Author: ನ್ಯೂಸ್ ಬ್ಯೂರೋ

ಬೈಂದೂರು: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳಿಗೆ ಹಂತ ಹಂತವಾಗಿ ಜಾರಿಗೆ ತರಲಗುತ್ತಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಖಂಬದಕೋಣೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಸಭಾಭವನಕ್ಕೆ ಸರಕಾರದಿಂದ ಘೋಷಣೆಯಾಗಿರುವ ರೂ. ಒಂದು ಕೋಟಿ ಮೊತ್ತದಲ್ಲಿ ಎರಡನೇ ಕಂತಿನ ರೂ. 50 ಲಕ್ಷದ ಚೆಕ್ ಹಸ್ತಾಂತರಿಸಿ ಮಾತನಾಡಿದರು. ಮೊದಲ ಕಂತು ರೂ. 25 ಲಕ್ಷ ಈಗಾಗಲೆ ನೀಡಿದ್ದು, ಕೊನೆಯ ಹಂತದ ರೂ. 25 ಲಕ್ಷಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಸಂಘದ ಅಧ್ಯಕ್ಷರು ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಇನ್ನೂ ಹೆಚ್ಚಿನ ಅನುದಾನದ ಬೇಡಿಕೆಯಿಟ್ಟಿದ್ದು, ಮುಖ್ಯಮಂತ್ರಿಯೋದಿಗೆ ಸಮಾಲೋಚಿಸಿ ಈ ಕುರಿತು ನಿರ್ಧರಿಸಲಾಗುವುದು ಎಂದರು. ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಅಧ್ಯಕ್ಷತೆವಹಿಸಿದ್ದರು. ಈ ಭಾಗದಲ್ಲಿ ಉಪ್ಪುನೀರಿನ ಸಮಸ್ಯೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ, ತಡೆಗೋಡೆ ನಿರ್ಮಿಸಬೇಕು ಮತ್ತು ಈ ಭವನಕ್ಕೆ ರೂ. ೬ ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಹಣದ…

Read More

ಕುಂದಾಪುರ: ಸತತ ಮೂವತ್ತು ವರ್ಷಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯನಾಗಿ ಜನಪ್ರಿಯರಾಗಿದ್ದ ಗಂಗೊಳ್ಳಿಯ ಬೀಚ್ ರಸ್ತೆ ನಿವಾಸಿ ಎಡ್ವರ್ಡ್ ಕಾರ್ಡಿನ್(63) ಎಂಬವರು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಚರ್ಚ್ ರಸ್ತೆಯ ಮಲ್ಯರಬೆಟ್ಟು ಸ್ಮಶಾನ ಬಳಿ ಮೀನು ಸಾಗಾಟದ ಇನ್ಸುಲೇಟರ್ ಲಾರಿಯೊಂದು ಗುದ್ದಿ ಸಾವಪ್ಪಿದ್ದಾರೆ. ಸಂಜೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳ ಸಹಿತ ಓರ್ವ ಹೆಣ್ಣು ಮಗಳನ್ನು ಕಾರ್ಡಿನ್ ಅಗಲಿದ್ದಾರೆ. ಬಂದರು ರಸ್ತೆಯಲ್ಲಿ ಇಸ್ತ್ರಿ ಅಂಗಡಿ ಹೊಂದಿದ್ದ ಕಾರ್ಡಿನ್ ಗಂಗೊಳ್ಳಿ ಇಗರ್ಜಿಯ ಚಟುವಟಿಕೆಗಳಲ್ಲಿ ತನ್ನ ಇಳಿ ವಯಸ್ಸಲ್ಲೂ ಸಕ್ರಿಯರಾಗಿದ್ದರು. ಎರಡು ಬಾರಿ ಗಂಗೊಳ್ಳಿ ಚರ್ಚ್ ಪ್ಯಾರಿಶ್ ಕೌನ್ಸಿಲ್ ಸದಸ್ಯರಾಗಿ ಸೇವೆಸಲ್ಲಿಸಿದ್ದು, ಜನಪ್ರಿಯರಾಗಿದ್ದರು. ದಾಖಲೆ ಎಂಬಂತೆ ಸತತವಾಗಿ ಆರು ಬಾರಿ ಗ್ರಾ.ಪಂ. ಸದಸ್ಯನಾಗಿ ಆಯ್ಕೆ ಯಾಗುತ್ತಿದ್ದ ಇವರು ಪರಿಸರದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ವಿದೇಶದಲ್ಲಿರುವ ಮಕ್ಕಳು ಆಗಮಿಸಿದ ನಂತರ ಅಂತ್ಯ ಕ್ರಿಯೆ ಜರಗಲಿದೆ.. ಲಾರಿ ಚಾಲಕ ಸತೀಶ್ ವಿರುದ್ಧ ಗಂಗೊಳ್ಳಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಣ ಹಾಗೂ ಚಿನ್ನಕ್ಕಾಗಿ ಪಕ್ಕದ ಮನೆಯ ಸಂಬಂಧಿಗಳನ್ನೇ ಇರಿದು ಕೊಲೆಗೆ ಯತ್ನಿಸಿದ ಅಮಾನುಷ ಕೃತ್ಯವೊಂದು ಇಂದು ಮುಂಜಾನೆ ವೇಳೆಗೆ ತಾಲೂಕಿನ ಕೋರ್ಗಿ ಗ್ರಾಮದ ಹೊಸ್ಮಠ ಎಂಬಲ್ಲಿ ನಡೆದಿದೆ. ಕೋರ್ಗಿ ಗ್ರಾಮದ ಹೊಸ್ಮಠ ಮಕ್ಕಿಮನೆ ನಿವಾಸಿಗಳಾದ ಕೃಷ್ಣಪ್ಪ ಶೆಟ್ಟಿ (75), ಕೊರಗಮ್ಮ ಶೆಡ್ತಿ(85), ಚಂದ್ರಮ್ಮ ಶೆಡ್ತಿ(38) ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದಾರೆ. ಹಲ್ಲೆ ನಡೆಸಿದ ರಂಜಿತ್ ಶೆಟ್ಟಿ (25)ಯನ್ನು ಬಂಧಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಘಟನೆಯ ವಿವರ: ಬೆಳಗಿನ ಜಾವ 3:30ರ ಸುಮಾರಿಗೆ ಪಕ್ಕದ ಚಿಕ್ಕಮ್ಮನ ಮನೆಯ ಬಳಿ ಬಂದ ರಂಜಿತ್ ಶೆಟ್ಟಿ ಹೊಟ್ಟೆ ನೋವಿನ ನೆಪವೊಡ್ಡಿ ಬಾಗಿಲು ತೆರೆಯುವಂತೆ ಬೇಡಿಕೊಂಡಿದ್ದಾರೆ. ಮೊದಲಿ ಅನುಮಾನಗೊಂಡ ಮನೆಯವರು ಆತ ಅಂಗಲಾಚುತ್ತಿರುವುದನ್ನು ಕಂಡು ಬಾಗಿಲು ತೆರೆಯುತ್ತಾರೆ. ಮನೆಯೊಳಕ್ಕೆ ಬಂದ ರಂಜಿತ್ ಶೆಟ್ಟಿ ಮನೆಯಲ್ಲಿದ್ದ ಚಂದ್ರಮ್ಮ ಶೆಡ್ತಿ, ಕೊರಗಮ್ಮ ಶೆಡ್ತಿ ಹಾಗೂ ಕೃಷ್ಣಪ್ಪ ಶೆಟ್ಟಿ ಅವರ ಮೇಲೆ ಏಕಾಏಕಿ ಕತ್ತಿಯಿಂದ ಹಲ್ಲಿಗೆ ಮುಂದಾಗಿದ್ದಾನೆ. ಹಠಾತ ಬೆಳವಣಿಗೆಯಿಂದ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಮನಸೋ…

Read More

ಕುಂದಾಪುರ: ಜಿಎಸ್‌ಬಿ ಸಭಾ ಕಲ್ಯಾಣಪುರ ಇವರ ಆಶ್ರಯದಲ್ಲಿ ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ಜರಗಿದ ಜಿಎಸ್‌ಬಿ ಸಮಾಜಬಾಂಧವರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಆಹ್ವಾನಿತ ತಂಡಗಳ ಹೊನಲು ಬೆಳಕಿನ 40 ಗಜಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಹರಿಓಂ ಕ್ರಿಕೆಟ್ ತಂಡವು ಕಲ್ಯಾಣಪುರದ ಕೆಎಫ್‌ಸಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 2015ನೇ ಸಾಲಿನಲ್ಲಿ ನಡೆದ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕೂಡ ಗಂಗೊಳ್ಳಿಯ ಹರಿಓಂ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತ್ತು.

Read More

ಬೈಂದೂರು: ಲೋಕೋಪಯೋಗಿ ಇಲಾಖೆಯಿಂದ ಕಾಂಕ್ರೀಟಿಕರಣಗೊಂಡ ಕಾಲ್ತೋಡು ಪೈನಾಡಿ ರಸ್ತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ದೇವಾಡಿಗ, ಉಪಾಧ್ಯಕ್ಷೆ ವಸಂತಿ, ಸದಸ್ಯರಾದ ಪರಂಜ್ಯೋತಿ ಐತಾಳ್, ಶೇಷು ದೇವಾಡಿಗ, ಮಾಜಿ ತಾಲೂಕು ಪಂಚಾಯತ್ ಸದಸ್ಯ ವಿಜಯ ಶೆಟ್ಟಿ, ಲೋಕೋಪಯೋಗಿ ಇಂಜಿನೀಯರ್ ಚಂದ್ರಶೇಖರ್, ಗುತ್ತಿಗೆದಾರ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ಬಲಗೋಡು ಕಂಬಳಗದ್ದೆ ಕಿಂಡಿ ಅಣ್ಣೆಕಟ್ಟು ಕಾಮಗಾರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಣ್ಣಪ್ಪ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ವಿಜಯ ಶೆಟ್ಟಿ, ಇಂಜಿನೀಯರ್ ಹೆಮಂತ್ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರವಾನಿಗೆ ದೊರೆತರೂ ಬಸ್ ಓಡಲಿಲ್ಲ, ವಾರಾಹಿ ಗೊಂದಲವೂ ಬಗೆಹರಿಯಲಿಲ್ಲ. ಅಧಿಕಾರಿಗಳನ್ನೂ ಸಾಮಾನ್ಯ ಸಭೆಗೆ ಕರೆಸಲಾಗಿಲ್ಲ. ಗೂಡಂಗಡಿಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಮಧ್ಯ ಮಾರಾಟ ನಿಲ್ಲಲಿಲ್ಲ. ಹೊಸ್ಕೋಟೆ ಶಾಲೆ ಹೆಸರಿಗೆ ಜಾಗ ಸಿಕ್ಕರೂ ಇನ್ನೂ ಅಳತೆ ಮಾಡಿಲ್ಲ. ಕಸ್ತೂರಿ ರಂಗನ್ ವರದಿಯಿಂದ ಬೇಸತ್ತ ಸದಸ್ಯರು ನೀಡಿದ ರಾಜಿನಾಮೆಯೂ ಅಂಗೀಕಾರವಾಗಿಲ್ಲ! ಕುಂದಾಪುರ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೊನೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ವಿಷಯ ಪ್ರಸ್ತಾಪಿಸುತ್ತಾ ತಮ್ಮ ವಿಷಾದ ವ್ಯಕ್ತಪಡಿಸಿದ ಪರಿಯಿದು. ತಾಲೂಕು ಪಂಚಾಯತ್ ನಲ್ಲಿ ಐದು ವರ್ಷದ 32 ಸಾಮಾನ್ಯ ಸಭೆಗಳಲ್ಲಿ ಬಹುಪಾಲು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉತ್ತರ ದೊರೆತಿದೆಯೇ ಹೊರತು ಈವರೆಗೆ ಪರಿಹಾರ ಕಂಡಿಲ್ಲ. ಪ್ರಶ್ನೋತ್ತರ ಕಲಾಪದಿಂದ ಸಾಧಿಸಿದ್ದೇನು ಇಲ್ಲ ಎಂದು ಕೆಲವರು ಅವಲತ್ತುಕೊಳ್ಳುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಸಾರಿಗೆ ವಾಹನ ಸಂಚಾರಕ್ಕೆ ಪರವಾನಿಗೆ ಸಿಕ್ಕಿದ್ದು, ಟೈಮಿಂಗ್ ಸಿಗದೆ ಬಸ್ ಸಂಚಾರ ಇಲ್ಲ. ಕೊನೆ ಸಾಮಾನ್ಯ ಸಭೆಯಲ್ಲಿ ಬಸ್ ಸಂಚಾರಕ್ಕೆ ಒತ್ತು ಕೊಡುವಂತೆ ನಿರ್ಣಯ ಮಾಡಿ…

Read More

ಕುಂದಾಪುರ: ನಾಡ-ಸೇನಾಪುರ ರಸ್ತೆ ಮರುಡಾಂಬರೀಕರಣ ಕಾಮಗಾರಿಯು ಕಳಪೆಯಾಗಿದ್ದು, ಶಾಸಕರ ನಿಧಿ ಹಣ ದುರುಪಯೋಗಪಡಿಸಲಾಗಿದೆ ಎಂದು ಸಿಪಿಎಂ ಬೈಂದೂರು ವಲಯ ಸಮಿತಿ ಆರೋಪಿಸಿದೆ. ಕಳೆದ ಹಲವಾರು ಸಮಯದಿಂದ ನಾಡ-ಸೇನಾಪುರ ರಸ್ತೆ ದುರಸ್ತಿಯಲ್ಲಿದ್ದು ಗ್ರಾಮದ ಜನರು ಪ್ರಯಾಣ ಮಾಡಲು ಚಿತ್ರಹಿಂಸೆ ಅನುಭವಿಸುತ್ತಿದ್ದರು. ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ ಸಿಪಿಎಂ ಹೋರಾಟ ನಡೆಸಿ ಮನವಿ ನೀಡಿದ ನಂತರ ಶಾಸಕರ ನಿಧಿಯಿಂದ ಮರುಡಾಂಬರೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಗೆ 20 ಎಂಎಂ, 10 ಎಂಎಂ. ಹಾಗೂ 06 ಎಂಎಂ ಜೆಲ್ಲಿ ಮಿಶ್ರಣ ಮಾಡಿ ಮಾಡಬೇಕಾದ ರಸ್ತೆ ಕಾಮಗಾರಿಯನ್ನು ಕೇವಲ 10 ಎಂಎಂ ಮತ್ತು 06 ಎಂಎಂ ಮಾತ್ರ ಮಿಶ್ರಣ ಮಾಡಿ ಕಳಪೆ ಕಾಮಗಾರಿ ಮಾಡಿ ಜನರ ಹಣ ಲೂಟಿ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆಯು ನಿಧಿ ದುರ್ಬಳಕೆಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಸಿಪಿಎಂ ಒತ್ತಾಯಿಸಿದೆ. ಇಲ್ಲವಾದಲ್ಲಿ ಸಿಪಿಎಂ ಪಕ್ಷ ಹೋರಾಟ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದೆ.

Read More

ಕುಂದಾಪುರ: ಸಮುದಾಯ ರೆಪರ್ಟರಿಯ ಮೃತ್ಯುಂಜಯ ನಾಟಕವನ್ನು ಕುಂದಾಪುರದ ರೋಟರಿ ಕಲಾಮಂದಿರದಲ್ಲಿ ಪ್ರದರ್ಶಿಸಲಾಯಿತು. ಪ್ರದರ್ಶನದ ಆರಂಭದಲ್ಲಿ ಬಸ್ರೂರಿನ ಶಾರದಾ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ ಸಮುದಾಯದ ಜೀವನ ಪ್ರೀತಿಯ ನಡೆಗಳನ್ನು ಶ್ಲಾಘಿಸಿ, ಪ್ರದರ್ಶನಕ್ಕೆ ಶುಭ ಹಾರೈಸಿದರು. ರೆಪರ್ಟರಿಯ ವ್ಯವಸ್ಥಾಪಕ ದೇವೇಂದ್ರ ಗೌಡ ರೆಪರ್ಟರಿಯ ಮುಂದಿನ ದಿನಗಳ ಪ್ರವಾಸದ ಪರಿಚಯ ಮಾಡಿದರು. ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವಕಾರ ಮಾತನಾಡಿ ಕಲೆ ಕೇವಲ ಮನರಂಜನೆಗಾಗಿ ಎಂಬ ಲೋಲುಪತೆಯಿಂದ ಹೊರಬಂದು ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಸುತ್ತಾ, ಸ್ಪಂದಿಸುತ್ತಾ ರಂಗಭೂಮಿಯನ್ನು ಸಮಕಾಲೀನಗೊಳಿಸುವ ಜವಾಬ್ಧಾರಿ ಸಮುದಾಯ ರೆಪರ್ಟರಿಯ ಮೇಲಿದೆ ಎಂದರು. ಮೃತ್ಯುಂಜಯ ನಾಟಕವನ್ನು ನಿರಂಜನರ ಮೃತ್ಯುಂಜಯ ಮತ್ತು ಚಿರಸ್ಮರಣೆ ನಾಟಕಗಳನ್ನು ಸಂಕರಗೊಳಿಸಿ ಡಾ. ಎಮ್. ಜಿ. ಹೆಗಡೆ ರಚಿಸಿದ ರಂಗಪಠ್ಯವನ್ನು ಡಾ. ಶ್ರೀಪಾದ ಭಟ್ ರೆಪರ್ಟರಿಗಾಗಿ ನಿರ್ದೇಶಿಸಿರುವರು. ಒಂದು ಚಾರಿತ್ರಿಕ ಸಂದರ್ಭದಲ್ಲಿ, ಕನ್ನಡ ರಂಗಭೂಮಿಗೆ ಹೊಸದಿಕ್ಕನ್ನೂ ಕನ್ನಡದ ಅಭಿವ್ಯಕ್ತಿಗೆ ಹೊಸ ಚಿಂತನ ಕ್ರಮಗಳನ್ನೂ ಒದಗಿಸಿದ ಸಮುದಾಯ ಸಂಘಟನೆಯು ಮತ್ತೊಂದು ಮಹತ್ವದ ಪ್ರಯತ್ನದಲ್ಲಿ ಸಮುದಾಯ ಕರ್ನಾಟಕ ರೆಪರ್ಟರಿಯನ್ನು ಆರಂಭಿಸಿದೆ.

Read More

ಬೈಂದೂರು: ಬೈಂದೂರು ವಲಯ ಮಟ್ಟದ ಓದು-ಬರಹ ಅಭಿವ್ಯಕ್ತಿ ಸಾಮರ್ಥ್ಯ ಸ್ಪರ್ಧಾ ಕಾರ್ಯಕ್ರಮ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಉಪ್ಪುಂದದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಇದೊಂದು ಮುಖ್ಯ ವೇದಿಕೆಯಾಗಿದೆ, ಗುಣಾತ್ಮಕ ಕಲಿಕೆಯನ್ನು ಪ್ರೋತ್ಸಾಹಿಸಲು, ಮಕ್ಕಳಲ್ಲಿರುವ ಸೃಜನಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲು ಹಾಗೂ ಸ್ಪರ್ಧಾ ಮನೋಭಾವನೆಯನ್ನು ಬೆಳೆಸಲು ಇಂತಹ ಕಾರ್ಯಕ್ರಮ ನೆರವಾಗುವುದು ಎಂದು ಅಭಿಪ್ರಾಯಪಟ್ಟರು. ಶ್ರೀ ವೆಂಕಟರಮಣ ಎಜ್ಯುಕೇಶನ್ ಟ್ರಸ್ಟ್ ಉಪ್ಪುಂದ ಇದರ ಸ್ಥಾಪಕ ಅಧ್ಯಕ್ಷ ಗಣೇಶ್ ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಂದೂರು ವಲಯ ಶಿಕ್ಷಕ ಸಂಘದ ವಿವಿಧ ಪದಾಧಿಕಾರಿಗಳು, ಸಂಸ್ಥೆಯ ಕಾರ್ಯದರ್ಶಿ ರಾಜಾರಾಮ್ ಭಟ್, ಮಖ್ಯೋಪಾಧ್ಯಾಯ ರವಿದಾಸ್ ಶೆಟ್ಟಿ, ಬಿ.ಆರ್.ಪಿ ಸುಮಲತಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಜೊತೆಗೆ ಶಿಶು ಆಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಭಾಗಿತ್ವದೊಂದಿಗೆ ವಿಜ್ಞಾನ…

Read More

ಕುಂದಾಪುರ: ರಾಜ್ಯ ಸರಕಾರವು ಭಾಗ್ಯಗಳ ನಡುವೆ ರಾಜ್ಯದ ಅಭಿವೃದ್ಧಿಯನ್ನೇ ಮರೆತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಜನರಿಗೆ ಅವಶ್ಯವಿರುವುದನ್ನು ಮಾಡುವುದನ್ನು ಬಿಟ್ಟು ತಾವು ಅಂದುಕೊಂಡಿದ್ದನ್ನೇ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಒಂದು ಬಜೆಟ್ ಮಂಡಿಸಿ ಮತ್ತೊಂದು ಬಜೆಟ್ ಮಂಡನೆಗೆ ಕಾಲ ಸನ್ನಿತವಾಗುತ್ತಿದ್ದರು ಬಜೆಟ್‌ನಲ್ಲಿ ಮೀಸಲಿಟ್ಟ ಹಣದಲ್ಲೇ ಶೇ.25 ರಷ್ಟು ಅನುದಾನ ಬಳಕೆಯಾಗಿಲ್ಲ. ಬಜೆಟ್‌ನಲ್ಲಿ ಸಂಗ್ರಹವಾದ ಹಣ, ಖರ್ಚು, ಹಾಗೂ ಕೊರೆತೆ ಬಗ್ಗೆ ಮಾಹಿತಿಯೂ ಸಿಗುತ್ತಿಲ್ಲ ಎಂದು ಉಡುಪಿ-ಚಿಕ್ಕಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಆರೋಪಿಸಿದರು ಕೋಟೇಶ್ವರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರ ಸರಕಾರ ಗ್ರಾಮೀಣ ಅಭಿವೃದ್ಧಿ ದೃಷ್ಟಿಯಲ್ಲಿ ಗ್ರಾಮ ಪಂಚಾಯತಿಗಳಿಗೆ ನೇರ ಅನುದಾನ ಬಿಡುಗಡೆ ಮಾಡಿದರೆ, ರಾಜ್ಯ ಸರಕಾರಕ್ಕೆ ಕೇಂದ್ರ ಬಿಡುಗಡೆ ಮಾಡಿದ ಅನುದಾನದಲ್ಲಿ ಗ್ರಾಪಂ ಬಾಕಿ ವಿದ್ಯುತ್ ಬಿಲ್ಲಿಗೆ ಬಳಸಿಕೊಳ್ಳುವಷ್ಟು ದಾರಿದ್ರ್ಯ ಬಂದೊದಗಿದೆ. ಗ್ರಾಮೀಣ ಅಭಿವೃದ್ಧಿಗಾಗಿ ಕೇಂದ್ರ ಸರಕಾರದ ಅನುದಾನವನ್ನು ಇಲಾಖೆ ಅಧಿಕಾರಿಗಳು ಬ್ಯಾಂಕಿನಲ್ಲಿಟ್ಟು ಬಡ್ಡಿ ಪಡೆಯುತ್ತಿದ್ದ ಬಗ್ಗೆ ಸಚಿವ ಎಚ್.ಕೆ.ಪಾಟೀಲ್ ಅವರರೇ ಪ್ರಸ್ತಾಪಿಸಿದ್ದರು. ರಾಜ್ಯದಲ್ಲಿ ಕೆಲಸ ಮಾಡದಿದ್ದರು, ಸರ್ಟಿಫಿಕೇಟ್ ನೀಡಿ, ಅನುದಾನದ ದುರುಪಯೋಗ…

Read More