ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ (ಪದವಿಪೂರ್ವ) ಉಪನಿರ್ದೇಶಕರ ಕಚೇರಿ, ಮಂಗಳೂರು ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಅಂಡರ್–19 ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡ ಅತ್ಯುತ್ತಮ ಸಾಧನೆಗೈದು ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಆಳ್ವಾಸ್ ತಂಡವು ಸ್ಪರ್ಧೆಯಲ್ಲಿ 7 ಚಿನ್ನ ಹಾಗೂ 1 ಬೆಳ್ಳಿ ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ. ತಂಡದ ಆರು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸ್ಪರ್ಧೆಯ ಫಲಿತಾಂಶ:
ಆರ್ಟಿಸ್ಟಿಕ್ ಪೇರ್: ಬಾಲಕರ ವಿಭಾಗದಲ್ಲಿ ಚಂದ್ರಶೇಖರ ಮತ್ತು ಶ್ರೀವತ್ಸರಾಜ್- ಪ್ರಥಮ ಸ್ಥಾನ
ಆರ್ಟಿಸ್ಟಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಪೂರ್ವಿಕ ಜೆ ಎಂ ಮತ್ತು ಅನನ್ಯ ಎಸ್ ಜಿ – ಪ್ರಥಮ ಸ್ಥಾನ
ರಿದಮಿಕ್ ಪೇರ್: ಬಾಲಕರ ವಿಭಾಗದಲ್ಲಿ ಪೃಥ್ವಿಚಾರ್ ಎನ್ ಮತ್ತು ಶ್ರೀವತ್ಸರಾಜ್ – ಪ್ರಥಮ ಸ್ಥಾನ
ರಿದಮಿಕ್ ಪೇರ್: ಬಾಲಕಿಯರ ವಿಭಾಗದಲ್ಲಿ ಪೂರ್ವಿಕ ಜೆ ಎಂ ಮತ್ತು ಅನನ್ಯ ಎಸ್ ಜಿ – ಪ್ರಥಮ ಸ್ಥಾನ
ಆರ್ಟಿಸ್ಟಿಕ್ ಸಿಂಗಲ್: ಬಾಲಕರ ವಿಭಾಗದಲ್ಲಿ ಶಶಿಕುಮಾರ್ ವಿ ಜಿ- ಪ್ರಥಮ ಸ್ಥಾನ
ಆರ್ಟಿಸ್ಟಿಕ್ ಸಿಂಗಲ್: ಬಾಲಕಿಯರ ವಿಭಾಗದಲ್ಲಿ ಅನನ್ಯ ಎಸ್ ಜಿ – ದ್ವಿತೀಯ ಸ್ಥಾನ
ಟ್ರೆಡಿಶನಲ್ ವಿಭಾಗ: ಬಾಲಕರ ವಿಭಾಗದಲ್ಲಿ ಶಶಿಕುಮಾರ್ ವಿ ಜಿ – ಪ್ರಥಮ ಸ್ಥಾನ
ಟ್ರೆಡಿಶನಲ್ ವಿಭಾಗ: ಬಾಲಕಿಯರ ವಿಭಾಗದಲ್ಲಿ ಪೂರ್ವಿಕ ಜೆ ಎಂ – ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅಭಿನಂದಸಿದ್ದಾರೆ.











