Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನೆಣೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಗುರು ರಾಘವೇಂದ್ರ ಟ್ರಸ್ಟ್ ಉಸ್ತುವಾರಿಯಲ್ಲಿ ಸೇವಾ ಸಂಗಮ ಶಿಶು ಮಂದಿರದ ಸಹಯೋಗದಲ್ಲಿ ಅರಣ್ಯ ಇಲಾಖೆಯ ನೆರವಿನೊಂದಿಗೆ ಶ್ರೀ ಗುರು ರಾಘವೇಂದ್ರ ವನದಲ್ಲಿ ಶಿಶುಮಂದಿರದ ಪುಟಾಣಿಗಳಿಂದ ವೈವಿದ್ಯಮಯ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷರಾದ ಸೂಲಿಯಣ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ರಾಜು ಪೂಜಾರಿ ಅವರು, ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಸದಸ್ಯರುಗಳಾದ ದಿನೇಶ್, ರವೀಂದ್ರ ಶ್ಯಾನುಭಾಗ್, ದಿನಕರ್ ಶೆಟ್ಟಿ,ರಾಜು, ಪ್ರಕಾಶ್ ಮಾಕೋಡ್, ಸುಧಾಕರ ಪಿ ಹಾಗೂ ಅರ್ಚಕರಾದ ಮುರುಳಿ ಭಟ್, ರವೀಂದ್ರ ಕಿಣಿ ಸೇವಾ ಸಂಗಮ ಶಿಶು ಮಂದಿರದ ಸೌಮ್ಯ ಮಾತಾಜಿ, ಸುಮಾ, ಮಠದ ಸಿಬ್ಬಂದಿ ವರ್ಗ, ಶಿಶು ಮಂದಿರದ ಪುಟಾಣಿಗಳು, ಪದಾಧಿಕಾರಿಗಳು ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಆಗಸ್ಟ್ 13ರಂದು “ಕ್ರಿಯೇಟಿವ್ ಪುಸ್ತಕ ಧಾರೆ – 2025” ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಸಮಾರಂಭ ಜರುಗಲಿರುವುದು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಿತ್ರ ನಿರ್ದೇಶಕರು ಹಾಗೂ ಖ್ಯಾತ ಸಾಹಿತಿಗಳಾದ ಡಾ. ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಅವರು ಆಗಮಿಸಲಿದ್ದಾರೆ. ಜೊತೆಗೆ ಕಾರ್ಕಳ ತಾಲೂಕಿನ ಕ.ಸಾ.ಪ ಸಾಹಿತಿಗಳು ಮತ್ತು ಅಧ್ಯಕ್ಷರಾದ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ಮಂಡ್ಯ ಮಹಾಕಾವ್ಯಗಳ ಲೇಖಕರಾದ ಡಾ. ಪ್ರದೀಪ ಕುಮಾರ ಹೆಬ್ರಿ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕರು ಘನ ಉಪಸ್ಥಿತಿ ವಹಿಸಲಿದ್ದಾರೆ. ಅನಾವರಣಗೊಳ್ಳಲಿರುವ ಕೃತಿಗಳು: •        ಯಾತ್ರೆ – ಚಂದ್ರಕಾಂತ ಪೋಕಳೆ •        ವಿಜ್ಞಾನ ಕೌತುಕಗಳ ಮಹಾಯಾನ – ಎಲ್.ಪಿ ಕುಲಕರ್ಣಿ • ಹರ್ಷ ರಾಗ – ಪೌಝಿಯಾ ಸಲೀಂ • ಹಿತಶತ್ರು -…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕಗಳ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಅಜ್ಜರಕಾಡು ರೆಡ್‌ಕ್ರಾಸ್ ಭವನದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ವತಿಯಿಂದ ವಾರಕ್ಕೆ 2 ದಿನದಂತೆ (ಸೋಮವಾರ ಹಾಗೂ ಗುರುವಾರ) ಉಚಿತ ಫಿಸಿಯೋಥೆರಪಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್, ಆಡಿಯೋಲಜಿಸ್ಟ್/ಸ್ಪೀಚ್ ಥೆರಪಿಸ್ಟ್ ತಜ್ಞರು ಲಭ್ಯವಿದ್ದು, ದೈಹಿಕ ನ್ಯೂನ್ಯತೆಗೆ, ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ, ಕಲಿಕಾ ನ್ಯೂನ್ಯತೆ, ಆಟಿಸಂ, ವಿಕಲಚೇತನರ ಪೋಷಕರಿಗೆ ಆಪ್ತ ಸಮಾಲೋಚನೆ, ವಾಕ್ ಮತ್ತು ಶ್ರವಣ ನ್ಯೂನ್ಯತೆಗೆ ಮತ್ತು ದೃಷ್ಟಿದೋಷಕ್ಕೆ ಸಂಬಂಧಿಸಿದ ತರಬೇತಿಯನ್ನು ತಜ್ಞರಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ವಿಕಲಚೇತನರು ಪಡೆದುಕೊಳ್ಳಬಹುದಾಗಿದೆ. ಅಂಧತ್ವ ಮತ್ತು ಮಂದದೃಷ್ಟಿಯುಳ್ಳ ಮಕ್ಕಳಿಗೆ ಬ್ರೆöÊಲ್ ತರಬೇತಿ, ಸ್ಥಳ ಪರಿಜ್ಞಾನ ಹಾಗೂ ಚಲನವಲನ ತರಬೇತಿ ನೀಡಲಾಗುವುದು. ಅಂಗವಿಕಲತೆಗೆ ಅನುಗುಣವಾಗಿ ಅಗತ್ಯವಿರುವ ಕೃತಕಾಂಗ ಜೋಡಣೆ ಮತ್ತು ಸಾಧನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ನಂದನವನ ಮಹಾಬಲೇಶ್ವರ – ಕೆರ್ಗಾಲ್ ಎಂಬ ಗ್ರಾಮದಲ್ಲಿ ಜನಿಸಿದ ಪಲ್ಲವಿ ದೇವಾಡಿಗ ಎಂಬ ಗ್ರಾಮೀಣ ಪ್ರತಿಭೆ, ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಮಧ್ಯಮವರ್ಗದ ಕೃಷಿಕ ಕುಟುಂಬದಿಂದ ಬಂದ ಪಲ್ಲವಿ, ಬಾಲ್ಯದಿಂದಲೇ ಕ್ರೀಡೆಗೆ ಆಸಕ್ತಿ ತೋರುತ್ತಿದ್ದರು. ಸರಕಾರಿ ಶಾಲಾ ಮಟ್ಟದಲ್ಲಿ ಆರಂಭವಾದ ಈ ಉತ್ಸಾಹ ಇಂದು ರಾಷ್ಟ್ರಮಟ್ಟದ ಪದಕಗಳವರೆಗೆ ತಲುಪಿರುವುದು ವಿಶೇಷ. ನೆಟ್‌ಬಾಲ್ ಹಾಗೂ ಹ್ಯಾಂಡ್‌ಬಾಲ್ ಕ್ರೀಡೆಗಳಲ್ಲಿ ಸಕ್ರಿಯರಾಗಿರುವ ಅವರು, ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಪಲ್ಲವಿ ಅವರು ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆಯಲ್ಲಿ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನ ಮತ್ತು ಕ್ರೀಡಾ ಸಾಧನೆ ಇವೆರಡನ್ನೂ ಸಮತೋಲನದಿಂದ ನಿರ್ವಹಿಸುತ್ತಿರುವ ಈ ಪ್ರತಿಭೆಗೆ ಶ್ಲಾಘನೆ ಮಾಡಲೇ ಬೇಕು. ಅವರ ಪೋಷಕರು ಕೃಷ್ಣ ದೇವಾಡಿಗ ಮತ್ತು ಸೀತಾ ದೇವಾಡಿಗ ಕೃಷಿಕರಾಗಿದ್ದು, ಸೀಮಿತ ಸಂಪತ್ತಿನಲ್ಲೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಚೇಂಪಿ ವಿಶ್ವಜ್ಯೋತಿ ಮಹಿಳಾ ಬಳಗದ ನೇತೃತ್ವದಲ್ಲಿ ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಶ್ರೀ ವಿಶ್ವಕರ್ಮ ಕಲಾವೃಂದ ಆಶ್ರಯದಲ್ಲಿ ಸಂಘದ ಶ್ರೀ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನ ಸಾಲಿಗ್ರಾಮದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ, ಸಹಸ್ರ ಕುಂಕುಮಾರ್ಚನೆ ಇನ್ನಿತರ ಕಾರ್ಯಕ್ರಮ ಜರಗಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಚೇಂಪಿ ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ರಮ್ಯ ರಮೇಶ್ ಆಚಾರ್ ದಂಪತಿಗಳು ಭಾಗವಹಿಸಿ, ಪೂಜಾ ವಿಧಿವಿಧಾನವನ್ನು ಪುರೋಹಿತ ಲಕ್ಷ್ಮೀಕಾಂತ್ ಶರ್ಮ ನೆರವೆರಿಸಿದರು. ಕೋಟ ವಿರಾಡ್ವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಅಧ್ಯಕ್ಷ ಸುಬ್ರಾಯ ಆಚಾರ್, ರಮೇಶ್ ಆಚಾರ್, ಗೌರವಾಧ್ಯಕ್ಷ ಜನಾರ್ದನ ಆಚಾರ್ ಚೇಂಪಿ, ಕೋಶಾಧಿಕಾರಿ ಕೃಷ್ಣಯ್ಯ ಆಚಾರ್ ಶ್ರೀಲಕ್ಷ್ಮೀ, ವಿಶ್ವಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್ ಚೇಂಪಿ,ಮಹಿಳಾ ಬಳಗ ಉಪಾಧ್ಯಕ್ಷೆ ಸರಿತಾ ಚಂದ್ರ ಆಚಾರ್,ಕಾರ್ಯದರ್ಶಿ ಸಹನಾ ರಾಘವೇಂದ್ರ ಆಚಾರ್,ಕೋಶಾಧಿಕಾರಿ ಸುಶೀಲ ಸತೀಶ್ ಆಚಾರ್, ಗುರುಸೇವಾ ಪರಿಷತ್ತು ಅಧ್ಯಕ್ಷ ರಾಘವೇಂದ್ರ ಆಚಾರ್ ಇತರರು ಉಪಸ್ಥಿತರಿದ್ದರು. ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ) ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪ್ರಾಂಶುಪಾಲರ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರ ಸಭೆ 2025-26ನೇ ಶೈಕ್ಷಣಿಕ ವರ್ಷದ ಕಾಲೇಜು ವಿಭಾಗದ ಕ್ರೀಡಾ ಚಟವಟಿಕೆಗಳ ಕುರಿತಾಗಿ ಸಭೆ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವು ಜನತಾ ಪದವಿ ಕಾಲೇಜಿನಲ್ಲಿ ನಡೆಯಿತು. ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಮಾರುತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳ ಪಾತ್ರ ಪ್ರಮುಖವಾದ್ದು. ಈ ಶೈಕ್ಷಣಿಕ ವರ್ಷದ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಸಮರ್ಪಕವಾಗಿ ಆಯೋಜಿಸುವುದರ ಮೂಲಕ ರಾಜ್ಯ ಮಟ್ಟದಲ್ಲಿ ಜಿಲ್ಲೆ ಗುರುತಿಸುವ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜನತಾ ಸಮೂಹ‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ ಮೊಗವೀರ ಅವರು ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ನಾಲ್ಕು ಗೋಡೆಯೊಳಗಷ್ಟೆ ಸೀಮಿತವಾಗದೆ ಅದರಿಂದ ಆಚೆಗೆ ಬಂದಾಗ ಆ ಮೂಲಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಹಲವು ಮಕ್ಕಳ ತಾಯಿ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರಚಿಸಿದ ಶ್ರೀ ಅಮೃತೇಶ್ವರಿ ತಾಯಿಯ ರಂಗೋಲಿ ಭಕ್ತರ ಗಮನ ಸೆಳೆಯಿತು. ಹಂದಟ್ಟು ನಿವಾಸಿ ಪ್ರಜ್ಞಾ ಜಿ. ಹಂದಟ್ಟು ಈ ಸುಂದರ ರಂಗೊಳಿಯಲ್ಲಿ ರಚಿಸಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ. ಉಡುಪಿಯ ಪಿಪಿಸಿ ಕಾಲೇಜಿನ ಎಂ.ಎಸ್ಸಿ ಪದವೀಧರೆಯಾಗಿರುವ ಪ್ರಜ್ಞಾ ಹಂದಟ್ಟು ಅವರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಗುರುವಿಲ್ಲದೆ ತನ್ನ ಸ್ವಂತ ಪರಿಶ್ರಮ ಹಾಗೂ ಆಸಕ್ತಿಯಿಂದ ರಂಗೊಲಿ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಈ ಹಿಂದೆ ಕಟೀಲು ದುರ್ಗಾಪರಮೇಶ್ವರಿ ದೇವಿಯ ಚಿತ್ರ ಸೇರಿದಂತೆ ಚಲನಚಿತ್ರ ನಟ ದೊಡ್ಡಣ್ಣ, ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಅವರ ಚಿತ್ರ ಬಿಡಿಸಿ ಅವರಿಂದ ಶಹಬ್ಬಾಸ್ ಅನಿಸಿಕೊಂಡವರು. ಈಕೆಯ ಈ ಎಲ್ಲಾ ಸಾಧನೆಗೆ ಹಿಂದೆ ಇವರ ತಾಯಿ ಪೂರ್ಣಪ್ರಜ್ಞಾ ಕಾಲೇಜಿನ ಗ್ರಂಥಪಾಲಕಿ ಗೀತಾ ಪೂಜಾರಿ ಸಾಥ್ ನೀಡುತ್ತಿದ್ದಾರೆ. ಅಮೃತೇಶ್ವರಿ ದೇವಿ ರಂಗೊಲಿಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನದಲ್ಲಿ  ಶುಕ್ರವಾರದಂದು ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಜರಗಿತು. ಈ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಬೆಳಿಗ್ಗೆ 9.30ಕ್ಕೆ ಆರಂಭಗೊಂಡಿತು. ಸಾವಿರಾರು ಭಕ್ತರು ಶ್ರೀ ದೇಗುಲದಲ್ಲಿ ನಡೆದ ವಿವಿಧ ಪೂಜಾ ಕಾರ್ಯದಲ್ಲಿ ಭಾಗಿಯಾದರು. ದೇಗುಲದಲ್ಲಿ ವಿಶೇಷ ಹೂವಿನ ಅಲಂಕಾರ, ಸಹಸ್ರ ಕುಂಕುಮಾರ್ಚನೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ನೇತೃತ್ವದಲ್ಲಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ ದಂಪತಿಗಳು ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡರು. ಶ್ರೀ ದೇವಿ ಅಮೃತೇಶ್ವರೀ ಗೆ ವರಮಹಾಲಕ್ಷ್ಮೀ ಅಂಗವಾಗಿ ವಿಶೇಷ ಅಲಂಕಾರ ಭಕ್ತ ಮಹಾಶಯನ್ನು ವಿಶೇಷವಾಗಿ ಸೆಳೆಯಿತು. ದೇಗುಲದ ಟ್ರಸ್ಟಿಗಳಾದ ಗಣೇಶ್ ನೆಲ್ಲಿಬೆಟ್ಟು, ಶಿವ ಪೂಜಾರಿ, ರತನ್ ಐತಾಳ್, ಸುಧಾ ಪೂಜಾರಿ, ಜ್ಯೋತಿ ಡಿ.ಕಾಂಚನ್, ಅರ್ಚಕ ಪ್ರತಿನಿಧಿಗಳಾದ ಸುಬ್ರಾಯ ಜೋಗಿ, ದಿನೇಶ್ ಜೋಗಿ ಮತ್ತಿತರರು ಇದ್ದರು. ಧಾರ್ಮಿಕ ವಿಧಿವಿಧಾನವನ್ನು ವೇ.ಮೂ ಮಧುಸೂದನ ಬಾಯರಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಜಿ.ಎಸ್.ಬಿ. ಮಹಿಳಾ ಮಂಡಳಿ ಗಂಗೊಳ್ಳಿ ಇವರ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಆಶೀರ್ವಾದ, ಮಾರ್ಗದರ್ಶನದಲ್ಲಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವಿದ್ಯಾಧಿರಾಜ ಸಭಾಭವನದಲ್ಲಿ ಶುಕ್ರವಾರ ಜರಗಿತು. ದೇವಳದ ತಾಂತ್ರಿಕ ಜಿ.ವಸಂತ ಭಟ್ ನೇತೃತ್ವದಲ್ಲಿ ವರಮಹಾಲಕ್ಷ್ಮೀ ವೃತದ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಯಿತು. ಜಿಎಸ್‌ಬಿ ಸಮಾಜದ ಮುತ್ತೈದೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು. ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ದೇವಳದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಶ್ರೀ ವಿ.ಆಚಾರ್ಯ, ಕಾರ್ಯದರ್ಶಿ ವೈಭವಿ ವಿ.ಶೆಣೈ, ಪುರೋಹಿತರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಜಿಎಸ್‌ಬಿ ಮಹಿಳಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಸಮಾಜಬಾಂಧವರು, ಊರಿನ ಹತ್ತು ಸಮಸ್ತರು, ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಗೃಹಲಕ್ಷ್ಮೀ ಫಲಾನುಭವಿಗಳ ಸ್ವಸಹಾಯ ಗುಂಪು ರಚಿಸಿ, ಅದರ ಉಳಿತಾಯದ ಹಣದಲ್ಲಿ ಮಹಿಳೆಯರ ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಕೊಡುವ ಬಗ್ಗೆ ಚಿಂತನೆಯಿದೆ. ಅದು ಆ.15ರಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಹೇಳಿದರು. ಅವರು ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಲಕ್ಷ್ಮೀ ಫಲಾನುಭವಿಗಳ ಸ್ವ-ಸಹಾಯ ಗುಂಪುಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ವಿಲೀನಗೊಳಿಸಿ, ಮಹಿಳಾ ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ಬೈಂದೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಸದ್ಯದಲ್ಲಿ ಅದು ಪೂರ್ಣಗೊಳ್ಳಲಿದೆ ಎಂದ ಅವರು ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಚಾರಕ್ಕೆ ತೊಡಕ್ಕಾಗದಂತೆ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸು ವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ಯಾರಂಟಿಯಿಂದ…

Read More