Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ವಿದ್ಯಾ ದೀವಿಗೆ ಯೋಜನೆಯಡಿ ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ 95 ಶೇಕಡಕ್ಕಿಂತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಯುವ ಸಾಧಕರಿಗೆ ಸನ್ಮಾನ, ದಿ| ಡಾ. ಮಧುಕರ ಶೆಟ್ಟಿ ಐ.ಪಿ.ಎಸ್‌ ಸಂಸ್ಕರಣಾ ಪ್ರಶಸ್ತಿ -2025, ದಿ. ಡಾ. ಗೋಪಾಲ ಕೃಷ್ಣ ಶೆಟ್ಟಿ ಸಂಸ್ಕರಣಾ ಪ್ರಗತಿಪರ ಕೃಷಿಕ ಪ್ರಶಸ್ತಿ, ಹಿರಿಯ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಅಗಸ್ಟ್‌ 24ರ ಭಾನುವಾರ ಬೆಳಿಗ್ಗೆ ಇಲ್ಲಿನ ಆರ್‌. ಎನ್‌.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್‌ ಶೆಟ್ಟಿ ಬಸ್ರೂರು ವಹಿಸಲಿದ್ದಾರೆ. ದುಬೈ ಫಾರ್ಚ್ಯುನ್‌ ಗ್ರೂಫ್‌ ಆಫ್‌ ಹೋಟೇಲ್ಸ್‌ ಸಿಎಂಡಿ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಘಟಪ್ರಭಾ ಮನೀಷ್‌ ಗ್ರೂಫ್‌ ಆಫ್‌ ಹೋಟೇಲ್ಸ್‌ ಮತ್ತು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಮೀನುಗಾರರಿಗೆ ಮೋಟಾರ್, ಬಲೆ, ಮತ್ತಿತರ ಸಲಕರಣೆಗಳನ್ನು ಖರೀದಿಸಲು ಸರಕಾರ ವಿವಿಧ ಯೋಜನೆಯಡಿ ಕೆನರಾ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ವಿತರಿಸಲಾಗುತ್ತಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ 50 ಸಾವಿರದಿಂದ ಸಾಲ ಸೌಲಭ್ಯ ನೀಡಲಾಗುತ್ತದೆ. ಸ್ವಸಹಾಯ ಸಂಘಗಳ ಮೂಲಕ ಸ್ತ್ರೀಶಕ್ತಿ ಯೋಜನೆಯಡಿ ಸ್ವ ಉದ್ಯೋಗ ನಡೆಸಲು ಆರ್ಥಿಕ ಸಹಾಯವನ್ನು ಬ್ಯಾಂಕ್ ಮೂಲಕ ಒದಗಿಸಲಾಗುತ್ತದೆ ಎಂದು ಕೆನರಾ ಬ್ಯಾಂಕಿನ ಉಡುಪಿ ವೃತ್ತ ಕಚೇರಿಯ ಎಜಿಎಂ ಟಿ.ಎ.ಎಸ್. ಪೂರ್ಣಾನಂದ ಹೇಳಿದರು. ಅವರು ಗಂಗೊಳ್ಳಿ ಕೆನರಾ ಬ್ಯಾಂಕ್ ಶಾಖೆ ವತಿಯಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆದ ಮೀನುಗಾರರಿಗೆ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಅರ್ಹ ಮೀನುಗಾರ ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರ್ಹ ಮೀನುಗಾರ ಫಲಾನುಭವಿಗಳಿಗೆ ಸಾಲ ವಿತರಿಸಿ ಮಾತನಾಡಿದ ಕೆನರಾ ಬ್ಯಾಂಕಿನ ಉಡುಪಿ ವೃತ್ತ ಕಚೇರಿಯ ಡಿಜಿಎಂ ಪಬಿತ್ರ ಕುಮಾರದಾಸ್ ಅವರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿ ಪ್ರಸ್ತುತ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಒದಗಿಸಿರುವ ವಾಹನಗಳ ಸುಸ್ಥಿತಿ ಹಾಗೂ ಹಲವಾರು ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿಗಳು ಬಳಸುವ ವಾಹನಗಳು ಬಳಸಲು ಯೋಗ್ಯವಾಗಿಲ್ಲದೇ ಇರುವುದರಿಂದ ಅಂತಹ ವಾಹನಗಳನ್ನು ಗುರುತಿಸಿ ಸರ್ಕಾರ ಹೊಸ ವಾಹನಗಳನ್ನು ಒದಗಿಸಲು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸರಕಾರಕ್ಕೆ ಆಗ್ರಹಿಸಿದ್ದಾರೆ. ವಿಧಾನ ಮಂಡಲ ಅಧಿವೇಶದಲ್ಲಿ ಈ ಬಗ್ಗೆ ಶಾಸಕರು ಕೇಳಿದ ಚುಕ್ಕೆ ರಹಿತ ಪ್ರಶ್ನೆ ಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ರಾಜ್ಯದಲ್ಲಿ ಪ್ರಸ್ತುತ ಒದಗಿಸಿರುವ ವಾಹನಗಳ ಪೈಕಿ 5778 ವಾಹನಗಳು ಸುಸ್ಥಿತಿಯಲ್ಲಿರುತ್ತದೆ. 130 ವಾಹನಗಳು ಬಳಸಲು ಯೋಗ್ಯವಾಗಿಲ್ಲ. ಬಳಸಲು ಯೋಗ್ಯವಿಲ್ಲದ ವಾಹನಗಳು ಹೆಚ್ಚಾಗಿ 15 ವರ್ಷಗಳನ್ನು ಪೂರೈಸಿರುತ್ತವೆ. ಮತ್ತು ಕೆಲವು ಮೈನರ್ ದುರಸ್ಥಿಗೆ ಒಳಪಟ್ಟಿರುತ್ತದೆ. 2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಒಳಾಡಳಿತ ಇಲಾಖೆಯಲ್ಲಿ ಹೊಸ ಮೊಬಿಲಿಟಿ ಯೋಜನೆಯನ್ನು ರೂ 50…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನಶಾ ಮುಕ್ತ ಭಾರತ ಅಭಿಯಾನವು ದೇಶದ ಆರೋಗ್ಯಕರ ಮತ್ತು ಪ್ರಗತಿಪರ ಸಮಾಜ ನಿರ್ಮಾಣದ ಮಹತ್ವದ ಪ್ರಯತ್ನವಾಗಿದೆ. ಇಂದಿನ ಕಾಲದಲ್ಲಿ ಯುವಜನರು ಮಾದಕ ವಸ್ತುಗಳ ಬಲೆಗೆ ಬೀಳುತ್ತಿರುವುದು ವಿಷಾದನೀಯ. ವ್ಯಸನವು ವ್ಯಕ್ತಿಯ ಆರೋಗ್ಯವನ್ನು ಮಾತ್ರವಲ್ಲ, ಕುಟುಂಬದ ಶಾಂತಿ ಮತ್ತು ಸಮಾಜದ ಪ್ರಗತಿಯನ್ನು ಸಹ ಹಾಳುಮಾಡುತ್ತದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ನಂಜ ನಾಯ್ಕ್ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಮಾಧಕ ವ್ಯಸನ ವಿರೋಧಿ ಘಟಕದ ಆಶ್ರಯದಲ್ಲಿ ನಡೆದ ‘ನಶಾ ಮುಕ್ತ ಭಾರತ’ ಅಭಿಯಾನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ವಹಿಸಿದ್ದರು. ವಿಲ್ಮಾ ಶೆರಲ್ ಅತಿಥಿಗಳನ್ನು ಪರಿಚಯಿಸಿದರು. ಎನ್.ಎಸ್.ಎಸ್. ಘಟಕ 1ರ ಕಾರ್ಯಕ್ರಮಾಧಿಕಾರಿ ರಾಜೇಶ್ ಶೆಟ್ಟಿ ವಕ್ವಾಡಿ ಸ್ವಾಗತಿಸಿ, ಎನ್.ಎಸ್.ಎಸ್. ಘಟಕ 2ರ ಕಾರ್ಯಕ್ರಮಾಧಿಕಾರಿ ಪೂಜಾ ಕುಂದರ್ ನಿರೂಪಿಸಿ, ಮಾಧಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಕರಾವಳಿ ಜಿಲ್ಲೆಗಳಲ್ಲಿ ವಿಶೇಷವಾಗಿ ಬೈಂದೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 94 ಸಿ ಅಡಿ ಅರ್ಜಿ ಹಾಕಿಯೂ ಈವರೆಗೂ ಹಕ್ಕು ಪತ್ರ ಸಿಗದೇ ನೂರಾರು ಕುಟುಂಬಗಳು ವಿವಿಧ ಸರಕಾರಿ ಸೌಲಭ್ಯ ವಂಚಿತರಾಗಿದ್ದಾರೆ. ಕೂಡಲೇ ಸರಕಾರ ಹಕ್ಕುಪತ್ರ ವಿತರಿಸಬೇಕು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕರು ಪ್ರಸ್ತಾಪಿಸಿದ ಚುಕ್ಕೆ ರಹಿತ ಪ್ರಶ್ನೆಗೆ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉತ್ತರಿಸಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ.ಆರ್.ಜೆಡ್ ಹಾಗೂ ಪೋರಂಬೊಕು ಸ್ಥಳವನ್ನು ಅಕ್ರಮಿಸಿ ಒಟ್ಟು 1428 ಅರ್ಜಿ ಗಳಿವೆ. ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ 261 ಅರ್ಜಿಗಳು ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಮ್ಕಿ ಮಿತಿಯಲ್ಲಿ 94 ಸಿ ಅಡಿ ಒಟ್ಟು 849 ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ ಎಂದರು. ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಮ್ಕಿ ಮಿತಿ, ಪೋರಂಬೊಕು ಹಾಗೂ ಸಿ.ಆರ್.ಜೆಡ್ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿಕುದ್ರು ಇವರ ಸಂಯುಕ್ತಾಶ್ರಯದಲ್ಲಿ ನಡೆದ , ಕುಂದಾಪುರ  ವೃತ್ತ ಮಟ್ಟದ 14ರ ವಯೋಮಾನದ ಬಾಲಕಿಯರ  ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ತಂಡವು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ 210 ಕಾಲೇಜುಗಳ ಪೈಕಿ, ವೈಯಕ್ತಿಕ ಕ್ರೀಡೆ ಮತ್ತು  ಗುಂಪು ಆಟಗಳ 42 ವಿಭಾಗಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜು, ಈ ಶೈಕ್ಷಣಿಕ ವರ್ಷದಲ್ಲಿಯೂ ಪುರುಷರ ಹಾಗೂ ಮಹಿಳೆಯರ  ಎರಡು ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್‌ಶಿಪ್‌ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಆಳ್ವಾಸ್ ಕಾಲೇಜು ಸತತ 23 ವರ್ಷಗಳಿಂದ ಈ ಸಾಧನೆಯನ್ನು ಮೆರೆಯುತ್ತಾ ಬಂದಿದೆ. ಈ ಬಾರಿ ಪುರುಷರ ವಿಭಾಗದಲ್ಲಿ 308 ಅಂಕಗಳು ಹಾಗೂ ಮಹಿಳೆಯರ ವಿಭಾಗದಲ್ಲಿಯೂ 308 ಅಂಕಗಳನ್ನು ಗಳಿಸಿ ಒಟ್ಟು 616 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಪಡೆದಿದೆ. ಅಥ್ಲೆಟಿಕ್ಸ್, ಕ್ರಾಸ್‌ಕಂಟ್ರಿ, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, ಖೋ-ಖೋ, ವಾಲಿಬಾಲ್, ಬ್ಯಾಡ್ಮಿಂಟನ್, ಹ್ಯಾಂಡ್‌ಬಾಲ್, ಸಾಫ್ಟ್ಬಾಲ್, ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಬೆಸ್ಟ್ ಫಿಸಿಕ್, ಕ್ರಿಕೆಟ್, ಚೆಸ್, ಕರಾಟೆ, ಟೇಬಲ್ ಟೆನ್ನಿಸ್, ನೆಟ್‌ಬಾಲ್, ಹಾಕಿ, ಫುಟ್‌ಬಾಲ್, ಕುಸ್ತಿ, ಟಗ್ ಆಫ್ ವಾರ್ ಸೇರಿದಂತೆ ಅನೇಕ ಕ್ರೀಡಾ ವಿಭಾಗಗಳಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಜೀವನ್ ಮಿತ್ರ ಸೇವಾ ಟ್ರಸ್ಟ್ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ, ಅಪಘಾತಕ್ಕಿಡಾದವರಿಗೆ ಸದಾ ನೆರವು ನೀಡುತ್ತಿರುವ ಸಂಸ್ಥೆ ಈ ಸಂಸ್ಥೆ ಇದೀಗ ತನ್ನೂರಿನ ಅನಾರೋಗ್ಯ ಪೀಡಿತರಾದ ಕೋಟತಟ್ಟು ಪಡುಕರೆಯ ವಿಜಯ ಪೂಜಾರಿಯವರ ನೆರವಿಗಾಗಿ ಕೋಟ, ಸಾಲಿಗ್ರಮ, ಸಾಸ್ತಾನ ಟೋಲ್ ಸೇರಿದಂತೆ ವಿವಿಧ ಭಾಗಗಳಿಗೆ ತೆರಳಿ ನೆರವು ಕ್ರೂಡಿಕರಿಸಿದೆ. ಇತ್ತೀಚಿಗೆ ಮಣಿಪಾಲದ ಕೆ.ಎಂ.ಸಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಜಯ್ ಪೂಜಾರಿ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಸಂಸ್ಥೆಯ ಕಾರ್ಯಕರ್ತರು ಮತ್ತು ಸ್ನೇಹಿತರು ಸೇರಿಕೊಂಡು ಸುಮಾರು 69,000 ಹಣ ಸಂಗ್ರಹಿಸಿ ಮಾನವೀಯತೆಯ ಮೆರೆದಿದ್ದಾರೆ. ಇದನ್ನು ಗುರುವಾರ ಕೋಟದ ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೊಲ್ಲೂರು ಮುಕಾಂಬಿಕೆ ಹಾಗೂ ಕೋಟದ ಅಮೃತೇಶ್ವರಿ ದೇಗುಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಸಮ್ಮುಖದಲ್ಲಿ ಆ ಕುಟುಂಬದವರಿಗೆ ಹಸ್ತಾಂತರಿಸಿದರು. ಬುಧವಾರ ಸಾಸ್ತಾನ ಟೋಲ್ ಗೇಟ್ ಬಳಿ ಜೀವನ್ ಮಿತ್ರ ಸೇವಾ ಟ್ರಸ್ಟ್ ಮತ್ತು ವಿಜಯ್ ಪೂಜಾರಿ ಅವರ ಸ್ನೇಹಿತರು ಸೇರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ನಾಗರೀಕ ಸೇವಾ ಸಮಾಜದಿಂದ ಒಬ್ಬ ಸದಸ್ಯರನ್ನು ನೇಮಕ ಮಾಡಬೇಕಾಗಿರುವ ಹಿನ್ನೆಲೆ, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಬಯೋ ಡಾಟಾ (ವೈಯಕ್ತಿಕ ಮಾಹಿತಿ) ಹಾಗೂ ಸಹಮತಿ ಪತ್ರ ಸಹಿತ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 4 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಆಡಳಿತ ಶಾಖೆ, ರಜತಾದ್ರಿ, ಮಣಿಪಾಲ, ಉಡುಪಿ ದೂ.ಸಂಖ್ಯೆ:0820-2574925 ಅನ್ನು ಸಂಪಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಂಗಳೂರಿನ ಕಿಂಗ್ಸ್ ಚೆಸ್ ಅಕಾಡೆಮಿಯವರು ನಡೆಸಿದ 11ನೇ ರಾಷ್ಟ್ರ ಮಟ್ಟದ  ರ್‍ಯಾಪಿಡ್  ಚೆಸ್ ಸ್ಪರ್ಧೆಯಲ್ಲಿ 7ರ ವಯೋಮಾನದ ವಿಭಾಗದಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ನ 2ನೇ ತರಗತಿ ವಿದ್ಯಾರ್ಥಿ ಪ್ರಮುಖ ಬಿ. ಪೂಜಾರಿ 6ರಲ್ಲಿ6 ಪಂದ್ಯವನ್ನು ಗೆದ್ದು ಪ್ರಥಮ  ಸ್ಥಾನವನ್ನು ಪಡೆದಿರುತ್ತಾನೆ . ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಬೋಧಕ/ ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Read More