Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಶ್ರೀ ವಿನಾಯಕ ಆಟೋರಿಕ್ಷಾ, ಗೂಡ್ಸ್, ಟೆಂಪೋ ಮತ್ತು ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಮೂರನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಘಟನೆಯಿಂದ ಜನಜಾಗೃತಿ, ಆರ್ಥಿಕ ಸ್ಥಿತಿ ಮತ್ತು ಸಮಾಜ ಸುಧಾರಣೆ ಸಾಧ್ಯವಾಗುತ್ತದೆ. ಸಂಘಟನೆಯ ಸದಸ್ಯರ ಏಳಿಗೆಗಾಗಿ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವ ಕುರಿತು ಚಿಂತನೆ ಮಾಡುವ ಅಗತ್ಯವಿದೆ. ತಮ್ಮ ಜೀವನ ನಿರ್ವಹಣೆಗಾಗಿ ಸೇವಾ ಮನೋಭಾವದಿಂದ ಪ್ರಾಮಾಣಿಕರಾಗಿ ಹೋರಾಟ ಮಾಡುವ ಟ್ಯಾಕ್ಸಿ, ರಿಕ್ಷಾ ಚಾಲಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿರುವುದರ ಜತೆಗೆ ಊರಿನ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಉಡುಪಿ ಮಾಜಿ ಶಾಸಕ ಹಾಗೂ ಜಿಲ್ಲಾ ಟ್ಯಾಕ್ಸಿ ಎಸೋಸಿಯೇಶನ್ ಅಧ್ಯಕ್ಷ ಕೆ.…

Read More

ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ-೪೦ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವೆಂಬರ್ ೧ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ-೪೦ರಸಂಭ್ರಮ ಕಾರ್ಯಕ್ರಮದಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರ್ಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಬಡಗು ಹಾಗೂ ತೆಂಕುತಿಟ್ಟು ಸವ್ಯಸಾಚಿ ಚಂಡೆವಾದಕ  ಶಿವಾನಂದ ಕೋಟ ಇವರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಡಾ. ಹೆಚ್. ಶಾಂತಾರಾಮ್ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ತಾಳಮದ್ದಳೆಯನ್ನು ಆರಭಿಸಲಾಯಿತು. ಅಲ್ಲದೇ ಯುವಜನತೆಗೆ ಯಕ್ಷಗಾನ ಕಲೆಯ ವಿಶಿಷ್ಠತೆಯನ್ನು ತಿಳಿಸುವುದು ಇದರ ಉದ್ದೇಶವಾಗಿದೆ. ಅಹೋರಾತ್ರಿ ನಡೆಯುತ್ತಿದ್ದ ಈ ಕಾರ್ಯಕ್ರಮ ನಂತರದ ದಿನಗಳಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ಮಾತ್ರ ನಡೆಯುತ್ತಿತ್ತು. ನಂತರ ಯಕ್ಷಗಾನಕ್ಕೆ ಹೊಸ ಆಯಾಮಗಳನ್ನು ಕೊಡಬೇಕು ಎಂಬ ಉದ್ದೇಶದಿಂದ ಯುವ ಯಕ್ಷಗಾನ ಕಲಾವಿದರನ್ನು ಬೆಳೆಸಬೇಕೆಂಬ ಅಭಿಲಾಷೆಯಿಂದ ಯಕ್ಷಗಾನ ಪುರಸ್ಕಾರವನ್ನು ನೀಡಲು ಆರಂಭಿಸಲಾಯಿತು. ಪುರಸ್ಕಾರವನ್ನು ನೀಡುವುದರೊಂದಿಗೆ ಯಕ್ಷಗಾನವನ್ನು ಇನ್ನೂ ಮುತುವರ್ಜಿಯಿಂದ ಉಳಿಸಿ ಬೆಳೆಯಬೇಕು. ಪಡೆದವರ ಮೂಲಕ ಕಲೆ ಬೆಳೆಯಬೇಖು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕನ್ನಡ ಭಾಷೆಯ ಬಗೆಗೆ ನಿಜವಾದ ಅಭಿಮಾನ ಕಾಳಜಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿಬರಬೇಕು. ನಮ್ಮ ಎಲ್ಲಾ ಸಂಭ್ರಮಾಚರಣೆಯ ಜೊತೆಯಲ್ಲಿ ದೇಶ ಕಾಯುವ ಸೈನಿಕರನ್ನು ಸ್ಮರಿಸಿಕೊಳ್ಳಬೇಕು. ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಗಂಗೊಳ್ಳಿ ಘಟಕ ಮತ್ತು ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆಯು ಇಲ್ಲಿ ಹಮ್ಮಿಕೊ೦ಡಿದ್ದ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗ೦ಗೊಳ್ಳಿ ಮಾತನಾಡಿ ಮಾತೃಬಾಷೆ ಮೂಲಕ ಕಲಿತ ವಿದ್ಯೆ ನೇರವಾಗಿ ಹೃದಯದೊಳಕ್ಕೆ ಇಳಿಯುತ್ತದೆ. ಕನ್ನಡ ಮಧ್ಯಮದ ಮಕ್ಕಳು ತಮ್ಮೊಳಗೆ ಯಾವ ಕೀಳರಿಮೆಯನ್ನು ಇಟ್ಟುಕೊಳ್ಳಬಾರದು. ಸಾಧನೆಯೆ ಮುಖ್ಯವಾಗಬೇಕು ಎಂದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಕೆ. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ.ಜಿ. ಕಾರ‍್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ಗಣೇಶ, ಆನ೦ದ, ನಾಗರಾಜ, ರಾಮಚಂದ್ರ,…

Read More

ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡಿಗರು ತಂಬಾ ಭಾವೈಖ್ಯತೆ ಉಳ್ಳವರಾಗಿದ್ದು, ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿ ಕನ್ನಡಿಗರು ಭಾವನಾತ್ಮಕ ಬೆಸುಗೆ ಮೂಲಕ ಕನ್ನಡದ ಕಂಪು ವಿಸ್ತರಿಸಿದ್ದು, ಪ್ರತಿಭಾವಂತರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಲವಾರು ಮಹನೀಯರ ಹೋರಾಟ ಫಲ ಮೈಸೂರು, ಕರ್ನಾಟಕ ರಾಜ್ಯವಾಗಿ ಮರು ನಾಮಕರಣ ಗೊಂಡಿತು. ಹಲವಾರು ಕ್ಷೇತ್ರದಲ್ಲಿ ರಾಜ್ಯ ಪ್ರಗತಿ ಕಂಡಿದ್ದರೂ, ಇನ್ನಷ್ಟು ಪ್ರಗತಿ ಸಾಧಿಸಲು ಕನ್ನಡಿಗರು ಕೈಜೋಡಿಸಬೇಕಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್ ಹೇಳಿದರು. ಕುಂದಾಪುರ ತಾಲೂಕು ಪಂಚಾಯತ್, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ದ್ವಜಾರೋಹಣ ಮತ್ತು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಎಂಟು ಜನ ಕನ್ನಡ ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾಷೆ ಹಾಗೂ ಸಾಹಿತ್ಯ ಹಿರಿಮೆ ಎತ್ತಿ ಹಿಡಿದು ಭಾಷೆ ಶ್ರೀಮಂತ ಗೊಳಿಸಿದ್ದು, ರಾಜ್ಯ ಸರಕಾರ ಕೂಡಾ ಭಾಷಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ನ.1: ಕ್ರಿಯಾಶೀಲ ಯುವ ಛಾಯಾಗ್ರಾಹಕ, ತೆಕ್ಕಟ್ಟೆಯ ವಾಲ್ಮೀಕಿ ಡಿಜಿಟಲ್ಸ್‌ನ ಅಮಿತ್ ತೆಕ್ಕಟ್ಟೆ ಅವರ ನೂತನ ವೆಬ್‌ಸೈಟ್ amiththekkatte.com ಇಂದು ಲೋಕಾರ್ಪಣೆಗೊಂಡಿತು. ಕೋಟೆಶ್ವರದ ಸಹನಾ ಕನ್ವೆಶನ್ ಸೆಂಟರ್‌ನಲ್ಲಿ ಪ್ರೋಕಬ್ಬಡಿಯ ಖ್ಯಾತ ಆಟಗಾರ ರಿಶಾಂಕ ದೇವಾಡಿಗ ಲೋಕಾರ್ಪಣೆಗೊಳಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ಅನಿವಾರ್ಯವಾಗಿದ್ದು, ಉದ್ದಿಮೆಯ ಬೆಳವಣಿಗೆಗೂ ಅದು ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ವಾಲ್ಮೀಕಿ ಡಿಜಿಟಲ್ಸ್ ಮಾಲಿಕ ಅಮಿತ್ ತೆಕ್ಕಟ್ಟೆ, ಸಹನಾ ಕನ್ವೆಶನ್ ಸೆಂಟರ್ ಮಾಲಿಕರಾದ ಸುರೇಂದ್ರ ಶೆಟ್ಟಿ, ಬೆಂಗಳೂರು ಉದ್ಯಮಿ ನಿತೀಶ್ ದೇವಾಡಿಗ ಹಾಗೂ ವೆಬ್‌ಸೈಟ್ ವಿನ್ಯಾಸಗೊಳಿಸಿದ ಗೌತಮ ನಾವಡ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. [quote font_size=”15″ bgcolor=”#ffffff” bcolor=”#6ed624″ arrow=”yes”]ಛಾಯಾಗ್ರಾಹಕ ಅಮಿತ್ ತೆಕ್ಕಟ್ಟೆ ತನ್ನ ಕ್ರೀಯಾಶೀಲ ಛಾಯಾಗ್ರಹಣದ ಮೂಲಕ ಗುರುತಿಸಿಕೊಂಡವರು. ಕುಂದಾಪುರದಲ್ಲಿ ಪ್ರಥಮ ಭಾರಿಗೆ ಡಿಎಸ್‌ಎಲ್‌ಆರ್ ವೆಡ್ಡಿಂಗ್ ಫಿಲ್ಮ್ಸ್ ಪರಿಚರಿಸಿದ ಖ್ಯಾತಿ ಅವರದ್ದು. ಭಿನ್ನ ಭಿನ್ನ ಪ್ರಯೋಗಗಳ ಮೂಲಕ ಛಾಯಾಗ್ರಹಣ ಕ್ಷೇತ್ರದಲ್ಲಿ ಹೊಸತನವನ್ನು ಹುಡುಕುತ್ತಿರುವ ಅಮಿತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊನ್ನಾವರದಿಂದ ಮಂಗಳೂರು ತೆರಳುತ್ತಿದ್ದ ರಿಡ್ಜ್ ಕಾರು ನಿಯಂತ್ರಣ ತಪ್ಪಿ ಮರವಂತೆ ರಾಷ್ಟ್ರೀಯ ಹೆದ್ದಾರಿ 66 ಬಳಿ ನಿಂತಿದ್ದ ವಾಹನಕ್ಕೆ ಡಿಕ್ಕಿಯಾಗಿ ಚರಂಡಿಗೆ ಉರುಳಿ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ. ಕಾರಿನಲ್ಲಿದ್ದ ಕಿಯೋನಾ ಪಿಂಟೊ (8) ಗಂಭೀರ ಗಾಯಗೊಂಡಿದ್ದರೇ, ಕಾರು ಚಲಾಯಿಸುತ್ತಿದ್ದ ಸನ್ನಿ ಲೆಸಾರ‍್ಡೋ(32), ಅವರ ತಾಯಿ ಸಿಸಿಲಿಯಾ ಲೆಸಾರ‍್ಡೋ(56), ಅಕ್ಕ ಜಾಸ್ಮಿನ್ ಪಿಂಟೋ(36) ಹಾಗೂ ಆಕೆಯ ಮಗು ಕೇಲ್ ಪಿಂಟೋ(4) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ನ.1ರಂದು ಹುಟ್ಟಹಬ್ಬ ಆಚರಿಸಿಕೊಳ್ಳಬೇಕಿದ್ದ ಬಾಲಕಿ ಕಿಯೋನಾ  ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡು ಮಲಗಿದ್ದಾಳೆ.ಕುಂದಾಪ್ರ ಡಾಟ್ ಕಾಂ. ಮಂಗಳೂರು ನಂದಿಗುಡ್ಡ ನಿವಾಸಿಯಾಗಿರುವ ಸನ್ನಿ ಲೆಸಾರ‍್ಡೋ ಕುವೈತ್‌ನಲ್ಲಿ ಉದ್ಯೋಗಿಯಾಗಿದ್ದು, ಊರಿಗೆ ಬಂದಿದ್ದಾಗ ಕುಟುಂಬಿಕರೊಂದಿಗೆ ಹೊನ್ನಾವರದ ಸಂಬಂಧಿಕರ ಮನೆಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮರವಂತೆಯ ಮಾರಸ್ವಾಮಿ ದೇವಸ್ಥಾನದ ಸಮೀಪ ವೇಗವಾಗಿ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಕ್ಕೆ ಢಿಕ್ಕಿ ಹೊಡಿದು ಮೂರು ಸುತ್ತು ಉರುಳಿ ಚರಂಡಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಪೆಟ್ರೋಲ್ ಬಂಕ್ ಬಳಿ ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಘಫಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಕುಂದಾಪುರದ ಕುಂದೇಶ್ವರ ದೇವಳದ ಬಳಿಯ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ರಾಜೇಶ್ ಪೂಜಾರಿ (26) ಮೃತ ದುರ್ದೈವಿ. ಪೋಟೋಗ್ರಾಫರ್ ಆಗಿ ಪಾರ್ಟ್‌ಟೈಮ್ ವೃತ್ತಿ ಮಾಡಿಕೊಂಡಿದ್ದ ರಾಜೇಶ್, ಮಂಗಳವಾರ ಮಧ್ಯಾಹ್ನ ತ್ರಾಸಿಗೆ ತೆರಳುತ್ತಿದ್ದ ವೇಳೆಗೆ ಪೆಟ್ರೋಲ್ ಬಂಕ್ ಕಡೆಯಿಂದ ಒಮ್ಮೆಲೆ ರಸ್ತೆಗೆ ಬಂದ ಟಿಪ್ಪರ್ ಢಿಕ್ಕಿ ಹೊಡಿದಿತ್ತು. ರಾಜೇಶ್ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆತನ ಸಾವಿನಿಂದ ಕುಟುಂಬ ಆಘಾತದಲ್ಲಿ ಮುಳುಗಿದೆ. ಕುಂದಾಪುರ ಪರಿಸರದಲ್ಲಿ ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದ ರಾಜೇಶನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಿಕರು, ಸ್ನೇಹಿತರು, ಛಾಯಾಗ್ರಾಹಕರು ಆಸ್ಪತ್ರೆಯ ತೆರಳಿದ್ದರು. ಮೃತರು ತಂದೆ ನಾರಾಯಣ ಪೂಜಾರಿ ಹಾಗೂ ಈರ್ವರು ಸಹೋದರಿಯರನ್ನು ಅಗಲಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. youing photographer…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೬೧ನೇ ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ತಾಲೂಕು ಪಂಚಾಯತ್‌ಸದಸ್ಯರಾದ ಶ್ಯಾಮಲಾ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕನ್ನಡ ರಾಜೋತ್ಸವದ ಮಹತ್ವವನ್ನು ತಿಳಿಸಿದರು. ಅತಿಥಿಗಳಾಗಿ ನಾವುಂದ ಪಂಚಾಯತ್ ಸದಸ್ಯ ಗಣೇಶ್ ಪೂಜಾರಿ ಹಾಗೂ ಶಾಲೆಯ ಟ್ರಸ್ಟಿಗಳಾದ ಶ್ರೀ ತೇಜಪ್ಪ ಶೆಟ್ಟಿ, ಮಂಜು ಪೂಜಾರಿ ಮತ್ತು ಬೃಹ್ಮಶ್ರೀ ಬೈದರ್ಕಳ ಕೋಟಿ ಚೆನ್ನಯ ಗರಡಿಯ ಕಾರ್ಯದರ್ಶಿಗಳಾದ ಶೇಖರ ಪೂಜಾರಿ ಹಾಗೂ ಶಾಲೆಯ ಸಂಚಾಲಕಾರಾದ ಶಂಕರ ಪೂಜಾರಿ, ಮೇಲ್ವಿಚಾರಕರಾದ ಎ.ಬಿ. ಪೂಜಾರಿ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್. ಜಿ. ಬಾನಾವಳಿಕರ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕನ್ನಡ ನೆಲ. ಜಲ, ಸಂಸ್ಕೃತಿಯನ್ನು ಕೊಂಡಾಡಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ನಾಡ ಗೀತೆಯನ್ನು ಹಾಡಿ ಕನ್ನಡ ರಾಜ್ಯೋತ್ಸವ ದಿನದ ಮಹತ್ವವನ್ನು ವಿವರಿಸಿದರು. ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಗೋವಿಂದರಾಜು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗಳನ್ನು ಅರ್ಪಿಸಿದರು.

Read More

ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ ಒಂದು ಭಾಷೆ ಅಳಿಯಿತೆಂದರೆ ಆ ಭಾಷೆಯನ್ನು ಆಶ್ರಯಿಸಿದ ಇಡೀ ಜನಾಂಗದ ಸಮೃದ್ಧ ಪರಂಪರೆ ನಾಶವಾಗುತ್ತದೆ. ಇಂದು ಕನ್ನಡಿಗರು ಸ್ವಭಾಷಾ ಪ್ರೇಮಿಗಳಲ್ಲ, ಹೊರಗಿನವರು ಬಂದರೆ ನಾವು ಅವರ ಭಾಷೆ ಕಲಿತು ಮಾತನಾಡುತ್ತೇವೆಯೇ ಹೊರತು ಅವರು ನಮ್ಮ ಭಾಷೆ ಕಲಿಯುವಂತೆ ಮಾಡುವುದಿಲ್ಲ. ನಮ್ಮ ಮಕ್ಕಳು, ಮೊಮ್ಮಕ್ಕಳಿಗೇ ನಾವು ಕನ್ನಡ ಕಲಿಸುವುದಿಲ್ಲ. ಇಂಗ್ಲಿಷ್ ಮೀಡಿಯಂ ಸ್ಕೂಲುಗಳೇ ಬೇಕು ಹೀಗಾದರೆ ಕನ್ನಡದ ಗತಿಯಂತು ಎನ್ನುವ ಬಗ್ಗೆ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತಲ್ಲವೆ… ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೂಡುತ್ತದೆ ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು ಅದೇ ಗೋವರ್ಧನ ಗಿರಿಯಾಗುತ್ತದೆ.. ಎಂದು ಮಹಾಕವಿ ಕುವೆಂಪುರವರು ಕನ್ನಡ ಭುವನೇಶ್ವರಿ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿ ವಿಶ್ವ ಮಾನವ ಸಂದೇಶವನ್ನು ನೀಡಿದ ಮಹಾನ್ ಕವಿ. ಕನ್ನಡ ನಾಡಿನಲ್ಲಿ ಕುವೆಂಪುರಂತಹ ನೂರಾರು ಕವಿಗಳನ್ನು ಪಡೆದಿರುವ ಕನ್ನಡಿಗರೆ ಧನ್ಯರು. ಕನ್ನಡ ನಾಡಿನಲ್ಲಿ ಸಾಹಿತ್ಯ, ಕಲೆ, ಸಂಗೀತ, ನೃತ್ಯ, ವಾಸ್ತುಶಿಲ್ಪ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2016ನೇ ಸಾಲಿನ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಕುಂದಾಪುರ ತಾಲೂಕಿನ ಎಂಟು ಮಂದಿ ಆಯ್ಕೆಗೊಂಡಿದ್ದಾರೆ. ಯೋಗಬಂಧು ಸಂಜೀವಣ್ಣ, ಯಕ್ಷಗಾನ ಕಲಾವಿದ ಚಿಕ್ಕು ಪೂಜಾರಿ, ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡುವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕುಂದಾಪುರ ತಾಲೂಕಿನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರು: ಬಿ. ಮೋಹನ್ಚಂದ್ರ ಕಾಳಾವರ್ಕಾರ್ ಕಾಳಾವರ ಸಮಾಜ ಸೇವೆ ಎಂ. ಸಂಜೀವಣ್ಣ ಮೂಡುಕೇರಿ, ಕುಂದಾಪುರ ಸಾಮಾಜಿಕ ಯೋಗ ಶಿಕ್ಷಣ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಸಮಾಜಸೇವೆ ಎಲ್. ಎಮ್. ಇಬ್ರಾಹಿಂ ಗಂಗೊಳ್ಳಿ, ಸಮಾಜ ಸೇವೆ ಕೆ. ರತ್ನಾಕರ ಕಿಣಿ ಅಂಪಾರು ಅಂಚೆ ಸಾಹಿತ್ಯ ಕ್ಷೇತ್ರ ಜಾನ್ ಡಿಸೋಜ ಕುಂದಾಪುರ ಪತ್ರಕರ್ತ ಯೋಗೇಶ್ ಶಿರೂರು ಶಿರೂರು ಕರಾವಳಿ ರಂಗಭೂಮಿ ಕಲಾವಿದ ಚಿಕ್ಕು ಪೂಜಾರಿ ಶಿರೂರು, ಯಕ್ಷಗಾನ ಕಲಾವಿದ ಜಿಲ್ಲೆಯ ವಿವಿಧೆಡೆಗಳಿಂದ ಆಯ್ಕೆಯಾದವರು: ಗುರುರಾಜ್ ಸನಿಲ್. ಸಮಾಜ ಸೇವೆ (ಉರಗತಜ್ಞ) . ಸತೀಶ್ ಸಾಲ್ಯಾನ್ ಮಣಿಪಾಲ ಸಮಾಜ ಸೇವೆ . ರತ್ನಾಕರ್ ಸಾಮಂತ್ ಮಣಿಪಾಲ ಸಮಾಜಸೇವೆ…

Read More