Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಅನೇಕ ಸಮುದಾಯಗಳಿಗೆ, ವಿದ್ಯಾರ್ಥಿಗಳಿಗೆ ಯಶಸ್ಸನ್ನು ನೀಡುವ ದೀವಿಗೆಯಾಗಿ ಆಳ್ವಾಸ್ ರೀಚ್ ಕಾರ್ಯಕ್ರಮ ಮೂಡಿ ಬರಲಿ ಎಂದು  ಎಸ್ಸೇ ಡಿಜಿಟ್ರೋನಿಕ್ಸ್ ಪ್ರೈವೆಟ್ ಲಿಮಿಟೆಡ್‌ನ  ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್ ಶಾಲಿನಿ ಗಿರೀಶ್‌ ಹೇಳಿದರು.   ಅವರು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಜತ ಮಹೋತ್ಸವ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ಸಾಮೂಹಿಕ ಅಭ್ಯುದಯಕ್ಕಾಗಿ ಸಮಾಜಕಾರ್ಯ ಹಳೆ ವಿದ್ಯಾರ್ಥಿಗಳು ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ʼಲೋಕಾಃ ಸಮಸ್ತಾಃ ಸುಖಿನೋ ಭವಂತುʼಎಂಬ ಮಂತ್ರದಂತೆ ಆಳ್ವಾಸ್ ಸಂಸ್ಥೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯನ್ನಾಗಿ ನೀಡುತ್ತಾ ಬಂದಿದೆ. ಸುಮಾರು ೨೦ ವ?ಗಳ ನಂತರ ಮತ್ತೊಮ್ಮೆ ಆಳ್ವಾಸ್ ಕಾಲೇಜಿಗೆ ಭೇಟಿ ನೀಡುತ್ತಿರುವುದು ಬಹಳ ಸಂತಸ ನೀಡಿದೆ. ಅಂದಿನ ಕಾಲೇಜು ದಿನಗಳು, ವಿಭಾಗದೊಂದಿಗೆ ಸೇರಿ ಕೈಗೊಂಡಿದ್ದ ಕಾರ್ಯಕ್ರಮಗಳು ಪುನರ್‌ಮನನ ಮಾಡಲು ಅವಕಾಶ ದೊರೆಯಿತು ಎಂದರು. ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ವಾರ್ಷಿಕ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭವು ಇತ್ತೀಚಿಗೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಬಿ. ಗಣನಾಥ ಶೆಟ್ಟಿ ಅವರು ಎನ್ಎಸ್ಎಸ್‌ ಜೀವನ ಪಾಠವನ್ನು ಕಲಿಸುತ್ತದೆ. ಈ ಅನುಭವ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ ಎಂದರು. ಇನ್ನೋರ್ವ ಸಂಸ್ಥಾಪಕರಾದ ಅಶ್ವತ್.ಎಸ್.ಎಲ್. ಎನ್‌ಎಸ್‌ಎಸ್‌ನ ವಿಶೇಷ ಶಿಬಿರಗಳು ಹಾಗೂ ಇತರೆ ಸಮಾಜಮುಖಿ ಸೇವೆಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸಬಲ್ಲದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥಾಪಕರಲ್ಲಿ ಓರ್ವರು ಹಾಗೂ ಪ್ರಾಂಶುಪಾಲರೂ ಆದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಸೇವಾ ಮನೋಭಾವ ಶ್ರೇಷ್ಠವಾದುದ್ದು, ಈ ವ್ಯಕ್ತಿತ್ವ ಬದುಕಿನುದ್ದಕ್ಕೂ ಸಹಕಾರಿ ಎಂದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್‌ಚಟುವಟಿಕೆಗಳಲ್ಲಿ ಸಾಧನೆ ಗೈದ ಸ್ವಯಂ ಸೇವಕರಿಗೆ ಫಲಕ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ರಾಘವೇಂದ್ರ ಬಿ. ರಾವ್. ಚಂದ್ರಕಾಂತ ಹಾಗೂ ಬೋಧಕೇತರು ಹಾಗೂ ಎನ್‌ಎಸ್‌ಎಸ್‌ಸ್ವಯಂ ಸೇವಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಧ್ಯ ಪಡ್ರೆ ಕಾರ್ಯಕ್ರಮ ನಿರೂಪಿಸಿ, ಹಿತ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಮಾಜದ ಒಳಿತಿಗಾಗಿ ಸಮಾಜಕ್ಕೊಸ್ಕರ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಆನಂದ್ ಸಿ. ಕುಂದರ್ ಕರಾವಳಿಯ ಕಲ್ಪತರು ಆಗಿದ್ದಾರೆ ಎಂದು ಉಡುಪಿಯ ಹೊಸಬದುಕು ಆಶ್ರಮದ ಮುಖ್ಯಸ್ಥ ಹ.ರಾ ವಿನಯಚಂದ್ರ ಸಾಸ್ತಾನ ನುಡಿದರು. ಅವರು ಜನತಾ ಸಂಸ್ಥೆಯಲ್ಲಿ ಆನಂದ್ ಸಿ ಕುಂದರ್ 77ನೇ ವರ್ಷಾಚರಣೆ ಅಂಗವಾಗಿ ಗೀತಾನಂದ ಫೌಂಡೇಶನ್ ವತಿಯಿಂದ ಸುಮಾರು 25 ಲಕ್ಷಕ್ಕೂ ಅಧಿಕ ರೂಗಳನ್ನು ವಿವಿಧ ಆಶ್ರಮಕ್ಕೆ, ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು ಕಾರ್ಯದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡವರ ಬಗ್ಗೆ ಅಶಕ್ತರಿಗೆ ತುಡಿಯುವ ಮನಸ್ಥಿತಿ ಅಪರೂಪದಲ್ಲಿ ಅಪರೂಪವಾಗಿದೆ. ಆನಂದ್ ಸಿ ಕುಂದರ್ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದ್ದು ಅತ್ಯಂತ ಶ್ಲಾಘನಾರ್ಹ ಕಾರ್ಯವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ವೇಳೆ ಉಡುಪಿಯ ಹೊಸಬದುಕು, ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮ, ಮಾನಸ ಜ್ಯೋತಿ ವಿಶೇಷಚೇತನ ಶಾಲೆ, ಬ್ರಹ್ಮಾವರದ ವಿಜಯ ಬಾಲನಿಕೇತನ ಸೇರಿದಂತೆ ಒಟ್ಟು 11 ಆಶ್ರಮ ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ – ‘ಸುಕೃತಿ 2025’ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಎಪ್ರಿಲ್‌ 30ರ ಬುಧವಾರ ಹಾಗೂ ಮೇ 01ರ ಗುರುವಾರದಂದು ನಡೆಯಲಿದೆ. ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ, ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ  ಮಠದ ಆಶ್ರಯದಲ್ಲಿ ಈ ಭಾರಿಯ ಸಾಹಿತ್ಯ ಸಮ್ಮೇಳನ ಎರಡು ದಿನಗಳ ಕಾಲ ಜರುಗಲಿದೆ. ಎಪ್ರಿಲ್‌ 30ರ ಬುಧವಾರ ಬೆಳಿಗ್ಗೆ 08-30ಕ್ಕೆ ಧ್ವಜಾರೋಹಣ, ಬೆಳಿಗ್ಗೆ 09-00ರಿಂದ ಸಮ್ಮೇಳನಾಧ್ಯಕ್ಷರನ್ನು ಎದಿರುಗೊಳ್ಳುವುದು, ಅದೇ ಸಮಯದಲ್ಲಿ ವಿಪಂಚಿ ಬಳಗ ಮಣಿಪಾಲ ಇವರಿಂದ ವೀಣಾವಾಣಿ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆಅಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾಂದಗಳವರು ಹಾಗೂ ಪರ್ಯಾಯ ಶ್ರೀ ಪುತ್ತಿಗೆಮಠದ ಕಿರಿಯ ಸ್ವಾಮೀಜಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾಂದಗಳವರು ದೀಪಬೆಳಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜು ಕಳೆದ 26 ವರ್ಷಗಳಿಂದ ಕಲಿಕೆಗೆ ಮತ್ತು ಫಲಿತಾಂಶಕ್ಕೆ ಒತ್ತು ನೀಡುವ ಮೂಲಕ ಇದುವರೆಗ 63 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ನೀಡಿದ ಹೆಗ್ಗಳಿಕೆ ಪಡೆದಿದೆ. ಈಗಾಗಲೇ ಸಂಸ್ಥೆಯಲ್ಲಿ  2025-26ನೇ ಸಾಲಿನ  ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ  ಪಿಯು ಪ್ರವೇಶಾತಿ ಆರಂಭಗೊಂಡಿದ್ದು,  ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ.   ವಿದ್ಯಾರ್ಥಿಗಳು ತಮ್ಮ 9ನೇ ತರಗತಿ  ಅಥವಾ ಪ್ರಿಪರೇಟರಿ ಪರೀಕ್ಷಾ ಅಂಕಗಳ ಆಧಾರದ ಮೇಲೆ  ಕಾಲೇಜಿನಲ್ಲಿ  ತಮ್ಮ ಸೀಟುಗಳನ್ನು ಕಾಯ್ದಿರಿಸಬಹುದು.ಹತ್ತನೇ ತರಗತಿಯ ನಂತರದ ಎರಡು ವರ್ಷಗಳು, ವಿದ್ಯಾರ್ಥಿ ಜೀವನದ ಪ್ರಮುಖ ಕಾಲಘಟ್ಟ. ಈ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹಾಗೂ ಅಂಕಗಳಿಸುವ ಕಡೆಗೆ ಹೆಚ್ಚು ಒತ್ತು ಕೊಟ್ಟು ಕಲಿಯಬೇಕಾಗುತ್ತದೆ. ಅವರ ಜೀವನದ ಗುರಿ ಸಾಧನೆಯು  ಪಿಯುಸಿಯಲ್ಲಿ ಅವರು ಪಡೆಯುವ ಅಂಕಗಳ ಮೇಲೆ  ನಿರ್ಧಾರಿತವಾಗಿರುತ್ತದೆ. ಹೆತ್ತವರು ಸಾಧಾರಣವಾಗಿ ಮಕ್ಕಳನ್ನು ಇತರ ಚಟುವಟಿಕೆಗಳಿಂದ ಮುಕ್ತಗೊಳಿಸಿ ಓದಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಶನಿವಾರ ದೇವಳದಲ್ಲಿ ಧ್ವಜಾರೋಹಣ ನೆರವೆರಿಸಲಾಯಿತು. ಈ ಸಂದರ್ಭದಲ್ಲಿ ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ದೇವಳದ ತಂತ್ರಿ ರಾಜೇಶ್ ಐತಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪರಮೇಶ್ವರ ಪಟವಾಲ್, ಪ್ರಶಾಂತ್ ಕುಮಾರ್ ಶೆಟ್ಟಿ, ಜಯರಾಮ್ ಯಡ್ತರೆ, ದೊಟ್ಟಯ್ಯ ಪೂಜಾರಿ, ಇಂದಿರಾ ಕೊಠಾರಿ, ಕೊಲ್ಲೂರು ಮೂಕಾಂವಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ಬಾಬು ಹೆಗ್ಡೆ ತಗ್ಗರ್ಸೆ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕೊಲ್ಲೂರು ದೇವಳದ ಧರ್ಮದರ್ಶಿ ಧನಾಕ್ಷೀ ವಿಶ್ವನಾಥ ಪೂಜಾರಿ ಹಾಗೂ ದೇವಳದ ಸಿಬ್ಬಂದಿಗಳು, ಊರಿನವರು ಇದ್ದರು. ಮೇ.2ರಂದು ಶ್ರೀ ದೇವರ ಮನ್ಮಹಾರಥೋತ್ಸವ ಜರುಗಲಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಜ್ಯೂನಿಯರ್ ಕಾಲೇಜಿನ ನಿವೃತ್ತ ಉಪನ್ಯಾಸಕ ಬೀಜಾಡಿ ಅರಸರಬೆಟ್ಟು ನಿವಾಸಿ ಕೃಷ್ಣಮೂರ್ತಿ ಪಡುವರಿ (78) ಅವರು ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್, ಲೈಟ್ ಹೌಸ್ ಗಂಗೊಳ್ಳಿ ಇದರ 34ನೇ ವಾರ್ಷಿಕೋತ್ಸವದ ಅಂಗವಾಗಿ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಕಬ್ಬಡಿ ಅಸೋಸಿಯೇಶನ್ ಮತ್ತು ಶ್ರೀ ಜಟ್ಟಿಗೇಶ್ವರ ಮಹಿಳಾ ಮಂಡಳಿ ಲೈಟ್‌ಹೌಸ್ ಗಂಗೊಳ್ಳಿ ಸಹಕಾರದೊಂದಿಗೆ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗಾಗಿ ಲೈಟ್‌ಹೌಸ್ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟದಲ್ಲಿ ಮದ್ದುಗುಡ್ಡೆ ಫ್ರೆಂಡ್ಸ್ ಕುಂದಾಪುರ ತಂಡ ಪ್ರಥಮ ಸ್ಥಾನ ಪಡೆದು ’ಶ್ರೀ ಜಟ್ಟಿಗೇಶ್ವರ ಟ್ರೋಫಿ-2025 ನ್ನು ತನ್ನದಾಗಿಸಿಕೊಂಡಿತು. ಕೋಟೆ ಜಟ್ಟಿಗೇಶ್ವರ ತಂಡ ದ್ವಿತೀಯ ಸ್ಥಾನ, ಸಹರಾ ಗಂಗೊಳ್ಳಿ ತಂಡ ತೃತೀಯ ಸ್ಥಾನ ಹಾಗೂ ನವದುರ್ಗ ಹೊನ್ನಾವರ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಸುಮಾರು 15 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ, ಅತಿಥಿಯಾಗಿದ್ದ ಅಖಿಕ ಕರ್ನಾಟಕ ಕೊಂಕಣ ಖಾರ್ವಿ ಕಬ್ಬಡಿ ಅಸೋಸಿಯೇಷನ್ ಉಪಾಧ್ಯಕ್ಷ ಜಗದೀಶ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಹಿರಿಯ ದಂತ ವೈದ್ಯ ಡಾ. ಎನ್.ಪಿ. ಕಮಾಲ್ ( 93) ನಿಧನರಾಗಿದ್ದಾರೆ. ಕುಂದಾಪುರದ ಹಳೆ ಬಸ್ ನಿಲ್ದಾಣದ ವಠಾರದಲ್ಲಿ ದಂತ ವೈದ್ಯಕೀಯ ಕೇಂದ್ರ ಹಾಗೂ ಕನ್ನಡಕ ಮಳಿಗೆ ಹೊಂದಿದ್ದ ಅವರು ಹಿರಿಯ ತಲೆಮಾರಿನ ಜನಪ್ರಿಯ ವೈದ್ಯರಾಗಿದ್ದರು‌. ರೋಟರಿ ಸಂಸ್ಥೆಯಲ್ಲಿ ರೋಟರಿ ಮಾಜಿ ಅಧ್ಯಕ್ಷ ಹಾಗೂ ರೋಟರಿ ಜಿಲ್ಲಾ ಅಸಿಸ್ಟಂಟ್ ಗವರ್ನರ್ ಸೇವೆ ಸಲ್ಲಿಸಿ ಜನಾನುರಾಗಿ ಆಗಿದ್ದರು. ವಕ್ವಾಡಿಯಲ್ಲಿ ಕನ್ನಡಕ ಉತ್ಪಾದನಾ ಘಟಕವನ್ನು ಆರಂಭಿಸಿ ಬಹಳ ವರ್ಷ ನಡೆಸಿದ್ದರು. ಮೂಲತಃ ಉತ್ತರ ಕೇರಳದವರಾಗಿದ್ದು ಅನೇಕ ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದು ನೆಲೆಸಿದ್ದರು. ಅವರು 4 ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರಮಟ್ಟದ ಎನ್‌ಐಎಫ್‌ಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ 13 ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಸೃಜನ್ ಆರ್ ಗುರಿಕಾರ್, ಯಶ್ಮಿತಾ ಕೆ., ಚರಣ್ ಜಿಎಂ., ಚಿನ್ಮಯಿ ಆರ್., ಹರ್ಷ ಎಸ್. ಗೌಡ, ಜೀವಿತ ಜಿ. ಆರ್., ಮಾನಸಿ ಪಿ., ನವ್ಯ ಕೆ. ಆರ್., ಪೂರ್ವಿಕ್ ಕೆ.ಸಿ., ಪ್ರಾಪ್ತಿ ಎಂ. ಗೌಡ, ರಕ್ಷಾ, ಸುಖಿ ಆರ್. ಗೌಡ, ವಿಕಾಸ್ ಡಿ. ಸಿ. ಆಯ್ಕೆಯಾಗಿದ್ದಾರೆ. ಪಿಯು ವಿದ್ಯಾರ್ಥಿಗಳು ಎದುರಿಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅತ್ಯುತ್ತಮ ತರಬೇತಿಯನ್ನು ನೀಡುತ್ತಾ ಬಂದಿದ್ದು ಎಲ್ಲಾ ವಿಭಾಗದಲ್ಲೂ ಯಶಸ್ವೀ ಫಲಿತಾಂಶ ನೀಡುತ್ತಿದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, ಎನ್‌ಐಎಫ್‌ಟಿ ಪರೀಕ್ಷೆಯ ಸಂಯೋಜಕರಾದ ರಕ್ಷಿತ್, ಸುಮಂತ್ ದಾಮ್ಲೆ, ಶರತ್ ಅಭಿನಂದಿಸಿದ್ದಾರೆ.

Read More