ಸಿದ್ಧಾಪುರ: ಹಿಂದೂ ಜಾಗರಣ ವೇದಿಕೆ ಸಿದ್ದಾಪುರ ವಲಯ ಹೊಸಂಗಡಿ ಘಟಕ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಲೋಕ ಕಲ್ಯಾಣರ್ಥವಾಗಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹೊಸಂಗಡಿ ಸಾರ್ವಜನಿಕ ಗಣೇಶೋತ್ಸವ ರಂಗ ಮಂದಿರದಲ್ಲಿ ಇತ್ತಿಚಿಗೆ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಿದ್ದಿವಿನಾಯಕ ಸಾಂಸ್ಕ್ರತಿಕ ಕಲಾ ಕೇಂದ್ರದ ಸಂಚಾಲಕ ಮುಂಗೆಶ್ ಶೆಣೈ ಧಾರ್ಮಿಕ ಪ್ರವಚನ ನೀಡಿದರು. ಹೊಸಂಗಡಿ ಕೃಷ್ಣ ಜ್ಯುವೆಲ್ಲರಿ ಮಾಲಿಕ ಮಂಜುನಾಥ್ ಗೊಲ್ಲ ಕಂಠಗದ್ದೆ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಹಿ.ಜಾ.ವೇ. ಉಡುಪಿಯ ಅರವಿಂದ ಕೋಟೇಶ್ವರ, ಹಿ.ಜಾ.ವೇ. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಹೆನ್ನಾಬೈಲು ಭಾಸ್ಕರ್ ಶೆಟ್ಟಿ, ಸಿದ್ದಾಪುರ ವಲಯ ಸಂಚಾಲಕರಾದ ಹರ್ಷ ಜನ್ಸಾಲೆ, ಹೊಸಂಗಡಿ ಘಟಕದ ಅಧ್ಯಕ್ಷ ರಾಘವೇಂದ್ರ ಬಾಳೆಜೆಡ್ದು ಉಪಸ್ತಿತರಿದ್ದರು. ಭುಜಂಗ ಶೆಟ್ಟಿ ಹೆನ್ನಾಬೈಲು ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ್ ಹೊಸಂಗಡಿ ಸ್ವಾಗತಿಸಿ, ನಾಗರಾಜ್ ಬಾಳೆಜೆಡ್ದು ವರದಿ ವಾಚಿಸಿದರು. ಭಾಸ್ಕರ್ ಶೆಟ್ಟಿ ವಂದಿಸಿದರು
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೇನುಬೇರಿನ ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಕ್ಷಯ್ ಗೆ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಯೋಜನಾನಗರದ ಸುನಿಲ್ ಗೆ ಸಾಕ್ಷ ನಾಶಪಡಿಸಲು ಸಹಕರಿಸಿ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕಾಗಿ ಅಕ್ಷಯ ಬಂಧಿನಕ್ಕೊಳಗಾಗಿದ್ದ. ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಲಯ ಅಕ್ಷಯಗೆ ಜಾಮೀನು ನೀಡಿದೆ. ಬೈಂದೂರಿನ ಇತಿಹಾಸದಲ್ಲಿ ಕರಾಳ ದಿನ: ಬೈಂದೂರು ಕ್ಷೇತ್ರದ ಹೇನಬೇರು ಹೊಸಹಕ್ಲುವಿನ ಬಾಬು ದೇವಾಡಿಗ ಹಾಗೂ ರಾಧಾ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗಳಾದ ಅಕ್ಷತಾ ದೇವಾಡಿಗ ಕ್ರೂರಿಯ ಹೇಯ ಕೃತ್ಯಕ್ಕೆ ನಲುಗಿ ಪ್ರಾಣ ಕಳೆದುಕೊಂಡ ಪ್ರತಿಭಾವಂತ ಹೆಣ್ಣುಮಗಳು. ಬೆಟ್ಟದಷ್ಟು ಕನಸುಗಳನ್ನು ಹೊತ್ತು, ಭವಿಷ್ಯದ ಸ್ಪಷ್ಟ ಕಲ್ಪನೆಯೊಂದಿಗೆ ಸಾಗುತ್ತಿದ್ದ ಅಕ್ಷತಾಳಿಗೆ ಎದುರಾದ ಭಯಾನಕ ಸಂದರ್ಭ ಬೈಂದೂರಿನ ಜನತೆಯನ್ನು ದಿಗ್ಬ್ರಾಂತರನ್ನಾಗಿಸಿತ್ತು. ಆರೋಪಿಗಳ ಬಂಧನಕ್ಕೆ ಇಡಿ ಊರೇ ಪ್ರತಿಭಟಿಸಿತ್ತು. ಪ್ರಕರಣದ ಬೆನ್ನತ್ತಿದ ಎಸ್ಪಿ ಅಣ್ಣಾಮಲೈ ಅವರ ತಂಡ ಮೂರು ದಿನದಲ್ಲಿ ಆರೋಪಿಗಳನ್ನು ಬಂಧಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆಯ ಎಸ್ಸಿಎಸ್ಟಿಗಳಿಗಾಗಿ ಮಾಡಲಾಗಿದ್ದ ಜೀವವಿಮಾ ನಿಧಿಯ ಪ್ರೀಮಿಯಂ ಕಟ್ಟಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೌನ್ಸಿಲರ್ ಗೆ ಅನುದಾನ ಸಾಲುತ್ತಿಲ್ಲ. ಸಂಗಮ ಸೇತುವೆಯ ಬಳಿಯ ಮರಳುಗಾರಿಕೆ, ಸಾರ್ವಜನಿಕರ ವಿರೋಧದ ನಡುವೆ ಸರಕಾರಿ ಆಸ್ಪತ್ರೆ ಎದುರಿನ ಸರಕಾರಿ ಕಟ್ಟದ ನಿಲ್ಲಲಿಲ್ಲ. ಒಳಚರಂಡಿ ವ್ಯವಸ್ಥೆಗೆ ಕೋಟಿ ಅನುದಾನ ಪಡೆಯಲು ಸಚಿವರನ್ನು ಕಾಣದೇ ವಿಧಿಯಿಲ್ಲ. ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಕೊನೆಗೂ ನಡೆಯಲಿಲ್ಲ. ಬಿಜೆಪಿ ಸದಸ್ಯರ ಸಭಾತ್ಯಾಗವೂ ಸಾಧ್ಯವಾಗಲಿಲ್ಲ! [quote font_size=”15″ bgcolor=”#ffffff” bcolor=”#dd9933″ arrow=”yes” align=”right”] ಬಿಜೆಪಿ ಸಭಾ ತ್ಯಾಗ: ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಪ್ರಸ್ತಾಪವಿಟ್ಟಾಗ ಸಾಮನ್ಯ ಸಭೆಯಲ್ಲಿ ಬಿಜೆಪಿ 6 ಜನ ಸದಸ್ಯರು ಹಾಜರಿದ್ದರೇ ಕಾಂಗ್ರೆಸ್ ನ 7 ಮಂದಿ ಹಾಜರಿದ್ದರು. ಕಾಂಗ್ರೆಸಿಗರು ಸ್ಥಾಯಿ ಸಮಿತಿ ಸದಸ್ಯರ ಬಹುಮತಕ್ಕಾಗಿ ಮಾಡಿದ ಪ್ರಯತ್ನ ಬಿಜೆಪಿ ಸಭಾ ತ್ಯಾಗದಿಂದ ಮಣ್ಣಾಯಿತು.ಈ ಹಿಂದೆ ಸ್ಥಾಯಿ ಸಮಿತಿಯಲ್ಲಿ ಬಿಜೆಪಿ 6 ಜನ ಮತ್ತು ಕಾಂಗ್ರೆಸಿನ 5 ಜನ ಸೇರಿ ಒಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಪೆರ್ಡೂರು ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಬೆಂಗಳೂರಿನ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಸಂಯೋಜನೆಯಲ್ಲಿ ‘ಇಂದ್ರನಾಗ’ ಎನ್ನುವ ವಿನೂತನ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷಗಾನದೊಳಗೆ ಸಾಮಾಜಿಕ ಪ್ರಸಂಗಗಳು ಬಂದು ಮೂಲ ಸೊಗಡಿಗೆ ಧಕ್ಕೆ ತರುತ್ತಿದೆ ಎನ್ನುವ ವಾದ ಬಲವಾಗುತ್ತಿರುವ ಈ ಹೊತ್ತಿನಲ್ಲಿ ಹೊಸ ಪ್ರಸಂಗದ ಮೂಲಕವೇ ಪಾರಂಪರಿಕ ಸೊಗಸುಗಾರಿಕೆಯನ್ನು ಅದರೆಲ್ಲಾ ವೈಭವದೊಂದಿಗೆ ಕಟ್ಟಿಕೊಡುವ ವಿನೂತನ ಪ್ರಯತ್ನದ ಇಂದ್ರನಾಗ ಪ್ರಸಂಗದ ಮೂಲಕ ಡಿಸೆಂಬರ್ 9ರ ಶನಿವಾರ ರಾತ್ರಿ 9:30ಕ್ಕೆ ಆರಂಭಗೊಳ್ಳಲಿದೆ. ವೈ. ಕರುಣಾಕರ ಶೆಟ್ಟಿ ಸಾರಥ್ಯದ ವೃತ್ತಿಪರ ಯಕ್ಷಗಾನ ತಂಡ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನ ಜರುಗಲಿದ್ದು ಬೆಂಗಳೂರಿನ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನದ ಯಕ್ಷಗಾನ ಸಂಘಟಕ ಮಣೂರು ವಾಸುದೇವ ಮಯ್ಯ ಸಾರಥ್ಯದಲ್ಲಿ ಪ್ರತಿಷ್ಠಾನದ ಸದಸ್ಯರುಗಳೇ ಇಂದ್ರನಾಗ ಪ್ರಸಂಗದ ಕಥೆ ರಚಿಸಿದ್ದಾರೆ. ಹಿಮಾಚಲ ಪ್ರದೇಶದ ಧರ್ಮಶಾಲೆಯಲ್ಲಿರುವ ದೇವಾಲಯವೊಂದರ ಸ್ಥಳೀಯ ಪುರಾಣವನ್ನು ಈ…
ಕುಂದಾಪುರ: ಇಲ್ಲಿನ ಶಂಕರ ಕುಂದರ್ ಗುರುಸ್ವಾಮಿಯ 36ನೇ ವರ್ಷದ ಶಬರಿಮಲೈ ಯಾತ್ರೆಯ ಸಂದರ್ಭದಲ್ಲಿ ಅವರನ್ನು ಸ್ವಾಮಿ ದರ್ಶನ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 47ನೇ ಬಾರಿ ಯಾತ್ರೆಯನ್ನು ಕೈಗೊಂಡ ಎಲ್‌ಐಸಿ ರಘುಚಂದ್ರ ಗುರುಸ್ವಾಮಿ ವಡೇರ ಹೋಬಳಿ ಹಾಗೂ ಕಲಾವಿದ ಸತೀಶ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಶಂಕರ ಗುರುಸ್ವಾಮಿಯವರ 36ನೇ ವರ್ಷದ ಶಬರಿ ಮಲೈಯಾತ್ರೆಯ ಸಂದರ್ಭದಲ್ಲಿ ಸ್ವಾಮಿ ದರ್ಶನದಲ್ಲಿ ಕಲಾವಿದ ಸತೀಶ ಪೂಜಾರಿ ರಚಿಸಿದ ವಿಶೇಷ ಕಲಾಕೃತಿ ಸಾರ್ವಜನಿಕರ ಮನಸ್ಸನ್ನು ಸೊರೆಗೊಂಡಿತು.
ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನ ಬಕುಳ ಸಾಹಿತ್ಯ ವೇದಿಕೆಗಳ ಆಶ್ರಯದಲ್ಲಿ ಸಮುದಾಯ ರೆಪರ್ಟರಿಯ ‘ಕಾವ್ಯರಂಗ’ ಪ್ರಯೋಗ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಲಾಯಿತು. ಶಾಸನ ಪದ್ಯಗಳಿಂದ ಹಿಡಿದು ಇತ್ತೀಚಿನವರೆಗಿನ ಕನ್ನಡದ ಕಾವ್ಯವನ್ನು ರಂಗದಲ್ಲಿ ಅಭಿವ್ಯಕ್ತಿಗೊಳಿಸುವ ಈ ರಂಗಪ್ರಯೋಗದಲ್ಲಿ ಕಪ್ಪೆ ಆರಭಟ್ಟನ ಶಾಸನ, ಕವಿರಾಜಮಾರ್ಗ, ಪಂಪನಿಂದ ಮುಂದುವರಿದು ವೈದೇಹಿ, ಪ್ರತಿಭಾ ನಂದಕುಮಾರರವರೆಗಿನ ಮೂವತ್ತೊಂದು ಕಾವ್ಯದ ಹೊಳುಹುಗಳು ಮತ್ತು ಕಥನಗಳು ಈ ಪ್ರಯೋಗದಲ್ಲಿ ವಿದ್ಯಾರ್ಥಿಗಳ ಎದುರಾದವು. ಇವುಗಳಲ್ಲಿ ಕೆಲವನ್ನು ಕಲಾವಿದರು ಹಾಡಿದರು, ಕೆಲವನ್ನು ಅಭಿನಯಿಸಿದರು, ಇನ್ನು ಕೆಲವನ್ನು ವಾಚಿಸಿದರು. ಯಕ್ಷಗಾನದ ಮುಖವಾಡಗಳು ಮತ್ತು ಚೆಂಡೆ ಮದ್ದಲೆಗಳ ಹಿನ್ನೆಲೆಯಲ್ಲಿ ಬರುವ ಕುವೆಂಪುರವರ ರಾಮಾಯಣ ದರ್ಶನಂ ರಂಗಕ್ಕೆ ಅನನ್ಯವಾದ ಗತ್ತನ್ನು ಒದಗಿಸಿದರೆ, ದುಡಿಯ ಸದ್ದಿನೊಂದಿಗೆ ಎದುರಾಗುವ ಕಾರಂತರ ಚೋಮ ವಿದ್ಯಾರ್ಥಿಗಳ ಕಣ್ಣಾಲಿಗಳನ್ನು ತೇವಗೊಳಿಸಿದ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮುಂದೆ ಪ್ರದರ್ಶಿತವಾದ ಈ ರಂಗಪ್ರಯೋಗ ಕಾವ್ಯದ ಅಂತಃಸತ್ವಕ್ಕೆ ಧಕ್ಕೆಯಾಗದ ಹಾಗೆ ಸಮೃದ್ಧ ಓದಿನ ಅನುಭವವನ್ನು ರಂಗದ ಮೂಲಕ ಒದಗಿಸಿತು. ಕಾವ್ಯರಂಗ ಪ್ರದರ್ಶನವನ್ನು ಕುಂದಾಪುರದ ಸ.ಪ.ಪೂ ಕಾಲೇಜಿನ…
ಕುಂದಾಪುರ: ವಿಶ್ವವನ್ನು ಪೋಲಿಯೋ ಮುಕ್ತವಾಗಿಸಬೇಕೆಂದು ರೋಟರಿ ಕಳೆದ ಮೂವತ್ತು ವರ್ಷಗಳಿಂದ ಪಣತೊಟ್ಟಿದೆ. ಭಾರತವೂ ಸೇರಿದಂತೆ ಎಲ್ಲಾ ದೇಶಗಳಲ್ಲಿ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮ ಸಂಪೂರ್ಣವಾಗಿ ಯಶ ಕಂಡಿದ್ದೆ ಆದರೆ ಪಾಕಿಸ್ಥಾನ ಹಾಗೂ ಅಪ್ಘಾನಿಸ್ಥಾನವನ್ನು ಪೋಲಿಯೋ ಮುಕ್ತವಾಗಿಸಲು ಸಾಧ್ಯವಾಗಿಲ್ಲ. ಭಯೋತ್ಪಾದರ ಬೆದರಿಕೆ ಹಾಗೂ ಪೋಲಿಯೋ ಲಸಿಕೆಯ ಕುರಿತ ಅಪಪ್ರಚಾರ ಈ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದೆ ಎಂದು ರೋಟರಿ ಜಿಲ್ಲೆ 3180 ಗವರ್ನರ್ ಡಾ.ಭರತೇಶ್ ಆದಿರಾಜ್ ಆತಂಕ ವ್ಯಕ್ತಪಡಿಸಿದರು. ಕುಂದಾಪುರ ರೋಟರಿ ನರ್ಸರಿ ಸ್ಕೂಲ್ ಹಾಲ್‌ನಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿ, ಪೋಲಿಯೋ ನಿರ್ಮೂಲನೆ ರೋಟರಿ ಸಂಸ್ಥೆಯ ಮುಖ್ಯ ಗುರಿ. ಭಯೋತ್ಪಾದಕರ ಅಪಪ್ರಚಾರ ಮತ್ತು ಬೆದರಿಕೆ ನಡುವೆಯೋ ಪೊಲಿಯೋ ನಿರ್ಮೂಲನೆಯತ್ತ ರೋಟರಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ವಿಶ್ವ ಪೋಲಿಯೋ ಮುಕ್ತವಾಗುವವರೆಗೂ ಪೋಲಿಯೋ ನಿರ್ಮೂಲನೆ ಕಾರ‍್ಯಕ್ರಮ ಮುಂದುವರಿಯಲಿದೆ ಎಂದು ಹೇಳಿದರು. ವಿಶ್ವ ಭ್ರಾತತ್ವ ಹಾಗೂ ಶಾಂತಿ ಎಂಬ ಧ್ಯೇಯವಾಕ್ಯದೊಂದಿಗೆ ರೋಟರಿ ಮುನ್ನಡೆಯುತ್ತಿದ್ದು ಶಾಂತಿ ದೂತರ ಮೂಲಕ ಪ್ರಪಂಚದಾದ್ಯಂತ ಶಾಂತಿ ಸೌಹಾರ್ದತೆಯನ್ನು ಕಾಯುವ ಕೆಲಸ ಮಾಡಲಾಗುತ್ತಿದೆ. ರೋಟರಿಯ ಶಾಂತಿದೂತ…
ಸುನಿಲ್ ಹೆಚ್. ಜಿ. ಬೈಂದೂರು. ಕುಂದಾಪುರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ಪಕ್ಷಾಂತರವೂ ಚುರುಕುಗೊಳ್ಳುತ್ತಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಟಿಕೇಟಿಗಾಗಿ ಈಗಾಗಲೇ ಆಕಾಂಕ್ಷಿಗಳ ತೆರೆಮರೆಯ ಕಸರತ್ತು ನಡೆಯುತ್ತಿದ್ದರೇ, ಯಾರಿಗೆ ಟಿಕೆಟ್ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಪಕ್ಷದ ನಾಯಕರುಗಳು ಮುಳುಗಿದ್ದಾರೆ. ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇರುವುದರಿಂದ ಟಿಕೇಟ್ ನೀಡುವುದು ಕೂಡ ಪಕ್ಷಗಳಿಗೆ ಸವಾಲಾಗಿದೆ ಪರಿಣಮಿಸಿದೆ. ಈ ನಡುವೆ ಪಕ್ಷ, ನಾಯಕರುಗಳೊಂದಿಗೆ ಅಸಮಧಾನಗೊಂಡ ಅಭ್ಯರ್ಥಿಗಳ ಪಕ್ಷಾಂತರ, ಪಕ್ಷೇತರವಾಗಿ ಸ್ವರ್ಥಿಸುವುದಕ್ಕೆ ಅಖಾಡ ಸಿದ್ಧಗೊಳ್ಳುತ್ತಿದೆ. [quote font_size=”15″ bgcolor=”#ffffff” bcolor=”#9eba9c” arrow=”yes” align=”right”]* ಬಿಜೆಪಿ ಪಕ್ಷದಲ್ಲಿ ಇಷ್ಟು ವರ್ಷಗಳ ಕಾಲ ಸಕ್ರೀಯವಾಗಿ ತೊಡಗಿಸಿಕೊಂಡು ತನ್ನಿಂದಾದ ಕೆಲಸವನ್ನು ಮಾಡಿದ್ದೇನೆ. ಆದರೆ ಅಲ್ಲಿನ ಕೆಲವು ನಾಯಕರುಗಳ ಗುಂಪುಗಾರಿಕೆ, ಕೆಲಸ ಮಾಡುವವರಿಗೂ ಅವಕಾಶ ನೀಡದಿರುವುದು ನನಗೆ ಬೇಸರ ತರಿಸಿತ್ತು. ಹಾಗಾಗಿ ರಾಜಿನಾಮೆ ನೀಡಿದ್ದೇನೆ. ಮುಂದಿನ ನಡೆ ಸದ್ಯದಲ್ಲಿಯೇ ತಿಳಿಯಲಿದೆ – ಗೌರಿ ದೇವಾಡಿಗ[/quote] ಬಿಜೆಪಿ ಪಕ್ಷದ ಚುನಾಯಿತ ಪ್ರತಿನಿಧಿ, ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಮನೆ ನಿವೇಶನ, ಕೃಷಿ, ತೋಟಗಾರಿಕೆ, ಆರೋಗ್ಯ, ಸಮಾಜ ಕಲ್ಯಾಣ, ಲೋಕೋಪಯೋಗಿ ಹಾಗೂ ಇತರ ಇಲಾಖೆಗಳ ಪ್ರಗತಿಯ ಬಗ್ಗೆ ಅವಲೋಕಿಸಿದ ಬಳಿಕ ಮಾತನಾಡಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಂಡು ಜನರಿಗೆ ಹೆಚ್ಚಿನ ಸೌಲಭ್ಯ ನೀಡುವತ್ತ ಗಮನ ಹರಿಸಬೇಕಿದೆ. ಅಧಿಕಾರಿಗಳು ಈ ಬಗ್ಗೆ ಮತ್ತಷ್ಟು ನಿಗಾವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು. ತೋಟಗಾರಿಕಾ ಇಲಾಖೆಯನ್ನು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು, ರೈತರಿಗೆ ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರೇ, ಕೃಷಿ ಇಲಾಖೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡಲಾದ ಪರಿಹಾರ, ಭೂ ಸಮೃದ್ಧಿ ಯೋಜನೆ, ಸೇವಾ ಕೇಂದ್ರ ಮುಂತಾದವುಗಳ ಬಗ್ಗೆ ವಿವರಿಸಿದರು. ಅಕ್ಷರ ದಾಸೋಹದಲ್ಲಿ ಅಕ್ಕಿ ಹಾಗೂ ಗೋಧಿಯಲ್ಲಿ ಹುಳುಗಳಿರುವ ಬಗ್ಗೆ ಅಳಲು ತೋಡಿಕೊಂಡು ಅಧಿಕಾರಿ ಪ್ರತಿ ಮೂರು ತಿಂಗಳ…
ಕುಂದಾಪುರ: ಕಾಂಗ್ರೆಸ್ ಸರಕಾರ ನೀಡಿದ ಬಹುಪಾಲು ಭರವಸೆಗಳನ್ನು ಪೂರೈಸಿದ ಸಂತೋಷವಿದೆ. ಇನ್ನಷ್ಟು ಜನಪರ ಕಾರ್ಯಗಳನ್ನು ಮಾಡಲು ಸರಕಾರ ಸಿದ್ಧವಿದೆ ಎಂದು ಜಿಲ್ಲಾ ಉಸ್ತುವಾರಿ ವಿನಯ್ ಕುಮಾರ್ ಸೊರಕೆ ಹೇಳಿದರು. ಕುಂದಾಪುರ ಕುಂದಾಪುರದ ಆರ್‌ಎನ್ ಶೆಟ್ಟಿ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಆಶ್ರಯ ಮನೆಗಳಿಗೆ ಬಡ್ಡಿ ಸಮೇತ ಸಾಲು ಕಟ್ಟಲು ಭಾಕಿ ಇರುವವರ ಸಾಲಮನ್ನಾ ಮಾಡಲಾಗಿದ್ದು. ಪ್ರಮಾಣ ಪತ್ರವನ್ನು ಕೂಡ ಹಲವು ಮನೆಗಳಿಗೆ ನೀಡಲಾಗಿದೆ. ಸ್ತ್ರೀ ಶಕ್ತಿ ಸಂಘಗಳಿಗೆ ೫೦೦೦ ಸುತ್ತು ನಿಧಿಯನ್ನು ನೀಡಲಾಗುತ್ತಿದ್ದು. ಈ ಸುತ್ತು ನಿಧಿಯನ್ನು ಐದುಸಾವಿರದಿಂದ ಇಪ್ಪತೈದುಸಾವಿರಕ್ಕೆ ಏರಿಸಲಾಗಿದೆ. ಎಂದರು. ನಂತರ ಜನರಿಂದ ಅಧಿಕಾರಿಗಳಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಹೊಸ ಪಂಚಾಯತ್‌ಗಳಿಗೆ ದಾನ ಬಿಡುಗಡೆಯಾಗುತ್ತದೆ ಎಂದರು. ರೇಷನ್‌ಕಾರ್ಡ್ ವಿತರಣೆ ಮಾಡಿ ಕೆಲವು ದಿನಗಳ ಬಳಿಕ ಅದನ್ನು ರದ್ದುಗೊಳಿಸಲಾಗುತ್ತದೆ. ಇದರಿಂದ ಬಡ ಜನರಿಗೆ ತೊಂದರೆಯಾಗುತ್ತಿದೆ. ಎಂಬ ಪ್ರಶ್ನೆಗೆ ಉತ್ತರಿಸಿದ ಸೊರಕೆ ಈ ಹಿಂದಿನ ಸರ್ಕಾರವಿದ್ದಾಗ ಶೆ. 30ರಷ್ಟು ಮಾತ್ರ ರೇಷನ್ ಕಾರ್ಡ್ ವಿತರಣೆ ಮಾಡಲಾಗಿತ್ತು. ನಾವು…
