ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಯನ್ಸ್ ಜಿಲ್ಲೆ 317 ಸಿ ವ್ಯಾಪ್ತಿಗೆ ಒಳಪಡುವ ಪ್ರತಿಷ್ಠಿತ ಲಯನ್ ಕ್ಲಬ್ ಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್‌ನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಶ್ರೀ ದೇವಿ ಕಂಗನ್ ಸ್ಟೋರ್ ಹಾಗೂ ಶ್ರೀದೇವಿ ಸಿಲ್ವರ್‌ನ ಮಾಲೀಕರು, ಕೋಸ್ಟಲ್ ಕ್ಲಬ್‌ನ ಸ್ಥಾಪಕ ಸದಸ್ಯರು ಆದ ಗಣೇಶ್ ಬೈಂದೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ಪದವೀಧರರಾದ ಅವರು ದಿ. ವಾಸುದೇವ ಬಳೆಗಾರ ಮತ್ತು ಲಕ್ಷ್ಮಿ ಬಳೆಗಾರ ದಂಪತಿಯ ಸುಪುತ್ರರಾಗಿದ್ದಾರೆ.











