕಟ್ಟಾಳು ಪುಂಡಲೀಕ ನಾಯಕ್ (75)  ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃದು ಸ್ವಭಾವದ, ಮಿತಭಾಷಿಕರೂ ಆಗಿದ್ದ ನಾಯಕರು ಬದುಕಿನ ಸಂಧ್ಯಾ ಕಾಲದವರೆಗೂ ಬ್ರಹ್ಮಚರ್ಯವನ್ನು ಆಚರಿಸಿದ್ದರು. ಹೋಟೆಲ್ ಉದ್ಯಮ, ಪಕ್ಷ, ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡವರು. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಕ್ರೀಯ ಸದಸ್ಯರಾಗಿದ್ದ ನಾಯಕರು ಕುಂದಾಪುರದಲ್ಲಿ ಸಂಘವನ್ನು ಬಲಪಡಿಸಿದವರಲ್ಲಿ ಓರ್ವರು. ಕುಂದಾಪುರದಲ್ಲಿ ಜನಸಂಘವನ್ನು ಕಟ್ಟಿ ಬೆಳೆಸಿದ ಪುಂಡಲೀಕ ನಾಯಕ್ ಆ  ಮೂಲಕ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಪುರಸಭಾ ಸದಸ್ಯರಾಗಿ ಸೇವೆ ಸಲ್ಲಿಸಿಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ್ದ ಇವರು  1989ರಲ್ಲಿ ಮೊದಲ ಭಾರಿಗೆ ಬಿಜೆಪಿಯ ಅಭ್ಯರ್ಥಿಯಾಗಿಯೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ವರ್ಧಿಸಿದ್ದರು. ಕುಂದಾಪುರದಲ್ಲಿ ಇವರ ಒಡೆತನದಲ್ಲಿ ನಡೆಯುತ್ತಿದ್ದ ‘ನಾಯಕ್ ರೆಸ್ಟೊರೆಂಟ್’ ಆ ಕಾಲದಲ್ಲಿ ಬಹು ಪ್ರಸಿದ್ಧಿಯನ್ನು ಪಡೆದಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಆರ್.ಎಸ್.ಎಸ್. ಹಾಗೂ ಬಿಜೆಪಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರುಗಳೊಂದಿಗೆ ಒಡನಾಟ ಹೊಂದಿದ್ದ ಇವರು ಈ ಭಾಗದಲ್ಲಿ ಅನೇಕ ಜನಪರವಾದ…

Read More

ಕುಂದಾಪುರ: ಫ್ಲೋರಾ ಎಂಡ್ ಫೋನಾ ಕ್ಲಬ್ ಆಶ್ರಯದಲ್ಲಿ ಡಾ. ಎನ್.ಆರ್. ಆಚಾರ್ಯ ಮೆಮೋರಿಯಲ್ ಟ್ರಸ್ಟ್, ಕೋಟೇಶ್ವರ ಇವರ ಸಹಯೋಗದೊಂದಿಗೆ ಪಕ್ಷಿಗಳ ಅಧ್ಯಯನವನ್ನು ಈ ವರ್ಷದ ಕೇಂದ್ರ ಆಶಯವನ್ನಾಗಿ ಇಟ್ಟುಕೊಂಡು ಇಕೋ ಕ್ಲಬ್ ವಿದ್ಯಾರ್ಥಿಗಳ ಸಮಾವೇಶ ವಿಂಗ್ಸ್-2015 ಆಯೋಜಿಸಿದ್ದು ಇದರ ಅಂಗವಾಗಿ ನ. 7 ರಂದು ಕುಂದಾಪುರದ ಸರಕಾರಿ ಪ.ಪೂ ಕಾಲೇಜಿನಲ್ಲಿ ನಮ್ಮ ಪರಿಸರದ ಹಕ್ಕಿಗಳು ಕುರಿತು ಪ್ರಬಂಧ ಸ್ಪರ್ಧೆ, ನನ್ನ ನೆಚ್ಚಿನ ಪಕ್ಷಿ ಕುರಿತು ಚಿತ್ರಕಲೆ ಸ್ಪರ್ಧೆ ಜರುಗಲಿದೆ. ನ.21 ರಂದು ಕುಂದಾಪುರದ ಹೊಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ಬೆಳಿಗ್ಗೆ 9:30ಕ್ಕೆ ಇಕೋ ಕ್ಲಬ್ ವಿದ್ಯಾರ್ಥಿಗಳ ಸಮಾವೇಶ ವಿಂಗ್ಸ್-2015 ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ವಿಷಯದ ಸುತ್ತ ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಪರಿಸರ ರಸಪ್ರಶ್ನೆ, ಪಕ್ಷಿಗಳ ಧ್ವನಿ ಅನುಕರಣೆ ಸ್ಪರ್ಧೆ ನಡೆಯಲಿದೆ. ಬಳಿಕ ವಿವಿಧ ಪರಿಸರ ಸ್ಪರ್ಧೆಗಳ ವಿಜೇತರನ್ನು ಪುರಸ್ಕಾರ, 2015-16ನೇ ಸಾಲಿಗಾಗಿ ಆಯ್ಕೆಯಾದ ಅತ್ಯುತ್ತಮ ಇಕೋಕ್ಲಬ್‌ಗಳಿಗೆ ಡಾ. ಎನ್.ಆರ್. ಆಚಾರ್ಯ ಮೆಮೋರಿಯಲ್ ಪ್ರಶಸ್ತಿ ಫಲಕ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತಿದೆ. ಕುಂದಾಪುರ ತಾಲೂಕಿನ…

Read More

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸದ ವಿಶೇಷ ಕಾರ್ಯಕ್ರಮವಾಗಿ ಆಶ್ವೀಜ ಪೂರ್ಣಿಮ ಭಜನಾ ಏಕಾಹವನ್ನು ಕಾಶೀ ಮಠ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿಯ ಸನ್ನಿದಾನದಲ್ಲಿ ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

Read More

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಅ.೩೧ರಂದು ವಡೇರಹೋಬಳಿಯ ಸರೋಜಿನಿ ಮಧುಸೂಧನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸರ್ದಾರ್ ವಲ್ಲಭಾಯ್ ಪಟೇಲರ ಜನ್ಮ ದಿನಾಚರಣೆಯ ಅಂಗವಾಗಿ ರೋಟರಿ ಕ್ವಿಜ್ ನಡೆಸಲಾಯಿತು ಸರ್ದಾರ್ ವಲ್ಲಭಾಯ್ ಪಟೇಲರ ಕುರಿತಾದ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಸವಿತಾ ಪ್ರಥಮ ಸ್ಥಾನ ಪಡೆದರು. 10ನೇ ತರಗತಿಯ ಮೇಘನಾ, 8ನೇ ತರಗತಿಯ ಸ್ವಾತಿ ದ್ವಿತಿಯ ಸ್ಥಾನ ಪಡೆದುಕೊಂಡರು. ತೃತೀಯ ಸ್ಥಾನವನ್ನು 10ನೇ ತರಗತಿಯ ಪೂರ್ಣಶ್ರೀ, ಶ್ವೇತಾ, ಅಂಜು, ಸುಮ, ಅನುಪಮ, 9ನೇ ತರಗತಿಯ ಶ್ವೇತಾ, ಚೈತನ್ಯ, ಶಾಲಿನಿ ಪಡೆದುಕೊಂಡರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಬಹುಮಾನ ವಿತರಿಸಿ ಮಾತನಾಡಿ ಈ ದೇಶ ಕಂಡ ಅಪ್ರತಿಮ ನಾಯಕ ಸರ್ದಾರ್ ವಲ್ಲಭಾಯ್ ಪಟೇಲರು. ಅವರ ಅನನ್ಯ ದೇಶ ಭಕ್ತಿ, ನಾವೆಲ್ಲರೂ ಒಂದೇ ಎನ್ನುವ ಏಕತೆಯ ಭಾವವನ್ನು ದೇಶದಲ್ಲಿ ಜಾಗೃತಗೊಳಿಸಿ ನಮ್ಮೆಲ್ಲರ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರಂತೆ ದೇಶದ ಉಜ್ವಲ ಭವಿಷ್ಯಕ್ಕೆ ನಿವೆಲ್ಲರೂ ಕೊಡುಗೆಗಳಾಗಿ ಎಂದು ಹಾರೈಸಿದರು. ಸದಸ್ಯರಾದ ಮುತ್ತಯ್ಯ…

Read More