ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ನ ಪೊಲೀಸ್ ಚೌಕಿ ಬಳಿ ಸುಮಾರು 45ರಿಂದ 50 ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಅವರು ಬೇರೆ ಎಲ್ಲಿಂದಲೋ ಕೂಲಿ ಕೆಲಸಕ್ಕೆ ಬಂದಿರುವಂತೆ ಕಾಣುತ್ತಿದ್ದು, ಫೆ. 25ರ ರಾತ್ರಿಯಿಂದ ಫೆ. 26ರ ಬೆಳಗ್ಗಿನ ಮಧ್ಯೆ ಅವರು ಯಾವುದೋ ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಗೋಧಿ ಮೈ ಬಣ್ಣ, ಸುಮಾರು 55 ಅಡಿ ಎತ್ತರವಿದ್ದು, ಸಪೂರ ಶರೀರ, ತಿಳಿ ಆಕಾಶ ನೀಲಿ ಬಣ್ಣದ ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬಿಳಿ -ಕಪ್ಪು ಗೆರೆ ಇರುವ ಶಾಲು ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದರು. ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 360 ವರ್ಷ ಪುರಾತನವಾದ ಪುರಾಣ ಪ್ರಸಿದ್ಧ ಗಂಗೊಳ್ಳಿಯ ಮಲ್ಯರ ಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಲಂಪ್ರತಿ ಜರಗುವ ಬ್ರಹ್ಮರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಧ್ವಜಅವರೋಹಣದೊಂದಿಗೆ ಬುಧವಾರ ಮುಕ್ತಾಯವಾಯಿತು. ಬುಧವಾರ ಸಂಜೆ ಅವಭೃತ ಉತ್ಸವ, ಧ್ವಜ ಅವರೋಹಣ, ಶ್ರೀದೇವರಿಗೆ ವಿಶೇಷ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ಶ್ರೀಪಾದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ಮತ್ತು ದೇವಳದ ತಾಂತ್ರಿಕ ಜಿ. ವಸಂತ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು. ರಾತ್ರಿ ಪಂಚಗಂಗಾವಳಿ ನದಿಯಲ್ಲಿ ಶ್ರೀ ದೇವರ ನಿರಾಟ ಉತ್ಸವ ಜರುಗಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಪುರೋಹಿತರು, ಸಮಾಜಬಾಂಧವರು, ಊರಿನ ಹತ್ತು ಸಮಸ್ತರು ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬ್ರಹ್ಮಾವರ: ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಸಭೆ ಬ್ರಹ್ಮಾವರದ ಸಿಟಿ ಸೆಂಟರ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಜರಗಿತು. ಈ ಸಂದರ್ಭದಲ್ಲಿ ಗುತ್ತಿಗೆದಾರರು ಎದುರಿಸುತ್ತಿರುವ ಬಾಕಿ ಪಾವತಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಇದೇ ವೇಳೆ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತ್ತಲ್ಲದೆ ಗೋಕುಲ್ ಶೆಟ್ಟಿ ಅವರನ್ನು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡದ್ದು ಉಪಾಧ್ಯಕ್ಷರು ಸೇರಿದಂತೆ ಇತರೆ ಪದಾಧಿಕಾರಿಗಳನ್ನು ಹೊಸದಾಗಿ ನೇಮಕ ಮಾಡಲಾಯಿತು. ಸಮಸ್ಯೆಗಳ ಬಗ್ಗೆ ಚರ್ಚೆ:ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು ₹37,000 ಕೋಟಿಗೂ ಅಧಿಕ ಬಾಕಿ ಬಿಲ್ಗಳು ಪಾವತಿಯಾಗದೆ ಉಳಿದಿರುವುದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ, ಕಾರ್ಮಿಕರ ವೇತನ, ಯಂತ್ರೋಪಕರಣಗಳ ನಿರ್ವಹಣೆ ಹಾಗೂ ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆ ಗುತ್ತಿಗೆದಾರರ ಮೇಲೆ ಭಾರಿ ಆರ್ಥಿಕ ಒತ್ತಡ ಉಂಟುಮಾಡಿದೆ ಎಂದು ಸಭೆಯಲ್ಲಿ ವಿಚಾರ ವಿನಿಯಯ ಮಂಡಿಸಲಾಯಿತು. ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು:ಗುತ್ತಿಗೆದಾರರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: 2025 ಡಿಸೆಂಬರ್ನಲ್ಲಿ ನಡೆದ ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಆಳ್ವಾಸ್ನ ಬಿ.ಕಾಂ. ವಿದ್ಯಾರ್ಥಿಗಳಾದ ಪವಿತ್ರಾ ಪ್ರಭು (205), ಶರಶ್ಚಂದ್ರ ದೇವಾಜಿ (203) ಅದಿತಿ ಪ್ರಿಯಾ (201), ಯಶಸ್ ಆರ್. (201), ದೀಕ್ಷಾ (201) ಮತ್ತು ಮನ್ವಿತಾ (165) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್-1 ರಲ್ಲಿ ಹಾಗೂ ಸುಚೇತಾ ಎಸ್. (151) ಮತ್ತು ಸಹನಾ ಪ್ರಭು (151) ಸಿ.ಎಸ್. ಎಕ್ಸಿಕ್ಯೂಟಿವ್ ಮೊಡ್ಯುಲ್-2 ರಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಹಿರಿಯ ವಿದ್ಯಾರ್ಥಿನಿಯಾದ ಪ್ರೀತಿ ಎಸ್. ಗೋವೆಕರ್ (156) ಸಿ. ಎಸ್. ಪ್ರೊಫೆಶನಲ್ ಗ್ರೂಪ್-2 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ಕಂಪೆನಿ ಸೆಕ್ರೆಟರಿ ಆಗಿರುತ್ತಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಸಿ.ಎಸ್. ಸಂಯೋಜಕರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಸರಕಾರದ ಎನ್ಟಿಎ ಪ್ರಾಧಿಕಾರವು ನಡೆಸುವ ರಾಷ್ಟ್ರ ಮಟ್ಟದ ಜೆಇಇ ಮೈನ್ಸ್ 2026ರ ಪ್ರಥಮ ಹಂತದ ಪರೀಕ್ಷೆಯಲ್ಲಿ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜಲ್ ಎಸ್. ತೋಳಾರ್ 98.17 ಪರ್ಸoಟೈಲ್ ಅಂಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಇವರ ಸಹಯೋಗದಲ್ಲಿ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ನೇತೃತ್ವದಲ್ಲಿ ಮಾರ್ಚ್ 3 ಮತ್ತು4 ನೇ ತಾರೀಕಿನಂದು ನಡೆಯುವ ವಾರಾಹಿ ಬಲದಂಡೆ ಯೋಜನೆ ಅನುಷ್ಠಾನ ಮತ್ತು ಸಿದ್ದಾಪುರ ಮತ್ತು ಸೌಕೂರು ಏತ ನೀರಾವರಿಯಲ್ಲಿ ಬಿಟ್ಟು ಹೋದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲು ಕೈಗೊಂಡಿರುವ ಪಾದಯಾತ್ರೆಯಲ್ಲಿ ವಾರಾಹಿ ನದಿ ನೀರನ್ನು ಕುಡಿಯಲು ಮತ್ತು ಕೃಷಿಗೆ ಬಳಸುವ ಹಾಗೂ ಬಲದಂಡೆ ಯೋಜನೆಯ ಫಲಾನುಭವಿ ರೈತ ಬಂಧುಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ. 1979 ರಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ರವರು ವಾರಾಹಿ ನೀರಾವರಿ ಯೋಜನೆಗೆ ಶಂಖುಸ್ಥಾಪನೆ ಮಾಡಿ ಸುಮಾರು ನಾಲ್ಕು ದಶಕಗಳೇ ಕಳೆದು ಅದೆಷ್ಟೋ ಜನಪ್ರತಿನಿದಿನಗಳು ಅಧಿಕಾರ ಅನುಭವಿಸಿದರೂ ಸಹ ಇಂದಿಗೂ ವಾರಾಹಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುವ ಜನತೆ ಮಾದಕ ದ್ರವ್ಯ ದುಶ್ಚಟಕ್ಕೆ ಬಲಿಯಾಗುತ್ತಿರುವುದು ದೇಶದ ಭವಿಷ್ಯದ ದೃಷ್ಠಿಯಿಂದ ಅಪಾಯಕಾರಿಯಾದ ವಿದ್ಯಮಾನವಾಗಿದೆ. ದೇಶ ಸದೃಢವಾಗಿರಬೇಕಾದರೆ ಯುವ ಜನತೆ ವ್ಯಸನ ಮುಕ್ತರಾಗಿ ತಾನು, ತನ್ನ ಕುಟುಂಬ ಹಾಗೂ ಸಮಾಜವು ಆರೋಗ್ಯ ಪೂರ್ಣವಾಗಿರುವಂತೆ ಅರಿವು ಮತ್ತು ಜಾಗೃತಿ ಹೊಂದಬೇಕಾಗಿದೆ. ಈ ದಿಶೆಯಲ್ಲಿ ವಿದ್ಯಾರ್ಥಿಗಳು ಇಲಾಖೆಯೊಂದಿಗೆ ಕೈ ಜೋಡಿಸಿದಲ್ಲಿ ಭವ್ಯ ಭಾರತದ ನಿರ್ಮಾಣ ಸಾಧ್ಯವೆಂದು ಉಡುಪಿ ಜಿಲ್ಲೆ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಹೇಳಿದರು. ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ, ಕೋಟೇಶ್ವರ ಇಲ್ಲಿ ಅಬಕಾರಿ ಇಲಾಖೆ, ಐಕ್ಯೂಎಸಿ, ಮಾದಕ ದ್ರವ್ಯ ತಡೆ ಘಟಕ, ಎನ್.ಎಸ್.ಎಸ್., ರೋವರ್ಸ್ ಮತ್ತು ರೇಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು ಮತ್ತು ಎನ್.ಡಿ.ಪಿ.ಎಸ್. ಕಾಯ್ದೆ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಉಪವಿಭಾಗದ ಅಬಕಾರಿ ಉಪಧೀಕ್ಷರಾದ ಪ್ರಭುಗೌಡ ಪಾಟೀಲ ಪ್ರಾತ್ಯಕ್ಷಿಕೆಯೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಶ್ರೀ ವಿನಾಯಕ ಸಭಾಭವನ ಯಡಾಡಿ-ಮತ್ಯಾಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ, ಉಡುಪಿ, ಶಿವಶಾಂತಿ ಲಯನ್ಸ್ ಕ್ಲಬ್, ಮೊಳಹಳ್ಳಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಡಾಡಿ-ಮತ್ಯಾಡಿ ಇವರ ಸಹಯೋಗದೊಂದಿಗೆ ನಡೆಯಿತು. ಉಡುಪಿ ತಾಲೂಕು ಆರೋಗ್ಯ ಅಧಿಕಾರಿಯವರ ಕಛೇರಿಯಲ್ಲಿ ವೈದ್ಯಾಧಿಕಾರಿಯಾಗಿರುವ ಡಾ| ಕೃತಿ ಆರ್. ಹೆಗ್ಡೆ ಯಡಾಡಿ-ಮತ್ಯಾಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಬಿದ್ಕಲ್ಕಟ್ಟೆ ಇಲ್ಲಿನ ವೈದ್ಯಾಧಿಕಾರಿಯಾದ ಡಾ| ಪೂರ್ಣಿಮಾ ಶೇಟ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷರಾದ ಸಚಿನ್ ನಕ್ಕತ್ತಾಯ ಶುಭ ಹಾರೈಸಿದರು. ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ, ಉಡುಪಿ ಇದರ ವೈದ್ಯಕೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ನಿಂದ ಕೊರಗರ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಮಹಾತ್ಕಾರ್ಯವನ್ನು ಮಾಡು ತ್ತಿದ್ದಾರೆ. ಸೊರಗುತ್ತಿರುವ ಸಮಾಜಕ್ಕೆ ಸೂರು ನಿರ್ಮಿಸಿಕೊಡುತ್ತಿರುವುದು ಪುಣ್ಯ ಕಾರ್ಯವೆಂದು ಉಡುಪಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇವರಿಂದ ಕುಂದಾಪುರ ತಾಲೂಕಿನ ಅಮಾಸೆಬೈಲು ಕೊರಗರ ಕಾಲೋನಿಯಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 14 ಮನೆಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನೆ ನಿರ್ಮಾಣದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ ಮಾತನಾಡಿ, ಟ್ರಸ್ಟ್ನಿಂದ ಕೊರಗ 100 ಮನೆಗಳ ಕುಟುಂಬಗಳಿಗೆ ನಿರ್ಮಾಣದ ಗುರಿ ಹೊಂದಿದ್ದು, ಅಮಾಸೆಬೈಲ್ನಲ್ಲಿ ಮೂರನೇ ಹಂತದ ಮನೆ ನಿರ್ಮಾಣ ಕಾರ್ಯವಾಗುತ್ತಿದೆ ಎಂದರು. ಶಾಸಕ ಕಿರಣ್ ಕುಮಾರ್ ಕೊಡ್ಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಸಮನ್ವಯ ಬೆಂಗಳೂರು, ಕಮಲಶಿಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಗುಜ್ಜಾಡಿ ಗ್ರಾಮದ ಕೊಡಪಾಡಿಯ ನಿವಾಸಿ ಸುಧಾಕರ ಶೇರುಗಾರ (37) ಅವರು ಫೆ.24 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೊಡಪಾಡಿಯ ತಂದೆಯ ಮನೆಯಲ್ಲಿದ್ದು, ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ವಿಪರೀತ ಮದ್ಯ ಸೇವನೆ ಚಟದಿಂದ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಜೀವನದಲ್ಲಿ ಜುಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
