Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಂದಾಪುರ ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ಮುತ್ಸದ್ದಿ ಮಾಣಿ ಗೋಪಾಲ್ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಸಾಹಿತ್ಯ ಪರಿಷತ್‌ ವತಿಯಿಂದ ಮಾಣಿ ಗೋಪಾಲ್‌ ಅವರನ್ನು ಸನ್ಮಾನಿಸಿದ ಬಳಿಕ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ ಮೌಲ್ಯಾಧಾರಿತ, ತತ್ವಾಧರಿತ ರಾಜಕಾರಣವನ್ನು ಜೀವನುದ್ದಕ್ಕೂ ಪಾಲಿಸಿಕೊಂಡು ಬಂದ ಅಪರೂಪದ ಜನನಾಯಕ ಮಾಣಿ ಗೋಪಾಲ್, ದೇವರಾಜು ಅರಸು ಅವರ ತತ್ವಾದರ್ಶದಡಿಯಲ್ಲಿ ನಡೆದ ಮಾಣಿ ಗೋಪಾಲ್ ದೇವರಾಜು ಅರಸು ಪ್ರಶಸ್ತಿಗೆ ಅರ್ಹರು. ಈ ಬಗ್ಗೆ ಸರಕಾರದ ಗಮನ ಸೆಳೆಯುವೆ ಎಂದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಾಮಾಣಿಕತೆ, ವೈಚಾರಿಕ ಸ್ಪಷ್ಟತೆ, ತಳ ವರ್ಗದ ಜನರ ಪರ ಹೋರಾಟ, ಗೇಣಿದಾರರು ಮತ್ತು ಮೂರ್ತೆದಾರರ ಪರ ಮಾಣಿಗೋಪಾಲ್ ಹೋರಾಟ ಪ್ರಶ್ನಾತೀತ. ಚುನಾವಣಾ ರಾಜಕೀಯ ಜನಸಾಮಾನ್ಯರ ಕಲ್ಯಾಣಕ್ಕಾಗಿ ಮೀಸಲಿಟ್ಟ ಧೀಮಂತ ನಾಯಕ. ಸಾಹಿತ್ಯ ಪರಿಷತ್ ಯೋಗ್ಯ ಸಂದರ್ಭ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು. ಕಾಲೇಜು ರಾಜ್ಯ ಮಟ್ಟದ 100 ರ‍್ಯಾಂಕ್‌ನೊಳಗೆ 14 ಸ್ಥಾನ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದೆ. ಪ್ರಸ್ತುತ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ಹಲವು ಪ್ರಮುಖ ಕೋರ್ಸ್‌ಗಳಿಗೆ ಸೇರಲು ನಡೆಯುವ ರಾಜ್ಯಮಟ್ಟದ ಪ್ರವೇಶ ಪರೀಕ್ಷೆಯಲ್ಲಿ, ಕಾಲೇಜಿನ ಸುಮಂತ್ ಗೌಡ ಎಸ್. ದಾನಪ್ಪಗೌಡರ್ ಕೃಷಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್‌, ಬಿ.ಎನ್.ವೈ.ಎಸ್. ವಿಭಾಗದಲ್ಲಿ 9ನೇ ರ‍್ಯಾಂಕ್, ಬಿ.ಎಸ್.ಸಿ. ನರ್ಸಿಂಗ್‌ ವಿಭಾಗದಲ್ಲಿ 18 ನೇ ರ‍್ಯಾಂಕ್‌, ಪಶು ವೈದ್ಯಕೀಯ ವಿಭಾಗದಲ್ಲಿ 18ನೇ ರ‍್ಯಾಂಕ್‌, ಬಿ/ ಡಿ – ಫಾರ್ಮ್‌ ವಿಭಾಗಗಳಲ್ಲಿ 25 ನೇ ರ‍್ಯಾಂಕ್‌ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ 34ನೇ ರ‍್ಯಾಂಕ್‌ ಗಳಿಸಿದ್ದಾರೆ. ಹಾಗೂ ವಿದ್ಯಾರ್ಥಿ ಹೆಚ್. ಎ. ರಾಜೇಶ್ ಬಿ.ಎನ್.ವೈ.ಎಸ್. ವಿಭಾಗದಲ್ಲಿ 35ನೇ ರ‍್ಯಾಂಕ್‌, ಬಿ.ಎಸ್.ಸಿ. ನರ್ಸಿಂಗ್‌ ವಿಭಾಗ ಮತ್ತು ಪಶು ವೈದ್ಯಕೀಯ ವಿಭಾಗದಲ್ಲಿ 52ನೇ ರ‍್ಯಾಂಕ್‌, ಬಿ/ ಡಿ – ಫಾರ್ಮ್‌ ವಿಭಾಗಗಳಲ್ಲಿ 62…

Read More

ಕುಂದಾಫ್ರ ಡಾಟ್‌ ಕಾಂ ಸುದ್ದಿ.ಕೋಟ: ಕಾರ್ಕಳದಲ್ಲಿ ಸಾಹಿತ್ಯ ಸಂಘವನ್ನು ಸ್ಥಾಪಿಸಿ ನಾಡಿನ ಪ್ರಸಿದ್ಧ ಸಾಹಿತಿಗಳನ್ನು ಕಾರ್ಕಳಕ್ಕೆ ಕರೆತಂದ ಹಿರಿಮೆಯನ್ನು ಹೊಂದಿರುವ ಎಂ. ರಾಮಚಂದ್ರ ಅವರು ಕನ್ನಡದ ಪರಿಚಾರಕರಾಗಿ ಪ್ರಸಿದ್ದರಾದವರು. ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಸಹೃದಯರ ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿರುವ ಇವರ ಸವಿ ನೆನಪಿನಲ್ಲಿ ಅವರ ಮಡದಿ ಶ್ರೀಮತಿ ಶಾರದಾ ರಾಮಚಂದ್ರ ಮತ್ತು ಮಕ್ಕಳು ಕನ್ನಡ ನಾಡು – ನುಡಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಓರ್ವರಿಗೆ ಪ್ರತಿ ವರ್ಷವೂ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದು ಈ ವರ್ಷದ ಪ್ರಶಸ್ತಿಗೆ ಸಾಹಿತಿ ಹಾಗೂ ಶ್ರೇಷ್ಠ ಸಾಹಿತ್ಯ ಸಂಘಟಕರಾಗಿರುವ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಆಯ್ಕೆಯಾಗಿದ್ದಾರೆ. ’ಉಸಿರು’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಕಳೆದ 25 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದವರು. ಎಳೆಯ ಮಕ್ಕಳಲ್ಲಿ ಕನ್ನಡದ ಪ್ರೀತಿ ಮತ್ತು ಸಾಹಿತ್ಯ ರಚನೆಯ ಅಭಿರುಚಿಯನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಲ್ಲದೆ ಅವರು ಬರೆದಿರುವ ಅನೇಕ ಕೃತಿಗಳನ್ನು ತಮ್ಮ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ,ಮೇ.25: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಅಕಾಲಿಕ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲಾದ್ಯಂತ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ವಿವಿಧ ಗ್ರಾಮಗಳಲ್ಲಿ ಮರಗಳು ಉರುಳಿ ಮನೆ ಹಾಗೂ ಇನ್ನಿತರ ಕಟ್ಟಡಗಳಿಗೆ ಹಾನಿಯಾಗಿದೆ. ಮಳೆಯಾರ್ಭಟ ಮುಂದುವರಿದಿದ್ದು, ಮೇ.26ರಿಂದ ಮೇ.28ರ ತನಕ ಮತ್ತೆ ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮೂರು ದಿನಗಳ ಕಾಲ ರೆಡ್‌ ಅಲರ್ಟ್‌ ಬಳಿಕ ಮೂರು ದಿನ ಎಲ್ಲೋ ಅಲರ್ಟ್‌ ಘೋಷಿಸಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಅಧಿಕ ಗಾಳಿ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮೇ.24ರಂದು ಕುಂದಾಪುರ ತಾಲೂಕಿನ ಕರ್ಕಂಜೆ, ಬೀಜಾಡಿ, ಸೇನಾಪುರ ಗ್ರಾಮದ ಒಂದೊಂದು ಮನೆಯು ಗಾಳಿ ಹಾಗೂ ಮರಬಿದ್ದು ಹಾನಿಯಾಗಿದ್ದರೇ, ಕುಂದಾಪುರ ಪುರಸಭಾ ವ್ಯಾಪ್ತಿಯ 2 ಮನೆಗಳು, ಹಾರ್ದಳ್ಳಿ ಮಂಡಳ್ಳಿ ಗ್ರಾಮದಲ್ಲಿ 2 ಮನೆಗಳು ಮರ ಬಿದ್ದು ಹಾನಿಯಾಗಿದೆ. ಬೈಂದೂರು ತಾಲೂಕಿನ ಯಳಜಿತ್‌, ಶಿರೂರು ಗ್ರಾಮದಲ್ಲಿ ಒಂದೊಂದು ಮನೆಗಳಿಗೆ ಮರಬಿದ್ದು ಹಾನಿಯಾಗಿದೆ. ಮೇ.23ರಂದು ಕುಂದಾಪುರ ತಾಲೂಕಿನ ಗುಜ್ಜಾಡಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 2025ರ ಸಾಲಿನ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್‌ಗಳನ್ನು ಗಳಿಸುವುದರ ಮೂಲಕ ಎಕ್ಸಲೆಂಟ್ ಕಾಲೇಜಿನ ಕೀರ್ತಿಯನ್ನು ರಾಜ್ಯಾದ್ಯಂತ ಹೆಚ್ಚಿಸಿರುತ್ತಾರೆ. ಪ್ರಸ್ತುತಿ ಶೆಟ್ಟಿ 222, ತ್ರಿಶಾ ಪಿ. ಶೆಟ್ಟಿ 1123, ಅನನ್ಯ ಯು ಶೆಟ್ಟಿ 1195, ಸ್ಮರಣ್ ಎಂ. 1415, ರಶ್ಮಿ 1542, ಧನುಷ್ ದೇವಾಡಿಗ 1801, ಅವಿಜಿತ್ ಶೆಟ್ಟಿ 1806, ಪದ್ಮಾಶ್ರೀ ವಿ. ಎನ್. 3414, ಸುಶಾಂತ್ ಚಂದ್ರ 3446, ಪ್ರಥಮ ತಾಳಿಕೋಟೆ 3641, ಚಿತ್ರಾ ನಾಯ್ಕ 3675, ಶ್ರೀ ಹರ್ಷ ಪಿ ಎನ್ 3940, ಪ್ರಜ್ವಲ್ ಕುಮಾರ್ ಎಸ್ 3950, ಆಕಾಶ್ 4383, ತನ್ವಿ ಶೆಟ್ಟಿ 4548, ಶಬರಿ ಡಿ ಶೆಟ್ಟಿ 4675, ರ್ಯಾಂಕ್‌ ಗಳನ್ನು ಗಳಿಸಿ ರಾಜ್ಯದಲ್ಲಿ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಎಂ. ಎಂ ಹೆಗ್ಡೆ ಎಜುಕೇಶನಲ್ & ಚಾರೀಟೆಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2025 ನೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಸಿ. ಶೆಟ್ಟಿ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 209 ನೇ ರ‍್ಯಾಂಕ್‌ ಪಡೆದಿದ್ದಾಳೆ. ಪ್ರತಿ ದಿನ ಕಾಲೇಜಿನಲ್ಲಿ ಸ್ಪರ್ಧಾತ್ಮಕ  ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಅದ್ಭುತ ಸಾಧನೆ ಮೆರೆದಿದ್ದಾಳೆ.  ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಪಂಚಗಂಗಾವಳಿ ಶಾಶ್ವತ ಅಂಚೆ ಮೊಹರು ಶುಕ್ರವಾರದಂದು ಬಿಡುಗಡೆಗೊಂಡಿತು. ಉಡುಪಿ ವಿಭಾಗದ ಅಂಚೆ ಇಲಾಖೆಯ ಅಧೀಕ್ಷಕ ರಮೇಶ ಪ್ರಭು ಅಧಿಕೃತವಾಗಿ ಅತಿಥಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು. “ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ’ಪಂಚಗಂಗಾವಳಿ’ ಬಗ್ಗೆ ತುಂಬ ಕುತೂಹಲ ಹೊಂದಿದ್ದರು. ಕುಂದಾಪುರದ ಮಹತ್ವ ತಿಳಿಸುವ, ಮೊಹರು ಮಾಡಬೇಕೆಂಬ ಆಶಯ ನಮಗಿತ್ತು. ’ಪಂಚಗಂಗಾವಳಿ’ನದಿಗಳು ಕುಂದಾಪುರ ತಾಲೂಕಿನಲ್ಲಿ ಹರಿಯುತ್ತಿದ್ದು, ದೇಶದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ ಎಂದು ಅರಿತ ಮೇಲೆ ಇಲಾಖೆಯ ಒಪ್ಪಿಗೆ ದೊರಕಿತು. ಅಂಚೆ ಚೀಟಿ ಸಂಗ್ರಾಹಕರೂ ಖುಷಿ ಪಟ್ಟರು. ಈ ಮೊಹರನ್ನು ಅಂಚೆ ಕಾರ್ಡು, ಕವರ್‌ಗಳಿಗೆ ಹಾಕಿಸುವ ಮೂಲಕ ಹೆಚ್ಚು ಜನಪ್ರಿಯ ಮಾಡಬಹುದು. ಎಂದು ರಮೇಶ ಪ್ರಭು ತಿಳಿಸಿದರು. ಮೊಹರು ರಚನೆಗೆ ಸಹಕಾರ ನೀಡಿದ ಪಂಚಗಂಗಾವಳಿ ಸಮಿತಿಯ ಸಂಚಾಲಕ ಯು. ಎಸ್. ಶೆಣೈ, ಹಿರಿಯ ಅಂಚೆ ಚೀಟಿ ಸಂಗ್ರಾಹಕ ಕೃಷ್ಣಯ್ಯ ಉಡುಪಿಯವರನ್ನು ಅವರು ಅಭಿನಂದಿಸಿದರು. “ಜಿಲ್ಲೆಯಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದ್ಮಶ್ರೀ ಪುರಸ್ಕೃತ  ಡಾ. ಕೆ.ಎಸ್. ರಾಜಣ್ಣ, ರಾಜ್ಯ ಮಾಜಿ ಆಯುಕ್ತರು, ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕರ್ನಾಟಕ ಸರಕಾರ ಇವರಿಂದ ವಿಶೇಷ ಪ್ರೇರಣಾ ಉಪನ್ಯಾಸ ಕಾರ್ಯಕ್ರಮವು ಮೇ. 26 ಸೋಮವಾರದಂದು ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು ಅವರು ವಹಿಸಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ಸಿ.ಎ ನಾಗರಾಜ್ ಆಚಾರ್ಯ, ಲೆಕ್ಕ ಪರಿಶೋಧಕರು ಮತ್ತು ಕಾನೂನು ತಜ್ಞರು ಬೆಂಗಳೂರು, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್.ಗೊಂಡ ಕಾರ್ಯಕ್ರಮದಲ್ಲಿ ಉಪಸ್ಥಿತರಲಿರಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ರಾಜ್ಯದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಕನ್ನಡ ಭಾಷೆ ಕಲಿತು ಗ್ರಾಹಕರೊಡನೆ ವ್ಯವಹಾರ ಮಾಡುವ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಪ್ರಿಯಾಂಕ ಸಿಂಗ್ ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ, ಇದು ಭಾರತ ನಾನು ಹಿಂದಿಯಲ್ಲೇ ಮಾತನಾಡುತ್ತೇನೆ, ಬೇಕಿದ್ದರೆ ಬನ್ನಿ ಎಂದು ವಾದ ಮಾಡಿದ್ದು,ರಾಜ್ಯದ ಸರ್ವ ಕನ್ನಡಿಗರಿಗೆ ನೋವುಂಟು ಮಾಡಿದೆ. ಅಲ್ಲದೇ ಬ್ಯಾಂಕ್ ಮ್ಯಾನೇಜರ್ ಉದ್ಧಟತನದಿಂದ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಮಂತ್ರಿ ಹಲವಾರು ಬಾರಿ ಭಾಷೆಯ ಬಗ್ಗೆ ಪುನರುಚ್ಚರಿಸುತ್ತ, ಕೇಂದ್ರ ಸರಕಾರದ ಎಲ್ಲಾ ಕಚೇರಿಗಳಲ್ಲಿ ಸ್ಥಳೀಯ ಆಡಳಿತಾತ್ಮಕ ಭಾಷೆಯಲ್ಲಿಯೇ ವ್ಯವಹರಿಸಬೇಕೆಂದು ನಿರ್ದೇಶನ ನೀಡಿದ್ದರು. ಆದರೂ ರಾಷ್ಟ್ರೀಕೃತ ಬ್ಯಾಂಕಿನ ಸಿಬ್ಬಂದಿ ಕನ್ನಡದ ಬಗ್ಗೆ ಅಗೌರವವನ್ನು ತೋರಿ ಬ್ಯಾಂಕಿನ ಗ್ರಾಹಕರಿಗೆ ಕಿರುಕುಳವನ್ನು ಕೊಡುತ್ತಿರುವುದು ಬಹಳ ನೋವನ್ನುಂಟು ಮಾಡಿದೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಿಬ್ಬಂದಿಗಳು ಅನ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಗೋಡಾನ್‌ನಲ್ಲಿ ಇರಿಸಲಾದ ಸಾವಿರಾರು ರೂ. ಮೌಲ್ಯದ ಅಡಿಕೆ ತುಂಬಿದ ಚೀಲಗಳನ್ನು ಕಳ್ಳರುಕಳವು ಮಾಡಿರುವ ಘಟನೆ ಇಲ್ಲಿನ ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ ನಡೆದಿದೆ. ಮಸೂದ್ ಪಟೇಲ್ ಎಂಬವರು ಸುಮಾರು 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಪ್ಯಾಸ್ಟಿಕ್ ಚೀಲದಲ್ಲಿ ಹಾಕಿ ಚೀಲ ಮಾಡಿ ಗೋಡೌನ್‌ನಲ್ಲಿ ಇಟ್ಟಿದ್ದು, ಮೇ. 15ರಿಂದ ಮೇ. 22ರ ಮಧ್ಯಾವದಿಯಲ್ಲಿ ಗೋಡೌನ್ ಬೀಗ ಮುರಿದು ಒಳನುಗ್ಗಿದ ಕಳ್ಳರು, 200 ಚೀಲ ಒಣಗಿಸಿದ ಸಿಪ್ಪೆಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More