ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ ಮಂಗಳವಾರದಂದು ಉದ್ಯಮಿ ಸ್ವಪ್ನ ಸುರೇಶ್ ಪ್ರಭು ಇವರ ವತಿಯಿಂದ ದುರ್ಗಾ ಹೋಮವನ್ನು ಆಯೋಜಿಸಲಾಯಿತು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ್ ಬಾಯರಿ ನೆರವೆರಿಸಿದರು. ಪೂಜಾ ಕಾರ್ಯದಲ್ಲಿ ಸ್ವಪ್ನ ಸುರೇಶ್ ಪ್ರಭು ದಂಪತಿಗಳು ಭಾಗಿಯಾದರು. ಕುಟುಂಬದ ಪರವಾಗಿ ಸರೋಜನಿ ಬಾಲಕೃಷ್ಣ ಪ್ರಭು .ಸಹೋದರರಾದ ಉಮೇಶ್ ಪ್ರಭು, ವೆಂಕಟೇಶ ಪ್ರಭು, ಲತಾ ರಾಘವೇಂದ್ರ ಪೈ, ಕುಟುಂಬಿಕರಾದ ರಮೇಶ್ ಪ್ರಭು, ದೇಗುಲದ ಅಧ್ಯಕ್ಷರಾದ ಆನಂದ್ ಸಿ. ಕುಂದರ್, ಸದಸ್ಯರಾದ ಸುಧಾ ಎ. ಪೂಜಾರಿ, ಸುಬ್ರಾಯ ಜೋಗಿ, ಚಂದ್ರ ಆಚಾರ್, ಸುಭಾಷ್ ಶೆಟ್ಟಿ, ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ಡಿ ಕಾಂಚನ್, ಶಿವ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಮಾಜಿ ಸದಸ್ಯ ಭುಜಂಗ ಗುರಿಕಾರ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು. ಮಧ್ಯಾಹ್ನ ದೇವಿಗೆ ಮಹಾಪೂಜೆ, ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.07: ಅಂಗಾಂಗ ದಾನವು ಯುವಜನರಿಗೆ ಮಾತ್ರ ಸೀಮಿತ ಎಂಬುದು ಸಮಾಜದಲ್ಲಿರುವ ಸಾಮಾನ್ಯ ಕಲ್ಪನೆ. ಆದರೆ ಕರಾವಳಿ ಕರ್ನಾಟಕದ 76 ವರ್ಷದ ಮಹಿಳೆಯೊಬ್ಬರು ಆ ನಂಬಿಕೆಯನ್ನು ಸುಳ್ಳೆಂದು ಸಾಬೀತುಪಡಿಸಿ, ಜೀವ ಉಳಿಸಲು ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂಬ ಸ್ಪೂರ್ತಿದಾಯಕ ಸಂದೇಶವನ್ನು ಸಾರಿದ್ದಾರೆ. ಗಂಗೊಳ್ಳಿಯ ನಿವಾಸಿಯಾಗಿದ್ದ 76 ವರ್ಷದ ಜೆನ್ನಿ ಡಿ’ಸೋಜಾ ಎಂಬುವವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ, ಅವರ ಕುಟುಂಬವು ಅತ್ಯಂತ ಮಾನವೀಯ ಹಾಗೂ ಮಾದರಿಯಾದ ನಿರ್ಧಾರ ಕೈಗೊಂಡು ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿತು.ಹಠಾತ್ ತಲೆಸುತ್ತು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ತುರ್ತಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ಅವರಿಗೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆಗಿರುವುದು ದೃಢಪಟ್ಟಿತು. ವೈದ್ಯರ ತಂಡವು ಅವರನ್ನು ಉಳಿಸಲು ಎಲ್ಲ ರೀತಿಯ ಚಿಕಿತ್ಸಾ ಪ್ರಯತ್ನಗಳನ್ನು ನಡೆಸಿದರೂ ಫಲಕಾರಿಯಾಗಲಿಲ್ಲ. ನಿಗದಿತ ವೈದ್ಯಕೀಯ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳಂತೆ ನಡೆಸಲಾದ ಎಲ್ಲ ಪರೀಕ್ಷೆಗಳ ಬಳಿಕ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಹೆದ್ದಾರಿ-66ರ ತ್ರಾಸಿ ಬೀಚ್ ಸಮೀಪದ ಅರಮ ದೇವಸ್ಥಾನದ ಎದುರು ಸೋಮವಾರ ಮಧ್ಯಾಹ್ನ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ತಂದೆ ಹಾಗೂ ಮಗಳು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ಮೃತರನ್ನು ಭಟ್ಕಳ ತಾಲೂಕಿನ ಸಣ್ಣಬಾವಿ ಸಾತುಮನೆ ನಿವಾಸಿ ನಾಗಪ್ಪ ನಾಯ್ಕ ಅವರ ಪುತ್ರ ದೀಪಕ್ ನಾಗಪ್ಪ ನಾಯ್ಕ (23)ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಪಡುಕೋಣೆ ಹಡವು ನಿವಾಸಿ ಪ್ಯಾಟ್ರಿಕ್ ವಾಝ್ (63) ಹಾಗೂ ಅವರ ಪುತ್ರಿ ಪ್ಲೆನ್ಸಿಟಾ (24) ಎಂದು ಗುರುತಿಸಲಾಗಿದೆ. ಪ್ಯಾಟ್ರಿಕ್ ವಾಝ್ ಅವರು ತಮ್ಮ ಪುತ್ರಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಎದುರಿನಿಂದ ಬಂದ ದೀಪಕ್ ಚಲಾಯಿಸುತ್ತಿದ್ದ ಬೈಕ್ಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದೀಪಕ್ ನಾಗಪ್ಪ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಗ್ರಾಮಾಂತರ ಕೈಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ವಿವಿಧ ಕಸುಬುಗಳಾದ ಗಾರೆಕೆಲಸ, ಮರಗೆಲಸ, ದೋಬಿ, ಕಮ್ಮಾರಿಕೆ, ಪ್ಲಂಬರ್, ಎಲೆಕ್ಟ್ರಿಷಿಯನ್, ಕ್ಷೌರಿಕ, ಬ್ಯೂಟಿಪಾರ್ಲರ್ ಹಾಗೂ ಟೈಲರಿಂಗ್ ವೃತ್ತಿಯ ಗರಿಷ್ಟ ರೂ.8,000/- ಮೊತ್ತದ ವಿದ್ಯುತ್‌ಚಾಲಿತ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಉಪಕರಣಗಳನ್ನು ಪಡೆಯಲಿಚ್ಛಿಸುವ ಗ್ರಾಮೀಣ ಪ್ರದೇಶದ ಅರ್ಜಿದಾರರು ಆನ್‌ಲೈನ್ ವೆಬ್‌ಸೈಟ್ udupi.nic.in ನಲ್ಲಿ ನಮೂದಿಸಿದ ಲಿಂಕ್‌ನ ಮುಖಾಂತರ ಅರ್ಜಿಗಳನ್ನು ಭರ್ತಿ ಮಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ದೃಢೀಕರಣದೊಂದಿಗೆ ಜುಲೈ 10 ರಿಂದ 30 ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ವ್ಯಾಪ್ತಿಯ ಕುಶಲಕರ್ಮಿಗಳಿಗೆ ಈ ಯೋಜನೆಯು ಅನ್ವಯಿಸುವುದಿಲ್ಲ. ಅರ್ಜಿದಾರರು ಆನ್‌ಲೈನ್ ಮುಖಾಂತರ ಸಲ್ಲಿಸಿದ ಅರ್ಜಿಯ ಮೂಲ ಪ್ರತಿಯನ್ನು ಉಪ ನಿರ್ದೇಶಕರು, ಗ್ರಾಮಾಂತರ ಕೈಗಾರಿಕೆ, “ಬಿ ಬ್ಲಾಕ್”, # ನಂ.207, ಮೊದಲನೇ ಮಹಡಿ, ರಜತಾದ್ರಿ, ಮಣಿಪಾಲ ಕಛೇರಿಗೆ ತಪ್ಪದೇ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಛೇರಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಬೈಂದೂರು ಪಶು ಆಸ್ಪತ್ರೆಯಲ್ಲಿ ಪಶು ಸಂಗೋಪನೆ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಯೋಜನೆ ಅನುಷ್ಠಾನದಲ್ಲಿನ ವಿಚಾರಗಳ ಕುರಿತಾಗಿ ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ರಾಜ್ಯದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಯುತ್ತಿದ್ದು, ಈ ಬಾರಿ ಉಡುಪಿ ಜಿಲ್ಲೆಯಲ್ಲಿ 21 ನೇ ಜಾನುವಾರು ಗಣತಿ ವರದಿ ಹೊರಬಿದ್ದಿದ್ದು, ದನ ಹಾಗೂ ಎಮ್ಮೆ 5 ವರ್ಷದ ಹಿಂದೆ ಇದ್ದ 2.57 ಲಕ್ಷ ಸಂಖ್ಯೆಯು ಇದೀಗ 1.96 ಲಕ್ಷಕ್ಕೆ ಅಂದರೆ ಶೇಕಡಾ 23 ರಷ್ಟು ಗಣನೀಯವಾಗಿ ಕುಸಿತ ಕಂಡಿದ್ದು ಆತಂಕ ಪಡುವ ವಿಚಾರವಾಗಿದೆ. ಹಾಗಾಗಿ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಜಾನುವಾರು ಸಂಖ್ಯೆ ಕುಸಿತವಾಗದಂತೆ ತಡೆಯಲು ಸಮಗ್ರ ಅಧ್ಯಯನದ ಜೊತೆಗೆ ವಿನೂತನ ಉಪ ಕ್ರಮಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿದರು ಔಷಧಿಗಳ ಕೊರತೆ ಆಗದಂತೆ ಕ್ರಮವಹಿಸಿ:ವಿವಿಧ ಪಶು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳಾ ಆರೋಪಿಗಳನ್ನು ಕೊಲ್ಲೂರು ಪೊಲೀಸರು ಪ್ರಕರಣ ದಾಖಲಾದ 24 ಗಂಟೆ ಒಳಗಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜೋಶ್ ಹಾಗೂ ಅವರ ಪತ್ನಿ ನಿಮಿಶಾ ಎಂಬವರು ಜು.5ರಂದು ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದು, ದೇವಸ್ಥಾನದ ಒಳಗೆ ದೇವರ ದರ್ಶನ ಪಡೆದು ಹೊರಾಂಗಣಕ್ಕೆ ಬಂದರು. ಆಗ ನಿಮಿಶಾ ತನ್ನ ಬಳಿ ಇದ್ದ ವ್ಯಾನಿಟಿ ಬ್ಯಾಗ್ ನೋಡಿದಾಗ ದೇವರ ದರ್ಶನ ಪಡೆದು ಹೊರಾಂಗಣಕ್ಕೆ ಬಂದರು. ಆಗ ನಿಮಿಶಾ ತನ್ನ ಬಳಿ ಇದ್ದ ವ್ಯಾನಿಟಿ ಬ್ಯಾಗ್ ನೋಡಿದಾಗ ಬ್ಯಾಗ್‌ನ ಜಿಪ್ ತೆರೆದುಕೊಂಡಿದ್ದು, ಅದರಲ್ಲಿದ್ದ 80,000ರೂ. ಹಣವಿದ್ದ ಪರ್ಸ್ ಕಳವಾಗಿರುವುದು ಕಂಡುಬಂತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮ ಹೆಮ್ಮೆಯ ಹಳ್ಳಿ ಭಾಷೆಯಾದ ಕುಂದಾಪ್ರ ಕನ್ನಡ ಕೇವಲ ಮಾತನಾಡುವ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಬದುಕು ಮತ್ತು ಪರಂಪರೆಯ ಪ್ರತಿಬಿಂಬ ಎಂದು ಮಾಜಿ ಸಚಿವರು ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಪೋಷಕರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಯಡಾಡಿ ಮತ್ಯಾಡಿಯ ಸುಜ್ಞಾನ ಪದವಿಪೂರ್ವ ಕಾಲೇಜು, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಜಂಟಿ ಆಶ್ರಯದಲ್ಲಿ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಸೋಮವಾರ ಕುಂದಾಪ್ರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆ ‘ವಾಲ್ಬೆಲ್ಲ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಇಂಗ್ಲಿಷ್, ಶುದ್ಧ ಕನ್ನಡ ಕಲಿಯುವುದರ ಜೊತೆಗೆ, ನಮ್ಮ ಮಣ್ಣಿನ ಭಾಷೆಯಾದ ಕುಂದಾಪ್ರ ಕನ್ನಡವನ್ನು ಮನೆಯಲ್ಲಿ ಸದಾ ಬಳಸುವ ಮೂಲಕ ಅದನ್ನು ಜೀವಂತವಾಗಿರಿಸಬೇಕು ಎಂದರು. ತಮ್ಮ ಭಾಷಣದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಇಂದಿನ ತಲೆಮಾರಿನ ಮಕ್ಕಳಿಗೆ ಹಳ್ಳಿಯ ಸೊಗಡನ್ನು ಪರಿಚಯಿಸುವ ಅಗತ್ಯವನ್ನು ಒತ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಕ್ಷಗಾನ ರಂಗದಲ್ಲಿ ಯಾವುದೇ ಪ್ರತ್ಯಕ್ಷಗುರು ಇಲ್ಲದಿದ್ದರೂ, ಹಿರಿಯರ ವಾದನವನ್ನು ದೂರದಿಂದಲೇ ನೋಡುತ್ತಾ ಸ್ವ-ಪ್ರಯತ್ನದಿಂದ ಚೆಂಡೆ ಕಲಿತ ಆಧುನಿಕ ಏಕಲವ್ಯ ನಮ್ಮ ಕೋಟ ಶಿವಾನಂದರು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ತಾರಾನಾಥ್ ಹೊಳ್ಳ ಹೇಳಿದರು. ಅವರು ಶನಿವಾರ ಕೋಟ ಶಿವಾನಂದರ ಅಭಿಮಾನಿ ಬಳಗ ಮತ್ತು ಕಲಾ ವೇದಿಕೆ ಸಾಲಿಗ್ರಾಮದ ಆಶ್ರಯದಲ್ಲಿ ಹಿರಿಯ ಚಂಡೆ ವಾದಕ ಕೋಟ ಶಿವಾನಂದ ಅವರಿಗೆ ಗೌರವಾರ್ಪಣೆ ಹಾಗೂ ಮರಳಿ ಸಾಲಿಗ್ರಾಮದ ಯಕ್ಷರಂಗದಂಗಳಕ್ಕೆ ಎನ್ನುವ ಸಾಂಸ್ಕೃತಿಕ ರಂಗ ಸಂಜೆಯನ್ನು ಉದ್ಘಾಟಿಸಿ ಮಾತನಾಡಿದರು. ಖ್ಯಾತ ನಟಿ ಪ್ರತಿಮಾ ನಾಯಕ್ ಅವರು ಅಭಿನಂದನಾ ನುಡಿಗಳನ್ನಾಡಿದ ಕಾಂತಾರ ಚಿತ್ರದ ಯಕ್ಷಗಾನ ರಂಗದ ಧ್ರುವತಾರೆ ಕೋಟ ಶಿವಾನಂದ ಅವರು ಕಲಾ ಜಗತ್ತಿನ ಹಿರಿಯ ಸಾಧಕರಾಗಿದ್ದರೂ, ಚೂರು ಸಹ ಅಹಂಕಾರವಿಲ್ಲದ ಮಗುವಿನಂತಹ ನಿಷ್ಕಲ್ಮಶ ಮನಸ್ಸಿನ ಅಪರೂಪದ ವ್ಯಕ್ತಿ ಎಂದರು. ಕಾಂತಾರ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶಿವಣ್ಣನ ಸರಳ ವ್ಯಕ್ತಿತ್ವ ನನಗೆ ಹತ್ತಿರದಿಂದ ಪರಿಚಯವಾಯಿತು. ಹಿರಿಯ ಸಾಧಕನೆಂಬ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟ ಗ್ರಾಮಪಂಚಾಯತ್ ಭಾನುವಾರ ರಾತ್ರಿ ದಿಢೀರ ಪ್ರವೇಶಿಸಿದ ಸುಳಿಗಾಳಿಯಿಂದ ಹಾನಿಗೊಂಡ ಮನೆಗಳಿಗೆ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕದ್ರಿಕಟ್ಟು ಜಗನಾಥ ಕಾಂಚನ್,ರಾಜು ಟೈಲರ್ ಮನೆಗೆ ಭೇಟಿ ನೀಡಿ ಕುಂದಾಪುರ ಎಸಿ,ಇಲಾಖಾಧಿಕಾರಿ ಕರೆ ಮಾಡಿ ಶೀಘ್ರ ಸರಕಾರಕ್ಕೆ ವರದಿ ಒಪ್ಪಿಸಲು ಸ್ಥಳದಲ್ಲೆ ಸೂಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ನಿಯೋಚಿತ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಸ್ಥಳೀಯ ಮುಖಂಡರಾದ ಗೋಪಾಲ್ ಬಂಗೇರ, ಗಣೇಶ್ ಪೂಜಾರಿ, ಜಗನಾಥ್ ಕಾಂಚನ್ ಸೇರಿದಂತೆ ಹಲವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೂನಿಯರ್ ಜೆಸಿ ಮತ್ತು ಲೇಡಿ ಜೆಸಿ ಸಮ್ಮೇಳನ ಸಿಂಧು ಇದರ ವತಿಯಿಂದ ಯಡ್ತರೆ ಜೆಎನ್‌ಆರ್ ಕಲಾ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ಜೆಸಿಐ ರೂರಲ್ ನ ಅಧ್ಯಕ್ಷರರಾದ ವಿನೋದ್ ಮೇಸ್ತ ಶಿರೂರ್ ಅವರಿಗೆ ಜೆಎಸಿ ಗೋಲ್ಡನ್ ಪ್ರೆಸಿಡೆಂಟ್ ಪ್ರಶಸ್ತಿ ಪಡೆದರು. ಕಾರ್ಯಕ್ರಮದಲ್ಲಿ ವಲಯದ ಅಧ್ಯಕ್ಷ ಸಂತೋಷ ಶೆಟ್ಟಿ, ಜೆಎಸಿ ವಲಯ ಚೇರ್ ಮೇನ್ ಜಬ್ಬಾರ್ ಸಾಹಬೆ, ಜೆಎಸಿ ವಲಯದ ಪೂರ್ವ ಅಧ್ಯಕ್ಷೆ ಆಶಾ, ಶಂಬಾವಿ, ಉಪಾಧ್ಯಕ್ಷರರಾದ ಪ್ರದೀಪ್ ಶೆಟ್ಟಿ, ಬೈಂದೂರು ಸಿಟಿ ಜೆಸಿಎ ಅಧ್ಯಕ್ಷೆ ಚೈತ್ರ, ವಿವಿಧ ಘಟಕಗಳ ಅಧ್ಯಕ್ಷರು, ಪೂರ್ವ ಅಧ್ಯಕ್ಷರು ಸದಸ್ಯರು ಹಾಗೂ ಜೆಸಿಐ ಸದಸ್ಯರು ಹಾಜರಿದ್ದರು.
