ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ನಮ್ಮೆಲ್ಲರ ಬದುಕು ಭಾರತದ ಸಂವಿಧಾನವನ್ನು ಅವಲಂಬಿಸಿದೆ. ಭಾರತದ ಸಂವಿಧಾನವು ಕೇವಲ ರಾಜಕೀಯದ ಬಗ್ಗೆ ಆಸಕ್ತಿ ಇರುವವರಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮೆಲ್ಲರ ದಿನನಿತ್ಯದ ಜೀವನದಲ್ಲೂ ಸಂವಿಧಾನವು ಪ್ರಭಾವ ಬೀರುತ್ತಿದೆ. ಸಂವಿಧಾನಕ್ಕೆ ಬದ್ದವಾಗಿ ಸರಕಾರಗಳು ಜನಪರವಾದ ಕಾನೂನುಗಳನ್ನು, ನೀತಿ-ನಿಯಮಾವಳಿಗಳನ್ನು ರೂಪಿಸುತ್ತವೆ. ಶಿಕ್ಷಣ, ಜ್ಞಾನ, ಉದ್ಯೋಗ ಎಲ್ಲಾ ಕ್ಷೇತ್ರಗಳಲ್ಲೂ ತಾರತಮ್ಯವಿಲ್ಲದ ಎಲ್ಲರಿಗೂ ಸಮಾನ ಅವಕಾಶಗಳನ್ನು ಸಂವಿಧಾನ ನಮಗೆ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು. ಅವರು ಸೋಮವಾರ ಮಣಿಪಾಲ ಗಣಿತ ನಗರದಲ್ಲಿರುವ ಜ್ಞಾನಸುಧಾ ಕಾಲೇಜಿನ ಶಾಂತಿ ರಮೇಶ್ ಪೈ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶ್ರೀ ದುರ್ಗಾ ಫ್ರೆಂಡ್ಸ್ ರಥಬೀದಿ ಉಪ್ಪುಂದ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಗಣೇಶ ದೇವಾಡಿಗ ಕೋಟೆಬೆಟ್ಟು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಎಲ್. ಮೇಲ್ಮನೆ ಅವರನ್ನು ಉಪ್ಪುಂದ ರಥಬೀದಿಯ ಸಂಘದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಿವರಾಜ ಬೆಮ್ಮಣ್ಣನಮನೆ, ಗೌರವಾಧ್ಯಕ್ಷರಾಗಿ ಮಂಜು ದೇವಾಡಿಗ ಅರೆಹಾಡಿ, ಜೊತೆ ಕಾರ್ಯದರ್ಶಿಯಾಗಿ ಅರುಣ್ ರಾಯರಡಿ, ಪ್ರಚಾರ ಸದಸ್ಯರಾಗಿ ಸೂರಜ್ ಮತ್ತು ಸಂಜಯ, ಕೋಶಾಧಿಕಾರಿಯಾಗಿ ಸುಧೀರ್ ಬಾಕಿಮನೆ , ಕ್ರೀಡಾ ಸಂಚಾಲಕರಾಗಿ ಭರತ ಕೋಟೆಬೆಟ್ಟು ಮತ್ತು ರಮೇಶ ಮಣ್ಣಿಮನೆ, ನಂದೀಶ್ ಮಣ್ಣಿಮನೆ, ನಾಗೇಂದ್ರ ಕೋಟೆಬೆಟ್ಟು ಸಾಂಸ್ಕೃತಿಕ ಕಾರ್ಯದರ್ಶಿ ನಾಗೇಶ ಮೇಲ್ಮನೆ, ಸುಧಾಕರ ಹೊಳೆಬಾಗಿಲು, ಓಂಕಾರ ಡಿ ಉಪ್ಪುಂದ, ಭಾರ್ಗವ ಪುರಾಣಿಕ, ಸಂಘಟನಾ ಕಾರ್ಯದರ್ಶಿಯಾಗಿ ಕೇಶವ ಬಾಕಿಮನೆ, ಪ್ರಭಾಕರ ರಾಯರಡಿ, ಮಂಜುನಾಥ ರಥಬೀದಿ, ಮಂಜುನಾಥ ರಾಯರಡಿ, ವೆಂಕಟೇಶ ಕೋಟೆಬೆಟ್ಟು, ರಾಘವೇಂದ್ರ ಜೋಯಿಸರಹಿತ್ಲು ಅವರನ್ನು ಆಯ್ಕೆ ಮಾಡಲಾಯಿತು..
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನಲ್ಲಿ ನವೆಂಬರ್ 05 ಗುರುವಾರದಂದು ವ್ಯವಹಾರ ಮೇಳ ಜನತಾ ಆವಿಷ್ಕಾರ್ 2026 ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ ಸಂಗಮ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಸುಮಾರು 150ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು ವಿದ್ಯಾರ್ಥಿಗಳೇ ವ್ಯವಹಾರ ಮಾಡುವುದರ ಮೂಲಕ ಶೈಕ್ಷಣಿಕ ಸಂಚಲನ ಮೂಡಿಸಲಿದ್ದಾರೆ. ಅದ್ದೂರಿಯ ಉದ್ಘಾಟನಾ ಕಾರ್ಯಕ್ರಮ:ಪೂರ್ವಹ್ನ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿ.ವಿ.ವಿ. ಮಂಡಳಿ ರಿ. ಹೆಮ್ಮಾಡಿ ಇದರ ಅಧ್ಯಕ್ಷರಾದ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ವಹಿಸಲಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆದಾನಿ ಗ್ರೂಪ್, ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ ಅವರು ವ್ಯವಹಾರ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕರಾವಳಿ ಜಿಲ್ಲೆಗಳು ಕಲೆ, ಸಾಹಿತ್ಯ ಸಂಸ್ಕೃತಿ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಜಿಲ್ಲೆಯ ಅನೇಕ ಸಾಧಕರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹುಲಿ ಪರ್ವದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಸಮುದಾಯವನ್ನು ಸಂಘಟಿಸುವ ಪ್ರಯತ್ನ ಶ್ಲಾಘನೀಯ ಎಂದು ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್‌ಕರ್ ಹೇಳಿದರು. ಅವರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೆವಳದ ರಥಬೀದಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕು ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಯುವ ಮುಖಂಡ ಶೇಖರ ಪೂಜಾರಿ ಉಪ್ಪುಂದ ಇವರ ಸಾರಥ್ಯದಲ್ಲಿ ಶ್ರೀ ದುರ್ಗಾ ಟೈಗರ್ಸ್ ಉಪ್ಪುಂದ ಇವರ ಸಂಯೋಜನೆಯಲ್ಲಿ ಆಯೋಜಿಸಲಾದ ಮಂಗಳೂರು ಹಾಗೂ ಉಡುಪಿ ಭಾಗದ ಆಯ್ದ ಪ್ರತಿಷ್ಠಿತ ತಂಡಗಳ ಹುಲಿ ಪರ್ವ-2026 ಆಕರ್ಷಕ ಹುಲಿ ಕುಣಿತ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮ ಅತ್ಯಂತ ವೈಭವದಿಂದ ಸಂಘಟಿಸಲಾಗಿದೆ ಮತ್ತು ಜಿಲ್ಲೆಯ ಜನರ ಸಾಂಸ್ಕೃತಿಕ ಉತ್ಸಾಹದ ಪ್ರತೀಕವಾಗಿದೆ ಎಂದು ಶ್ಲಾಘಿಸಿದರು. ಹಿರಿಯರಾದ ಅರೆಹಾಡಿ ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದದಲ್ಲಿ ಹುಲಿ ಕುಣಿತ ನಡೆಸಿಕೊಂಡು ಬರುತ್ತಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ಈ ಕೆಳಕಂಡ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಳುಮೆಣಸು, ಗೇರು, ಜಾಯಿಕಾಯಿ, ಅನಾನಸು, ಅಂಗಾಂಶ ಬಾಳೆ ಹಾಗೂ ಕಂದು ಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬೂತನ್, ಡ್ರಾö್ಯಗನ್ ಫೂಟ್ ಹೊಸ ತೋಟಗಳ ಸ್ಥಾಪನೆಗೆ ಶೇ.40 ಸಹಾಯಧನ, ಸಣ್ಣ ಸಸ್ಯಾಗಾರಗಳ/ ನರ್ಸರಿಗಳ ಸ್ಥಾಪನೆಗೆ ಶೇ.50 ರ ದರದಲ್ಲಿ (ಗರಿಷ್ಠ ರೂ. 10 ಲಕ್ಷಗಳು) ಸಹಾಯಧನ, ಸಸ್ಯಾಗಾರಗಳ ಉನ್ನತೀಕರಣಕ್ಕಾಗಿ ಶೇ.50 ರಂತೆ ಪ್ರತಿ ಹೆಕ್ಟೇರಿಗೆ ರೂ. 2 ಲಕ್ಷಗಳಂತೆ 2 ಹೆಕ್ಟೇರಿಗೆ ರೂ.4 ಲಕ್ಷಗಳ ಸಹಾಯಧನ, ಅಂಗಾAಶ ಕೃಷಿ ಘಟಕ ಸ್ಥಾಪನೆಗೆ ಶೇ.40 ರಂತೆ (ಗರಿಷ್ಠ ರೂ. 100 ಲಕ್ಷಗಳು) ಸಹಾಯಧನ, ನೀರು ಸಂಗ್ರಹಣ ಘಟಕ (28*27*3 ಮೀ.ಅಳತೆ) ನಿರ್ಮಾಣಕ್ಕೆ ಗರಿಷ್ಠ 0.90 ಲಕ್ಷ ರೂಪಾಯಿಗಳ ಸಹಾಯಧನ, ಎರೆಹುಳ ಘಟಕ ನಿರ್ಮಾಣಕ್ಕೆ ಗರಿಷ್ಠ 0.50 ಲಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಲಾವಿದರು ಇನ್ನಷ್ಟು ಸಾಧನೆಯನ್ನು ಮಾಡುವುದಕ್ಕೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಪುರಸ್ಕಾರವನ್ನು ನೀಡಿ ಗೌರವಿಸುವುದು ಎಂದು ಸ್ವಪ್ನ ಶಿಲ್ಪಿ ಶಿಕ್ಷಣ ತಜ್ಞ ಡಾ. ಹೆಚ್.ಶಾಂತಾರಾಮ್ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ನಡೆದ “51ನೇ ರಾಜ್ಯೋತ್ಸವ ತಾಳಮದ್ದಳೆ ಮತ್ತು ಡಾ. ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ” ಕಾರ್ಯಕ್ರಮದಲ್ಲಿ ಈ ವರ್ಷದ ಡಾ.ಹೆಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ-2026 ನ್ನು ಮಹಾಬಲೇಶ್ವರ ಭಟ್ಟ ಕ್ಯಾದಗಿ ಅವರಿಗೆ ಪುರಸ್ಕರಿಸಿ ಮಾತನಾಡಿದರು. ಪ್ರಶಸ್ತಿ ಪುರಸ್ಕಾರಗಳು ಕಲಾವಿದನಲ್ಲಿ ಕಲೆಯನ್ನು ಉಳಿಸಿ ಬೆಳೆಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ಹಂಚುವ ಗುರುತರ ಜವಾಬ್ದಾರಿಯನ್ನು ಕೊಡುತ್ತದೆ. ಅಂತೆಯೇ ಶ್ರೇಷ್ಠ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಯಕ್ಷಗಾನ ಪುರಸ್ಕಾರವನ್ನು ಆರಂಭಿಸಿದ್ದೇವೆ. ಉದಯೋನ್ಮುಖ ಕಲಾವಿದರನ್ನು ಗುರುತಿಸಿ ಅವರ ಸಾಧನೆಯನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಮೂಲಕ ಈ ಕಲೆಯನ್ನು ಬೆಳೆಸುವುದಾಗಿದೆ. ಈ ಯಕ್ಷಗಾನ ಪುರಸ್ಕಾರವನ್ನು ಪಡೆದ ಕಲಾವಿದರಿಗೂ ಸಹ ಯಕ್ಷಗಾನ ಕಲೆಯನ್ನು ಉಳಿಸುವ ಜವಾಬ್ದಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಉಡುಪಿ ಜಿಲ್ಲಾ ಪಂಚಾಯತ್ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ನೀಡಲ್ಪಡುವ ಅತ್ಯುನ್ನತ ಪ್ರಶಸ್ತಿಯಾದ “ನಾನಾಜಿ ದೇಶಮುಖ್ ಸರ್ವೋತ್ತಮ ಪಂಚಾಯತ್ ಸತತ ವಿಕಾಸ ಪುರಸ್ಕಾರ” 2026ಕ್ಕೆ ನಾಮ ನಿರ್ದೇಶನಗೊಂಡ ಹಿನ್ನಲೆಯಲ್ಲಿ ಆಯ್ದ ಗ್ರಾಮ ಪಂಚಾಯತ್ ಪರಿಶೀಲನೆ ಪ್ರಯುಕ್ತ ಭಾರತ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಸಹಾಯಕ ವಿಭಾಗೀಯ ಅಧಿಕಾರಿ ಆಶಾದೇವಿ ಹಾಗೂ ಹಿರಿಯ ಸಮಲೋಚಕಿ ವಿದ್ಯುಲತಾ ಅವರು ಕೋಡಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ದಾಖಲೆ ಹಾಗೂ ಸ್ಥಳ ಪರಿಶೀಲನೆ ನಡೆಸಿದರು. 24/7 ಕುಡಿಯುವ ನೀರಿನ ವ್ಯವಸ್ಥೆ, ಎಸ್.ಎಲ್.ಆರ್. ಎಮ್, ಕಛೇರಿ ದಾಖಲೆ ಇತ್ಯಾದಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು 2023-24ನೇ ಸಾಲಿನ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಾಗೂ ಸಿಬ್ಬಂದಿ ವರ್ಗ, ಸ್ಥಳೀಯ ಶಾಲಾ ಶಿಕ್ಷಕ ವರ್ಗ, ಸಂಜೀವಿನಿ ಸಂಘದ ಪದಾಧಿಕಾರಿಗಳು, ಹಾಗೂ ಸಿಬ್ಬಂಧಿ ವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯವರು, ಸ್ಥಳಿಯ ಆರೋಗ್ಯ ಇಲಾಖೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ವಿಟ್ಲ ಹಾಗೂ ಜೆಸಿಐ ತುಂಬೆ ಎಲೈಟ್ ಘಟಕಗಳ ಆಶ್ರಯದಲ್ಲಿ ನಡೆದ ವಲಯ ಸಮ್ಮೇಳನ ‘ಆರ್ಯ-2026’ ರಲ್ಲಿ ಜೆಸಿಐ ಶಿರೂರು ಘಟಕವು ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ವಿಶೇಷ ಮನ್ನಣೆಗಳಿಗೆ ಭಾಜನವಾಗಿದೆ. 2026ನೇ ಸಾಲಿನಲ್ಲಿ ಘಟಕವು ಹಮ್ಮಿಕೊಂಡ ವಿವಿಧ ಸಮಾಜಮುಖಿ ಹಾಗೂ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ, ಝೋನ್ ಪ್ರೆಸಿಡೆಂಟ್ ಎಕ್ಸಲೆನ್ಸಿ ಅವಾರ್ಡ್, ರಕ್ತದಾನ ವಿಭಾಗದ ಮನ್ನಣೆ, ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಮನ್ನಣೆ ಹಾಗೂ ಗೋ ಗ್ರೀನ್ ವಿಭಾಗದ ಮನ್ನಣೆ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಗಳನ್ನು ನೀಡಿ ಸನ್ಮಾನಿಸಲಾಯಿತು. ವಲಯಾಧ್ಯಕ್ಷ ಜೆಸಿ ಸಂತೋಷ ಶೆಟ್ಟಿ ಹಾಗೂ ವಲಯ ಉಪಾಧ್ಯಕ್ಷ ಜೆಸಿ ಪ್ರದೀಪ್ ಶೆಟ್ಟಿ ಅವರು ಜೆಸಿಐ ಶಿರೂರು ಅಧ್ಯಕ್ಷ ಜೆಸಿ ವಿನೋದ್ ಮೇಸ್ತ ಅವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜೆಸಿಐ ಶಿರೂರು ಘಟಕದ ಪೂರ್ವಾಧ್ಯಕ್ಷರಾದ ಜೆಸಿ ಪ್ರಸಾದ್ ಪ್ರಭು, ಜೆಸಿ ಅರುಣ್ ಕುಮಾರ್ ಹಾಗೂ ಜೆಸಿ ಹರೀಶ್ ಶೇಟ್ ಉಪಸ್ಥಿತರಿದ್ದರು. ಘಟಕದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕೆಟ್ಟೆ ವಿಶ್ವ ವಿನಾಯಕ ವಿದ್ಯಾಸಂಸ್ಥೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಶಾಲೆಯಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅಭೀಮುಖೀಕರಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕರು ಪ್ರಭಾಕರ ಶೆಟ್ಟಿ, ಸಂಸ್ಥೆಯ ಸಿ.ಇ.ಒ ವಿವಿರಾಜ್ ಹೆಗ್ಡೆ, ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ದಾಮೋದರ ಶರ್ಮ ಬಾರಕೂರು ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಸ್ತು, ಜೀವನದ ಮೌಲ್ಯಗಳು, ಸಮಯ ಪಾಲನೆ ಹಾಗೂ ಉತ್ತಮ ನಡವಳಿಕೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಳ ಮಹತ್ವದ್ದಾಗಿದೆ. ಮಕ್ಕಳ ಆಸಕ್ತಿ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಕೇವಲ ಅಂಗಳಿಕೆಯೇ ಶಿಕ್ಷಣದ ಗುರಿಯಾಗದೆ, ಮಕ್ಕಳಲ್ಲಿ ಆತ್ಮವಿಶ್ವಾಸ, ಜವಬ್ದಾರಿ, ಸಂಸ್ಕಾರ ಮತ್ತು ಮಾನವೀಯ ಗುಣಗಳನ್ನು ಬೆಳೆಸುವುದು ಅಗತ್ಯ ಎಂದು ಹೇಳಿದರು. ಪೋಷಕರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನಗಳನ್ನು ಆಹ್ವಾನಿಸಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳು ಈ ಕೆಳಕಂಡಂತೆ ದತ್ತಿನಿಧಿ, ಪ್ರಶಸ್ತಿಗಳನ್ನು ಸ್ಥಾಪಿಸಿವೆ. ಬೆಂಗಳೂರಿನ ‘ಅಭಿಮಾನಿ ಪ್ರಕಾಶನ’ ಸಂಸ್ಥೆಯು ರಾಜ್ಯ ಮತ್ತು ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ‘ಸಾಮಾಜಿಕ ಸಮಸ್ಯೆ’ ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಅಭಿಮಾನಿ ಪ್ರಶಸ್ತಿ”, ಮೈಸೂರಿನ “ಮೈಸೂರು ದಿಗಂತ ಪತ್ರಿಕಾ ಸಂಸ್ಥೆಯು ‘ಮಾನವೀಯ ಸಮಸ್ಯೆ’ ಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ-ವರದಿಗಳಿಗೆ “ಮೈಸೂರು ದಿಗಂತ ಪ್ರಶಸ್ತಿ, ಬೆಂಗಳೂರಿನ ಅಭಿಮನ್ಯು ಪತ್ರಿಕೆ ಸಂಸ್ಥೆಯು ದಮನಿತ ಸಮುದಾಯಗಳ ಪರ ದನಿಯಾದ ಅತ್ಯುತ್ತಮ ಲೇಖನ/ಅಂಕಣ/ಸಂಪಾದಕೀಯ/ಪರಿಣಾಮಕಾರಿ ವರದಿಗೆ “ಅಭಿಮನ್ಯು ಪ್ರಶಸ್ತಿ”, ಬೆಂಗಳೂರಿನ ಪ್ರಜಾ ಸಂದೇಶ ಪತ್ರಿಕಾ ಸಂಸ್ಥೆಯು ಶೋಷಣೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಕ್ಕೆ “ಪ್ರಜಾ ಸಂದೇಶ ದತ್ತಿ ಪ್ರಶಸ್ತಿ”, ಹಾಗೂ ಹಿರಿಯ ಪತ್ರಕರ್ತರ ಹೆಸರಿನ ಸ್ಥಾಪಿಸಲಾದ ಕೃಷಿವಲಯದಲ್ಲಿ ಅತ್ಯುತ್ತಮ ವರದಿ/ಅಂಕಣ/ಲೇಖನ “ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿ” ಗಳನ್ನು ಸ್ಥಾಪಿಸಿವೆ. ಈ ದತ್ತಿ…
