ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 6.0” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ನಡೆದ 13 ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ಬ್ಲಾಕ್ ಪ್ರಾಗ್ ನ ಉಪಾಧ್ಯಕ್ಷರಾದ ಅಭಿಜಿತ್ ಅಡಿಗ ಅವರು ಮಾತನಾಡಿ, ಎಐ ಟೆಕ್ನಾಲಜಿಯು ನಮ್ಮ ಜ್ಞಾನಕ್ಕೆ ಶಕ್ತಿ ಮದ್ದಿನಂತೆ ಕೆಲಸಮಾಡುತ್ತಿದ್ದು ನಾವೆಲ್ಲರೂ ಅದನ್ನು ಸದುಪಯೋಗಪಡಿಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಂಡು ಕಾರ್ಯ ನಿರ್ವಹಿಸಿದರೆ ಮಾತ್ರ ಈ ಸ್ಪರ್ಧಾತ್ಮಕ ಯುಗದಲ್ಲಿ ಬದುಕಲು ಸಾಧ್ಯ ಎಂದರು. ಇನ್ನೋರ್ವ ಮುಖ್ಯ ಅತಿಥಿ ಉಡುಪಿಯ ಜ್ಞಾನಸುಧಾ ಪದವಿ-ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಿಧಿ ಭಾಗವತ್ ರವರು ಮಾತನಾಡಿ, ವರ್ತಮಾನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಂದಿನ ಸ್ಪರ್ಧಾತ್ಮಕ ಮತ್ತು ಬದಲಾಗುತ್ತಿರುವ ಯುಗದಲ್ಲಿ ಉದ್ಯೋಗವನ್ನು ಪಡೆಯಲು ನಮ್ಮ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಹೊಸ ರೀತಿಯ ಕೌಶಲ್ಯದೊಂದಿಗೆ ಬಳಸಿಕೊಳ್ಳುವ ಕಲೆಯನ್ನು ನಾವು ಸಿದ್ದಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂದು ಮಂಗಳೂರಿನ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಸಿಸ್ಟೆಂಟ್ ಪ್ರೊಫೆಸರ್ ಅರ್ಚನಾ ದೇವಾಡಿಗ ಅಭಿಪ್ರಾಯಪಟ್ಟರು. ಅವರು ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡ ಸೈನ್ಸ್ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲೆ ಕವಿತಾ ಎಂಸಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ.ಎಸ್ ಅಸೋಸಿಯನ್ ಅಧ್ಯಕ್ಷ ಡಾ. ಕಾಶಿನಾಥ ಪಿ. ಪೈ ಶುಭ ಹಾರೈಸಿದರು. ಪೂರ್ವಿಕ ಎಂ. ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕಿ ಪವಿತ್ರಾ ಮತ್ತು ವಿದ್ಯಾರ್ಥಿ ಪ್ರತಿನಿಧಿ ಚೇತನ್ ಉಪಸ್ಥಿತರಿದ್ದರು. ಶರಣ್ಯ ತನಿಷಾ ಮತ್ತು ಅಂಕಿತ ಪ್ರಾರ್ಥಿಸಿದರು. ತ್ರಿಷಾ ಅತಿಥಿಗಳನ್ನು ಪರಿಚಯಿಸಿದರು. ಅಂಕುಶ್ ಸ್ವಾಗತಿಸಿದರು. ಮನಿಷಾ ನಿರೂಪಿಸಿದರು. ದೀಪಿಕಾ ಧನ್ಯವಾದ ಅರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಿಷ್ಠಾವಂತ ಸದಸ್ಯರ ಸಹಕಾರ, ನಿಸ್ವಾರ್ಥ ನಿರ್ದೇಶಕ ಮಂಡಲ ಹಾಗೂ ನಗು ಮೊಗದ ಸೇವೆ ನೀಡುವ ಸಿಬ್ಬಂದಿಗಳ ಸಹಾಯದಿಂದ ನಮ್ಮ ಸಹಕಾರಿ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಅಪರೇಟೀವ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು. ಅವರು ಉಪ್ಪುಂದ ದೇವಕಿ ಸಭಾಭವನದಲ್ಲಿ ನಡೆದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ನಿ. ಸೊಸೈಟಿ 2025 – 26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ವರದಿ ವರ್ಷದಲ್ಲಿ ರೂ.26 ಕೋಟಿ ವ್ಯವಹಾರ ನಡೆಸಿ ರೂ.29.5ಲಕ್ಷ ಲಾಭಗಳಿಸಿದೆ. ಈ ನೆಲೆಯಲ್ಲಿ ಸಂಘದ ಸದಸ್ಯರಿಗೆ ಶೇ.10.5 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಕೌಸ್ತುಭ, ಸುಶನ್ ನಾರಾಯಣ ಪೂಜಾರಿ, ಪ್ರಜ್ಞಾ ಎಸ್. ಪೂಜಾರಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಎಸ್.ಎಸ್.ಎಲ್. ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 95% ಅಂಕಗಳಿಸಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ (ಆಡಳಿತ) ಮಂಗಳೂರು ಹಾಗೂ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಲೇಡಿಹಿಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು 03 ಚಿನ್ನ, 06 ಬೆಳ್ಳಿ ಹಾಗೂ 03 ಕಂಚು ಒಟ್ಟು 12 ಪದಕಗಳನ್ನು ಪಡೆದುಕೊಂಡು 04 ವಿದ್ಯಾರ್ಥಿಗಳು ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಫಲಿತಾಂಶ:14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ: ಪ್ರೀತಿ 400ಮೀ ಫ್ರೀಸ್ಟೈಲ್ (ಪ್ರಥಮ), 200ಮೀ ಐಎಂ (ದ್ವಿತೀಯ), 50ಮೀ ಫ್ರೀಸ್ಟೈಲ್ (ದ್ವಿತೀಯ)17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಅಭಿಷೇಕ್ 200ಮೀ ಫ್ರೀಸ್ಟೈಲ್ (ಪ್ರಥಮ), 50ಮೀ ಬಟರ್‌ಫ್ಲೈ (ದ್ವಿತೀಯ), 400ಮೀ ಐಎಂ (ಪ್ರಥಮ), ದುರ್ಗೇಶ್ 50ಮೀ ಬ್ರೆಸ್ಟ್‌ಸ್ಟ್ರೋಕ್ (ತೃತೀಯ), 200ಮೀ ಐಎಂ (ದ್ವಿತೀಯ), 50ಮೀ ಫ್ರೀಸ್ಟೈಲ್ (ತೃತೀಯ), ರಿತ್ವಿಜ್ 100ಮೀ ಫ್ರೀಸ್ಟೈಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಅಂತರ್ ತರಗತಿ ಐಟಿ ಫೆಸ್ಟ್ “ಟೆಕ್ ಮಂಥನ್ 6.0” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಭಾ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು ವಿದ್ಯಾರ್ಥಿಗಳೇ ತಯಾರಿಸಿದ ಸಾಫ್ಟ್ವೇರ್ ಅಪ್ಲಿಕೇಶನ್ ಮೂಲಕ ಕಾರ್ಯಕ್ರಮವನ್ನು ವಿನೂತನವಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಂಐಟಿಯ ಕ್ವಾಲಿಟಿ ಎಸೂರೆನ್ಸ್ ನ ಸಹಾಯಕ ನಿರ್ದೇಶಕರಾದ ಡಾ. ಶ್ವೇತಾ ವಿನ್ಸೆಂಟ್ ಅವರು ಮಾತನಾಡಿ “ತಂತ್ರಜ್ಞಾನದೊಂದಿಗೆ ಬುದ್ದಿಯನ್ನು ಮಂಥನ ಮಾಡಿದಾಗ ಮಾತ್ರ ಹೊಸ ಹೊಸ ಆಲೋಚನೆಗಳಿಂದಾಗಿ ಇನ್ನಷ್ಟು ಹೊಸ ಬಗೆಯ ತಂತ್ರಜ್ಞಾನಗಳನ್ನು ಕಂಡುಹಿಡಿಯಲು ಸಾಧ್ಯ” ಎಂದರು. ಇನ್ನೋರ್ವ ಮುಖ್ಯ ಅತಿಥಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಭಾವತಿ ಅವರು ಮಾತನಾಡಿ, “ವಿದ್ಯಾರ್ಥಿಗಳು ಕ್ರಿಯಾಶೀಲತೆಯನ್ನು ಬೆಳೆಸಿಕೊಂಡು ಹೊಸ ಸಾಫ್ಟ್ವೇರ್ ಗಳನ್ನು ಅಭಿವೃದ್ಧಿಗೊಳಿಸಿದಾಗ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ” ಎಂದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ದೇಶದ ಸುಭಿಕ್ಷೆಗೆ ಕೃಷಿ ಮತ್ತು ಹೈನುಗಾರಿಕೆ ಮೂಲಕ ಕಾರಣವಾಗಿದೆ ಎಂದು ಕೆ.ಎಂ.ಎಫ್ ವಿಸ್ತರ್ಣಾಧಿಕಾರಿ ಉಮೇಶ್ ಕುಂದರ್ ಹೇಳಿದರು. ಅವರು ಸೋಮವಾರ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಯಲ್ಲಿ ಯುವ ಸಮೂಹ ಹೈನುಗಾರಿಕೆಯಲ್ಲಿ ಮುನ್ನುಗ್ಗುತ್ತಿರುವುದು ಆವಾಸಸ್ಥಾನ ಬೆಳವಣಿಗೆಯಾಗಿದೆ, ಹೈನುಗಾರಿಕೆ ಲಾಭದಾಯ ಉದ್ಯಮವಾಗಿರಿಸಿಕೊಂಡು ಕುಟುಂಬ ನಿರ್ವಹಣೆ ಸಾಧ್ಯ ಎಂದರು. ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ,ಹೈನುಗಾರಿಕೆ ವಿಧಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಹೆಚ್ಚು ಹೆಚ್ಚು ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಲು ಸಲಹೆ ನೀಡಿದರ ಅವರು ಈ ಮೂಲಕ ತಾವು ಅಭಿವೃದ್ಧಿಗೊಂಡು ತಮ್ಮ ಸಂಘದ ಹಿತಕಾಯಲು ಕರೆಕೊಟ್ಟರಲ್ಲದೆ ಎಐ ತಂತ್ರಜ್ಞಾನದ ಬಲದಿಂದ ಅದೆಷ್ಟೊ ಯುವ ಸಮೂಹ ಗ್ರಾಮೀಣ ಚಟುವಟಿಕೆಗಳಾದ ಕೃಷಿ ಹೈನೋದ್ಯಮದಲ್ಲಿ ತೊಡಗಿಕೊಳ್ಳುತ್ತಿರುವುದು ಇತ್ತೀಚಿಗಿನ ದಿನಗಳಲ್ಲಿ ಬೆಳಕಿಗೆ ಬಂದಿದೆ,ಕೆ.ಎಂಎಫ್ ಹೈನುಗಾರರ ಹಿತ ಕಾಯಲು ಬದ್ಧವಾಗಿದ್ದು ಸಾಕಷ್ಟು ಯೋಜನೆಗಳನ್ನು ಹೊರತಂದಿದ್ದು ಅದರ ಪ್ರಯೋಜನ ಪಡೆಯಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಪ್ಲೇಸ್ ಮೆಂಟ್ ಘಟಕ ಹಾಗೂ ಮ್ಯಾಜಿಕ್ ಬಸ್ ಫೌಂಡೇಶನ್ ಸಹಯೋಗದೊಂದಿಗೆ ಮೂರು ದಿನಗಳ ಸಾಪ್ಟ್ ಸ್ಕಿಲ್ ತರಬೇತಿ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಸಂಚಾಲಕರಾದ ಅನುಪಮಾ ಎಸ್. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಸಮಗ್ರವಾಗಿ ಅಭಿವೃದ್ಧಿಯಾಗಬೇಕಾದರೆ ಇಂತಹ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ, ನಾಯಕತ್ವ ಗುಣ, ಉತ್ತಮ ಸಂವಹನ ಹಾಗೂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮ್ಯಾಜಿಕ್ ಬಸ್ ಫೌಂಡೇಶನ್ ಕಾರ್ಯಕ್ರಮದ ವ್ಯವಸ್ಥಾಪಕ ಡಾ. ಹರೀಶ್, ಕಾಲೇಜಿನ ಆಡಳಿತ ಅಧಿಕಾರಿ ಡಾ. ಮೋಹನ ಕೆ.ಎನ್. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಯಾನಂದ ಎನ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಘಟಕದ ಸಂಯೋಜಕರಾದ ಸಂದೀಪ್ ಕೆ. ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಡಾ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೇಶದ ಐಕ್ಯತೆ, ಸಮಗ್ರತೆ ಮತ್ತು ರಾಷ್ಟ್ರೀಯತೆಯ ಜಾಗೃತಿಗಾಗಿ ಬೈಂದೂರಿನಲ್ಲಿ “ಹಿಂದು ಜಾಗರಣ ವೇದಿಕೆ”ವತಿಯಿಂದ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಬೃಹತ್ ಪಂಜಿನ ಮೆರವಣಿಗೆ ಹಾಗೂ ದೇಶಭಕ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಹಿಂದೂ ಸಂಘಟನೆಗಳ ಪ್ರಮುಖರು, ದೇಶಪ್ರೇಮಿ ಯುವಕರು ಹಾಗೂ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ರಾಷ್ಟ್ರೀಯತೆಯ ಸಂದೇಶ ಸಾರಿದ್ದು ಅತ್ಯಂತ ಹೆಮ್ಮೆಯ ವಿಷಯ. ದೇಶದ ಅಖಂಡತೆ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯಲು ಯುವಜನತೆ ಸದಾ ಮುಂಚೂಣಿಯಲ್ಲಿರಬೇಕು. ಈ ನಿಟ್ಟಿನಲ್ಲಿ ಆಯೋಜಿತವಾದ ಈ ಕಾರ್ಯಕ್ರಮವು ಯುವ ಮನಸ್ಸುಗಳಲ್ಲಿ ದೇಶಭಕ್ತಿಯ ಕಿಚ್ಚನ್ನು ಹೆಚ್ಚಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ವತಿಯಿಂದ ‘ಅಖಂಡ ಭಾರತ ಸಂಕಲ್ಪ ದಿನ’ದ ಪ್ರಯುಕ್ತ ದೇಶಭಕ್ತಿಯ ಭಾವನೆಯನ್ನು ಜಾಗೃತಗೊಳಿಸುವ ಹಾಗೂ ಸಮಾಜದಲ್ಲಿ ರಾಷ್ಟ್ರೀಯತೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಭವ್ಯವಾದ ಪಂಜಿನ ಮೆರವಣಿಗೆ ಹಾಗೂ ವಿಶೇಷ ಸಭಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಅಖಂಡ ಭಾರತ ಸಂಕಲ್ಪದ ಮುಖ್ಯ ಉದ್ದೇಶ ವಿಭಜನೆಯ ಕಹಿ ನೆನಪುಗಳನ್ನು ಮೆಲುಕು ಹಾಕುತ್ತಾ, ದೇಶದ ಐಕ್ಯತೆ, ಸಮಗ್ರತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಅಖಂಡ ಭಾರತ ಸಂಕಲ್ಪ ದಿನದ ಮುಖ್ಯ ಉದ್ದೇಶವಾಗಿದೆ. ಭವಿಷ್ಯದ ಯುವಪೀಳಿಗೆಗೆ ದೇಶದ ಇತಿಹಾಸ, ದೇಶಕ್ಕಾಗಿ ತ್ಯಾಗ-ಬಲಿದಾನಗೈದ ಮಹಾನ್ ವೀರರ ಆದರ್ಶಗಳನ್ನು ತಲುಪಿಸುವುದು ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಇದರ ಪ್ರಮುಖ ಆಶಯವಾಗಿದೆ ಎಂದು ಕೇಶವ್ ಬಂಗೇರ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಶ್ರೀ ಕೇಶವ್ ಬಂಗೇರ ಅವರು ಮಾತನಾಡಿ, ಇಂದಿನ ಜೆನ್-ಜಿ (Gen Z) ಮತ್ತು ಜೆನ್-ಆಲ್ಫಾ (Gen Alpha) ಯುವಪೀಳಿಗೆಯು ಕೆಲವೊಮ್ಮೆ ದಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹನ ಸನ್ನಿಧಿಯಲ್ಲಿ 2ನೇ ಶ್ರಾವಣ ಮಾಸದ ಶನಿವಾರದ ಅಂಗವಾಗಿ ವಿವಿಧ ಸಾಂಸ್ಕೃತಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಧಾರ್ಮಿಕ, ಸಮಾಜ ಸೇವೆಯಲ್ಲಿ ಸಮಾಜ ಸೇವಕ ಪಾರಂಪಳ್ಳಿ ಸದಾಶಿವ ಮಧ್ಯಸ್ಥ, ಶೈಕ್ಷಣಿಕ ಹಾಗೂ ಶ್ರೀ ಗುರುರಸಿಂಹ ದೇವಳದಲ್ಲಿ ನಿತ್ಯ ಪೂಜಾ ವಿಧಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಚಿತ್ರಪಾಡಿ ಜಗದೀಶ ಉಪಾಧ್ಯಾಯ, ಆಂಜನೇಯ ದೇವಳದಲ್ಲಿ 20 ವರ್ಷಗಳಿಗಿಂತಲೂ ಹೆಚ್ಚು ಸ್ವಚ್ಛತಾ ಸೇವೆಗೈದ ರಾಮಚಂದ್ರ ಆಚಾರ್, ಪಾರಂಪಳ್ಳಿ ರಾಧಾ, ಕರ್ಣ, ಶ್ರೀದೇವಳದಲ್ಲಿ ಅಡಿಪು ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಗಿರಿಜಾ ದೇವಾಡಿಗ ಅವರುಗಳನ್ನು ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಕಾರಂತ ಅವರುಗಳನ್ನು ಅಭಿನಂದಿಸಿ ಸೇವೆಯನ್ನು ಶ್ಲಾಘಿಸಿ ದೇವಸ್ಥಾನವಿರಲಿ ಯಾವುದೇ ಸಂಘ ಸಂಸ್ಥೆಗಳಿರಲಿ ಪ್ರತಿಯೊಬ್ಬರ ಸೇವಾ ಕಾರ್ಯ ಬಹಳ ಮುಖ್ಯವಾಗಿದೆ ಹಾಗೂ ಅವರ ಸೇವಕಾರ್ಯವನ್ನು ಗುರುತಿಸಿ ಗೌರವಿಸಿದಾಗ ಉಳಿದವರಿಗೂ ಕೂಡ ಪ್ರೇರಣಾದಾಯಕವಾಗಿರುತ್ತದೆ ಎಂದು ತಿಳಿಸಿದರು. ದೇಗುಲ ರಾಜ್ಯಾಂಗಣದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ ಉಪಾಧ್ಯಾಯರು ಕಾರ್ಯದರ್ಶಿ ಪರಶುರಾಮ ಭಟ್ಟ, ಕೋಶಾಧಿಕಾರಿ …
