Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್. ಟಿ. ಎ.) ವತಿಯಿಂದ ನಡೆಸಲಾದ ಜೆಇಇ  ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಎರಡನೆಯ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು ಕ್ರಿಯೇಟಿವ್ ಸಂಸ್ಥೆ ಅತ್ಯುತ್ತಮ ಫಲಿತಾಂಶವನ್ನು ಪಡೆದು  ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ. ನಾಗದೇವ್ ಎಂ.ಜಿ. ಬಿ.ಪ್ಲಾನಿಂಗ್ ನಲ್ಲಿ ಜನರಲ್ ಇಡಬ್ಲ್ಯೂಎಸ್‌ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಿ. ಪ್ಲಾನಿಂಗ್ ವಿಭಾಗದಲ್ಲಿ:ನಾಗದೇವ್ ಎಂ.ಜಿ.99.9762662, ಸುಕ್ಷಿತ್  ಗಿರೀಶ್ ಗೌಡ 99.7769023, ನಮಿತ್ ಕೃಷ್ಣಮೂರ್ತಿ ಹೆಗಡೆ 99.4570078, ವಿಶ್ವೇಶ್ ಎನ್.ಹೆಚ್.99.3484094, ನಿಶಾಂತ್ ಹೊನ್ನಾವರ್ 99.3164686, ಅನಿರುಧ್ ಉಪಾಧ್ಯಾಯ 98.8948512, ಅಭಿರಾಮ್ ಭಟ್ ಜಿ.ಪಿ.98.3718612, ಉಲ್ಲಾಸ್ ವೈ ಪಾಟೀಲ್ 98.2560368, ದಿಶಾಂತ್ ಎಂ.98.2152181, ವೃಷಬ್ ಮಂಜುನಾಥ್ ಬೆನ್ನಿ 98.1666028, ಸಂವಿತ್ ಅಮಿತ್ ಗೋಕರ್ಣ 98.1107894, ನಿನಾದ್ ರಾಜೇಶ್ ನಾಯಕ್ 98.0490815 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ. 99 ಪರ್ಸೆಂಟೈಲ್ ಗಿಂತ ಅಧಿಕ 05 ಮಂದಿ, 98 ಪರ್ಸೆಂಟೈಲ್ ಗಿಂತ ಅಧಿಕ 12ಮಂದಿ, 97 ಪರ್ಸೆಂಟೈಲ್ ಗಿಂತ ಅಧಿಕ 16 ಮಂದಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಕ್‌ಗೆ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ –ಕುಂದಾಪುರ ರಾ.ಹೆ  ಬೀಜಾಡಿ ಜಂಕ್ಷನ್ನಲ್ಲಿ ಸಂಭವಿಸಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದ ಪರಸಪ್ಪ ಚಂದಪ್ಪ ಲಮಾಣಿ (57) ಮೃತಪಟ್ಟ ವ್ಯಕ್ತಿ. ಉಡುಪಿ ಕಡೆಯಿಂದ ಕುಂದಾಪುರದತ್ತ ಲಾರಿ ಚಲಾಯಿಸುತ್ತಿದ್ದ ಸಿಪಾಯಿ ಶಭೀರ ಹುಸೇನ್ ಹಾಜಿ ಇಬ್ರಾಹಿಂ ಅವರ ವಾಹನವನ್ನು ಬೈಕ್ ಸವಾರ ಬಲಗಡೆಯಿಂದ ಓವರ್ಟೇಕ್ ಮಾಡಲು ಯತ್ನಿಸಿದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ತೀವ್ರ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿರದ ಲಮಾಣಿ ಅವರನ್ನು ಸ್ಥಳೀಯರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಆನಂದ್ ಸಿ. ಕುಂದರ್ ಎಂದರೆ ಅದೊಂದು ಶಕ್ತಿ. ಜಿಲ್ಲೆಯಲ್ಲೆ ಸಾಂಸ್ಕೃತಿಕ ಕಾಶಿಯನ್ನಾಗಿಸಿದ ಕೀರ್ತಿ ಆನಂದ್ ಸಿ. ಕುಂದರ್ ಅವರಿಗೆ ಲಭಿಸುತ್ತದೆ. ಇಂತಹ ವ್ಯಕ್ತಿಗೆ ಪಂಚವರ್ಣ ಸಂಘಟನೆ 300ನೇ ವಾರದ ಪರಿಸರಸ್ನೇಹಿ ಅಭಿಯಾನ ಸಮರ್ಪಿಸಿದ್ದು ಅರ್ಥಪೂರ್ಣ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತ, ಗೀತಾನಂದ ಫೌಂಡೇಶನ್ ಮಣೂರು, ಕೋಡಿ ಪಂಚಾಯತ್ ನೇತೃತ್ವದಲ್ಲಿ ಕೋಡಿ ಗ್ರಾ.ಪಂನಿಂದ ಕೋಟ ಪಂಚಾಯತ್ ವರೆಗಿನ 5ವರೆ ಕಿ.ಮೀ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನದ ಮಣೂರು ಪಡುಕರೆಯಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ಆನಂದ್ ಸಿ. ಕುಂದರ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಸಮಾಜಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡ ಆನಂದ್ ಸಿ. ಕುಂದರ್ ವ್ಯಕ್ತಿತ್ವ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಪಂಚವರ್ಣ ಸಂಘಟನೆ ಇಡೀ ರಾಜ್ಯಕ್ಕೆ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬೀಚ್ ಕ್ಲಿನಿಂಗ್ನಲ್ಲಿ ಹೊಸ ಅಧ್ಯಾಯ ಸೃಷ್ಠಿಸಿದೆ ಎಂದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಉಡುಪಿ: ಆತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ರಾಜ್ಯ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ), ಉಡುಪಿ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್, ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಸೀಟುಗಳ ಹಂಚಿಕೆ ಆನ್ಲೈನ್ ಅರ್ಜಿ ಸಲ್ಲಿಕೆ ಮೂಲಕ ನಡೆಯುತ್ತಿದೆ. ಮೊದಲನೇ ಸುತ್ತಿನ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಮೇ. 10 ಕೊನೆಯ ದಿನವಾಗಿದೆ. ಮೇ.15 ರಿಂದ 20ರ ವರೆಗೆ ಮೊದಲನೇ ಸುತ್ತಿನ ಸೀಟು ಹಂಚಿಕೆ ಮತ್ತು ಪ್ರವೇಶಾತಿ ಪ್ರಕ್ರೀಯೆ ನಡೆಯಲಿದೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅಥವಾ ಜಿ.ಟಿ.ಟಿ.ಸಿ ಸಂಸ್ಥೆಯಲ್ಲಿ ದಾಖಲಾತಿಗಳನ್ನು ಸಲ್ಲಿಸಿದಲ್ಲಿ ವಿದ್ಯಾರ್ಥಿಗಳ ಪರವಾಗಿ ಆನ್ಲೈನ್ ಅರ್ಜಿ ಸಲ್ಲಿಸಲಾಗುವುದು. ಐ.ಟಿ.ಐ ಮತ್ತು ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ನೇರವಾಗಿ ಎರಡನೇ ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಕ್‌ಗೆ ಮಿನಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡಿರುವ ಘಟನೆ ಇಲ್ಲಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖಮಂಟಪದ ರಾ.ಹೆ. 66ರಲ್ಲಿ ಸಂಭವಿಸಿದೆ. ಕುಂದಾಪುರದಿಂದ ಬೈಂದೂರು ಕಡೆಗೆ ಮಿನಿ ಬಸ್ ಡ್ರೈವರ್ ದಿನೇಶ ಮರಾಠಿ ತನ್ನ ಬಸ್ ಅನ್ನು, ಉಪ್ಪುಂದ ದುರ್ಗಾ ಪರಮೇಶ್ವರಿ ದೇವಸ್ಥಾನದ ಸರ್ವಿಸ್ ರಸ್ತೆಯಿಂದ ರಾ. ಹೆ. 66ರ ರಸ್ತೆಗೆ ಬರಲು ನಿಂತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆಸಿದ ಪರಿಣಾಮ ಸವಾರ ಬಚ್ಚ ಬಿಲ್ಲವ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಾರ್ಮಿಕರ ದಿನಾಚರಣೆಯ ಅಂಗವಾಗಿ ಜೆಸಿಐ ಬೈಂದೂರು ಸಿಟಿ ವತಿಯಿಂದ ಯಡ್ತರೆಯ ಸಜ್ಜನ ಕೆಲಸಗಾರ  ರಾಘವೇಂದ್ರ ದೇವಾಡಿಗ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಯಡ್ತರೆಯ ರಾಹುತನಕಟ್ಟೆಯಲ್ಲಿ ವೆಲ್ಡಿಂಗ್ ವರ್ಕ್ ನಡೆಸುತ್ತಿರುವ ರಾಘವೇಂದ್ರ ಅವರು, ಕೇವಲ ಒಬ್ಬ ಕೆಲಸಗಾರನಾಗಿ ಉಳಿಯದೆ ತಮ್ಮಲ್ಲಿ ಕೆಲಸ ಕಲಿಯುವ ಅನೇಕ ಯುವಕರಿಗೆ ಸ್ವಂತ ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡುವ ಮೂಲಕ ಮಾರ್ಗದರ್ಶಕರಾಗಿದ್ದಾರೆ. ಸಮಾಜದ ಬಡವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಅವರು, ಬೈಂದೂರು ಭಾಗದಲ್ಲಿ ಅಪ್ಪಟ ಸಜ್ಜನಿಕೆ ಮತ್ತು ಪ್ರಾಮಾಣಿಕ ಕೆಲಸದ ಮೂಲಕ ಸಾರ್ವಜನಿಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅವರ ಈ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಜೆಸಿಐ ಸಂಸ್ಥೆಯು ಈ ಗೌರವ ಅರ್ಪಿಸಿದೆ. ಯಡ್ತರೆಯ ಯಶಸ್ವಿ ವೆಲ್ಡಿಂಗ್ ವೃತ್ತಿಪರರಾದ ರಾಘವೇಂದ್ರ ದೇವಾಡಿಗ ಅವರನ್ನು ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಜೆಸಿಐ ಬೈಂದೂರು ಸಿಟಿ ವತಿಯಿಂದ ಸನ್ಮಾನಿಸಲಾಯಿತು. ಸ್ವಂತ ಶ್ರಮದಿಂದ ಉದ್ಯಮ ಬೆಳೆಸುವುದರ ಜೊತೆಗೆ, ಇತರರಿಗೂ ಉದ್ಯೋಗದ ಹಾದಿ ತೋರಿಸುತ್ತಿರುವ ಅವರು, ಬಡವರ ಸಹಾಯಕ್ಕೆ ಸದಾ ಸಿದ್ಧರಿರುವ ಹೃದಯವಂತರು. ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಬೈಂದೂರು ಸಿಟಿ ವತಿಯಿಂದ ಪ್ರತಿ ತಿಂಗಳು ಹಮ್ಮಿಕೊಳ್ಳಲಾಗುವ “ಸೆಲ್ಯೂಟ್ದ ಸೈಲೆಂಟ್ ಸ್ಟಾರ್” ಕಾರ್ಯಕ್ರಮದ ಅಡಿಯಲ್ಲಿ ಎಪ್ರಿಲ್ ತಿಂಗಳು ಪ್ರಸಿದ್ಧ ಕಲಾವಿದರಾದ ತ್ರಿವಿಕ್ರಮ್ ರಾವ್ ಉಪ್ಪಂದ ಅವರನ್ನು ಗುರುತಿಸಿ ಗೌರವಿಸಲಾಯಿತು. ಕಲಾವಿದರ ಪರಿಚಯ ಮತ್ತು ಸಾಧನೆ:ತ್ರಿವಿಕ್ರಮ್ ರಾವ್ ಅವರು ಕಲಾ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರಾಗಿದ್ದು, ಅವರ ಪ್ರಮುಖ ಸಾಧನೆಗಳು.  ರಂಗಭೂಮಿ ಸೇವೆ:ನೂರಾರು ನಾಟಕಗಳಿಗೆ ಅದ್ಭುತವಾಗಿ ಮೇಕಪ್ (ಬಣ್ಣಗಾರಿಕೆ) ಮತ್ತು ವಸ್ತ್ರ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಮಣ್ಣಿನ ಕಲೆ:ಮಣ್ಣಿನ ಕಲಾಕೃತಿಗಳನ್ನು ಅತ್ಯಂತ ಸುಂದರವಾಗಿ ನಿರ್ಮಿಸುವ ಕಲೆ ಅವರಿಗೆ ಸಿದ್ಧಿಸಿದೆ. ಮೂರ್ತಿ ಶಿಲ್ಪ:ಗಣೇಶ ಮತ್ತು ಶಾರದಾ ಮೂರ್ತಿಗಳನ್ನು ನಿರ್ಮಿಸುವಲ್ಲಿ ಅಪ್ರತಿಮ ಕಲಾ ನೈಪುಣ್ಯತೆಯನ್ನು ಹೊಂದಿದ್ದಾರೆ. ಈ ಸಂದರ್ಭದಲ್ಲಿ ಬೈಂದೂರು ಜೆಸಿಐ ಸಿಟಿಅಧ್ಯಕ್ಷ ಚೈತ್ರ ಸತೀಶ್, ನಿಕಟಪೂರ್ವ ಅಧ್ಯಕ್ಷ ರಾಜು ಮೊಗವೀರ, ಕಾರ್ಯದರ್ಶಿ ಪ್ರೇಮ ವಿ. ಶೆಟ್ಟಿ, ಲೇಡಿ ಜೆಸಿ ಕೋ-ಆರ್ಡಿನೇಟರ್ ಸೂರ್ಯಕಾಂತಿ, ಜೆಸಿ ರಾಘವೇಂದ್ರ ಹೊಳ್ಳ, ಜೆಸಿ ಸುರೇಂದ್ರ ಶೇಟ್, ಜೆಸಿ ಅವಿನಾಶ್ ಉಪಸ್ಥಿತರಿದ್ದರು. ತೆರೆಯ ಮರೆಯಲ್ಲಿದ್ದುಕೊಂಡು ಕಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಎಸ್ಓಎಫ್ ವತಿಯಿಂದ ನಡೆಸಲಾದ ಗಣಿತ, ವಿಜ್ಞಾನ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಹಿಂದಿ ಮತ್ತು ಕಂಪ್ಯೂಟರ್ ವಿಷಯಗಳ ಅಂತರರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ನ 252 ವಿದ್ಯಾರ್ಥಿಗಳು ಭಾಗವಹಿಸಿ, ಅದರಲ್ಲಿ 98 ಗೋಲ್ಡ್ ಮೆಡಲ್ಗಳನ್ನು ಗೆದ್ದು ಅಪೂರ್ವ ಸಾಧನೆ ಮೆರೆದಿದ್ದಾರೆ. ಈ ಸಾಧನೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಮತ್ತು ಸಂಸ್ಥೆಯ ಶ್ರೇಷ್ಠ ಶಿಕ್ಷಣ ಪದ್ಧತಿಯ ಪ್ರತಿಬಿಂಬವಾಗಿದೆ. ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ನಲ್ಲಿ ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಒಲಿಂಪಿಯಾಡ್ ಪರೀಕ್ಷೆಗಳಿಗಾಗಿ ವ್ಯವಸ್ಥಿತ ತರಬೇತಿ ನೀಡಲಾಗುತ್ತಿದ್ದು, ಅದರಿಂದಲೇ ಇಂತಹ ಅದ್ಭುತ ಫಲಿತಾಂಶಗಳು ಸಾಧ್ಯವಾಗಿವೆ. ವಿದ್ಯಾರ್ಥಿಗಳಲ್ಲಿನ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸುವಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ತಮಗೆ ತಾವು ಸಾಬೀತುಪಡಿಸಿಕೊಳ್ಳುವ ದಿಶೆಯಲ್ಲಿ ಈ ಫಲಿತಾಂಶ ಮಹತ್ವದ ಮೈಲಿಗಲ್ಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾ ಆಸ್ಪತ್ರೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿದಾಗ ರೋಗಿಗಳಿಗೆ ಅಗತ್ಯ ಚಿಕಿತ್ಸಾ ನೆರವುಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.  ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವು ಅವಶ್ಯವಿರುವವರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮಗಳ ಜವಾಬ್ದಾರಿ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಶಿಫಾರಸ್ಸು ಆದಂತಹ ರೋಗಿಗಳಿಗೆ ಚಿಕಿತ್ಸಾ ನೆರವು ದೊರಕುತ್ತಿಲ್ಲ ಎಂಬ ದೂರುಗಳು ಪದೇ ಪದೇ ಕೇಳಿ ಬರುತ್ತಿವೆ. ಇವರುಗಳಿಗೆ ಅಗತ್ಯ ಸೌಲಭ್ಯಗಳು ಸಿಗುವಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಏಳಜಿತ್ ರಾಮಕೃಷ್ಣ ಕುಟೀರದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆಯನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮದಲ್ಲಿ ನಾಯ್ಕನಕಟ್ಟೆ ರಾಮಕೃಷ್ಣ ಮಂದಿರದ ಗಣೇಶ ಪೈ ಹಾಗೂ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಅಧ್ಯಾಪಕರಾದ ಪ್ರಶಾಂತ ಶಾನುಭೋಗ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ಹೇಳಿ ಪುಸ್ತಕಗಳನ್ನು ವಿತರಿಸಿದರು. ಆಶ್ರಮದ ವತಿಯಿಂದ ಪ್ರತೀ ವರ್ಷವೂ 400 ರಿಂದ 500 ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ಗಳನ್ನು ನೀಡಲಾಗುತ್ತಿದೆ.

Read More