More Awesome photos from Play, Click here Photo Album: Gandhige Savilla Play Click here
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ರಂಗಭೂಮಿಯು ವಿಚಾರ ಪ್ರಚೋದಕ ಹಾಗೂ ಮನೋರಂಜನೆ ಆಧಾರಿತ ನಾಟಕಗಳೆಂಬ ಎರಡು ಕವಲುಗಳಾಗಿ ಸಾಗುತ್ತಿದೆ. ಕೇವಲ ಮನೋರಂಜನೆಯನ್ನು ಉದ್ದೇಶವಾಗಿಟ್ಟುಕೊಂಡು ಆರ್ಥಿಕ ಅಗತ್ಯತೆಯನ್ನು ನೀಗಿಸಿಕೊಳ್ಳುವ ನಾಟಕಗಳಿಂದ ಇತರ ಪ್ರಕಾರದ ನಾಟಕಗಳಿಗೆ ಕಂಟಕ ಬಂದೊದಗಿದೆ ಎಂದು ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಹೇಳಿದರು. ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗ ಸಂಭ್ರಮ-2016 ಹಾಗೂ 39ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಜಾತಿ ಸಂಘಟನೆಗಳಿಗೆ ದೊರೆಯುವಷ್ಟು ಬೆಂಬಲ ಕಲಾ ಸಂಘಟಕರಿಗೆ ದೊರೆಯುತ್ತಿಲ್ಲ. ಆದಾಗ್ಯೂ ಎಲ್ಲಾ ಏಳುಬೀಳುಗಳ ನಡುವೆ ಉತ್ಕೃಷ್ಟವಾದ ನಾಟಕಗಳನ್ನು ನೀಡುತ್ತಾ, ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿರುವುದು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಲಾವಣ್ಯ ಬೈಂದೂರು ಮಾಜಿ ಅಧ್ಯಕ್ಷ ಗಣಪತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಲಾವಣ್ಯದ ಸ್ಥಾಪಕ ಸದಸ್ಯ ಬಿ. ಉಮೇಶ್ ಕುಮಾರ್, ಲಾವಣ್ಯ ಅಧ್ಯಕ್ಷ ಬಿ. ರಾಮ ಟೈಲರ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು, ಮಾ.13: ಸಮೀಪದ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಮೃತ ಚಾಲಕನನ್ನು ಕೇರಳದ ಕ್ಯಾಲಿಕಟ್ ನಿವಾಸಿ ಮೊಹಮ್ಮದ್ ಅಫ್ಜಲ್ (35) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಭಟ್ಕಳ ಕಡೆಯಿಂದ ಕುಂದಾಪುರ ಮಾರ್ಗವಾಗಿ ಸಾಗುತ್ತಿದ್ದ ಕಬಿಣ್ಣದ ಸರಳು ತಂಬಿದ್ದ ಲಾರಿ ಹಾಗೂ ಭಟ್ಕಳ ಮಾರ್ಗವಾಗಿ ಸಾಗುತ್ತಿದ್ದ ಔಷಧಿ ಸಾಗಾಟದ ಲಾರಿಯ ನಾವುಂದದ ವಿನಾಯಕ ಹೋಟೆಲ್ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ಮುಖಾಮುಖಿ ಢಿಕ್ಕಿಯಾಗಿತ್ತು. ಅಫಘಾತದ ತೀವ್ರತೆಗೆ ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡು, ಔಷಧಿ ತುಂಬಿದ ಲಾರಿಯ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮತ್ತೊಂದು ಲಾರಿಯ ಚಾಲಕ, ಕ್ಲೀನರ್‌ಗಳು ಗಾಯಗೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಸ್ವಲ್ಪ ಹೊತ್ತಿನ ಬಳಿಕ ವಿಷಯ ತಿಳಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ಲಾರಿಯ ಮಧ್ಯೆ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಕಾರ್ಪೋರೇಶನ್ ಬ್ಯಾಂಕ್ ಶಾಖೆಯಲ್ಲಿ ಶನಿವಾರ ಸಂಸ್ಥೆಯ ಸಂಸ್ಥಾಪಕರ 111ನೇ ಜನ್ಮಶತಾಬ್ದಿಯನ್ನು ಆಚರಿಸಲಾಯಿತು. ಶಾಖಾ ಪ್ರಬಂಧಕ ಸಿ. ಎಸ್. ಪೂಜಾರಿ ಬ್ಯಾಂಕ್ ಇಲ್ಲಿಯವರೆಗೆ ಸಾಗಿಬಂದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಸ್ಥಾಪಕರ ದಿನಾಚರಣೆಯಲ್ಲಿ ಬ್ಯಾಂಕಿನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶುಭಹಾರೈಸಿದರು. ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೈಂದೂರು: ಕೆನರಾ ಲೋಕಸಭಾ ಸಂಸದ ಆನಂತ್ ಕುಮಾರ್ ಹೆಗಡೆ ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಇಸ್ಲಾಂ ಭಯೋತ್ಪಾದಕ ಧರ್ಮ ಎಂಬ ಆಘಾತಕಾರಿ ಹೇಳಿಕೆ ಖಂಡಿಸಿ ಶಿರೂರು ಸಂಯುಕ್ತ ಜಮಾತ್ ವತಿಯಿಂದ ಶುಕ್ರವಾರ ಬ್ರಹತ್ ಪ್ರತಿಭಟನೆ ನಡೆಯಿತು. ನೂರಾನಿ ಮಸೀದಿಯಿಂದ ಶಿರೂರು ಗ್ರಾಮ ಪಂಚಾಯತ್ ವರೆಗೆ ನೂರಾರು ಮುಸ್ಲಿಂ ಬಾಂಧವರು ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಬಳಿಕ ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಕೆ.ಸಿದ್ದೀಕ್, ಇದು ಕೋಮು ಸೌಹಾರ್ದತೆಯನ್ನು ಕೆಡಿಸುವ ಉದ್ದೇಶವಾಗಿದೆ. ಈ ಹೇಳಿಕೆಯಿಂದ ಮುಸ್ಲಿಂ ಜನತೆಗೆ ನೋವುಂಟಾಗಿದೆ. ಶಿರೂರು ಸಂಯುಕ್ತ ಮುಸ್ಲಿಂ ಜನತೆ ತೀವೃವಾಗಿ ಖಂಡಿಸುತ್ತದೆ. ತಪ್ಪು ಹೇಳಿಕಸ್ತರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಅಬೂಬಕರ್, ಸೈಯದ್ ಅರೆಹೊಳೆ, ಅನ್ವರ್ ಶೇಖ್, ಜಮಾಯತ್‌ನ ಇಸ್ಮಾಯಿಲ್ ಮೌಲಾನ, ಗ್ರಾಪಂ ಸದಸ್ಯ ಜಿ.ಮೀರಾ ಕರಾಣಿ ಮಹ್ಮದ್ ಸವೂದ್ ಮುಂತಾದವರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಾಂಗ್ರೆಸ್ ಪಕ್ಷಕ್ಕೆ ಒಬ್ಬರೇ ನಾಯಕರಲ್ಲ. ಒಬ್ಬರು ಹೋದರೆ ಮತ್ತೊಬ್ಬರು ಬರುತ್ತಾರೆ. ಪಕ್ಷ ಸೋಲಿಗೆ ಒಂದೊಂದು ಘಟನೆಗಳು ಕಾರಣವಾಗುತ್ತವೇ ಹೊರತೂ ವ್ಯಕ್ತಿಯಲ್ಲ ನಡೆಯಲ್ಲ. ಜೆಪಿ ಹೆಗ್ಡೆಯವರನ್ನು ಮತ್ತೆ ಪಕ್ಷಕ್ಕೆ ಕರೆರದ್ದು ನಿಜ. ಆದರೆ ಅವರಿಂದಲೇ ಕಾಂಗ್ರೆಸ್ ಅಲ್ಲ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಜೆಪಿ ಇಲ್ಲದಿದ್ದರೆ ಕಾಂಗ್ರೆಸ್ ಮುಳುಗುತ್ತದೆ ಎಂದು ಅಂದಿನ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ ಅವರೇ ಪಕ್ಷಕ್ಕೆ ಮರಳುವಂತೆ ವಿನಂತಿಸಿಕೊಂಡಿದ್ದರು ಎಂಬ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ಪ್ರಶ್ನಿಸಿದಾಗ ಶಾಸಕ ಪೂಜಾರಿ ಅವರು ಹೀಗೆ ಉತ್ತರಿಸಿದ್ದಾರೆ. ಜಯಪ್ರಕಾಶ್ ಹೆಗ್ಡೆಯವರು ಒಬ್ಬ ಉತ್ತಮ ನಾಯಕರು, ಎಂಪಿ ಆಗಿದ್ದವರು. ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್‌ನಿಂದ ಹೊರನಡೆದಿದ್ದಾರೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಮರಳಿ ಬನ್ನಿ ಎಂದಷ್ಟೇ ವಿಧಾನ ಪರಿಷತ್ ಚುನಾವಣೆಯ ಬಳಿಕ ಹೇಳಿದ್ದೆ. ಆದರೆ ಅವರಿಲ್ಲದಿದ್ದರೂ, ತಾನಿಲ್ಲದಿದ್ದರೂ ಪಕ್ಷವನ್ನು ಮುನ್ನಡೆಸಲು ಮತ್ಯಾರೋ ಬರುತ್ತಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಬೆಂಬಲಿಗರು, ಹಿತೈಷಿಗಳ ಮತ್ತು ಸಮಾನ ಮನಸ್ಕರಿಂದ ಮೌಲ್ಯಯುತ ರಾಜಕಾರಣ ಎತ್ತಿ ಹಿಡಿಯುವ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ’ಜನಪರ, ಪ್ರಗತಿಪರ’ ಎಂಬ ಸಂಘಟನೆ ಹುಟ್ಟುಹಾಕಲಾಯಿತು. ಕುಂದಾಪುರ ಹಿರಿಯ ರಾಜಕಾರಣಿ ಮಾಣಿಗೋಪಾಲ್ ನಿವಾಸ ದ್ವಾರಕದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಸಂಘಟನೆಗೆ ತಾತ್ಕಾಲಿಕ ಸಂಚಾಲನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದ್ದು, ಮಾಣಿ ಗೋಪಾಲ ಮುಖ್ಯ ಸಂಚಾಲಕರಾಗಿಯೂ, ವಿ. ಚಂದ್ರಶೇಖರ ಹೆಗ್ಡೆ ದಬ್ಬೆಕಟ್ಟೆ, ಕಾಳಪ್ಪ ಪೂಜಾರಿ, ರಾಮಕೃಷ್ಣ ಹೇರ್ಳೆ, ಗಿರೀಶ್ ಜಿ.ಕೆ, ಶೈಲೇಶ್ ಕುಂದಾಪುರ ಮತ್ತು ಕಾಳಾವರ ಶ್ರೀಧರ್ ಆಚಾರ್ಯ ಅವರನ್ನು ಸಹಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂತೋಷ್ ದೇವಾಡಿಗ ಕೆ.ಎನ್, ಸ್ಟೀವನ್ ಡಿ.ಕೋಸ್ತ, ವಿಜಯ ಡಿಸೋಜ, ನಾಗರಾಜ ಪುತ್ರನ್, ರಂಜಿತ್ ಕುಮಾರ್ ಶೆಟ್ಟಿ, ದೀಪಕ್ ನಾವುಂದ, ಸುಖ್‌ಪಾಲ್, ಚಂದ್ರಶೇಖರ ಶೆಟ್ಟಿ, ಸತೀಶ್ ಹೆಗ್ಡೆ, ಕೋಡಿ ಸುನಿಲ್ ಪೂಜಾರಿ ಉಪಸ್ಥಿತರಿದ್ದರು. ಮಾರ್ಚ್ ತಿಂಗಳ ಕೊನೆ ವಾರದಲ್ಲಿ ಸಂಘಟನೆಯ ವಿದ್ಯುಕ್ತ…
ಲಾವಣ್ಯ ಬೈಂದೂರು ರಂಗ ಸಂಭ್ರಮ 2016ಕ್ಕೆ ಚಾಲನೆ ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಹೊಸ ಅಲೆಯ ನಾಟಕಗಳು ಬೆಂಕಿಯಂತೆ ವೇಗವಾಗಿ ಪಸರಿಸಿ ಜನರನ್ನು ತಲುಪುತ್ತಿದ್ದು ಇದಕ್ಕೆ ಹವ್ಯಾಸಿ ರಂಗತಂಡಗಳ ಕೊಡುಗೆ ದೊಡ್ಡದಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಹೇಳಿದರು. [quote font_size=”14″ bgcolor=”#ffffff” bcolor=”#dd9933″ arrow=”yes” align=”right”]* ನಾಟಕ ಪ್ರದರ್ಶನಕ್ಕಿಂದ ನಾಟಕ ತಯಾರಿಯ ಅಂಶವೇ ಮುಖ್ಯವಾದುದು. ಕಲಾವಿದರು ತಮ್ಮ ಕೆಲಸದೊಳ್ಳಕ್ಕೆ ನಿಷ್ಠೆಯಿಂದ, ಒಗ್ಗಟ್ಟಾಗಿ ತೊಡಗಿಸಿಕೊಂಡು ಮುನ್ನಡೆಯುತ್ತಾರೆ. ನಾಟಕ ಬದುಕು ಕಲಿಸುತ್ತದೆ ಎಂಬುದಕ್ಕೆ ಹಲವಾರು ದೃಷ್ಟಾಂತವಿದೆ. ನಮ್ಮ ಮಕ್ಕಳನ್ನು ಈ ವ್ಯವಸ್ಥೆಯೊಳಕ್ಕೆ ತಂದು ನೋಡಿ. ಅವರ ಬೆಳವಣಿಗೆಯನ್ನು ನೀವೇ ಮೆಚ್ಚುತ್ತೀರಿ. – ಮೋಹನಚಂದ್ರ ಮಂಗಳೂರು, ನಾಟಕ ನಿರ್ದೇಶಕರು[/quote] ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗ ಸಂಭ್ರಮ-2016 ಉದ್ಘಾಟಿಸಿ ಅವರು ಮಾತನಾಡಿದರು. ಹವ್ಯಾಸಿ ಕಲಾವಿದರು ತಮ್ಮ ಪಾತ್ರಗಳಲ್ಲಿ ಹೊಸತನ ತುಂಬುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿದ್ದಾರೆ. ಉಡುಪಿ, ದ.ಕ,…
ಕುಂದಾಪುರ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ಸಭೆ ಇತ್ತೀಚೆಗೆ ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ಜರುಗಿತು. ಕಳೆದ 2 ವರ್ಷಗಳಿಂದ ಎಲ್‌ಐಸಿ ಪ್ರತಿನಿಧಿಯಾಗಿ ಕುಂದಾಪುರ ತಾಲೂಕಿನಲ್ಲಿ ಜೀವ ವಿಮೆ ಪಾಲಿಸಿ ಸಂಗ್ರಹದಲ್ಲಿ ಅತ್ಯುತ್ತಮ ಸೇವೆ ನೀಡಿ ಕುಂದಾಪುರ ಶಾಖೆಯ ಏಕೈಕ ಎಂಡಿಆರ್‌ಟಿ ಸದಸ್ಯರಾಗಿ ಸಾಧನೆ ಮಾಡಿದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರನ್ನು ಎಲ್.ಐ.ಸಿ ಕುಂದಾಪುರ ಶಾಖೆ ಹಿರಿಯ ಪ್ರಬಂಧಕ ಪ್ರೇಮನಾಥ ರಾವ್ ಕಾವೂರು ಸನ್ಮಾನಿಸಿದರು. ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಕರುಣಾಕರ ಶೆಟ್ಟಿ, ಬೈಂದೂರು ಸೆಟಿಲೈಟ್ ಶಾಖೆ ಶಶಿಧರ ಹೆಗ್ಡೆ, ಕುಂದಾಪುರ ಶಾಖೆ ಅಸಿಸ್ಟೆಂಟ್ ಮೆನೇಜರ್ ಗುರುರಾಜ್ ಎಂ.ಎ, ಎಲ್‌ಐಸಿಯ ಹಿರಿಯ ಪ್ರತಿನಿಧಿ ಮಂಜುನಾಥ ಮಹಾಲೆ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ದೇಶ, ಇಲ್ಲಿನ ಜನರು ಹಾಗೂ ಸಂಸ್ಕೃತಿ ಅರಿಯುವುದರೊಂದಿಗೆ ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವಂತಾಗಬೇಕು ಎಂದು ನಾರ್ವೆ ಟ್ರ್ಯಾಂಡ್ ಹ್ಯಾಂ ನಗರದ ಪುರಸಭಾ ಸದಸ್ಯ ಕ್ಷತಿಲ್ ಉತ್ನೆ ಹೇಳಿದರು. ಶುಕ್ರವಾರ ನಮ್ಮ ಭೂಮಿ ಆವರಣದಲ್ಲಿ ನಮ್ಮ ಭೂಮಿಯಿಂದ ಬೆಂಗಳೂರಿಗೆ ಬದಲಾವಣೆಗಾಗಿ ನಡೆದಾಟ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ದಂಡಯಾತ್ರೆಗೆ ತೆರಳಿದ ದಿನವೇ ಬದಲಾವಣೆಗಾಗಿ ನಡೆದಾಟ ಕಾರ್ಯಕ್ರಮಕ್ಕೆ ಚಾಲನೆ ದೊರೆತಿರುವುದು ನಮ್ಮ ಪ್ರಯತ್ನ ಸಾರ್ಥಕ್ಯ ಪಡೆಯುವಂತಾಗಿದೆ. ಕಳೆದ ಎಂಟುವರ್ಷಗಳಿಂದ ಭಾರತಕ್ಕೆ ಬಂದು ಇಲ್ಲಿನ ಮಕ್ಕಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ತನಗೆ, ಜನರಲ್ಲಿ ಒಂದಿಷ್ಟು ಅರಿವು ಮೂಡಿಸಬೇಕೆಂಬ ಹಂಬಲವಿತ್ತು. ಕುಂದಾಪುರದಿಂದ ಬೆಂಗಳೂರಿನ ವರೆಗಿನ ಈ ತಿರುಗಾಟದೊಂದಿಗೆ ನಮ್ಮನ್ನು, ನಮ್ಮ ಸ್ನೇಹಿತರನ್ನು, ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ಬದಲಾವಣೆ ತರಲು ಸಾಧ್ಯವಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಹಟ್ಟಿಯಂಗಡಿ ಗ್ರಾಪಂ ಅಧ್ಯಕ್ಷ ರಾಜೀವ ಶೆಟ್ಟಿ, ಮಕ್ಕಳ ಪಂಚಾಯತ್ ಅಧ್ಯಕ್ಷ ಯಲ್ಲಮ್ಮ, ಡೇವಿಡ್, ವಾಂಖೆ,…
