Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.    ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ, ಇದರ ರೋವರ್ಸ್ & ರೇಂಜರ್ಸ್ ಘಟಕ, ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ಹಾಗೂ ಗ್ರಾಮ ಪಂಚಾಯತ್, ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ತ್ರಾಸಿ ಕಡಲತೀರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿರುವ ರವೀಶ್ ಕೊರವಡಿ ಮಾತನಾಡಿ, ಈ ಸ್ವಚ್ಛತಾ ಕಾರ್ಯದಲ್ಲಿ ಯುವ ಸಮುದಾಯ ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ರೇಂಜರ್ಸ್ ಘಟಕ ಸಂಯೋಜಕಿ ರೇವತಿ ಡಿ., ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಮಾಜಿ ಅಧ್ಯಕ್ಷ ಲೋಹಿತಾಶ್ವ ಆರ್. ಕುಂದರ್, ನಿಕಟ ಪೂರ್ವ ಅಧ್ಯಕ್ಷ ದಿನೇಶ್ ಕಾಂಚನ್ ಬಾಳಿಕೆರೆ, ಕಾರ್ಯದರ್ಶಿ ಜಯಂತ್ ಕುಂದರ್ ಬಾಳಿಕೆರೆ, ಕೋಶಾಧಿಕಾರಿ ಸಂತೋಷ ಮೊಗವೀರ, ಜಿಲ್ಲಾ ಸಮಿತಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಳೆದ ಹದಿಮೂರು ವರ್ಷಗಳಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಅವರು ಆಯೋಜಿಸುತ್ತಿರುವ ಯಕ್ಷಗಾನ ನೃತ್ಯ ಮತ್ತು ಅಭಿನಯ ಶಿಬಿರ  ನಲಿಕುಣಿ  ಪರಿಸರದ ಮಕ್ಕಳಲ್ಲಿ ಸಂಸ್ಕಾರದ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಈ ಸಂಸ್ಥೆಯಲ್ಲಿ ನೀಡಲಾಗುವ ಶಿಸ್ತುಬದ್ದ ಶಿಕ್ಷಣ ಮಕ್ಕಳ ಜೀವನದಲ್ಲಿ ನಶಿಸದಂತ ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ನುಡಿದರು. ಅವರು ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದವರು ಆಯೋಜಿಸಿರುವ ಇಪ್ಪತ್ತು ದಿನಗಳ ನಲಿ ಕುಣಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉಪಸ್ಥಿತರಿದ್ದ ಪ್ರಾಚಾರ್ಯ ಸದಾನಂದ ಐತಾಳರು ಮಾತನಾಡಿ, ಉತ್ತಮ ಯಕ್ಷ ಶಿಕ್ಷಣವನ್ನು ನೀಡುತ್ತಿರುವ ಕಲಾಕೇಂದ್ರದ ಶ್ರಮ ಶ್ಲಾಘನೀಯ ಎಂದರು. ವೇದಿಕೆಯಲ್ಲಿ ಯಕ್ಷ ಗುರುಗಳಾದ ಕೇಶವ ಆಚಾರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಯೇಂದ್ರ ಅಡಿಗ, ರಾಘವೇಂದ್ರ ಮಟಪಾಡಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ವಂದನಾರ್ಪಣೆ ನೀಡಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿ (ಐಎಂಜೆಐಎಸ್‌ಸಿ)ನಲ್ಲಿ ‘ಕಲೋತ್ಸವ –2026’ ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ ದಿನವನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಯಿತು. ಕಾಲೇಜಿನ ಲಲಿತ ಕಲಾ ಸಂಘದಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮವು ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಕಲಾತ್ಮಕ ಪ್ರತಿಭೆಗಳನ್ನು ಪ್ರದರ್ಶಿಸಲು ಅಪೂರ್ವವಾದ ವೇದಿಕೆಯನ್ನು ಒದಗಿಸಿತು. ಕಾರ್ಯಕ್ರಮದಲ್ಲಿ ಯುಗ, ಸಂಸ್ಕೃತಿ ಮತ್ತು ದಿವ್ಯಾಗ್ನಿ ಎಂಬ ಮೂರು ತಂಡಗಳ ನಡುವೆ ಅಂತರ-ತರಗತಿ ಸ್ಪರ್ಧೆ ನಡೆಯಿತು, ಇದು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಮತ್ತು ತಂಡದ ಕೆಲಸವನ್ನು ಉತ್ತೇಜಿಸಿತು.ಕುಂದಾಪುರದ ಬಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ಸಮುದಾಯ ರೇಡಿಯೋ ಕೇಂದ್ರ 89.6 ಎಫ್‌ಎಂನ ಕಾರ್ಯಕ್ರಮ ಸಂಯೋಜಕಿಯಾದ ಜ್ಯೋತಿ ಸಾಲಿಗ್ರಾಮ ಅವರು ಮುಖ್ಯ ಅತಿಥಿಯಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಇಂತಹ ಚಟುವಟಿಕೆಗಳಲ್ಲಿ ಮೊದಲೇ ಭಾಗವಹಿಸುವುದು ಭವಿಷ್ಯದಲ್ಲಿ ದೊಡ್ಡ ಪಾತ್ರಗಳನ್ನು ವಹಿಸಲು ಸಿದ್ಧಪಡಿಸುತ್ತದೆ. ಪ್ರತಿಯೊಬ್ಬರಲ್ಲೂ ಒಂದು ಪ್ರತಿಭೆ ಇದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರು. ತಂದೆ – ತಾಯಿಯರ ಪ್ರತಿ ಚಲನವಲನವನ್ನು ಮಗು ಅನುಸರಿಸುತ್ತಾ ಬೆಳೆಯುತ್ತದೆ. ಹಾಗಾಗಿ ಮಕ್ಕಳಿಗೆ ಶಿಸ್ತು ರೂಡಿಸುವ ಮೊದಲೂ ಪೋಷಕರೂ ಶಿಸ್ತಿನ ಜೀವನ ರೂಡಿಸಿಕೊಳ್ಳುವುದು ಬಹುಮುಖ್ಯ ಎಂದು ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಹೇಳಿದರು. ಅವರು ಗುರುವಾರ ಇಲ್ಲಿನ ಸೇವಾ ಸಂಗಮ ಶಿಶುಮಂದಿರದ ವಿದ್ಯಾರ್ಥಿಗಳಿಗೆ ಪ್ರಶಸ್ತನ ಪತ್ರವನ್ನು ವಿತರಿಸಿ ಮಾತನಾಡಿದರು. ನಾವೆಲ್ಲರೂ ಆಧುನಿಕ ಜೀವನ ಶೈಲಿಯತ್ತ ಮುಖಮಾಡಿ ಒತ್ತಡದ ಬದುಕಿನತ್ತ ಸಾಗುತ್ತಿದ್ದೇವೆ. ಆದಾಗ್ಯೂ ಪೊಷಕರ ಒತ್ತಡಗಳನ್ನು ಮಕ್ಕಳ ಮೇಲೆ ಹೇರದೇ ಅವರಿಗೆ ಅವಶ್ಯ ಸಮಯ ನೀಡುವುದು, ಅವರ ಸಣ್ಣ ಸಣ್ಣ ಸಾಧನೆಯನ್ನು ಪ್ರೋತ್ಸಾಹಿಸುವುದು ಮಕ್ಕಳಲ್ಲಿ ಆತ್ವವಿಶ್ವಾಸವನ್ನು ತುಂಬುತ್ತದೆ. ಮುಖ್ಯವಾಗಿ ಮಕ್ಕಳ ಮುಂದೆ ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಬೇಕಿದೆ ಎಂದರು. ಸೇವಾ ಸಂಗಮ ಶಿಶುಮಂದಿರದಂತಹ ಸಂಸ್ಥೆಗಳು ಕೇವಲ ಅಕ್ಷರ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಧಾರೆ ಎರೆಯುತ್ತಿವೆ. ಸಣ್ಣ ವಯಸ್ಸಿನಲ್ಲೇ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ನಗರಸಭೆಯ 2025-26ನೇ ಸಾಲಿನ ನಗರಸಭಾ ನಿಧಿಯ ಶೇ.5ರ ವಿಕಲಚೇತನ ಕಲ್ಯಾಣ ಕಾರ್ಯಕ್ರಮದಡಿ ನಿವೇಶನ ಖರೀದಿ ಹಾಗೂ ಅಂಗವಿಕಲರಿಗೆ ಆರೋಗ್ಯ ವಿಮೆ ನೀಡುವ ಸಲುವಾಗಿ ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಪೂರಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರಸಭೆ ಪೌರಾಯುಕ್ತರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕೆರಾಡಿಯ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ 2026ನೇ ಸಾಲಿನ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ನಿಹಾಲ್ ಹೆಚ್‌.ಜಿ.  – 596, ಡಿ .ಹೆಚ್‌. ನವಮಿ – 593, ಅಂಕ ಪಡೆದು ರಾಜ್ಯಕ್ಕೆ 4ನೇ ಮತ್ತು 7ನೇ ಸ್ಥಾನ ಪಡೆದಿರುತ್ತಾರೆ. ಪರೀಕ್ಷೆಗೆ ಕುಳಿತ 186 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ನಿಹಲ್‌ ಹೆಚ್ ಜಿ – 596, ಡಿ . ಹೆಚ್‌ ನವಮಿ – 593 ರಕ್ಷಾ ನಾರಾಯಣ ಹರಿಕಾಂತ್‌ – 589, ನಂದನ ಜನಾರ್ದನ ಶಂಕರಲಿಂಗ – 588, ಪ್ರಮಥ್‌ ಶ್ಯಾನುಬೋಗ್‌ – 588 ಹಾಗೂ ವಾಣಿಜ್ಯ ವಿಭಾಗ:  ಎಂ ಆರ್‌ ಕಿರಣ – 585, ಸಾತ್ವಿ – 583, ರಕ್ಷಿತಾ – 573 ಉತ್ತಮ ಅಂಕ ಪಡೆದಿರುತ್ತಾರೆ. ಅವರಿಗೆ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ನಿರ್ದೇಶಕರು, ಪ್ರಾಂಶುಪಾಲರು ಮತ್ತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಯುಗಾದಿ ಉತ್ಸವವನ್ನು ಕೇಂದ್ರಿಕರಿಸಿಕೊಂಡು ಯಕ್ಷಕಲಾರಾಧನೆ ಅರ್ಥಪೂರ್ಣ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು. ಅವರು ಬುಧವಾರ ಕಾರ್ಕಡ ಭೂಮಿಕ ಸಮೀಪ ಸೌರಮಾನ ಯುಗಾದಿ ಯಕ್ಷಗಾನ ಶೀರ್ಷಿಕೆಯಡಿ ಕೋಟ ಸಾಲಿಗ್ರಾಮ ಹದಿನಾಲ್ಕು ಗ್ರಾಮಗಳ ಯಕ್ಷಗಾನ ಕಲಾಭಿಮಾನಿಗಳ ನೇತೃತ್ವದಲ್ಲಿ ಶ್ರೀ ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ, ಪೆರ್ಡೂರು ಇವರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಕಲಾರಾಧಕರನ್ನು ಅಭಿನಂದಿಸಿ ಮಾತನಾಡಿದರು. ಯುಗಾದಿ ಎನ್ನುವುದು ಹೊಸ ಮನ್ವಂತರದ ಜತೆ ಹಳೆಯ ಚಿಂತನೆಗಳನ್ನು ನೆನಪಿಸುತ್ತಾ ಸಾಂಸ್ಕೃತಿಕ ಸಾಮಾಜಿಕ ಪುರಾತನ ಹಿನ್ನಲ್ಲೆಯನ್ನು ಈ ಸಮಾಜಕ್ಕೆಧಾರೆ ಎರೆಯುವ ಕಾರ್ಯ ಆಗಬೇಕಿದೆ,ಇಂದಿನ ಯುವ ಜನಾಂಗಕ್ಕೆ ಶಿಕ್ಷಣವೊಂದೆ ಶಿಕ್ಷೆಯಾಗದೆ ಸಂಸ್ಕಾರಭರಿತ ನಾಳಿನ ಸುಂದರ ಪ್ರಜೆಯಾಗಿ ರೂಪಿಸಲು ಕರೆ ನೀಡಿದರಲ್ಲದೆ ನಮ್ಮ ಕಲಾರಾಧನೆ,ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಯಕ್ಷಾಭಿಮಾನಿಗಳಾದ ರಾಘವೇಂದ್ರ ಮಧ್ಯಸ್ಥ ಪಾರಂಪಳ್ಳಿ, ಆನಂದ್ ಆಚಾರ್, ಎಚ್. ನಾಗರಾಜ್ ಹಂದೆ, ಗಣೇಶ್ ಕಿಣಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ವೈದ್ಯಕೀಯ ಕ್ಷೇತ್ರದಲ್ಲಿ ಡಾ .ವಾದಿರಾಜ್ ಅವರ ಜೀವನ ಮಾದರಿ ಅಲ್ಲದೆ ಜನಮಾನಸದಿ ಅಚ್ಚಳಿಯದೆ ಉಳಿದುಕೊಂಡಿದೆ ಎಂದು ಜಿ.ಎಸ್.ಬಿ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಿ. ಸತೀಶ್ ಹೆಗ್ಡೆ ಹೇಳಿದರು. ಅವರು ಗುರುವಾರ ಕೋಟದ ವಾಸುದೇವ ಮಂಟಪದಲ್ಲಿ ಇತ್ತೀಚಿಗೆ ಅಗಲಿದ ಪ್ರಸಿದ್ಧ ಚರ್ಮರೋಗ ತಜ್ಞ ಡಾ.ವಾದಿರಾಜ್ ಇವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ ವೈದ್ಯಕೀಯ ಸೇವೆ ಕ್ಷೇತ್ರದಲ್ಲಿ ವಿಶ್ವ ಪ್ರಸಿದ್ಧಿ ಹೊಂದಿದ ಅವರು ಆ ಕಾಲಘಟ್ಟದಲ್ಲಿ ನಮ್ಮಂತ ಮೆಡಿಕಲ್ ರೆಫ್ ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು, ಅಲ್ಲದೆ ಸಮಾಜಿಕ, ಸಾಂಸ್ಕೃತಿಕವಾಗಿ ತನ್ನನ್ನು ತಾನು ಗುರುತಿಸಿಕೊಂಡು ಎಲ್ಲರ ಅಚ್ಚುಮೆಚ್ಚಿನ ವೈದ್ಯರಾಗಿ ಗುರುತಿಸಿಕೊಂಡು ಕೋಟದಲ್ಲಿ ತನ್ನ ಕಾರ್ಯಕ್ಷೇತ್ರವಾಗಿರಿಸಿಕೊಂಡ ಮನೆಮಾತಾದ ವೈದ್ಯರು ಎಂದು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಾ. ವಾದಿರಾಜ್ ಪತ್ನಿ ಭಾಗ್ಯವಾದಿರಾಜ್ ತನ್ನ ಪುತ್ರಿಯರೊಂದಿಗೆ ತನ್ನ ಪತಿಯ ಭಾವಚಿತ್ರಕ್ಕೆ ಪುಷ್ಭ ನಮನ ಸಲ್ಲಿಸಿದರು. ಈ ವೇಳೆ ಕೋಟ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಎ. ಕುಂದರ್, ಮಾಜಿ ಅಧ್ಯಕ್ಷೆ ಸುಶೀಲ ಸೋಮಶೇಖರ್,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕಂಬದಕೋಣೆ ಗ್ರಾಮದ ಹಳಗೇರಿಯ ಶ್ರೀ ಕೊಕ್ಕೇಶ್ವರ ವನದುರ್ಗಾ ದೇವಾಸ್ಥಾನದಲ್ಲಿ ಎ.19 ಆದಿತ್ಯವಾರದಂದು ವರ್ಧಂತ್ಯುತ್ಸವ ಜರುಗಲಿದೆ. ಬೆಳಿಗ್ಗೆ ಗಂಟೆ 8.00ರಿಂದ ಶ್ರೀ ಕೊಕ್ಕೇಶ್ವರ ದೇವಾಲಯದಲ್ಲಿ ನಾಂದಿ, ಪುಣ್ಯಾಹಾ ಶತರುದ್ರಾಭಿಷೇಕ, ಕಲಾವೃದ್ಧಿ ಹೋಮ, ಏಕಾದಶ ರುದ್ರ, ಸಪ್ತಶತೀ ಪಾರಾಯಣ, ಶ್ರೀ ನಾಗದೇವರಿಗೆ ಪವಮಾನ ಕಲಶ, ಶ್ರೀ ದೇವಿ ದೇವಾಲಯದಲ್ಲಿ ಸಪ್ತಶತೀ ಪಾರಾಯಣ, ಶ್ರೀ ಅಮ್ಮನವರಿಗೆ ಬ್ರಹ್ಮ ಕುಂಭಾಭಿಷೇಕ ನಡೆಯಲಿದೆ. ಮಧ್ಯಾಹ್ನ ಘಂಟೆ 12.00ರಿಂದ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಘಂಟೆ 4.00ರಿಂದ ಮಂತ್ರಾಕ್ಷತೆ, ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಘಂಟೆ 5.00ರಿಂದ ಶ್ರೀ ಕೊಕ್ಕೇಶ್ವರ ಭಜನಾ ಮಂಡಳಿ ಹಳಗೇರಿ ಇವರಿಂದ ಭಜನಾ ಕಾರ್ಯಕ್ರಮಗಳು, ಸಂಜೆ 7-30 ರಿಂದ ರಂಗಪೂಜೆ, ಬಲ್ಯುತ್ಸವಾದಿಗಳು ನಡೆಯಲಿದೆ. ಊರ ಪರ ಊರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಕೊಕ್ಕೇಶ್ವರ ವನದುರ್ಗಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ಆರನೇ ವರ್ಷ ಆಳ್ವಾಸ್ ಶಾಲೆಯು 100% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 46 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಕರ್ನಾಟಕದ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಅನಘಾ ಉಮೇಶ್‌ರಾವ್(99.2%), ಪ್ರಮತ್ ಔರಾದ್ಕರ್ (99%), ಆದ್ಯಾ ಭಟ್ (99%), ಅನುರಾಧ(99%), ವಾತ್ಸಲ್ಯ ಎನ್ (98%), ಧನ್ವಿತ್ ಪಿಬಿ(97.2%), ನಮ್ರತಾ(97.2%), ಮನೋಘ್ನ(97%), ಶ್ವೇತಾ(97%), ಶಿವಾನಿ ಜಿಎ(97%), ವಾಘ್ಮಿ ಪ್ರಶಾಂತ್ (97%), ಅವನಿ ಪಿ ಶೆಟ್ಟಿ (97%), ವಿಭಾಸ್(97%), ಯಕ್ಷಿತಾ (96.4%), ಸೃಜನ್(96.4%), ಗೌತಮ್ (96.4%), ಪ್ರತೀಕ್ಷಾ ಕೆ ಎಂ(96.4%), ಸಾನ್ವಿ( 96.4%), ಜನಿತ್ (96.2%), ಭಾರ್ಗವ್ (96%),…

Read More