ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿಂದೂ ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಂಘಟನಾತ್ಮಕ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದ ಪ್ರದೀಪ್ ಸಂಗಮ್ (44) ಅವರು ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ. ಕಳೆದ ಒಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ. ಸಂಘಟನೆಯ ವಿವಿಧ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಅವರು, ಹಗಲು-ರಾತ್ರಿ ಎನ್ನದೆ ಸಂಘಟನೆಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮೃತರು ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಪ್ರದೀಪ್ ಸಂಗಮ್ ಅವರ ನಿಧನದಿಂದ ಕುಂದಾಪುರ ಭಾಗದ ಹಿಂದೂ ಸಂಘಟನೆಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರ ಸಂಘಟನಾತ್ಮಕ ಬದ್ಧತೆ, ಕಾರ್ಯತತ್ಪರತೆ ಹಾಗೂ ಸಮಾಜಮುಖಿ ಸೇವೆಯನ್ನು ಸಹಪಾಠಿಗಳು ಮತ್ತು ಸಂಘಟನೆಯ ಕಾರ್ಯಕರ್ತರು ಸ್ಮರಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಯೊಬ್ಬರಿಗೂ ಜೀವನದಲ್ಲಿ ಹಲವಾರು ಅವಕಾಶಗಳು ಸಿಗುತ್ತದೆ, ಸಿಕ್ಕಿದ ಅವಕಾಶ ಸದುಪಯೋಗ ಮಾಡಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ. ನನ್ನ ಜೀವನದಲ್ಲಿ ನಾನು ಹಂತ ಹಂತವಾಗಿ ಮೇಲೆ ಬಂದವನು ಇಂದು ನನಗೆ ಕಲೆ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದೆ ಎಂದು ಕನ್ನಡ ಚಿತ್ರರಂಗದ ಹಾಸ್ಯನಟ ಟೆನ್ನಿಸ್ ಕೃಷ್ಣ ಅಭಿಪ್ರಾಯಿಸಿದರು. ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜನತಾ ಶನಯ ವಾರ್ಷಿಕ ಸಂಭ್ರಮದ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು ಚಿತ್ರ ರಂಗದ ಏಳು ಬೀಳು, ಆಧುನಿಕ ಚಿತ್ರರಂಗದ ಅವಕಾಶ ಲಭ್ಯತೆಗಳ ಕುರಿತು ಮಾತನಾಡಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಮಾತನಾಡಿ, ಇಂದು ಜನತಾ ಹಲವು ಸಾಧನೆಗಳ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದೆ, ವಿದ್ಯಾರ್ಥಿಗಳು ಇಲ್ಲಿ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಬೀನಾ ವೈದ್ಯ ಎಜುಕೇಷನಲ್ ಟ್ರಸ್ಟ್ ಮುರ್ಡೇಶ್ವರದ ವ್ಯವಸ್ಥಾಪನ ನಿರ್ದೇಶಕರಾದ ಡಾ. ಪುಷ್ಪಲತಾ ಎಂ ವೈದ್ಯ ಮಾತನಾಡಿ ಶಿಸ್ತು, ಸಂಯಮದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆ ಕಾಲೇಜಿನ ಆವರಣದಲ್ಲಿ ನಡೆಯಿತು. ಎಂ. ಎಸ್. ಆರ್. ಎಸ್ ಕಾಲೇಜು ಶಿರ್ವ ಇಲ್ಲಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ರಘುರಾಮ್ ಶೆಟ್ಟಿ ಊರ್ ಬೈಲು ಮಾತನಾಡಿ, ದೀಪಾವಳಿ ಭಾರತೀಯ ಕೃಷಿ ಪದ್ಧತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹಬ್ಬ. ಈ ಹಬ್ಬ ಕೇವಲ ಬೆಳಕಿನ ಉತ್ಸವ ಮಾತ್ರವಲ್ಲದೆ, ರೈತರ ಪರಿಶ್ರಮ ಮತ್ತು ಭೂಮಿ ತಾಯಿಯ ಸಮೃದ್ಧಿಯ ಸಂಕೇತವಾಗಿದೆ. ನೆಲಪರವಾದ ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಪಟಾಕಿಯನ್ನು ಸಿಡಿಸದೆ ಆಚರಿಸಬೇಕು ಎಂದರು. ಇದೇ ಸಂದರ್ಭ ನಾಥ ಪಂಥದ ಮಹತ್ವ ಹಾಗೂ ಭಸ್ಮಧಾರಣೆಯ ಆಧ್ಯಾತ್ಮಿಕ ವೈಶಿಷ್ಟವನ್ನು ವಿಶ್ಲೇಷಿಸಿದರು. ಐತಿಹಾಸಿಕವಾಗಿ ಸಾಮ್ರಾಟ್ ಅಶೋಕನ ಶಾಸನಗಳಲ್ಲಿಯೂ ದೀಪಾವಳಿಯ ಉಲ್ಲೇಖ ಇರುವುದನ್ನು ವಿವರಿಸಿದರು. ಕರಾವಳಿ ಭಾಗದ ಜಾನಪದ ಸೊಗಡಿನ ಬಲಿಂದ್ರನ ಆಗಮನದ ಸೊಲ್ಲನ್ನು ಪ್ರಸ್ತುತಪಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆಯ ಆವರಣದಲ್ಲಿ ಪುಂಗನೂರು ತಳಿಯ ಅಪರೂಪದ ಗಿಡ್ಡ ಹಸುಗಳ ಸಂರಕ್ಷಣೆಗಾಗಿ ನಿರ್ಮಿಸಲಾದ ‘ಗುರುಕುಲ ಗೋಕುಲಂ ಸದ್ಮನ’ ನೂತನ ಗೋಶಾಲೆಯ ಉದ್ಘಾಟನಾ ಸಮಾರಂಭವು ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ತಳಿಯ ವಿಶೇಷ ಹಸುಗಳ ಪಾಲನೆ ಮತ್ತು ಸಂರಕ್ಷಣೆಯ ಉದ್ದೇಶದಿಂದ ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ಸುಂದರವಾದ ಗೋಶಾಲೆಯನ್ನು ನಿರ್ಮಿಸಲಾಗಿದೆ. ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ ಗೋ ಪೂಜೆಯ ದಿನದಂದು ಹಟ್ಟಿಯಂಗಡಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಾಲಚಂದ್ರ ಭಟ್ ಅವರು ದಂಪತಿ ಸಮೇತರಾಗಿ ಆಗಮಿಸಿ ಗೋಶಾಲೆಯನ್ನು ಉದ್ಘಾಟಿಸಿದರು. ಬಳಿಕ ಪುಂಗನೂರು ತಳಿಯ ಹಸುಗಳಿಗೆ ಪಾದಪೂಜೆ ನೆರವೇರಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರ ಭಟ್ ಅವರು, ‘ಗಾವೋ ವಿಶ್ವಸ್ಯ ಮಾತರಃ’ಎಂಬ ಉಕ್ತಿಯಂತೆ ಗೋಮಾತೆಯನ್ನು ಇಡೀ ವಿಶ್ವದ ತಾಯಿಯಾಗಿ ಗೌರವಿಸಿ ಪೂಜಿಸುವ ಪರಂಪರೆ ನಮ್ಮದಾಗಿದೆ. ಮುಕ್ಕೋಟಿ ದೇವತೆಗಳ ಆವಾಸಸ್ಥಾನವೆಂದು ಪರಿಗಣಿಸಲ್ಪಡುವ ಗೋಮಾತೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲಿಗೆ ನವೆಂಬರ್ 13ರ ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಂಗಳೂರು ಜಂಕ್ಷನ್‌ನಲ್ಲಿ ಕರಾವಳಿಯಿಂದ ಬೆಂಗಳೂರು ಕಡೆ ಸಾಗುವ ವಂದೇ ಭಾರತ್ ರೈಲಿನ ಸಾಂಕೇತಿಕ ಉದ್ಘಾಟನೆಯೂ ಅದೇ ವೇಳೆ ನಡೆಯಲಿದ್ದು, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳೂರು, ಉಡುಪಿ, ಉತ್ತರಕನ್ನಡ ಸಂಸದರ ಜತೆ ಮಡಗಾಂವ್-ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ನವೆಂಬರ್ 13ರ ಉದ್ಘಾಟನೆಯ ಬಳಿಕ ನಿಯಮಿತ ಸೇವೆಗಳು ನವೆಂಬರ್ 15ರಿಂದ ಎರಡೂ ಕಡೆಯಿಂದ ಆರಂಭವಾಗಲಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಂದೇ ಭಾರತ್ ಕರಾವಳಿ ಬೆಸೆಯಲು ಸಹಕಾರ ನೀಡಿದ ಮಂಗಳೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕತಾರ್: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಂಯೋಜಿತ ಸಂಸ್ಥೆಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ), ತನ್ನ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ “ಕರುನಾಡ ವೈಭವ-2026” ಸಾಂಸ್ಕೃತಿಕ ಮಹೋತ್ಸವವನ್ನು ಆಲ್ ವಕ್ರಾ ಸಮೀಪದ ಡಿಪಿಎಸ್-ಎಂಐಎಸ್ (DPS-MIS) ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. ಕಾರ್ಯಕ್ರಮವು ಮುಖ್ಯ ಅತಿಥಿಗಳು ಮತ್ತು ಗಣ್ಯರಿಂದ ದೀಪ ಬೆಳಗಿಸುವುದರೊಂದಿಗೆ ಆರಂಭವಾಯಿತು. ಭಾರತ ಸರ್ಕಾರದ ಕತಾರ್ ರಾಯಭಾರಿ ಘನತೆವೆತ್ತ ಡಾ. ಕೆ. ಶ್ರೀಕರ್ ರೆಡ್ಡಿ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಅಶ್ವನಿ ಕುಮಾರ್ ಹಾಗೂ ಐಸಿಬಿಎಫ್ (ICBF) ಸಂಯೋಜಕ ಹರೀಶ್ ಪಾಂಡೆ ಉಪಸ್ಥಿತರಿದ್ದು, ಹರೀಶ್ ಪಾಂಡೆ ಅವರು ಕಾರ್ಯಕ್ರಮದ ಮಹತ್ವವನ್ನು ಕುರಿತು ಮಾತನಾಡಿದರು. ಕತಾರ್ ಸಂಸ್ಕೃತಿ ಸಚಿವಾಲಯದ ಮ್ಯೂಸಿಕ್ ಅಫೇರ್ಸ್ ಸೆಂಟರ್ ನಿರ್ದೇಶಕ ಖಾಲಿದ್ ಅಲ್ ಸಾಲೇಮ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಚ್‌ಐವಿ/ಏಡ್ಸ್ ತಡೆಗಟ್ಟುವಿಕೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳು ಕುಂದಾಪುರದಲ್ಲಿ ಫ್ಲ್ಯಾಶ್‌ಮಾಬ್ ಮತ್ತು ಬೀದಿ ನಾಟಕದ ಮೂಲಕ ವಿಶೇಷ ಜಾಗೃತಿ ಅಭಿಯಾನ ನಡೆಸಿದರು. ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ರೋಟರಿ ಕ್ಲಬ್ ಸನ್‌ರೈಸ್ ಹಾಗೂ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್ ವಹಿಸಿದ್ದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞರಾದ ಡಾ. ಚಂದ್ರ ಮರಕಾಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರದ ಜಯಕರ್ ಶೆಟ್ಟಿ, ರೋಟರಿ ಕ್ಲಬ್ ಸನ್‌ರೈಸ್‌ನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ, ನ.10: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕುಂದಾಪುರ ಮಂಡಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಿಳಯ್ಯನ್ ಕೆ. ಗೋವಿಂದ ಶೇರಿಗಾರ್ ಮನೆ, ಒಂಬತ್ತು ದಂಡಿಗೆ ಪಡುಕೇರಿ, ಕುಂದಾಪುರದಲ್ಲಿ ಗೋ ಪೂಜಾ ಕಾರ್ಯಕ್ರಮವು ಇಂದು ಭಕ್ತಿ-ಶ್ರದ್ಧೆಯಿಂದ ನಡೆಯಿತು. ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಗೋವು ಕೇವಲ ಪ್ರಾಣಿಯಲ್ಲ ಅದು ನಮ್ಮ ಸಂಸ್ಕೃತಿ, ನಮ್ಮ ಶ್ರದ್ಧೆ, ನಮ್ಮ ಜೀವನದ ಅವಿಭಾಜ್ಯ ಅಂಗ. ಗೋವನ್ನು ಪೂಜಿಸುವುದೆಂದರೆ ಪ್ರಕೃತಿಯನ್ನು ಪೂಜಿಸಿದಂತೆ. ದೀಪಾವಳಿಯ ಈ ಪವಿತ್ರ ಸಂದರ್ಭದಲ್ಲಿ ಗೋಮಾತೆಯ ಆರಾಧನೆ ಮಾಡುವುದರಿಂದ ಸಮಾಜದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ. ಗೋ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮಹಿಳಾ ಮೋರ್ಚಾ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಕುಂದಾಪುರ ಮಂಡಲ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಅವರು ಮಾತನಾಡಿ, ಮಹಿಳಾ ಮೋರ್ಚಾ ಸಂಘಟನೆಯೊಂದಿಗೆ ಸಂಸ್ಕೃತಿ ಉಳಿಸುವ ಕೆಲಸವನ್ನೂ ಮಾಡುತ್ತಿದೆ. ಗೋ ಪೂಜೆಯಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ದೀಪಾವಳಿ ಕೇವಲ ಸಂಭ್ರಮದ ಹಬ್ಬವಲ್ಲ. ಅದು ಜ್ಞಾನ, ತಿಳುವಳಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳಗಿಸುವ ಹಬ್ಬವಾಗಿದೆ ಎಂದು ಖ್ಯಾತ ಚಿಂತಕ ಮುನಿರಾಜ್ ರೆಂಜಾಳ ಹೇಳಿದರು. ಅವರು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಡೊಳ್ಳು ದೀಪಾವಳಿ ಕಾರ್ಯಕ್ರಮದಲ್ಲಿ ದೀಪಾವಳಿ ಸಂದೇಶ ನೀಡಿ ಮಾತನಾಡಿದರು. ಪ್ರತಿಯೊಂದು ಹಬ್ಬದ ಹಿಂದೆಯೂ ಒಂದು ಇತಿಹಾಸ, ಸಂಸ್ಕೃತಿ ಹಾಗೂ ಬದುಕಿಗೆ ಮಾರ್ಗದರ್ಶನ ನೀಡುವ ಸಂದೇಶವಿದೆ. ಹಣತೆ ಕೇವಲ ಬೆಳಕಿನ ಸಂಕೇತವಲ್ಲ. ಅದು ಜ್ಞಾನ ಮತ್ತು ತಿಳುವಳಿಕೆಯ ಪ್ರತೀಕವಾಗಿದೆ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ಹರಡುವ ಸಂದೇಶವನ್ನು ಹಣತೆ ನೀಡುತ್ತದೆ. ನಾವೆಲ್ಲರೂ ಒಂದೊಂದು ಹಣತೆಯಂತೆ ನಾವು ಇರುವ ಸ್ಥಳದಲ್ಲಿ ಬೆಳಕು ಹರಿಸುವ ಕೆಲಸ ಮಾಡಬೇಕು. ಸಮಾಜದಲ್ಲಿ ಪ್ರೀತಿ, ಸಹಬಾಳ್ವೆ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಮೂಲಕ ನಮ್ಮ ಬದುಕು ಇತರರಿಗೂ ಬೆಳಕಾಗಬೇಕು. ದೀಪಾವಳಿ ಎಲ್ಲಾ ಪಂಥ, ಸಮುದಾಯಗಳ ನಡುವೆ ಸಂಭ್ರಮ ಹಾಗೂ ಸೌಹಾರ್ದತೆಯನ್ನು ಬೆಸೆಯುವ ಹಬ್ಬವಾಗಿದೆ. ಬೆಳಕು ಎಂಬುದು ಎಲ್ಲರಿಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಒಂದು ಕುಟುಂಬದ ಒಂದು ಗಂಡು ಅಥವಾ ಹೆಣ್ಣು ಶಿಕ್ಷಿತನಾದರೆ ಆ ಕುಟುಂಬದ ಏಳ್ಗೆಯಾಗುವುದು. ಮರವಂತೆ ಗ್ರಾಮದ ಕನ್ನಡ ಖಾರ್ವಿ ಸಮುದಾಯದ ಪ್ರತಿಯೊಂದು ಕುಟುಂಬದ ಮಕ್ಕಳು ಶಿಕ್ಷಣ ಪಡೆಯುವಂತಾಗಬೇಕು. ಇದರಿಂದ ಈ ಸಮುದಾಯದ ಕೆಲವು ಮಕ್ಕಳಿಗಾದರೂ ನೆರವಾಗಬೇಕು ಎಂದು ನವೀನಚಂದ್ರ ಮರವಂತೆ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ. ಶಂಕರ ಖಾರ್ವಿ ಹೇಳಿದರು. ಅವರು ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಭಾನುವಾರ ನವೀನಚಂದ್ರ ಮರವಂತೆ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಸಹಾಯಕ ಮೀನುಗಾರಿಕಾ ನಿರ್ದೇಶಕ ಸಿ.ಎಸ್. ಖಾರ್ವಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಆ ಗುರಿಯನ್ನು ಸಾಧಿಸುವ ಛಲದೊಂದಿಗೆ ಸಾಧನೆ ಮಾಡಬೇಕು ಎಂದರು. ಟ್ರಸ್ಟ್‌ನ ಸಲಹೆಗಾರ ಎಂ. ಶ್ರೀಧರ ಖಾರ್ವಿ ಮತ್ತು ಅಣ್ಣಪ್ಪ ಖಾರ್ವಿ ಉಪಸ್ಥಿತರಿದ್ದರು. ಒಟ್ಟು ಸುಮಾರು 19 ವಿದ್ಯಾರ್ಥಿಗಳಿಗೆ ಸುಮಾರು 1.8 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. ಅಣ್ಣಪ್ಪ ಖಾರ್ವಿ ವಂದಿಸಿದರು.…
