ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ನಗರಸಭೆಯ 2022-23 ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿಯ ಶೇ. 5 ರ ವಿಕಲಚೇತನರ ಕಲ್ಯಾಣ ಕಾರ್ಯಕ್ರಮದ ಅನುದಾನದಡಿ ಸಾಧನ ಸಲಕರಣೆಗಳನ್ನು ಪಡೆಯಲು ದೈಹಿಕ ವಿಕಲತೆಯ ಬಗ್ಗೆ ಜಿಲ್ಲಾ ಸರ್ಜನ್ರವರಿಂದ ಪಡೆದ ಪ್ರಮಾಣ ಪತ್ರ, ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗದ ವತಿಯಿಂದ ಮೇಲ್ ಗಂಗೊಳ್ಳಿಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪುಸ್ತಕ ಮತ್ತು ಕಲಿಕಾ ಉಪಕರಣಗಳನ್ನು ಹಾಗೆ ಶಾಲೆಗೆ ಅಡುಗೆ ಕುಕ್ಕರನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಹನಾ, ಅಡುಗೆ ಸಹಾಯಕಿ ಮೂಕಾಂಬು, ಪೋಷಕರಾದ ಶಾಂತ ಪೈ, ಎಸ್ಡಿಎಂಸಿ ಅಧ್ಯಕ್ಷೆ ಸವಿತಾ ಖಾರ್ವಿ, ಸದಸ್ಯರಾದ ಅನುಷಾ ಯು, ಸವಿತಾ ಖಾರ್ವಿ, ಜ್ಯೋತಿ ಆನಂದ, ಜ್ಯೋತಿ ಎಂ, ಅಶ್ವಿನಿ ಖಾರ್ವಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೇಲ್ ಗಂಗೊಳ್ಳಿಯ ಮುಖ್ಯ ಶಿಕ್ಷಕ ಗುರುರಾಜ್ ಆಚಾರ್ಯ, ಸಹ ಶಿಕ್ಷಕ ಯೋಗೇಶ್, ಬಸವೇಶ್ವರ ದೇವಸ್ಥಾನದ ಅರ್ಚಕ ಜಗದೀಶ್, ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗದ ಮುಖ್ಯಸ್ಥ ಈಶ್ವರ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಪುಷ್ಪಗಳನ್ನು ನೀಡಿ ಸ್ವಾಗತಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಕಂದಾಯ ಉಪವಿಭಾಗಕ್ಕೆ ಒಂದರಂತೆ ವೃದ್ದಾಶ್ರಮವನ್ನು ಪ್ರಾರಂಭಿಸಲು ಅರ್ಹ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 16 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಕಛೇರಿ, ಸಿ ಬ್ಲಾಕ್, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2574810, 2574811 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಉಡುಪಿ ನಗರಸಭೆಯ ವತಿಯಿಂದ 2023-24 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿಯ ಶೇ. 7.25 ರ ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಸೌಲಭ್ಯ ಪಡೆಯಲು ಅರ್ಹ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೊಳಿಸಲು ಮಳೆನೀರು ಕೊಯ್ಲನ್ನು ಅಳವಡಿಸಿಕೊಳ್ಳುವುದು ಅವಶ್ಯ. ಸರಕಾರದ ಎಲ್ಲಾ ತೆರೆದ ಹಾಗೂ ಕೊಳವೆ ಬಾವಿಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಳೆ ನೀರು ಕೊಯ್ಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ವ್ಯಾಪಕ ಮಳೆಯಾದರೂ ಸಹ ಅಂತರ್ಜಲದ ಮಟ್ಟ ನಿರೀಕ್ಷಿತ ಮಟ್ಟಕ್ಕಿಂತ ಕೆಳಭಾಗದಲ್ಲಿದೆ. ಹೆಚ್ಚು ಮಳೆಯಾದರೂ ನೀರು ಸರಾಗವಾಗಿ ಪಶ್ಚಿಮಾಭಿಮುಖವಾಗಿ ಹರಿದು ಸಮುದ್ರವನ್ನು ಸೇರುತ್ತಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಿಂದಾಗಿ ಮೇಲ್ಮಣ್ಣು ಕೊಚ್ಚಿಹೋಗಿ ಲ್ಯಾಟರೈಟ್ ಸಾಯ್ಲ್ ಆಗಿದೆ. ನೀರು ಇಂಗುವ ಪ್ರಮಾಣ ಕಡಿಮೆ. ಮಳೆ ನೀರು ಕೊಯ್ಲು ಅಳವಡಿಸುವುದರಿಂದ ಇಂಗು ವಿಕೆಯನ್ನು ಹೆಚ್ಚಿಸಲು ಸಾಧ್ಯ. ಇದರಿಂದ ಅಂತರ್ಜಲವೃದ್ಧಿಯಾಗುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು. ಜಿಲ್ಲೆಯಲ್ಲಿ ರೈತರು ಹಾಗೂ ಖಾಸಗಿ ಯವರು ಹೆಚ್ಚು ಮಳೆ ನೀರು ಕೊಯ್ಲುಗಳನ್ನು ಅಳವಡಿಸಿದ್ದಾರೆ. …
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕು ಯುವ ಬಂಟರ ಸಂಘದ ವತಿಯಿಂದ ಆರೋಗ್ಯ ಭಾಗ್ಯ ಯೋಜನೆಯಡಿ ವಿವಿಧ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮವು ಶುಕ್ರವಾರದಂದು ಸಂಘದ ಆಡಳಿತ ಕಛೇರಿ ಆರ್. ಎನ್. ಶೆಟ್ಟಿಯಲ್ಲಿ ನಡೆಯಿತು. ಸಂಘದ ದಶಮ ಸಂಭ್ರಮದ ಪೋಷಕರು, ಕುಂದಾಪುರದ ಉದ್ಯಮಿಯಾದ ಸಟ್ವಾಡಿ ವಿಜಯ ಶೆಟ್ಟಿ ಅವರು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿ, ಯುವ ಬಂಟರ ಸಂಘ ಆರೋಗ್ಯ ಭಾಗ್ಯ ಯೋಜನೆಯಡಿ ಜಾತೀಯತೆಯನ್ನು ಮೀರಿ ಎಲ್ಲಾ ಸಮುದಾಯದ ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ಇವರು ನಡೆಸಿಕೊಂಡ ಬರುತ್ತಿರುವ ಆರೋಗ್ಯ ಭಾಗ್ಯ ಯೋಜನೆಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ ಪೋಷಕರು, ಸಮತಾ ಮೋಟರ್ಸ್ ನ ಮಾಲಕರಾದ ಜೆಡ್ಡಾಡಿ ವಿಜಯಕುಮಾರ್ ಶೆಟ್ಟಿ ಗಿಳಿಯಾರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಂಘ ಮಾಡಿಕೊಂಡು ಬರುತ್ತಿರುವ ಕಾರ್ಯಕ್ರಮಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಪ್ರತಿಯೊಂದು ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾದದ್ದು. ಹಾಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಮನು ಕುಲ ಅಥವಾ ಮುಂದಿನ ತಲೆಮಾರು ಉಳಿಯಬೇಕಾದರೆ ಹಸಿರು ಅಗತ್ಯವಾಗಿ ನೆಟ್ಟು ಪೋಷಿಸಬೇಕು ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಕರೆ ನೀಡಿದರು. ಅವರು ಸಾಲಿಗ್ರಾಮದ ತೊಡ್ಕಟ್ಟು ಹೊಸಬದುಕು ಆಶ್ರಮದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ, ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ, ಉಡುಪಿ ಜಿಲ್ಲೆಯ ಸಾಲಿಗ್ರಾಮದ ಹೊಸಬದುಕು ಆಶ್ರಮ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ ಇವರ ಸಹಯೋಗದೊಂದಿಗೆ ವಿಶ್ವಪರಿಸರದ ಅಂಗವಾಗಿ ಗಿಡ ವಿತರಣೆ, ನಡುವ ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಗಿಡ ಹಸ್ತಾಂತರಿಸಿ ಮಾತನಾಡಿದರು. ಪ್ರಸ್ತುತ ವಾತಾವರಣದ ವ್ಯತ್ಯಾಸ ನೋಡಿದರೆ ಮುಂದಿನ ಕಾಲಘಟ್ಟದ ಭೀಕರತೆ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಈಗಾಲೇ ಅದನ್ನು ನಾವುಗಳು ಅನುಭವಿಸುತ್ತಿದ್ದೇವೆ. ಆದರೆ ಪಂಚವರ್ಣದಂತಹ ಸಂಸ್ಥೆ ಪರಿಸರವನ್ನು ಪ್ರೀತಿಸಿ ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದಂತೆ ಪ್ರತಿಯೊಬ್ಬರು ನಮ್ಮ ಮಕ್ಕಳ ಮೊಮ್ಮಕ್ಕಳಿಗೆ ಪರಿಸರ ಸಂಪತ್ತನ್ನು ಸೃಷ್ಠಿಸುವ ಬಗೆಯನ್ನು ತಿಳಿಸಬೇಕಿದೆ. ಇದು ಭಗವಂತನಿಗೆ ಪ್ರಾರ್ಥಿಸದಷ್ಟೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಸಾವಿರ ಗಂಡುಮಕ್ಕಳಿಗೆ 978 ಹೆಣ್ಣು ಮಕ್ಕಳ ಜನನವಿದ್ದು, ಸರಾಸರಿ ಅನುಪಾತದಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳ ಪ್ರಮಾಣ ಇನ್ನೂ ಹೆಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5845 ಗಂಡು ಮಕ್ಕಳ ಜನನ, 5827 ಹೆಣ್ಣು ಮಕ್ಕಳ ಜನನವಾಗಿ 1000 ಗಂಡು ಮಕ್ಕಳಿಗೆ 968 ಹೆಣ್ಣು ಮಕ್ಕಳ ಜನನವಾಗಿದೆ. 2024-25 ನೇ ಸಾಲಿನಲ್ಲಿ ಈ ಪ್ರಮಾಣವು 978 ಇದ್ದು, ರಾಜ್ಯದಲ್ಲಿಯೇ ಲಿಂಗಾನುಪಾತದಲ್ಲಿ ಉಡುಪಿ ಮೊದಲ ಸ್ಥಾನದಲ್ಲಿದೆ. ದಾವಣಗೆರೆ, ರಾಮನಗರ. ಶಿವಮೊಗ್ಗ ಕ್ರಮವಾಗಿ ನಂತರದ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಅನುಪಾತವು ಇನ್ನೂ ಸಹ ಸಮಾನುಪಾತ ಆಗಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿದ್ದಾಪುರ ಪೇಟೆಯೂ ಸೇರಿದಂತೆ ಮೂರು ದಿನಗಳಿಂದ ಸುತ್ತಾಡುತ್ತಾ ಭಯ ಹುಟ್ಟಿಸಿದ್ದ ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿದೆ. ಆದರೆ ಮೂರು ದಿನಗಳಿಂದ ತಾಲೂಕು ಆಡಳಿತವನ್ನೇ ನಡುಗಿಸಿತ್ತು. ಮುಂಜಾಗ್ರತೆಯಿಂದ ಶಾಲೆಗಳಿಗೂ ರಜೆ ನೀಡಲಾಗಿತ್ತು. ಸಂಜೆ 6.30 ರ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಆನೆಯನ್ನು ಹಿಡಿಯಲು ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಪೋರ್ಸ್ (ಇಟಿಎಫ್)ನ ತಂಡದೊಂದಿಗೆ ಕುದುರೆಮುಖ ವನ್ಯಜೀವಿ ವಿಭಾಗ, ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಸಿದ್ದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ತಂಡದ ಒಟ್ಟಾರೆ 150 ಮಂದಿ ಅಧಿಕಾರಿಗಳು, ಸಿಬಂದಿ ಹರಸಾಹಸ ಪಟ್ಟರು. ನಿರಂತರ ಕಾರ್ಯಾಚರಣೆ:ಆನೆಯ ಕತ್ತಿಗೆ ಅಳವಡಿಸಿರುವ ರೇಡಿಯೋ ಕಾಲರ್ ಐಡಿಯ ಮೂಲಕ ಚಲನವಲನದ ಬಗ್ಗೆ ನಿಗಾ ಇರಿಸಲಾಗಿದ್ದು, ಅದರಂತೆ ಗುರುವಾರ ಮಧ್ಯಾಹ್ನದಿಂದಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಸಂಜೆ 5.30ಕ್ಕೆ ಆನೆಗೆ ಪಶುವೈದ್ಯರಾದ ಸಕ್ರೆಬೈಲಿನ ಡಾ| ಕಲ್ಲಪ್ಪ, ಮಂಗಳೂರಿನ ಡಾ| ಯಶಸ್ವಿ ಹಾಗೂ ನಾಗರಹೊಳೆಯ ಡಾ| ರಮೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. 10 ಜಾನುವಾರುಗಳನ್ನು, ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಭಟ್ಕಳದ ನವಾಯತ್ ಕಾಲನಿಯ ಅಬ್ರಾರುಲ್ ಹಾಕ್ ಮೋಮಿನ್(30), ಗಾಂಧಿನಗರ ಕೋಗ್ತಿಯ ಬಂದರ್ ರೋಡ್ ಎರಡನೇ ಕ್ರಾಸ್ ನಿವಾಸಿ ಮೊಹಮ್ಮದ್ ಮತ್ತು ಭಟ್ಕಳದ ಮೊಹಮ್ಮದ್ ಆರೀಫ್ ಬಂಧಿತ ಆರೋಪಿಗಳು. ಗುರುವಾರ ಬೆಳಗ್ಗಿನ ಜಾವ 3.30 ಗಂಟೆ ವೇಳೆಗೆ ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ಮಹಾರಾಷ್ಟ್ರದ ರಿಜಿಸ್ಟ್ರೇಶನ್ ಹೊಂದಿರುವ ವಾಹನದಲ್ಲಿ 10 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಅದಕ್ಕೆ ಬೆಂಗಾವಲಾಗಿ ಮಂಗಳೂರಿನ ರಿಜಿಸ್ಟ್ರೇಶನ್ ಹೊಂದಿರುವ ವಾಹನ ಸಾಗುತ್ತಿತ್ತು. ಪೊಲೀಸರು ಈ ಎರಡೂ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
