ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಂಧುತ್ವದ ಚಿಗುರೊಡೆಯಲು ಕಾರಣವಾದ ಬಹುಮುಖ್ಯವಾದ ಪವಿತ್ರವಾದ ಸಾಂಸ್ಕೃತಿಕ ಹಬ್ಬ ರಕ್ಷಾ ಬಂಧನ. ಪರಸ್ಪರ ಆಶ್ವಾಸನೆ, ವಿಶ್ವಾಸವನ್ನು ನೀಡುವ ಹಬ್ಬವೇ ರಕ್ಷಾಬಂಧನ. ರಕ್ಷಾ ಬಂಧನ ಕೇವಲ ಸಹೋದರ ಸಹೋದರಿಯರ ನಡುವೆ ಮಾತ್ರ ನಡೆಯುವ ಹಬ್ಬ ಅಲ್ಲ. ಜಾತಿ, ಮತ, ಧರ್ಮಗಳ ನಡುವೆ ಸ್ನೇಹಪೂರ್ವಕ ಸಂಕೇತವಾಗಿಯೂ ರಕ್ಷಾ ಬಂಧನ ಮಹತ್ವವನ್ನು ಪಡೆದುಕೊಂಡಿದೆ ಎಂದು ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ದಿವ್ಯಶ್ರೀ ರಾಘವೇಂದ್ರ ಹೇಳಿದರು. ಅವರು ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಇದರ ಆಶ್ರಯದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಹಾಗೂ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಇದರ ಸಹಯೋಗದೊಂದಿಗೆ ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಶನಿವಾರ ಜರಗಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಮಾತನಾಡಿದರು. ಎಲ್ಲರಲ್ಲಿಯೂ ಸಹೋದರತೆಯ ಬಂಧವನ್ನು ಬೆಸೆಯಲು, ಏಕತೆಯನ್ನು ಕಾಣಲು, ರಾಷ್ಟ್ರ ರಕ್ಷಣೆ ಮಾಡಲು ರಕ್ಷಾ ಬಂಧನವನ್ನು ಕಟ್ಟುತ್ತಾರೆ. ರಕ್ಷೆಯನ್ನು ಮನ:ಪೂರ್ವಕವಾಗಿ ಪ್ರೀತಿಯಿಂದ ಕಟ್ಟಿದರೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬೀಜಾಡಿಯ ನಿವಾಸಿ ಹರೀಶ್ ಪೂಜಾರಿ ಕಳೆದ 2019ರಲ್ಲಿ ತೆಂಗಿನ ಮರದಿಂದ ಬಿದ್ದು ಸೊಂಟದ ಕೆಳಭಾಗ ಸ್ವಾಧೀನ ಕಳೆದುಕೊಂಡು ಅಸಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಈತ 2019ರಲ್ಲಿ ಮರದಿಂದ ಬೀಳುವ ಮುನ್ನವೇ ಕೋಟ ಸಹಕಾರಿ ವ್ಯವಸಾಯಕ ಸಂಘದಲ್ಲಿ 25ಸಾವಿರ ತುರ್ತು ಸಾಲ ಪಡೆದು ಕಟ್ಟಲಾಗದೆ ಅಸಾಯಕರಾಗಿ ಹಲವರ ಮೊರೆಹೋಗಿದ್ದಾರೆ. ಆತನ ಸಾಲಕ್ಕೆ ಹೆಗಲು ಕೊಡುವವರು ಯಾರೂ ಇಲ್ಲದ ಹಿನ್ನಲೆಯಲ್ಲಿ ಕೋಟದ ಪಂಚವರ್ಣ ಸಂಘಟನೆ ಮಾಹಿತಿ ಲಭಿಸಿದ್ದು ಇಲ್ಲಿನ ವಂಡಾರು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿ ಬಳಿ ಈ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ ಸಾಲ ಮರುಪಾವತಿಗಾಗಿ ಮೊರೆಇಟ್ಟರು. ಈ ದಿಸೆಯಲ್ಲಿ ಸಂಪತ್ ಕುಮಾರ್ ಶೆಟ್ಟಿ ಇವರ ನಿರ್ದೇಶನದ ಮೇರೆಗೆ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಆತನ ಸಾಲಕ್ಕೆ ಮುಕ್ತಿಗಾಣಿಸಲು ಚಿಂತಿಸಿ ಗುರುವಾರ ತನ್ನ ಸಂಸ್ಥೆಯ ಪ್ರಮುಖರನ್ನು ಆತನ ಮನೆಗೆ ಕಳಹಿಸಿ ನೇರವಾಗಿ ಬ್ಯಾಂಕ್ ಪ್ರಭಂಧಕ ಅಜಿತ್ ಶೆಟ್ಟಿ ಅವರಿಗೆ 25…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಲ್ಲಾ ಭಾಷೆಯನ್ನು ಪ್ರೀತಿಸಿ, ಆ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಅಂತಯೇ ಎಲ್ಲಾ ಭಾರತೀಯ ಭಾಷೆಗಳ ಮೂಲವಾದ ಸಂಸ್ಕೃತ ಓದಲು ಮತ್ತು ಬರೆಯಲು ಕಷ್ಟವೆನಿಸಿದರೂ ದಿನಕ್ಕೊಂದು ಪದವನ್ನು ಕಲಿತರೆ ಸಂಸ್ಕೃತ ಭಾಷೆ ಕಲಿಯುವುದು ಅಸಾಧ್ಯವಲ್ಲ ಎಂದು ಕೋಟದ ವಿವೇಕ ಪದವಿ-ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀ ಬಾಲಕೃಷ್ಣ ನಕ್ಷತ್ರಿ ಹೇಳಿದರು. ಅವರು ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ವಿಭಾಗ ಆಯೋಜಿಸಿದ ಸಂಸ್ಕೃತ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾಲೇಜಿನ ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥೆ ಮೇಘಾ ಎಸ್. ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ನೇಹ ಪ್ರಾರ್ಥಿಸಿ, ಸುಶ್ಮಿತಾ ಅತಿಥಿಗಳನ್ನು ಪರಿಚಯಿಸಿ, ಅಪೇಕ್ಷಾ ಸ್ವಾಗತಿಸಿ, ಶ್ರೇಯಾ ನಿರೂಪಿಸಿ, ಕೀರ್ತನಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ಅನ್ನವು ಆನಂದದ ಪ್ರತೀಕವಾಗಿದ್ದು, ಆಹಾರದ ಮೂಲಭೂತ ಗುಣವೇ ಆನಂದವಾಗಿದೆ. ಯಾವುದೇ ಆಹಾರವನ್ನು ನೆನಪಿಸಿಕೊಂಡರೂ, ನೋಡಿದರೂ, ಸವಿದರೂ ಅದು ಆನಂದವನ್ನೇ ಉಂಟುಮಾಡುತ್ತದೆ. ದೇವರೇ ಆಹಾರದ ರೂಪದಲ್ಲಿ ಬಂದು ಜೀವಿಗಳಿಗೆ ಆನಂದವನ್ನು ಹಂಚುತಿದ್ದು, ಅನ್ನ ಪರಬ್ರಹ್ಮನ ಸ್ವರೂಪವೇ ಆಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶುಕ್ರವಾರ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ತಿನ್ನುವ ಎಲ್ಲಾ ಪದಾರ್ಥಗಳೂ ರೂಪ, ಗುಣ, ರುಚಿಯಲ್ಲಿ ವ್ಯತ್ಯಾಸವಿದ್ದರೂ, ಸಿಹಿ, ಹುಳಿ, ಖಾರ ಸಹಿತ ಷಡ್ರಸಗಳಿಂದ ಕೂಡಿದ ಎಲ್ಲಾ ಆಹಾರಗಳೂ ಆನಂದವನ್ನು ಕೊಡುತ್ತವೆ ಎಂಬುದು ಆಹಾರದ ಸಮಾನ ಸ್ವಭಾವವಾಗಿದೆ. ಆಹಾರದಿಂದ ಸರ್ವೇಂದ್ರಿಯಗಳ ಸಂತೋಷ ಸಾಧ್ಯವಿದ್ದು, ಅನ್ನದಂತೆ ಸರ್ವೇಂದ್ರಿಯಗಳಿಗೆ ಆನಂದವನ್ನು ನೀಡುವ ವಸ್ತು ವಿಶ್ವದಲ್ಲಿ ಇನ್ನೊಂದಿಲ್ಲ. ಇದು ದೇವರ ಲಕ್ಷಣವಾಗಿದ್ದು, ಈ ಕಾರಣದಿಂದಲೇ ಅನ್ನವನ್ನು ದೇವರೆಂದು ಗೌರವಿಸುವ ಪರಂಪರೆಯಿದೆ ಎಂದು ಅಭಿಪ್ರಾಯಪಟ್ಟರು. ಜೀವಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಾರ್ಷಿಕವಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಪ್ರಕೃತಿಕ ವಿಕೋಪಗಳಿಂದ ಯಾವುದೇ ಅಪಘಾತಗಳು ಜರಗದಂತೆ ವರ್ಷಾಂಪ್ರತಿ ಜರುಗುವ ಸಮುದ್ರ ಪೂಜೆ ಕೋಡಿಯ ಸಮುದ್ರ ತೀರದಲ್ಲಿ ವಿಜೃಂಭಣೆಯಿಂದ ನೆರವೇರಿತು. ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್ ಆರ್. ಖಾರ್ವಿ ಅವರ ಅಧ್ಯಕ್ಷತೆಯಲ್ಲಿ ಮೊಕ್ತೇಸರರಾದ , ಪಾಂಡು ಸಾರಂಗ ಆನಂದ ನಾಯ್ಕ್ ಹಾಗೂ ದೇವಸ್ಥಾನದ ಮುಖ್ಯ ಅರ್ಚಕರಾದ ಶಿವರಾಮ್ ಭಟ್ ನೇತೃತ್ವದಲ್ಲಿ ಪೂಜೆಯ ವಿಧಿವಿಧಾನಗಳನ್ನು ಸಾಂಗವಾಗಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನಿಲ್ ಖಾರ್ವಿ ತಲ್ಲೂರು ವಹಿಸಿದ್ದರು. ಉಪಾಧ್ಯಕ್ಷರಾದ ನಾರಾಯಣ ಖಾರ್ವಿ ಮದ್ದುಗುಡ್ಡೆ, ಕಾರ್ಯದರ್ಶಿ ನಾಮದೇವ ಖಾರ್ವಿ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಖಾರ್ವಿ ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷರಾದ ಜಯಾನಂದ ಖಾರ್ವಿ , ನವರಾತ್ರಿ ಸಮಿತಿಯ ಮಂಜುಳಾ ಪಿ . ಖಾರ್ವಿ, ಮಹಾಕಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಖಾರ್ವಿ ವಿದ್ಯಾನಿಧಿ ಅಧ್ಯಕ್ಷ ದಿನಕರ ಖಾರ್ವಿ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ (ಪದವಿಪೂರ್ವ) ಉಪನಿರ್ದೇಶಕರ ಕಚೇರಿ, ಮಂಗಳೂರು ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಅಂಡರ್–19 ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡ ಅತ್ಯುತ್ತಮ ಸಾಧನೆಗೈದು ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್ ತಂಡವು ಸ್ಪರ್ಧೆಯಲ್ಲಿ 7 ಚಿನ್ನ ಹಾಗೂ 1 ಬೆಳ್ಳಿ ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ. ತಂಡದ ಆರು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯ ಫಲಿತಾಂಶ:ಆರ್ಟಿಸ್ಟಿಕ್ ಪೇರ್: ಬಾಲಕರ ವಿಭಾಗದಲ್ಲಿ ಚಂದ್ರಶೇಖರ ಮತ್ತು ಶ್ರೀವತ್ಸರಾಜ್- ಪ್ರಥಮ ಸ್ಥಾನಆರ್ಟಿಸ್ಟಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಪೂರ್ವಿಕ ಜೆ ಎಂ ಮತ್ತು ಅನನ್ಯ ಎಸ್ ಜಿ – ಪ್ರಥಮ ಸ್ಥಾನರಿದಮಿಕ್ ಪೇರ್: ಬಾಲಕರ ವಿಭಾಗದಲ್ಲಿ ಪೃಥ್ವಿಚಾರ್ ಎನ್ ಮತ್ತು ಶ್ರೀವತ್ಸರಾಜ್ – ಪ್ರಥಮ ಸ್ಥಾನರಿದಮಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಪೂರ್ವಿಕ ಜೆ ಎಂ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಮತ್ತು ಭರವಸೆ ಕೋಶ ಹಾಗೂ ವಾಣಿಜ್ಯ ವಿಭಾಗದ ವತಿಯಿಂದ “ಎಐ ಯುಗದ ವೃತ್ತಿ ಅವಕಾಶಗಳು” ಕುರಿತು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಲ್ತಾನೆ ಆಫ್ ಒಮಾನ್ ಮಸ್ಕತ್ ನ ಕಾಲೇಜ್ ಆಫ್ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಅಧ್ಯಯನ ಸ್ನಾತಕೋತ್ತರ ಸಂಶೋಧನಾ ಕೇಂದ್ರದ ಇನೋವೇಶನ್ ವಿಭಾಗದ ನಿರ್ದೇಶಕರಾದ ಡಾ. ಆನಂದ್ ಎಸ್. ಮಾತನಾಡಿ, ಇಂದಿನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ನಡುವೆ ವಾಣಿಜ್ಯ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳು ಮತ್ತು ಭವಿಷ್ಯದ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಾದ ಕೌಶಲ್ಯಗಳ ಕುರಿತು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ್, ವಾಣಿಜ್ಯ ವಿಭಾಗದ ವೊಕೇಶನಲ್ ಟ್ಯಾಕ್ಸ್ ಪ್ರೊಸೀಜರ್ ವಿಭಾಗದ ಮುಖ್ಯಸ್ಥರಾದ ರಿತಿನ್, ಹಾಗೂ ವಾಣಿಜ್ಯ ವಿಭಾಗದ ಸಂಯೋಜಕರಾದ ಮಮತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಆನಂದ್ ಎಸ್. ಅವರು ಎಐ ಯುಗದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬಾಳ್ಕುದ್ರು-ಹಂಗಾರಕಟ್ಟೆ ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಇದರ ಆಶ್ರಯದಲ್ಲಿ ಶ್ರೀ ಬ್ರಹ್ಮ ಶ್ರೀ ನಾರಾಯಣಗುರುಗಳ 172ನೇ ಜನ್ಮ ಜಯಂತಿ ಉತ್ಸವವನ್ನು ಶುಕ್ರವಾರದಂದು ವೈಭವದಿಂದ ಆಚರಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 09.೦೦ರಿಂದ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ, ತದನಂತರ ವೇ.ಮೂ ವೆಂಕಟರಣಸೂರ್ಯ ಇವರಿಂದ ಧಾರ್ಮಿಕ ವಿಧಿವಿಧಾನದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ ಜರಗಿತು. ಸಂಘದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.ಅಪರಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿದವು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲ.ವಿ.ಕೋಟ್ಯಾನ್, ಪ್ರಮುಖರಾದ ವಾಸುದೇವ ಕೋಟ್ಯಾನ್, ಉದೇಶ್ ಪೂಜಾರಿ, ಗುರಿಕಾರ ಕುಷ್ಟ ಪೂಜಾರಿ,ಕರುಣಾಕರ ಪೂಜಾರಿ, ರೇಖಾ ಪಿ. ಸುವರ್ಣ, ಕಲಾವತಿ ಆನಂದ್, ಜ್ಯೋತಿ ರವೀಂದ್ರ ಸುವರ್ಣ, ಪ್ರೇಮ ಸತೀಶ್ ಪೂಜಾರಿ, ಸಂಘದ ಪ್ರಮುಖರಾದ ನಾರಾಯಣ ಪೂಜಾರಿ, ಶಂಕರ್ ಪೂಜಾರಿ, ಆನಂದ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿಯ ಹೊಸ ಅಕಾಡೆಮಿಕ್ ಬ್ಲಾಕ್ (ಮೊದಲನೇ ಹಂತ) ಉದ್ಘಾಟನೆಯು ಗಣಹೋಮ ಮತ್ತು ಸರಸ್ವತಿ ಪೂಜೆಯೊಂದಿಗೆ ಸಂಪನ್ನಗೊಂಡಿತು. ಅತ್ಯಂತ ಸಂಭ್ರಮದಲ್ಲಿ ನಡೆದ ಈ ಸಮಾರಂಭದಲ್ಲಿ, ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿ ಮತ್ತು ಅನಿಶಾ ರೈ ದಂಪತಿಗಳು, ಮ್ಯಾನೇಜಿಂಗ್ ಟ್ರಸ್ಟಿ ವಿದ್ಯಾ ಜೆ. ಶೆಟ್ಟಿ, ಟ್ರಸ್ಟಿಗಳಾದ ರಾಮ್ ರತನ್ ಜೆ. ಶೆಟ್ಟಿ, ಕುಟುಂಬಸ್ಥರು, ಆಹ್ವಾನಿತ ಮಹನೀಯರು, ಐಎಂಜೆ ವಿದ್ಯಾಸಂಸ್ಥೆಗಳ, ನಿರ್ದೇಶಕರು, ಪ್ರಾಂಶುಪಾಲರು, ಎಲ್ಲಾ ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅತ್ಯಂತ ನವೀನ ರೀತಿಯಲ್ಲಿ ವಿಶಾಲವಾದ ಜಾಗದಲ್ಲಿ ಮನ ಸೆಳೆಯುವ ವಾಸ್ತುಶಿಲ್ಪದೊಂದಿಗೆ ಮೂಡಿಬಂದ ಕಟ್ಟಡ ಸಮುಚ್ಚಯ ಎಲ್ಲರ ಮನಸೆಳೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ದೇಶ ಕಂಡ ಮಹಾನ್ ಸಂತರಲ್ಲಿ ಒಬ್ಬರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಣೆಯಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವ ಮೂಲಕ ಹಿಂದುಳಿದ ಸಮಾಜದವರು ಮುಖ್ಯ ವಾಹಿನಿಗೆ ಬರಲು ದಾರಿ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿಯ ಚಟುವಟಿಕೆಗಳ ಮೂಲಕ ದೇಶದೆಲ್ಲೆಡೆ ಸಂಚರಿಸಿ, ಜಗತ್ತಿಗೆ ಸಮಾನತೆ ಎಂಬ ಜ್ಞಾನದ ಬೆಳಕನ್ನು ಹರಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ನಗರದ ಬನ್ನಂಜೆ ನಾರಾಯಣ ಗುರು ಆಡಿಟೋರಿಯಂ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಬಿಲ್ಲವರ ಸೇವಾ ಸಂಘ ಉಡುಪಿ ರಿ. ಬನ್ನಂಜೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ದಾರ್ಶನಿಕ, ಆಧ್ಯಾತ್ಮಿಕ ಸಾಧಕರಾಗಿದ್ದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ನಿರ್ಮಾಣಕ್ಕೆ ಮುಂದಾಗಿದ್ದರು. ಕೆಳವರ್ಗದ ಜನರಿಗಾಗಿ ದೇವಾಲಯಗಳನ್ನು ನಿರ್ಮಿಸಿ, ದೇವರನ್ನು ಪೂಜಿಸಲು ಅವಕಾಶ…
