Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಶಾಲಾ ವಿಭಾಗದಲ್ಲಿ  ಒಂದನೇ  ತರಗತಿಯ ಮಕ್ಕಳು ಸಾಮಾಜಿಕ ಶಿಕ್ಷಣದ ಭಾಗವಾಗಿ “ಗೋಲ್ಡನ್ ರೂಲ್ಸ್” ಎಂಬ ಮೌಲ್ಯಾಧಾರಿತ ವಿಷಯದ ಕುರಿತು ಅತ್ಯಂತ ಮನಮುಟ್ಟುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮವು ‘ನಮಸ್ತೇ, ವೆಲ್ಕಮ್’, ‘ಸಾರಿ’, ‘ಎಕ್ಸ್ ಕ್ಯೂಸ್ ಮಿ’, ‘ಪ್ಲೀಸ್’, ‘ಥ್ಯಾಂಕ್ ಯು’ ಎಂಬ ದಿನನಿತ್ಯದ ಶಿಷ್ಟಾಚಾರದ ಪದಗಳ ಮಹತ್ವವನ್ನು ಬಿಂಬಿಸುವಂತೆ ರೂಪುಗೊಂಡಿತ್ತು. ಮಕ್ಕಳು ಬಣ್ಣ ಬಣ್ಣದ ವೇಷಭೂಷಣದೊಂದಿಗೆ, ನಾಟಕ, ಗೀತೆ ಹಾಗೂ ಸಂವಾದದ ಮೂಲಕ ಈ ಶಿಷ್ಟಾಚಾರದ ಪದಗಳನ್ನು ಹೇಗೆ ನಿತ್ಯಜೀವನದಲ್ಲಿ ಬಳಸಬೇಕು ಎಂಬುದನ್ನು ಜೀವಂತವಾಗಿ ಪ್ರದರ್ಶಿಸಿದರು. ಅವರ ಉತ್ಸಾಹ ಮತ್ತು ಸಹಜ ಅಭಿನಯ ಎಲ್ಲರ ಮನಸೂರೆಗೊಂಡಿತ್ತು. ಕಾರ್ಯಕ್ರಮದ ಅಂತ್ಯದಲ್ಲಿ ಆಡಳಿತ ನಿರ್ದೇಶಕರಾದ ಶಮಿತಾ ರಾವ್ ಮಾತನಾಡಿ, ಮಕ್ಕಳ ಈ ಪ್ರದರ್ಶನವನ್ನು ಶ್ಲಾಘಿಸಿದರು ಹಾಗೂ “ಈ ಗುಣಗಳನ್ನು ಕೇವಲ ಕಲಿತರೆ ಸಾಲದು, ನಮ್ಮ ನಿತ್ಯದ ಜೀವನದಲ್ಲಿ ಅನುಸರಿಸಿ ಆತ್ಮೀಯ ಸಂಬಂಧಗಳನ್ನು ನಿರ್ಮಿಸಬೇಕು”ಎಂದು ಸಲಹೆ ನೀಡಿದರು ಮತ್ತು ಈ ಸುವರ್ಣ ನಿಯಮಗಳನ್ನು ನಮ್ಮ ಜೀವನದಲ್ಲಿ ಭಾವಪೂರ್ಣವಾಗಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಳೆದ ಸಾಲಿನಲ್ಲಿ ಸುಮಾರು 225 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ, 79.17 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.13 ಡೆವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಸಂಘದ ಪ್ರಧಾನ ಕಚೇರಿ ಆವರಣದಲ್ಲಿ ಭಾನುವಾರ ನಡೆದ 2024-25ನೇ ಸಾಲಿನ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾನ ಮನಸ್ಕರು ಸೇರಿ ಸ್ಥಾಪಿಸಿದ ಈ ಸಂಸ್ಥೆ ಜಿಲ್ಲೆಯಲ್ಲಿ ಜನಸಾಮಾನ್ಯರ ಸಂಸ್ಥೆಯಾಗಿ ಹೆಸರು ಗಳಿಸಿದೆ. ಗ್ರಾಹಕರು ಸಂಘದ ಆಸ್ತಿ. ಅವರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ನಮ್ಮ ಸಂಘವು ಕಾರ್ಯನಿರ್ವಹಿಸುತ್ತಿದೆ. ಸದಸ್ಯರ ಸಹಕಾರದಿಂದಲೇ ನಮ್ಮ ಸಂಘ ಮುನ್ನೆಡೆದಿದೆ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ದಿ ಹಾಗೂ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ. ಬೈಂದೂರಿನಲ್ಲಿ ಕಳೆದ 16 ವರ್ಷದ ಹಿಂದೆ ಹುಟ್ಟಿಕೊಂಡ ನಮ್ಮ ಸಂಘವು ಬೈಂದೂರಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಗಿಡ ನಡುವ ಬಗ್ಗೆ ನಿರ್ಲಕ್ಷ್ಯ ಸಲ್ಲ ಪ್ರತಿಯೊರ್ವರು ಪರಿಸರಸ್ನೇಹಿ ವಾತಾವರಣ ನಿರ್ಮಿಸಿ ಎಂದು ಕೋಟತಟ್ಟು ಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್ ಕರೆ ಕೊಟ್ಟರು ಅವರು ಭಾನುವಾರ ಕೋಟತಟ್ಟು ಪಡುಕರೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸ್ ಬ್ರಹ್ಮಾವರ, ರೋಟರಿ ಕ್ಲಬ್ ಕೋಟಸಿಟಿ ಇವರ ಸಹಭಾಗಿತ್ವದಡಿ 265ನೇ ಭಾನುವಾರ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಹಸಿರು ಜೀವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರದಲ್ಲಿ ವಿವಿಧ ತಳಿಗಳ ಗಿಡಗಳು ತನ್ನದೆ ಆದ ವಿಶೇಷತೆಯನ್ನು ಹೊಂದಿದೆ ಅದರಲ್ಲಿ ರಕ್ತಚಂದನ ಅತಿ ಶ್ರೀಮಂತ ಮರಗಳ ಸಾಲಿಗೆ ಸೇರುತ್ತದೆ ಇದರ ಮಹತ್ವ ಅರಿತು ಅದನ್ನು ನೆಟ್ಟು ಪೋಷಿಸುವ ಕಾರ್ಯ ಆಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಆಹಾರದ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಲು ಶುಗರ್ ಬೋರ್ಡ್ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಿದರು. ಮಣಿಪಾಲದ ಮಕ್ಕಳ ತಜ್ಞರಾದ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ಕೌಶಿಕ್ ಹೆಚ್. ಮಾತನಾಡಿ, ಪ್ರತಿ 20 ಜನ ಮಕ್ಕಳಲ್ಲಿ ಒಬ್ಬರ ತೂಕ ವಯಸ್ಸಿಗೆ ಮೀರಿ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿ ಮತ್ತು ಆಹಾರವೇ ಕಾರಣವಾಗಿರುತ್ತದೆ. ಆಲಸ್ಯವೂ ತೂಕದ ಹೆಚ್ಚುವಿಕೆಗೆ ಪ್ರಧಾನ ಕಾರಣವಾಗಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಪಾಠವನ್ನು ಆಲಿಸುವ ಕೆಲಸದಲ್ಲೇ ಸಮಯವನ್ನು ಕಳೆಯುವುದರಿಂದ ದೇಹದ ಅಂಗಾಂಗಗಳು ಬಹಳ ಚಟುವಟಿಕೆಯಿಂದ ಕೂಡಿರುವುದಿಲ್ಲ. ಆದ್ದರಿಂದ ದಿನಕ್ಕೊಂದು ಘಂಟೆಯಾದರೂ ಓಟ, ಆಟ, ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಮಾತ್ರ ಆಲಸ್ಯದಿಂದ ಮುಕ್ತರಾಗಿ ಆರೋಗ್ಯ ಹೊಂದಬಹುದು. ಆಹಾರ ಸೇವನೆಯಲ್ಲೂ ಶುದ್ಧತೆ, ಸಮಯಪಾಲನೆ ಅತ್ಯಗತ್ಯ. ಕರಿದ ಪದಾರ್ಥಗಳ, ಮಾಂಸಾಹಾರದ ಅಥವಾ ಅತ್ಯಂತ ಸಿಹಿ ಪದಾರ್ಥಗಳ ಅತಿಯಾದ ಸೇವನೆ ಆರೋಗ್ಯವನ್ನು ಹಾಳುಮಾಡುತ್ತದೆ. ಹಸಿ ತರಕಾರಿಗಳ, ಮೊಳಕೆ ಭರಿಸಿದ ಧಾನ್ಯಗಳ, ಹಾಲು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ಅರ್ಪಿಸುವ ’ ಅಭಿವ್ಯಕ್ತ’ ಪ್ರೌಢ ಶಾಲಾ ವಿಭಾಗದ ಮಕ್ಕಳಿಗಾಗಿ ಆಯೋಜಿಸಿದ ಭಾಷಣ ಸ್ಪರ್ಧೆಯ ಆಯ್ಕೆ ಸುತ್ತಿನಲ್ಲಿ ಭಾಗವಹಿಸಿದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಾದ ಪ್ರತೀಕ್ಷಾ, ಜೀವಿಕಾ, ಆರಾಧ್ಯ ಕೆ.ಬಿ. ಹಾಗೂ ಇಂಚರ ಅವರು ಭಾಗವಹಿಸಿರುತ್ತಾರೆ. ಅವರಲ್ಲಿ ಆರಾಧ್ಯ ಕೆ.ಬಿ ಮತ್ತು ಇಂಚರ ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ಗಣೇಶ ಮೊಗವೀರ ಅವರ ಇದುವರೆಗಿನ ಶೈಕ್ಷಣಿಕ ಸಾಧನೆ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಟೊಪ್ನೆಟೆಕ್ ಪೌಂಡೇಶನ್ ನವರು ಕೊಡಮಾಡುವ 2025ನೇ ಸಾಲಿನ ರಾಷ್ಟ್ರೀಯ ಮಟ್ಟದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮೆಮೋರಿಯಲ್ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಗಣೇಶ ಮೊಗವೀರ ಅವರನ್ನು ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿ ಮುಂಬೈನ ಪ್ರಸಿದ್ಧ ತಾಜ್ ಹೋಟೆಲ್ ನಲ್ಲಿ ಆಯೋಜಿಸಿದ ವೈಭವದ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ರಸ್ತೆ ಸಂಚಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಚಾಲಕನ ಕರ್ತವ್ಯ. ಅದರಲ್ಲಿಯೂ ಶಾಲಾ ವಾಹನ ಚಲಾಯಿಸುವವರಿಗೆ ಕಾನೂನು ಪಾಲಿಸುವ ಜೊತೆಗೆ ಮಕ್ಕಳ ಜವಾಬ್ದಾರಿ ಇರುತ್ತದೆ. ಪ್ರತಿ ಮಗುವಿನ ಜೀವವೂ ಅಮೂಲ್ಯವಾದದ್ದು ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಕಛೇರಿಯ ಸಿನಿಯರ್‌ ಮೋಟರ್‌ ವೆಹಿಕಲ್‌ ಇನ್ಸಪೆಕ್ಷರ್‌ ಸಂತೋಷ್‌ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್‌ ಬೈಂದೂರು, ಪ್ರಾದೇಶಿಕ ಸಾರಿಗೆ ಕಛೇರಿ ಉಡುಪಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಶನಿವಾರ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಶಾಲಾ ವಾಹನ ಚಾಲಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಮಕ್ಕಳ ಸುರಕ್ಷತೆಯ ಬಗೆಗಿನ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ವಾಹನ ಚಾಲನೆ ಮಾಡುವುದಷ್ಟೇ ಅಲ್ಲದೇ ಅದರ ಅಗತ್ಯ ದಾಖಲೆಗಳನ್ನು ವಾಹನದಲ್ಲಿ ಇರಿಸಿಕೊಳ್ಳುವುದು, ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಶಾಲಾ ವಾಹನಗಳಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾದುದು ಎಂದರು. ಎಲ್ಲಾ ಶಾಲಾ ಮುಖ್ಯಸ್ಥರು ವಾಹನದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ರಿಯೇಟಿವ್‌ ಪುಸ್ತಕ ಮನೆ ಪ್ರಕಾಶಿಸಿದ, ಶಿಕ್ಷಕ, ಅಂಕಣಗಾರ ಸಂದೇಶ್ ಎಚ್. ನಾಯ್ಕ್ ಹಕ್ಲಾಡಿ ಅವರು ಚೊಚ್ಚಲ ಕೃತಿ ‘ಇದೊಳ್ಳೆ ವರಸೆʼ ಅ.13ರಂದು ಕಾರ್ಕಳ ಕ್ರಿಯೇಟಿವ್ ಪ.ಪೂ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ. ಸಂದೇಶ್ ನಾಯ್ಕ್ ಅವರು ಕಳೆದ 8 ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ಪ್ರತಿ ಸೋಮವಾರ ‘ವಾರದ ವರಸೆ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಈ ಅಂಕಣದ ಆಯ್ದ 30 ಲೇಖನಗಳನ್ನು ‘ಇದೊಳ್ಳೆ ವರಸೆʼ ಕೃತಿಗೆ ಆಯ್ದುಕೊಳ್ಳಲಾಗಿದೆ. ಓದುವ & ಖರೀದಿಸುವ ಆಸಕ್ತಿ ಉಳ್ಳವರು 9606474289 ಸಂಖ್ಯೆಯನ್ನು ಸಂಪರ್ಕಿಸಿ ಪುಸ್ತಕ ಕಾಯ್ದಿರಿಸಬಹುದು. 150 ಮುಖಬೆಲೆಯ ಪುಸ್ತಕ ಬಿಡುಗಡೆ ಪೂರ್ವದಲ್ಲಿ 120 ರುಪಾಯಿಗೆ ಲಭ್ಯವಿದೆ! ಪ್ರತೀ ವಿಷಯಕ್ಕೂ ಬೇರೆ ಬೇರೆ ಆಯಾಮಗಳಿರುತ್ತವೆ. ಒಂದು ವಿಷಯ ಒಬ್ಬರಿಗೆ ಕಂಡ ರೀತಿಯಲ್ಲಿ ಇನ್ನೊಬ್ಬರಿಗೆ ಕಾಣಬೇಕೆಂದಿಲ್ಲ. ಹಾಗೆ ಅಂಥ ಕೆಲವು ವಿಷಯಗಳನ್ನು ವ್ಯಂಗ್ಯ-ವಿಡಂಬನೆ, ಚುಟುಕ, ಹಾಸ್ಯ ವಿಶ್ಲೇಷಣೆಯ ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನವೇ, ‘ಇದೊಳ್ಳೆ ವರಸೆ’ ಪುಸ್ತಕದ ಬರಹಗಳು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಆಧುನಿಕ ಕಾಲಘಟ್ಟದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಇದರ ಮಹತ್ವ ಅರಿತು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಹೇಳಿದರು. ಅವರು ಸೋಮವಾರ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಕಛೇರಿ – ರತ್ತೂಬಾಯಿ ಜನತಾ ಪ್ರೌಢಶಾಲೆ ನೇತೃತ್ವದಲ್ಲಿ ಶಾಲೆಯಲ್ಲಿ ಆಯೋಜಿಸಲಾದ 14 ಮತ್ತು 17ರ ವಯೋಮಾನದ ಬಾಲಕ‌ ಮತ್ತು ಬಾಲಕಿಯರ ಬೈಂದೂರು ವಲಯ ಮಟ್ಟದ ಯೋಗಾಸನ ಸ್ಪರ್ಧೆ 2025-26 ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯದಲ್ಲಿ ಅನುದಾನಿತ ಶಾಲೆಗಳ ಪೈಕಿ ರತ್ತೂಬಾಯಿ‌ ಪ್ರೌಢಶಾಲೆ ಮಾದರಿಯಾಗಿದೆ. ಶೇ.100ಫಲಿತಾಂಶ ದಾಖಲಿಸಿದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿರುವುದು ಶ್ಲಾಘನಾರ್ಹ ಎಂದರು. ಶ್ರೀ ವಿ.ವಿ.ವಿ ಮಂಡಳಿ ನಿರ್ದೇಶಕ ರಘುರಾಮ ಕೆ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ದಯಾನಂದ ಶೆಟ್ಟಿ, ಗೋಪಾಲ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರತಿನಿಧಿ ರವಿಶಂಕರ ಹೆಗ್ಡೆ, ಬೈಂದೂರು ಗ್ರೇಡ್-1 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಲ್ಫ್: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ವಿಶ್ವದ ಕುಂದಗನ್ನಡಿಗರನ್ನು ಒಂದುಗೂಡಿಸಿ ಅಂತರ್ಜಾಲದ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆ ಅವರು ನಮ್ಮ ಸಂಸ್ಥೆ ಈ ಹಿಂದೆ ಇಟ್ಟ ಬೇಡಿಕೆಗಳಿಗೆ ಒತ್ತು ನೀಡುವುದರ ಬಗ್ಗೆ ನಿಸ್ವಾರ್ಥ ಹೋರಾಟ ಮಾಡುತ್ತೇನೆ ಎಂದರು ಜೊತೆಗೆ ಕುಂದಾಪ್ರ ಕನ್ನಡ ಅಧ್ಯಾಯನ ಪೀಠದ ಕೆಲಸಗಳಿಗೆ ವೇಗವನ್ನು ನೀಡುದರ ನಮ್ಮ ಭಾಷೆಯ ಯಾವುದೇ ಕೆಲಸಗಳಿಗೆ ನಿಮ್ಮದೊಂದಿಗೆ ಸದಾ ಇರುತ್ತೇನೆ ಎಂದರು. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಸ್ಥಾಪಕ ಅಧ್ಯಕ್ಷರಾದ ಸದಾಸ್ ದಾಸ್ ಅವರು ಕಾರ್ಯಕ್ರಮದ ಅತಿಥಿಗಳ ಪರಿಚಯ ಮಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ನಮ್ಮ ಸಂಸ್ಥೆಯಿಂದ ಮೊದಲು ಧ್ವನಿ ಎತ್ತಿದ ಬೈಂದೂರು ವಿಮಾನ ನಿಲ್ದಾಣ ಮತ್ತು ಉನ್ನತ ದರ್ಜೆಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಬಗ್ಗೆ ಮರು ಧ್ವನಿಯಾಗಿ ಅತಿಥಿಗಳಿಗೆ ಮನವರಿಕೆ ಮಾಡಿದರು. ನಮ್ಮ ಕುಂದಾಪ್ರ…

Read More