ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಮನೋಭಾವದ ಜೊತೆ ಜೊತೆಯಲ್ಲಿ ಪರಸ್ಪರ ಗೌರವ ಸಹೋದರತ್ವ ಭಾವನೆಯನ್ನು ಬಿತ್ತುವ ಸದುದ್ದೇಶದಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕ್ಷಿಪ್ರ ಕಾರ್ಯಾಚರಣಾಪಡೆಯ (ಆರ್ಎಎಫ಼್) ಭದ್ರಾವತಿಯ ಸಹಾಯಕ ಕಮಾಂಡೆಂಟ್ ಅನಿಲ್ ಕುಮಾರ್ ಜಾಧವ್ ತಮ್ಮ ತುಕುಡಿಯೊಂದಿಗೆ ಶಾಲೆಗೆ ಆಗಮಿಸಿ, ವಿದ್ಯಾರ್ಥಿಗಳ ಜೊತೆಯಲ್ಲಿ ರಕ್ಷಾಬಂಧನವನ್ನು ಆಚರಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅಜಿತ್ ಭವ್ಯ ಭಾರತದ ಮುಂದಿನ ಸಂರಕ್ಷಕರು ನೀವು 12ನೇ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಲು ಪ್ರಯತ್ನಿಸಬೇಕು. ಸರಿಯಾದ ಗುರಿಯನ್ನು ಹೊಂದಿರಬೇಕು. ನಿರಂತರ ಪ್ರಯತ್ನ ಶೀಲರಾಗಿರಬೇಕು. ದೇಶದ ಪ್ರತಿಯೊಬ್ಬರನ್ನೂ ಸಹೋದರರಂತೆ ಗೌರವದಿಂದ ನೋಡಬೇಕು ಎಂದು ತಿಳಿಸಿದರು. ಈ ಸಮಯದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಮಾತನಾಡಿ, ದೇಶದಲ್ಲಿ ಸಾವಿರಾರು ಉದ್ಯೋಗಗಳಿದ್ದರೂ, ದೇಶಪ್ರೇಮದಿಂದ ಇವರೆಲ್ಲ ಸೈನ್ಯ ಸೇರಿದರು. ಇವರೆಲ್ಲ ನಮಗೆ ಆದರ್ಶಪ್ರಾಯರಾದರು. ದೇಶ ಸೇವೆಗಾಗಿ ಸದಾ ಕಟಿಬದ್ಧರಾಗಿ ಬದುಕಲು ಇವರಿಂದ ಕಲಿಯಬೇಕು. ಎಂದರು. ವೇದಿಕೆಯಲ್ಲಿ ಇನ್ಸ್ಪೆಕ್ಟರ್ ಜಿ. ಮನೋಹರ್, ಎಸ್ಐ ಮುನಿಯಪ್ಪ, ಎಸ್ಐ ದಿನೇಶ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜು, ರೆಡ್ ಕ್ರಾಸ್ ಘಟಕದ ವತಿಯಿಂದ ಜಿನೇವಾ ಒಪ್ಪಂದ ದಿನದ ಪ್ರಯುಕ್ತ ರೆಡ್ ಕ್ರಾಸ್ನ ಸೇವಾ ಕಾರ್ಯಗಳಿಗೆ ನಿಧಿ ಸಂಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನಲ್ಲಿ ರೆಡ್ ಕ್ರಾಸ್ ಘಟಕದ ಅಧಿಕಾರಿ ಮುರಳೀಧರ ಹೆಗ್ಡೆ, ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಕ್ರೀಯವಾಗಿ ನಿಧಿ ಸಂಗ್ರಹಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟ ನೆರವೇರಿತು. ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಕಾರ್ಯದರ್ಶಿಯಾದ ಕೆ. ರಾಧಾಕೃಷ್ಣ ಶೆಣೈ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಚಂದ್ರಶೇಖರ ಶೆಟ್ಟಿ, ಕುಂದಾಪುರ ವಲಯ ದೈಹಿಕ ಪರಿವೀಕ್ಷಣಾಧಿಕಾರಿಗಳಾದ ಸತ್ಯನಾರಾಯಣ ಜಿ, ಉಡುಪಿ ಜಿಲ್ಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕುಸುಮಾಕರ ಶೆಟ್ಟಿ, ಉಡುಪಿ ಜಿಲ್ಲಾ ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕಿಶನ್ ರಾಜ್ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರದ ವತಿಯಿಂದ “ರಕ್ಷಾಬಂಧನ” ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಘದ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ ಅವರು ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾಬಂಧನ ಮತ್ತು ಅದಕ್ಕಿರುವ ಮಹತ್ವದ ಬಗ್ಗೆ ಪುಟಾಣಿಗಳಿಗೆ ಮತ್ತು ಮಾತೆಯರಿಗೆ ತಿಳಿಸಿಕೊಟ್ಟರು. ಸಮಾರಂಭದ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಮಂಜುನಾಥ ಅವರು ರಕ್ಷಾಬಂಧನ ದ ಮಹತ್ವವನ್ನು ತಿಳಿಸಿದರು. ವೇದಿಕೆಯಲ್ಲಿ ಸೇವಾ ಸಂಗಮದ ವ್ಯವಸ್ಥಾಪಕ ದಿನೇಶ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಸದಸ್ಯ ಆಶಾದಿನೇಶ್ ನಿರೂಪಿಸಿ, ಮಾತೆಯರು ವಂದಿಸಿದರು. ಈ ಸಂದರ್ಭದಲ್ಲಿ ಸೇವಾ ಸಂಗಮದ ಪುಟ್ಟ ಪುಟ್ಟ ಪುಟಾಣಿಗಳು ಹಾಗೂ ಮಾತೆಯರು ಮತ್ತು ಸೇವಾ ಸಂಘದ ಸರ್ವ ಪದಾಧಿಕಾರಿಗಳು ಅಧ್ಯಕ್ಷ ಮಂಜುನಾಥ್ ಶೆಟ್ಟಿ ಅವರ ನಿರ್ದೇಶನದಂತೆ ಬೈಂದೂರಿನ ರಥ ಬೀದಿ ವ್ಯಾಪ್ತಿಯ ನಾಗರಿಕ ಬಂಧುಗಳಿಗೆ ಹಾಗೂ ಬೈಂದೂರಿನ ಆರಕ್ಷಕ ಉಪನಿರೀಕ್ಷಕರ ಕಚೇರಿಯ ಸಿಬ್ಬಂದಿಗಳಿಗೆ “ರಕ್ಷಾ ಬಂಧನ”ವನ್ನು ಕಟ್ಟಿ ರಕ್ಷಾಬಂಧನದ ಮಹತ್ವವನ್ನು ತಿಳಿಸಿ ಹಿರಿಯರಿಂದ ಆಶೀರ್ವಾದ ಪಡೆದರು. ಈ ಒಂದು ಕಾರ್ಯಕ್ರಮ ಪುಟ್ಟ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವೃಂದಾವನಸ್ಥ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಜನ್ಮ ದಿನೋತ್ಸವವನ್ನು ಇಲ್ಲಿನ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಎಸ್. ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ದಿ. ಎನ್. ಜಯವಂತ ನಾಯಕ್ ಕುಟುಂಬಸ್ಥರ ಪರವಾಗಿ ಡಾ. ಸುಖಾನಂದ ಶೆಣೈ ದಂಪತಿ ಮತ್ತು ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್ ಅವರು ಸೇವೆಯನ್ನು ಸಮರ್ಪಿಸಿದರು. ಶ್ರೀಗಳ ಜನ್ಮ ದಿನೋತ್ಸವದ ಅಂಗವಾಗಿ ಶ್ರೀ ವೆಂಕಟರಮಣ ದೇವರಿಗೆ ಮಧ್ಯಾಹ್ನ ಪ್ರಸನ್ನ ಪೂಜೆ, ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇವಳದ ಆಡಳಿತ ಮಂಡಳಿಯ ಜಿ. ವೇದವ್ಯಾಸ ಕೆ. ಆಚಾರ್ಯ, ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಜಿಎಸ್ಬಿ ಸಮಾಜ ಬಾಂಧವರು ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಗಳ ವತಿಯಿಂದ ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸಲಾದ ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ ಹಾಗೂ ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಆಯಾ ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ವೆಬ್ಸೈಟ್ https://sevasindhu.karnataka.gov.in ನಲ್ಲಿ ಗ್ರಾಮಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟಂಬರ್ 10 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, “ಬಿ” ಬ್ಲಾಕ್, ಕೊಠಡಿ ಸಂಖ್ಯೆ 302, ರಜತಾದ್ರಿ ಮಣಿಪಾಲ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ನ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಂದ ʼಇನ್ಕ್ಲೂಸಿವ್ ಗ್ರೋಥ್ʼ ಎಂಬ ವಿಷಯಾದರಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವು ಸಾಮಾಜಿಕ ಶಿಕ್ಷಣದ ಭಾಗವಾಗಿದ್ದು ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಮನೋಭಾವ ಹಾಗೂ ಸಾಮೂಹಿಕ ಪ್ರಗತಿಯ ಮಹತ್ವವನ್ನು ಅರಿವಿಗೆ ತರುವ ಉದ್ದೇಶವನ್ನು ಹೊಂದಿತ್ತು. ಕಾರ್ಯಕ್ರಮದ ವಿಶೇಷ ಅಂಶವೆಂದರೆ ಪುಟಾಣಿಗಳ ಉಜ್ವಲ ಪ್ರದರ್ಶನಗಳು ಗೀತ ಗಾಯನ, ನಾಟಕ, ಭಾಷಣ ಮೊದಲಾದ ವಿವಿಧ ಕಲಾ ರೂಪಗಳ ಮೂಲಕ ಅವರು ತೋರಿದ ಪ್ರತಿಭೆ ಎಲ್ಲರ ಕಣ್ಮನಗಳನ್ನು ಸೆಳೆಯುದರೊಂದಿಗೆ ಮಕ್ಕಳು ದೇಶದ ಬಗ್ಗೆ ಉಳ್ಳ ತಮ್ಮ ಪ್ರೀತಿ ಹಾಗೂ ಗೌರವವನ್ನು ಕಲಾತ್ಮಕವಾಗಿ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರಾದ ಶಮಿತಾ ರಾವ್ ಉಪಸ್ಥಿತರಿದ್ದು ಮಾತನಾಡಿ, “ಇಂತಹ ಕಾರ್ಯಕ್ರಮಗಳು ಮಕ್ಕಳು ಉತ್ತಮ ನಾಗರಿಕರಾಗುವ ದಿಕ್ಕಿನಲ್ಲಿ ಪ್ರೇರಣೆ ನೀಡುತ್ತವೆ. ದೇಶದ ಪ್ರಗತಿಗೆ ನಾವು ಹೇಗೆ ಕೊಡುಗೆ ನೀಡಬೇಕು ಎಂಬ ಅರಿವು ಅವರಿಗೆ ಈಗಲೇ ಮೂಡಬೇಕು “ಎನ್ನುತ್ತಾ ರಾಷ್ಟ್ರೀಯ ಚಿಹ್ನೆಗಳನ್ನು ಮಕ್ಕಳು ಗುರುತಿಸಿ ಉಚ್ಚರಿಸುವಂತೆ ಮಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ಮಹಾವಿಷ್ಣುಭಜನಾ ಸಂಘ ಶ್ರೀ ವಿಷ್ಣುಮೂರ್ತಿ ದೇವಸ್ಥಾಪಾರಂಪಳ್ಳಿ ಸಾಲಿಗ್ರಾಮ ಇದರ ಗೌರವಾರ್ಪಣಂ ಅಭಿವರ್ಷ ಕಾರ್ಯಕ್ರಮ ಮಹಾವಿಷ್ಣು ಸಭಾಂಗಣದಲ್ಲಿ ಜರಗಿತು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಮಹಾವಿಷ್ಣುಭಜನಾ ಸಂಘ ಪಾರಂಪಳ್ಳಿ ಇದರ ಗೌರವಾಧ್ಯಕ್ಷ ಡಾ.ಪಿ ವಿಷ್ಣುಮೂರ್ತಿ ಐತಾಳ್ ಅವರು ಅಧ್ಯಕ್ಷತೆ ವಹಿಸಿದ್ದರು. ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಾರಂಪಳ್ಳಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ. ರಾಮಚಂದ್ರ ಉಪಾಧ್ಯ, ಜಯ ವೈ.ಎನ್. ಹೇರ್ಳೆ ಸುಮತಿ, ರಾಘವೇಂದ್ರ ಮಧ್ಯಸ್ಥ (ರಘು), ಶ್ರೀಪತಿ ಹೇರ್ಳೆ, ನಾರಾಯಣ ಪೂಜಾರಿ, ವಾರಿಜಾಕ್ಷಿ, ಸರದಿ ಅರ್ಚಕ ಪ್ರತಿನಿಧಿಗಳಾದ ಚಂದ್ರಶೇಖರ ಅಡಿಗ, ರಾಧಾಕೃಷ್ಣ ಅಡಿಗ ಗೌರವ ಅಭಿನಂದನೆ ನೀಡಲಾಯಿತು. ಗೌರವಾರ್ಪಣಂ ಇದರ ಭಾಗವಾಗಿ ಸಂಘದ ಹಿರಿಯ ಸದಸ್ಯರಾದ ಪಿ. ರಾಮಚಂದ್ರ ಉಪಾಧ್ಯ, ಶ್ರೀನಿವಾಸ ಹೇರ್ಳೆ, ಶ್ರೀನಿವಾಸ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ಜನಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾದ ಹರ್ ಘರ್ ತಿರಂಗಾ ಕಾರ್ಯಕ್ರಮದ ಆ.13ರಿಂದ 15ರವೆರೆಗೆ ಪ್ರತಿ ಮನೆಯಲ್ಲೂ ತಿರಂಗಾ ಹಾರಾಡಬೇಕು. ಆ.15ರಂದು ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಮನೆ ಮನೆಯಲ್ಲೂ ಹಾಕಿಕೊಳ್ಳಬೇಕು. ನಮ್ಮ ವಾರ್ಡ್, ನಮ್ಮ ಬೂತ್ ಮತ್ತು ನಮ್ಮ ಮನೆಯ ಸುತ್ತಮುತ್ತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದರ ಮೂಲಕ ಈ ದೇಶಭಕ್ತಿ ಕಾರ್ಯಕ್ರಮವನ್ನು ಇನ್ನೂ ಚೆನ್ನಾಗಿ ನಡೆಸಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಬೈಂದೂರು ಮಂಡಲ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ತಿರಂಗಾ ಯಾತ್ರೆಯ ಬೃಹತ್ ಬೈಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು. ರಾಷ್ಟ್ರೀಯ ಕಾರ್ಯಕ್ರಮ, ರಾಷ್ಟ್ರೀಯ ವಿಚಾರಧಾರೆಯುಳ್ಳ ಬಿಜೆಪಿ ಕಾರ್ಯಕರ್ತರು ರಾಷ್ಟ್ರ ಮುಖ್ಯ ಎನ್ನುವ ಎಲ್ಲಾ ಕಾರ್ಯಕ್ರಮಗಳನ್ನು ಪ್ರೀತಿಯಿಂದ ಮತ್ತು ಜಾಗೃತೆಯಿಂದ ಎಲ್ಲರೂ ಸೇರಿ ಆಚರಿಸುವಂತಹ ಈ ಸಂದರ್ಭವನ್ನು ನೋಡಲು ಹೆಮ್ಮೆ. ಬಿಜೆಪಿ ಕಾರ್ಯಕರ್ತರು ಕಾನೂನನ್ನೂ ಗೌರವಿಸುತ್ತೇವೆ, ಸಂವಿಧಾನವನ್ನೂ ಗೌರವಿಸುತ್ತೇವೆ ಎಂದು ಹೇಳುದನ್ನು ಆಚರಿಸುತ್ತಾ ಬರಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಸಿಬಿಎಸ್ಇ ಸ್ಕೂಲ್ನಲ್ಲಿ ಫ್ಲೇ ಸ್ಕೂಲ್, ಎಲ್.ಕೆಜಿ ಹಾಗೂ ಯು.ಕೆ.ಜಿ. ಮಕ್ಕಳಿಗೆ ಮಾನ್ಸೂನ್ ಫೆಸ್ಟ್ ಹಾಗೂ ಬ್ಲೂ ಕಲರ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮಳೆಗಾಲಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಮಾಡಿ ಆನಂದಿಸಿದರು. ಪೇಪರ್ ಬೋಟ್ ಹಾಗೂ ನೃತ್ಯಗಳನ್ನು ಮಾಡಿ ಮಳೆಗಾಲದ ಆಟಗಳ ಮಹತ್ವವನ್ನು ಅರಿತುಕೊಂಡರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೀಲಿ ಬಣ್ಣದ ಉಡುಗೆಗಳನ್ನು ತೊಟ್ಟು ಸಂಭ್ರಮಿಸಿದರು. ತರಗತಿ ಕೋಣೆಗಳನ್ನು ನೀಲಿ ಬಣ್ಣದ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಯಿತು. ಮಕ್ಕಳಿಗೆ ವಿವಿಧ ಬಣ್ಣಗಳ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ತಿಂಗಳಿಗೊಮ್ಮೆ ವಿವಿಧ ಬಣ್ಣಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಹಾಗೂ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳಲ್ಲಿ ಸೃಜನಾತಮಕ ಕಲಿಕೆಗೆ ಒತ್ತು ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ, ಪ್ರಾಂಶುಪಾಲ ನಿತಿನ್ ಡಿ’ ಆಲ್ಮೇಡಾ, ಶಿಕ್ಷಕರು ಹಾಗೂ ಶಾಲಾ ಸಿಬ್ಬಂಧಿಯವರು ಉಪಸ್ಥಿತರಿದ್ದರು. ಎಲ್. ಕೆ.ಜಿ ವಿಭಾಗದ ಸಂಯೋಜಕಿ ವಿಲಾಸಿನಿ ಶೆಟ್ಟಿ ಕಾರ್ಯಕ್ರಮ ಸಂಘಟಿಸಿದರು.
