Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಟಪಾಡಿಯಲ್ಲಿ ಆ. 16 ರಂದು ನಡೆದ KEN – MABUNI SHITO – RYU – KARATE SCHOOL OF INDIA ಹಾಗೂ ಆರ್. ವಿ. ಕನ್ಸ್ಟ್ರಕ್ಷನ್ ಜಂಟಿಯಾಗಿ ಆಯೋಜಿಸಿದ್ದ ‘COMPETE 5.0’ 3ನೇ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಣೂರು ಪಡುಕೆರೆಯ ನಿವಾಸಿ ಪ್ರೇರಣಾ ಎನ್. ಮೊಗವೀರ ಅವರು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ವಿಜೇತರಾದ ಪ್ರೇರಣಾ ಅವರಿಗೆ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಪ್ರೇರಣಾ ಅವರು ಪ್ರಸ್ತುತ ಕೋಟದ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಣೂರು ಪಡುಕೆರೆ ದಾರೊಜ್ಜಿಮನೆಯ ಪ್ರೇಮ ಮತ್ತು ನಾಗೇಶ್ ದಂಪತಿಯ ಪುತ್ರಿಯಾಗಿದ್ದಾರೆ. ಇವರಿಗೆ MUKEN KAI KARATE DO FEDERATION OF INDIA ತರಬೇತುದಾರರಾದ ಮಂಜುನಾಥ್ ಮೊಗವೀರ ಅವರು ಕರಾಟೆ ತರಬೇತಿ ನೀಡಿದ್ದಾರೆ.ಪ್ರೇರಣಾ ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ರೋಟರಿ ಸಮುದಾಯ ದಳ ಕೋಟೇಶ್ವರವು ಪ್ರಥಮ ಮಹಿಳಾ ಸಮುದಾಯ ದಳವಾಗಿದೆ. ಹೆಂಗಸರು ಸೇವಾ ಮನೋಭಾವದಿಂದ ಈ ರೀತಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿದ್ದು  ಸಮಾಜಕ್ಕೊಂದು ಮಾದರಿ, ಸಂಸ್ಥೆಯು ಉತ್ತರೋತ್ತರ ಯಶಸ್ಸು ಗಳಿಸಲಿ ಎಂದು ರೋಟರಿ ಸಮುದಾಯ ದಳ ಜಿಲ್ಲಾ  ಉಪಸಭಾಪತಿ ಚಂದ್ರಶೇಖರ ಶೆಟ್ಟಿ ಹೇಳಿದರು. ಅವರು ಕೋಟೇಶ್ವರದ ರೋಟರಿ ಭವನದಲ್ಲಿ ಉದ್ಘಾಟನೆಗೊಂಡ ರೋಟರಿ ಸಮುದಾಯ ದಳ,ಕೋಟೇಶ್ವರ ಇದರ ಉದ್ಘಾಟನಾ ಮತ್ತು ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟೇಶ್ವರದ ಪ್ರಥಮ ಮಹಿಳಾ ಅಧ್ಯಕ್ಷರಾದ ಅಕ್ಷತಾ ಗಿರೀಶ್ ಐತಾಳ್ ಅವರು ವಹಿಸಿ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಮುಖ್ಯ ಅಭ್ಯಾಗತರಾಗಿ ಅಸಿಸ್ಟೆಂಟ್ ಗವರ್ನರ್ ಸುಧಾಕರ ಶೆಟ್ಟಿ, ವಲಯ ಸಮನ್ವಯಾಧಿಕಾರಿ ಮಾಧವ ಪೂಜಾರಿ ರೋಟರಿ ಸಮುದಾಯ ದಳ ಪ್ರಭಾಕರ್ ಕುಂಭಾಶಿ, ರೋಟರಿ ಸಮುದಾಯ ದಳ ಕೋಟೇಶ್ವರದ ಸಭಾಪತಿಗಳು ಹಾಗೂ ಕೋಟೇಶ್ವರ ಕಾರ್ಯದರ್ಶಿ ಅರುಣ ದೇವಾಡಿಗ, ರೋಟರಿ ಕ್ಲಬ್ ಕೋಟೇಶ್ವರದ ಅಧ್ಯಕ್ಷರಾದ ಸುಜಾತ ಶೆಟ್ಟಿ, ಕಾರ್ಯದರ್ಶಿಗಳಾದ ಸುಪ್ರಿಯಾ ಕುಂಭಾಶಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ “ಆಸಾಡಿ ಗಮ್ಮತ್” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಥೆ ನಿರ್ದೇಶಕ ಹಾಗೂ ಕಿರುತೆರೆ ನಟ ಚೇತನ್ ನೈಲಾಡಿ ಅವರು ಆಸಾಡಿ ತಿಂಗಳ ಮಹತ್ವದ ಕುರಿತು ಮಾತನಾಡಿದರು. ಆಸಾಡಿ ಹಬ್ಬದ ಆಚರಣೆ ಮತ್ತು ರೂಢಿ ಸಂಪ್ರದಾಯಗಳ ಹಿಂದೆ ಇರುವ ವೈಜ್ಞಾನಿಕ ಅಂಶಗಳನ್ನು ವಿದ್ಯಾರ್ಥಿಗಳಿಗೆ ಸರಳ ಉದಾಹರಣೆಗಳೊಂದಿಗೆ ವಿವರಿಸಿದರು.ಕುಂದಾಪ್ರ ಕನ್ನಡದ ಅಸ್ಮಿತೆಯು ಅದರ ಬಳಕೆಯಲ್ಲಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ಅವರು ಹೇಳಿದರು. ನಮ್ಮ ಮೂಲ ಸಂಸ್ಕೃತಿ, ಆಚಾರ, ವಿಚಾರ ಮತ್ತು ಭಾಷೆ ಅತ್ಯಂತ ಸಂಪದ್ಭರಿತ ಆಸ್ತಿ. ಹಣ ಸಂಪತ್ತನ್ನು ಯಾವಾಗ ಬೇಕಾದರೂ ಸಂಪಾದಿಸಬಹುದು. ಆದರೆ ಸಂಸ್ಕೃತಿಯು ಯಾವುದೇ ಬೆಲೆಬಾಳುವ ಆಸ್ತಿಗಿಂತಲೂ ಮೌಲ್ಯಯುತವಾದುದು. ಅದನ್ನು ರಕ್ಷಿಸಬೇಕಾದ ತುರ್ತಿನ ಬಗ್ಗೆ ಅವರು ಒತ್ತಿ ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: 80ನೇ ಸ್ವಾತಂತ್ರ್ಯೋತ್ಸವನ್ನು ಬಾಲಗೋಕುಲ ಶಿಶು ಮಂದಿರ ಗೋಪಾಡಿಯಲ್ಲಿ ಯುವಕ ಮಂಡಳ ರಿ. ಗೋಪಾಡಿ, ಸಹನಾ ಯುವತಿ ಮಂಡಳ ಗೋಪಾಡಿ ಹಾಗೂ ರೋಟರಿ ಸಮುದಾಯ ದಳ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ನೆರವೇರಿಸಲಾಯಿತು. ಕಾಶೀಯಮ್ಮ ಗೋಪಾಡಿ ಅವರು ಧ್ವಜಾರೋಹಣ ಗೈದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಮೂರ್ತಿ ಹತ್ವಾರ್ ಗೋಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಉಡುಪರು ಭಾಗವಹಿಸಿದ್ದರು. ಯುವಕ ಮಂಡಲರಿ. ಗೋಪಾಡಿ ಇದರ ಅಧ್ಯಕ್ಷರಾದ ಗಿರೀಶ್ ಉಪಾಧ್ಯಾಯರು, ರೋಟರಿ ಸಮುದಾಯ ದಳ ಕೋಟೇಶ್ವರದ ಅಧ್ಯಕ್ಷೆ ಸುಪ್ರೀತಾ ಪುರಾಣಿಕ, ಸಹನಾ ಯುವತಿ ಮಂಡಳದ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಧನ್ಯ, ಶಿಶು ಮಂದಿರದ ಕಾರ್ಯದರ್ಶಿಯಾದ ರೋಹಿಣಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ರೋಟರಿ ಸಮುದಾಯ ದಳ ಕೋಟೇಶ್ವರದಿಂದ ಬಾಲಗೋಕುಲ ಶಿಶುಮಂದಿರ ಗೋಪಾಡಿಯವರಿಗೆ ಖುರ್ಚಿ ಮತ್ತು ಶಿಶು ಮಂದಿರದ ಪುಟಾಣಿಗಳಿಗೆ ಏಕಾಗ್ರತೆ, ಕಲ್ಪನಾಶಕ್ತಿ ಹೆಚ್ಚಲಿ ಮತ್ತು ಮೊಬೈಲ್ ನಿಂದ ದೂರ ಉಳಿಯಲಿ ಎಂಬ ಉದ್ದೇಶದಿಂದ ಡ್ರಾಯಿಂಗ್ ಪುಸ್ತಕ ಮತ್ತು ಕ್ರೇಯಾನ್ಸ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಸನ್ನಿಧಿಯಲ್ಲಿ ವರ್ಷಂಪ್ರತಿ ಶ್ರಾವಣ ಮಾಸದಲ್ಲಿ ಜರಗುವ ’ಅಖಂಡ ಭಜನಾ ಸಪ್ತಾಹ’ಮಹೋತ್ಸವ’ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಮಂಗಳವಾರ ಬೆಳಿಗ್ಗೆ ಕನ್ಯಾ ಲಗ್ನ ಸುಮುಹೂರ್ತದಲ್ಲಿ ದೀಪ ಸ್ಥಾಪನಾಪೂರ್ವಕ ಪ್ರಾರಂಭವಾಯಿತು. ದೇವಳದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ಮತ್ತು ಪುರೋಹಿತರಾದ ಜಿ. ವಿಠಲದಾಸ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿತು. ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್ ಮತ್ತು ಆಡಳಿತ ಮಂಡಳಿ ಸದಸ್ಯ ಜಿ. ವೆಂಕಟೇಶ ನಾಯಕ್ ಜಂಟಿಯಾಗಿ ದೀಪ ಪ್ರಜ್ವಲನೆ ಮಾಡಿದರು. ಸಮಾಜದ ಹಿರಿಯರಾದ ಎಂ. ವಿನೋದ ಪೈ, ಜಿ. ನಿತ್ಯಾನಂದ ಶೆಣೈ, ಯು.ನಾರಾಯಣ ಪೈ, ಡಾ. ಕಾಶೀನಾಥ ಪಿ.ಪೈ, ಬಿ. ಕೃಷ್ಟ್ರಾಯ ಪೈ, ಎಂ.ಜಿ. ಮಾಧವ ಪೈ, ಎನ್. ಸುಭಾಶ್ ನಾಯಕ್, ಎಚ್. ಪಾಂಡುರಂಗ ನಾಯಕ್, ಎಂ.ಜಿ. ವಿಶ್ವನಾಥ ಭಂಡಾರ್‌ಕಾರ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಗೊಂಬೆ ನಡಿಗೆ ವಿದ್ಯಾರ್ಥಿಯ ಕಡೆಗೆ ಸೂತ್ರ ಸಂಕಲ್ಪ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು.  ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಭಾಗವತ ಹಾಗೂ ಉಡುಪಿ ಯಕ್ಷಗಾನ ಕೇಂದ್ರದ ಗುರುಗಳಾದ ಉಮೇಶ್ ಸುವರ್ಣ ಅವರು ಸೂತ್ರ ಸಂಕಲ್ಪ ಉದ್ಘಾಟಿಸಿದರು. ವೇದಿಕೆಯಲ್ಲಿ ಸುರೇಶ್ ಮರಕಾಲ, ರಮೇಶ್ ಭಟ್ ಕೋಟೇಶ್ವರ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ಸುವರ್ಣ ಅವರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ನಂತರ ಸೂತ್ರ ಸಂಕಲ್ಪದಡಿ ವಿದ್ಯಾರ್ಥಿಗಳಿಗೆ ಗುರುದೀಕ್ಷೆ ಹಾಗೂ ಗೊಂಬೆಯಾಟದ ತರಬೇತಿ ನೀಡಲಾಯಿತು. ಅಧ್ಯಾಪಕರು, ಹಿರಿಯರು ಕಿರಿಯರೆಂಬ ಬೇಧವಿಲ್ಲದೆ ಎಲ್ಲರೂ ಸೇರಿ ಸೂತ್ರ ಸಂಕಲ್ಪಕ್ಕೆ ಚಾಲನೆ ನೀಡಿದರು. ಎಲ್ಲರೂ ಗೊಂಬೆಯೊಟ್ಟಿಗೆ ಸೇರಿ ಕುಣಿದು ಖುಷಿ ಪಟ್ಟರು. ನಿವೃತ್ತ ಮುಖ್ಯೋಪಾಧ್ಯಾಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಚಲಿಸುತ್ತಿದ್ದ ಟ್ಯಾಂಕರ್‌ನ ಚಕ್ರ  ಕಳಚಿ ರಸ್ತೆ ಬದಿಯ ಕಟ್ಟೆಯಲ್ಲಿ ಕುಳಿತ್ತಿದ್ದ ವ್ಯಕ್ತಿಗೆ ಬಡಿದ ಪರಿಣಾಮ ಅವರು ಗಾಯಗೊಂಡಿರುವ ಘಟನೆ ಕಿರಿಮಂಜೇಶ್ವರ ರಾ.ಹೆ 66ರಲ್ಲಿ ಸಂಭವಿಸಿದೆ. ಕಿರಿಮಂಜೇಶ್ವರ ಗ್ರಾಮದ ರಾಘವೇಂದ್ರ ಅವರು ಗಾಯಗೊಂಡವರು. ಅವರು ಕಿರಿಮಂಜೇಶ್ವರ ಗ್ರಾಮದ ರಾ. ಹೆದ್ದಾರಿ 66ರ ಶಾಲೆ ಬಾಗಿಲು ಬೀಚ್ ತಿರುವು ರಸ್ತೆಯ ಬಳಿಯಲ್ಲಿರುವ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಸಮಯದಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಟ್ಯಾಂಕರ್‌ನ ಹಿಂಬದಿಯ ಒಂದು ಚಕ್ರ ಕಳಚಿ ಟ್ಯಾಂಕರ್‌ನಿಂದ ಬೇರ್ಪಟ್ಟು ಈ ಅಪಘಾತ ಸಂಭವಿಸಿದೆ. ಗಾಯಾಳುವನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿಯ ಪ್ರಸಿದ್ಧ ಗುತ್ತಿಗೆದಾರ, ಧಾರ್ಮಿಕ ಮುಂದಾಳು ಶ್ರೀನಿವಾಸ ಎಂ. (62) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಕೊಡುಗೈ ದಾನಿಯಾಗಿ ಇವರು ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷರಾಗಿ, ಶ್ರೀ ರಾಘವೇಂದ್ರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ, ಗಂಗೊಳ್ಳಿಯ ಸೇವಾ ಸಂಘ ಶ್ರೀ ಶಾರದೋತ್ಸವ ಸಮಿತಿ, ತರುಣ ಕಲಾವೃಂದ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯ ಸದಸ್ಯರಾಗಿ, ಬಿಜೆಪಿಯ ಕಾರ್ಯಕರ್ತರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಪ್ರಸಿದ್ಧ ಕಟ್ಟಡ ಗುತ್ತಿಗೆದಾರರಾಗಿದ್ದ ಇವರು ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದರು. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿದ್ದ ಮಸಾಲ, ಹಪ್ಪಳ, ಉಪ್ಪಿನಕಾಯಿ ಹಾಗೂ ಫಾಸ್ಟ್ ಫುಡ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಬೇಕರಿ ಮತ್ತು ಆಹಾರ ಉದ್ಯಮ ಅಸೋಸಿಯೇಷನ್ ನಿರ್ದೇಶಕ ಹಾಗೂ ಕೋಟೇಶ್ವರ ಚಂದು ಮಸಾಲ ಮಾಲಕರಾದ ಮಂಜುನಾಥ್ ನಾಯಕ್ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿ, ಉದ್ಯಮದಲ್ಲಿ ಯಶಸ್ಸು ಸಾಧಿಸಲು ಆಸಕ್ತಿ, ಗುಣಮಟ್ಟ ಹಾಗೂ ನಿರಂತರ ಪ್ರಯತ್ನ ಅತ್ಯಂತ ಮುಖ್ಯ ಎಂದು ಅವರು ಹೇಳಿದರು. ತಮ್ಮ ಸ್ವಂತ ಉದ್ಯಮದ ಅನುಭವವನ್ನು ಹಂಚಿಕೊಂಡ ಅವರು, ಮಸಾಲಾ ಪೌಡರ್ ತಯಾರಿಕೆಯ ಕುರಿತು ಯಾವುದೇ ಪೂರ್ವಜ್ಞಾನವಿಲ್ಲದಿದ್ದರೂ, ಆಸಕ್ತಿ ಮತ್ತು ಪರಿಶ್ರಮದಿಂದ ಕಲಿತು ಇಂದು ತಮ್ಮದೇ ಆದ ಬ್ರಾಂಡ್ ಹೊಂದಿರುವುದಾಗಿ ತಿಳಿಸಿದರು. ಆಹಾರ ಉದ್ಯಮದಲ್ಲಿ ತ್ವರಿತ ಯಶಸ್ಸಿಗಾಗಿ ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬಾರದು. ಗ್ರಾಹಕರಿಗೆ ಸದಾ ಗುಣಮಟ್ಟದ ಆಹಾರವನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕತಾರ್: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ, ದೋಹಾ ವತಿಯಿಂದ ಅಲ್ ಮಮೂರಾದ ಇಂಡಿಯನ್ ಕಲ್ಚರಲ್ ಸೆಂಟರ್ (ICC) ಆವರಣದಲ್ಲಿ ಅತ್ಯಂತ ಸಂಭ್ರಮ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ಭಾರತೀಯ ಸಮುದಾಯದ ಸದಸ್ಯರು ಹಾಗೂ ಭಾರತ ಸ್ನೇಹಿತರು ಭಾಗವಹಿಸಿದ್ದರು. ಕಾರ್ಯಕ್ರಮವು ವಂದೇ ಮಾತರಂ ಗಾಯನದೊಂದಿಗೆ ಆರಂಭಗೊಂಡಿತು. ಬಳಿಕ ಕತಾರ್‌ನಲ್ಲಿನ ಭಾರತದ ಚಾರ್ಜ್ ದ’ಅಫೇರ್ಸ್ ಸಂದೀಪ್ ಕುಮಾರ್ ಅವರು ಬೆಳಗ್ಗೆ 6:45ಕ್ಕೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ರಾಷ್ಟ್ರಗೀತೆ ಗಾಯನ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ತದನಂತರ ಮಾತನಾಡಿ, ಭಾರತ–ಕತಾರ್ ನಡುವಿನ ಬಲಿಷ್ಠ ಮತ್ತು ಸೌಹಾರ್ದಯುತ ಸಂಬಂಧ, ಇತ್ತೀಚಿನ ಉನ್ನತ ಮಟ್ಟದ ಭೇಟಿಗಳು ಹಾಗೂ ದ್ವಿಪಕ್ಷೀಯ ಸಹಕಾರದ ಕುರಿತು ವಿವರಿಸಿದರು. ಭಾರತವು ಸಂವಿಧಾನದ ಮೌಲ್ಯಗಳನ್ನು ಆಧಾರವಾಗಿಸಿಕೊಂಡು ಬಲಿಷ್ಠ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆಯುತ್ತಿರುವುದನ್ನು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ…

Read More