Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಗ್ಲೋಬಲ್ ಯೋಗ ಹಾಗೂ ರೋಟರಿ  ಬೆಂಗಳೂರು ವತಿಯಿಂದ ಬೆಂಗಳೂರಿನ ಜೆ.ಸಿ. ರಸ್ತೆಯ  ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಆಯೋಜಿಸಲಾದ ‘ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ 2026’ ಕಾರ್ಯಕ್ರಮದಲ್ಲಿ ಯೋಗ ಸಾಧಕರಾದ  ಮಂಜುನಾಥ ದೇವಾಡಿಗ ಇವರ ಅನುಪಮವಾದ ಯೌಗಿಕ ಸೇವೆಯನ್ನು ಗುರುತಿಸಿ  ‘ರಾಷ್ಟ್ರೀಯ ಯೋಗ ಸಾಧಕ ಪ್ರಶಸ್ತಿ’ ಯೋಗಶ್ರೀ 2026ನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಭಾರತದ ಸಮರ್ಪಿತ ಯೋಗ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಸಲುವಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಶಸ್ತಿ ಪಡೆದ ಯೋಗ ಸಾಧಕರಿಗೆ ವಿವಿಧ ಗಣ್ಯರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ದೇವಾಡಿಗ ಅವರು ಡಿಪ್ಲೋಮಾ ಇನ್ ಯೋಗ ಎಜುಕೇಶನ್ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿದ್ದು,ಯೋಗಾಸನ ಸ್ಪರ್ಧೆಯ ರಾಜ್ಯ ತೀರ್ಪುಗಾರರಾಗಿಯೂ ಆಯ್ಕೆಯಾಗಿದ್ದಾರೆ. ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಇದರ ರಾಜ್ಯ ಮಟ್ಟದ ಯೋಗ ಸಂಪನ್ಮೂಲ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸಂಗಮ್‌ ರಸ್ತೆಯಲ್ಲಿ ಎರಡು ಬೈಕ್‌ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉದ್ಯಮಿ, ಕುಂದಾಪುರ ಎಸ್.ವಿ ಎಂಟರ್‌ಪ್ರೈಸಸ್‌ನ ಕೆ. ಗಣೇಶ್‌ ಪ್ರಭು ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗಣೇಶ್ ಪ್ರಭು ಅವರು ಸಂಗಮ್ ಕಡೆಯಿಂದ ತಮ್ಮ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕುಂದಾಪುರ ಪೊಸ್ಟ್‌ ಆಫೀಸ್‌ ಕಡೆಯಿಂದ ಸಂಗಮ್ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ಅಕ್ಷಿತ್, ಎದುರಿಗೆ ಬರುತ್ತಿದ್ದ ಗಣೇಶ್ ಅವರ ಬೈಕ್‌ಗೆ ಮುಖಾಮುಖಿಯಾಗಿ ಡಿಕ್ಕಿಹೊಡೆದಿದ್ದಾರೆ. ಪರಿಣಾಮ ಗಣೇಶ್ ತೀವ್ರ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅವರು ಕುಟುಂಬಿಕರು, ಬಂಧುಗಳು ಹಾಗೂ ಅಪಾರ ಸ್ನೇಹಿತವರ್ಗವನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವತಿಯಿಂದ ದ್ವಿತೀಯ ವರ್ಷದ ಎಂಬಿಎ ವಿದ್ಯಾರ್ಥಿಗಳಿಗೆ “ಪದವಿಯನ್ನು ಮೀರಿ: ಭವಿಷ್ಯದ ನಾಯಕರಿಂದ ಕಾರ್ಪೊರೇಟ್ ಜಗತ್ತು ನಿರೀಕ್ಷಿಸುವ ಗುಣಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಯಾದ ದಯಾನಂದ ಶೆಟ್ಟಿ, ಡೈರೆಕ್ಟರ್ ಅಂಡ್ ಸೀನಿಯರ್ ಕಂಸಲ್ಟೆಂಟ್, ಪ್ರೊಜಿನಿ ಟೆಕ್, ಬೆಂಗಳೂರು ಅವರು ಉಪನ್ಯಾಸವನ್ನು ಪ್ರಾರಂಭಿಸಿ, ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಭವಿಷ್ಯದ ನಾಯಕರು ಹೊಂದಿರಬೇಕಾದ ಕೌಶಲ್ಯಗಳು, ನಾಯಕತ್ವದ ಗುಣಗಳು, ಸಂವಹನ ಕೌಶಲ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಸಾಮರ್ಥ್ಯ ಹಾಗೂ ಪದವಿಯ ಜೊತೆಗೆ ಪ್ರಾಯೋಗಿಕ ಜ್ಞಾನ ಮತ್ತು ವೈಯಕ್ತಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮಹತ್ವದ ಕುರಿತು ಮಾಹಿತಿ ನೀಡಿದರು.ಉಪನ್ಯಾಸದ ಮಧ್ಯೆ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಪ್ರಶ್ನೆಗಳನ್ನು ಕೇಳುವ ಮೂಲಕ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ದಯಾನಂದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಕ್ಕಳ ಸೃಜನಶೀಲತೆ, ಪ್ರತಿಭೆ ಮತ್ತು ಉತ್ಸಾಹವನ್ನು ಸಂಭ್ರಮಿಸಲು ನ.1ರ ರವಿವಾರದಂದು ವಕ್ವಾಡಿಯ ಗುರುಕುಲ ವಿದ್ಯಾ ಸಂಸ್ಥೆಯಲ್ಲಿ ಅದ್ದೂರಿಯಾದ ಗುರುಕುಲ ಕಾರ್ನಿವಲ್-ಮಕ್ಕಳ ಹಬ್ಬವನ್ನು ಆಯೋಜಿಸಲಾಗಿದೆ. ಪ್ರತಿಯೊಂದು ಮಕ್ಕಳಲ್ಲಿಯೂ ಆತ್ಮವಿಶ್ವಾಸವನ್ನು ತುಂಬಿ ಕಲಿಕೆ ಹಾಗೂ ಇನ್ನಿತರ ಸಮಾಜಮುಖಿ ಚಿಂತನೆಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸ್ಪರ್ಧಾತ್ಮಕ ಜಗತ್ತನ್ನು ಎದುರುಯಿಸುವುದಕ್ಕೆ ಬೇಕಾದ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಈ ಗುರುಕುಲ ಕಾರ್ನಿವಲ್ 2.0ನ ಉದ್ದೇಶವಾಗಿದೆ. ಸ್ವಾವಲಂಬಿಯಾಗಿ ಬದುಕನ್ನು ಕಟ್ಟಿ ಕೊಳ್ಳುವುದಕ್ಕೆ ಬೇಕಾದ ಹೊಸ ಹೊಸ ರೀತಿಯ ಹಾದಿಗಳನ್ನು ಪರಿಚಯಿಸಿ ಸಮಾಜಕ್ಕೂ ಮತ್ತು ಪೋಷಕರಿಗೂ ಹೆಮ್ಮೆ ತರುವ ಮಕ್ಕಳಾಗಿ ರೂಪುಗೊಳ್ಳಬೇಕೆಂಬ ಸದಾಶಿವನು ಹೊಂದಿದ ಈ ಮಕ್ಕಳ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಲಾಗಿದೆ.  ಈ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮವು 9.30ಕ್ಕೆ ಸರಿಯಾಗಿ ಉದ್ಘಾಟನೆಗೊಳ್ಳಲ್ಲಿದ್ದು, ಕನ್ನಡ ಚಿತ್ರರಂಗದ  ಮೇರು ಪ್ರತಿಭೆ, ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಅವರು ವಿಶೇಷ ಅತಿಥಿಯಾಗಿ ಆಗಮಿಸಿ ಕಾರ್ಯವನ್ನು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಲಿದ್ದಾರೆ. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಯೋಗ ಸಂಘಟಕ ಮಂಜುನಾಥ್ ಎಸ್. ಬಿಜೂರು ಅವರಿಗೆ ರಾಷ್ಟ್ರ ಮಟ್ಟದ ಲೈಫ್ ಟೈಮ್ ಅಚಿವ್‌ಮೆಂಟ್‌ ಇನ್ ಯೋಗ ಅವಾರ್ಡ್ ಗೌರವ ಲಭಿಸಿದೆ. ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ಬೆಂಗಳೂರಿನ ಜೆಸಿ ರಸ್ತೆಯ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೈಫ್ ಟೈಮ್ ಅಚೀವ್ಮೆಂಟ್ ಇನ್ ಯೋಗ ಅವಾರ್ಡ್ ಪಡೆದಿರುವ ಮಂಜುನಾಥ್ ಎಸ್. ಬಿಜೂರು ಅವರು ಬೈಂದೂರಿನ ಯೋಗ ಸಂಘಟಕರಾಗಿ ಕಳೆದ 25 ವರ್ಷಗಳಿಂದ ಯೋಗದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಜಿಲ್ಲೆ ರಾಜ್ಯ ರಾಷ್ಟ್ರಮಟ್ಟದವರೆಗೆ ಸ್ಪರ್ಧಿಸುವಲ್ಲಿ ತರಬೇತಿ ನೀಡಿ ಹಾಗೂ ಸಾರ್ವಜನಿಕರಿಗೆ ಹಲವಾರು ಉಚಿತ ಯೋಗ ತರಗತಿ ಆಯೋಜಿಸಿದ್ದಾರೆ. ಅವರು ಯೋಗ ಶಿಕ್ಷಕ ಹಾಗೂ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಇದನ್ನೂ ಓದಿ ► ರೋಟರಿ ಬೆಂಗಳೂರು ಗ್ಲೋಬಲ್ ಯೋಗ: ಭಾರತಿ ಬಿಜೂರು ಅವರಿಗೆ ರಾಷ್ಟ್ರೀಯ ಯೋಗ ಜ್ಯೋತಿ ಪ್ರಶಸ್ತಿ ಪ್ರದಾನ – https://kundapraa.com/?p=103653…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ರಶ್ಮಿ ಶೆಟ್ಟಿ, ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಪದವಿ ಪ್ರದಾನ ಮಾಡಿದರು. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಶ್ಮಿ ಶೆಟ್ಟಿ ಅವರು ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013ರ ಅನುಷ್ಠಾನ: ಕರ್ನಾಟಕದ ಗ್ರಾಮೀಣ ರಾಮನಗರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಸಮುದಾಯಗಳ ಅನುಭವಗಳ ಅಧ್ಯಯನ’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಆಹಾರ ಭದ್ರತೆಗೆ ಸಂಬಂಧಿಸಿದ ಕಾನೂನಿನ ಅನುಷ್ಠಾನವು ಗ್ರಾಮೀಣ ಪ್ರದೇಶಗಳ ಪರಿಶಿಷ್ಟ ಜಾತಿ ಮತ್ತು ಮುಸ್ಲಿಂ ಸಮುದಾಯಗಳ ಮೇಲೆ ಬೀರುವ ಪರಿಣಾಮಗಳು, ಕಾಯ್ದೆಯ ಅನುಷ್ಠಾನದ ಅನುಭವಗಳು ಹಾಗೂ ಅದರ ಸಾಮಾಜಿಕ ಆಯಾಮಗಳನ್ನು ಅಧ್ಯಯನ ಮಾಡಿರುವುದು ಈ ಸಂಶೋಧನೆಯ ಪ್ರಮುಖ ಅಂಶವಾಗಿದೆ. ಭಾರತೀಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಸರಸು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ “ಹೆಚ್.ಐ.ವಿ.ಏಡ್ಸ್ ಜಾಗೃತಿ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ನಳಿನಾಕ್ಷಿ ಹೆಚ್.ಐ.ವಿ. ಏಡ್ಸ್ ಕುರಿತು ವಿದ್ಯಾರ್ಥಿಗಳಲ್ಲಿ ವಿಶೇಷ ಜಾಗೃತಿ ಮೂಡಿಸಿದರು. ನಂತರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜ ಎಮ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡೊಮಿನಿಕ್ ಬ್ರಿಗಾಂಝ್, ಸ್ಮಿತಾ, ವಿದ್ಯಾಧರ, ಡಾ. ಸುಮಲತಾ, ಚೈತ್ರ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಗೀತಾ ಪ್ರಭು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು ವಂಡ್ಸೆ (ನೆಂಪು)ಯಲ್ಲಿ ನೆಡದ 2026-27 ನೇ ಸಾಲಿನ ಬೈಂದೂರು ಶೈಕ್ಷಣಿಕ ತಾಲೂಕಿನ 17 ವಯೋಮಾನದ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದಲ್ಲಿ 12 ವಿಧ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಬಾಲಕರ ವಿಭಾಗದಲ್ಲಿ ತಂಡ ಪ್ರಶಸ್ತಿ ಪಡೆಯುವುದರ ಜೊತೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತ್ತು. 17 ರ ವಯೋಮಾನದ ಬಾಲಕರ ವಿಭಾಗ ವಿಜೇತರು:1.ಪ್ರಣಮ್- 1500 ಮೀಟರ್ ಓಟ ಪ್ರಥಮ,800 ಮೀಟರ್ ಪ್ರಥಮ,4*100 ಮೀಟರ್ ರಿಲೇ ಪ್ರಥಮ.2.ನಿತೇಶ್ ಮೊಗವೀರ- 4*400 ಮೀಟರ್ ರಿಲೇ ಪ್ರಥಮ,4*100 ಮೀಟರ್ ರಿಲೇ ಪ್ರಥಮ.3.ನಿತೇಶ್ ಜೆ – 4*100 ಮೀಟರ್ ರಿಲೇ ಪ್ರಥಮ,ತ್ರಿವಿಧ ಜಿಗಿತ ದ್ವಿತೀಯ.4.ಪ್ರೀತಂ-4*400 ಮೀಟರ್ ರಿಲೇ ಪ್ರಥಮ,4*100 ಮೀಟರ್ ರಿಲೇ ಪ್ರಥಮ,ಉದ್ದಜಿಗಿತ ದ್ವಿತೀಯ.5.ರತ್ವೀಶ್ ಆಚಾರ್ಯ- 4*400 ಮೀಟರ್ ರಿಲೇ ಪ್ರಥಮ.6.ಚೇತನ್- ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ತ್ರತೀಯ 17 ರ ವಯೋಮಾನದ ಬಾಲಕಿಯರ ವಿಭಾಗ ವಿಜೇತರು:1.ಶ್ರಾವ್ಯ- 100 ಮೀಟರ್ ಹರ್ಡಲ್ಸ್ ಪ್ರಥಮ,4*100 ಮೀಟರ್ ರಿಲೇ ಪ್ರಥಮ.2.ನಿಧಿಶ್ರೀ-…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಡಾ. ಬಿ.ಬಿ. ಹೆಗ್ದೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2ರ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಸಂಸ್ಥೆಗಳ ಆವರಣದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಕೆಸರಲ್ಲೊಂದಿನ ಕಾರ್ಯಕ್ರಮವನ್ನು ತಂತ್ರಾಡಿಯ ಶ್ರೀ ಚಿಕ್ಕು ಅಮ್ಮ ದೇವಸ್ಥಾನದ ಎದುರುಗಡೆ ಇರುವ ಕೆಸರುಗದ್ದೆಯಲ್ಲಿ ನಡೆಸಲಾಯಿತು. ಎನ್. ಎಸ್. ಎಸ್ ಸ್ವಯಂ ಸೇವಕರು ವಿಶಾಲಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡುವ ಮೂಲಕ ಗ್ರಾಮಸ್ಥರ ಮನಗೆದ್ದರು. ಮಂದಾರ್ತಿ ದೇವಾ ಸಹಕಾರಿ ಸಂಘ, ಮಂದಾರ್ತಿ ಇದರ ನಿರ್ದೇಶಕರಾದ ಪ್ರವೀಣ್ ಶೆಟ್ಟಿ ಚಾವಡಿಮನೆ ಉದ್ಘಾಟಿಸಿದರು. ಶ್ರೀ ದುರ್ಗಾಪರಮೇಶ್ವರಿ ದೇವಳದ ಪದವಿಪೂರ್ವ ಕಾಲೇಜು ಮಂದಾರ್ತಿ ಇದರ ಪ್ರಾಕ್ತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಾಗೂ ಯುವ ಯಕ್ಷಗಾನ ಪ್ರಸಂಗಕರ್ತ ನಂದೀಶ್ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾl ಕೆ. ಉಮೇಶ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಪದವಿ ಪೂರ್ವ ಕಾಲೇಜು ಮಂದಾರ್ತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಯೋಗ ತರಬೇತುದಾರರಾದ ಭಾರತಿ ಎಂ. ಬಿಜೂರು ಅವರಿಗೆ ರೋಟರಿ ಬೆಂಗಳೂರು ಗ್ಲೋಬಲ್ ಯೋಗ ವತಿಯಿಂದ ರಾಷ್ಟ್ರಮಟ್ಟದ ಯೋಗ ಜ್ಯೋತಿ ಅವಾರ್ಡ್ 2026 ಲಭಿಸಿದೆ. ಶಿಕ್ಷಕಿ ಭಾರತಿ ಎಂ. ಬಿಜೂರು ಅವರಿಗೆ ಬೆಂಗಳೂರಿನ ಪುಟ್ಟಣ್ಣ ಶೆಟ್ಟಿ ಟೌನ್ ಹಾಲ್‌ನಲ್ಲಿ ಆಯೋಜಿಸಿದ ರಾಷ್ಟ್ರೀಯ ಯೋಗ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ 2026 ಇದರಲ್ಲಿ ಇವರು ಶಾಲೆಯ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ನೀಡಿದ ಯೋಗ ಸಾಧನೆಯನ್ನು ಗುರುತಿಸಿ ಯೋಗ ಜ್ಯೋತಿ ಅವಾರ್ಡ್ ನೀಡಿ ಗೌರವಿಸಲಾಯಿತು. ಇದನ್ನೂ ಓದಿ – ಯೋಗ ಸಂಘಟಕ ಮಂಜುನಾಥ್ ಬಿಜೂರು ಅವರಿಗೆ ಲೈಫ್ ಟೈಮ್ ಅಚಿವ್‌ಮೆಂಟ್‌ ಇನ್ ಯೋಗ ಅವಾರ್ಡ್- https://kundapraa.com/?p=103674 .

Read More