ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್, ಕೈಂಡ್ ಹಾರ್ಟ್ಸ್ ಬಾಳ್ಕುದು, ಶ್ರೀ ವೇಣುಗೋಪಾಲಕೃಷ್ಣ ಎಜ್ಯುಕೇಶನಲ್ ಸೊಸೈಟಿ ಮೂಡುಕೇರಿ ಬಾರ್ಕೂರು, ಉಸಿರು ಕೋಟ ಇವರ ಆಸರೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಇದೇ ನವೆಂಬರ್ ತಿಂಗಳ 23 ರಂದು ನಡೆಯುವ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಗುಂಡ್ಮಿ ಉಮೇಶ ಪೂಜಾರಿ ಹಾಗೂ ವಸಂತಿ ಪೂಜಾರಿ ಅವರ ಪುತ್ರಿ, ವಿವೇಕ ಬಾಲಕಿಯರ ಪ್ರೌಢಶಾಲೆಯ 10ನೆಯ ತರಗತಿ ವಿದ್ಯಾರ್ಥಿನಿ ಬಹುಮುಖ ಪ್ರತಿಭೆಯ ಉನ್ನತಿ ಹಂದಟ್ಟು ಆಯ್ಕೆಯಾಗಿದ್ದಾರೆ. ಈಕೆ ಯಕ್ಷಗಾನ, ನಾಟಕ, ಹಾಡು ಮೊದಲಾದ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ, ಅಂದು ನಡೆಯುವ ಮಕ್ಕಳ ಕವಿಗೋಷ್ಠಿ ಮಕ್ಕಳ ಸಾಂಸ್ಕೃತಿಕ ಉತ್ಸವ ಮತ್ತು ಕಾರಂತ ಬಾಲಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಆನಂದ ಸಿ. ಕುಂದರ್, ಅಧ್ಯಕ್ಷರಾದ ಸತೀಶ ಕುಂದರ್ ಬಾರಿಕೆರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕೈಂಡ್ ಹಾರ್ಟ್ಸ್‌ನ ಸ್ಟೀಫನ್ ಲೂಯಿಸ್, ಶ್ರೀ ವೇಣುಗೋಪಾಲಕೃಷ್ಣ ಎಜ್ಯುಕೇಶನಲ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್ ಉಡುಪಿ ಜಿಲ್ಲೆ, ಗ್ರಾಮ ಪಂಚಾಯತ್ ಗಂಗೊಳ್ಳಿ, ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ, ಅಮೃತಾ ಯುವತಿ ಮಂಡಲ, ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ಮತ್ತು ಬೈಂದೂರು ಬ್ಲಾಕ್ ಮಟ್ಟದ ಕ್ರೀಡಾಕೂಟ-2025 ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಕ್ರೀಡಾಪಟುಗಳು ಇಂತಹ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು. ಉದ್ಯಮಿ ಸೀತಾರಾಮ ಗಾಣಿಗ ಕೊಡಪಾಡಿ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಅಕ್ಕಮ್ಮ, ಯುವತಿ ಮಂಡಲದ ಅಧ್ಯಕ್ಷೆ ಶಕುಂತಲಾ, ಮಹಿಳಾ ಮಂಡಲ ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದರು. ಯುವಕ ಮಂಡಲ ಅಧ್ಯಕ್ಷ ನಾಗೇಶ ಸ್ವಾಗತಿಸಿದರು. ಯುವತಿ ಮಂಡಲ ಕಾರ್ಯದರ್ಶಿ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕಗಳ (1 ಮತ್ತು 2) ಆಶ್ರಯದಲ್ಲಿ ‘ಒಂದು ದಿನದ ವಿಶೇಷ ಶಿಬಿರ’ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ ಅಲ್ಲಿ ನಡೆಯಿತು. ಶ್ರೀ ವಿನಾಯಕ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ರಮಣ ಉಪಾಧ್ಯಾಯ ಶಿಬಿರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪುರೋಹಿತ ವೃಂದದವರು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ ಹಾಗೂ ಪೂಜಾ ಕುಂದರ್, ಪ್ರಾಧ್ಯಾಪಕರಾದ ಸತೀಶ್ ಶೆಟ್ಟಿ, ಪ್ರವೀಣ್ ಮೊಗವೀರ, ಹರೀಶ್ ಬಿ., ಸುಧೀರ್ ಕುಮಾರ್, ಬೋಧಕೇತರ ಸಿಬ್ಬಂದಿಗಳಾದ ರಕ್ಷಿತ್, ಶರತ್ ಕೊಠಾರಿ, ನಿತೇಶ್, ದೇವಸ್ಥಾನದ ಮ್ಯಾನೇಜರ್ ನಿತೇಶ್ ಕಾರಂತ್, ಗಣೇಶ್ ಅಂಪಾರು ಮತ್ತು ಪ್ರಮೋದ್ ಉಪಾಧ್ಯಾಯ ಆನೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು. ಆನೆಗುಡ್ಡೆ ದೇವಸ್ಥಾನ ಪರಿಸರವನ್ನು ಸ್ವಚ್ಛಗೊಳಿಸುವ ಈ ಶಿಬಿರದಲ್ಲಿ ಕಾಲೇಜಿನ 70 ಸ್ವಯಂಸೇವಕರು ಪಾಲ್ಗೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ ಮತ್ತು ಎಂ.ಸಿ.ಎ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಎಚ್ಆರ್ ಅಡ್ಮಿನಿಸ್ಟ್ರೇಷನ್ ಲೀಡರ್ ಎಂ.ಜಿ.ಎಂ ಹೆಚ್ ಆರ್ ಬ್ರೈಟ್ ಪೇಕ್ಷಿ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ದೇವರಾಜು ರಾಮು ಅವರು ಆಗಮಿಸಿ ಮಾತನಾಡಿ, ಒಬ್ಬ ಉತ್ತಮ ಎಚ್.ಆರ್ ನಲ್ಲಿ ಇರಬೇಕಾದ ಗುಣಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು. ಎಂ.ಬಿ.ಎ ಮತ್ತು ಎಂ.ಸಿ.ಎ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಸ್ವಾಗತಿಸಿದರು. ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾಕ್ಟರ್ ನಂದಿನಿ ಪ್ರಸ್ತಾವಿದರು. ಸಿಂಚನ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಡಿಯಲ್ ಪ್ಲೆ ಅಬಾಕಸ್ ಇಂಡಿಯಾ ಪ್ರೈ. ಲಿಮಿಟೆಡ್ ಇವರ ವತಿಯಿಂದ ಮೂಡುಬಿದಿರೆಯಲ್ಲಿ 20ನೇ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್‌ಮೆಟಿಕ್ 2025 ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಾದ ಅಪ್ರಮೇಯ ಆರ್. ನಾವಡ (3D) ಪ್ರಥಮ ಸ್ಥಾನ, ಕ್ಷಿತಿ (4D) ದ್ವಿತೀಯ ರನ್ನರ್ ಅಪ್, ಅತೀಶ್ ಎಸ್. ಪೂಜಾರಿ (4D) ದ್ವಿತೀಯ ಸ್ಥಾನ ಹಾಗೂ ಅವ್ಯನ್ ಎಸ್. (6B) 4ನೇ ಸ್ಥಾನ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಶ್ವದಾದ್ಯಂತ ನೆಲೆಸಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಜನರು, ಸರಕಾರ ಹಾಗೂ ಉದ್ಯಮಿಗಳು ಬೈಂದೂರಿನತ್ತ ತಿರುಗಿ ನೋಡುವಂತೆ ಮಾಡುವುದು ಮತ್ತು ಆ ಮೂಲಕ ವಿವಿಧ ಆಯಾಮಗಳಲ್ಲಿ ಬೈಂದೂರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಬೈಂದೂರು ಉತ್ಸವದ ಮೂಲ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ವರ್ಷ ಆಯೋಜಿಸಿದ ಬೈಂದೂರು ಉತ್ಸವ ಯಶಸ್ಸನ್ನು ಕಂಡಿದೆ. 2026ರಲ್ಲಿ ಉತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಸಿದ್ಧತೆ ನಡೆಸಿದ್ದು ಜನವರಿ 24, 25 ಹಾಗೂ 26ರಂದು ಬೈಂದೂರು ಉತ್ಸವದ ಕಾರ್ಯಕ್ರಮಗಳು ಹಾಗೂ ಅದಕ್ಕೆ ಪೂರಕವಾಗಿ ಮೊದಲೇ ಗ್ರಾಮೋತ್ಸವ ಕಾರ್ಯಕ್ರಮಗಳು ಜರುಗಲಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ತ್ರಾಸಿಯ ಪ್ರೆಸ್ಟೀಜ್ ಸಭಾಭವನದಲ್ಲಿ ಜರುಗಿದ ಬೈಂದೂರು ಉತ್ಸವದ ದಿನಾಂಕ ಘೋಷಣೆ ಹಾಗೂ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮ ಮನೋರಂಜನಾ ಉದ್ದೇಶಕ್ಕೆ ಮಾತ್ರ ಸೀಮಿತವಾಗಿಸದೇ ವಿವಿಧ ಆಯಾಮಗಳಲ್ಲಿ ಅಭಿವೃದ್ಧಿಯ ಮುನ್ನೋಟ, ಜನರ ಆರೋಗ್ಯ ಹಾಗೂ ಜೀವನಮಟ್ಟ ಸುಧಾರಣೆಯ ದೂರದೃಷ್ಠಿತ್ವನ್ನು ಹೊಂದಿದೆ. ಈ ಭಾರಿ ಕ್ಷೇತ್ರದ ವ್ಯಾಪ್ತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಂಗಳೂರಿನ ಬ್ರಾಹ್ಮೀ ಭಕ್ತವೃಂದ ನವೆಂಬರ್ 15 ಶನಿವಾರ ರಾತ್ರಿ 9:30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೃಷ್ಣಾರ್ಜುನ ಕಾಳಗ, ಭಾರ್ಗವ ವಿಜಯ, ಮೈಂದ ದ್ವಿವಿದ ಮತ್ತು ರುಕ್ಮಾವತಿ ಕಲ್ಯಾಣ ಎಂಬ ಪೌರಾಣಿಕ ಪ್ರಸಂಗದ ಯಕ್ಷಗಾನ ಆಯೋಜಿಸಿದ್ದು, ಯಕ್ಷಾಭಿಮಾನಿಗಳ ಮನರಂಜಿಸಲು ಸಜ್ಜಾಗಿದೆ. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಾದಿಗಳೆಲ್ಲಾ ಸೇರಿ ಮಹಾನಗರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ವೇದಿಕೆಯಲ್ಲಿ ಶ್ರೀ ಕ್ಷೇತ್ರ ಕಮಲಶಿಲೆ ಯಕ್ಷಗಾನ ಮೇಳದ ಮರದ ಹಲಗೆಗಳ ಸಾಂಪ್ರದಾಯಿಕ ರಂಗಸ್ಥಳ ವೈಭವದಲ್ಲಿ ಸಂಯೋಜಿಸುತ್ತಿರುವ ಯಕ್ಷಗಾನ ಬಯಲಾಟ ಯಶಸ್ವಿ 4 ಪ್ರದರ್ಶನ ಕಂಡು, 5ನೇ ವರ್ಷಕ್ಕೆ ಅಂಬೆಗಾಲಿಡುತ್ತಿದೆ. ಕಮಲಶಿಲೆ ಅಮ್ಮನವರ ಬಹು ಬೇಡಿಕೆಯ ಸೇವೆಯಲ್ಲಿ ಒಂದಾದ ಪ್ರೀತಿಯ ಬೆಳಕಿನ ಸೇವೆ ಎಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಸೇವೆಯನ್ನು ಮಹಾ ನಗರಿಯಲ್ಲಿ ಪ್ರದರ್ಶಿಸುವ ಕನಸುಹೊತ್ತ, ಕ್ಷೇತ್ರದಿಂದ ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ಜೀವನ ಕಂಡು “ಒಗ್ಗಟ್ಟಿನಲ್ಲಿ ಬಲವಿದೆ, ಯಕ್ಷ ಸೌರಭದಲ್ಲಿ ನಲಿವಿದೆ, ಯಶಸ್ವಿಯಾಗಲು ತಾಯಿ ಬ್ರಾಹ್ಮೀ ದುರ್ಗೆಯ ಅಭಯವಿದೆ” ಎಂದು ನಂಬಿದ ತಾಯಿಯ ಭಕ್ತರರೆಲ್ಲರೂ ಕೂಡಿಕೊಂಡ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಯಕ್ಷಗಾನದ ಹಿರಿಯ ಕಲಾವಿದರಾದ ಡಾ. ಕೋಳ್ಯೂರು ರಾಮಚಂದ್ರರಾವ್ ಅವರ 94ನೇ ಜನ್ಮ ದಿನಾಚರಣೆಯನ್ನು ಅವರ ಸ್ವಗೃಹ ಉಡುಪಿ ಇನ್ನಂಜೆಯ ಕಲಾಪ್ರಸಾದದಲ್ಲಿ ಬಂಧು ಮಿತ್ರರು ಹಾಗೂ ಶಿಷ್ಯರೊಡಗೂಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪೂರ್ವಾಹ್ನ ದೇವತಾ ಕಾರ್ಯದಿಂದ ಪ್ರಾರಂಭಗೊಂಡು ಪ್ರಾರಂಭಗೊಂಡು ಅಪರಾಹ್ನ ಯಕ್ಷ ಭಾರತಿ (ರೀ) ಬೆಳ್ತಂಗಡಿ ಕನ್ಯಾನ ಶಾಖೆಯವರಿಂದ ಶರಸೆತು ಬಂಧನ ಎಂಬ ತಾಳಮದ್ದಲೆಯನ್ನು ನಡೆಸಲಾಯಿತು ನಂತರ ಅವರ ಶಿಷ್ಯ ಅವರ ಪಾವಂಜೆ ಮೇಳದ ಮುಖ್ಯ ಪಾತ್ರಧಾರಿ ಸುಬ್ರಾಯ ಹೊಳ್ಳ ದಂಪತಿಗಳನ್ನು ಗೌರವಿಸಲಾಯಿತು. ಸುಬ್ರಾಯ ಹೊಳ್ಳರ ಇರು ಪ್ರಾತ್ಯಕ್ಷತೆ ಮತ್ತು ಕೋಳೂರರವರು ತನ್ನ 94ನೇ ವಯಸ್ಸಿನಲ್ಲೂ ತಾಳಮದ್ದಳೆಯಲ್ಲಿ ಶ್ರೀರಾಮನ ಪಾತ್ರನಿರ್ವಹಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು. ಹುಟ್ಟು ಹಬ್ಬದ ಸವಿ ನೆನಪಿಗಾಗಿ ತಮ್ಮದೇ ತೋಟದಲ್ಲಿ ಗಿಡ ನೆಟ್ಟು ಖುಷಿ ಪಟ್ಟರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮಕ್ಕಳು ತಮ್ಮ ಮೇಲೆ ದೌರ್ಜನ್ಯಗಳು ನಡೆದಾಗ ಅದನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳಿಕೊಳ್ಳುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಪೋಕ್ಸೋ ಕಾಯಿದ ಬಗ್ಗೆ ಅರಿವನ್ನು ಹೊಂದುವುದರ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ನೊಂದವರಿಗೆ ಸಹಾಯ ಮಾಡಲು ಸಾಧ್ಯ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪೋಕ್ಸೋ ಸಪೋರ್ಟ್ ಪರ್ಸನ್ ಫಿಲೋಮಿನಾ ಫರ್ನಾಂಡಿಸ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎಸ್.ವಿ ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ಇಲ್ಲಿನ ರೋಟರಿ ಸಭಾಂಗಣದಲ್ಲಿ ನಡೆದ ಪೋಕ್ಸೋ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಥಾಮಸ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿ ಬಿಂದುಶ್ರೀ ಉಪಸ್ಥಿತರಿದ್ದರು. ಎಸ್. ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಕಿತ ಮತ್ತು ಸೃಷ್ಟಿ ಪ್ರಾರ್ಥಿಸಿದರು. ಅಂಕಿತ ಅತಿಥಿಗಳನ್ನು ಪರಿಚಯಿಸಿದರು. ಸುಜಾತ ಸ್ವಾಗತಿಸಿ, ವೈಷ್ಣವಿ …
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವದ ನಿಮಿತ್ತ ನ. 28ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬರಲಿದ್ದು, ಆ ಸಂಬಂಧ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಭೆ ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ಅವರು ಆಗಮಿಸುವ ಸಂದರ್ಭದಲ್ಲಿ ಸ್ಥಳೀಯವಾಗಿ ವಾಹನ ನಿಲುಗಡೆ, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕಾರ್ಯಕ್ರಮಕ್ಕೆ ಬರುವ ಭಕ್ತರಿಗೂ ಯಾವುದೇ ಸಮಸ್ಯೆ ಆಗದಂತೆಯೂ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ಸಲಹೆಗಳನ್ನು ನೀಡಿದರು. ಶಾಸಕರಾದ ವಿ. ಸುನಿಲ್ ಕುಮಾರ್, ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಲಿ, ಗುರುರಾಜ್ ಗಂಟಿಹೊಳೆ ಮೊದಲಾದವರು ಭದ್ರತೆ, ಸುರಕ್ಷೆ ಹಾಗೂ ಕಾರ್ಯಕ್ರಮ ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಹಲವು ಸಲಹೆ ಸೂಚನೆ ನೀಡಿದರು.…
