ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ನೇಚರ್ ಕ್ಲಬ್ ಜಂಟಿ ಆಶ್ರಯದಲ್ಲಿ ರೀಫ್ ವಾಚ್ ಮರೈನ್ ಸಂಸ್ಥೆ ಸಹಯೋಗದೊಂದಿಗೆ ಎಚ್. ಸಿಎಲ್ ಫೌಂಡೇಶನ್ ಹಾಗೂ ಸ್ಥಳೀಯ ಭಜನಾ ಮಂಡಳಿ ಮತ್ತು ಮೀನುಗಾರರ ಸಹಕಾರದೊಂದಿಗೆ ವಿಶ್ವ ಭೂಮಿಯ ದಿನ ಆಚರಣೆಯ ಅಂಗವಾಗಿ ಕಂಚುಗೋಡಿನ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ರೀಫ್ ವಾಚ್ ಸಂಸ್ಥೆಯವರು ತೇಲುವ ತುಂಡು ಬಲೆಗಳಿಂದ ಸಮುದ್ರ ಮತ್ತು ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳು ಸಿಕ್ಕಿಹಾಕಿ ಸಾಯುವುದನ್ನು ತಡೆಯಲು ಮತ್ತು ಪರಿಸರ ಸಂರಕ್ಷಣೆಗಾಗಿ ಕಡಲ ತೀರದಲ್ಲಿ ಕಸದಂತೆ ಬಿದ್ದಿದ ರಾಶಿ ರಾಶಿ ನಿರೂಪಯುಕ್ತ ಬಲೆಗಳನ್ನು ಖರೀದಿಸಿದರು. ವಿಶ್ವ ಭೂಮಿ ದಿನ ಆಚರಣೆಯ ಪ್ರಸಿದ್ಧ ಘೋಷಣೆಯಾದ ಕಡಿಮೆ ಮಾಡಿ, ಮರುಬಳಕೆ ಮಾಡಿ ಎಂಬ ಘೋಷಣೆಯಂತೆ ತುಂಡು ವ್ಯರ್ಥ ಬಲೆಯಿಂದ ತಯಾರಿಸಿದ ಅತ್ಯುತ್ತಮ ಬೆಂಚ್ ಟೇಬಲ್ ಮತ್ತು ಬ್ಯಾಗ್ಳನ್ನು ಸಮುದಾಯದ ಬಳಕೆಗಾಗಿ ಕಂಚುಗೋಡಿನ ಕಡಲ ತೀರದಲ್ಲಿ ಹಾಕಿಸಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗಣಕಯಂತ್ರ ವಿಭಾಗ ಮತ್ತು ಐಕ್ಯೂಎಸಿ ಇವರ ಸಹಯೋಗದೊಂದಿಗೆ ವ್ಯಕ್ತಿತ್ವ ವಿಕಾಸನ ಮತ್ತು ಉದ್ಯೋಗ ಸಂದರ್ಶನ ಮಾಹಿತಿ ಕಾರ್ಯಗಾರ ನಡೆಯಿತು. ನೆಟ್ ಅನಾಲಿಟಿಕ್ಸ್ ಕಂಪೆನಿಯಲ್ಲಿ ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿರುವ ಶ್ರೀರಕ್ಷಾ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅವರು ವಹಿಸಿದ್ದರು. ಒಂದು ದಿನ ನಡೆದ ಕಾರ್ಯಾಗಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು. ಗಣಕಯಂತ್ರ ವಿಭಾಗ ಮುಖ್ಯಸ್ಥರಾದ ಪ್ರೊಫೆಸರ್ ಗಣೇಶ್ ಕೆ., ಐಕ್ಯೂಎಸಿ ಸಂಚಾಲಕರಾದ ಸತ್ಯನಾರಾಯಣ ಉಪಸ್ಥಿತರಿದ್ದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿಯಾದ ನಿಧಿ ಹೆಗ್ಡೆ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಗುರು ಸೇವಾಪರಿಷತ್ ಮಹಾಮಂಡಲ ಇವರ ವತಿಯಿಂದ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರ ಸಾಮೂಹಿಕ ಗುರುಪಾದ ಪೂಜೆ ಇಲ್ಲಿನ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ಇತ್ತೀಚಿಗೆ ಜರುಗಿತು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ಸನಾತನ ಧರ್ಮದಲ್ಲಿ ಇರುವ ಜಾತಿಗಳು ಕೌಶಲ್ಯ ಆಧಾರಿತವಾಗಿದೆ. ಯಾವಜಾತಿಯೂ ಮೇಲೂ ಅಲ್ಲ ಮತ್ತು ಕೀಳಲ್ಲ ಸಮಾನವೂ ಅಲ್ಲ ತೋಟದಲ್ಲಿ ಇರುವ ನಾನಾ ಹೂವು ಮತ್ತು ಮರಗಳಂತೆ. ದೇಶಮತ್ತು ಧರ್ಮದ ವಿಷಯದಲ್ಲಿ ಎಲ್ಲರೂ ಎಲ್ಲವೂ ಒಂದಾಗಿರಬೇಕು ಎಂದರು. ಸಮಾಜದ 3 ಮಂದಿ ಸಾಧಕರಾದ ಗಜೇಂದ್ರ ಆಚಾರ್ಯ ಅಂಕದಕಟ್ಟೆ, ಉದಯ ಆಚಾರ್ಯ ಕುಂದಾಪುರ, ಅಶೋಕ ಆಚಾರ್ಯ ಕುಂದಾಪುರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪೀಠ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಲೋಲಾಕ್ಷ ಶರ್ಮ, ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶಣೈ, ಗುರು ಸೇವಾಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷ ಗಣೇಶ್ ಆಚಾರ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅನೇಕ ಸಮುದಾಯಗಳಿಗೆ, ವಿದ್ಯಾರ್ಥಿಗಳಿಗೆ ಯಶಸ್ಸನ್ನು ನೀಡುವ ದೀವಿಗೆಯಾಗಿ ಆಳ್ವಾಸ್ ರೀಚ್ ಕಾರ್ಯಕ್ರಮ ಮೂಡಿ ಬರಲಿ ಎಂದು ಎಸ್ಸೇ ಡಿಜಿಟ್ರೋನಿಕ್ಸ್ ಪ್ರೈವೆಟ್ ಲಿಮಿಟೆಡ್ನ ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್ ಶಾಲಿನಿ ಗಿರೀಶ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಜತ ಮಹೋತ್ಸವ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ಸಾಮೂಹಿಕ ಅಭ್ಯುದಯಕ್ಕಾಗಿ ಸಮಾಜಕಾರ್ಯ ಹಳೆ ವಿದ್ಯಾರ್ಥಿಗಳು ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ʼಲೋಕಾಃ ಸಮಸ್ತಾಃ ಸುಖಿನೋ ಭವಂತುʼಎಂಬ ಮಂತ್ರದಂತೆ ಆಳ್ವಾಸ್ ಸಂಸ್ಥೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯನ್ನಾಗಿ ನೀಡುತ್ತಾ ಬಂದಿದೆ. ಸುಮಾರು ೨೦ ವ?ಗಳ ನಂತರ ಮತ್ತೊಮ್ಮೆ ಆಳ್ವಾಸ್ ಕಾಲೇಜಿಗೆ ಭೇಟಿ ನೀಡುತ್ತಿರುವುದು ಬಹಳ ಸಂತಸ ನೀಡಿದೆ. ಅಂದಿನ ಕಾಲೇಜು ದಿನಗಳು, ವಿಭಾಗದೊಂದಿಗೆ ಸೇರಿ ಕೈಗೊಂಡಿದ್ದ ಕಾರ್ಯಕ್ರಮಗಳು ಪುನರ್ಮನನ ಮಾಡಲು ಅವಕಾಶ ದೊರೆಯಿತು ಎಂದರು. ಬಾರ್ಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಎನ್ಎಸ್ಎಸ್ ವಾರ್ಷಿಕ ಕಾರ್ಯಚಟುವಟಿಕೆಗಳ ಸಮಾರೋಪ ಸಮಾರಂಭವು ಇತ್ತೀಚಿಗೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಬಿ. ಗಣನಾಥ ಶೆಟ್ಟಿ ಅವರು ಎನ್ಎಸ್ಎಸ್ ಜೀವನ ಪಾಠವನ್ನು ಕಲಿಸುತ್ತದೆ. ಈ ಅನುಭವ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ ಎಂದರು. ಇನ್ನೋರ್ವ ಸಂಸ್ಥಾಪಕರಾದ ಅಶ್ವತ್.ಎಸ್.ಎಲ್. ಎನ್ಎಸ್ಎಸ್ನ ವಿಶೇಷ ಶಿಬಿರಗಳು ಹಾಗೂ ಇತರೆ ಸಮಾಜಮುಖಿ ಸೇವೆಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸಬಲ್ಲದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥಾಪಕರಲ್ಲಿ ಓರ್ವರು ಹಾಗೂ ಪ್ರಾಂಶುಪಾಲರೂ ಆದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಸೇವಾ ಮನೋಭಾವ ಶ್ರೇಷ್ಠವಾದುದ್ದು, ಈ ವ್ಯಕ್ತಿತ್ವ ಬದುಕಿನುದ್ದಕ್ಕೂ ಸಹಕಾರಿ ಎಂದರು. ಕಾರ್ಯಕ್ರಮದಲ್ಲಿ ಎನ್ಎಸ್ಎಸ್ಚಟುವಟಿಕೆಗಳಲ್ಲಿ ಸಾಧನೆ ಗೈದ ಸ್ವಯಂ ಸೇವಕರಿಗೆ ಫಲಕ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ರಾಘವೇಂದ್ರ ಬಿ. ರಾವ್. ಚಂದ್ರಕಾಂತ ಹಾಗೂ ಬೋಧಕೇತರು ಹಾಗೂ ಎನ್ಎಸ್ಎಸ್ಸ್ವಯಂ ಸೇವಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಧ್ಯ ಪಡ್ರೆ ಕಾರ್ಯಕ್ರಮ ನಿರೂಪಿಸಿ, ಹಿತ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಮಾಜದ ಒಳಿತಿಗಾಗಿ ಸಮಾಜಕ್ಕೊಸ್ಕರ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಆನಂದ್ ಸಿ. ಕುಂದರ್ ಕರಾವಳಿಯ ಕಲ್ಪತರು ಆಗಿದ್ದಾರೆ ಎಂದು ಉಡುಪಿಯ ಹೊಸಬದುಕು ಆಶ್ರಮದ ಮುಖ್ಯಸ್ಥ ಹ.ರಾ ವಿನಯಚಂದ್ರ ಸಾಸ್ತಾನ ನುಡಿದರು. ಅವರು ಜನತಾ ಸಂಸ್ಥೆಯಲ್ಲಿ ಆನಂದ್ ಸಿ ಕುಂದರ್ 77ನೇ ವರ್ಷಾಚರಣೆ ಅಂಗವಾಗಿ ಗೀತಾನಂದ ಫೌಂಡೇಶನ್ ವತಿಯಿಂದ ಸುಮಾರು 25 ಲಕ್ಷಕ್ಕೂ ಅಧಿಕ ರೂಗಳನ್ನು ವಿವಿಧ ಆಶ್ರಮಕ್ಕೆ, ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ನೆರವು ಕಾರ್ಯದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡವರ ಬಗ್ಗೆ ಅಶಕ್ತರಿಗೆ ತುಡಿಯುವ ಮನಸ್ಥಿತಿ ಅಪರೂಪದಲ್ಲಿ ಅಪರೂಪವಾಗಿದೆ. ಆನಂದ್ ಸಿ ಕುಂದರ್ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಿದ್ದು ಅತ್ಯಂತ ಶ್ಲಾಘನಾರ್ಹ ಕಾರ್ಯವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ವೇಳೆ ಉಡುಪಿಯ ಹೊಸಬದುಕು, ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮ, ಮಾನಸ ಜ್ಯೋತಿ ವಿಶೇಷಚೇತನ ಶಾಲೆ, ಬ್ರಹ್ಮಾವರದ ವಿಜಯ ಬಾಲನಿಕೇತನ ಸೇರಿದಂತೆ ಒಟ್ಟು 11 ಆಶ್ರಮ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ – ‘ಸುಕೃತಿ 2025’ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಎಪ್ರಿಲ್ 30ರ ಬುಧವಾರ ಹಾಗೂ ಮೇ 01ರ ಗುರುವಾರದಂದು ನಡೆಯಲಿದೆ. ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ, ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಈ ಭಾರಿಯ ಸಾಹಿತ್ಯ ಸಮ್ಮೇಳನ ಎರಡು ದಿನಗಳ ಕಾಲ ಜರುಗಲಿದೆ. ಎಪ್ರಿಲ್ 30ರ ಬುಧವಾರ ಬೆಳಿಗ್ಗೆ 08-30ಕ್ಕೆ ಧ್ವಜಾರೋಹಣ, ಬೆಳಿಗ್ಗೆ 09-00ರಿಂದ ಸಮ್ಮೇಳನಾಧ್ಯಕ್ಷರನ್ನು ಎದಿರುಗೊಳ್ಳುವುದು, ಅದೇ ಸಮಯದಲ್ಲಿ ವಿಪಂಚಿ ಬಳಗ ಮಣಿಪಾಲ ಇವರಿಂದ ವೀಣಾವಾಣಿ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನೆಅಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾಂದಗಳವರು ಹಾಗೂ ಪರ್ಯಾಯ ಶ್ರೀ ಪುತ್ತಿಗೆಮಠದ ಕಿರಿಯ ಸ್ವಾಮೀಜಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾಂದಗಳವರು ದೀಪಬೆಳಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜು ಕಳೆದ 26 ವರ್ಷಗಳಿಂದ ಕಲಿಕೆಗೆ ಮತ್ತು ಫಲಿತಾಂಶಕ್ಕೆ ಒತ್ತು ನೀಡುವ ಮೂಲಕ ಇದುವರೆಗ 63 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ನೀಡಿದ ಹೆಗ್ಗಳಿಕೆ ಪಡೆದಿದೆ. ಈಗಾಗಲೇ ಸಂಸ್ಥೆಯಲ್ಲಿ 2025-26ನೇ ಸಾಲಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ಪಿಯು ಪ್ರವೇಶಾತಿ ಆರಂಭಗೊಂಡಿದ್ದು, ಎಸ್ಎಸ್ಎಲ್ಸಿ ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ತಮ್ಮ 9ನೇ ತರಗತಿ ಅಥವಾ ಪ್ರಿಪರೇಟರಿ ಪರೀಕ್ಷಾ ಅಂಕಗಳ ಆಧಾರದ ಮೇಲೆ ಕಾಲೇಜಿನಲ್ಲಿ ತಮ್ಮ ಸೀಟುಗಳನ್ನು ಕಾಯ್ದಿರಿಸಬಹುದು.ಹತ್ತನೇ ತರಗತಿಯ ನಂತರದ ಎರಡು ವರ್ಷಗಳು, ವಿದ್ಯಾರ್ಥಿ ಜೀವನದ ಪ್ರಮುಖ ಕಾಲಘಟ್ಟ. ಈ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹಾಗೂ ಅಂಕಗಳಿಸುವ ಕಡೆಗೆ ಹೆಚ್ಚು ಒತ್ತು ಕೊಟ್ಟು ಕಲಿಯಬೇಕಾಗುತ್ತದೆ. ಅವರ ಜೀವನದ ಗುರಿ ಸಾಧನೆಯು ಪಿಯುಸಿಯಲ್ಲಿ ಅವರು ಪಡೆಯುವ ಅಂಕಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಹೆತ್ತವರು ಸಾಧಾರಣವಾಗಿ ಮಕ್ಕಳನ್ನು ಇತರ ಚಟುವಟಿಕೆಗಳಿಂದ ಮುಕ್ತಗೊಳಿಸಿ ಓದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಅಧಿದೇವ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಶನಿವಾರ ದೇವಳದಲ್ಲಿ ಧ್ವಜಾರೋಹಣ ನೆರವೆರಿಸಲಾಯಿತು. ಈ ಸಂದರ್ಭದಲ್ಲಿ ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ದೇವಳದ ತಂತ್ರಿ ರಾಜೇಶ್ ಐತಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪರಮೇಶ್ವರ ಪಟವಾಲ್, ಪ್ರಶಾಂತ್ ಕುಮಾರ್ ಶೆಟ್ಟಿ, ಜಯರಾಮ್ ಯಡ್ತರೆ, ದೊಟ್ಟಯ್ಯ ಪೂಜಾರಿ, ಇಂದಿರಾ ಕೊಠಾರಿ, ಕೊಲ್ಲೂರು ಮೂಕಾಂವಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ಬಾಬು ಹೆಗ್ಡೆ ತಗ್ಗರ್ಸೆ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕೊಲ್ಲೂರು ದೇವಳದ ಧರ್ಮದರ್ಶಿ ಧನಾಕ್ಷೀ ವಿಶ್ವನಾಥ ಪೂಜಾರಿ ಹಾಗೂ ದೇವಳದ ಸಿಬ್ಬಂದಿಗಳು, ಊರಿನವರು ಇದ್ದರು. ಮೇ.2ರಂದು ಶ್ರೀ ದೇವರ ಮನ್ಮಹಾರಥೋತ್ಸವ ಜರುಗಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಜ್ಯೂನಿಯರ್ ಕಾಲೇಜಿನ ನಿವೃತ್ತ ಉಪನ್ಯಾಸಕ ಬೀಜಾಡಿ ಅರಸರಬೆಟ್ಟು ನಿವಾಸಿ ಕೃಷ್ಣಮೂರ್ತಿ ಪಡುವರಿ (78) ಅವರು ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.
