Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ:  ಶಿಕ್ಷಣದ ಗುಣಮಟ್ಟ, ಶಿಸ್ತಿನ ವಾತಾವರಣ ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಹೆಸರು ವಾಸಿಯಾದ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿ 2024- 25ನೇ ಶೈಕ್ಷಣಿಕ ವರ್ಷದಲ್ಲಿ ಐಸಿಎಸ್ಇ 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳಾದ ದೀಕ್ಷಾ ಕೋರಿ  98.80% ಅಂಕದೊಂದಿಗೆ  ಪ್ರಥಮ ಸ್ಥಾನ, ನಿಧಿ ಶೆಟ್ಟಿ 98.60%  ದ್ವಿತೀಯ ಸ್ಥಾನ ಹಾಗೂ ಹರ್ಷಿತಾ ಎಸ್. ಪೂಜಾರಿ 98.20% ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಈ ಶಾಲೆ, ಕಳೆದ 22 ವರ್ಷದಿಂದ ನೂರಕ್ಕೆ ನೂರು ಫಲಿತಾಂಶ ದಾಖಲಿಸಿರುವ ಸಾಧನೆ ಮಾಡಿರುವುದು ತಾಲೂಕಿನ ಏಕೈಕ ಐಸಿಎಸ್ಇ ಪಠ್ಯಕ್ರಮದ ಶಾಲೆ ಇದಾಗಿದೆ. ಈ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸುಮಾರು 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ 660 ಮಕ್ಕಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: 2024-25ನೇ ಸಾಲಿನ ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿರೂರಿನ ಗ್ರೀನ್‌ ವ್ಯಾಲಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪ್ರತೀಕ್‌ ಪ್ರಭು ಶೇ.98.4 ಅಂಕ ಪಡೆದು, ಶಾಲೆಗೆ ಟಾಪರ್‌ ಆಗಿರುವುದಲ್ಲದೇ, ರಾಷ್ಟ್ರಮಟ್ಟದಲ್ಲಿ 8ನೇ ರ್ಯಾಂಕ್‌ ಪಡೆದಿದ್ದಾರೆ. ಪ್ರತೀಕ್‌ ಪ್ರಭು ಅವರು ಶಿರೂರಿನ ಉದ್ಯಮಿ ಪ್ರಸಾದ್ ಪ್ರಭು ಹಾಗೂ ಜಾನ್ವಿ ಪ್ರಭು ದಂಪತಿಗಳ ಪುತ್ರರಾಗಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ರಾಜ್ಯದ ವಿವಿಧ ಕಡೆಗಳಲ್ಲಿ ಸಿ.ಇ.ಟಿ. ಪರೀಕ್ಷೆಗಾಗಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಘಟನೆಯ ಕುರಿತು ಮಂಗಳವಾರ ಸಾಲಿಗ್ರಾಮದಲ್ಲಿ ಜನಿವಾರಧಾರಿ ಸಮಾಜಗಳ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ನೇತೃತ್ವದಲ್ಲಿ ಗೌಡ ಸಾರತ್ವತ ಬ್ರಾಹ್ಮಣ ಸಮಾಜ ಸಾಲಿಗ್ರಾಮ ವಲಯ, ಕೋಟ ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ, ಗಾಣಿಗ ಯುವ ಸಂಘಟನೆ ಕೋಟ ವಲಯದ ಸಹಯೋಗದಲ್ಲಿ ಪ್ರತಿಭಟನೆ, ಸಭೆ ನಡೆಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯಾಧ್ಯಕ್ಷ ಶಿವರಾಮ ಉಡುಪ ಮಾತನಾಡಿ, ಜನಿವಾರ ಎನ್ನುವಂತದ್ದು ಷೋಡಶ ಕರ್ಮಗಳನ್ನು ಆಚರಿಸುವ ಪ್ರತಿಯೊಂದು ಸಮಾಜಗಳಿಗೆ ಅತ್ಯಂತ ಪವಿತ್ರವಾದದ್ದು. ಈ ಹಿಂದೆ ಯಾವುದೇ ಪರೀಕ್ಷೆಯಲ್ಲಿ ಇದನ್ನು ಕತ್ತರಿಸಿದ ಉದಾಹರಣೆ ಇಲ್ಲ. ಆದ್ದರಿಂದ ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ಪ್ರಕರಣ ಜನಿವಾರ ಧರಿಸುವ ಪ್ರತಿಯೊಂದು ಸಮಾಜದ ಮನಸ್ಸಿ ಭಾವನೆಗೆ ನೋವುಂಟು ಮಾಡಿದೆ. ಜನಿವಾರ ಧಾರಿ ಸಮುದಾಯಕ್ಕೆ ನ್ಯಾಯಬೇಕು ಇಂಥಹ ಪ್ರಸಂಗಗಳು ಉದ್ಭವಿಸದಂತೆ ಸರಕಾರ ಜಾಗೃತಿ ವಹಿಸಬೇಕು ಎಂದರು. ಕೋಟ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಮಣೂರು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜು ಶೈಕ್ಷಣಿಕವಾಗಿ ಪ್ರಗತಿಯ ಶಿಖರವನ್ನೇರಿ ಸಾಧನೆಗಳ ಮೇಲೆ ಸಾಧನೆಗಳನ್ನು ಸಾಧಿಸುತ್ತಾ ಬಂದಿರುವುದು ಗಮನಾರ್ಹ ವಿಷಯವಾಗಿದೆ. ಈ ಶೈಕ್ಷಣಿಕ ವಿಷಯದಲ್ಲಿ ಸಾಧನೆಗಳ ಮಹಾಪೂರವನ್ನೇ ಮಾಡಿ ’ಸಾಧನೆಗಳ ಸರದಾರ’ಎನ್ನುವ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ. ಬೋರ್ಡ್, ಜೆಇಇ, ಸಿಇಟಿ, ನೀಟ್, ಸಿಎ, ಸಿಎಸ್ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿಯೇ ಅತ್ಯುತ್ತಮ ರ್ಯಾಂಕ್‌ ಹಾಗೂ ಉತ್ತೀರ್ಣತೆಯ ಪ್ರಮಾಣವನ್ನು ಪಡೆದುದಲ್ಲದೇ ಮೇ.13ರಂದು ನಡೆದ ಭಾರತೀಯ ಸೇನೆಯ ನೌಕಾಪಡೆ ಮತ್ತು ವಾಯುಪಡೆಯನ್ನು ಸೇರಲು ಆರು ವಿದ್ಯಾರ್ಥಿಗಳನ್ನು ಪ್ರತ್ಯೇಕ ಗುಂಪಾಗಿ ವಿಗಂಡಿಸಿ, ಅವರಿಗೆ ವಿಶೇಷ ತರಬೇತಿ ನೀಡಿ ಅದರಲ್ಲಿ ನಮ್ಮ ಸಂಸ್ಥೆಯ ಶ್ರೀಹರ್ಷ ಪಿ. ಎನ್ ಎನ್ನುವ ವಿದ್ಯಾರ್ಥಿಯು ಉತ್ತೀರ್ಣತೆಯನ್ನು ಹೊಂದುವ ಮೂಲಕ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಧನೆಯ ಗರಿಗೆ ಅದ್ಭುತ ಕೀರ್ತಿಯನ್ನು ತಂದಿರುವುದು ಎಕ್ಸಲೆಂಟ್ ಶೈಕ್ಷಣಿಕ ಇತಿಹಾಸದಲ್ಲಿ ಇನ್ನೊಂದು ಮಹತ್ತರ ಸಾಧನೆಯಾಗಿದೆ. ಈ ಎಕ್ಸಲೆಂಟ್ ಶೈಕ್ಷಣಿಕ ಸಾಧನೆಗೆ ಹೊಸ ಅಧ್ಯಾಯ ಬರೆದ ಶ್ರೀಹರ್ಷ ಪಿ. ಎನ್ ವಿದ್ಯಾರ್ಥಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ನಾನು ಮತ್ತು ನನ್ನ ಗೀಚು ಸಾಹಿತ್ಯ ಬಳಗವು ಹಮ್ಮಿ ಕೊಂಡಿದ್ದ ಯುಗಾದಿ – ವಿಷು ಹಬ್ಬ ವಿಶೇಷ ಗೀಚು ಕಥಾ ಸ್ಪರ್ಧೆ 2025ರಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಲೇಖಕ ನರೇಂದ್ರ ಎಸ್. ಗಂಗೊಳ್ಳಿ ಅವರ ಕಥೆ “ಯಾರು ಒಳ್ಳೆಯವರು?’ ಅತ್ಯುತ್ತಮ ಕಥಾ ಬಹುಮಾನಕ್ಕೆ ಪಾತ್ರವಾಗಿದೆ. ಒಂದು ಸಂಪಾದಿತ ಕೃತಿ ಸೇರಿದಂತೆ ಒಟ್ಟು ಐದು ಪುಸ್ತಕಗಳನ್ನು ಬರೆದಿರುವ ನರೇಂದ್ರ ಎಸ್. ಗಂಗೊಳ್ಳಿ ಅವರ ಮುಂದಿನ ಕೃತಿ ‘ರೂಮಿನೊಳಗಿಂದ’  ಸದ್ಯದಲ್ಲೇ ಬಿಡುಗಡೆಯಾಗಲಿದೆ.

Read More

ಕುಂದಾಪೃ ಡಾಟ್‌ ಕಾಂ ಸುದ್ದಿ.ಅಮಾಸೆಬೈಲು: ವಿಪರೀತ ಕುಡಿತದ ಚಟ ಹೊಂದಿದ್ದ ಇಲ್ಲಿನ ಬಳ್ಳನೆ ಬೂತ್ನಾಡಿ ನಾರಾಯಣ (62) ಅವರು ಜೀವನದಲ್ಲಿ ಜುಗುಪ್ಪೆಗೊಂಡು ಮನೆಯ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಮನೆಯವರು ಹಾಲಾಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಅಮಾಸೆಬೈಲು ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ ಸೂಕ್ತವಾಗಿರುವ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಗೇರು, ಮಲ್ಲಿಗೆ, ಅಂಗಾಂಶ ಬಾಳೆ, ಅಪ್ರಧಾನ ಹಣ್ಣಿನ ಬೆಳೆಗಳಾದ ಡ್ರಾö್ಯಗನ್ ಫ್ರೂಟ್, ರಾಂಬೂತನ್ ಹಾಗೂ ಸಾಂಬಾರು ಬೆಳೆಗಳಾದ ಕಾಳುಮೆಣಸು, ಜಾಯಿಕಾಯಿ, ದಾಲ್ಚಿನ್ನಿ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿರುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು ಆಸಕ್ತ, ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ, ಉದ್ಯೋಗ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಪ್ರತಿ, ಸಣ್ಣ ರೈತರ ದೃಢೀಕರಣ ಪತ್ರ/ ಬಿ.ಪಿ.ಎಲ್ ಕಾರ್ಡ್/ ಜಾತಿ ಪ್ರಮಾಣ ಪತ್ರ ಇವುಗಳ ಛಾಯಾ ಪ್ರತಿ ಹಾಗೂ ಗ್ರಾಮ ಪಂಚಾಯತಿಯಿಂದ ಪಡೆದ ಶಿಫಾರಸ್ಸು ಪತ್ರ ಸೇರಿದಂತೆ ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಸಮೀಪದ ಗ್ರಾಮ ಪಂಚಾಯತಿ ಅಥವಾ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಡುಪಿಯ ಎಂ.ಜಿ.ಎನ್.ಆರ್.ಇ.ಜಿ.ಎ (ಒಉಓಖಇಉಂ) ತಾಂತ್ರಿಕ ಸಹಾಯಕಿ ಮಮತಾದೇವಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಮೂಲಕ 2025ರ ಎಪ್ರಿಲ್‌ನಲ್ಲಿ ನಡೆದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 25 ವಿದ್ಯಾರ್ಥಿಗಳು ತೇರ್ಗಡೆಯಾಗಿ, ರಾಷ್ಟ್ರ ಮಟ್ಟದ ಗಮನವನ್ನು ಆಳ್ವಾಸ್ ಕಾಲೇಜಿನೆಡೆಗೆ ಸೆಳೆದಿದ್ದಾರೆ.  ಬಾಬು ಸಿದ್ದಲಿಂಗಪ್ಪ ಗೌರೀ, ಬಸವರಾಜ ಕರೆಪ್ಪ ಪೂಜೇರಿ, ಪುನೀತ್ ಕುಮಾರ್ ಬಿಜಿ, ಸಿದ್ಧಾಂತ್ ಎಸ್ ಮಠಪತಿ, ಆದಿತ್ಯ, ನಿಖಿಲ್ ಭಾಸ್ಕರ್ ಭಟ್, ಆಕಾಶ್ ಪೂಜಾರ್, ಕೇಶವ ಬೂಬ್, ರೋಷನ್, ವೈಭವ್ ಪಿವಿ, ಮೋಹಿತ್ ಕುಮಾರ್, ಪ್ರಣವ್ ವಿ ಪಂಡಿತ್, ಅಕ್ಷಯ್ ಭಾರದ್ವಾಜ್, ಅನುಷ್‌ ಅರುಣ್, ಪಿಯೂಷ್ ಹೆಚ್, ವಿಸ್ಮಯ ನಾರಾಯಣ್, ಮೆಲ್ರೊಯ್ ಕ್ಯಾಸ್ಟೆಲಿನೊ, ಇಶಾನ್, ಪುನರ್ವ, ಸುಮನ್ ಭಟ್, ದುಷ್ಯಂತ್, ಅಖಿಲ್ ಜೆ.ಎಚ್, ವಿಶ್ವವಿಜಿತ್, ದಿಗಂತ್ ಮತ್ತು ಅಭಿಷೇಕ್ ಜೋಗಿ, ಈ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಯು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ಮೂಲಕ ನ್ಯಾಷನಲ್ ಡಿಫೆನ್ಸ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಜಿಲ್ಲೆಯ ಪ್ರತಿಯೊಬ್ಬ ಅರ್ಹರಿಗೂ ಇದರ ಲಾಭ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಬಹುತೇಕ ಅರ್ಹ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಯೋಜನೆಗೆ ಅರ್ಜಿ ಸಲ್ಲಿಸಿದ ಕೆಲವೇ ಜನರಿಗೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಲಾಭ ಪಡೆಯಲು ಸಮಸ್ಯೆಗಳು ಉಂಟಾಗಿವೆ. ಇವುಗಳನ್ನು ಆದ್ಯತೆಯ ಮೇಲೆ ಅರ್ಹರಿದ್ದಲ್ಲಿ ಫಲಾನುಭವಿಗಳನ್ನಾಗಿಸಬೇಕು. ಪ್ರತಿಯೊಂದು ಇಲಾಖೆಗಳಲ್ಲಿಯೂ ಯೋಜನೆಯ ಸಮಸ್ಯೆಗಳು ಬಗೆಹರಿಸಲು ಅಧಿಕಾರಿಗಳನ್ನು ನೇಮಕಮಾಡುವುದು ಸೂಕ್ತ ಎಂದರು. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾದ ಕುಟುಂಬದ ಯಜಮಾನಿ ಮರಣ ಹೊಂದಿದ್ದಲ್ಲಿ ಯಜಮಾನಿ ಬದಲಾವಣೆಗೆ, ಹೊಸ ಮನೆ ನಿರ್ಮಾಣವಾದಾಗ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ‘ಫೀಡರ್ ವ್ಯಾಪ್ತಿ ಪ್ರದೇಶಕ್ಕೆ ಒಳಪಟ್ಟಿರುವ ಗಂಗೊಳ್ಳಿ, ತ್ರಾಸಿ, ಗುಜ್ಜಾಡಿ, ಮುಳ್ಳಿಕಟ್ಟೆ ಹೊಸಾಡು, ಮೊವಾಡಿ, ಅರಾಟೆ, ನಾಯಕವಾಡಿ, ಕಂಚುಗೋಡು ಭಾಗದಲ್ಲಿ ಕಳೆದ ಒಂದು ವಾರದಿಂದ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿದ್ದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿ ಮಾಹಿತಿ ನೀಡದೆ ಬಿರು ಬೇಸಿಗೆ ಸಮಯದಲ್ಲಿ ಅನಿಮಿತವಾಗಿ ವಿದ್ಯುತ್ ಕಡಿತಗೊಳಿಸುತ್ತಿದ್ದರಿಂದ ತಾಪಮಾನದ ಬಿಸಿ ತಾಳಲಾರದೆ ಮಕ್ಕಳು, ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರು, ಹಿರಿಯ ನಾಗರಿಕರು ಸಂಕಷ್ಟ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಕಡಿತದಿಂದ ವ್ಯಾಪರಸ್ಥರು ಹೈರಾಣಾಗಿ ಹೋಗಿದ್ದಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಲೋಡ್ ಶೆಡ್ಡಿಂಗ್ ಸಹಿತ ಅನಿಯಮಿತ ವಿದ್ಯುತ್ ನಿಲುಗಡೆಯನ್ನು ಕೈ ಬೀಡಬೇಕೆಂದು ಮಾಜಿ ಜಿ.ಪಂ ಸದಸ್ಯ ಅನಂತ ಮೊವಾಡಿ ಆಗ್ರಹಿಸಿದ್ದಾರೆ.

Read More