Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಧುನಿಕ ವೈದ್ಯಕೀಯ ತಂತ್ರಜ್ಞಾನ, ಪರಿಣತ ವೈದ್ಯಕೀಯ ಸೇವೆ ಮತ್ತು ಕೈಗೆಟುಕುವ ದರದ ಚಿಕಿತ್ಸೆಯ ಮೂಲಕ ಜನಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುತ್ತಿರುವ ಮೂಡುಬಿದಿರೆಯ ಆಳ್ವಾಸ್ ಆರೋಗ್ಯ ಕೇಂದ್ರವು ಶಸ್ತçಚಿಕಿತ್ಸಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಳೆದ ಒಂದು ದಶಕದಲ್ಲಿ ಕೇಂದ್ರದಲ್ಲಿ 5,000ಕ್ಕೂ ಅಧಿಕ ಲ್ಯಾಪ್ರೊಸ್ಕೋಪಿಕ್ ಶಸ್ತçಚಿಕಿತ್ಸೆಗಳು ಮತ್ತು ಎಂಡೋಸ್ಕೋಪಿಕ್ ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಆಧುನಿಕ ಶಸ್ತçಚಿಕಿತ್ಸಾ ವಿಧಾನಗಳನ್ನು ಸ್ಥಳೀಯವಾಗಿಯೇ ಲಭ್ಯವಾಗಿಸುವ ಮೂಲಕ ರೋಗಿಗಳಿಗೆ ಸುಧಾರಿತ ಚಿಕಿತ್ಸಾ ಸೇವೆ ಒದಗಿಸುವಲ್ಲಿ ಕೇಂದ್ರ ಮಹತ್ವದ ಹೆಜ್ಜೆ ಇರಿಸಿದೆ. 1986ರ ಮೇ.31 ರಂದು ಡಾ. ಎಂ. ಮೋಹನ್ ಆಳ್ವರಿಂದ ಸ್ಥಾಪನೆಯಾದ ಆಳ್ವಾಸ್ ಆರೋಗ್ಯ ಕೇಂದ್ರವು ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ವಿವಿಧ ವೈದ್ಯಕೀಯ ಮತ್ತು ಶಸ್ತçಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದೆ. ಸಾಮಾನ್ಯ ಶಸ್ತçಚಿಕಿತ್ಸೆ, ಲ್ಯಾಪ್ರೊಸ್ಕೋಪಿಕ್ ಶಸ್ತçಚಿಕಿತ್ಸೆ ಮತ್ತು ಎಂಡೋಸ್ಕೋಪಿಕ್ ಚಿಕಿತ್ಸಾ ವಿಧಾನಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಶಸ್ತçಚಿಕಿತ್ಸಾ ತಜ್ಞ ಡಾ. ವಿನಯ್ ಆಳ್ವರ ನೇತೃತ್ವದಲ್ಲಿ ವಿಭಾಗವು ಆಧುನಿಕ ಚಿಕಿತ್ಸಾ ತಂತ್ರಗಳನ್ನು ಅಳವಡಿಸಿಕೊಂಡಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಪ್ರಯಾಣಿಕರಾಗಿ ಬಂದಿದ್ದ ದಂಪತಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್‌ವೊಂದನ್ನು ರಿಕ್ಷಾದಲ್ಲೇ ಬಿಟ್ಟು ಹೋಗಿದ್ದು ಅದನ್ನು ಗಮನಿಸಿದ ಆಟೋ ರಿಕ್ಷಾ ಚಾಲಕ ಫಝಲು ರೆಹಮಾನ್ ಎಂಬುವರು ಗಂಗೊಳ್ಳಿ ಪೊಲೀಸ್ ಠಾಣೆ ಮೂಲಕ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅ.17 ರಂದು ಆಟೋ ಚಾಲಕರಾದ ಫಝಲು ರೆಹಮಾನ್ ಎನ್ನುವರ ಆಟೋದಲ್ಲಿ ಬಾಡಿಗೆ ಬಂದಿದ್ದ ಕೇಶವ ತೋಳಾರ್ ಹಾಗೂ ಅವರ ಪತ್ನಿಯು ಆಟೋ ರಿಕ್ಷಾದಲ್ಲೇ ಅಂದಾಜು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದು, ಚಾಲಕ ಫಝಲು ರೆಹಮಾನ್ ಪ್ರಾಮಾಣಿಕತೆಯಿಂದ ಈ ಬ್ಯಾಗ್‌ನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ತಂದು ನೀಡಿದ್ದು ಬ್ಯಾಗ್ ವಾರೀಸುದಾರರ ಪತಿ ಕೇಶವ ತೋಳಾರ್ ಅವರು ಠಾಣೆಗೆ ಅಗಮಿಸಿ ಬ್ಯಾಗ್, ಮೊಬೈಲ್ ಫೋನ್ ಹಾಗೂ ಇತರ ದಾಖಲಾತಿಗಳನ್ನು ಪರಿಶೀಲಿಸಿ‌ ಪಡೆದುಕೊಂಡರು. ಆಟೋ ಚಾಲಕರಾದ ಫಝಲು ರೆಹಮಾನ್ ಅವರ ಪ್ರಾಮಾಣಿಕತೆಗೆ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ 2001ರಲ್ಲಿ ಆರಂಭಗೊಂಡ ಸೈಂಟ್ ಥಾಮಸ್ ಹೈಯರ್ ಪ್ರೈಮರಿ ಸ್ಕೂಲ್ ಇದೀಗ ‘ಸೈಂಟ್ ಥಾಮಸ್ ಸೆಂಟ್ರಲ್ ಸ್ಕೂಲ್’ ಎಂಬ ನೂತನ ಹೆಸರಿನೊಂದಿಗೆ ಗುರುತಿಸಿಕೊಳ್ಳಲಿದೆ. ಕರ್ನಾಟಕ ಸರ್ಕಾರದ ಅನುಮೋದನೆ ಹಾಗೂ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) ಮಾನ್ಯತೆಯ ಮೇರೆಗೆ ಶಾಲೆಯ ಮರುನಾಮಕರಣಕ್ಕೆ ಅನುಮೋದನೆ ದೊರೆತಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ. ಮಂಡಳಿಯು 18-10-2026ರಂದು ಪತ್ರ ಸಂಖ್ಯೆ CNOO 180-27 28/2027-28ರ ಮೂಲಕ ಮರುನಾಮಕರಣಕ್ಕೆ ಸಂಬಂಧಿಸಿದ ಆದೇಶ ನೀಡಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ಶಾಲೆಯ ಅಧಿಕೃತ ದಾಖಲೆಗಳು, ಪತ್ರವ್ಯವಹಾರಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ‘ಸೈಂಟ್ ಥಾಮಸ್ ಸೆಂಟ್ರಲ್ ಸ್ಕೂಲ್’ ಎಂಬ ಹೆಸರನ್ನು ಬಳಸಲಾಗುತ್ತದೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆಗ್ರಾಮೀಣ ಭಾಗದ ಮಕ್ಕಳಿಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಲಭ್ಯವಾಗುವ ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ಕಲಿಕಾ ಸೌಲಭ್ಯಗಳು ದೊರೆಯಬೇಕು ಎಂಬ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾದ 2026ನೇ ಸಾಲಿನ SGFI (State Syllabus) 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಕರ್ನಾಟಕ ರಾಜ್ಯಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ಕಶ್ವಿ ಚೆಸ್ ಶಾಲೆಯ ಪ್ರತಿಭಾನ್ವಿತ ಚೆಸ್ ಆಟಗಾರರಾದ ಅವನೀಶ್ ಪ್ರಸಾದ್ ಕೆ. ಹಾಗೂ ಲಾಸ್ಯ ಶೆಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದಲ್ಲಿ ತೃತೀಯ ಹಾಗೂ ನಾಲ್ಕನೇ ಸ್ಥಾನಗಳನ್ನು ಗಳಿಸುವ ಮೂಲಕ ರಾಷ್ಟ್ರೀಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಕ್ಟೋಬರ್ 15ರಿಂದ 17ರವರೆಗೆ ನಡೆದ SGFI ಕರ್ನಾಟಕ ರಾಜ್ಯಮಟ್ಟದ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ ನಲ್ಲಿ ಕುಂದಾಪುರದ ಕಾಶ್ವಿ ಚೆಸ್ ಶಾಲೆಯ ವಿದ್ಯಾರ್ಥಿಗಳಾದ ಅವನೀಶ್ ಪ್ರಸಾದ್ ಕೆ. ಹಾಗೂ ಲಾಸ್ಯ ಶೆಟ್ಟಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿಭಾನ್ವಿತ ಚೆಸ್ ಆಟಗಾರರು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆಯೂ ಕುಂದಾಪುರದ ಇಬ್ಬರು ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಂಸ್ಕಾರವು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸಿದರೆ, ಶಿಸ್ತು ಆ ವ್ಯಕ್ತಿತ್ವಕ್ಕೆ ಘನತೆಯನ್ನು ತಂದುಕೊಡುತ್ತದೆ. ಉತ್ತಮ ಸಂಸ್ಕಾರ ಮತ್ತು ಶಿಸ್ತಿನ ಜೀವನವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಹಕಾರಿಯಾಗಿದೆ”ಎಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ಹೇಳಿದರು. ಅವರು ಮಂದಾರ್ತಿಯಲ್ಲಿ ನಡೆಯುತ್ತಿರುವ ಡಾl ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ” ಸಂಸ್ಕಾರದ ಬೆಳಕಿನಲ್ಲಿ ಶಿಸ್ತಿನ ಪಯಣ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಇದೇ ಸಂದರ್ಭ ಅವರು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸುವಲ್ಲಿ ಕುಟುಂಬ, ಶಾಲೆ ಹಾಗೂ ಸಮಾಜದ ಪಾತ್ರ ಮಹತ್ವದ್ದಾಗಿದೆ. ಸಂಸ್ಕಾರವೇ ಶಿಸ್ತಿನ ಬದುಕಿಗೆ ಭದ್ರಬುನಾದಿ ಎಂದರು. ಮಂದಾರ್ತಿ ಲಕ್ಷ್ಮೀ ಗ್ರೂಪ್ ನ ದೇವದಾಸ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದುರ್ಗಾಪರಮೇಶ್ವರಿ ದೇವಳದ ಪದವಿ-ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕಿ ರೇಷ್ಮಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ರೋಟರಿ ಸಮುದಾಯದಳ ಕೋಟೇಶ್ವರ ಇವರ ಸಹಭಾಗಿತ್ವದಡಿ ೩೨೧ನೇ ಪರಿಸರಸ್ನೇಹಿ ಭಾನುವಾರದ ಪ್ರಯುಕ್ತ ಕುಂಭಾಶಿ ಆನೆಗುಡ್ಡೆ ಶ್ರೀವಿನಾಯಕ ದೇಗುಲ ವಠಾರ ಸ್ವಚ್ಛತಾಕಾರ್ಯಕ್ರಮ ಭಾನುವಾರ ಹಮ್ಮಿಕೊಂಡಿತು. ದೇಗುಲ ಸ್ವಚ್ಛತಾ ಕಾರ್ಯಕ್ಕೆ ದೇಗುಲದ ಮುಕ್ತೇಸರ ಶ್ರೀರಮಣ ಉಪಾಧ್ಯಾಯ ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯದ ಅಂಗವಾಗಿ ದೇಗುಲದ ವ್ಯವಸ್ಥಾಪಕ ನಟೇಶ್ ಕಾರಂತ ಸ್ವಚ್ಛಾಗೃಹಿ ಪಂಚವರ್ಣ ಸಂಘಟನೆ ಪರವಾಗಿ ಲಲಿತಾ ಪೂಜಾರಿ ಹಾಗೂ ರೋಟರಿ ಸಮುದಾಯದಳದ ಪರವಾಗಿ ಸುಪ್ರಿತಾ ಪುರಾಣಿಕ್ ಇವರುಗಳನ್ನು ವಿಶೇಷವಾಗಿ ಗುರುತಿಸಿ ಗೌರವಿಸಲಾಯಿತು. ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ರೋಟರಿ ಸಮುದಾಯ ದಳದ ಪ್ರಮುಖರು ಉಪಸ್ಥಿತರಿದ್ದರು. ನಡಿಗೆಗಾಗಿ ಪಾದರಕ್ಷೆ ಅಭಿಯಾನ:ಸ್ವಚ್ಛತಾ ಕಾರ್ಯಕ್ರಮದಲ್ಲಿ  ಸಮಾಜಸೇವಕ ಅವಿನಾಶ್ ಕಾಮತ್  ನೇತೃತ್ವದಲ್ಲಿ ಇದೇ ಅಕ್ಟೋಬರ್ 23,24,25 ರಂದು ನಡೆಯುವ ನಡಿಗೆ ಹಳೆಯ ಪಾದರಕ್ಷೆ ಅಭಿಯಾನಕ್ಕೆ ಪಂಚವರ್ಣ ಸಂಘಟನೆ ಹಾಗೂ ರೋಟರಿ ಸಮುದಾಯ ಕೋಟೇಶ್ವರ ಕೈಜೋಡಿಸಿದ್ದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ಪ್ರತಿದಿನ ದುರ್ಗಾಹೋಮ ಕಾರ್ಯಕ್ರಮಗಳು ಜರಗುತ್ತಿದ್ದು ಭಾನುವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ಹಲವು ಸೇವಾರ್ತಿಗಳಿಂದ ದುರ್ಗಾಹೋಮ ಕಾರ್ಯಕ್ರಮಗಳು ಜರಗಿದವು. ವೇ.ಮೂ.ಮಧುಸೂದನ್ ಬಾಯರಿ ನೇತೃತ್ವದಲ್ಲಿ ನಡೆದ ಹೋಮಾಧಿಕಾರ್ಯಕ್ರಮದಲ್ಲಿ ಸಂಸದ ಕೋಟ ಹಾಗೂ ಪತ್ನಿ ಶಾಂತ ಮತ್ತು ಮಕ್ಕಳು ಇತರ ಸೇವಾರ್ತಿಗಳಾದ ಲಕ್ಷ್ಮಿ ಮತ್ತು ನರಸಿಂಹ ಪೂಜಾರಿ ಹಾಗೂ ಕುಟುಂಬ ಅಪೂರ್ವ ನಿಲಯ ಹಾಡಿಕೆರೆ ಕೋಟ, ಸಜನಿ ಮತ್ತು  ಆದಿತ್ಯ ಕೋಟ್ಯಾನ್ ಕುಟುಂಬದವರು, ನಡುಬೆಟ್ಟು ಮಣೂರು ಇವರು ಸೇವಾರ್ತಿಗಳಾಗಿ ಭಾಗಿಯಾದರು. ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಸೇವಾರ್ತಿಗಳಿಗೆ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು. ದೇಗುಲದ ಟ್ರಸ್ಟಿಗಳಾದ ರತನ್ ಐತಾಳ್, ಸುಭಾಷ್ ಶೆಟ್ಟಿ, ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಸುಧಾ ಎ. ಪೂಜಾರಿ, ಜ್ಯೋತಿ ಕಾಂಚನ್, ಸುಬ್ರಾಯ ಜೋಗಿ, ಚಂದ್ರ ಅಚಾರ್ಸಹಿತ ಹಲವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಇನ್ನಷ್ಟು ಪರಿಣಾಮಯಾಗಿ ರೈತಾಪಿ ವರ್ಗದವರಿಗೆ ತಲುಪಿಸಿ, ಅವರುಗಳನ್ನು ಸ್ವಾವಲಂಭಿಗಳನ್ನಾಗಿ ಮಾಡಬೇಕು. ಕೃಷಿ ಮತ್ತು ತೋಟಗಾರಿಕೆ ಮೇಳದ ಮೂಲಕ ಕೃಷಿಕರ ಬದುಕಿಗೆ ಆತ್ಮಸ್ಥೆöÊರ್ಯ ದೊರಕುವಂತಾಗಬೇಕು. ನೇಗಿಲ ಯೋಗಿಯ ಶ್ರಮಕ್ಕೆ ಆಧುನಿಕ ತಂತ್ರಜ್ಞಾದ ಬೆಳಕು ಸಿಗಲಿ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶನಿವಾರ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಹಾಗೂ ಇತರೆ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ನಡೆದ ಕೃಷಿ ಮತ್ತು ತೋಟಗಾರಿಕೆ ಮೇಳ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಪ್ರಜಾಸೇವಾ ಆಂದೋಲನ ಸಭೆಗಳಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಕುಂದು ಕೊರತೆಯ ಅಹವಾಲು ಹಾಗೂ ಅವರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸೂಕ್ತ ಪರಿಹಾರಗಳನ್ನು ಕೈಗೊಂಡಲ್ಲಿ ಮಾತ್ರ ಸರಕಾರದ ಇಂತಹ ಕಾರ್ಯಕ್ರಮಗಳು ಯಶಸ್ಸು ಸಾಧಿಸುತ್ತವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗೋಣ ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಶನಿವಾರ ಉಪ್ಪೂರು ಗ್ರಾಮದ ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ನ ಸೌಹಾರ್ದ ಸಭಾಭವನದಲ್ಲಿ ಪ್ರಜಾಸೇವಾ ಇಲಾಖೆ ತಾಲೂಕು ಆಡಳಿತ ಬ್ರಹ್ಮಾವರ ಇವರ ಸಹಯೋಗದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರದ ನೂತನ ಯೋಜನೆಯಾದ ಪ್ರಜಾಸೇವಾ ಆಂದೋಲನ ಸಭೆಯ ಮೂಲಕ ಜನರ ಬಳಿಗೆ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅವರ ಸಮಸ್ಯೆಗಳಿಗೆ ಅವರಿರುವಲ್ಲಿಯೇ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದ್ದು, ಆಡಳಿತ ಯಂತ್ರಗಳಿಗೆ ಚುರುಕು ನೀಡಿ, ಜನರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಿ, ಅವರುಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತೀ ಶನಿವಾರಗಳಂದು ಪ್ರಜಾಸೇವಾ ಆಂದೋಲನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಮಾತ್ರವಲ್ಲ ಭಾರತೀಯ ಸಾಹಿತ್ಯದಲ್ಲಿ ಮಹತ್ವದ ಹೆಸರು. ಸ್ವಾತಂತ್ರ್ಯ ಪೂರ್ವದಲ್ಲಿ ತಮ್ಮ ಕೃತಿಗಳ ಮೂಲಕ ಶೋಷಣೆ, ಕಂದಾಚಾರ, ಅಸಮಾನತೆ, ದಬ್ಬಾಳಿಕೆ ಇತ್ಯಾದಿಗಳನ್ನು ವಿಮರ್ಶಿಸಿದ್ದಾರೆ. ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಅವರ ಸಾಹಿತ್ಯದ ಮುಖ್ಯ ಲಕ್ಷಣವಾಗಿದೆ. ಈ ದೃಷ್ಟಿಯಿಂದ ರಾ?ಮಟ್ಟದಲ್ಲಿ ಡಾ. ಕಾರಂತರು ಕರಾವಳಿಯ ಬದುಕು ಮತ್ತು ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ದೃಷ್ಟಿಯಿಂದ ಅವರ ಬದುಕು-ಬರಹಗಳ ಬಗ್ಗೆ ಇಂದಿನ ಪೀಳಿಗೆಗೆ ಅರಿವು ಮೂಡಿಸುವುದು ಅತಿ ಅಗತ್ಯ ಇದಕ್ಕಾಗಿ ಕರ್ನಾಟಕ ಸರಕಾರವು 2002ರಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟನ್ನು ಸ್ಥಾಪಿಸಿದೆ. 2024 ಡಿಸೆಂಬರ್‌ನಲ್ಲಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಅವರ ಅಧ್ಯಕ್ಷತೆಯಲ್ಲಿ ಹೊಸ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 75 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅರಿವಿನ ಬೆಳಕು, ಮಕ್ಕಳಿಗಾಗಿ ಕಾರಂತರು, ತರಬೇತಿ ಶಿಬಿರಗಳು, ರಾಷ್ಟ್ರೀಯ ವಿಚಾರ ಸಂಕಿರಣ, ರಂಗಪ್ರದರ್ಶನಗಳನ್ನು ನಡೆಸಲಾಗಿದೆ. ಕೇವಲ ಅವಿಭಜಿತ…

Read More