ಕುಂದಾಪ್ರ ಡಾಟ್ ಕಾಂ ಸುದ್ದಿ. ಶಿರೂರು: ಶಿರೂರು ಪೇಟೆಯ ನಿವಾಸಿ ದಲಿತ ಮುಖಂಡ ದಿನೇಶ್ ಕುಮಾರ್ ಅವರ ಮನೆಯಲ್ಲಿ ಜಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಡಾ. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ, ಸಾಮಾಜಿಕ ಸಾಮರಸ್ಯ ದಿನ ಹಾಗೂ ಸಹಭೋಜನ ನಡೆಯಿತು. ಗೋಪಾಲಕೃಷ್ಣ ಶಿರೂರು ಮಾತನಾಡಿ, ನಮ್ಮ ದೇಶಕ್ಕೆ ವಿಶ್ವವೇ ಮೆಚ್ಚುವ ರೀತಿಯಲ್ಲಿ ಅಸಾಮಾನ್ಯ ದೂರದೃಷ್ಠಿತ್ವದಿಂದ ಕಾನೂನಾತ್ಮಕ ಚೌಕಟ್ಟಿನಿಂದ ಕೂಡಿದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿವರೆಗೂ ತಲುಪಿಸಿ ಜನಜಾಗೃತಿ ಮೂಡಿಸಬೇಕು. ಅಸಮಾನತೆಗಾಗಿ ಸಮರ ಸಾಧಿಸದೇ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ತೊಡಗಿಸಿಕೊಂಡ ಅಂಬೇಡ್ಕರ್ ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲಾ ವರ್ಗದವರಿಗೂ ಮಾದರಿಯಾಗಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ವಿಕಟನೆಯಿಂದ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯಗಳಿದ್ದರೂ ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಬಾಳಬೇಕು ಸಾಮಾಜಿಕ ಸಾಮರಸ್ಯವೇ ನಮ್ಮ ಜೀವವಾಗಿರಬೇಕು ಎಂದರು. ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದುಹೋಗಿದೆ. ಈಗಿನ ಕಾಲ ಬದಲಾಗಿದ್ದು,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಂಸ್ಕೃತಿಕ ಜಗತ್ತನ್ನು ೬೪ ಕಲೆಗಳು ಶ್ರೀಮಂತಗೊಳಿಸಿದಂತೆ ಜನಪದ, ಗ್ರಾಮೀಣ ಕಲೆಗಳಲ್ಲಿ ಒಂದಾದ ಯಕ್ಷಗಾನ ಗೊಂಬೆಯಾಟದ ತವರೂರು ಉಪ್ಪಿನಕುದ್ರುವಿನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದೆ. ಅಂತಹ ಗೊಂಬೆಮನೆಯಲ್ಲಿ ನಟರಾಜನ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಸುದೀರ್ಘ ಇತಿಹಾಸ ಹೊಂದಿರುವ ಕಲೆ ಇನ್ನಷ್ಟು ಸಮೃದ್ಧಗೊಳ್ಳಲಿ ಎಂದು ಸಿಂಡಿಕೇಟ್ ಬ್ಯಾಂಕ್ನ ಫೀಲ್ಡ್ ಜನರಲ್ ಮೆನೇಜರ್ ಸತೀಶ್ ಕಾಮತ್ ಹೇಳಿದರು. ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ನಟರಾಜ ವಿಗ್ರಹದ ಅನಾವರಣ ಮಾಡಿ ಶುಭಹಾರೈಸಿದರು. ಪರಂಪರಾಗತವಾಗಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರ ಹಿಂದಿನ ಕಲಾವಿದರ, ಯಜಮಾನನ ಪರಿಶ್ರಮ ಅಪರಿಮಿತವಾದುದು. ಭಾಸ್ಕರ ಕೊಗ್ಗ ಕಾಮತ್ರು ಯಕ್ಷಗಾನ ಗೊಂಬೆಯಾಟ ಬೆಳವಣಿಗೆಗೆ ತಮ್ಮನ್ನು ಮುಡಿಪಾಗಿಸಿಕೊಂಡು ಸಾಗುತ್ತಿರುವ ಕಾರ್ಯ ಅಭಿನಂದನೀಯ. ಇಂತಹ ಕಲೆಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಿದಾಗ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಬೆಳಗಲು ಸಾಧ್ಯ ಎಂದು ನುಡಿದರು. ತಿಂಗಳ ಕಾರ್ಯಕ್ರಮದ ಅಂಗವಾಗಿ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವನ್ನು ಪ್ರಾಯೋಜಿಸಿದ ಸುರೇಶ್ ಕಾರಂತ್ ಉಪ್ಪಿನಕುದ್ರು ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಿಂಡಿಕೇಟ್ ಬ್ಯಾಂಕ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನೆಲಮಂಗಲದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್ ಯಾಸಿರ್ ಉತ್ತಮ ನಿರ್ವಹಣೆ ತೋರಿ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾನೆ. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ತರಬೇತಿ ನೀಡಿದ್ದರು. ಸರಸ್ವತಿ ವಿದ್ಯಾಲಯ ಬಳಗ ಯಾಸಿರ್ ಸಾಧನೆಯನ್ನು ಅಭಿನಂದಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ರಾಜ್ಯ ಸರಕಾರಿ ನೌಕರರ ಸಂಘವು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕುಂದಾಪುರದ ಚಿಕ್ಕನ್ಸಾಲ್ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರತ್ನ ಅವರಿಗೆ ಪ್ರತಿಭಾನ್ವಿತ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಗುರುತಿಸಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಷ್ಟ ಬಂದಾಗ ಮೊದಲು ನೆನಪಿಗೆ ಬರುವುದು ತಾಯಿ, ತಾಯಿ ಪ್ರೀತಿ ಮತ್ತು ವಾತ್ಸಲ್ಯದ ಸಾಕಾರಮೂರ್ತಿಯಾಗಿದ್ದು, ಈ ಸ್ಥಾನ ಬೇರೆ ಯಾರಿಗೂ ನೀಡಲು ಸಾಧ್ಯವಿಲ್ಲ. ಮಹಾತಾಯಿ ಸ್ಮರಣೆ ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಹೇಳಿದರು. ಮಹಾಕಾಳಿ ದೇವರ ಪ್ರತಿಷ್ಠಾ ರಜತಮಹೋತ್ಸವದ ನಿಮಿತ್ತ ನಡೆದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಷ್ಟೋತ್ತರ ಸಹಸ್ರ ಬ್ರಹ್ಮಕುಂಭಾಭಿಷೇಕ ಮತ್ತು ಶತ ಚಂಡಿಕಾಯಾಗ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಮಾತನಾಡಿದರು. ನಮ್ಮ ಗುರುಗಳು ಇಲ್ಲಿ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ್ದರು. ನಾನು ಕುಂಭಾಭಿಷೇಕ ನೆರವೇರಿಸಿದ್ದೇನೆ. ಪ್ರಸ್ತುತ ನಮ್ಮ ಶಿಷ್ಯರಿಂದ ಸಹಸ್ರ ಕುಂಭಾಭಿಷೇಕ ನೆರವೇರುತ್ತಾ ಇರುವುದು ವಿಶೇಷವಾಗಿದೆ. ಹೀಗೆ ಮೂರು ಮಂದಿ ಜಗದ್ಗುರುಗಳು ಈ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಗಳಲ್ಲಿ ಪಾಲ್ಗೊಂಡಿರುವುದು ಒಂದು ಭಾಗ್ಯ ಎಂದು ಹೇಳಿದರು. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಿಕ್ಷಣ ಸಂಸ್ಥೆಯ ೧೦೦ ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಬುಧವಾರ ವಿದ್ಯಾಸಂಸ್ಥೆಗಳ ಸಮೀಪವಿರುವ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ತೆರಳಿ ಮನವಿ ಮಾಡಿಕೊಂಡರು. ಶಿಕ್ಷಣ ಸಂಸ್ಥೆಗಳ ೧೦೦ ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಾಯ್ದೆಯಂತೆ ನಿಷೇಧಿಸಿದ್ದರೂ ಸಹ ವಿದ್ಯಾರ್ಥಿಗಳನ್ನೇ ಗುರಿಯನ್ನಾಗಿಸಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಅವ್ಯಾಹತವಾಗಿ ನಡೆಸಲಾಗುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿಕ್ಷಣ ಸಂಸ್ಥೆಯ ೧೦೦ ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಬಾರದು. ಇಂದಿನಿಂದಲೇ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಿ ಮುಗ್ಧ ಜೀವಗಳನ್ನು ಉಳಿಸಿ ತಂಬಾಕು ರಹಿತ ಶೈಕ್ಷಣಿಕ ಸಂಸ್ಥೆಗಳ ನವನಿರ್ಮಾಣದಲ್ಲಿ ಕೈಜೋಡಿಸಬೇಕೆಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಸುಶೀಲಾ ಐತಾಳ್ ಮತ್ತು ಮಕ್ಕಳು ಲೋಕಕ್ಯಾಣಾರ್ಥವಾಗಿ ರುದ್ರೈಕಾದಶನೀ ಹೋಮ ನೆರವೇರಿಸಿದರು. ನಂತರ ನೂತನವಾಗಿ ನಿರ್ಮಿಸಲಾದ ಪುಷ್ಪರಥವನ್ನು ಸೇವಾರೂಪದಲ್ಲಿ ಶ್ರೀದೇವರಿಗೆ ಸಮರ್ಪಿಸಿದರು. ಮಧ್ಯಾಹ್ನ ಸುಮಾರು ಎರಡು ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಶನಿವಾರ ರಾತ್ರಿ ರಥಬಲಿ, ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಭಾನುವಾರ ಬೆಳಿಗ್ಗೆ ನೂರಕ್ಕೂ ಹೆಚ್ಚು ವೈದಿಕರಿಂದ ಆರಂಭಗೊಂಡ ರುದ್ರೈಕಾದಶನೀ ಹೋಮಕ್ಕೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು. ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮೊದಲಾದ ಗಣ್ಯರು ದೇವಳಕ್ಕೆ ಆಗಮಿಸಿ ನೂತನ ರಥದ ನಿರ್ಮಾಣ ಕಾರ್ಯಶೈಲಿ ವೀಕ್ಷಿಸಿ ಅಭಿನಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಉಳ್ಳೂರು ೭೪ ಗ್ರಾಮದ ಗುಂಜಿಕೇರಿಯ ಮನೆಯೊಂದರ ತೆರೆದ ಬಾವಿಗೆ ಚಿರತೆಯೊಂದ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಿಯರ ನೆರವಿನೊಂದಿಗೆ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಉಳ್ಳೂರು ೭೪ರ ಸಂಜೀವಿನಿ ಶಡ್ತಿ ಎಂಬುವವರ ಮನೆಯ ಬಾವಿಗೆ ಹೆಣ್ಣು ಚಿರತೆಯೊಂದು ಬಿದ್ದಿದ್ದು, ಬೆಳಿಗ್ಗೆ ೯:೩೦ರ ಸುಮಾರಿಗೆ ಶಂಕರನಾರಾಯಣ ವಿಭಾಗದ ಅರಣ್ಯಾಧಿಕಾರಿಗಳು ಚಿರತೆಯನ್ನು ರಕ್ಷಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬಸ್ರೂರು: ಇಲ್ಲಿನ ಕಾಶೀ ಮಠದದಲ್ಲಿರುವ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದಲ್ಲಿ ಗುರುವರ್ಯರ ೧೩೦ನೇ ಪುಣ್ಯತಿಥಿಯ ಅಂಗವಾಗಿ ಗುರು ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ಜರಗಿತು. ಪೂವಾಹ್ನ ಸಾನಿದ್ಯ ಹವನ, ಶತಕಲಶಾಭಿಷೇಕ, ೧೦೮ ಎಳನೀರಿನ ಅಭಿಷೇಕ, ಪವಮಾನ ಅಭಿಷೇಕ, ಲಘು ವಿಷ್ಣು ಹವನ ಹಾಗೂ ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ಊರ ಪರವೂರ ಭಕ್ತ ಹಾಗೂ ಶಿಷ್ಯ ವೃಂದದವರ ಭಾಗವಹಿಸುವಿಕೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಚೇಂಪಿ,ಸಾಲಿಗ್ರಾಮ,ಕೋಟ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಕಾರ್ಯಕ್ರಮ ಜರಗಿತು. ರಾತ್ರಿ ನಗರೋತ್ಸವ, ಅಷ್ಟಾವಧಾನ ಸೇವೆ ಹಾಗೂ ಗುರು ಗುಣಗಾನ ಕಾರ್ಯಕ್ರಮ ನೇರವೇರಿತು. ಮಠದ ವ್ಯವಸ್ಥಾಪಕ ಸಮಿತಿ ಮುಖ್ಯಸ್ಥರಾದ ಶ್ರೀಧರ ಕಾಮತ್, ದಿನೇಶ ಕಾಮತ್, ದಿನಕರ ಶೆಣೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಂಗನಾಥ ಪಡಿಯಾರ್, ರಾಮಚಂದ್ರ ಪಡಿಯಾರ್, ಗಣೇಶ ಕಾಮತ್ ನೇತೃತ್ವದಲ್ಲಿ ಹೂವಿನ ಹಾಗೂ ವಿದ್ಯುದೀಪಾಲಂಕಾರ ಶೃಂಗಾರಗೊಂಡು ಪಲ್ಲಕಿಯಲ್ಲಿ ಶ್ರೀ ಗುರುವರ್ಯರ ಭಾವಚಿತ್ರ ಹಾಗೂ ದೇವರ ಮೂರ್ತಿಯನ್ನು ಕೊಂಡೊಯ್ದು ನಗರೋತ್ಸವ ನೇರವೇರಿತು. ವೇ.ಮೂ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೧೪ರ ವಯೋಮಿತಿಯ ಬಾಲಕಿಯರ ೨೦೧೬-೧೭ನೇ ಸಾಲಿನ ರಾಜ್ಯಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೮ನೇ ತರಗತಿಯ ವಿದ್ಯಾರ್ಥಿನಿ ಅಕ್ಷತಾ, ೧.೩೬ಮೀ. ಸಾಧನೆಗೈದು ಬೆಳ್ಳಿಯ ಪದಕ ಪಡೆದು ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಖಂಬದಕೋಣೆ ಗುಡ್ಡಿಮನೆ ಶಾರದಾ ನಾಗ ಪೂಜಾರಿ ಪುತ್ರಿ.. ಈಕೆಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕವರ್ಗದವರು ಹಾಗೂ ಎಸ್ಡಿಎಂಸಿ ಸದಸ್ಯರು ಅಭಿನಂದಿಸಿದ್ದಾರೆ.
