Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಮಹತ್ವಾಕಾಂಕ್ಷಿ ಯುಡಿಜಿ ಯೋಜನೆಯಲ್ಲಿ ಒಳ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಯೋಜನೆ ಸಾಧಕ, ಬಾಧಕಗಳೇನು. ಮಳೆಗಾದಲ್ಲಿ ರಸ್ತೆ ಕಟ್ಟಿಂಗ್ ಮಾಡಿದರೆ ಸಮಸ್ಯೆ ಆಗುತ್ತದೆ. ಯುಡಿಜಿ ಯೋಜನೆ ಸಂಪೂರ್ಣ ಮಾಹಿತಿ ನೀಡಿವಂತೆ ಸದಸ್ಯ ಮೋಹನದಾಸ್ ಶೆಣೈ ಪ್ರಶ್ನಿಸಿದರು. ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದು ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಅವರು ಮಾತನಾಡಿದರು. ಪುರಸಭಾ ಸದಸ್ಯ ಕುಂದಾಪುರ ಪ್ರಮುಖ ಜನದಟ್ಟಣೆ ಪ್ರದೇಶವಾದ ಖಾರ್ವಿಕೇರಿಯಲ್ಲಿ ರಿಂಗ್ ರಸ್ತೆ ಹಾದು ಹೋಗಿದ್ದು ಯುಡಿಜಿ ಯೋಜನೆಯಿಂದ ಹೊರತು ಪಡಿಸಲಾಗಿದೆ. ಯೋಜನೆ ಅಧಿಕಾರಿಗಳ ಕೇಳಿದರೆ ಮತ್ತೆ ಸೇರಿಸುವ ಎನ್ನುವ ಉಡಾಪೆ ಉತ್ತರ ಸಿಗುತ್ತದೆ. ಯುಡಿಬಿ ಯೋಜನೆ ಫಲಾನುಭವಿ ಪಟ್ಟಿಯಿಂದ ಖಾರ್ವಿಕೇರಿ ಹೊರಗಿಟ್ಟಿದ್ದೇಕೆ. ಖಾರ್ವಿಕೇರಿ ಕೂಡಾ ಯುಡಿಬಿ ಯೋಜನೆಗೆ ಸೇರಬೇಕು ಎಂದರು. ಕುಂದಾಪುರ ಪುರಸಭೆ ಎದುರು ರಸ್ತೆ ವಿವಾದ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ವಕ್ಫ ಮಂಡಳಿಗೆ ಜಾಗ ಬಿಟ್ಟು ಕೊಡುವಂತೆ ಮನವಿ ಮಾಡಬೇಕು. ಹಾಗೆ ನಗರಸಭೆ ಜಾಗವಲ್ಲದೆ ವಕ್ಫ ಮಂಡಳಿಗೆ ಸಂಬಂಧಪಟ್ಟ ಜಾಗವಿದ್ದರೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಮೂರು ಕೈ ರಾಷ್ಟ್ರೀಯ ಹೆದ್ದಾರಿ ಯಲ್ಲಿ ೪೦೭ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಪಾದಚಾರಿ ನಾರಾಯಣ ಬಳೆಗಾರ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಗುರುವಾರ ಸಂಜೆ ಉಡುಪಿ ಕಡೆಯಿಂದ ವೇಗವಾಗಿ ಬಂದ ೪೦೭ ವಾಹನವು ಕೋಟ ಮೂರು ಕೈ ಬಳಿಯ ಬ್ಯಾರಿಕೇಡ್ ಗಮನಿಸದೆ, ಹಠಾತ್ ಬ್ರೇಕ್ ಹಾಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು, ಯೂ ಟರ್ನ್ ದಾಟಿ ಪಲ್ಟಿಯಾಗಿತ್ತು. ಇದೇ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಕೋಟದ ಜೋಗಿ ಸಮಾಜದ ಅಧ್ಯಕ್ಷ ನಾರಾಯಣ ಬಳೇಗಾರ್ ಅವರಿಗೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದರು. ವಾಹನದ ಚಾಲಕ ಮತ್ತು ನಿರ್ವಾಹಕರೀರ್ವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಗೆ ತುರ್ತಾಗಿ ಸ್ಪಂದಿಸಿದ್ದ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆ ಭಾಗದಲ್ಲಿ ಗಂಭೀರವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ಹಂಗಳೂರಿನ ಪ್ರಸನ್ನ ಆಂಜನೇಯ ದೇವಸ್ಧಾನಕ್ಕೆ ಚಿತ್ರದುರ್ಗದ ಸಾಹಸಿ ಜೋತಿರಾಜ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಧಾನದ ಸ್ಧಾಪಕರಾದ ಸುರೇಶ ಡಿ. ಪಡುಕೋಣೆ, ದೆಹಲಿಯಲ್ಲಿ ನೆಡೆದ ರಾಷ್ಟ್ರ ಮಟ್ಟದ ವಾಲ್ ಕ್ಲೈಬಿಂಗ್ ಸ್ಪರ್ಧೆಯ ಚಿನ್ನದ ಪದಕ ವಿಜೇತ ಮಾ. ಅರ್ಜುನ್, ವಿಘೇಶ್ವರ ಯುವಕ ಸಂಘದ ಅದ್ಯಕ್ಷ ಕೃಷ್ಣ ದೇವಾಡಿಗ, ಪತ್ರಕರ್ತ ನಾಗರಾಜ ರಾಯಪ್ಪನಮಠ ಮೊದಲಾದವರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಪ್ರದೇಶದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಐದು ವರ್ಷಗಳ ಮುನ್ನೋಟದಿಂದ ಕೂಡಿದ ‘ನಮ್ಮ ಗ್ರಾಮ ನಮ್ಮ ಯೋಜನೆ’ ರೂಪಿಸಲು ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಸರಕಾರ ನಿರ್ದೇಶನ ನೀಡಿದೆ. ಎಲ್ಲೆಡೆ ಈಗ ಅದರ ಪ್ರಕ್ರಿಯೆ ಆರಂಭವಾಗಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ತಾಳಿದೆ. ಕುಂದಾಪುರ ತಾಲೂಕಿನ ಪಡುವರಿ, ಹಳ್ಳಿಹೊಳೆ, ಸಿದ್ದಾಪುರ, ಕುಂಭಾಶಿ, ವಂಡ್ಸೆ, ಕರ್ಕುಂಜೆ ಗ್ರಾಮ ಪಂಚಾಯತ್‌ಗಳು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಮತ್ತು ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಬೆಂಬಲದೊಂದಿಗೆ ಮಾದರಿ ಪಂಚ ವಾರ್ಷಿಕ ಯೋಜನೆ ರೂಪಿಸುವ ಕೆಲಸಕ್ಕೆ ಚಾಲನೆ ನೀಡಿದ್ದು ಜಿಲ್ಲಾ ಪಂಚಾಯತ್ ಅದಕ್ಕೆ ಎಲ್ಲ ವಿಧದ ಸಹಕಾರ ನೀಡುತ್ತಿದೆ. ಆರು ಗ್ರಾಮ ಪಂಚಾಯತ್‌ಗಳು ಈಗಾಗಲೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಆರಂಭಿಕ ಪ್ರಕ್ರಿಯೆಗಳಿಗಾಗಿ ಕಾರ್ಯತಂಡಗಳನ್ನು ರಚಿಸಿಕೊಂಡಿವೆ. ಈ ತಂಡಗಳು ಗ್ರಾಮದ ಪ್ರಸಕ್ತ ಸ್ಥಿತಿಗತಿ ಅಧ್ಯಯನ, ಮಾಹಿತಿ ಸಂಗ್ರಹದಲ್ಲಿ ನಿರತವಾಗಿವೆ. ಈ ಯೋಜನೆ ಗರಿಷ್ಠ ಜನಸಹಭಾಗಿತ್ವದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮುದಾಯದ ಸಂಘಟನೆಗಳು ತಮ್ಮ ಸದಸ್ಯರಲ್ಲಿ ಧಾರ್ಮಿಕ ಹಾಗೂ ಸಂಘಟನಾ ಮನೋಧರ್ಮ ನಶಿಸದಂತೆ ಮಾಡಲು ಆಗಾಗ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಣ ಸಂಗ್ರಹಿಸಿ ಅದ್ದೂರಿಯ ಸಮಾರಂಭಗಳನ್ನು ಮಾಡುವುದರ ಬದಲಿಗೆ ಜನರನ್ನು ಒಗ್ಗೂಡಿಸುವ, ದುರ್ಬಲರ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಮಾಜಿ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಹೇಳಿದರು. ಉಪ್ಪುಂದ ಸಮೃದ್ಧ್ ಸಭಾಭವನದಲ್ಲಿ ನಡೆದ ಉಪ್ಪುಂದ, ಬಿಜೂರು, ನಂದನವನ ಹಾಗೂ ಕೆರ್ಗಾಲ್ ಗ್ರಾಮ ವ್ಯಾಪ್ತಿಯ ಗಾಣಿಗ ಸೇವಾ ಸಂಘ ಉಪ್ಪುಂದ ಘಟಕದ ತೃತೀಯ ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಮುದಾಯದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಯೋಚಿಸಿ, ದೊರೆತ ಅವಕಾಶವನ್ನು ಒಳ್ಳೆಯ ಉದ್ದೇಶಕ್ಕಾಗಿ ಸದುಪಯೋಗ ಪಡಿಸಿಕೊಂಡು ಸತ್ಕಾರ್ಯಗಳನ್ನು ಮಾಡಬೇಕು ಎಂದು ಸಂಘದ ಸದಸ್ಯರಿಗೆ ಸಲಹೆ ನೀಡಿದರು. ಉಪ್ಪುಂದ ಘಟಕದ ಅಧ್ಯಕ್ಷ ಗಣಪಯ್ಯ ಗಾಣಿಗ ಅಧ್ಯಕ್ಷತೆವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀದೇವರಿಗೆ ಶ್ರೀದೇವರ ಭಕ್ತರೊಬ್ಬರು ಸೇವಾರೂಪದಲ್ಲಿ ಶ್ರೀದೇವರಿಗೆ ವಜ್ರದ ಕಿರೀಟವನ್ನು ಸಮರ್ಪಿಸಿದರು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ನೂತನ ವಜ್ರದ ಕಿರೀಟವನ್ನು ಶ್ರೀ ದೇವರಿಗೆ ಸಮರ್ಪಿಸಿ ಆಶೀರ್ವದಿಸಿದರು. ತಾನು ಮಾಡಿದ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಶ್ರೀದೇವರ ಸೇವೆಗೆ ಮೀಸಲಿರಿಸಬೇಕು. ದೇವರ ಸೇವೆಯನ್ನು ನಿತ್ಯ ನಿರಂತರವಾಗಿ ಮಾಡುವುದರಿಂದ ಜೀವನದಲ್ಲಿ  ಅಭಿವೃದ್ಧಿಯಾಗುತ್ತದೆ. ದೇವರಿಗೆ ವಜ್ರದ ಕಿರೀಟವನ್ನು ಸಮರ್ಪಿಸಿದ ಭಕ್ತರ ಜೀವನರ ವಜ್ರದಂತೆ ಬೆಳಗಲಿ ಎಂದು ಶ್ರೀಗಳು ಹರಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ಜಿ.ವೆಂಕಟೇಶ ನಾಯಕ್, ಎಂ.ಭಾಸ್ಕರ ಪೈ, ರಾಧಿಕಾ ರಾಮಕೃಷ್ಣ ಪೈ, ವೈದಿಕರು, ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು, ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಆಟ್ ಕಾಂ ಸುದ್ದಿ. ಕೋಟ: ಪತ್ರಿಕಾ ವರದಿಗಾರನ ಮೇಲೆ ಪೂರ್ವದ್ವೇಷದಿಂದ ಜಾತಿನಿಂದನೆಯ ಸುಳ್ಳು ದೂರು ದಾಖಲಿಸಿದ್ದು ಈ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ, ಮುಂದೆ ವರದಿಗಾರರಿಗೆ ನಿರ್ಭೀತಿಯಿಂದ ವರದಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಬ್ರಹ್ಮಾವರ ವಲಯ ಕಾರ‍್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಡಿವೈಎಸ್‌ಪಿಯವರಿಗೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್‌ರವರ ಮೂಲಕ ಮನವಿ ಮಾಡಲಾಯಿತು. ಶಿರಿಯಾರ ಪಂಚಾಯಿತಿ ವ್ಯಾಪ್ತಿಯ ಮದಗದಿಂದ ಅಕ್ರಮ ಮಣ್ಣು ಸಾಗಾಟವಾಗುತ್ತಿರುವ ಕುರಿತು ವರದಿಗಾರ ಗಣೇಶ್ ಈ ಹಿಂದೆ ವರದಿ ಮಾಡಿದ್ದರು. ಈ ವರದಿಯಲ್ಲಿ ಅಧ್ಯಕ್ಷರ ಹೇಳಿಕೆಯನ್ನು ಪಡೆದಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡಿದ್ದ ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಅವರು ಮುಂದೆ ಕೇಸ್ ಹಾಕುವುದಾಗಿ ವರದಿಗಾರರಿಗೆ ಸಾರ್ವಜನಿಕವಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಅವಕಾಶಕ್ಕಾಗಿ ಕಾದ ಪಂಚಾಯಿತಿ ಅಧ್ಯಕ್ಷೆ ನಡೆಯದೆ ಇರುವ ಘಟನೆಯಲ್ಲಿ ಸೃಷ್ಠಿಸಿ ವರದಿಗಾರ ಗಣೇಶ್ ಸಾಬ್ರಕಟ್ಟೆಯವರ ಮೇಲೆ ಜಾತಿನಿಂದನೆಯ ಕೇಸು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರಹ್ಮಾವರ ವಲಯ ಕಾರ‍್ಯನಿರತ ಪತ್ರಕರ್ತರ ಸಂಘವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಡುಪಿ ಪೂರ್ಣಪ್ರಜ್ಞಾ ಕಾಲೇಜು ವಿದ್ಯಾರ್ಥಿನಿ ವೃಂದಾ ವಿ. ಕಿಣಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆಯಲ್ಲಿ ಶೇ.97.5 ಅಂಕಗಳನ್ನು ಪಡೆದು ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕನ್ನಡ, ಅಕೌಂಟೆನ್ಸಿ, ಸ್ಟಾಟ್, ಬಿಜಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಶೇ.100 ಅಂಕಪಡೆದು ಒಟ್ಟು 585 ಅಂಕ ಪಡೆದಿದ್ದಳು. ವೃಂದಾ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ್ ಕಿಣಿ ಮತ್ತು ನಯನ ವಿ. ಕಿಣಿ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಯಾರ ಬದುಕು ಹೇಗೆ ತಿರುವು ಪಡೆಯುತ್ತದೆ ಎನ್ನೋದಕ್ಕೆ ಬಾಲಕಿ ಬದಲಾದ ಜೀವನವೇ ಸಾಕ್ಷಿ. ಕುಂದಾಪುರ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಎಸ್ಸೆಸ್‌ಎಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಪಾಸ್! ಕೆದೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಕಾವೇರಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿನಿ. ಕಳೆದ ಏಳು ವರ್ಷದ ಹಿಂದೆ ತಾಯಿ ಜೊತೆ ಕುಂದಾಪುರ ಶಾಸ್ತ್ರಿ ವೃತ್ತ, ಬಸ್ ಸ್ಟ್ಯಾಂಡ್ ಬಳಿ ಭಿಕ್ಷೆ ಬೀಡುತ್ತಿದ್ದ ಈಕೆ ಕೆದೂರು ಸ್ಪೂರ್ತಿಧಾಮ ಸೇರಿದ ನಂತರ ಬದುಕೇ ಬದಲಾಯಿತು. ಕಾವೇರಿ ದಾವಣಗೆರೆ ಜಿಲ್ಲೆ ಹೊನ್ನಾಳಿ ಹುಟ್ಟೂರು. ತಾಯಿ ರತ್ನಾ, ತಂದೆ ಗಂಗಣ್ಣ. ತಂದೆ ಎಲ್ಲಿದ್ದಾರೋ ಗೊತ್ತಿಲ್ಲ. ತಾಯಿ ತೀರಿಕೊಂಡಿದ್ದು, ಇಬ್ಬರ ತಮ್ಮಂದಿರ ಜೊತೆ ಸ್ಪೂರ್ತಿಯಲ್ಲಿದ್ದಾಳೆ. ಒಬ್ಬ ತಮ್ಮ 1ನೇ ತರಗತಿ ಓದುತ್ತಿದ್ದರೆ, ಮತ್ತೊಬ್ಬ ತಮ್ಮ 3ನೇ ತರಗತಿ ವಿದ್ಯಾರ್ಥಿ. 2008-09ರಲ್ಲಿ ಸ್ಪೂರ್ತಿಧಾಮ ಸೇರಿದ ಕಾವೇರಿ ಕೆದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಗೆ ದಾಖಲಾದ ನಂತರ ಯಾವ ತರಗತಿಯಲ್ಲೂ ಫೇಲ್ ಆಗದೆ ಪಾಸಾಗುತ್ತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೆರ್ಗಾಲು ಗ್ರಾಪಂ ವ್ಯಾಪ್ತಿಯ ನಾಯ್ಕನಕಟ್ಟೆ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್‌ನ ವಿಶೇಷ ಮಹಾಸಭೆಯು ಸಂಜೆ ಜರಗಿತು. ಸುಮಾರು 800 ನೂರು ವರ್ಷ ಇತಿಹಾಸವಿರುವ ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ತೆರವುಗೊಳಿಸಿದ್ದು, ಈಗ ದೇವಸ್ಥಾನವನ್ನು ಅಂದಾಜು ವೆಚ್ಚ ರೂ. 35 ಲಕ್ಷ ವೆಚ್ಚದಲ್ಲಿ ಪುನರ್‌ನಿರ್ಮಾಣ ಮಾಡಲು ಈ ಹಿಂದೆ ಸಮಾಜ ಬಾಂಧವರು ತೀರ್ಮಾನಿಸಿದಂತೆ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ನೂತನ ಶ್ರೀ ವೆಂಕಟರಮಣ ದೇವಾಲಯವನ್ನು ಜುಲೈ ಮೊದಲ ವಾರದ ಮೂರು ದಿನಗಳು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪುನಃಪ್ರತಿಷ್ಟಾ ಮಹೋತ್ಸವ ಆಚರಿಸುವಂತೆ ನಿರ್ಧರಿಸಲಾಯಿತು. ಸೇವಾ ಸಮಿತಿಯ ಟ್ರಸ್ಟ್‌ನ ಅಧ್ಯಕ್ಷ ದಾಮೋದರ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಸವದ ಕಾಲದಲ್ಲಿ ದೇವಸ್ಥಾನದಲ್ಲಿ ಜರಗುವ ಎಲ್ಲಾ ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ…

Read More