Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್ ತುಮಕೂರು ಜಿಲ್ಲೆಯಲ್ಲಿ ನಡೆದ U17 ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಆರಾಧ್ಯ ಎಸ್. ಶೆಟ್ಟಿ ಅವರು ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಸ್ಸಾಂನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಚೆಸ್ ಆಟಗಾರ್ತಿಯಾಗಿ ಪ್ರತಿನಿಧಿಸಲಿರುವ ಆರಾಧ್ಯಗೆ ಪ್ರಕೃತಿ ಫೌಂಡೇಶನ್ ರಿ. ಬೆಂಗಳೂರು ಮತ್ತು ಕಶ್ವಿ ಚೆಸ್ ಸ್ಕೂಲ್ ರಿ. ಕುಂದಾಪುರ ಸಂಸ್ಥೆಗಳು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಲೇಖಕಿ ಸಾರಿಕಾ ಅಶೋಕ್ ಅವರ ಕವನ ಸಂಕಲನ “ಲಹರಿ” ಬಿಡುಗಡೆ ಸಮಾರಂಭವು ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಯ ವಿಶಾಲಾಕ್ಷಿ ಪೂಂಜಾ ಸಭಾಭವನದಲ್ಲಿ ಇತ್ತೀಜಿಗೆ ಜರುಗಿತು. ಕರ್ನಾಟಕ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾರಿಕಾ ಅಶೋಕ್ ಅವರ ಕವನಗಳ ಆಶಯ ಜೀವನ ಜಂಜಡಗಳ ಸಾಮಾಜಿಕ ಕಾಳಜಿಗಳು ಅಪೂರ್ವದದ್ದು ಎಂದರು. ಕುಂದಪ್ರಭ ಪತ್ರಿಕೆಯ ಸಂಪಾದಕರಾಗಿರುವ ಯುಎಸ್ ಶೆಣೈ ಅವರು ಪುಸ್ತಕ ಬಿಡುಗಡೆಗೊಳಿಸಿ, ಕವಯಿತ್ರಿ ಕವನ ರಚನೆಯಲ್ಲಿ ತನ್ನದೇ ಆದ ಛಾಪು ಮೂಡಿಸಬಲ್ಲರು. ಸಾರಿಕಾ ಅಶೋಕ್ ಅವರ ಕುಂದದ ಪ್ರತಿಭೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಕುಲ ಪಬ್ಲಿಕ್ ಸ್ಕೂಲ್‌ನ ಜಂಟಿ ಆಡಳಿತ ನಿರ್ದೇಶಕರಾದ ಅನುಪಮಾ ಎಸ್. ಶೆಟ್ಟಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ, ವಾಸ್ತು ತಜ್ಞರಾದ ಬಸವರಾಜ್ ಶೆಟ್ಟಿಗಾರ್, ಯಕ್ಷಗಾನ ಪ್ರಸಂಗ ಕರ್ತರಾದ ಮಹಾಬಲ ಹೇರಿಕುದ್ರು, ಬಸ್ರೂರು ಗ್ರಾಮ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಇವರ ಆಶ್ರಯದಲ್ಲಿ  ಕಿರಿಮಂಜೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಕೋಡಿನಲ್ಲಿ ನಡೆಯಿತು. ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಿರಿಮಂಜೇಶ್ವರದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಕೊಂಡಿರುತ್ತಾರೆ. ಕಿರಿಯರ ವಿಭಾಗ : ( 1-4 )ಚಿತ್ರಕಲೆ – ರಶ್ಮಿತಾ ಪ್ರಥಮಧಾರ್ಮಿಕ ಪಠಣ  – ಅರೇಬಿಕ್  – ನೂಯೀಮ್ ಪ್ರಥಮಆಶುಭಾಷಣ  – ಸನ್ವಿಕಾ ದ್ವಿತೀಯ  ಹಿರಿಯರ ವಿಭಾಗ: (  5 – 7 )ಭಕ್ತಿ ಗೀತೆ – ರಾಘವಿ ದ್ವಿತೀಯದೇಶಭಕ್ತಿ ಗೀತೆ – ಖುಷಿ ಪ್ರಥಮಪ್ರಬಂಧ ರಚನೆ- ಸಾರಿಕಾ ಡಿ  ಪ್ರಥಮಆಶುಭಾಷಣ – ನಮ್ಯ  ದ್ವಿತೀಯಧಾರ್ಮಿಕ ಪಠಣ ಅರೇಬಿಕ್ – ಎಂ. ಮಹಾರೂಫ್ ದ್ವಿತೀಯಕವನ ಪದ್ಯ ವಾಚನ  – ಉತ್ಸವಿ ದ್ವಿತೀಯ ಮಿಮಿಕ್ರಿ – ಅದ್ವಿಕ್ ಪ್ರಥಮಧಾರ್ಮಿಕ ಪಠಣ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಈ ನಾಡಿನಲ್ಲಿರುವ ಸಮಾಜಗಾತುಕ ಶಕ್ತಿಗಳ ಸಂಹಾರಕ್ಕೆ ಇನ್ನಷ್ಟು ವಿಜಯಲಕ್ಷ್ಮಿಯರು ಹುಟ್ಟಿ ಬರಲಿದ್ದಾರೆ. ಇದು ಎಚ್ಚರಿಕೆಯ ಕರೆಗಂಟೆ ಎಂದು ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿದರು. ಅವರು ಭಾನುವಾರ ಕೋಟದ ಗಾಂಧಿಮೈದಾನದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಸದ್ಭಾವನಾ -2025 ಶೀರ್ಷಿಕೆಯಡಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನೈತಿಕತೆ, ಸತ್ಯದ ಪರವಾಗಿ ಹೋರಾಟ ಮಾಡುವ ಪತ್ರಕರ್ತರು ಈ ನಾಡಿನಲ್ಲಿ ಕಾರ್ಯಾಚರಿಸಲು ಸಿದ್ಧರಾಗಿದ್ದಾರೆ,. ಪ್ರಸ್ತುತ ಪತ್ರಕರ್ತರು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ. ಆದರೆ ನೀವು ವೀಕ್ಷಕರಾಗಿ ಓದುಗರಾಗಿ ನಿಮ್ಮ ಪಾತ್ರ ಏನೆಂಬುವುದನ್ನು ಮನಗಾಣಬೇಕಿದೆ. ಅನ್ಯಾಯ ಆದಾಗ ಸೆಟೆದು ನಿಲ್ಲಬೇಕು, ಸ್ವಾರ್ಥ ಹೆಡಿತನ ಬಿಡಿ, ಭ್ರಷ್ಟರ ದುಷ್ಟರ ಆರ್ಭಟಕ್ಕೆ ಕಡಿವಾಣ ನೀವು ಸಾರ್ವಜನಿಕರು ನಿಷ್ಕಲ್ಮಶ ಹೋರಾಟ ಮಾಡಿ ಎಂದರಲ್ಲದೆ ಮೌನ ಸಲ್ಲ ಪ್ರಶ್ನಿಸುವ ಮನಸ್ಥಿತಿ ಸೃಷ್ಠಿಸಿ, ನನ್ನ ಮೇಲೆ ನೂರಾರು ಕೇಸ್ ಗಳನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ  ಕಾಲೇಜಿನಲ್ಲಿ ನಡೆದ “ಆದ್ಯಂತ ಐಟಿ ಫೆಸ್ಟ್ -2025″ನ್ನು ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮಣಿಪಾಲ ಎಮ್.ಐ.ಟಿ ಸಹಪ್ರಾಧ್ಯಾಪಕರಾದ ಡಾ. ರವಿರಾಜ್ ಹೊಳ್ಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಕ್ರೀಯಾವಾಗಿ ತೊಡಗಿಸಿಕೊಳ್ಳುವ ಅವಶ್ಯಕತೆಯ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಮಾತನಾಡಿ, ಕಂಪ್ಯೂಟರ್ ಸೈನ್ಸ್ ಕೋರ್ಸ್ ಜಾಗತಿಕವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶವನ್ನು ಕಲ್ಪಿಸುತ್ತಿದ್ದು ವಿದ್ಯಾರ್ಥಿಗಳು ತಮ್ಮನ್ನು ಕಲಿಕೆಯ ಜೊತೆಗೆ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ವಿಶ್ವಾಸ ಬೆಳೆಸಿಕೊಳ್ಳುವಲ್ಲಿ ಸಹಾಯಕವಾಗುವುದೆಂದು, ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ಐಟಿ ಫೆಸ್ಟ್ ನ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ ಗೊಂಡ, ಕಾಲೇಜಿನ ಹಳೆ ವಿದ್ಯಾರ್ಥಿ ಶಶಿಧರ್ ಶೆಟ್ಟಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ ಕಾರ್ಯಕ್ರಮ ಸರಣಿಯಡಿ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ವಿಶೇಷ ಪ್ರಯತ್ನ ಸತತ 113ನೇ ತಿಂಗಳ ಕಾರ್ಯಕ್ರಮ ಗೊಂಬೆ ಮನೆಯಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ತಲ್ಲೂರು ಶ್ರೀ ವಿಟ್ಠಲ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ. ಎನ್.ಪ್ರಭು, ನಿವೃತ್ತ ಪ್ರಾಂಶುಪಾಲ ಎಮ್. ರತ್ನಾಕರ್ ಪೈ, ವಸಂತಿ ಪಂಡಿತ್ ಕುಂದಾಪುರ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಬಹುಮುಖ ಪ್ರತಿಭೆ, ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಜನಾರ್ದನ ಹಂದೆ, ಮಂಗಳೂರು ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇದಿಕೆಯಿಂದ ಹೊರಹೊಮ್ಮಿದ ಯುವ ಪ್ರತಿಭೆ ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ಕೊಳಲು ವಾದನದಲ್ಲಿ ಪ್ರಶಸ್ತಿ ಪಡೆದ ಶ್ಯಾಮ್ ಜಿ. ಎನ್. ಪೂಜಾರಿ, ಗಂಗೊಳ್ಳಿ ಅವರನ್ನೂ ಕೂಡ ಶಾಲು ಹೊದಿಸಿ ಗೌರವಿಸಲಾಯಿತು. ತದನಂತರ ಜನಾರ್ದನ ಹಂದೆಯವರಿಂದ ಗಾನಧಾರ – ಕಥಾಸಾರ ವಿನೂತನ ಕಾರ್ಯಕ್ರಮ ನೆರೆದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ನಮ್ಮ ದೇಶ ಹಲವು ಕಲೆ, ಸಾಹಿತ್ಯ, ಸಂಸ್ಕ್ರತಿಯನ್ನು ಹೊಂದಿದೆ. ಆಧುನಿಕತೆ ಬೆಳೆದಂತೆ ಯುವ ಸಮುದಾಯ ಸಂಸ್ಕ್ರತಿ, ಸಂಪ್ರದಾಯಗಳನ್ನು ಮರೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕ್ರತಿಯನ್ನು ಉಳಿಸುವಲ್ಲಿ ಕರಾವಳಿ ಯುವಶಕ್ತಿ ಸದಸ್ಯರ ಸಾಧನೆ ಶ್ಲಾಘನೀಯವಾಗಿದೆ ಮತ್ತು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಯಡ್ತರೆ ಇದರ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ ಹೇಳಿದರು. ಅವರು ಭಾನುವಾರ ಕರಾವಳಿ ಯುವಶಕ್ತಿ ಸಭಾ ವೇದಿಕೆಯಲ್ಲಿ ನಡೆದ ಯುವಶಕ್ತಿ ಕಲಾ ಮತ್ತು ಸಾಂಸ್ಕ್ರತಿಕ ಪ್ರತಿಷ್ಠಾನ ಇದರ ಯಕ್ಷಗಾನ ಹಾಗೂ ಭರತನಾಟ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತುಗಳನ್ನಾಡಿದರು. ಬೈಂದೂರು ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ-ಅಪರೇಟಿವನ್‌ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಚಿಂತನೆಗಳನ್ನು ಒಳಗೊಂಡು ಊರಿನ ಅಭಿವೃದ್ದಿಗೆ ಶ್ರಮಿಸುವ ಚಿಂತನೆ ಹೊಂದಿದೆ. ಇಂತಹ ಯುವ ಸಂಘಟನೆಯಿಂದ ಊರಿನ ಬೆಳವಣಿಗೆ ಚಟುವಟಿಕೆಗಳಿಂದ ಕೂಡಿರುತ್ತದೆ. ಇಂದಿನ ಯುವ ಪೀಳಿಗೆಗೆ ಯಕ್ಷಗಾನ,ಭರತನಾಟ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಸಂತೋಷ ಎನ್ನುವುದು ಒಂದು ಮಾನಸಿಕ ಸ್ಥಿತಿ. ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇಂತಹ ಸಂಘಟನೆಗಳಲ್ಲಿ ಸಕ್ರೀಯರಾಗುವ ಮೂಲಕ ನಮ್ಮ ಜೀವನದ ವಿಶೇಷ ಸಂದರ್ಭಗಳನ್ನು ನಮ್ಮ ಧಾರ್ಮಿಕ, ಸಾಂಸ್ಕೃತಿಕ ಚೌಕಟ್ಟಿನಲ್ಲಿ ಅರ್ಥಪೂರ್ಣವಾಗಿ ಆಚರಿಸಿ ಸಂಭ್ರಮಿಸಲು ಸಾಧ್ಯವಿದೆ. ಎಲ್ಲವನ್ನೂ ಹಿತಮಿತವಾಗಿ ನಾವು ಆಚರಿಸಲು ಮನಸ್ಸು ಮಾಡಬೇಕು ಎಂದು ಸೀನಿಯರ್ ಚೇಂಬರ್‌ನ ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕ ಹುಸೈನ್ ಹೈಕಾಡಿ ಹೇಳಿದರು. ಅವರು ನಾವುಂದ ಪದವಿ ಪೂರ್ವ ಕಾಲೇಜಿನಲ್ಲಿ ಉಪ್ಪುಂದ ಸಿನೀಯರ್ ಛೇಂಬರ್‌ನ ನೂತನ ರಚನೆಯ ವಿದ್ಯಾರ್ಥಿ ಯುವಪಡೆಗಳ (ಯೂಥ್ ವಿಂಗ್) ಪದಪ್ರದಾನ ಸಮಾರಂಭ ಉದ್ಘಾಟಿಸಿ, ನೂತನ ಪದಾಧಿಕಾರಿಗಳುಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದ್ದು, ಸಿನೀಯರ್ ಛೇಂಬರ್‌ನಲ್ಲಿ ಪಡೆದುಕೊಂಡ ಅನುಭವ ಗಟ್ಟಿಗೊಳಿಸುವ ಉದ್ದೇಶದಿಂದ ವಿದ್ಯಾರ್ಥಿ ತಂಡದ ಎಲ್ಲಾ ಒಡನಾಡಿಗಳು ಜೊತೆ ಸೇರಿ ಒಳ್ಳೆಯ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಡುಪಿ ಸಿ.ಎಸ್.ಐ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆಯಲ್ಲಿ ಒಟ್ಟು 30 ತಂಡಗಳು ಭಾಗವಹಿಸಿದ್ದು, ಅವುಗಳಲ್ಲಿ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ವಿಜೃಂಭಣೀಯ ಯಶಸ್ಸು ಸಾಧಿಸಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿನಿಯರಾದ ರಿಶಿಕಾ ದೇವಾಡಿಗ ಮತ್ತು ಅದಿತಿ ಪೂಜಾರಿ ಅವರು ಪ್ರಥಮ ಬಹುಮಾನವನ್ನು ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದೇ ರೀತಿ, ಅವನಿ ಶೆಟ್ಟಿ ಮತ್ತು ಪರಿಣಿಕಾ ಅವರು ಮೂರನೇ ಬಹುಮಾನ ಪಡೆದು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ತೋರಿಸಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಅಭ್ಯಾಸಕ್ಕೆ ಇದು ಫಲ. ಈ ಸಾಧನೆ ನಮ್ಮ ಶಾಲೆಯ ಶೈಕ್ಷಣಿಕ ಮಟ್ಟವನ್ನು ಮತ್ತಷ್ಟು ಎತ್ತಿ ಹಿಡಿದಿದೆ: ಶರಣ ಕುಮಾರ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರು

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂ ಐ ಟಿ ಕೆ) ಯಲ್ಲಿ ಹದಿನೆಂಟನೇ ಪದವಿ ಪ್ರದಾನ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಎಮ್ ಎಸ್ ಎಮ್  ಇ( ಭಾರತ ಸರ್ಕಾರ) ನಿವೃತ್ತ ಡೆಪ್ಯೂಟಿ ಡೈರೆಕ್ಟರ್ ಮತ್ತು ಎ ಎಮ್ ಎಸ್ ಇಂಡಿಯಾ ಇದರ ಕೊ ಪೌಂಡರ್ ಆಗಿರುವ ಗೋಪಿನಾಥ ರಾವ್, ಐಈಡಿಎಸ್ ಅವರು ಆಗಮಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸರ್ಕಾರದಿಂದ ಲಭ್ಯವಿರುವ ಫ಼ಂಡಿಂಗ್ ಅವಕಾಶಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಉದ್ಯೋಗಿ ಮತ್ತು ಉದ್ಯೋಗದಾತರ ನಡುವಿನ ವ್ಯತ್ಯಾಸದ ಬಗ್ಗೆ ಮನದಟ್ಟು ಮಾಡಿ ತಾವು ಉದ್ಯೋಗ ಕೊಡಿಸುವ ಉದ್ಯಮಿ ಆಗುವ ಧ್ಯೇಯ ಇಟ್ಟುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ ಐ ಎಂ ಜೆ ಸಂಸ್ಥಗಳ ಅಕಾಡಮಿಕ್ ಡೈರೆಕ್ಟರ್ ಡಾ. ಎಸ್ ಎನ್ ಭಟ್ ಮಾತನಾಡಿ, ಕಲಿಕೆ ಎನ್ನುವುದು ನಿರಂತರವಾದುದು ಅದನ್ನು ಎಂದಿಗೂ ನಿಲ್ಲಿಸಬೇಡಿ, ನಿಮ್ಮ ಮುಂದಿನ ಪ್ರಯಾಣದಲ್ಲಿ ಅದು…

Read More